ಜನಸಾಮಾನ್ಯರಿಂದ ಹಿಡಿದು ಪ್ರತಿಯೊಬ್ಬನಿಗೂ ದೈನಂದಿನ ಅವಶ್ಯಕತೆಯಾದ ತರಕಾರಿಯ ಬೆಲೆ ಗಗನಕ್ಕೇರುತ್ತಿದೆ. ಒಂದೆಡೆ ಅಡುಗೆ ಅನಿಲ, ಅಡುಗೆ ಎಣ್ಣೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿ ಜನರು ಜೀವನ ಸಾಗಿಸುವುಕ್ಕೆ ಏದುಸಿರು ಬಿಡುತ್ತಿರುವಾಗ ತರಕಾರಿಯೂ ಗಾಯದ ಮೇಲೆ ಬರೆ ಎಂಬAತೆ ದರ ಎರಿಕೆಯ ಮೂಲಕ ಜನರಿಗೆ ಬಲವಾದ ಏಟು ಕೊಡುತ್ತಿದೆ
ಅತ್ಯಗತ್ಯ ವಸ್ತುಗಳಲ್ಲಿ ತರಕಾರಿಯೂ ಒಂದು. ಪ್ರತಿ ತರಕಾರಿ ಬೆಲೆ ಇಂದು ಏರುತ್ತಿದೆ. ಸುಮಾರು ೧೫ ದಿನದಿಂದೀಚೆಗೆ ಬಡವರ ತರಕಾರಿ ಎಂದೇ ಖ್ಯಾತವಾದ ಟೊಮೆಟೋ ನಿಧಾನವಾಗಿ ಏರುತ್ತಾ ಈಗ ೧೦೦ರ ಹತ್ತಿರ ಬಂದು ನಿಂತಿದೆ. ಇದರ ಮಾರ್ಗವನ್ನೇ ಉಳಿದ ತರಕಾರಿಗಳೂ ಹಿಡಿದಿವೆ. ಇದರಿಂದ ಕಿಸೆ ತುಂಬಾ ಹಣ ತೆಗೆದುಕೊಂಡು ಹೋದರೂ ಚೀಲದ ತುಂಬಾ ತರಕಾರಿ ತರಲಾಗುತ್ತಿಲ್ಲ.
ಹಾಪ್ಕಮ್ಸ್ನಲ್ಲಿ ಟೊಮೆಟೊ ೭೫-೮೦ಕ್ಕೆ ಲಭಿಸುತ್ತಿದ್ದರೂ ಮಾರುಕಟ್ಟೆಯಲ್ಲಿ ೯೦ ರೂ ನಲ್ಲಿದೆ. ನಾಟಿ ಮತ್ತು ಫಾರ್ಮ್ ಟೊಮೆಟೊಗಳು ೫-೧೦ ರೂ. ಅಂತರದಲ್ಲಿ ಮಾರಾಟವಾಗುತ್ತಿವೆ. ಈಗ ತರಕಾರಿ ಅಂಗಡಿ ಮತ್ತು ಮಾರುಕಟ್ಟೆಯಲ್ಲಿ ಮಾತ್ರ ತರಕಾರಿಗಳು ಸಿಗುವಂತಾಗಿದೆ. ಇಷ್ಟು ದಿನದವರೆಗೆ ತಳ್ಳುಗಾಡಿಯಲ್ಲಿ ಪ್ರತಿ ಬಡಾವಣೆಗೆ ತರಕಾರಿ ಬೆಳಿಗ್ಗೆಯೇ ಬರುತ್ತಿತ್ತು. ಆದರೆ ಈಗ ಮಾರಾಟಗಾರರು ಬರುತ್ತಿಲ್ಲ. ಇದರಿಂದ ಗ್ರಾಹಕರು ಅಂಗಡಿಗೆ ಅಥವಾ ಮಾರುಕಟ್ಟೆಗೆ ಹೋಗಬೇಕಿದೆ. ಅಲ್ಲಿ ಚೌಕಾಸಿ ನಡೆಯುತ್ತಿಲ್ಲ. ೯೦ ರೂ ಕೊಟ್ಟೇ ತರುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ಟೊಮೆಟೊ ಅಧಿಕ ಬೆಳೆಯುವ ಕೋಲಾರ, ಬೆಂಗಳೂರು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ಟೊಮೆಟೊ ಗಿಡಗಳೇ ಕೊಳೆತುಹೋಗಿವೆ. ಇದರಿಂದ ಏಕಾಏಕಿ ದರ ಏರಿಕೆಯಾಗಿದೆ. ಎಪ್ರಿಲ್ ಅಂತ್ಯದವರೆಗೆ ದರ ಕಡಿಮೆ ಇತ್ತು. ೨೦- ೨೫ ರೂ ನಂತೆ ಮಾರಾಟವಾಗುತ್ತಿತ್ತು.
ದರ ಏರಿಕೆಯಿಂದಾಗಿ ಟೊಮೆಟೋಗೆ ಮಾರುಕಟ್ಟೆಯೂ ಕುಸಿದಿದೆ. ಸಣ್ಣ ಕುಟುಂಬದವರು ಇದನ್ನು ಖರೀದಿಸುವುದನ್ನೇ ಬಿಟ್ಟಿದ್ದಾರೆ. ಕೂಲಿ ಕಾರ್ಮಿಕರು ಮತ್ತು ಬಡ ಮತ್ತು ಮಧ್ಯಮ ವರ್ಗದವರು ಟೊಮೆಟೋ ತರುವುದನ್ನೇ ಬಿಟ್ಟಿದ್ದಾರೆ. ಟೊಮೆಟೊ ಹೊರತಾಗಿ ಇತರೇ ತರಕಾರಿಗಳ ದರವೂ ನಿಧಾನವಾಗಿ ಏರಿಕೆಯಾಗುತ್ತಿದೆ. ಇದಕ್ಕೆಲ್ಲ ಮಳೆಯೇ ಕಾರಣ ಎನ್ನುವುದು ವರ್ತಕರ ಅಬಿಪ್ರ್ರಾಯ. ಏಕಾಏಕಿ ಮಳೆ ಬಂದು ಬೆಳೆ ಎಲ್ಲ ಕೊಳೆತುಹೋಗಿದೆ ಇಲ್ಲವೇ ಕೊಚ್ಚಿಕೊಂಡು ಹೋಗಿದೆ. ತರಕಾರಿ ಬೆಳೆಗಾರ ಸತತ ನಷ್ಟದಲ್ಲಿದ್ದಾನೆ. ಹಾಕಿದ ಅಸಲೂ ಸಹ ಕೈಗೆ ಬಾರದಂತಾಗಿದೆ.
ತರಕಾರಿ ದರ ಏರಿಕೆಯಿಂದ ಸಾಮಾನ್ಯ ಜನರಿಗಷ್ಟೇ ಅಲ್ಲ, ಹೋಟೆಲ್ ಮಾಲಕರು ಸಹ ಪ್ರತಿನಿತ್ಯ ಕೈಸುಟ್ಟುಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಖರೀದಿ ಅನಿವರ್ಯವಾಗಿದೆ. ಹೊಟೆಲ್ ಸಾಂಬಾರ್ ಮತ್ತು ಊಟದ ಇತರೆ ಐಟಂಗಳಿಗೆ ತರಕಾರಿ ಅನಿವರ್ಯ.
ಮಾರುಕಟ್ಟೆಯಲ್ಲಿ ತರಕಾರಿಗಳಾದ ಬೆಂಡೆ ೬೦ ರೂ, ಹೀರೇಕಾಯಿ ೫೦ ರೂ, ಹಾಗಲಕಾಯಿ ೬೦ ರೂ, ದೊಡ್ಡ ಮೆಣಸು ೧೦೦ರೂ ನಂತೆ ಮಾರಾಟವಾಗುತ್ತಿದೆ. ಸೊಪ್ಪುಗಳ ದರವೂ ಏರಿಕೆಯಾಗಿದೆ. ಕೊತ್ತಂಬರಿ ೨೦ ರು ಗೆ ಮೂರು ಕಟ್ಟಿನಂತೆ ಮಾರಾಟವಾಗುತ್ತಿದೆ.
ನಮಗೂ ಹೆಚ್ಚಿನ ಬೆಲೆಗೆ ಟೊಮೆಟೊ ಸಿಗುತ್ತಿದೆ. ಖರೀದಿ ಸಾಧ್ಯವಾಗುತ್ತಿಲ್ಲ. ಹೆಚ್ಚು ಖರೀದಿ ಮಾಡಿದರೆ ಮಾರಾಟವಾಗುತ್ತಿಲ್ಲ. ಸ್ಟಾಕ್ ಮಾಡಲಾಗುತ್ತಿಲ್ಲ. ಕೊಳೆತುಹೋಗುವುದರ ಜೊತೆಗೆ ದರ ಒಮ್ಮೆಲೆ ಕುಸಿತವಾದರೆ ಏನು ಮಾಡಬೇಕು. ಗ್ರಾಹಕರಿಗೆ ಕಡಿಮೆ ದರಲ್ಲಿ ಕೊಡಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ.
- ಗಾಂಧಿಬಜಾರಿನ ಹೋಲ್ಸೇಲ್ ವ್ಯಾಪಾರಿ ಸುರೇಶ್.
ಸಾರಿಗೂ ಟೊಮೆಟೊ ಅವಿನಾಭಾವ ಸಂಬAಧ. ಈಗ ಟೊಮೆಟೊ ಇಲ್ಲದೆ ಸಾರು ಮಾಡಬೇಕಿದೆ. ಪ್ರತಿ ದಿನ ಮನೆ ಎದುರೇ ಟೊಮೆಟೋ ಇತರೆ ತರಕಾರಿ ಖರೀದಿಸುತ್ತಿದ್ದೆ. ಆದರೆ ತರಕಾರಿ ಬರುತ್ತಿಲ್ಲ. ದರ ಏರಿಕೆಯಿಂದ ಟೊಮೆಟೊ ತರುವುದನ್ನೇ ನಿಲ್ಲಿಸಿದ್ದೇನೆ. ಕಡಿಮೆ ದರದ ತರಕಾರಿಗಳನ್ನು ತಂದು ಅಡುಗೆ ಮಾಡಬೇಕಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಮಧ್ಯಮ ಮತ್ತು ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಡೆಯುತ್ತಿದೆ.
-ಅನಿತಾ, ಗ್ರಾಹಕಿ, ಕೆ. ಆರ್. ಪುರಂ
Friday, 27 May 2022
ಶತಕದತ್ತ ಟೊಮ್ಯಾಟೋ ದರ
ಫ್ಲೆಕ್ಸ್ಗೆ ಹಾವಳಿ ತಪ್ಪಿಸಲು ಬರಲಿದೆ ಬೈಲಾ
* ದತ್ತಾತ್ರೇಯ ಹೆಗಡೆ
ಶಿವಮೊಗ್ಗ: ಯಾವುದೇ ರಾಜಕೀಯ ಪಕ್ಷಗಳ ಸಮಾರಂಭ, ಸಮಾವೇಶವಿರಲಿ, ಧರ್ಮಿಕ ಕರ್ಯಕ್ರಮಗಳಿರಲಿ, ಹುಟ್ಟುಹಬ್ಬವಿರಲಿ, ನಾಯಕರ ಆಗಮನವಿರಲಿ ನಗರದೆಲ್ಲೆಡೆ ಫ್ಲೆಕ್ಸ್ಗಳು ಆರ್ಭಟಿಸುತ್ತಿವೆ. ಇದರಿಂದ ಜನರು ಬೇಸತ್ತು ಹೋಗಿದ್ದ್ದಾರೆ. ಇದಕ್ಕೆ ಕಡಿವಾಣವಿಲ್ಲವೇ ಎನ್ನುವ ಸ್ಥಿತಿಗೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಫ್ಲೆಕ್ಗಳ ವಿರುದ್ಧ ಸಮರ ಸಾರಲು ಮುಂದಾಗಿದೆ.
ಫ್ಲೆಕ್ಸ್ ಸಂಬAಧ ಬೈಲಾ ರೂಪಿಸುತ್ತಿದೆ. ಜೊತೆಗೆ ಆಗಾಗ ಫ್ಲೆಕ್ಸ್ ನಿರ್ಮೂಲನ ಆಂದೋಲನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಕಳೆದ ವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿತ್ತು. ನಗರದ ಅಂದವನ್ನು ಕೆಡಿಸುವ, ಬಹುತೇಕ ವೃತ್ತಗಳಲ್ಲಿ ಸಿಕ್ಕ ಕಟ್ಟಡ, ವಿದ್ಯುತ್ ಕಂಬ, ಮರಗಳಿಗೆಲ್ಲ ಫ್ಲೆಕ್ಸ್ ಕಟ್ಟಲಾಗುತ್ತಿದೆ ಎಂದು ಸದಸ್ಯರು ಹೇಳಿ ಇದಕ್ಕೆ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಅಂದು ಆಯುಕ್ತರು ಈ ಬಗ್ಗೆ ಬೈಲಾ ರೂಪಿಸಿದರೆ ಮಾತ್ರ ನಿಯಂತ್ರಣ ಸಾಧ್ಯ. ಆ ಕೆಲಸವನ್ನು ಶೀಘ್ರ ಮಾಡÀಲಾಗುವುದು ಎಂದಿದ್ದರು. ಆ ಪ್ರಕಾರ ಈಗ ಬೈಲಾ ತಯಾರಿ ನಡೆಯುತ್ತಿದೆ.
ಬೈಲಾ ತಯಾರಾದ ನಂತರ ಪತ್ರಿಕೆಗಳ ಮೂಲಕ ಸಾರ್ವಜನಿಕ ಆಕ್ಷೇಪಣೆಗೆ ಬಿಡುಗಡೆ ಮಾಡÀಲಾಗುತ್ತದೆ. ಬೈಲಾ ಇಲ್ಲದೆ ಪಾಲಿಕೆ ಇವುUಳ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಪರವಾನಿಗೆ ಪಡೆದೇ ಹಾಕಬೇಕಾಗುತ್ತದೆ. ಇಲ್ಲದಿದ್ದರೆ ದಂಡ, ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಈಗ ಫ್ಲೆಕ್ಸ್ ಹಾಕುವವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲದ ಸ್ಥಿತಿ ನೆಲೆಸಿದೆ. ಗೋಪಿ ವೃತ್ತ, ಅಮೀರ್ ಅಹಮದ್ ವೃತ್ತ, ಅಶೋಕ ವೃತ್ತ , ಕೋರ್ಟ ವೃತ್ತ, ಶಿವಮೂರ್ತಿ ವೃತ್ತ, ಮಾರುಕಟ್ಟೆಯ ಶಿವಪ್ಪ ನಾಯಕ ವಿಗ್ರಹದ ಬಳಿ ಇವುಗಳ ಹಾವಳಿ ಮಿತಿಮೀರಿದೆ. ಒಬ್ಬರಿಗಿಂತ ಒಬ್ಬರು ಸ್ಪರ್ಧೆ ಎಂಬAತೆ ಫ್ಲೆಕ್ಸ್ ಹಾಕುತ್ತಿದ್ದಾರೆ.
ಈ ಫ್ಲೆಕ್ಸ್ಗಳಿಂದಾಗಿ ವಾಹನ ಸವಾರÀರ ಗಮನ ಬೇರೆಡೆ ಸೆಳೆಯುವಂತಾಗಿದೆ. ಅಪಘಾತ ಎದುರಾಗುವ ಸಾಧ್ಯತೆಯೂ ಇದೆ. ನೆಹರು ರಸ್ತೆ ಮತ್ತು ಬಾಲರಾಜ ರಸ್ತೆಯ ಡಿವೈಡರ್ ಇರುವುದೇ ಫ್ಲೆಕ್ಸ್ ಮತ್ತು ಬ್ಯಾನರ್ ಕಟ್ಟಲು ಎಂಬAತಾಗಿದೆ. ಇವು ಗಾಳಿಗೆ ಕಿತ್ತು ಬೀಳುತ್ತಿವೆ, ಕೆಲವೊಮ್ಮ ವಾಲುತ್ತವೆ. ಇದು ಪ್ರಯಾಣಿಕರಿಗೆ ಅಪಾಯ ತಂದೊಡ್ಡುತ್ತಿದೆ. ಇದರ ಹೊರತಾಗಿ ರಿಯಲ್ ಎಸ್ಟೇಟ್, ಕೋಚಿಂಗ್ ಕ್ಲ್ಲಾಸ್, ಮತ್ತಿತರ ವಾಣಿಜ್ಯ ಉದ್ದೇಶದ ಫೆಕ್ಸ್ಗಳೂ ರಾರಾಜಿಸುತ್ತಿವೆ. ಸಮಾರಂಭ ಅಥವಾ ಕರ್ಯಕ್ರಮ ಮುಗಿದ ನಂತರ ಅವುಗಳನ್ನು ತೆರವುಗೊಳಿಸುವವರು ತೀರ ಕಡಿಮೆ. ಪಾಲಿಕೆಯವರೇ ಅದನ್ನು ತೆಗೆಯುವುದು ಹೆಚ್ಚು. ಪೌರ ಕಾರ್ಮಿಕರಿಗೆ ಇದೇ ಕೆÀಲಸವಾಗುತ್ತಿದೆ.
ಈಗ ಪಾಲಿಕೆಯು ೧೫ ದಿನ ಅಥÀವಾ ತಿಂಗಳಿಗೊಮ್ಮೆ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಸುಮಾರು ೧೦೦ ಪೌರಕಾರ್ಮಿಕರೊಂದಿಗೆ ಫೆಕ್ಸ್ ತೆಗೆಯುವ ಕೆಲಸ ಮಾಡುತ್ತಿದೆ. ಹೋರ್ಡಿಂಗ್ಸಳನ್ನು ಅಳವಡಿಸುವ ಬಗ್ಗೆಯೂ ಬೈಲಾ ತಯಾರಾಗಲಿದೆ.
ಒಟ್ಟಿನಲ್ಲಿ, ಇನ್ನು ಕೆಲವೇ ದಿನದಲ್ಲಿ ನಗರ ಫ್ಲೆಕ್ಸ್ ಮುಕ್ತವಾಗಲಿದೆ. ಇತ್ತೀಚೆಗೆ ಬಂದಿರುವ ಆಯುಕ್ತ ಮಾಯಣ್ಣ ಗೌಡ ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ನಗರ ಸೌಂರ್ಯ ಉಳಿಸಲು ಮುಂದಾಗಿದ್ದಾರೆ.
ಬಾಕ್ಸ್
ಬೈಲಾ ಸಿದ್ದವಾದಲ್ಲಿ ಫೆಕ್ಸ್ಸ್ ಹಾಕಲು ನಿಗದಿತ ಜಾಗವನ್ನು ಗುರುತಿಸಲಾಗುತ್ತದೆ. ಉಳಿದ ಜಾಗ, ವೃತ್ತದಲ್ಲಿ ಹಾಕುವಂತಿಲ್ಲ. ಫ್ಲೆಕ್ಸ್ಸ್ ಹಾಕುವವರು ಪಾಲಿಕೆಗ ಹಣಕಟ್ಟಿ ಪರವಾನಿಗೆ ಪಡೆೆಯಬೇಕಾಗುತ್ತದೆ. ಇದರೊಟ್ಟಿಗೆ ಫುಟ್ಪಾತ್À ಮತ್ತು ಕಟ್ಟಡಗÀಳಿಗೆ ಹಾಕಿದ ದೊಡ್ಡ ದೊಡ್ಡ ಬೋರ್ಡುಗಳು ಪಾದಚಾರಿಗಳಿಗೆ ಮತ್ತು ಸಾರ್ವಜನಿರಿಗೆ ತೊಂದರೆ ಕೊಡುತ್ತಿವೆ. ಇವುಗಳನ್ನೂ ಸಹ ತೆಗೆದುಹಾಕುವ ಬಗ್ಗೆ ಕಾನೂನು ರೂಪಿಸಲಾಗುತ್ತಿದೆ.
- ಮಾಯಣ್ಣ ಗೌÀಡ, ಆಯುಕ್ತ
................................
ಮಳೆ ನಿಂತು ಹೋದ ಮೇಲೆ
ದತ್ತಾತ್ರೇಯ ಹೆಗಡೆ
ಶಿವಮೊಗ್ಗ: ಕಳೆದ ವಾರ ಅಕಾಲಿಕವಾಗಿ ಸುರಿದ ಮಳೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಮಳೆ, ಪ್ರವಾಹ ಮುಗಿದು ೪ ದಿನವಾಗಿದೆ. ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು ಒಬ್ಬರ ನಂತರ ಒಬ್ಬರಂತೆ ಪ್ರವಾಹಪೀಡಿತ ಸ್ಥಳಗಳಿಗೆ ಹೋಗಿ ದುಃಖ ದುಮ್ಮಾನ ಆಲಿಸಿ, ಹಾನಿಗೊಳಗಾದ ಸ್ಥಳ ಪರಿಶೀಲಿಸಿ ಸಾಂತ್ವನ ಹೇಳಿಬಂದಿದ್ದಾರೆ. ಇದು ಪ್ರತಿಬಾರಿ ಪ್ರವಾಹ ಬಂದಾಗಲೂ ನಡೆಯುವ ಮಾಮೂಲಿ ಪದ್ಧತಿ.
ತಮಗೆ ವೋಟು ಕೊಟ್ಟು ಆಯ್ಕೆ ಮಾಡಿ ಕಳುಹಿಸಿದ ಮತದಾರರ ಬವಣೆಯನ್ನು ಇಷ್ಟರ ಮಟ್ಟಿಗಾದರೂ ಕೇಳುತ್ತಿದ್ದರಲ್ಲಾ ಎನ್ನುವುದೇ ದೊಡ್ಡ ಸಮಾಧಾನÀ, ಇನ್ನೊಂದೆಡೆ ಪ್ರವಾಹ ಸ್ಥಳಕ್ಕೆ ನಗರ ಪಾಲಿಕೆ ಸದಸ್ಯರು ಬಂದಿದ್ದಾರೆ. ಸಚಿವರು ನಾಲ್ಕು ದಿನದ ನಂತರ ಬರುತ್ತಿದ್ದಾರೆ. ಯಾವುದೇ ಕೆಲಸ ಮಾಡದೆ ನಿದ್ದೆ ಮಾಡುತ್ತಾ ಕಾಲ ಕಳೆದ ಪಾಲಿಕೆ ಜನಪ್ರತಿನಿಧಿಗಳಿಗೆ ತಮ್ಮ ವಾರ್ಡಿನÀ ನೈಜ ಸಮಸ್ಯೆ ಏನೆನ್ನುವುದು ಈಗ ಮನದಟ್ಟಾಗುತ್ತಿದೆ. ಜನರಿಂದ ಛಿ, ಥೂ ಎಂದು ಬೈಸಿಕೊಂಡಿದ್ದಾರೆ.
ಭರವಸೆ ಕೊಟ್ಟು ಬಂದ ನಂತರ ಅದನ್ನು ಈಡೇರಿಸುವ ಬಹುದೊಡ್ಡ ಹೊಣೆಗಾರಿಕೆ ಇವರ ಮೇಲಿದೆ. ಮನೆ ಬಿದ್ದು ಹೋದವರಿಗೆ ಮನೆ ನರ್ಮಿಸಿಕೊಡುವುದು, ಗೋಡೆಬಿದ್ದ ಮನೆಗೆ ಗೋಡೆ ಹಾಕಿಸಿಕೊಡುವುದು, ಚಾವಣಿ ಕಿತ್ತುಬಿದ್ದ ಮನೆಗೆ ಚಾವಣಿ ಹಾಕಿಸಿಕೊಡುವುದು... ಹೀಗೆ ವಿಧ ವಿಧದ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ತಲೆಕೊಡಬೇಕಿದೆ. ಇಲ್ಲವಾದಲ್ಲಿ ಇವೆಲ್ಲ ವಿಶ್ವಾಸಕ್ಕೆ ಅನರ್ಹರು. ಮತದಾರರ ಸಂಕಷ್ಟಕ್ಕೆ ಭಾಗಿಯಾಗದವರು ಎಂಬ ಅರ್ಥ ಬರುವುದು ನಿಶ್ಚಿತ. ಅವುಗಳಿಗೆಲ್ಲಾ ಸೂಕ್ತ ಪರಿಹಾರ ಕೊಡುವುದು ಅಥವಾ ಕೊಡಿಸುವುದು ಇವರ ಆದ್ಯ ಕೆಲಸವಾಗಬೇಕು. ಪಾಲಿಕೆ ಅಥವಾ ಜಿಲ್ಲಾಡಳಿತ, ಸರಕಾರದ ಮಟ್ಟದಲ್ಲಿ ವ್ಯವಹರಿಸಿ ಈ ಕೆಲಸ ಮಾಡಿಸಿಕೊಡಬೇಕು. ಜನರ ಕಣ್ಣೀರು ಒರೆಸುತ್ತೇವೆ ಎಂದು ಮತಕೇಳಲು ಬರುವಾಗ ಹೇಳುವ ಮಾತನ್ನು ಇಲ್ಲಿ ಸಾಧಿಸಿ ತೋರಿಸಬೇಕಿದೆ.
ಮಳೆ ನಿಂತಿದೆ. ಬಿಸಿಲಿನ ಆಗಮನವಾಗಿದೆ. ಪರಿಹಾರ ಕರ್ಯಕ್ಕೆ ಜನಪ್ರತಿನಿಧಿಗಳು ತತಕ್ಷಣ ಇಳಿಯಬೇಕು. ಬದುಕು, ಸೂರು ಕಳೆದುಕೊಂಡವರಿಗೆ ಆಸರೆಯಾಗಿ ನಿಲ್ಲಬೇಕು. ಕಾಳಜಿ ಕೇಂದ್ರದಿAದ ಹೊರಬಂದಿರುವ ಹಲವರಿಗೆ ಮನೆಯಲ್ಲಿ ಆಹಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ತುಂಗಾ ನದಿಗೆ ಪ್ರವಾಹ ಬಂದಾಗ ದಡದ ಪಕ್ಕದಲ್ಲಿರುವ ರಾಜೀವಗಾಂಧಿ ಬಡಾವಣೆಯ ನಿವಾಸಿಗಳ ಮನೆಗಳೆಲ್ಲ ತೊಳೆದುಹೋಗಿದ್ದವು. ಮನೆ ಬಿದ್ದವರಿಗೆ ೫ ಲಕ್ಷ ರೂ. ಪರಿಹಾರ ಕೊಡುತ್ತೇವೆ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿ ಸ್ವತಃ ಸ್ಥಳ ಪರಿಶೀಲಿಸಿ ಹೋಗಿದ್ದರು. ಇವರಿಗೆ ಕೇವಲ ಒಂದು ಲಕ್ಷ ರೂ. ಮಾತ್ರ ಕೊಟ್ಟು ಇಂದಿನವರೆಗೆ ಉಳಿದ ಹಣವನ್ನು ಕೊಟ್ಟಿಲ್ಲ. ಇದನ್ನು ನೆನೆಪಿನಲ್ಲಿಟ್ಟುಕೊಂಡು ಮತ್ತೆ ವಚನಭ್ರಷ್ಟರಾಗದೆ ಈ ಬಾರಿ ಪ್ರವಾಹ ಸಂತ್ರಸ್ಥರಿಗೆ ನೆರವು ಕಲ್ಪ್ಪಿಸಬೇಕಿದೆ.
ಈಗಾಗಿರುವುದು ಸಣ್ಣ ಪ್ರಮಾಣದ ಹಾನಿ. ಇದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹದ ಅಂದಾಜನ್ನು ಹಾಕುವ ದೂರಾಲೋಚÀನೆ ಮಾಡÀಬೇಕು. ಎಲ್ಲೆಲ್ಲಿ ಪ್ರವಾಹ ಸಂಭವಿಸಬಹುದು, ಅಲ್ಲಿ ಯಾವ ಕ್ರಮದ ಮೂಲಕ ಅದನ್ನು ತಡೆಯಬಹುದು, ಪ್ರವಾಹ ಬರಲು ಕಾರಣವೇನು, ಒಂದು ವೇಳೆ ಬಂದಲ್ಲಿ ಏನು ಮಾಡಬೇಕೆನ್ನುವುದರ ಬಗ್ಗೆ ಯೋಜನೆ ಸಿದ್ಧಪಡಿಸಿಕೊಳ್ಳುವುದು ಪಾಲಿಕೆಯ ಕೆಲಸವಾಗಬೇಕಿದೆ. ವಾರ್ಡನ್ನೇ ಮರೆತು ಕುಳಿತಿರುವವರಿಗೆಲ್ಲ ಪ್ರವಾಹವು ಛಳಿಯನ್ನು ಮುಂದಿನ ದಿನಗಳಲ್ಲಿ ಬಿಡಿಸಲಿದೆ.
ನಗರದಲ್ಲಿ ರಾಜಾಕಾಲುವೆಯ ಹೂಳೆತ್ತುವಿಕೆ ಸಮರ್ಪಕವಾಗಿ ನಡೆದಿಲ್ಲ, ಹೂಳಿನಿಂದ ಕಾಲುವೆ ತುಂಬಿದೆ. ಇದರಿಂದ ಬಹುಬೇಗ ಪ್ರವಾಹ ಬರುತ್ತಿದೆ. ಹಲವು ಬಡಾವಣೆಗಳಲ್ಲಿ ಅದನ್ನು ಒತ್ತುವರಿ ಮಾಢಿ ಚಿಕ್ಕದಾಗಿಸಿದ್ದರಿಂದ ಪ್ರವಾಹ ಬರುತ್ತಿದೆ. ಇದನ್ನು ತೆರವುಗೊಳಿಸುವ ಕೆಲಸವಾಗಬೇಕು, ಚಾನೆಲ್ ದಂಡೆ ಎಲ್ಲೆಲ್ಲಿ ಶಿಥಿಲವಾಗಿದೆ ಎನ್ನುವುದರ ಪರಿಶೀಲನೆ ನಡೆೆಸಬೇಕು. ಜನವಸತಿ ಪ್ರದೇಶದಲ್ಲಿ ಹಾದುಹೋಗಿರುವ ಚಾನೆಲ್ನಿಂದ ತೊಂದರೆ ಸಂಭವಿಸಬಹುದೇ ಎನ್ನುವುದರ ಪರಿಶೀಲನೆಯನ್ನು ಮೊದಲು ಮಾಡಬೇಕಿದೆ.
ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಮತ್ತು ಗಂಡಾAತರಕಾರಿ ಕೆಲಸಗಳಿಂದ ಎಲ್ಲೆಲ್ಲಿ ಹಾನಿಯಾಗಿದೆ, ಕೆರೆ ಸೃಷ್ಟಿಯಾಗಿತ್ತು ಎನ್ನುವುದನ್ನು ಪರಿಶೀಲಿಸಿ ಅದರ ದುರಸ್ತಿ ಕೆÀಲಸ ಆರಂಭಿಸಬೇಕಿದೆ. ಮುಂದಿನ ೮-೧೦ ದಿನದಲ್ಲಿ ಮೊನ್ನೆ ಸಂಭವಿಸಿದ ಪ್ರವಾಹಕ್ಕೆ ಉತ್ತರ ಕಂಡುಕೊಳ್ಳದಿದ್ದಲ್ಲಿ ಈ ತಿಂಗಳಾAತ್ಯದಲ್ಲಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿರುವ ಮುಂಗಾರು ಮಳೆÀಯಿಂದ ಇನ್ನಷ್ಟು ಅನಾಹುತ ಸಂಭವಿಸಬಹುದು.
ಬೆAಬಲಿಗರೊAದಿಗೆ ಹೋಗಿ ಸ್ಥಳ ಪರಿಶೀಲನೆ ಮಾಡಿದರೆÉ ಸಾಲದು, ನಂತರ ಅದೇ ಬೆಂಬಲಿಗರನ್ನು ಮುಂದಿಟ್ಟುಕೊAಡು ಪರಿಹಾರ ಕಲ್ಪಿ¸ಬೇಕು.. ಸಮಸ್ಯೆಗೆ ಉತ್ತರ ಕಂಡುಹಿಡಿಯುವ ಕೆಲಸವಾಗಲಿ. ಇನ್ನಾದರೂ ಪಾಲಿಕೆ ಮತ್ತು ಅದರ ಜನಪ್ರತಿನಿಧಿಗಳು, ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಪ್ರವಾಹದ ಭೀತಿ ತಪ್ಪಿಸಬೇಕಿದೆ.