Thursday, 31 May 2018

ಜಿಲ್ಲೆೆಯ ಸಿಎಂಗಳಿಗೆ ಪೂರ್ಣಾವಧಿಯ ಭಾಗ್ಯವಿಲ್ಲ




ಶಿವಮೊಗ್ಗ: ಜಿಲ್ಲೆೆಯಿಂದ ಈವರೆಗೆ ನಾಲ್ವರು ಮುಖ್ಯಮಂತ್ರಿಿಯಾದರೂ ಅವರ್ಯಾಾರೂ ಪೂರ್ಣಾವಧಿಯನ್ನು ಪೂರೈಸಿಲ್ಲ. ರಾಜ್ಯಕ್ಕೆೆ ಅತಿ ಹೆಚ್ಚು ಮುಖ್ಯಮಂತ್ರಿಿಯನ್ನು ನೀಡಿದ ಜಿಲ್ಲೆೆ ಎಂಬ ಖ್ಯಾಾತಿಯನ್ನು ಮಾತ್ರ ಉಳಿಸಿಕೊಳ್ಳುವಂತಾಗಿದೆ. ಕಡಿದಾಳು ಮಂಜಪ್ಪ, ಎಸ್. ಬಂಗಾರಪ್ಪ, ಜೆ. ಎಎಚ್.ಪಟೇಲ್ ಮತ್ತು ಬಿ.ಎಸ್. ಯಡಿಯೂರಪ್ಪ ಜಿಲ್ಲೆೆಯಿಂದ ಮುಖ್ಯಮಂತ್ರಿಿಯಾದವರು.
ತೀರ್ಥಹಳ್ಳಿಿಯಿಂದ 1952ರ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿದ್ದ ಕಡಿದಾಳು ಮಂಜಪ್ಪ ರಾಜ್ಯದ 3ನೆಯ ಮುಖ್ಯಮಂತ್ರಿಿಯಾಗಿ 1956ರ ಆಗಸ್‌ಟ್‌ 19ರಂದು ಅಧಿಕಾರ ಸ್ವೀಕರಿಸಿದ್ದರು. ಆದರೆ ಅವರು ಸಿಎಂ ಆಗಿದ್ದು 74 ದಿನ ಮಾತ್ರ. ಅದೇ ವರ್ಷದ ಅಕ್ಟೋೋಬರ್ 31ರಂದು ಸ್ಥಾಾನ ತ್ಯಜಿಸಿದರು. ಅವರಿಗಿಂತ ಮುನ್ನ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಿಯಾಗಿದ್ದರು. ಅವರು ರಾಜೀನಾಮೆ ನೀಡಿದ್ದರಿಂದ ಗಾಂಧಿವಾದಿ  ಕಡಿದಾಳು ಅವರಿಗೆ ಹುದ್ದೆೆ ತಾನಾಗಿಯೇ ಒಲಿದು ಬಂದಿತ್ತು. ಅದನ್ನು ಸಮರ್ಥವಾಗಿಯೇ  ನಿಭಾಯಿಸಿದ್ದರು. ಆನಂತರ ಸರ್ಕಾರದ ಅವಧಿ ಮುಕ್ತಾಾಯವಾಗಿದ್ದರಿಂದ ಅವರು ನಿರ್ಗಮಿಸಿದ್ದರು.
ಎಸ್. ಬಂಗಾರಪ್ಪ ಸೊರಬದಿಂದ 7 ಬಾರಿ ಆಯ್ಕೆೆಯಾದವರು. 1990ರ ಅಕ್ಟೋೋಬರ್ 17ರಂದು ಮುಖ್ಯಮಂತ್ರಿಿಯಾಗಿ 1992ರ  ನವೆಂಬರ್ 19ರವರೆಗೆ ಆಡಳಿತ ನಡೆಸಿದರು. ಒಟ್ಟಾಾರೆ  ಅವರು ಆಡಳಿತ ನಡೆಸಿದ್ದು 756 ದಿನ. ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಏಕಾಏಕಿ ಹುದ್ದೆೆಯಿಂದ ಕೆಳಗಿಳಿಸಿ ಬಂಗಾರಪ್ಪಗೆ ಹುದ್ದೆೆ ನೀಡಿದ್ದರು. ಆದರೆ ಬಂಗಾರಪ್ಪ ಅಂದಿನ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಅವರ ವಿರೋಧ ಕಟ್ಟಿಿಕೊಂಡು ಹುದ್ದೆೆ ಕಳಕೊಂಡರು.
ಜೆ.ಎಚ್. ಪಟೇಲ್ ಅವರು ಅವಿಭಜಿತ ಚನ್ನಗಿರಿಯಿಂದ ಶಾಸಕರಾಗಿ ಆಯ್ಕೆೆಯಾಗಿದ್ದರು. 1996ರ ಮೇ 31ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ 1999ರ ಅಕ್ಟೋೋಬರ್ 7ರಂದು ಸ್ಥಾಾನಕ್ಕೆೆ ರಾಜೀನಾಮೆ ನೀಡಿದರು.  ಇವರ ಆಳ್ವಿಿಕೆಯ ಅವಧಿ 1 ವರ್ಷ 172 ದಿನ. ಇವರಿಗಿಗಿಂತ ಮೊದಲು ಎಚ್. ಡಿ. ದೇವೇಗೌಡ ಸಿಎಂ ಆಗಿದ್ದರು. ಆದರೆ ಕೇಂದ್ರದಲ್ಲಿ ದೇವೇಗೌಡರು ಪ್ರಧಾನಿಯಾದರು. ಇದರಿಂದ ಪಟೇಲ್‌ಗೆ ಸಿಂಎ ಆಗುವ ಅವಕಾಶ ಲಭಿಸಿತ್ತು.
ಬಿ. ಎಸ್. ಯಡಿಯೂರಪ್ಪ ಒಟ್ಟೂ ಈವರೆಗೆ 8 ಬಾರಿ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆೆಯಾಗಿದ್ದಾಾರೆ. 200ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಜೆಡಿಎಸ್- ಕಾಂಗ್ರೆೆಸ್ ಮೈತ್ರಿಿ ಆಳ್ವಿಿಕೆ ನಡೆದು ಧರ್ಮಸಿಂಗ್ ಮುಖ್ಯಮಂತ್ರಿಿಯಾಗಿದ್ದರು. ಆದರೆ ಜೆಡಿಎಸ್ ಅಲ್ಪಕಾಲದಲೇ ಕಾಂಗ್ರೆೆಸ್‌ಗೆ ಕೈಕೊಟ್ಟಿಿತ್ತು. ಬಿಜೆಪಿ ಜೊತೆ ಮೈತ್ರಿಿ ಸಾಧಿಸಿ ಎಚ್. ಡಿ. ಕುಮಾರಸ್ವಾಾಮಿ ಸಿಎಂ ಆದರು. ಮೊದಲ 20 ತಿಂಗಳು ಎಚ್‌ಡಿಕೆ, ಆನಂತರ 20 ತಿಂಗಳು ಬಿಎಸ್ವೈ ಎಂದು ನಿರ್ಧರಿಸಲಾಗಿತ್ತು. ಅವರು ಮೊದಲ ಬಾರಿಗೆ 2007ರ ನವೆಂಬರ್ 12ರಂದು ಮುಖ್ಯಮಂತ್ರಿಿಯಾಗಿ ಅಧಿಕಾರ ಸ್ವೀಕರಿಸಿದರು. ಜೆಡಿಎಸ್ ಬೆಂಬಲದ ಮೇಲೆ ಪ್ರಮಾಣ ವಚನ ಮಾಡಿದ್ದರಾದರೂ ಅವರು ಬೆಂಬಲ ವಾಪಸ್ ಪಡೆದಿದ್ದರಿಂದ ಕೇವಲ 7 ದಿನಕ್ಕೆೆ ಅಧಿಕಾರದಿಂದ ನಿರ್ಗಮಿಸಿದರು.
 ಎರಡನೆಯ ಬಾರಿಗೆ 2008ರ ಮೇ 30ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಭ್ರಷ್ಟಾಾಚಾರ ಪ್ರಕರಣಗಳ ಹಿನ್ನೆೆಲೆಯಲ್ಲಿ 2012ರ ಜುಲೈ 12ಕ್ಕೆೆ ಅಧಿಕಾರ ಬಿಡಬೇಕಾಯಿತು. ಮೂರನೆಯ ಬಾರಿಗೆ ಮೊನ್ನೆೆ 17ರಂದು ಅಧಿಕಾರ ಸ್ವೀಕರಿಸಿ 19ರಂದು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಎರಡೇ ದಿನಕ್ಕೆೆ ರಾಜೀನಾಮೆ ನೀಡಿದರು.
published on May 21
.................................
ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆೆಯ ಭಯ 


ಕರ್ನಾಟಕ ವಿಧಾನಸಭೆಯಲ್ಲಿ ಆಡಳಿತದ ಚುಕ್ಕಾಾಣಿ ಹಿಡಿಯಲು ಯಾವುದೇ ಪಕ್ಷಕ್ಕೆೆ ಬಹುಮತ ಬಾರದ ಹಿನ್ನೆೆಲೆಯಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿಿವೆ. ಅತಿ ಹೆಚ್ಚು ಸ್ಥಾಾನ ಗಳಿಸಿರುವ ಬಿಜೆಪಿಯನ್ನು ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾಾನಿಸಿರುವುದೂ ಸಹ ವಿವಾದವಾಗಿ ಮಾರ್ಪಟ್ಟಿಿದೆ. ಏಕೆಂದರೆ ಕಾಂಗ್ರೆೆಸ್- ಜೆಡಿಎಸ್ ಚುನಾವಣೋತ್ತರದಲ್ಲಿ ಮೈತ್ರಿಿ ಮಾಡಿಕೊಂಡು ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸನ್ನದ್ಧವಾಗಿದ್ದವು,
ಬಿಜೆಪಿ ಈಗ 103, ಕಾಂಗ್ರೆೆಸ್ 78 ಮತ್ತು ಜೆಡಿಎಸ್ 38, ಪಕ್ಷೇತರರು ಇಬ್ಬರು ಇದ್ದಾಾರೆ. ಪಕ್ಷೇತರರಿಬ್ಬರೂ ಕಾಂಗ್ರೆೆಸ್ ಪರ ಗುರುತಿಸಿಕೊಂಡು ಬೆಂಬಲ ಘೋಷಿಸಿದ್ದಾಾರೆ. ಆದ್ದರಿಂದ ಈಗ ಬಿಜೆಪಿ ಬಹುಮತ ಸಾಬೀತುಪಡಿಸಲು 111 ಸದಸ್ಯರನ್ನು ಹೊಂದಬೇಕಿದೆ. ಆದರೆ ಇದಕ್ಕೆೆ 8 ಸದಸ್ಯರ ಕೊರತೆ ಎದುರಾಗಿದೆ. ಈ 8 ಸದಸ್ಯರನ್ನು ಪಡೆಯಲು ತಂತ್ರಗಾರಿಕೆ ನಡೆಯುತ್ತಿಿದೆ.
ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆೆಯ ದೊಡ್ಡ ಭಯ ಇರುವುದರಿಂದ ಸುಲಭದಲ್ಲಿ ಪಕ್ಷಾಂತರಕ್ಕೆೆ ಅವಕಾಶವಿಲ್ಲ. ಬಿಜೆಪಿ ವಿಶ್ವಾಾಸಮತ ಗೆಲ್ಲಬೇಕಾದರೆ ಜೆಡಿಎಸ್ ಅಥವಾ ಕಾಂಗ್ರೆೆಸ್ ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳಬೇಕಿದೆ. ಆದರೆ ಅದು ಅಷ್ಟು ಸುಲಭದ ಕೆಲಸವಂತೂ ಅಲ್ಲ. ಜೆಡಿಎಸ್ ಮತ್ತು ಕಾಂಗ್ರೆೆಸ್ ಈಗ ಮೈತ್ರಿಿ ಮಾಡಿಕೊಂಡಿರುವುದು ಮತ್ತು ತಮ್ಮದೇ ಸುರಕ್ಷೆಯಲ್ಲಿ ಇಟ್ಟುಕೊಂಡಿರುವುದು ಸಹ ಬಿಜೆಪಿಗೆ ತೊಂದರೆ ತಂದೊಡ್ಡಿಿದೆ.
ವಿಶ್ವಾಾಸಮತ ಯಾಚನೆ ಸಂದರ್ಭದಲ್ಲಿಯೂ ಕಾಂಗ್ರೆೆಸ್- ಜೆಡಿಎಸ್ ಶಾಸಕರು ಬಿಜೆಪಿಗೆ ಮತ ಹಾಕದಂತೆ ವ್ಹಿಿಪ್ ಜಾರಿಗೊಳಿಸುವ ಸಾಧ್ಯತೆ ಇದೆ. ಸೂಚನೆಗೆ ವಿರುದ್ಧವಾಗಿ ಅವರು ನಡೆದುಕೊಳ್ಳುವಂತಿಲ್ಲ. ಆದ್ದರಿಂದ ಪಕ್ಷದ ಸೂಚನೆಯಂತೆ ಅವರು ನಡೆದುಕೊಳ್ಳಬೇಕಾಗುತ್ತದೆ. ವ್ಹಿಿಪ್ ಉಲ್ಲಂಘಿಸಿದ ಶಾಸಕ ತನ್ನ ಸದಸ್ಯತ್ವವನ್ನು ಮತ್ತು ಶಾಸಕ ಸ್ಥಾಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಆತ ಸದಸ್ಯನಾಗುವ ಮುನ್ನ ಸಂಬಂಧಿತ ಪಕ್ಷದ ಹೆಸರಿನಲ್ಲಿ ಟಕೆಟ್ ಪಡೆದು ಸ್ಪರ್ಧಿಸಿ ಸದಸ್ಯನಾಗಿರುತ್ತಾಾನೆ. ಒಂದು ವೇಳೆ ಪಕ್ಷಾಂತರ ನಿಷೇಧ ಕಾಯ್ದೆೆಯಡಿ ಶಾಸಕರು ಬಂದಲ್ಲಿ ಅವರು  ಕೂಡಲೇ ತಮ್ಮ ಸ್ಥಾಾನ ತೆರವುಗೊಳಿಸಬೇಕಾಗುತ್ತದೆ. ಮತ್ತು ಆ ಸ್ಥಾಾನಕ್ಕೆೆ  ಮರು ಚುನಾವಣೆ ನಡೆಸಬೇಕಾಗುತ್ತದೆ. ಈ ಕಾಯ್ದೆೆ ಉಲ್ಲಂಘಿಸಿದಲ್ಲಿ ಶಾಸಕರು ಬಹಳ ದೊಡ್ಡ ತೊಂದರೆಯನ್ನು ಎದುರಿಸಬೇಕಾಗುತ್ತದೆ.
ಒಂದು ವೇಳೆ ಪಕ್ಷ ವಿಭಜನೆಯಾದಲ್ಲಿ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆೆ ಅನ್ವಯವಾಗುವುದಿಲ್ಲ. ಆದರೆ ಮೂರನೆಯ ಒಂದರಷ್ಟು ಸದಸ್ಯರಾದರೂ ವಿಭಜನೆ ಮಾಡಿಕೊಂಡು ಹೊರಬಂದಿರಬೇಕಾಗುತ್ತದೆ. 
ಪಕ್ಷಾಂತರ ನಿಷೇಧ ಕಾಯ್ದೆೆಯ ಅಂತಿಮ ನಿರ್ಧಾರ ವಿಧಾನಸಭೆಯ ಅಧ್ಯಕ್ಷರದ್ದಾಾಗಿರುತ್ತದೆ. ಇಲ್ಲಿ ನ್ಯಾಾಯಾಲಯದ ಮೆಟ್ಟಿಿಲೇರುವ ಪ್ರಮೇಯವೇ ಇಲ್ಲ. ಏಕೆಂದರೆ ಸಭೆಯ ಸಂಪೂರ್ಣ ನಿಭಾವಣೆಯ ಜವಾಬ್ದಾಾರಿ ಸಭಾಧ್ಯಕ್ಷರಾಗಿರುವುದರಿಂದ ಅವರ ನಿರ್ಣಯವೇ ಅಂತಿಮ ತೀರ್ಪು ಆಗಿರುತ್ತದೆ.
ವಿಶ್ವಾಾಸಮತ ಯಾಚನೆಗೂ ಮುನ್ನ ಸಭಾಧ್ಯಕ್ಷರ ಆಯ್ಕೆೆಯಾಗಬೇಕಿದೆ. ಇಲ್ಲಿ ಕಾಂಗ್ರೆೆಸ್- ಜೆಡಿಎಸ್ ಮೈತ್ರಿಿ ಸರಳ ಬಹುಮತ ಹೊಂದಿರುವುದರಿಂದ ಇವರೇ ತಮ್ಮಲ್ಲೊೊಬ್ಬರನ್ನು ಆಯ್ಕೆೆ ಮಾಡಬಹುದು. ಸಭಾಧ್ಯಕ್ಷರು ಎಲ್ಲ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಕೆಲಸ ಮೊದಲು ಮಾಡುತ್ತಾಾರೆ. ಆನಂತರವಷ್ಟೇ ವಿಶ್ವಾಾಸಮತ ನಡೆಯುತ್ತದೆ.
published on May 18
............................................. 




ಜಿಲ್ಲೆೆಯಲ್ಲಿ ಕಾಂಗ್ರೆೆಸ್‌ಗೆ ಸೋಲು: ನೀರವ ಮೌನ

ಶಿವಮೊಗ್ಗ: ಅನಿರೀಕ್ಷಿತ ಸೋಲು ಎಂತಹವರನ್ನೂ ಕಂಗೆಡಿಸುತ್ತದೆ. ಕನಿಷ್ಠ 5 ಕ್ಷೇತ್ರವನ್ನಾಾದರೂ ಗೆಲ್ಲುತ್ತೇವೆ ಎಂದು ಹೇಳುತ್ತಿಿದ್ದ ಜಿಲ್ಲಾಾ ಕಾಂಗ್ರೆೆಸ್ ಮುಖಂಡರು ಏಕೈಕ ಸ್ಥಾಾನ ದಕ್ಕಿಿದ್ದರಿಂದ ಸ್ವಾಾಭಾವಿಕವಾಗಿಯೇ ಹತಾಶರಾಗಿದ್ದಾಾರೆ. ಹಿಂದುತ್ವದ ಅಲೆಯಲ್ಲಿ ತಾವು ಸೋತಿರುವುದು ಅವರಿಗೆ ಸ್ಪಷ್ಟವಾಗಿ ಅರಿವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಸ್ಪರ್ಧಿಸಿದ್ದರಿಂದ ಮೂರು ಸ್ಥಾಾನಗಳನ್ನು ಪಡೆದು ತಮ್ಮದೇ  ಸರ್ಕಾರ ರಚನೆಯಾಗಿದ್ದರಿಂದ ಸಚಿವ ಸ್ಥಾಾನ, ವಿಧಾನಸಭಾಧ್ಯಕ್ಷ ಸ್ಥಾಾನವೂ ಜಿಲ್ಲೆೆಯ ಪಾಲಾಗಿತ್ತು. ಜಿಲ್ಲೆೆಯಲ್ಲಿ ಕಾಂಗ್ರೆೆಸ್ ಬಲಿಷ್ಠವಿತ್ತು. ಸಚಿವರಾಗಲಿ, ಶಾಸಕರಾಗಲಿ ಹೆಸರು ಕೆಡಿಸಿಕೊಂಡಿರಲಿಲ್ಲ. ಜೊತೆಗೆ ಸರ್ಕಾರದ ಸಾಧನೆಯ ಆಧಾರದಲ್ಲೂ ಮತವನ್ನು ಕೇಳಿದ್ದರು. ಈ ಹಿನ್ನೆೆಲೆಯಲ್ಲಿ ಕನಿಷ್ಠ  5 ಸ್ಥಾಾನವನ್ನು ಗೆಲ್ಲಬಹುದೆಂಬ ಲೆಕ್ಕಾಾಚಾರವನ್ನು ಕಾಂಗ್ರೆೆಸ್ಸಿಿಗರು ಹಾಕಿದ್ದರು.
ಆದರೆ ಚುನಾವಣೆಯಲ್ಲಿ ಆಗಿದ್ದೇ ಬೇರೆ. ಎಲ್ಲವೂ ಉಲ್ಟಾಾ ಹೊಡೆದಿದೆ. ಭದ್ರಾಾವತಿಯಲ್ಲಿ ಮಾತ್ರ ಜೆಡಿಎಸ್ ಸ್ಥಾಾನವನ್ನು ಕಾಂಗ್ರೆೆಸ್ ಕಿತ್ತುಕೊಂಡಿದೆ. ಸೊರಬ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಎರಡನೆಯ ಸ್ಥಾಾನಕ್ಕೆೆ ತೃಪ್ತಿಿಪಟ್ಟಿಿದೆ. ಸಣ್ಣಪುಟ್ಟ ವೈಮನಸ್ಸುಗಳಿದ್ದರೂ ಚುನಾವಣೆಯ ಆರಂಭದಿಂದ ಕೊನೆಯ ಕೆಲವು ದಿನಗಳವರೆಗೆ ಕಾಂಗ್ರೆೆಸ್ ಹವಾ ಜಿಲ್ಲೆೆಯಲ್ಲಿ ಚೆನ್ನಾಾಗಿಯೇ ಇತ್ತು. ಯಾವಾಗ ಪ್ರಧಾನಿ ನರೇಂದ್ರ ಮೋದಿ ಬಂದು ಹೋದರೋ ಅಲ್ಲಿಂದ ಬದಲಾವಣೆ ಆಗಿದ್ದನ್ನು ಗಮನಿಸಬಹುದು. ಹಿಂದುತ್ವದ ಆಧಾರದ ಮೇಲೆಯೇ ಜನರು ಮತ ಹಾಕಿರುವುದು ಅರಿವಾಗುತ್ತದೆ. ಅದರಲ್ಲೂ ವಿಶೇಷವಾಗಿ ಯುವಕರು ಮತ್ತು ಹೊಸ ಮತದಾರರು ಇದಕ್ಕೆೆ ಹೆಚ್ಚಿಿನ ಒತ್ತು ಕೊಟ್ಟರು. ಇದರಿಂದ ಬಿಜೆಪಿ ಮೊದಲಿದ್ದ ಒಂದೆರಡು ಸ್ಥಾಾನಗಳ ಗೆಲುವಿನ ಅಂದಾಜನ್ನು ಇನ್ನೊೊಂದೆರಡಕ್ಕೇರಿಸಿಕೊಂಡಿತು ಎನ್ನಬಹುದು.
ಆದರೆ ಕಾಂಗ್ರೆೆಸ್ 6 ಸ್ಥಾಾನವನ್ನು ಸೋಲುತ್ತದೆ. ಬಿಜೆಪಿ 6 ಸ್ಥಾಾನ ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕಾಂಗ್ರೆೆಸ್‌ಗೆ ಕನಿಷ್ಠ 3ರಿಂದ 4 ಸ್ಥಾಾನವಾದರೂ ದಕ್ಕಬಹುದೆಂಬ ನಿರೀಕ್ಷೆ ಇತ್ತು. ಅದರಲ್ಲೂ ತೀರ್ಥಹಳ್ಳಿಿ, ಸಾಗರ ಕೈತಪ್ಪಲಿದೆ ಎಂದು ತಿಳಿದಿರಲಿಲ್ಲ. ಮಾಜಿ ಸಚಿವ ಕಿಮ್ಮನೆ ಮತ್ತು ಕಾಗೋಡು ಗೆಲುವಿನ ವಿಶ್ವಾಾಸ ಎಲ್ಲರಲ್ಲಿತ್ತು. ಆದರೆ ಕೊನೆಯ ವಾರದಲ್ಲಾಾದ ಬದಲಾವಣೆ ಯಾರಿಗೂ ಅರಿವಾಗಲೇ ಇಲ್ಲ. ಇದರ ಒಳಪೆಟ್ಟು ಚೆನ್ನಾಾಗಿಯೇ ಕಾಂಗ್ರೆೆಸ್‌ಗೆ ಬಿತ್ತು. 
ಭದ್ರಾಾವತಿಯಲ್ಲಿ ಕಾಂಗ್ರೆೆಸ್- ಜೆಡಿಎಸ್ ಕಾದಾಟ ನಡೆಯಲಿದ್ದು, ಇಲ್ಲಿಯೂ ಸಮಾನ ಅವಕಾಶ ಎರಡೂ ಪಕ್ಷಕ್ಕಿಿತ್ತು. ಆದರೆ ಕೊನೆಯ ದಿನಗಳಲ್ಲಿ ಕಾಂಗ್ರೆೆಸ್ ಪರ ವಾತಾವರಣ ಹೆಚ್ಚು ಕಂಡುಬಂದಿತ್ತು. ಸೊರಬದಲ್ಲಿ ಬಿಜೆಪಿ- ಜೆಡಿಎಸ್ (ಸಹೋದರರ ಸವಾಲ್) ನಡೆಯಲಿದೆ ಎನ್ನುವುದನ್ನು ಮೊದಲೇ ಕಾಂಗ್ರೆೆಸಿಗರು ಅರಿತಿದ್ದರು. ಬಂಗಾರಪ್ಪ ಕುಟುಂಬದವರು ಕಾಂಗ್ರೆೆಸ್‌ನಿಂದ ಹೊರಬಿದ್ದ ನಂತರ ಕಾಂಗ್ರೆೆಸ್ ಬೇರು ಅಲ್ಲಿ ಸಡಿಲವಾಗಿದೆ. ಸಹೋದರರ ಮಧ್ಯೆೆಯ ಕಾದಾಟ (ಕಾಂಗ್ರೆೆಸ್- ಜೆಡಿಎಸ್) ಇದಾಗಿರುತ್ತಿಿತ್ತು. ಆದರೆ ಕುಮಾರ್ ಬಂಗಾರಪ್ಪ ಕಾಗೋಡು ತಿಮ್ಮಪ್ಪ ಅವರೊಂದಿಗೆ ಮುನಿಸಿಕೊಂಡು ಬಿಜೆಪಿಗೆ ಪಕ್ಷಾಂತರ ಮಾಡಿದ್ದರಿಂದ ಕಾಂಗ್ರೆೆಸ್ ಇನ್ನಷ್ಟು ಸೊರಗಿರುವುದು ಸತ್ಯ. ಪಕ್ಷವನ್ನು ಅಲ್ಲಿ ಕಟ್ಟಲು ಸಾಕಷ್ಟು ಯತ್ನವನ್ನು ಜಿಲ್ಲಾಾಧ್ಯಕ್ಷ ಸಹಿತ ಮುಖಂಡರು ಯತ್ನಿಿಸಿದ್ದರಾದರೂ ತಾಲೂಕಿನ ನಾಯಕರಾರೂ ಅಣ್ಣ-ತಮ್ಮನೆದುರು ಸೆಣೆಸುವ ಮಟ್ಟಕ್ಕೆೆ ಬೆಳೆಯದಿರುವುದು ದೊಡ್ಡ ಪೆಟ್ಟಾಾಗಿ ಪರಿಣಮಿಸಿತು.
 ಹೊಸಬರಿಗೆ ಟಿಕೆಟ್ ಕೊಟ್ಟ ಬಗ್ಗೆೆಯೂ ಪಕ್ಷದೊಳಕ್ಕೆೆ ಬೇಸರವಿತ್ತು. ಟಿಕೆಟ್‌ಗೆ ಮೊದಲೇ ಕಣ್ಣಿಿಟ್ಟಿಿದ್ದ ಹುಲ್ತಿಿಕೊಪ್ಪ ಶ್ರೀಧರ್ ಟಿಕೆಟ್ ಗಿಟ್ಟಿಿಸಿದ್ದ ರಾಜು ತಲ್ಲೂರು ವಿರುದ್ದ ಆರಂಭದಲ್ಲೇ ಗುಡುಗಿದ್ದು ಇದಕ್ಕೆೆ ಸಾಕ್ಷಿಯಾಗಿತ್ತು. ಆದರೆ ಇದು ಬಹಿರಂಗವಾಗಿ ಆನಂತರ ಕಾಣಿಸಿಕೊಳ್ಳಲಿಲ್ಲವಾದರೂ ಬೂದಿ ಮುಚ್ಚಿಿದ ಕೆಂಡದಂತಿತ್ತು. ಇನ್ನಾಾದರೂ ಪಕ್ಷದ ನಾಯಕರು ಸೊರಬದ ಮಟ್ಟಿಿಗೆ ಇನ್ನಷ್ಟು ಕೆಲಸ ಮಾಡಲೇಬೇಕಿದೆ. ಇಲ್ಲವಾದಲ್ಲಿ ಸಂಘಟನೆಗೆ ಇನ್ನಷ್ಟು ಗೆದ್ದಲು ಹತ್ತುವ ಸಂಭವವಿದೆ. ವೈಮನಸ್ಸು, ಅಂತಃಕಲಹವನ್ನು ಬದಿಗೊತ್ತಿಿ ಉತ್ತಮ ನಾಯಕನನ್ನು ಈಗಿನಿಂದಲೇ ಬೆಳೆಸುವ ಕೆಲಸವನ್ನು ಸೊರಬದ ಮಟ್ಟಿಿಗೆ ಮಾಡುವ ಅವಶ್ಯಕತೆ ತುರ್ತಾಗಿದೆ.
ತೀರ್ಥಹಳ್ಳಿಿಯಲ್ಲಿ ಕಿಮ್ಮನೆ ರತ್ನಾಾಕರ್ ಅವರ ಅಭಿವೃದ್ಧಿಿ ಕೆಲಸಗಳೆಲ್ಲ ಕಣ್ಣುಕುಕ್ಕುವಂತಹವಾಗಿದ್ದರೂ ಜನರು ಮಾತ್ರ ಅವರ ಆಯ್ಕೆೆಗೆ ಮುಂದಾಗಲಿಲ್ಲ. ಪ್ರಾಾಮಾಣಿಕ, ಸಜ್ಜನ ಎಂಬ ಹೆಸರು ಗಿಟ್ಟಿಿಸಿದ್ದರೂ ಅಭಿವೃದ್ಧಿಿ ಕಾರ್ಯ ಕೈಹಿಡಿಯಲಿಲ್ಲ. ಜೆಡಿಎಸ್ ಅಭ್ಯರ್ಥಿ ಕಾಂಗ್ರೆೆಸ್‌ನ ಮತವನ್ನು ಪಡೆದಿದ್ದು ಮತ್ತು ಹಿದುಂತ್ವದ ಒಂದಷ್ಟು ಮತಗಳು ಆರಗ ಜ್ಞಾಾನೇಂದ್ರ ಪರವಾಗಿದ್ದು ಕಾಂಗ್ರೆೆಸ್ ಸೋಲಿಗೆ ಕಾರಣವಾಯಿತು. ಶಿವಮೊಗ್ಗ ಗ್ರಾಾಮಾಂತರದಲ್ಲಿ ಮಾಜಿ ಶಾಸಕ ಕರಿಯಣ್ಣ ಅವರ ವರ್ಚಸ್ಸಿಿನ ಮೇಲೆ ಅವರ ಪುತ್ರ ಸ್ಪರ್ಧಿಸಿದ್ದರಾದರೂ ಮತದಾರರು ಅವರನ್ನು ಗೆಲ್ಲಿಸಲಿಲ್ಲ. ಇಲ್ಲಿಯೂ ಹಿಂದುತ್ವ ಕೆಲಸ ಮಾಡಿದ್ದು ನಿಜ.
 ಕಾಂಗ್ರೆೆಸ್ಸಿಿಗರು ಸೋಲಿಗೆ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡುವ ಬದಲು ಪಕ್ಷವನ್ನು ಸಂಘಟಿಸುವುದೇ ಮೇಲೆಂದು ಅದರ ನಾಯಕರು ಅರಿಯಬೇಕಿದೆ. ಸೋಲಿನಿಂದ ಧೈರ್ಯಗುಂದದೆ, ಒಬ್ಬರನ್ನು ಒಬ್ಬರು ದೂರದೆ, ದ್ವೇಷ ಸಾಧಿಸದೆ ಮುಂದಿನ ಚುನಾವಣೆಗಳಿಗೆ ಸಿದ್ಧರಾಗುವತ್ತ ಹೆಜ್ಜೆೆ ಹಾಕಬೇಕಿದೆ.
published on May 19-2018
.................................
ಪೊಲೀಸರಿಂದ ತಪ್ಪಿಿಸಿಕೊಂಡರೂ ಸಿಸಿ ಕ್ಯಾಾಮರಾ ಬಿಡೊಲ್ಲ
   ಮನೆ ಬಾಗಿಲಿಗೆ ಬರುತ್ತಿಿದೆ ದಂಡದ ಪತ್ರ 



ಕಾನೂನಿನಿಂದ ತಪ್ಪಿಿಸಿಕೊಳ್ಳಲು, ಪೊಲೀಸರಿಗೆ ಟೋಪಿ ಹಾಕಲು ಯಾವಾಗಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಸಿಕ್ಕಿಿಬೀಳಲೇಬೇಕು. ತಪ್ಪಿಿಸಿಕೊಳ್ಳುವವರು ಮತ್ತು ಕಾನೂನು ಇರುವುದೇ ಉಲ್ಲಂಘನೆಗೆ  ಎನ್ನುವ ಮನಃಸ್ಥಿಿತಿಯವರು ಜಾಸ್ತಿಿಯಾಗುತ್ತಿಿರುವುದರಿಂದ ಅತ್ಯಾಾಧುನಿಕ ತಂತ್ರಜ್ಞಾಾನ ಇಲ್ಲೂ ಬಳಕೆಯಾಗುವ ಸ್ಥಿಿತಿ ಎದುರಾಗಿದೆ.  


ಹೆಲ್ಮೆೆಟ್ ಕಡ್ಡಾಾಯ ಮಾಡಿದ್ದರೂ ಪಾಲಿಸುವವರ ಸಂಖ್ಯೆೆ ವಿರಳ. ಇಬ್ಬರಿಗಿಂತ ಅಧಿಕ ಪ್ರಯಾಣಿಕರು ಬೈಕಿನಲ್ಲಿ ತೆರಳಬಾರದೆಂದಿದ್ದರೂ ಮೂರು- ನಾಲ್ಕು ಜನ ಸಾಗುವವರಿದ್ದಾಾರೆ. ಏಕಮುಖ ಸಂಚಾರವಿದ್ದರೂ ಅದನ್ನು ಪಾಲಿಸುವವರು ಕಡಿಮೆ. ಮೊಬೈಲ್‌ನಲ್ಲಿ ಮಾತನಾಡುತ್ತ ಚಾಲನೆ ಮಾಡುವುದು, ಅತಿ ವೇಗದಲ್ಲಿ ವಾಹನ ಚಲಾಯಿಸುವುದು ಮೊದಲಾದ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರು ಎಷ್ಟೇ ಪ್ರಯತ್ನಿಿಸಿದರೂ, ಹಿಡಿದು ದಂಡ ಹಾಕಿದರೂ ಸುಲಭದಲ್ಲಿ ಬಹುತೇಕ ವಾಹನ ಸವಾರರು ಅರ್ಥಮಾಡಿಕೊಂಡಿಲ್ಲ.
ಈ ಸಂಬಂಧ ಅವರೊಂದಿಗೆ ವಾಗ್ವಾಾದ ನಡೆಸುವವರೂ ಕಡಿಮೆ ಏನಿಲ್ಲ. ಪೊಲೀಸರು ಹಿಡಿಯಬಂದರೆ ತಪ್ಪಿಿಸಿಕೊಂಡು ಓಡಿಹೋಗಿ ಬಿದ್ದು ಪೆಟ್ಟು ಮಾಡಿಕೊಂಡವರೂ ಇದ್ದಾಾರೆ. ಮತ್ತೆೆ ಪೊಲೀಸರೇ ಅಡ್ಡ ಹಾಕಿ ಕೆಡವಿದರೆನ್ನುವ ಆರೋಪ ಹೊರಿಸಿರುವ ಪ್ರಕರಣವೂ ಇದೆ. ಇದನ್ನೆೆಲ್ಲ ಕೇವಲ ಪೊಲೀಸರಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಸಾರ್ವಜನಿಕರು ವಾಹನ ಚಲಾಯಿಸುವಾಗ ಕನಿಷ್ಠ ನಿಯಮವನ್ನು ಪಾಲಿಸದಿದ್ದರೆ ಅವರನ್ನು ಸರಿದಾರಿಗೆ ತರುವವರಾದರೂ ಯಾರು?
ಈ ಹಿನ್ನೆೆಲೆಯಲ್ಲಿ ಬಹುತೇಕ ದೊಡ್ಡ ನಗರಗಳಲ್ಲಿ ಅಟೊಮೇಶನ್ ಕೇಂದ್ರ ತೆರೆದು ಸಿಸಿ ಕ್ಯಾಾಮರಾ ಮೂಲಕ ಚಾಲಕರ ನಿಯಮ ಉಲ್ಲಂಘನೆಯನ್ನು ಗಮನಿಸಿ ದಂಡ ಹಾಕುವ ಯೋಜನೆ ಜಾರಿಯಲ್ಲಿದೆ. ಅದು ಈಗ ಶಿವಮೊಗ್ಗದಲ್ಲೂ ಮೇ 5ರಿಂದ ಜಾರಿಯಾಗಿದೆ. ನಗರದಲ್ಲಿ ವಾಹನಗಳಿಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಮತ್ತು ಚಾಲಕರಿಗೆ ದಂಡ ವಿಧಿಸುವ ತಾಂತ್ರಿಿಕ ಆಧಾರಿತ ಟ್ರಾಾಫಿಕ್ ಎನ್‌ಫೋರ್ಸ್‌ಮೆಂಟ್ ಮಾಡುವ ಸದುದ್ದೇಶದಿಂದ ನಗರದಲ್ಲಿ ಆಟೊಮೇಶನ್ ಕೇಂದ್ರವನ್ನು ತೆರೆಯಲಾಗಿದೆ
  ವಾಹನ ಸಂಚಾರ ದಟ್ಟಣೆ ದಿನೇದಿನೇ ಹೆಚ್ಚಳವಾಗುತ್ತಿಿದ್ದು, ಸಂಚಾರ ವ್ಯವಸ್ಥೆೆಯನ್ನು ನಿಯಂತ್ರಿಿಸುವುದು ಕಷ್ಟಕರವಾಗುತ್ತಿಿದೆ. ಆದ್ದರಿಂದ  ಆಟೊಮೇಶನ್ ತಂತ್ರಾಾಂಶ ಅಭಿವೃದ್ಧಿಿಪಡಿಸಿ, ಕಾರ್ಯರೂಪಕ್ಕೆೆ ತರಲಾಗಿದೆ. ಮೇ 5ರಿಂದ 28ರವರೆಗೆ ಸುಮಾರು 8,700ಚಾಲಕರಿಗೆ  ನೋಟೀಸ್‌ಗಳನ್ನು ವಾಹನ ನೋಂದಣಿಯಾಗಿರುವ ವಿಳಾಸಕ್ಕೆೆ ಕಳುಹಿಸಿಕೊಡಲಾಗಿದೆ.
ಇನ್ಲಾಾಂಡ್ ಪತ್ರದ ರೀತಿಯಲ್ಲಿ ಇಲಾಖೆ ಪತ್ರ ರೂಪಿಸಿದೆ. ಅದರಲ್ಲಿ ಚಾಲಕ ಉಲ್ಲಂಘನೆ ಮಾಡುತ್ತಿಿರುವ ಚಿತ್ರವನ್ನೂ ಸಹ ಸಿಸಿ ಕ್ಯಾಾಮರಾ ಸಹಾಯದಿಂದ ಪಡೆದು ಹಾಕಲಾಗುತ್ತಿಿದೆ. ಜೊತೆಗೆ ಉಲ್ಲಂಘನೆಯನ್ನು ಮಾಡಿದ ಸ್ಥಳ, ದಿನಾಂಕ, ಸಮಯ, ವಾಹನದ ಸಂಖ್ಯೆೆಯನ್ನು ಮುದ್ರಿಿಸಲಾಗುವುದು. ಆರ್‌ಟಿಓ ಜೊತೆಗೆ ಇದಕ್ಕೆೆ ಲಿಂಕ್ ಇರುವುದರಿಂದ ವಾಹನ ಸಂಖ್ಯೆೆಯನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿದರೆ  ವಾಹನದ ಮಾಲಕನ ಅಥವಾ ಚಾಲಕನ ಸಂಪೂರ್ಣ ವಿಳಾಸ ಬರುತ್ತದೆ. ಅದೇ ವಿಳಾಸಕ್ಕೆೆ ಪತ್ರ ಕಳುಹಿಸಲ್ಪಡುತ್ತದೆ.
ಇಲ್ಲಿಯವರೆಗೆ 1267 ನೋಟೀಸುಗಳಿಗೆ ಸುಮಾರು 1,27,500ರೂ.ಗಳ ದಂಡ ಪಾವತಿಯಾಗಿದೆ. ನೋಟೀಸುಗಳಿಗೆ ದಂಡವನ್ನು ಜಿಲ್ಲಾಾ ಪೋಲೀಸ್ ವರಿಷ್ಠಾಾಧಿಕಾರಿ ಕಚೇರಿಯಲ್ಲಿ ಅಥವಾ ಜೂನ್ 1ರಿಂದ ನಗರದ ಶಿವಮೊಗ್ಗ 1 ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ. ದಂಡದ ಮೊತ್ತ 100 ರೂ. ಇದು ಕಡಿಮೆ ಎನಿಸಿದರೂ ಇದನ್ನು ಕಟ್ಟುವುದು ಅನಿವಾರ್ಯ. ಜೊತೆಗೆ ಮೂರಕ್ಕಿಿಂತ ಹೆಚ್ಚು ಬಾರಿ ಅದೇ ಕೃತ್ಯ ಎಸಗಿದಲ್ಲಿ ಆತನ ಚಾಲನಾ ಪರವಾನಿಗೆಯನ್ನು ಪೊಲೀಸ್ ಇಲಾಖೆಯ ಮನವಿ ಮೇರೆಗೆ ಆರ್ಟಿಿಓ ರದ್ದುಗೊಳಿಸುತ್ತಾಾರೆ. ಈ ನಿಯಮ ಚಾಲಕರಲ್ಲಿ ಹೆದರಿಕೆ ಉಂಟುಮಾಡಿದೆ.
ಇದರಲ್ಲಿ ಪೊಲೀಸರ ಕಣ್ತಪ್ಪಿಿಸಿ ಬಂದೆ ಎಂದು ಜಂಭದಿಂದ ಹೇಳಿಕೊಳ್ಳುವಂತಿಲ್ಲ. ಸಿಸಿ ಕ್ಯಾಾಮರಾ ಕಣ್ತಪ್ಪಿಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಚಾಲಕರು ಸಂಯಮದಿಂದ, ಕಾನೂನು ಪ್ರಕಾರ ಚಲಾಯಿಸಿದರೆ ದಂಡದಿಂದಲೂ, ಚಾಲನಾ ಪರವಾನಿಗೆ ರದ್ದಾಾಗುವಿಕೆಯಿಂದಲೂ ಮುಕ್ತಿಿ ಪಡೆಯಬಹುದು. ಕಾನೂನಿನಿಂದ ತಪ್ಪಿಿಸಿಕೊಳ್ಳಲು, ಪೊಲೀಸರಿಗೆ ಟೋಪಿ ಹಾಕಲು ಯಾವಾಗಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಸಿಕ್ಕಿಿಬೀಳಲೇಬೇಕು. ತಪ್ಪಿಿಸಿಕೊಳ್ಳುವವರು ಮತ್ತು ಕಾನೂನು ಇರುವುದೇ ಉಲ್ಲಂಘನೆಗೆ  ಎನ್ನುವ ಮನಃಸ್ಥಿಿತಿಯವರು ಜಾಸ್ತಿಿಯಾಗುತ್ತಿಿರುವುದರಿಂದ ಅತ್ಯಾಾದುನಿಕ ತಂತ್ರಜ್ಞಾಾನ ಇಲ್ಲೂ ಬಳಕೆಯಾಗುವ ಸ್ಥಿಿತಿ ಎದುರಾಗಿದೆ.


ಶಿವಮೊಗ್ಗ ನಗರದಲ್ಲಿ ಅಟೊಮೇಶನ್ ತಂತ್ರಾಾಂಶ ಮೇ 5ರಿಂದ ಆರಂಭವಾಗಿದೆ. ಆದರೆ ಎಪ್ರಿಿಲ್ 14ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನಗರಕ್ಕೆೆ ಆಗಮಿಸಿದ್ದ ವೇಳೆ  ಉದ್ಘಾಾಟನೆ ನಡೆಸಿದ್ದರು. ಇಲ್ಲಿಯವರೆಗೆ ಒಟ್ಟು 8700 ಪ್ರಕರಣ ದಾಖಲಾಗಿದೆ. ಅವುಗಳಲ್ಲಿ 1267 ನೋಟೀಸುಗಳಿಗೆ ಸುಮಾರು 1,27,500ರೂ.ಗಳ ದಂಡ ಪಾವತಿಯಾಗಿದೆ. ನೋಟೀಸುಗಳಿಗೆ ದಂಡವನ್ನು ಜಿಲ್ಲಾಾ ಪೋಲೀಸ್ ವರಿಷ್ಠಾಾಧಿಕಾರಿ ಕಚೇರಿಯಲ್ಲಿ, ನಗರದ ವಿದ್ಯಾಾನಗರದ ಪೂರ್ವ ಸಂಚಾರಿ ಠಾಣೆ, ಬಸ್ ನಿಲ್ದಾಾಣದ ಬಳಿ ಇರುವ ಪಶ್ಚಿಿಮ ಸಂಚಾರಿ ಠಾಣೆ , ಭದ್ರಾಾವತಿಯ ಸಂಚಾರಿ ಪೊಲೀಸ್  ಠಾಣೆಯಲ್ಲಿ  ಅಥವಾ ಜೂನ್ 1ರಿಂದ ನಗರದ ಶಿವಮೊಗ್ಗ 1 ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ. ಆನ ಲೈನನ್‌ಲಲ್ಲೂ ತಿತಿತಿ.ಞಚಿಡಿಟಿಚಿಣಚಿಞಚಿಟಿ..ಟಿ ಪಾವತಿಸಬಹುದಾಗಿದೆ.
-ಅಭಿನವ್ ಖರೆ, ಜಿಲ್ಲಾಾ ಪೊಲೀಸ್ ವರಿಷ್ಠ

Published on 30th May
...........................................................