......
ದೇವಿ, ದೆವ್ವ, ಕುದುರೆ, ಕತ್ತೆ, ಇತ್ಯಾದಿ
ದೇವಿ ದೆವ್ವವಾದರೆ, ಕುದುರೆ ಕತ್ತೆಯಾಗಿದೆ. ಇದು ಇತ್ತೀಚೆಗೆ ಸೊರಬದ ಹಾಲಿ- ಮಾಜಿ ಶಾಸಕರ (ಅಣ್ಣ- ತಮ್ಮಂದಿರ) ಜಗಳದಲ್ಲಿ ಕೇಳಿ ಬರುತ್ತಿರುವ ಶಬ್ದ. ಸೊರಬ ತಾಲೂಕು ಪಂಚಾಯತ್ ಚುನಾವಣೆ ಘೋಷಣೆಯಾದಂದಿನಿಂದ ಅಧಿಕಾರ ಹಿಡಿಯಲು ಕಣಕ್ಕೆ ಧುಮುಕಿದ ಅಣ್ಣ-ತಮ್ಮಂದಿರು ಈ ರೀತಿ ಕಾದಾಡುತ್ತ ಪರಸ್ಪರ ತಮ್ಮ ಸಿನಿಮಾಗಳ ಹೆಸರನ್ನು ಬಳಸಿಕೊಂಡು ಜನರಲ್ಲಿ ಹೇಸಿಗೆ ಹುಟ್ಟಿಸಿದ್ದು ನೆನಪಿರಬಹುದು. ಚುನಾವಣೆ ಮುಗಿದರೂ ಶಾಸಕ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಕರೆದು ಮತ್ತೆ ಕಾಲು ಕೆದರಿದ್ದಾರೆ.
ದಿವಂಗತ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಕೌಟುಂಬಿಕ ವಿಚಾರದ ಹಿನ್ನೆಲೆಯಲ್ಲಿ ದ್ವೇಷ ಕಟ್ಟಿಕೊಂಡು ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸಾರ್ವಜನಿಕರೆದುರು ಬೇರೆ ರೀತಿಯಲ್ಲಿ ತೆರೆದಿಡುತ್ತಿದ್ದಾರೆ. ಕುಮಾರ್ ಈಗ ಮಾಜಿಯಾದರೂ ಸೊರಬದಲ್ಲಿ ತನ್ನ ಅಧಿಪತ್ಯವನ್ನು ಮತ್ತೆ ಸ್ಥಾಪಿಸಬೇಕೆಂದು ಹೆಣಗಾಡುತ್ತಿದ್ದಾರೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಿಂದೀಚೆ ಅವರಿಗೇಕೊ ‘ಲಕ್’ ಚೆನ್ನಾಗಿದ್ದಂತಿಲ್ಲ. ಪದೇ ಪದೇ ಸೋಲು ಕಾಣುತ್ತಲೇ ಇದ್ದಾರೆ. ಆದರೆ ಶಾಸಕರಾಗಿರುವ ಮಧು ಮಾತ್ರ ತಾಲೂಕಿನಲ್ಲಿ ಜಯ ಗಳಿಸುತ್ತಲೇ ಇದ್ದಾರೆ. ಇದರಿಂದ ಅವರಿಗೆ ಇನ್ನಷ್ಟು ಉತ್ಸಾಹ ಬಂದಿದೆ. ಇದಕ್ಕಾಗಿಯೇ ಚುನಾವಣೆ ಮುಗಿದು ಎಲ್ಲರೂ ಮರೆಯುವ ದಿನ ಬಂದಿದ್ದರೂ ಪತ್ರಿಕಾಕಾಗೋಷ್ಠಿ ಕರೆದು ತನ್ನ ಸಹೋದರನನ್ನು ಮತ್ತೆ ವ್ಯಂಗ್ಯವಾಡಿದ್ದಾರೆ.
ತಾಪಂ ಚುನಾವಣೆ ಆರಂಭದಲ್ಲಿ ಮಧು ಈ ವೈಯಕ್ತಿಕ ಜಗಳಕ್ಕೆ ನಾಂದಿ ಹಾಡಿದ್ದರು. ಅದರಲ್ಲೂ ಸಿನಿಮಾ ಹೆಸರೇಳಿ ವಿವಾದ ಎಬ್ಬಿಸಿದ್ದರು. ಅದಕ್ಕೆ ಪ್ರತಿಯಾಗಿ ಕುಮಾರ್ ಸಹ ತಿರುಗೇಟು ನೀಡಿದ್ದರು. ಕುಮಾರ್ ಬಂಗಾರಪ್ಪ ನಾಯಕನಟರಾಗಿ 1990ರಲ್ಲಿ ತೆರೆಕಂಡ ಅಶ್ವಮೇಧ ರಾಜ್ಯದಲ್ಲಿ ಒಳ್ಳೆಯ ಹೆಸರು ಗಳಿಸಿತ್ತು. ಅದರಲ್ಲಿನ ಒಂದೆರಡು ಹಾಡು ಇಂದಿಗೂ ಜನಪ್ರಿಯವಾಗಿದೆ. ಕುಮಾರ್ ನಟನೆ ಸಹ ಅದ್ಭುತವಾಗಿತ್ತು. ಅಶ್ವಮೇಧದ ಕುದುರೆಯ ಕಾಲು ಮುರಿದಿದೆ ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ಕುಮಾರ್ ಸೊರಬದಲ್ಲಿ ಕಾಲುಮುರಿದ ಸ್ಥಿತಿಯಲ್ಲಿದ್ದಾರೆಂದು ಮಧು ಟೀಕಿಸಿದ್ದರು. ವಿಶೇಷವೆಂದರೆ ಈ ಸಿನಿಮಾವನ್ನು ಮಧು ಅವರೇ ತಯಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕುಮಾರ್ ಸಹ ಉತ್ತರಿಸಿದ್ದರು. 2010ರಲ್ಲಿ ಮಧು ಬಂಗಾರಪ್ಪ ತಾನೇ ನಾಯಕನಟನಾಗಿ ದೇವಿ ಎಂಬ ಸಿನಿಮಾ ತಯಾರಿಸಿದ್ದರು. ಇದು ಇಂದಿಗೂ ಬಿಡುಗಡೆ ಆಗದೆ ಡಬ್ಬದಲ್ಲೇ ಇದೆ. ಅದಕ್ಕೆ ಕುಮಾರ್ ದೇವಿ ದೆವ್ವವಾಗಿ ಡಬ್ಬಾದಲ್ಲೇ ಕುಳಿತಿದೆ ಎಂದು. ಈ ಜಟಾಪಟಿಯನ್ನು ಅಲ್ಲಿಗೇ ಬಿಡದೆ ಮಧು ಮತ್ತೆ ಮುಂದುವರೆಸುವ ಲಕ್ಷಣ ಕಾಣುತ್ತಿದೆ.
ಶಿವಮೊಗ್ಗದಲ್ಲಿ ಮೊನ್ನೆ ಪತ್ರಿಕಾಗೋಷ್ಠಿ ನಡೆಸಿದ ಮಧು ತಂದೆಯ ಮಾತಿನಂತೆ ದೇವಿ ಸಿನಿಮಾ ನಿರ್ಮಿಸಿದೆ. ಆದರೆ ಸಿನಿಮಾ ತಯಾರಿಕೆ ವೇಳೆಯೇ ಬಂಗಾರಪ್ಪ ನಿಧನರಾದರು. ಚಿತ್ರ ಮುಗಿಯುವ ವೇಳೆಗೆ ತಾಯಿ ಶಕುಂತಲಾ ಸಹ ಮೃತರಾದರು. ಇದರಿಂದ ಸಿನಿಮಾ ಬಿಡುಗಡೆ ಮಾಡಲಿಲ್ಲ. ಏಕೆಂದರೆ, ಸಿನಿಮಾ ಮಾಡು ಎಂದವರೇ ನೋಡಲು ಇಲ್ಲವೆಂದಾದ ಮೇಲೆ ಯಾರಿಗೆ ತೋರಿಸಲಿ ಎಂದು ಬೇಸರದಿಂದ ಹೇಳುವ ಮಧು, ಆದರೂ ಸಿನಿಮಾವನ್ನು ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಪಪಡಿಸಿದ್ದಾರೆ.
ಈ ರೀತಿ ತಾವಿಬ್ಬರೂ ನಾಯಕನಟರಾಗಿ ನಟಿಸಿದ ಸಿನಿಮಾದ ಏಳು-ಬೀಳುಗಳನ್ನೇ ಮುಂದಿಟ್ಟುಕೊಂಡು ಹಳೆಯ ದ್ವೇಷವನ್ನೇ ಕಾರುತ್ತಿರುವ ಸಹೋದರರು ಭವಿಷ್ಯದಲ್ಲಿ ಒಂದುಗೂಡುವ ಮುನ್ಸೂಚನೆ ಕಾಣುತ್ತಿಲ್ಲ. ಚುನಾವಣೆ ಎದುರಾದಾಗಲೆಲ್ಲ ಇದೇ ರೀತಿ ಕಚ್ಚಾಡುತ್ತಾರೆ. ಸೊರಬದಲ್ಲಿ ಜೆಡಿಎಸ್ ಸದ್ಯ ಉತ್ತಮ ಸ್ಥಿತಿಯಲ್ಲಿದೆ. ಬಿಜೆಪಿ ಎರಡನೆಯ ಮತ್ತು ಕಾಂಗ್ರೆಸ್ ಮೂರನೆಯ ಸ್ಥಾನದಲ್ಲಿದೆ. ಇಲ್ಲಿ ಇತ್ತೀಚಿನ ಕೆಲವು ದಶಕಗಳಿಂದ ಮೂರು ಪಕ್ಷದವರೂ ಒಮೊಮ್ಮೆ ಶಾಸಕರಾಗಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಜಕಾರಣ ಮಾಡುವ ಬದಲು ಎಲ್ಲರೆದುರು ನಗೆಪಾಟಲಿಗೀಡಾಡುವ ರೀತಿಯಲ್ಲಿ ಅಣ್ಣ-ತಮ್ಮ ಕಾದಾಡುತ್ತಿದ್ದಾರೆ. ಶಾಸಕನಾದುದುರಿಂದಲೋ ಏನೋ, ಮಧು ಸ್ವಲ್ಪ ಎಚ್ಚರ ತಪ್ಪಿ ಮಾತನಾಡುವ ಚಾಳಿ ಬೆಳೆಸಿಕೊಂಡಿದ್ದಾರೆ. ತಮ್ಮಿಬ್ಬರ ಮಧ್ಯದ ಕಚ್ಚಾಟಕ್ಕೆ ಇತಿಶ್ರೀ ಹಾಡಿ, ಜನರ ಮನಸ್ಸಿನಿಂದಲೂ ಅದನ್ನು ದೂರವಾಗಿಸುವ ಯತ್ನ ಮಾಡುವುದನ್ನು ಬಿಟ್ಟು ಅವಕಾಶ ಸಿಕ್ಕಾಗಲೆಲ್ಲ ಸಹೋದರನನ್ನು ಬೈಯ್ಯುವ ಮನೋಸ್ಥಿತಿಯನ್ನು ಮಧು ಬೆಳೆಸಿಕೊಂಡಿದ್ದಾರೆ. ಮುಂದೊಂದು ದಿನ ತಾನೂ ಮಾಜಿಯಾಗುತ್ತಾನೆ ಎನುವುದನ್ನು ಅವರು ಮರೆತು ಮಾತನಾಡುತ್ತಿರುವಂತೆ ಸದ್ಯ ಗೋಚರವಾಗುತ್ತಿದೆ.

No comments:
Post a Comment