ಯಜಮಾನನಿಲ್ಲದ ಮನೆಗೆ ನಿರಂಜನ್ ಸಾರಥ್ಯ?
ನಿರಂಜನ್ ಜಿಲ್ಲಾ ಜೆಡಿಎಸ್ ಚುಕ್ಕಾಣಿ ಹಿಡಿಯಲು ಸನ್ನದ್ಧರಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಮತ್ತು ಜಿಪಂನ ನಿವೃತ್ತ ಕಾರ್ಯರ್ವಾಹಕ ಇಂಜಿನೀಯರ್ ಆಗಿರುವ ಅವರು, ಮೂಲತಃ ಭದ್ರಾವತಿ ತಾಲೂಕು ಡಿ.ಬಿ.ಹಳ್ಳಿಯವರು. ನಿವೃತ್ತರಾದ ನಂತರ ರಾಜಕೀಯಕ್ಕೆ ಕಾಲಿಟ್ಟ ಅವರು, ಪ್ರಪ್ರಥಮವಾಗಿ ಎದುರಿಸಿದ್ದೇ ಚುನಾವಣೆ. ಆ ಮೂಲಕ ಒಂದಷ್ಟು ಹೆಸರು ಸಂಪಾದಿಸಿ ಈಗ ಜಿಲ್ಲೆಯ ಮಟ್ಟಿಗೆ ಅಷ್ಟೇನೂ ಅಪರಿಚಿತರಾಗಿ ಉಳಿದಿಲ್ಲ. ಸದ್ಯ ಜಿಲ್ಲಾಧ್ಯಕ್ಷರಾಗಲು ಅಭ್ಯರ್ಥಿಗಳೇ ಇಲ್ಲದ ಹಂತದಲ್ಲಿ ಎಲ್ಲ ಅರ್ಹತೆಯುಳ್ಳ ಅವರನ್ನು ನೇಮಿಸಲು ಚಿಂತನೆ ನಡೆದಿದೆ. ಜಿಲ್ಲೆಯ ಲಿಂಗಾಯತರಲ್ಲಿ ಶೇ 75ರಷ್ಟು ಸಾದರ ಲಿಂಗಾಯಿತರಿದ್ದಾರೆ. ನಿರಂಜನ್ ಸಹ ಅದೇ ಸಮುದಾಯದವರು. ಇದನ್ನೆಲ್ಲ ಲೆಕ್ಕ ಹಾಕಿ ಅವರಿಗೆ ಪಟ್ಟಾಭಿಷೇಕ ಮಾಡಲು ಸಿದ್ಧತೆ ನಡೆದಿದೆ. ಮುಂಬರುವ ವಿಧಾನಸಭೆಗೂ ಅವರನ್ನು ಜಾತಿ ಆಧಾರದಲ್ಲೇ ಕಣಕ್ಕಿಳಿಸಲು ಚಿಂತನೆ ನಡೆದಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಶಿವಮೊಗ್ಗ: ಜಿಲ್ಲಾ ಜೆಡಿಎಸ್ಲ್ಲಿ ಬದಲಾವಣೆಯ ಪರ್ವ ಇನ್ನೂ ಕಂಡುಬರುತ್ತಿಲ್ಲ. ರಾಜ್ಯ ಜೆಡಿಎಸ್ನಲ್ಲಿನ ಭಿನ್ನಮತದಿಂದ ಸುಧಾರಿಸಿಕೊಳ್ಳಲಾಗದ ವರಿಷ್ಠರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ ಕೆಲವು ಜಿಲ್ಲೆಗಳಲ್ಲಿ ತಮ್ಮ ಪಕ್ಷಕ್ಕೆ ನೆಲೆ ಇಲ್ಲದಿರುವುದನ್ನು ಮೊನ್ನೆ ಶಿವಮೊಗ್ಗದಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಮೂರು ಶಾಸಕರನ್ನು ಹೊಂದಿದ್ದರೂ ಪಕ್ಷ ಸಂಘಟನೆ ಏನೂ ಇಲ್ಲ. ಈ ಶಾಸಕರು ತಮ್ಮ ಕ್ಷೇತ್ರ ಬಿಟ್ಟು ಪಕ್ಕದ ಕ್ಷೇತ್ರದಲ್ಲೂ ಜನಪ್ರಿಯರಾಗಿಲ್ಲ. ಇಡೀ ಜಿಲ್ಲೆಯನ್ನು ನಿಭಾಯಿಸುವ ಒಬ್ಬ ನಾಯಕನೂ ಇಲ್ಲ. ಈ ಮಧ್ಯೆ ವಿಧಾನ ಪರಿಷತ್ಗೆ ಅಭ್ಯರ್ಥಿಯಾಗಿದ್ದ ನಿರಂಜನ್ ಜಿಲ್ಲಾಧ್ಯಕ್ಷರಾಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಪಕ್ಷದ ಸಮರ್ಥ ನಾಯಕತ್ವ ವಹಿಸಿದ್ದರು. ಆದರೆ ಅವರು ಎರಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಬಳಿಕ ಹಿಂದಡಿ ಇಟ್ಟಂತಿದೆ. ಈಗ ಅವರೂ ಸಂಘಟನೆಯಿಂದ ದೂರವುಳಿದಿದ್ದಾರೆ. ಜೊತೆಗೆ ಶಿವಮೊಗ್ಗವನ್ನು ಹೆಚ್ಚುಕಡಿಮೆ ಬಿಟ್ಟು ಬೆಂಗಳೂರು ನಗರ ಸೇರಿ ಅಲ್ಲಿ ತಮ್ಮ ಉದ್ಯಮದಲ್ಲಿ ಮತ್ತು ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ. ಇದರಿಂದ ಜೆಡಿಎಸ್ಗ ಜಿಲ್ಲೆಯಲ್ಲಿ ಸಂಘಟನೆಯ ಕೊರತೆ ಎದುರಾಗಿದೆ. ಸಮರ್ಥ ನಾಯಕರಿಲ್ಲದೆ ಪಕ್ಷ ಸೊರಗುತ್ತಿದೆ.
ಶಾಸಕ ಮಧು ಬಂಗಾರಪ್ಪ ಜಿಲ್ಲೆಗೆ ತಾನೇ ನಾಯಕ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ಸೊರಬ ಬಿಟ್ಟರೆ ಅವರ ಜನಪ್ರಿಯತೆ ಏನಿಲ್ಲ. ಶಿವಮೊಗ್ಗ ನಗರದಲ್ಲಿ ಜೆಡಿಎಸ್ಗೆನಾಯಕರಿದ್ದಾರೆ. ಎರಡನೆಯ ತಲೆಮಾರಿನ ಯುವಕರಿದ್ದಾರೆ. ಅದರದ್ದೇ ಆದ ಕಾರ್ಯಕರ್ತರಿದ್ದಾರೆ. ಆದರೆ ಅವರನ್ನು ಸಂಘಟಿಸುವವರಿಲ್ಲ. ಯಜಮಾನನಿಲ್ಲದ ಮನೆಯಂತಾಗಿದೆ ಪಕ್ಷ. ಪಾಲಿಕೆ ಮತ್ತು ಜಿಪಂ, ತಾಪಂನಲ್ಲಿ ಆ ಪಕ್ಷದ ಸದಸ್ಯರಿದ್ದಾರೆ. ಇದರಿಂದ ಲಾಭವನ್ನು ಪಡೆದುಕೊಳ್ಳುವ ಯತ್ನವನ್ನು ಆ ಪಕ್ಷದವರು ಮಾಡಬಹುದಿತ್ತು. ಆದರೆ ನಾಯಕರೇ ಇಲ್ಲದೆ ಸೊರಗುತ್ತಿದೆ. ಇದ್ದ ಕಾರ್ಯಕರ್ತರನ್ನೂ ಅದು ಕಳೆದುಕೊಳ್ಳುತ್ತಿದೆ. ಬಹುತೇಕ ಕಾರ್ಯಕರ್ತರು ಅನ್ಯ ಪಕ್ಷಗಳತ್ತ ವಾಲುತ್ತಿದ್ದಾರೆ. ಕೆಲವರು ರಾಜಕೀಯದಿಂದ ತಟ್ಸತರಾಗಿದ್ದಾರೆ. ಇದಕ್ಕೆಲ್ಲ ಕಾರಣ ರಾಜ್ಯ ನಾಯಕರ ನಿರ್ಲಕ್ಷ್ಯ.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ ಮತ್ತು ಭದ್ರಾವತಿ ಶಾಸಕ ಎಂ. ಜೆ. ಅಪ್ಪಾಜಿ ಗೌಡ ಅವರಿಗೆ ತಮ್ಮ ಕ್ಷೇತ್ರ ಬಿಟ್ಟು ಉಳಿದೆಡೆಯ ಪರಿಚಯವಿಲ್ಲ. ಶಾಸಕ ಮಧು ಬಂಗಾರಪ್ಪ ಅವರು ಸೊರಬದಿಂದ ಹೊರಬರುವ ಯಾವುದೇ ಲಕ್ಷಣವನ್ನು ಮೈಗೂಡಿಸಿಕೊಂಡಿಲ್ಲ. ಏಕೆಂದರೆ, ಇತ್ತೀಚಿನ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಅವರ ಅಭ್ಯರ್ಥಿಗಳು ಮಹತ್ತರ ಸಾಧನೆ ಮಾಡಿರುವುದರಿಂದ ಅವರು ಅದರಲ್ಲೇ ಮೈಮರೆತಿದ್ದಾರೆ. ಈ ಮೂವರೂ ಜಿಲ್ಲೆಯ ನಾಯಕತ್ವ ವಹಿಸುವ ಜನಪ್ರಿಯತೆಯನ್ನು ಬೆಳೆಸಿಕೊಂಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಜೆಡಿಎಸ್ ಈ ಮೂವರಿಗೇ ಸೀಮಿತವಾಗಿದೆ.
ಈ ವರ್ಷದ ಜನವರಿಯಲ್ಲಿ ಜರುಗಿದ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಜೆಡಿಎಸ್ ನಿವೃತ್ತ ಇಂಜಿನೀಯರ್ ನಿರಂಜನ್ ಎನ್ನುವವರನ್ನು ಕರೆತಂದು ಕಣಕ್ಕಿಳಿಸಿ ಸಾಧನೆ ಮಾಡಿದೆ. ಅವರು ಎರಡನೆಯ ಸ್ಥಾನಕ್ಕಿಳಿದರೂ ಸಹ ಸಾಕಷ್ಟು ಮತ ಗಳಿಸಿದ್ದರು. ಅದೇ ರೀತಿ ಲೋಕಸಭೆ ಚುನಾವಣೆಗೂ ಗೀತಾ ಶಿವರಾಜಕುಮಾರ್ (ಮಧು ಬಂಗಾರಪ್ಪ ಅವರ ಸಹೋದರಿ) ಅವರನ್ನು ಕಣಕ್ಕಿಳಿಸಿ ಎರಡನೆಯ ಸ್ಥಾನ ಕಂಡಿದ್ದರು. ಜಿಲ್ಲೆಯ ನಾಯಕರನ್ನು ಅಲಕ್ಷಿಸಿ, ಹೊರಗಿನಿಂದ ಅದರಲ್ಲೂ ಹಣವಂತರಿಗೇ ಮಣೆ ಹಾಕುವ ಜಾಯಮಾನವನ್ನು ಜೆಡಿಎಸ್ ಜಿಲ್ಲೆ ಮತ್ತು ರಾಜ್ಯದೆಲ್ಲೆಡೆ ಬೆಳೆಸಿಕೊಂಡಿರುವುದು ಆ ಪಕ್ಷದ ಏಳಿಗೆಗೆ ಅಡ್ಡಿಯಾಗಿದೆ. ಪರಿಸ್ಥಿತಿ ಎಲ್ಲಿಯವರೆಗೆ ತಲುಪಿದೆ ಎಂದರೆ, ಚುನಾವಣೆ ಬಂತೆಂದರೆ, ಯಾರೋ ಹೊರಗಿನ ಹಣವಂತರು ಜೆಡಿಎಸ್ ಅಭ್ಯರ್ಥಿ ಎಂದು ಜನ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಬಂದು ನಿಂತಿದೆ.

No comments:
Post a Comment