Monday, 30 January 2017

ಎಸ್‌ಪಿ- ಕಾಂಗ್ರೆಸ್ ಮೈತ್ರಿ:  ಯಾರಿಗೆ ಲಾಭ, ಯಾರಿಗೆ ನಷ್ಟ?

* ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ-2017 

ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಯಿಂದ ಬಿಜೆಪಿ ಮತ್ತು ಬಹುಜನ ಸಮಾಜವಾದಿ ಪಕ್ಷಕ್ಕೆ ನಷ್ಟವಾಗುತ್ತದೆಯೇ ಅಥವಾ ಸಮಾಜವಾದಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆಯೇ ಎನ್ನುವ ಪ್ರಶ್ನೆ ಈಗ ಚರ್ಚಿತವಾಗುತ್ತಿದೆ. ಎಸ್‌ಪಿಯು ಪಕ್ಷದೊಳಗಿನ ಇತ್ತೀಚಿನ ಒಡಕನ್ನು ಮುಚ್ಚಿಕೊಂಡ ನಂತರ ಕಾಂಗ್ರೆಸ್ ಜೊತೆ ಮೈತ್ರಿ  ಮಾಡಿಕೊಂಡಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿ ನಾಲ್ಕಾರು ಪಕ್ಷಗಳು ಸೇರಿ ಮೈತ್ರಿ ಮಾಡಿಕೊಂಡು ಜಯಗಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಮೈತ್ರಿಯನ್ನು  ಮಹಾಘಟಬಂಧನ್ ಎಂದು ಕರೆಯಲಾಗಿತ್ತು.
ಈಗ ಉ. ಪ್ರ. ದಲ್ಲಿ ಈ ಘಟಬಂಧನ್‌ದಿಂದ ಆಗುವ ಲಾಭ- ನಷ್ಟಗಳ ಬಗ್ಗೆ ಚಿಂತನೆ ನಡೆಯುತ್ತಿದೆ. ಆಳ್ವಿಕೆಯಲ್ಲಿರುವ ಎಸ್‌ಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ನಡೆಸಿರುವ ಪ್ರಯತ್ನವಿದು. ಕಾಂಗ್ರೆಸ್ ಮತ್ತು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ಜೊತೆ ಮೈತ್ರಿ ನಡೆದಿದೆ.ಬಿಜೆಪಿಯ ಪ್ರಾಬಲ್ಯವನ್ನು ಕಡಿಮೆಮಾಡುವುದು ಇದರ ಮೂಲ ಉದ್ದೇಶ ಎಂದು ಬೇರೆ ಹೇಳಬೇಕಾಗಿಲ್ಲ. ಬಿಜೆಪಿ ಉಪ್ರದಲ್ಲಿ ವಿಧಾನಸಭೆಯ ಆಧಿಕಾರಕ್ಕೇರುವ ಅವಕಾಶವನ್ನು ಕಳೆದುಕೊಂಡರೆ ಮುಂದೆ ಬರಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಇದರ ಪರಿಣಾಮವಾಗಲಿದೆ ಎಂದು ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೈತ್ರಿಯಿಂದ ಗೆಲುವಿನ ಸಾಧ್ಯತೆಯನ್ನು ಎಸ್ಪಿ ಹೆಚ್ಚಿಸಿಕೊಂಡಿದೆ. ಮುಸ್ಲಿಂ ಮತವನ್ನು ಇನ್ನಷ್ಟು ಹೆಚ್ಚು ಪಡೆಯಲು ಸಾಧ್ಯವಿದೆ. ಜೊತೆಗೆ ಬ್ರಾಹ್ಮಣ ಸಮುದಾಯದ ಒಂದಷ್ಟು ಮತವು ಅದರ ಪಾಲಿಗೆ ಬರಲಿದೆ.  ಕಾಂಗ್ರೆಸ್‌ಗೆ ಮೈತ್ರಿಯಿಂದ ಹೆಚ್ಚಿನ ಲಾಭವಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಧನೆ ಮಾಡಿದಂತೆ ಇಲ್ಲಿಯೂ ಎಸ್ಪಿ ನೆರವಿನಿಂದ ಇನ್ನಷ್ಟು ತಲೆ ಎತ್ತಲು ಅವಕಾಶವಾಗಲಿದೆ.  ಆದರೆ ಮಾಯಾವತಿ ಮಾತ್ರ ಇಲ್ಲಿಯವರಗೆ ಮೈತ್ರಿಯಿಂದ ತನಗೆ ಲಾಭ ಅಥವಾ ಹಾನಿ ಆಗುವುದರ ಬಗ್ಗೆ ಚಕಾರ ಎತ್ತಿಲ್ಲ. ಕಾಂಗ್ರೆಸ್ ಸುಮಾರು 6 ತಿಂಗಳ ಹಿಂದೆಯೇ ರಾಜಕೀಯ ತಂತ್ರಜ್ಞ ಪ್ರಶಾಂತ್ ಭೂಷಣ್ ಅವರಿಂದ ಚುನಾವಣೆ ಎದುರಿಸುವ ಬಗ್ಗೆ ಸಾಕಷ್ಟು ತಂತ್ರಗಾರಿಕೆಯನ್ನು ಪಡೆದುಕೊಂಡಿತ್ತು. ಸ್ವತಂತ್ರವಾಗಿ ಗೆದ್ದುಬರುವುದು ಸಾಧ್ಯವಿಲ್ಲದ ಮಾತು ಎನ್ನುವುದು ಕಾಂಗ್ರೆಸ್‌ಗೂ ಗೊತ್ತಿತ್ತು. ಅದೇ ಕಾರಣದಿಂದ ಈಗ ಎಸ್‌ಪಿ ಜೊತೆ ಸೈಕಲ್ ಸವಾರಿ ಆರಂಭಿಸಿದೆ.
  ಮೈತ್ರಿ ಆಶ್ಚರ್ಯಕರ ಫಲಿತಾಂಶವನ್ನು ಉಂಟು ಮಾಡಬಲ್ಲದೇ?  :
ಮೊದಲನೆಯದಾಗಿ, ಚುನಾವಣೆ ಸಮೀಕ್ಷೆ ನಡೆಸಿದ ಎಬಿಪಿ- ನೈಲ್ಸೆನ್, ಎಬಿಪಿ-ಸಿಎಸ್ಡಿಎಸ್  ಯುಪಿಯಲ್ಲಿ ಅತಂತ್ರ ವಿಧಾನಸಭೆ ಬರಲಿದೆ ಎಂದಿವೆ. ಬಿಎಸ್‌ಪಿ ಅಥವಾ ಎಸ್‌ಪಿ ಅಧಿಕಾರದ ಹತ್ತಿರಕ್ಕೆ ಬರಬಹುದು ಎನ್ನುವ ಮಾತನ್ನು ಹೇಳಿವೆ.  ಕಾಂಗ್ರೆಸ್ ಶೇ 8ರಿಂದ 10ರಷ್ಟು ಮತ ಗಳಿಸಬಹುದೆಂಬ ಲೆಕ್ಕಾಚಾರವಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ನಡೆದಿದೆ. 2007 ಮತ್ತು 2012ರಲ್ಲಿ  ಎಸ್‌ಪಿ ಶೇ. 30ರಷ್ಟು ಮತಗಳಿಸಿತ್ತು. 2017ರಲ್ಲಿ  ಪೈಪೋಟಿ ಹೆಚ್ಚಿದೆ.  ಈ ಬಾರಿ ಶೇ. 30ರಷ್ಟು ಮತಗಳಿಸುವವರಿಗೆ ಗೆಲುವು ಗ್ಯಾರಂಟಿ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಡೆಯುವ ಮತಗಳು ಅಧಿಕಾರಕ್ಕೇರುವವರಿಗೆ ಬಹಳ ಉಪಯೋಗಕ್ಕೆ ಬರಲಿವೆ. ಕಾಂಗ್ರೆಸ್ ಜೊತೆ ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು ಇದೇ ಉದ್ದೇಶಕ್ಕೆ.
  ಉಪ್ರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಪಿಯ ಶೇ. 54ರಷ್ಟು ಮತದಾರರು ಯಾದವರು, ಮುಸ್ಲಿಮರು ಮತ್ತು ಹಿಂದುಲಿದ ವರ್ಗದವರು. ಮೈತ್ರಿ ಮಾಡಿಕೊಂಡರೆ ಒಂದೋ ಎಸ್‌ಪಿಗೆ ಅಥವಾ ಕಾಂಗ್ರೆಸ್‌ಗೆ ಈ ಮತ ಸೇರುತ್ತದೆ. ಬ್ರಾಹ್ಮಣರ ಮತ ಶೇ. 5ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಎಸ್‌ಪಿ- ಕಾಂಗ್ರೆಸ್‌ಗೆ ಬರಲಿದೆ. ಯಾದವರ ಮತ ಹೆಚ್ಚುಕಡಿಮೆ ಮುಲಾಯಂಗೆ ಸೇರುವುದು ನಿಶ್ಚಿತ. ಕಾಂಗ್ರೆಸ್ ತನ್ನದೇ ಆದ ಕೆಲವು ಸಾಂಪ್ರದಾಯಿಕ ಮತಬ್ಯಾಂಕ್ ಇದೆ. ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬ್ರಾಹ್ಮಣರು, ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರು ಮತ್ತು ದಲಿತರಿದ್ದಾರೆ. ಬಿಎಸ್‌ಪಿಯು ದಲಿತ ಮತಗಳ ಬ್ಯಾಂಕ್ ಆಗಿರುವುದರಿಂದ ಕಾಂಗ್ರೆಸ್ ಪರ ದಲಿತ ಮತ ಕಡಿಮೆಯಾಗುತ್ತಿದೆ. ಆದರೆ ಮುಸ್ಲಿಂ ಪ್ರಮಾಣ ಇಳಿಕೆಯಾಗಿಲ್ಲ. ಅಧಿಕಾರಕ್ಕೆ ಬರುವ ಸಂಭವನೀಯತೆಯನ್ನು ಗಮನಿಸಿ ದಲಿತ ಮತ ಚಲಾವಣೆ ಹೆಚ್ಚುಕಡಿಮೆಯಾಗಲಿದೆ.
ಶೀಲಾ ದೀಕ್ಷಿತ್ ಅವರನ್ನು ಉಪ್ರ ಸಿಎಂ ಎಂದು ಘೋಷಿಸಲು ಕಾಂಗ್ರೆಸ್ ಮುಂದಾಗಿದ್ದು ಬ್ರಾಹ್ಮಣ ಮತ ಪಡೆಯುವ ಉದ್ದೇಶದಿಂದ. ಆದರೆ ಮೈತ್ರಿ ನಂತರ ಶೀಲಾ ಅಖಿಲೇಶ್ ನಂತರದ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಸಿದ್ದರಾಗಲಿಲ್ಲ. ಇದರಿಂದ ಬ್ರಾಹ್ಮಣ ಮತಗಳು ಎಸ್‌ಪಿಗೆ ಮುಳುವಾಗಬಹುದು ಎಂದು ಸಹ ಲೆಕ್ಕಾಚಾರ ಹಾಕಲಾಗುತ್ತಿದೆ. ಆದರೆ ಕಾಂಗ್ರೆಸ್‌ಗೆ ಇವು ಲಭಿಸಲಿವೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಬ್ರಾಹ್ಮಣ ಮತಗಳು ಕಾಂಗ್ರೆಸ್ ಪರವಾದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್‌ನ ಬ್ರಾಹ್ಮಣ ಮುಖಂಡರಾದ ಜಿತಿನ್ ಪ್ರಸಾದ್, ಪ್ರಮೋದ್ ತಿವಾರಿ ಅಥವಾ ಶೀಲಾ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರನ್ನು ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಎರಡನೆಯದಾಗಿ, ಉಪ್ರದ ಜನಸಂಖ್ಯೆಯಲ್ಲಿ ಶೇ. 20ರಷ್ಟು ಮುಸ್ಲಿಮರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರೇ ಕಿಂಗ್‌ಮೇಕರ್ ಆಗುವ ಸಾಧ್ಯತೆ ಇದೆ. ಒಟ್ಟೂ 403 ಸ್ಥಾನಗಳ ಪೈಕಿ 143 ಸ್ಥಾನಗಳು ಮುಸ್ಲೀಂ ಮತಬಾಹುಳ್ಯದ ಕ್ಷೇತ್ರಗಳು. ಹಿಂದಿನ ಚುನಾವಣೆಗಳನ್ನು ಗಮನಿಸಿದಾಗ ಇಲ್ಲಿನ ಮತಗಳು ಬಿಜೆಪಿ ವಿರೋಧಿಯಾಗಿ ಚಲಾವಣೆಯಾಗಿವೆ. ಬಿಎಸ್‌ಪಿಗೆ ಸಾಕಷ್ಟು ಸಂದರ್ದಲ್ಲಿ ಇವರು ನೆರವಾಗಿದ್ದಾರೆ. ಆದರೆ ಈ ಬಾರಿ ಬಿಎಸ್‌ಪಿ ಈ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂದಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಸಿಎಸ್‌ಡಿಎಸ್ ನಡೆಸಿದ ಸಮೀಕ್ಷೆ ಪ್ರಕಾರ, ಈ ಬಾರಿ ಶೇ. 68ರಷ್ಟು ಮುಸ್ಲೀಂ ಮತದಾರರು ಸಮಾಜವಾದಿ ಬೆಂಬಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್‌ಗೂ ಅದರದ್ದೇ ಆದ ಮುಸ್ಲಿಂ ಮತಬ್ಯಾಂಕ್ ಇದೆ. ಇದು ಸಾಧ್ಯವಾದರೆ ಸುಮಾರು ಅರ್ಧದಷ್ಟು ವಿಧಾನಸಭೆಯ ಸ್ಥಾನಗಳನ್ನು ಮೈತ್ರಿ ಪಕ್ಷಗಳು ಗೆಲ್ಲಲು ಸಾಧ್ಯವಿದೆ.
ಮೂರನೆಯದಾಗಿ, ಏಕರೂಪ ನಾಗರಿಕ ನೀತಿ ಸಂಹಿತೆ ಮತ್ತು ತ್ರಿವಳಿ ತಲಾಖ್  ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಕೇಂದ್ರ ಸರಕಾರವು ಇದನ್ನು ಜಾರಿತರಲು ಮುಂದಾಗಿರುವುದರ ವಿರುದ್ದ ಅತಿ ಹೆಚು ಪ್ರತಿಭಟನೆ ಈ ವಿಚಾರವಾಗಿ ನಡೆದಿದ್ದು ಉತ್ತರ ಪ್ರದೇಶದಲ್ಲಿ. ಇದರ ಲಾಭವನ್ನೂ ಮೈತ್ರಿ ಪಕ್ಷಗಳು ಪಡೆಯುವುದರಲ್ಲಿ ಸಂದೇಹವಿಲ್ಲ.  
ನಾಲ್ಕನೆಯದಾಗಿ, ಸುಮಾರು 50-60 ಸ್ಥಾನದಲ್ಲಿ ಈ ಮೈತ್ರಿಯಿಂದ ಎಸ್ಪಿ- ಕಾಂಗ್ರೆಸ್‌ಗೆ ಲಾಭವಿದೆ. ಏಕೆಂದರೆ, ಈ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೆ ಬಿಎಸ್ಪಿ ಅಥವಾ ಬಿಜೆಪಿಗೆ ಅನುಕೂಲವಾಗುತ್ತಿತ್ತು. ಈ ಸ್ಥಾನಗಳಲ್ಲಿ ಸುಮಾರು 25 ಕಾಂಗ್ರೆಸ್‌ಗೆ, ಇನ್ನುಳಿದ 25-30 ಸ್ಥಾನ ಎಸ್‌ಪಿ ಪಾಲಾಗಬಹುದು.
ಐದನೆಯದಾಗಿ, ಕಾಂಗ್ರೆಸ್- ಎಸ್‌ಪಿ ಮೈತ್ರಿಯಿಂದಾಗಿ ಇತರೆ ಸಣ್ಣ ಪಕ್ಷಗಳಾದ ಜೆಡಿಯು, ಪೀಸ್ ಪಾರ್ಟಿ, ಆರ್‌ಎಲ್‌ಡಿ ಸಹ ಮೈತ್ರಿಗೆ ಸೇರಿಕೊಂಡಿವೆ. ಇವು ಕನಿಷ್ಠ 20-25 ಸ್ಥಾನ ಗಳಿಸುವುದರಲ್ಲಿ ಸಂಶಯವಿಲ್ಲ. ಇವೆಲ್ಲವುಗಳ ಬೆಂಬಲದಿಂದ ಮೈತ್ರಿಗೆ ಲಾಭವಿದೆ ಎಂದು ಅಂದಾಜಿಸಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದರೆ ದಲಿತ ಮತ್ತು ಬ್ರಾಹ್ಮಣ ಮತಗಳು ಸೇರ್ಪಡೆಯಾಗುತ್ತಿರಲಿಲ್ಲ. ಇದರ ಲಾಭ ಮೂರನೆಯ ಪಕ್ಷಕ್ಕಾಗುತ್ತಿತ್ತು. ಇದನ್ನರಿತೇ ಮುಲಾಯಂ- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ.
...................................................... 
  ಕೃಷ್ಣ ರಾಜಿನಾಮೆಗೆ ಅಸಮಾಧಾನ ಕಾರಣವೆ? 



 ಕೃಷ್ಣ ಅವರಿಗೆ ವಯಸ್ಸು ಮತ್ತು ಕೈಕೊಟ್ಟ ಆರೋಗ್ಯ ರಾಜಕೀಯದಲ್ಲಿ ಇರಲು ಬಿಡಲಿಲ್ಲ. ಆ ಕಾರಣದಿಂದ ಅಧಿಕಾರದಿಂದ ದೂರವುಳಿಯುವಂತಾಯಿತು. ಸಚಿವರಾಗಿ, ವಿಧಾನಸಭೆಯ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಸಭೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇದನ್ನು ಗಮನಿಸಿ ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಹೇಳಿಕೆಯನ್ನು ವಿಶ್ಲೇಷಿಸಿದರೆ, ಅಧಿಕಾರದ ದಾಹ, ಮತ್ತೆ ರಾಜ್ಯಸಭೆ ಸದಸ್ಯರಾಗಬೇಕೆಂಬ ಹಂಬಲ ಇತ್ತೆನ್ನುವುದು ಗೊತ್ತಾಗುತ್ತಿದೆ. ಉತ್ತಮ ಕೆಲಸ ಮಾಡುತ್ತಿದ್ದ ವೇಳೆ ಕೈ ಬಿಟ್ಟಿದ್ದರೆ ಅವರ ಮಾತನ್ನು ಒಪ್ಪಬಹುದಿತ್ತು. ಆದರೆ ಈಗ ಆಡುತ್ತಿರುವ ಅವರ ಮಾತು ಭ್ರಮನಿರಸನದ ಪ್ರತೀಕ ಎಂದು ಹೇಳಬಹುದಾಗಿದೆ. ಪಕ್ಷ ಬಿಡುವಾಗ ಏನಾದರೊಂದು ಕಾರಣ ಹೇಳಬೇಕಾಗುತ್ತದೆ. ಅದಕ್ಕೆ ಕೃಷ್ಣ  ಜನಸಮುದಾಯದ ನಾಯಕರಿಲ್ಲ ಎಂಬ ಮಾತನ್ನಾಡಿದ್ದಾಗಿ ವಿಶ್ಲೇಷಿಸಲಾಗುತ್ತಿದೆ. 



ಕಾಂಗ್ರೆಸ್‌ಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರಾಜಿನಾಮೆ ನೀಡಿದ್ದಾರೆ. ತಮ್ಮ ರಾಜಿನಾಮೆಗೆ ಸ್ಪಷ್ಟ ಕಾರಣವನ್ನು ಅವರು ಹೇಳಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಅವರಿಗೆ ಅಸಮಾಧಾನ ಇತ್ತೆನ್ನುವದು ಗೊತ್ತಾಗುತ್ತಿದೆ. ಆದರೆ ಕಾಂಗ್ರೆಸ್‌ನಿಂದ ಎಲ್ಲಾ ರೀತಿಯ ಅಧಿಕಾರವನ್ನು ಅನುಭವಿಸಿದವರೊಬ್ಬರು ಆಡುವ ಮಾತನ್ನು ಹೇಳದೆ, ಜನಸಮುದಾಯದ ನಾಯಕರು ಯಾವ ಪಕ್ಷದಲ್ಲೂ ಇಲ್ಲ. ಕೇವಲ ಪರಿಸ್ಥಿತಿ ನಿಭಾಯಿಸುವ ಮ್ಯಾನೇಜರ್‌ಗಳಿದ್ದಾರೆ ಎನ್ನುವ ಮೂಲಕ ಇದನ್ನು ಹೊರಹಾಕಿದ್ದಾರೆ.
ಕೃಷ್ಣ ಅವರಿಗೆ ಸಕ್ರಿಯ ರಾಜಕಾರಣದಲ್ಲಿ ಇರಲು ಅವರ ವಯಸ್ಸು 84 ಸಹಕರಿಸಲಿಲ್ಲ. ಇದರೊಟ್ಟಿಗೆ ರಾಜಕೀಯಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆನ್ನುವ ಮಾತು ಇತ್ತೀಚಿನ ವರ್ಷಗಳಲ್ಲಿ ಎಲ್ಲ ಪಕ್ಷಗಳಲ್ಲೂ ಕೇಳಿಬರುತ್ತಿದೆ. ಕಾಂಗ್ರೆಸ್‌ನಲ್ಲಂತೂ ರಾಹುಲ್ ಗಾಂಧಿ ಯುವಕರಿಗೆ ಸಾಕಷ್ಟು ಮಣೆ ಹಾಕುತ್ತಿದ್ದಾರೆ. ಇದಕ್ಕೆ ಸರಿಯಾಗಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಕ್ರಿಯರಾಗಿದದಾರೆ. ಇವೆಲ್ಲವೂ ಹಲವು ಹಳಬರು ನಿವೃತ್ತಿಯಾಗುವಂತೆ ಮಾಡುತ್ತಿವೆ.
ಕರ್ನಾಟಕದಲ್ಲಿ ಕೃಷ್ಣ ಒಕ್ಕಲಿಗ ಸಮುದಾಯದ ನಾಯಕ ಎನ್ನುವುದಕ್ಕಿಂತಲೂ ಉತ್ತಮ ಆಡಳಿತಗಾರರಾಗಿ, ಸಕಾರಾತ್ಮಕ ರಾಜಕೀಯ ನಿಲುವಿನಿಂದ ರಾಜಕೀಯದ ಘನತೆಯನ್ನು ಎತ್ತಿಹಿಡಿದವರು. ಕ್ರಿಯಾಶೀಲ ಮತ್ತು ಎಲ್ಲೂ ಹೆಸರುಕೆಡಿಸಿಕೊಳ್ಳದ ವ್ಯಕ್ತಿಯಾಗಿದ್ದರು. ಮುಖ್ಯಮಂತ್ರಿಯಾದ ಹುದ್ದೆಯ ನಂತರ ಅಧಿಕಾರದ ವಿವಿಧ ಮಜಲುಗಳನ್ನು ಏರುತ್ತಾ ಹೋದವರು. ಇಳಿವಯಸ್ಸು ರಾಜಕೀಯ ನಿವೃತ್ತಿಗೆ ಕಾರಣವಾಗುವಂತೆ ಮಾಡಿದ್ದು ಸುಳ್ಳೇನಲ್ಲ. ಈ ಸಂದರ್ದಲ್ಲಿ ಹಿರಿಯ ನಾಯಕನಾಗಿ ಕೊಟ್ಟಂತಹ ಜವಾಬ್ದಾರಿಯನ್ನು ನಿಭಾಯಿಸುತ್ತ ಸಲಹೆ-ಸೂಚನೆ ಕೊಡುತ್ತಾ ಗಳಿಸಿದ ಹೆಸರನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಿದ್ದರು.
ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಹಿಂದುಳಿದ ವರ್ಗದ ಇನ್ನೊಬ್ಬ ನಾಯಕ ಮುಖ್ಯಮಂತ್ರಿಯಾಗಿರುವುದು ಅವರಿಂದ ಸಹಿಸಿಕೊಳ್ಳಲಾಗಲಿಲ್ಲ.ಇನ್ನೊಂದೆಡೆ ತನಗೂ ಅಧಿಕಾರವಿರಲಿಲ್ಲ. ರಾಜ್ಯಸಭೆ ಸದಸ್ಯ ಮಾತ್ರವಾಗಿದ್ದರು. ಸಿದ್ದು ಜನಪ್ರಿಯವಾಗುವುದನ್ನು ಸಹಿಸದೆ ಹೈಕಮಾಂಡ್ ಅಂಗಳಕ್ಕೆ ಹಲವು ಬಾರಿ ಗುಟ್ಟಾಗಿ ದೂರು ಒಯ್ದಿದ್ದನ್ನು ಯಾರೂ ಮರೆತಿಲ್ಲ.
ಇಂತಹ ಸನ್ನಡತೆಯ, ಸದ್ವಿಚಾರದ ರಾಜಕಾರಣಿಗೆ ಅಧಿಕಾರದ ಆಸೆ ಏಕೆ ಬೆನ್ನುಹತ್ತಿತು ಎನ್ನುವುದು ಅರ್ಥವಾಗದ ವಿಚಾರ. ರಾಜಕೀಯದಲ್ಲಿ ನಿವೃತ್ತಿ ವಯಸ್ಸು ಎನ್ನುವುದು ಇಲ್ಲದಿರುವುದು ಇಂತಹ ಅವಘಡಕ್ಕೆ ಕಾರಣವಾಗುತ್ತಿದೆ. ಪ್ರಸ್ತುತ ಸಂದರ್ಭವನ್ನು ಗಮನಿಸಿದಾಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷವಿದೆ. ಈಗ ಪಕ್ಷಕ್ಕೆ ರಾಜಿನಾಮೆ ನೀಡಿ ಹಾನಿ ಮಾಡುವುದರ ಹಿಂದೆ ಏನೋ ಉದ್ದೇಶವಿದೆ ಎಂದೇ ಭಾವಿಸಬೇಕಾಗುತ್ತದೆ. ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯಕ್ಕೆ ಹೇಳಿಕೊಳ್ಳುವಂತಹ ನಾಯಕರಿಲ್ಲ. (ಡಿ. ಕೆ. ಶಿವಕುಮಾರ್ ಹೊರತುಪಡಿಸಿ)  ಇದ್ದಕ್ಕಿದ್ದಂತೆ ರಾಜಕೀಯದ ಮೇಲೆ ವೈರಾಗ್ಯ ಬಂದವರಂತೆ ಕಾಂಗ್ರೆಸ್‌ಗೆ ರಾಜಿನಾಮೆ ಕೊಟ್ಟು ಸುಮ್ಮನಿರಬಹುದಿತ್ತು. ಅದನ್ನು ಬಿಟ್ಟು ಸಕ್ರಿಯವಾಗಿರುತ್ತೇನೆ ಎಂದಿದ್ದಾರೆ ಕೃಷ್ಣ. ಕಾಂಗ್ರೆಸ್‌ನಲ್ಲಿ ಅವರು ಸಕ್ರಿಯರಾಗಲು ಸಾಧ್ಯವಿಲ್ಲ, ಇನ್ನೊಂದು ಪಕ್ಷ ಸೇರುತ್ತೇನೆ ಎಂಬ ಸಂದೇಶವಿರಬಹುದೇ? ಆದರೆ ಯಾವ ಪಕ್ಷದವರೂ ಇಳಿವಯಸ್ಸಿನಲ್ಲಿ ಇವರಿಂದ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ.
ಕೃಷ್ಣ ಅಸಮಾಧಾನಕ್ಕೆ ಹಲವು ಕಾರಣಗಳು:
ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಕೃಷ್ಣ ಅವರಿಗೆ ಪಕ್ಷ ಟಿಕೆಟ್ ಕೊಟ್ಟು ಮುಂದುವರೆಸಲಿಲ್ಲ. ಅವರ ಬದಲಿಗೆ ಪ್ರೊ. ರಾಜೀವ್ ಗೌಡ ಅವರನ್ನು ಗೆಲ್ಲಿಸಲಾಯಿತು.  ರಾಜ್ಯ ಕಾಂಗ್ರೆಸ್‌ನಲ್ಲಿ ಅವರು ಹಿರಿಯ ನಾಯಕರಾಗಿದ್ದರು. ಆದರೆ ಯಾವುದೇ ಹುದ್ದೆ ಇರಲಿಲ್ಲ. ವಿದೇಶಾಂಗ ಸಚಿವರಾದಾಗ ಹಠಾತ್ ಆ ಸ್ಥಾನದಿಂದ ಇಳಿಸಲಾಯಿತೆಂಬ ಬೇಸರ ಅವರಲ್ಲಿದೆ. ಕಾರ್ಯ ಕಾರಿಣಿ ಸದಸ್ಯರಾದರೂ ತನಗೆ ಮನ್ನಣೆ ಇಲ್ಲ, ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಮನೆ ಮಾಡಿತ್ತು. ಆದರೆ ಇದನ್ನು ಎಲ್ಲೂ ಬಹಿರಂಗಗೊಳಿಸಿರಲಿಲ್ಲ ಅಥವಾ ಬಂಡಾಯ ಮನೋಭಾವ ತಾಳಲಿಲ್ಲ. ಈಗ ಪ್ರಬಲವಾಗಿ ಕೇಳಿಬರುತ್ತಿರುವ ಅಂಶವೆಂದರೆ, ಉಪರಾಷ್ಟ್ರಪತಿ ಹುದ್ದೆಗೆ ಕೃಷ್ಣ ಅವರನ್ನು ನೇಮಿಸುವ ಚಿಂತನೆ ನಡೆದಿದೆ ಎನ್ನುವುದು. ಆದರೆ ಇದನ್ನು ಒಪ್ಪುವುದು ತುಸು ಕಷ್ಟ ಎನ್ನಬಹುದು. ಏಕೆಂದರೆ ಸಜ್ಜನ ಮತ್ತು ಸಚ್ಚಾರಿತ್ರ್ಯದ ರಾಜಕಾರಣ ಮಾಡಿ ಹೆಸರುಗಳಿಸಿರುವ ಕೃಷ್ಣ, ಈ ವಯಸ್ಸಿನಲ್ಲಿ ಅಧಿಕಾರದ ಆಸೆಗೆ ಪಕ್ಷ ತ್ಯಜಿಸುವರೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ. ಅವರ ಇಲ್ಲಿಯವರೆಗಿನ ನಡೆ-ನುಡಿ  ಇದನ್ನು ಒಪ್ಪುವಂತೆ ಮಾಡುತ್ತಿಲ್ಲ.
ತಮ್ಮ ಸುದೀರ್ಘ ರಾಜಕೀಯ ಅನುಭವದಿಂದ ಬೌದ್ಧಿಕ ಸಂಪನ್ಮೂಲದ ವ್ಯಕ್ತಿಯಾಗಿ ಅವರು ದೇಶದಲ್ಲಿ ಮಿಂಚಬಹುದಿತ್ತು. ಆದರೆ ಇಳಿವಯಸ್ಸಿನಲ್ಲೂ ಅಧಿಕಾಎ ಸಿಕ್ಕಿದ್ದರಿಂದಲೋ ಏನೋ ಕೃಷ್ಣ ಅದಕ್ಕೆ ಮುಂದಾಗಲಿಲ್ಲ. ಹೋಗಲಿ, ತಮಗೆ ಏನೂ ಅಧಿಕಾರ ಸಿಗಲಿಲ್ಲ ಎಂದರೆ ಸುಮ್ಮನಿರಬಹುದಿತ್ತು. ಸಿದ್ದರಾಮಯ್ಯ ಸಿಎಂ ಆದ ನಂತರ ಸುಮ್ಮನಿದ್ದವರು ಅಧಿಕಾರಾವಧಿ ಮುಗಿಯುತ್ತಾ ಬಂದಹಾಗೆ ರಾಜಿನಾಮೆ ನೀಡುತ್ತಿರುವ ರಹಸ್ಯ ಏನೆನ್ನುವುದು ಗೊತ್ತಾಗುತ್ತಿಲ್ಲ.
ಕಾಂಗೆಸ್‌ಗೆ ಸಹಜವಾಗಿಯೇ ಕೃಷ್ಣ ರಾಜಿನಾಮೆ ಸುದ್ದಿ ಶಾಕ್ ನೀಡಿದೆ. ಏಕೆಂದರೆ ಇಂತಹ ಹಿರಿಯ ನಾಯಕ ಪಕ್ಷಕ್ಕೆ ಮಾರ್ಗದರ್ಶನ ಮಾಡುತ್ತ ಇರುತ್ತಾರೆ ಎಂದು ಎಲ್ಲರೂ ತಿಳಿದಿದ್ದರು.  ಆದರೆ ರಾಜಿನಾಮೆ ಪರಿಣಾಮ ಆಗಲಿದೆಯೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕು. ಇನ್ನೊಂದೆಡೆ, ಪಕ್ಷ ತನಗೆ ಎಲ್ಲವನ್ನೂ ಕೊಟ್ಟಿದೆ ಎನ್ನುತ್ತಾರಾದರೂ ತನ್ನ ರಾಜಿನಾಮೆಯಿಂದ ಮತ್ತೆ ಹಾನಿ ಆಗುತ್ತದೆ ಎನ್ನುವುದನ್ನು ಅವರು ಮರೆತಿದ್ದೇಕೆ? ಅಧಿಕಾರ ಪಡೆದ ಪಕ್ಷಕ್ಕೆ ನಷ್ಟವಾಗುತ್ತದೆ ಎನ್ನುವುದಾದರೆ ಸುಮ್ಮನಿರಬಹುದಿತ್ತಲ್ಲವೇ ? ಇವೆಲ್ಲ ಕೃಷ್ಣ ಅವರು ಸೂಕ್ಷ್ಮ  ಸಂವೇದನೆಯನ್ನು ಕಳೆದುಕೊಂಡಂತೆ ತೋರಿಸುತ್ತವೆ.
ಒಟ್ಟಿನಲ್ಲಿ, ಸಂಘಟನೆ ದೃಷ್ಟಿಯಿಂದ ಕೃಷ್ಣ ರಾಜಿನಾಮೆಯಿಂದ ಕಾಂಗ್ರೆಸ್‌ಗೆ ತೊಂದರೆಯಾಗದು, ಆದರೆ ಪಕ್ಷದ ವರ್ಚಸ್ಸಿಗೆ ಹಾನಿ ಆಗಲಿದೆ.
..................................



Wednesday, 25 January 2017

ಈಶ್ವರಪ್ಪಗೆ  ಟಿಕೆಟ್  ತಪ್ಪಿಸಲು  ಮಾಸ್ಟರ್ ಪ್ಲ್ಯಾನ್




 ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಟಿಕೆಟನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ ಅವರಿಗೆ ತಪ್ಪಿಸಲು ಬಿಎಸ್‌ವೈ ಸಕಲ ಸಿದ್ಧತೆ ನಡೆಸುತ್ತಿದೆ. ಇದಕ್ಕ್ಕಾಗಿ ರಾಜ್ಯಸಭಾ ಮಾಜಿ ಸದಸ್ಯ ಆಯನೂರು ಮಂಜುನಾಥ ಅವರ ಬಾಯಿಯಿಂದಲೇ ಹೇಳಿಕೆ ಕೊಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
 ಶಿವಮೊಗ್ಗ ನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಕೂಡ ಮುನ್ನೆಲೆಗೆ ಬಂದಿದೆ. ಕಳೆದ ಹಲವು ವರ್ಷಗಳಿಂದ ಈ ಕ್ಷೇತ್ರ ಪ್ರತಿನಿಧಿಸಿಕೊಂಡು ಬರುತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷದಲ್ಲಿಯೇ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡಿದ್ದಾರೆ. ಇವರು ಟಿಕೆಟ್ ತಪ್ಪಿಸಲೆಂಬ ಉದ್ದೇಶದಿಂದಲೇ ತಾನು ಕೂಡ ಅಭ್ಯರ್ಥಿ ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ.
ವಿಶೇಷವಾಗಿ  ಯಡಿಯೂರಪ್ಪ ಪಾಳೇಯದಲ್ಲಿ ಗುರುತಿಸಿಕೊಂಡಿರುವ ಆಯನೂರು ಮಂಜುನಾಥ್ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆನೆ ಎಂದು ಘೋಷಿಸಿದ್ದಾರೆ. ಈ ಮೂಲಕ ಕೆ.ಎಸ್.ಇ.ಗೆ ನೇರಾನೇರವಾಗಿ ಟಿಕೆಟ್ ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಬಣ ಇನ್ನೂ ಹಲವರನ್ನು ಇದೇ ರೀತಿ ಹುಟ್ಟು ಹಾಕಿ ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಸ್ವತಃ ಬಿಎಸ್‌ವೈ ಹೆಸರು ಚಾಲ್ತಿಯಲಿದೆ, ಮತ್ತೊಮ್ಮೆ ರುದ್ರೇಗೌಡ ಹೆಸರು ತೇಲಿಬರುತ್ತಿದೆ. ಮೊನ್ನೆ ಆಯನೂರು, ನಾಳೆ ಮತ್ತೊಬ್ಬ ನಾಯಕರಿದಂ ತಾನು ಆಕಾಂಕ್ಷಿ ಎಂದು ಹೇಳಿಸುವ ಕೆಲಸವನ್ನು ಮಾಡುವುದು ನಿಶ್ಚಿತ. ಇಂತಹ ಯೋಜನಾಬದ್ಧ ರಾಜಕೀಯವನ್ನು ಬಿಎಸ್‌ವೈ ಬಣದ ಶಿಕಾರಿಪುರದ ವ್ಯಕ್ತಿಯೊಬ್ಬರು ಕುಳಿತಲ್ಲೇ ಮಾಡಿಸುತ್ತಿರುವುದು ಸುಳ್ಳಲ್ಲ.
ಕಳೆದ ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಶ್ರಮಿಸಿದ್ದೇನೆ. ಎಂಪಿಯಾದ ಮತ್ತು ಎಂಎಲ್‌ಎ ಆದ ಅನುಭವವಿದೆ. ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂದು ಆಯನೂರು ತಮ್ಮ ಬಯೊಡೇಟಾ ವಿವರಿಸಿದ್ದಾರೆ. ಇದನ್ನು ರಾಜ್ಯ ಸಮಿತಿಗೆ ಅಥವಾ ಹೈಕಮಾಂಡ್‌ಗೆ ಅವರು ಕಳುಹಿಸಬೇಕಿತ್ತೇ ವಿನಾ ಶಿವಮೊಗ್ಗದಲ್ಲಿ ವಿವರಿಸುವ ಅವಶ್ಯಕತೆ ಇಲ್ಲವಾಗಿತ್ತು. ಬಿಎಸ್‌ವೈ ಪರ ಮಾತನಾಡಲು ಆಯನೂರು ಮುಂದಾಗುತ್ತಿದ್ದಂತೆಯೇ ವಿವಾದದ ಕಿಡಿ ಇನ್ನಷ್ಟು ಜೋರಾಗುವ ಹಂತ ಕಂಡುಬಂದಿದ್ದರಿಂದ ಹೈಕಮಾಂಡ್ ಮೂಗುದಾರ ಹಾಕಿ ಬಾಯಿಗೆ ಬೀಗ ಹಾಕಿಕುಳಿತುಕೊಳ್ಳಿ ಎಂದು ಇತ್ತಂಡದವರಿಗೂ ಎಚ್ಚರಿಸಿದೆ. ಇದರಿಂದ ಟಿಕೆಟ್ ಆಕಾಂಕ್ಷಿಗಳು ಮೌನಧರಿಸುವಂತಾಗಿದೆ. ಇದರಿಂದ ಈಶ್ವರಪ್ಪಗೆ ಶಿವಮೊಗ್ಗ ಟಿಕೆಟ್ ಕೈ ತಪ್ಪಿಸಲು ಬಿ.ಎಸ್.ವೈ ಪಾಳೇಯ ಮಾಡುತ್ತಿರುವ ಮಾಸ್ಟರ್ ಪ್ಲ್ಯಾನ್‌ಗೆ ಸ್ವಲ್ಪ ತಡೆಬಿದ್ದಿದೆ.
  ಬಿ.ಎಸ್.ವೈ. ರಾಜ್ಯಾಧ್ಯಕ್ಷರಾದ ನಂತರ  ಕೆ.ಎಸ್.ಇ.ಗೆ ಟಿಕೆಟ್ ಕೈ ತಪ್ಪಿಸಬೇಕೆಂಬ ತಂತ್ರಗಾರಿಕೆ ಹೆಚ್ಚಿತ್ತು. ಬಿಜೆಪಿ ಪಾಳೇಯದಲ್ಲಿ ಇದಕ್ಕೆ  ವಿರೋಧವೂ ವ್ಯಕ್ತವಾಗತೊಡಗಿತ್ತು. ಬಿ.ಎಸ್.ವೈ. ಬಲಗೈ ಭಂಟ ಎಸ್.ರುದ್ರೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂಬ ಮಾತು ಹರಿದಾಡಲಾರಂಭಿಸಿತ್ತು ಅಥವಾ ಆ ಪಾಳೆಯದವರೇ ಹಬ್ಬಿಸಲಾರಂಭಿಸಿದ್ದರೆನ್ನಬಹುದು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನಿಯೋಜನೆ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಬಳಿಕ  ಬಿ.ಎಸ್.ವೈ.ರವರೇ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಕಳೆದೊಂದು ತಿಂಗಳಿನಿಂದ ದಟ್ಟವಾಗಿ ಹಬ್ಬಿದ್ದವು. ಅವರು ಶಿವಮೊಗ್ಗ ನಗರದಲ್ಲಿ ಭರ್ಜರಿಯಾಗಿಯೇ ಸುತ್ತಾಡಲಾರಂಭಿಸಿದ್ದು, ಈ ವದಂತಿಗಳಿಗೆ ಪುಷ್ಠಿ ನೀಡುವಂತಾಗಿತ್ತು.
ಮುಂದಿನ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈ ತಪ್ಪಿಸುವ ತಂತ್ರಗಾರಿಕೆಯನ್ನು ವಿರೋಧಿ ಪಾಳೇಯ ನಡೆಸುತ್ತಿರುವುದರ ಮಾಹಿತಿಯನ್ನು ಚೆನ್ನಾಗಿಯೇ ತಿಳಿದುಕೊಂಡಿದ್ದ ಕೆ.ಎಸ್.ಇ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಸ್ತಿತ್ವಕ್ಕೆ ತಂದು, ಬಿ.ಎಸ್.ವೈ. ವಿರುದ್ದ ತಿರುಗಿ ಬಿದ್ದಿದ್ದರು. ಇದೀಗ ಬ್ರಿಗೇಡ್ ವಿಷಯವು ಇಡೀ ಬಿಜೆಪಿ ಪಾಳೇಯವನ್ನೇ ಹೊತ್ತಿ ಉರಿಯುವಂತೆ ಮಾಡಿದೆ.
ಅಭಯ: ಮತ್ತೊಂದೆಡೆ ಪಕ್ಷದ ಕೆಲವು ಹಿರಿಯ ನಾಯಕರು ಹಾಗೂ ಸ್ಥಳೀಯ ಸಂಘಪರಿವಾರದ ಮುಖಂಡರು ಶಿವಮೊಗ್ಗದಿಂದ ಕಣಕ್ಕಿಳಿಯುವ ಕೆ.ಎಸ್.ಇ. ನಿರ್ಧಾರಕ್ಕೆ ಬೆಂಬಲವಾಗಿ ನಿಂತುಕೊಂಡಿದ್ದಾರೆ. ಅಷ್ಟು ಸುಲಭವಾಗಿ ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಣೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಅವರು.
ಒಟ್ಟಾರೆ ’ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸಿದರು’ ಎಂಬ ಮಾತಿನಂತೆ ವಿಧಾನಸಭೆ ಚುನಾವಣೆಗೆ ಇನ್ನೂ ವರ್ಷವಿರುವಂತೆ ಬಿಜೆಪಿಯಲ್ಲಿ ಟಿಕೆಟ್ ಕಲಹ ಆರಂಭವಾಗಿದೆ.
.................................
ಕಣ್ಣುತೆರೆಯುವ ಮುನ್ನವೇ ಮಣ್ಣುಪಾಲಾದವು
 ಹೃದಯ ಕಲಕಿದ ತಾಯಿನಾಯಿಯ ಮೂಕರೋದನ



ಅಲ್ಲಿ ಸೇರಿದ್ದವರೆಲ್ಲ ಮೌನವಾಗಿದ್ದರು. ಅವರಲ್ಲಿ ದುಃಖ ತುಂಬಿತ್ತು. ಏಕೆಂದರೆ ತಾಯಿಯ ಮಡಿಲಲ್ಲಿ ಕುಂಯ್‌ಕುಂಯ್ ಗುಡುತ್ತ, ಲೋಕವನ್ನೇ ನೋಡದೆ ಅಮ್ಮನ ಬಿಸಿಯಪ್ಪುಗೆಯಲ್ಲಿದ್ದ  6 ನಾಯಿಮರಿಗಳು ನಾಗರಹಾವಿನ ಬಾಯಿಗೆ ಸಿಲುಕಿ  ಕಣ್ಣುಮುಚ್ಚಿದ್ದವು. ತದೇಕಚಿತ್ತದಿಂದ ಅವರೆಲ್ಲ ಮೃತ ಮರಿಗಳನ್ನು, ತಾಯಿಯ ಆಕ್ರಂದನವನ್ನು ಗಮನಿಸುತ್ತಿದ್ದರು.
ತಾಯಿ ನಾಯಿಯ ಮೂಕರೋದನ ಒಂದೆಡೆಯಾದರೆ, ಇನ್ನೊಂದೆಡೆ ನೆರೆದಿದ್ದವರು ಹಾವಿನ ಮೇಲೆ ದ್ವೇಷ ಕಾರುತ್ತಿದ್ದರು. ತಾಯಿಯ ಕಣ್ಣು ಮಕ್ಕಳನ್ನು ನೋಡುತ್ತ ನೀರುತುಂಬಿಕೊಂಡಿತ್ತು. ಮಕ್ಕಳನ್ನು ಮುಸಿಮೂಸಿ ನೋಡುತ್ತ ಅವರನ್ನು ಲಲ್ಲೆಗರೆಯುತ್ತಿತ್ತು. ಆದರೆ  ಮರಿಗಳು ಆಗಲೇ ಮರಳಿ ಬಾರದ ಲೋಕ ಸೇರಿದ್ದವು.
ಇದು ನಡೆದಿದ್ದು ನಗರದ ಮಾಡರ್ನ್ ಟಾಕೀಸ್ ಪಕ್ಕದಲ್ಲಿರುವ ಪಂಚವಟಿ ಕಾಲನಿಯ ಪಂಚವಟಿ ನಿವಾಸದ ಹಿತ್ತಿಲ್ಲಲ್ಲಿ.
ನಾಲ್ಕಾರು ದಿನದ ಹಿಂದೆಯಷ್ಟೇ 9 ಮರಿಗಳನ್ನು ಹೆತ್ತಿದ್ದ ತಾಯಿ ಆಹಾರ ಅರಸುತ್ತ ಸುತ್ತಮುತ್ತಲೆಲ್ಲೋ ತೆರಳಿದ್ದ ವೇಳೆಯೇ ನಾಗರಾಜನ ಆಗಮನವಾಗಿತ್ತು.  ಚಿಕ್ಕ ಮರಿಗಳಾಗಿದ್ದರಿಂದ ನಾಗರಾಜ ಅವುಗಳನ್ನು ನುಂಗಲು ಯತ್ನ ನಡೆಸಿದ್ದ. ಆದರೆ ಹಾವಿನ ಬಾಯಿಗೆ ಅಷ್ಟು ಸುಲಭದಲ್ಲಿ ಪ್ರವೇಶ ಅಸಾಧ್ಯವಾಗಿತ್ತು. ಏಕೆಂದರೆ ಬಾಯಿಗಿಂತ ಸ್ವಲ್ಪ ಗಾತ್ರದಲ್ಲಿದ್ದವು. ಒಂದು ಮರಿಯನ್ನು ನುಂಗಲು ಹಾವು ಇನ್ನಿಲ್ಲದ ಯತ್ನ ನಡೆಸುತ್ತಿರುವಾಗಲೇ ತಾಯಿ ಧಾವಿಸಿ, ಮಕ್ಕಳು ಸಂಕಟಕ್ಕೆ ಸಿಲುಕಿರುವುದನ್ನು ಕಂಡು ಅರಚಲಾರಂಭಿಸಿತ್ತು. ಎಂದೂ ಕೇಳದ  ವಿಚಿತ್ರ ಧ್ವನಿಯಲ್ಲಿ ನಾಯಿ ಕೂಗುತ್ತಿರುವುದನ್ನು ಕೇಳಿದ ಮನೆಯವರು ಅಲ್ಲಿಗಾಗಮಿಸಿದಾಗ ಮಧ್ಯಮ ಗಾತ್ರದ  ನಾಗರ ಇನ್ನೂ ನುಂಗುವ ಯತ್ನ ನಡೆಸಿಯೇ ಇತ್ತು. ಆದರೆ, ತನ್ನಿಂದ ಇನ್ನು ನುಂಗಲು ಸಾಧ್ಯವಿಲ್ಲ ಎಂದರಿತಾಗ ತಾಯಿ ನಾಯಿಯನ್ನೂ ಹೆದರಿಸಲು ಯತ್ನಿಸಿತು. ಆದರೆ ತಾಯಿ ಹೆದರುವ ಸ್ಥಿತಿಯಲ್ಲಿರದೆ, ಹೆದರಿಸುವ ಆರ್ಭಟದಲ್ಲೇ ಮುನ್ನುಗ್ಗುತ್ತಿತ್ತು. ಏಕೆಂದರೆ ತನ್ನ ಹಸುಳೆಗಳನ್ನು ಅದು ಬಿಟ್ಟುಕೊಡಂತಹ ಸ್ಥಿತಿಯಲ್ಲಿರಲಿಲ್ಲ. ಮಾತೃ ಕರುಳು ಚುರುಕ್ ಎನ್ನುತ್ತಿದ್ದುದ್ದರಿಂದ ಅವುಗಳ ರಕ್ಷಣೆ ಮಾಡುವ ಧೈರ್ಯವನ್ನು ಪ್ರದರ್ಶಿಸುತ್ತಿತ್ತು.
ತಾಯಿನಾಯಿಯ ಪ್ರತಿರೋಧದಿಂದ ಸಿಟ್ಟಿಗೆದ್ದ ನಾಗರಹಾವು 9 ಮರಿಗಳ  ಪೈಕಿ 6 ಮರಿಗಳಿಗೆ ಹೆಡೆಯಿಂದ ಹೊಡೆದು ಸಾಯಿಸಿ, ಅಲ್ಲಿಂದ ತೆರಳಿದೆ.
 ನಂತರ ತಾಯಿ ನಾಯಿಯ  ಸಂಕಟ ನೋಡುಗರ ಕಣ್ಣನ್ನು ತೇವಗೊಳಿಸಿತ್ತು. ಮೃತ ಮಕ್ಕಳನ್ನು ಸುತ್ತುತ್ತ, ಒಮ್ಮೊಮ್ಮೆ ಮುದ್ದಿಸುತ್ತ, ಮಗದೊಮ್ಮೆ ಅವುಗಳ ಪಕ್ಕದಲ್ಲೇ ಮಲಗುತ್ತಿತ್ತು. ಅಲ್ಲಿಯವರೆಗೂ ಮರಿಗಳು ಸಾವಿಗೀಡಾಗಿರುವುದು ಅದರ ಗಮನಕ್ಕೆ ಬಂದಂತಿರಲಿಲ್ಲ.  ಎಷ್ಟು ಮುದ್ದಿಸಿದರು ಯಾವ ಮರಿಯೂ ಚಲಿಸದೆ, ಕುಂಯ್‌ಗುಡದೆ ಮಲಗಿದ್ದವೋ ಆಗ ಬಹುಶಃ ಹೆತ್ತ ಕರುಳು ಚುರುಕ್ ಎಂದಿರಬೇಕು.
ಏಕಾಏಕಿ ಮಕ್ಕಳಿಂದ ದೂರಬಂದು ಬೊಗಳಲಾರಂಭಿಸಿತು. ತನ್ನ ನೆರವಿಗೆ ಯಾರಾದರೂ ಬರುವರೇನೋ ಎಂಬಂತೆ ಕರೆಯುತ್ತಿತ್ತು. ಸ್ವಲ್ಪ ದೂರ ಹೋಗಿ ತನ್ನಷ್ಟಕ್ಕೆ ತಾನೇ ಮುಲುಗುತ್ತಿತ್ತು. ಮತ್ತೆ ಒಂದೇ ನಿಮಿಷದೊಳಗೆ ಎದ್ದು ಬಂದು ಮಕ್ಕಳನ್ನು ಮತ್ತೆ ಮೂಸಿ ನೋಡುತ್ತಿತ್ತು. ಕಣ್ಣೆದುರೇ ಹೆತ್ತ ಮಕ್ಕಳು ವಾರದೊಳಗೆ ಹಾವಿನ ದಾಳಿಗೊಳಗಾಗಿ ಜೀವಬಿಟ್ಟಿದ್ದನ್ನು ಕಂಡು ಆ ತಾಯಿ ಹೃದಯ ಮಮ್ಮಲ ಮರುಗುವ ದೃಶ್ಯ ನೋಡುಗರನ್ನೂ ಮೌನಿಯನ್ನಾಗಿಸಿತ್ತು.
ಹೆತ್ತವರೆದು ಮಕ್ಕಲು ಸಾಯಬಾರದು ಎಂಬ ಮಾತಿದೆ. ಅದರ ಪರಿಣಾಮ ಹೆತ್ತವರ ಮೇಲೆ ಹೇಗಾಗುತ್ತದೆ ಎನ್ನುವದುನ್ನು ಇಲ್ಲಿಯವರೆಗೆ ಮನುಷ್ಯರಲ್ಲಿ ಮಾತ್ರ ಕಂಡಿದ್ದ ನೆರೆದವರಿಗೆ ಮೂಕಪ್ರಣಿಗಳು ಅನುಭವಿಸುವ ನೋವಿನ ಅರಿವಾಗಿತ್ತು. ಅಲ್ಲಿಂದ ಹೊರಡುವಾಗ ಪ್ರತಿಯೊಬ್ಬರ ಮನಸ್ಸೂ ಕಲಕಿ,ಮೃತ ನಾಯಿಮರಿಗಳ ಚಿತ್ರ ಕಣ್ಣಮುಂದೆ ಬರುತ್ತಿತ್ತು.  
................................
’ಶಿವಮೊಗ್ಗಕ್ಕೆ  ಯಡಿಯೂರಪ್ಪ, ಶಿಕಾರಿಪುರಕ್ಕೆ 
ರಾಘವೇಂದ್ರ, ಲೋಕಸಭೆಗೆ ರುದ್ರೇಗೌಡ?

  *ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪುವುದು ಸದ್ಯದ ಸ್ಥಿತಿಯಲ್ಲಿ ನಿಶ್ಚಿತ ಎಂಬಂತೆ ಕಂಡುಬರುತ್ತಿದೆ.  ಹೈಕಮಾಂಡ್ ಸಹ ಭಿನ್ನಮತವನ್ನು ನಿರ್ಲ ಕ್ಷಿಸಿರುವುದರಿಂದ ಬಿಎಸ್‌ವೈ ತಮ್ಮ ಪ್ರಭಾವವನ್ನು ನಗರದಲ್ಲಿ ಹೆಚ್ಚಿಸಿಕೊಳ್ಳಲಾರಂಭಿಸಿದ್ದಾರೆ. ಇದು ಕೆಎಸ್‌ಇಗೆ ನುಂಗಲಾರದ ತುತ್ತ್ತಾಗಿದೆ. ಜೊತೆಗೆ ಜಿಲ್ಲೆಯ ಮಟ್ಟಿಗೆ ಬಿಎಸ್‌ವೈ ಪ್ರಭಾವವೇ ಅಧಿಕ. ಈಶ್ವರಪ್ಪ ಏನಿದ್ದರೂ ನಗರ ಕ್ಷೇತ್ರಕ್ಕೆ ಮಾತ್ರ ಸಿಮಿತ, ಅದರಲ್ಲೂ ಅಸಂಬದ್ಧ ಹೇಳಿಕೆ ಕೊಡುತ್ತ ಏನಾದರೂ ಫಜೀತಿಗೆ ಸಿಕ್ಕಿಬೀಳುತ್ತಲೇ ಇರುತ್ತಾರೆ. ಬಿಎಸ್‌ವೈ ಸದಾ ಸಿಡುಕುತ್ತಲೇ ಇರುವಂತೆ ಕಂಡುಬಂದರೂ ವಿವಾದದ ಗೋಜಿಗೆ ಹೋಗುವುದಿಲ್ಲ. ಬಿಜೆಪಿ ಕಚ್ಚಾಟದಿಂದ ಎದುರಾಳಿಗೆ ಅನುಕೂಲವಾಗುವುದು ಅಷ್ಟೇ ಸತ್ಯ.



ಶಿವಮೊಗ್ಗ : ವಿಧಾನಸಭೆ ಚುನಾವಣೆಗೆ ಸುಮಾರು 14 ತಿಂಗಳು ಬಾಕಿ ಇದೆ. ಆದರೆ ಜಿಲ್ಲೆಯಲ್ಲಿ ಅದರಲ್ಲೂ ಶಿವಮೊಗ್ಗ ನಗರ ಕ್ಷೇತ್ರಕ್ಕೆ ರಾಜಕೀಯ ಪಕ್ಷಗಳು ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿವೆ. ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯಲ್ಲಿದ್ದಾರೆಂಬ ಚರ್ಚೆಗಳು ಬಿರುಸುಗೊಳ್ಳಲಾರಂಭಿಸಿವೆ. ಈ ನಡುವೆ ಬಿಜೆಪಿಯಲ್ಲಿ ಮನೆ ಮಾಡಿರುವ ಗೊಂದಲದಿಂದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಆ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಸೋಲನುಭವಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಈಶ್ವರಪ್ಪ ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಂಡಿದ್ದಾರೆ.  ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆ.ಎಸ್.ಇ. ಪ್ರಾರಂಭಿಸಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವೈಮನಸ್ಸು ಸೃಷ್ಟಿಸಿಕೊಂಡಿದ್ದಾರೆ. ಬ್ರಿಗೇಡ್ ತೊರೆಯುವಂತೆ ಬಿ.ಎಸ್.ವೈ. ನೀಡಿರುವ ಸೂಚನೆಯನ್ನು ಈಗಾಗಲೇ ಕೆ.ಎಸ್.ಇ. ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಇದು ಇಬ್ಬರ ನಡುವಿನ ವೈಮನಸ್ಸನ್ನು ಮತ್ತಷ್ಟು ತೀವ್ರಗೊಳ್ಳುವಂತೆ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಷದ ಬರ ಅಧ್ಯಯನ ತಂಡದಿಂದ ಕೆ.ಎಸ್.ಇ.ಗೆ ಖೊಕ್ ನೀಡಲಾಗಿದೆ.
ಪಕ್ಷದಲ್ಲಿ ತಮಗೆ ಮಗ್ಗಲು ಮುಳ್ಳಾಗಿ ಪರಿಣಮಿಸಿರುವ ಕೆ.ಎಸ್.ಇ.ಗೆ ಶತಾಯಗತಾಯ ತಕ್ಕ ಪಾಠ ಕಲಿಸಲು ನಿರ್ಧರಿಸಿದಂತಿರುವ ಬಿ.ಎಸ್.ವೈ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಅವರಿಗೆ ಟಿಕೆಟ್ ಸಿಗದಂತೆ ಮಾಡುವ ವ್ಯವಸ್ಥಿತ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ವತಃ ತಾವೇ ಅಖಾಡಕ್ಕಿಳಿಯುವ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.  ಇತ್ತೀಚೆಗೆ ಬಿ.ಎಸ್.ವೈ ಶಿವಮೊಗ್ಗ ನಗರದತ್ತ ಹೆಚ್ಚಿನ ಗಮನ ಕೇಂದ್ರಿಕರಿಸುತ್ತಿದ್ದಾರೆ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ಈ ಎಲ್ಲ ಚಟುವಟಿಕೆಗಳನ್ನು ಗಮನಿಸಿದರೆ ಮುಂದಿನ ಚುನಾವಣೆಗೆ ಈಗಿನಿಂದಲೇ ಅವರು ಕ್ಷೇತ್ರದಲ್ಲಿ ತಯಾರಿ ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎನ್ನಬಹುದಾಗಿದೆ.
ಪುತ್ರನಿಗೆ ಸ್ವಕ್ಷೇತ್ರ:
 ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿ.ಎಸ್.ವೈ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಕಣಕ್ಕಿಳಿಸಿ ಭಾರೀ ಪ್ರಯತ್ನದಿಂದ ಗೆಲ್ಲಿಸಿಕೊಂಡು ಬರುವಲ್ಲಿ ಸಫಲರಾಗಿದ್ದರು. ಮುಂಬರುವ ಚುನಾವಣೆಯಲ್ಲಿ ಪುತ್ರನನ್ನು ಶಿಕಾರಿಪುರ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಸುವ ಚಿಂತನೆಯನ್ನು ಬಿ.ಎಸ್.ವೈ. ನಡೆಸುತ್ತಿದ್ದಾರೆ.
ಲೋಕಸಭೆ ಚುನಾವಣೆಗೆ ತಮ್ಮ ಬಲಗೈ ಭಂಟ, ಹಾಲಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಅವರನ್ನು ಅಖಾಡಕ್ಕಿಳಿಸುವ ಇರಾದೆ ಬಿ.ಎಸ್.ವೈ.ಅವರದ್ದಾಗಿದೆ. ಈ ಮೂಲಕ ಈಶ್ವರಪ್ಪ ಅವರನ್ನು ಚುನಾವಣಾ ರಾಜಕಾರಣದಿಂದ ದೂರವಿಡುವ ಮೂಲಕ ತಕ್ಕ ತಿರುಗೇಟು ನೀಡುವ ಯೋಜನೆಯನ್ನು ಬಿ.ಎಸ್.ವೈ.ರೂಪಿಸುತ್ತಿದ್ದಾರೆ. ಇದು ಈಶ್ವರಪ್ಪ ಅವರಿಗೂ ಗೊತ್ತಾಗಿದೆ. ಅದಕ್ಕಾಗಿಯೇ ಇನ್ನಷ್ಟು ಹೇಳಿಕೆ- ಪ್ರತಿ ಹೇಳಿಕೆ ಬರತೊಡಗಿದೆ. ಕಳೆದ ಒಂದು ತಿಂಗಳಲ್ಲಿ ಇಬ್ಬರ ನಡುವಿನ ಬಿರುಸಿನ ಕಾಳಗಕ್ಕೂ ಇದೇ ಅಂಶ ಕಾರಣ ಎನ್ನುವುದು ಈಗ ಬೆಳಕಿಗೆ ಬರತೊಡಗಿದೆ.
 ಇದರಿಂದ  ಅವರಿಬ್ಬರೂ ಹಾವು - ಮುಂಗಸಿಯಂತಾಗಿ ಪರಿವರ್ತಿತರಾಗಿದ್ದಾರೆ. ಒಬ್ಬರು ಮತ್ತೊಬ್ಬರ ಮುಖ ನೋಡದ ಮಟ್ಟಕ್ಕೆ ಅವರಿಬ್ಬರ ನಡುವೆ ವೈಮನಸ್ಸು ಆವರಿಸಿದೆ.  ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದ ನಂತರ ಇಬ್ಬರೂ ಅಕ್ಷರಶಃ ಶತೃಗಳಾಗಿ ಮಾರ್ಪಟ್ಟಿದ್ದಾರೆ.  ಇವರಿಬ್ಬರ ವೈಮನಸ್ಸು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಗೋಚರವಾಗುವುದು ಸ್ಪಷ್ಟವಾಗಿದೆ. ಕಳೆದ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಇ. ಸೋಲಿಸುವುದೇ ತಮ್ಮ ಗುರಿಯಾಗಿದೆ ಎಂದು ಹೇಳಿ ಅದರಂತೆ ಸೋಲಿಸಿದ್ದ ಬಿ.ಎಸ್.ವೈ., ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಿಂದ ಟಿಕೆಟ್ ಸಿಗದಂತೆ ಮಾಡುವ ಕಾರ್ಯತಂತ್ರ ನಡೆಸುತ್ತಿದ್ದಾರೆ. ಈಶ್ವರಪ್ಪ ಕಣದಿಂದ ಹಿಂದೆ ಸರಿಯುವ ಸ್ಥಿತಿಯಲ್ಲಿಲ್ಲ. ಇದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದು ಕುತೂಹಲ ಹುಟ್ಟಿಸಿದೆ.
 ಕಳೆದ ಚುನಾವಣೆಯಂತೆ ಬಿಜೆಪಿಯಲ್ಲಿ ಗೊಂದಲ ಏರ್ಪಟ್ಟರೆ ಮತ್ತೆ ಶಿವಮೊಗ್ಗ ಕ್ಷೇತ್ರ ಕಾಂಗ್ರೆಸ್ ಅಥವಾ ಜೆಡಿಎಸ್ ಪಾಲಾಗುವುದು ಖಚಿತ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯಲು ಹೋಗಿ ಇಬ್ಬರೂ ಗುಂಡಿಗೆ ಬೀಳುವುದು ನಿಶ್ಚಿತ.  

Tuesday, 24 January 2017

 ಲಾಬಿಗೆ ಮಣಿಯದಿರಲಿ ಜಿಲ್ಲಾಡಳಿತ
  ಜಿಲ್ಲಾ ಸೇವಾ ಪ್ರಶಸ್ತಿಗೆ 22 ಅರ್ಜಿ

 ಕೆಲವು ಪ್ರಶಸ್ತಿಗಳಂತೆ ಈ ಪ್ರಶಸ್ತಿಯೂ ಕೂಡ ಆರೋಪದಿಂದ ಮುಕ್ತವಾಗಿಲ್ಲ. ಲಾಬಿ, ಪ್ರಭಾವ, ಜಾತಿ, ರಾಜಕಾರಣಗಳ ಶಿಫಾರಸ್ಸು ಪ್ರಮುಖ ಪಾತ್ರವಹಿಸುತ್ತಿರುವ ಆರೋಪಗಳು ನೌಕರರ ವಲಯದಿಂದಲೇ ಕೇಳಿಬರುತ್ತಿವೆ. ಕೆಲವು ನೌಕರರು ಪ್ರಶಸ್ತಿ ಪಡೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿರುವ ಮಾಹಿತಿ ಬರುತ್ತಿದೆ. ’ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಭಾವ, ಒತ್ತಡಗಳಿಂದ ಮುಕ್ತವಾಗಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ನೌಕರರಿಗಷ್ಟೆ ಸಿಗುವಂತಾಗಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಭಾರೀ ಪೈಪೋಟಿ ಕಂಡುಬರುತ್ತಿದೆ. ಇದಕ್ಕಾಗಿ ವಶೀಲಿ ಸರಿಯಲ್ಲ. ರಾಜಕಾರಣಿಗಳಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುವ ಕೆಲಸ ನಡೆಯುತ್ತದೆ. ಇದಕ್ಕೆ ಕಡಿವಾಣ ಬೀಳಬೇಕು. ಜನಪರಕಾಳಜಿ, ಕೆಲಸ ನಿಷ್ಠತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಮಾತ್ರ ಈ ಪ್ರಶಸ್ತಿ ಸಿಗಬೇಕು.
-   ಓರ್ವ ಸರ್ಕಾರಿ ನೌಕರ.  

  ಜಿಲ್ಲಾ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ, ನೌಕರರಿಗೆ, ಸಿಬ್ಬಂದಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಗಣರಾಜ್ಯೋತ್ಸವದಂದು  ಪ್ರದಾನ ಮಾಡುವ ಪದ್ದತಿ ಬೆಳೆದುಬಂದಿದೆ. ಇದು ಈಗ ಜಾತಿ, ಪ್ರಭಾವ, ಲಾಬಿಯಿಂದ ತತ್ತರಿಸುತ್ತಿದೆ.
 ಪ್ರಶಸ್ತಿ - ಬಿರುದು - ಸಮ್ಮಾನಗಳು ನಾನಾ ಕಾರಣಗಳಿಂದ ಮಹತ್ವ ಕಳೆದುಕೊಳ್ಳುತ್ತಿವೆ. ಇದು ಕೇವಲ ಸಾಹಿತಿ, ಕಲಾವಿದರು, ಪತ್ರಕರ್ತರು ಅಥವಾ ಸಮಾಜ ಸೇವಕರಿಗೆ ಮಾತ್ರ ಸೀಮಿತವಾಗಿಲ್ಲ. ಸರ್ಕಾರಿ ನೌಕರರು ಮತ್ತು ಅಧಿಕಾರಿ, ಸಿಬ್ಬಂದಿಗಳೂ ಪ್ರಶಸ್ತಿಗಳಿಗೆ ಹೋರಾಟ ನಡೆಸುತ್ತಿದ್ದಾರೆ. ನಿಜವಾಗಿಯೂ ಅರ್ಹರು, ಪ್ರಾಮಾಣಿಕರಿಗೆ ಪ್ರಶಸ್ತಿ ದೊರಕುವುದೇ ದುರ್ಲಭ ಎನ್ನವಂತಾಗಿದೆ. ಕೇವಲ ಕೇಂದ್ರ, ರಾಷ್ಟ್ರೀಯ ಅಥವಾ ರಾಜ್ಯ ಪ್ರಶಸ್ತಿಗೆ ನಡೆಯುತ್ತಿದ್ದ ಈ ವಶೀಲಿ ಈಗ ಜಿಲ್ಲಾ ಮಟ್ಟದಲ್ಲೇ ಅಧಿಕವಾಗುತ್ತಿದೆ. ಜಿಲ್ಲಾ ಮಟ್ಟದ ಕೆಲವು ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ತಮ್ಮ ಮೇಲೆ ಸಾಕಷ್ಟು ಆರೋಪವಿದ್ದರೂ ಯಾರದ್ದೋ ಪ್ರಭಾವ ಬೀರಿ ಪ್ರಶಸ್ತಿ ಗಿಟ್ಟಿಸಿದ ಉದಾಹರಣೆ ಕಣ್ಣಮುಂದಿದೆ.
 ಕೆಲವು ನೌಕರರು ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಭಾರೀ ದೊಡ್ಡ ಪ್ರಮಾಣದಲ್ಲಿ ಲಾಬಿ ನಡೆಸುವ, ಪ್ರಭಾವಿ ರಾಜಕಾರಣಿಗಳ ಮೂಲಕ ಒತ್ತಡ ಹಾಕಿಸುವ ಕೆಲಸ ನಡೆಸುತ್ತಿರುವ ಮಾಹಿತಿಗಳು ಸ್ವತಃ ಸರ್ಕಾರಿ ನೌಕರರ ವಲಯದಿಂದಲೇ ಕೇಳಿಬರುತ್ತಿವೆ. ಯಾರು ನೌಕರರ ಪ್ರಾಮಾಣಿಕತೆಯ ಬಗ್ಗೆ ಸರ್ಟಿಫಿಕೆಟ್ ಕೊಡಬೇಕಿತ್ತೋ ಅಂತಹವರೇ ಲಾಬಿ ಮಾಡಿಸುತ್ತಿದ್ದಾರೆ. ಕಳೆದ ವರ್ಷವಂತೂ ಲಾಬಿಯಲ್ಲೇ ಬಹುತೇಕ ಪ್ರಶಸ್ತಿಗಳು ಹಂಚಿಹೋಗಿತ್ತು ಎನ್ನುವ ಗುರುತರ ಆರೋಪವಿದೆ.
 ಈ ಬಾರಿ  ಕಟ್ಟುನಿಟ್ಟಿನ ಡಿಸಿ ಡಾ. ಲೋಕೇಶ್ ಈ ಲಾಬಿಕೋರರನ್ನು ಮಟ್ಟಹಾಕುವ ಕೆಲಸವನ್ನು ಮೊದಲು ಮಾಡಬೇಕಿದೆ. ಜೊತೆಗೆ ಪ್ರಶಸ್ತಿಗೆ ಆಯ್ಕೆಯಾಗುವವರ ಹಿನ್ನೆಲೆಯನ್ನು ಪಡೆಯಬೇಕು. ಜಿಲ್ಲಾಡಳಿತವನ್ನೇ ಅಂಗೈಯಲ್ಲಿಟ್ಟುಕೊಂಡಂತೆ ವರ್ತಿಸುತ್ತಿರುವ ಕೆಲವರನ್ನು ದೂರವಿಡಬೇಕು. ಹೀಗೆ ಮಾಡಿದರೆ ಇದರಿಂದ ಅದೆಷ್ಟೋ ಪ್ರಾಮಾಣಿಕ, ನಿಷ್ಠಾವಂತ, ದಕ್ಷ ನೌಕರರು ಈ ಪ್ರಶಸ್ತಿ  ಪಡೆಯಲು ಸಾಧ್ಯವಿದೆ.
ಜಿಲ್ಲೆಯಲ್ಲಿ  ಲಾಬಿ, ಪ್ರಭಾವ ಬಳಸುವ ನೌಕರರಿಗೆ ಈ ಪ್ರಶಸ್ತಿಯನ್ನು ಕೊಡಿಸುವ ಕೆಲಸವನ್ನು ಕೆಲವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದಾಕ್ಷಣ ಜಾಗೃತವಾಗುವ ಇವರು, ಜಾತಿ, ಆಪ್ತತೆಯನ್ನು ಮುಂದಿಟ್ಟುಕೊಂಡು  ಪ್ರಭಾವ ಬೀರು ಕೆಲಸ ಶುರುವಿಟ್ಟುಕೊಳ್ಳುತ್ತಾರೆ. ಈ ಆರೋಪ ಬಾರದಂತೆ, ಈಗಿರುವ ಹಣೆಪಟ್ಟಿಯನ್ನು ಕಿತ್ತೊಗೆಯುವ ಕೆಲಸವನ್ನು ಡಿಸಿಯವರು ಮಾಡಬೇಕಿದೆ.
  ಪ್ರಸ್ತುತ ವರ್ಷ ಮತ್ತೊಮ್ಮೆ ಜಿಲ್ಲಾಡಳಿತ ಪ್ರಶಸ್ತಿಗೆ ಸರ್ಕಾರಿ ನೌಕರರಿಂದ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಹಲವು ನೌಕರರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು, ಇಷ್ಟರಲ್ಲಿಯೇ ಜಿಲ್ಲಾಧಿಕಾರಿಗಳ ನೇತೃತ್ವ ಆಯ್ಕೆ ಸಮಿತಿಯ ಸಭೆ ನಡೆಯಲಿದೆ. ಜಿಲ್ಲಾಡಳಿತದ ಮೂಲಗಳ  ಪ್ರಕಾರ ಈ ಬಾರಿ ಪ್ರಶಸ್ತಿಗೆ ಸುಮಾರು 22 ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಪ್ರಶಸ್ತಿಗೆ ಭಾರೀ ಪೈಪೋಟಿ ಕಂಡುಬಂದಿದೆ.
  ಎ, ಬಿ ಹಾಗೂ ಸಿ ವರ್ಗಗಳಲ್ಲಿ ತಲಾ ಇಬ್ಬರು ನೌಕರರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅರ್ಹ ನೌಕರರನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಅಧಿಕಾರಿಗಳ ಸಮಿತಿಯು ಆಯ್ಕೆ ಮಾಡುತ್ತದೆ. ಗಣರಾಜೋತ್ಸವ ಸಮಾರಂಭದಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಪ್ರಾಮಾಣಿಕರು, ದಕ್ಷರು ಈ ಪ್ರಶಸ್ತಿ ಪಡೆಯುವಂತಾಗಲಿ.

---------------------------------------

Monday, 23 January 2017

ಶಿವಮೊಗ್ಗ - ಹರಿಹರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ನಿರಾಸಕ್ತಿ
 ಎಚ್ಚೆತ್ತುಕೊಳ್ಳಲಿದ್ದಾರೆಯೇ ಶಿವಮೊಗ್ಗ, ದಾವಣಗೆರೆ ಸಂಸದರು?

  ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ಹಾಗೂ ದಾವಣಗೆರೆ ನಗರಗಳು ಆಯ್ಕೆಯಾಗಿವೆ. ಈ ಎರಡು ’ಸ್ಮಾರ್ಟ್ ಸಿಟಿ’ಗಳ ನಡುವೆ ರೈಲ್ವೆ ಸಂಪರ್ಕ ವ್ಯವಸ್ಥೆ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ’ಸ್ಮಾರ್ಟ್ ಸಿಟಿ’ ಯೋಜನೆಯಡಿ ಕೈಗೊಳ್ಳಬಹುದಾದ ಅಭಿವೃದ್ದಿ ಯೋಜನೆಗಳ ಪ್ರಸ್ತಾವನೆಯಲ್ಲಿ ’ಶಿವಮೊಗ್ಗ - ಹರಿಹರ’ ರೈಲ್ವೆ ಮಾರ್ಗ ನಿರ್ಮಾಣದ ಬಗ್ಗೆಯೂ ಪ್ರಸ್ತಾವನೆ ಮಾಡಿದೆಎಂಬ ಅಂಶ ಬೆಳಕಿಗೆ ಬಂದಿದೆ. ಈ ಮಾರ್ಗ ನಿರ್ಮಾಣದಿಂದ ಎರಡು ನಗರಗಳ ನಡುವೆ ಆರ್ಥಿಕಾಭಿವೃದ್ದಿ, ಕೈಗಾರಿಕಾಭಿವೃದ್ದಿಗೆ ಪೂರಕವಾಗಲಿದೆ. ಆದರೆ ಈ ರೈಲು ಯೋಜನೆಗೆ ಬಡಿದಿರುವ ಬಾಲಗ್ರಹಪೀಡೆ ಅಂತ್ಯವಾಗುವುದೇ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.  



ಶಿವಮೊಗ್ಗ: ಮಲೆನಾಡು ಹಾಗೂ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ರೈಲ್ವೆ ಸಂಪರ್ಕ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿರುವ, ಆರ್ಥಿಕಾಭಿವೃದ್ದಿಗೆ ಪೂರಕವಾಗಿರುವ ಶಿವಮೊಗ್ಗ - ಹರಿಹರ ನಡುವೆ ಹೊಸದಾಗಿ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ನೆನೆಗುದಿಗೆ ಬಿದ್ದಿದೆ. ಸದ್ಯದ ಮಟ್ಟಿಗೆ ಈ ಯೋಜನೆ ಅನುಷ್ಠಾನವಾಗುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ.
ಕೇಂದ್ರ - ರಾಜ್ಯ ಸರ್ಕಾರ ಶೇ. 50 - 50 ರ ವೆಚ್ಚ ಭರಿಸುವ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನ ಮಾಡಬೇಕಿತ್ತು. ಮಾರ್ಗ ಹಾದು ಹೋಗುವ ಸ್ಥಳ ಗುರುತಿಸಲಾಗಿದೆ. ಕಳೆದೆರೆಡು ರೈಲ್ವೆ ಬಜೆಟ್‌ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ಮೀಸಲಿರಿಸಿಕೊಂಡು ಬರುತ್ತಿದ್ದು, ಪ್ರಸ್ತುತ ಭೂ ಸ್ವಾಧೀನ ಪ್ರಕ್ರಿಯೆ ಹಂತದಲ್ಲಿದೆ.
  ಒಂದೆಡೆ, ರಾಜ್ಯ ಸರ್ಕಾರವು ಸಹಭಾಗಿತ್ವದ ರೈಲ್ವೆ ಯೋಜನೆಗಳಿಗೆ ತನ್ನ ಪಾಲಿನ ಅನುದಾನ ನೀಡಲು ಮೀನಾಮೇಷ ಎಣಿಸುತ್ತಿದೆ. ಇನ್ನೊಂದೆಡೆ, ಕೇಂದ್ರ ರೈಲ್ವೆ ಇಲಾಖೆಯು ತಾನೇ ಘೋಷಿಸಿ ಅನುಮತಿಯಿತ್ತಿರುವ ಈ ಯೋಜನೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿಕೊಂಡು ಬರುತ್ತಿದ್ದು, ತನಗೂ ಈ ಯೋಜನೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ.
ಮತ್ತೊಂದೆಡೆ, ಶಿವಮೊಗ್ಗ ಹಾಗೂ ದಾವಣಗೆರೆ ಭಾಗದ ಜನಪ್ರತಿನಿಧಿಗಳಿಗೂ ಈ ಯೋಜನೆಯ ಕಾರ್ಯಗತದ ಬಗ್ಗೆ ಮೊದಲಿನಷ್ಟು ಆಸಕ್ತಿ ಪ್ರಸ್ತುತ ಇಲ್ಲ. ಈ ಎಲ್ಲ ಕಾರಣಗಳಿಂದ ಮಹತ್ವದ ಯೋಜನೆಯು ನೆನೆಗುದಿಗೆ ಬಿದ್ದಿದ್ದು, ಕಳೆದ ಹಲವು ವರ್ಷಗಳಿಂದ ಭೂ ಸ್ವಾಧೀನ ಪ್ರಕ್ರಿಯೆಯೇ ಪೂರ್ಣಗೊಳ್ಳದಂತಾಗಿದೆ. ಈ ಯೋಜನೆಗೆ ಸಂಬಂಧಿಸಿದ ಕಡತಗಳು ಧೂಳು ಹಿಡಿಯುತ್ತಿವೆ.
 ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಶಿವಮೊಗ್ಗ - ಹರಿಹರ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಅಂದು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದ್ದರು. ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ. 50 ರಷ್ಟನ್ನು ರಾಜ್ಯ ಸರ್ಕಾರದವತಿಯಿಂದ ಭರಿಸುವುದರ ಜೊತೆಗೆ ಅಗತ್ಯವಾದ ಭೂಮಿಯನ್ನು ಒದಗಿಸಿ ಕೊಡುವುದಾಗಿ ಭರವಸೆಯಿತ್ತಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ್ದ ಮಮತಾ, ತಾವು ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಶಿವಮೊಗ್ಗ - ಹರಿಹರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿ, ಸರ್ವೇಗೆ ಆದೇಶಿಸಿದ್ದರು.
 ಅಂದು ಶಿವಮೊಗ್ಗ ನಗರದಿಂದ ಹೊಳಲೂರು, ಹೊನ್ನಾಳಿ, ಮಲೇಬೆನ್ನೂರು ಮಾರ್ಗದ ಸರ್ವೇ ನಡೆದು ಇದಕ್ಕೆ ಕೇಂದ್ರ ರೈಲ್ವೆ ಇಲಾಖೆ ಕೂಡ ಅನುಮೋದನೆ ನೀಡಿತ್ತು. ಇನ್ನೇನು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿಯೇ ಹೊಳಲೂರು ಸುತ್ತಮುತ್ತಲಿನ ಭಾಗದ ನಾಗರಿಕರು ತಮ್ಮ ಭಾಗದಲ್ಲಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬೀದಿಗಿಳಿದು ಹೋರಾಟ ನಡೆಸಿದ್ದರು. ಇದರಿಂದ ರೈಲ್ವೆ ಇಲಾಖೆಯು ಈ ಮಾರ್ಗ ಕೈಬಿಟ್ಟು ಶಿವಮೊಗ್ಗ ನಗರದ ಸೋಮಿನಕೊಪ್ಪ, ಬಸವಗಂಗೂರು, ಕೊಮ್ಮನಾಳು ಮಾರ್ಗವಾಗಿ ಹರಿಹರಕ್ಕೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆಸಿತ್ತು. ಈ ಮಾರ್ಗ ಕಾರ್ಯಸಾಧುವಾಗಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ ಅನುಮತಿಯಿತ್ತು, ಅನುದಾನ ಕೂಡ ಬಿಡುಗಡೆ ಮಾಡಿತ್ತು. ಭೂ ಸ್ವಾಧೀನ ಪ್ರಕ್ರಿಯೆಗೆ ಕ್ರಮಕೈಗೊಳ್ಳಲಾಗಿತ್ತು.
  ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಜಿಲ್ಲಾಡಳಿತಗಳು ಈಗಾಗಲೇ ಗುರುತಿಸಿವೆ. ಭೂ ಸ್ವಾಧೀನ ಪ್ರಕ್ರಿಯೆ ಕೂಡ ಆರಂಭಿಸಿತ್ತು., ಇದು ಆರಂಭವಾಗಿ ಸುಮಾರು ಎರಡ್ಮೂರು ವರ್ಷ ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಜಮೀನು ಮಾಲಕರಿಗೆ ದರ ನಿಗದಿ ಮಾಡಿಲ್ಲ. ಮತ್ತೊಂದೆಡೆ, ಈ ಯೋಜನೆ ಅನುಷ್ಠಾನವಾಗಲಿದೆಯೇ ಎಂಬ ಅನುಮಾನ ಕೂಡ ಈಗ ಕಾಡಲಾರಂಭಿಸಿದೆ. ಏಕೆಂದರೆ, ರೈಲ್ವೆ ಮಾರ್ಗ ಹಾದು ಹೋಗಲಿದೆ ಎಂಬ ಕಾರಣದಿಂದ ಸಂಬಂಧಿಸಿದ ಭೂ ಮಾಲಕರು ತಮ್ಮ ಜಮೀನು ಪರಭಾರೆ ಮಾಡಲು, ಆಸ್ತಿ ಹಂಚಿಕೆ ಸೇರಿದಂತೆ ಮತ್ತಿತರ ಜಮೀನು ಸಂಬಂಧಿತ ಕೆಲಸ ಕಾರ್ಯ ಮಾಡಿಕೊಳ್ಳಲು ಅಡ್ಡಿಯಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ

Saturday, 7 January 2017

 ಪಾಲಿಕೆ ಗದ್ದುಗೆ ಭಾಗ್ಯ ಯಾರಿಗೆ?  
  ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ನಿಂದ ಶುರುವಾಗಿದೆ ಕಾರ್ಯತಂತ್ರ






ಬಲಾಬಲ ವಿವರ:
 ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ನಗರ ವ್ಯಾಪ್ತಿಯ ಶಾಸಕರು, ವಿಧಾನಪರಿಷತ್ ಸದಸ್ಯರಿಗೂ ಮತದಾನ ಮಾಡುವ ಹಕ್ಕಿದೆ. ಕಾಂಗ್ರೆಸ್‌ನಲ್ಲಿ 12 ಸದಸ್ಯರಿದ್ದು, ತಲಾ ಓರ್ವ ಶಾಸಕ - ವಿಧಾನಪರಿಷತ್ ಸದಸ್ಯರಿದ್ದಾರೆ. ಆದರೆ ಶಾಸಕ ಪ್ರಸನ್ನಕುಮಾರ್ ಪಾಲಿಕೆಯ ಸದಸ್ಯರೂ ಆಗಿರುವುದರಿಂದ ಒಂದೇ ಮತದ ಪರಿಗಣನೆ ಬರಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಬಲ 13 ಆಗಲಿದೆ. 
ಉಳಿದಂತೆ ಬಿಜೆಪಿಯಲ್ಲಿ 11 ಸದಸ್ಯರಿದ್ದಾರೆ. ಓರ್ವ ಸಂಸದ, ಮೂವರು ವಿಧಾನಪರಿಷತ್ ಸದಸ್ಯರಿದ್ದಾರೆ. ಒಟ್ಟಾರೆ ಆ ಪಕ್ಷದ ಬಲ 15 ಆಗಲಿದೆ. ಜೆಡಿಎಸ್‌ನಲ್ಲಿ 5 ಸದಸ್ಯರಿದ್ದು, ಓರ್ವ ಶಾಸಕರಿದ್ದು ಆ ಪಕ್ಷದ ಬಲಾಬಲ ಆರು ಆಗಲಿದೆ. ಉಳಿದಂತೆ ಇತರೆ ಸದಸ್ಯರು ಏಳು ಜನರಿದ್ದಾರೆ. ಒಟ್ಟಾರೆ ಸದಸ್ಯರ ಬಲಾಬಲ 41 ಆಗಲಿದ್ದು, ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಗದ್ದುಗೆಯೇರಲು ಯಾವುದೇ ಪಕ್ಷದ ಮೈತ್ರಿಕೂಟಕ್ಕೆ 21 ಸದಸ್ಯರ ಬಹುಮತ ಬೇಕಾಗುತ್ತದೆ.

ಶಿವಮೊಗ್ಗ,  : ಶಿವಮೊಗ್ಗ ಮಹಾನಗರ ಪಾಲಿಕೆಯ ನಾಲ್ಕನೆಯ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಈಗಾಗಲೇ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿರಿಸಿದೆ. ಹಾಲಿ ಮೇಯರ್ - ಉಪ ಮೇಯರ್ ಅಧಿಕಾರಾವಧಿ ಫೆಬ್ರವರಿ 4 ಕ್ಕೆ ಅಂತ್ಯಗೊಳ್ಳಲಿದ್ದು, ಈ ತಿಂಗಳಾಂತ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ.
ಮೀಸಲಾತಿ ಕಾರಣದಿಂದ ಕಳೆದ ಬಾರಿ ಉಪ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಮಂಗಳಾ ಅಣ್ಣಪ್ಪ ಹೊರತುಪಡಿಸಿ, ಇತರೆ ಪಕ್ಷಗಳಲ್ಲಿ ಆ ವರ್ಗಕ್ಕೆ ಸೇರಿದ ಸದಸ್ಯೆಯರಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳಾ ಅಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.
ಈ ಬಾರಿಯೂ ಕೂಡ ಮೀಸಲಾತಿ ಕಾರಣದಿಂದಲೇ ಉಪ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ. ಪರಿಶಿಷ್ಟ ಪಂಗಡ ಮಹಿಳಾ ವರ್ಗಕ್ಕೆ ಉಪ ಮೇಯರ್ ಸ್ಥಾನ ನಿಗದಿಯಾಗಿದ್ದು, ಬಿಜೆಪಿಯಲ್ಲಿ ಮಾತ್ರ ಈ ವರ್ಗಕ್ಕೆ ಸೇರಿದ ಸದಸ್ಯೆಯಿದ್ದಾರೆ. ಆ ಪಕ್ಷದ ರೂಪಾ ಲಕ್ಷ್ಮಣ್ ಉಪ ಮೇಯರ್ ಆಗುವುದು ನಿಶ್ಚಿತ.
ಈ ಹಿಂದಿನಂತೆ ಈ ಬಾರಿಯೂ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಅಧಿಕಾರ ತನ್ನದಾಗಿಸಿಕೊಳ್ಳಲು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಹಣಾಹಣಿ ಏರ್ಪಡಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ಮೂರು ಪಕ್ಷಗಳು ಸದ್ದಿಲ್ಲದೆ ಕಾರ್ಯತಂತ್ರ ರೂಪಿಸಲಾರಂಭಿಸಿವೆ. ಶತಾಯಗತಾಯ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಪ್ರಯತ್ನ ಪ್ರಾರಂಭಿಸಿವೆ.
ಮೇಯರ್ ಸ್ಥಾನಕ್ಕೆ ಮೀಸಲಿರಿಸಿರುವ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಸದಸ್ಯರು ಮೂರು ಪಕ್ಷಗಳಲ್ಲಿಯೂ ತಲಾ ಓರ್ವರಿರುವುದು ವಿಶೇಷವಾಗಿದೆ. ಕಾಂಗ್ರೆಸ್‌ನಲ್ಲಿ ಹೊಸಮನೆಯ ಲಕ್ಷ್ಮಣ್, ಬಿಜೆಪಿಯಲ್ಲಿ ನಿದಿಗೆಯ ವೆಂಕ್ಯಾ ನಾಯ್ಕ್ ಹಾಗೂ ಜೆಡಿಎಸ್‌ನಲ್ಲಿ ಮಿಳಘಟ್ಟ ವಾರ್ಡಿನ ಕೇಬಲ್ ಬಾಬು ಇದ್ದಾರೆ. ಈ ಮೂವರಲ್ಲಿ ಓರ್ವರು ಮೇಯರ್ ಗದ್ದುಗೆ ಅಲಂಕರಿಸುವುದು ಖಚಿತ.
ಯಾರಿಗೆ ಗದ್ದುಗೆ ಭಾಗ್ಯ:
ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಮೂರು ಅವಧಿಯಿಂದಲೂ ಮೈತ್ರಿ ಆಳ್ವಿಕೆಗೆ ಪಾಲಿಕೆ ಆಡಳಿತ ಸಾಕ್ಷಿಯಾಗಿದೆ. ಸತತ ಮೂರು ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಇತರೆ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದುಕೊಂಡು ಬರುತ್ತಿದೆ. ಆದರೆ ಈ ಬಾರಿ ಮೈತ್ರಿಕೂಟದ ಸ್ನೇಹದ ಓಟ ಮುಂದುವರೆಯಲಿದೆಯೇ ಎನ್ನುವುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ.
ಸತತ ಮೂರು ಬಾರಿ ಮೇಯರ್ ಸ್ಥಾನವು ಕಾಂಗ್ರೆಸ್‌ಗೆ ಲಭಿಸಿದ್ದು, ಈ ಬಾರಿ ತನಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕು ಎಂಬುವುದು ಜೆಡಿಎಸ್ ಪಕ್ಷದ ಒತ್ತಾಯವಾಗಿದೆ. ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ಮೇಯರ್ ಗದ್ದುಗೆಯನ್ನು ಜೆಡಿಎಸ್‌ಗೆ ಕಾಂಗ್ರೆಸ್ ಬಿಟ್ಟು ಕೊಡಬೇಕು. ಕಾಂಗ್ರೆಸ್  ಮುಖಂಡರು ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎನ್ನುವುದು ಜೆಡಿಎಸ್ ಮುಖಂಡರ ವಾದವಾಗಿದೆ.
 ಚುನಾವಣೆ ಇನ್ನೂ ಒಂದು ತಿಂಗಳು ಇರುವುದರಿಂದ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ನಿರ್ಧರಿಸಿದ್ದು, ಕಾದು ನೋಡಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಮೀಸಲಾತಿ ಕಾರಣದಿಂದ ಅನಾಯಾಸವಾಗಿ ಉಪ ಮೇಯರ್ ಗದ್ದುಗೆ ತನ್ನದಾಗಿಸಿಕೊಂಡಿರುವ ಬಿಜೆಪಿಯು ಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಕೂಡ ತನ್ನದಾಗಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.


...............................

’ಓಬವ್ವ ಪಡೆ’ ಸದ್ದು ಮಾಡುತ್ತಿಲ್ಲವೇಕೆ?
 ಮತ್ತೆ ಶುರುವಾಗಿದೆ ಬೀದಿ ಕಾಮಣ್ಣರ ಅಟ್ಟಹಾಸ 


ಒಂದೆರಡು ತಿಂಗಳಿನಿಂದ  ಓಬವ್ವ ಪಡೆ ನಿಸ್ತೇಜವಾಗಿದೆ. ಕಾರ್ಯಚಟುವಟಿಕೆಯ ಮಾಹಿತಿಯೇ ಇಲ್ಲವಾಗಿದೆ. ಇದರ ಮಾಹಿತಿ ಅರಿತಿರುವ ಬೀದಿ ಕಾಮಣ್ಣರು ಮತ್ತೆ ತಮ್ಮ ವಿಕೃತ ಆಟಗಳನ್ನು ಶುರು ಮಾಡಲಾರಂಭಿಸಿದ್ದಾರೆ. ಯುವತಿಯರು, ಮಹಿಳೆಯರನ್ನು ಕಾಡಲಾರಂಭಿಸಿದ್ದಾರೆ.  ನಗರದ ಪ್ರಮುಖ ಬಸ್ ನಿಲ್ದಾಣ, ವಿವಿಧ ಬಸ್ ಸ್ಟಾಪ್, ಶಾಲಾ-ಕಾಲೇಜುಗಳ ರಸ್ತೆ, ಜನನಿಬಿಡ ಸ್ಥಳಗಳಲ್ಲಿ ಕೆಲ ಪುಂಡ-ಪೋಕರಿಗಳು ಯುವತಿಯರು-ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುತ್ತಿರುವುದು ಇತ್ತೀಚಿಗೆ ಕಂಡುಬರುತ್ತಿದೆ. ಬೀದಿ ಕಾಮಣ್ಣರ ಕಿರುಕುಳವನ್ನು ಬಹಿರಂಗವಾಗಿ ಹೇಳಲಾಗದೆ ಕೆಲ ಯುವತಿಯರು ತೀವ್ರ ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ.

ಶಿವಮೊಗ್ಗ,  : ಮೊನ್ನೆ ಹೊಸ ವರ್ಷಾಚರಣೆಯ ವೇಳೆ ಬೆಂಗಳೂರಿನಲ್ಲಿ ಬೀದಿ ಕಾಮಣ್ಣರು ಯುವತಿಯರು, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ನಂತರ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಯಾಗುತ್ತಿದೆ. ವಿಶೇಷ ಪೊಲೀಸ್ ಪಡೆ ಅಸ್ತಿತ್ವಕ್ಕೆ ತರುವ ಚರ್ಚೆಗಳು ಸರ್ಕಾರದ ಮಟ್ಟದಲ್ಲಿ ನಡೆಯಲಾರಂಭಿಸಿದೆ.  ಬೀದಿ ಕಾಮಣ್ಣರ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಓಬವ್ವ ಪಡೆಯನ್ನು ರಚನೆ ಮಾಡಿದ್ದರು. ಪೊಲೀಸ್ ಇಲಾಖೆಯ ಈ ಕ್ರಮವು ಇಡೀ ರಾಜ್ಯದ ಗಮನ ಸೆಳೆದಿತ್ತು. ವಿಶೇಷವಾಗಿ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದರ ಜನಪ್ರಿಯತೆ ಗಮನಿಸಿ, ಕೆಲವು ಜಿಲ್ಲೆಗಳಲ್ಲಿಯೂ ಬೀದಿ ಕಾಮಣ್ಣರಿಗೆ ತಕ್ಕ ಶಾಸ್ತಿ ಮಾಡಲು ಪ್ರತ್ಯೇಕ ಪೊಲೀಸ್ ಪಡೆಗಳನ್ನು ಸ್ಥಳೀಯ ಪೊಲೀಸ್ ಇಲಾಖೆಗಳು ಆರಂಭಿಸಿದ್ದವು. ಈ ಪಡೆಗಳು ಬೀದಿ ಕಾಮಣ್ಣರಿಗೆ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದ್ದವು. ಅದರಲ್ಲಿಯೂ ಶಿವಮೊಗ್ಗ ನಗರದಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದ ’ಓಬವ್ವ ಪಡೆ’ಯಂತೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು.
ಈ ಪಡೆಯ ಪೊಲೀಸರು ನಗರದ ವಿವಿಧ ರಸ್ತೆ, ಶಾಲಾ - ಕಾಲೇಜು, ಬಸ್ ನಿಲ್ದಾಣ, ಸಿಟಿ ಬಸ್‌ಗಳಲ್ಲಿ ಮಫ್ತಿ ಬಟ್ಟೆಯಲ್ಲಿ ಬೀಡುಬಿಟ್ಟು ಬೀದಿ ಕಾಮಣ್ಣರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿತ್ತು. ಸುಮಾರು 60 ಕ್ಕೂ ಅಧಿಕ ಬೀದಿ ಕಾಮಣ್ಣರನ್ನು ಈ ತಂಡ ವಶಕ್ಕೆ ಪಡೆದಿತ್ತು. ಇದರಿಂದ ಬೀದಿ ಕಾಮಣ್ಣರು ತಮ್ಮ ವಿಕೃತ ಆಟಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಹಾಕಿದ್ದರು. ಯುವತಿಯರು, ಮಹಿಳೆಯರು ಕೂಡ ಶಿವಮೊಗ್ಗ ನಗರದ ರಸ್ತೆಗಳಲ್ಲಿ ನೆಮ್ಮದಿಯಾಗಿ ಓಡಾಡುವಂತಾಗಿತ್ತು.
 ಪೊಲೀಸರು ಪುಂಡರನ್ನು ಈಗ ಹಿಡಿದು ಕೊಂಡೊಯ್ಯುತ್ತಿಲ್ಲ. ಮತ್ತೆ ಬೀದಿ ಕಾಮಣ್ಣರು ಹಿಂದಿನ ಕಿಡಿಗೇಡಿ ಕೃತ್ಯಗಳನ್ನು ಪುನಾರಾರಂಭಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಈ ಪಡೆಗೆ ಮತ್ತೆ ಶಕ್ತಿ ತುಂಬಬೇಕಿದೆ. ಇದರ ಎಸ್ ಐ ಆಗಿದ್ದ ಅನಿತಾ ಅವರು ಪಡೆಯಿಂದ ವರ್ಗಾವಣೆಗೊಂಡಿದ್ದಾರೆ. ನೂತನ ಎಸ್‌ಐನ್ನು ಪಡೆಗೆ ನೇಮಿಸುವ ಮೂಲಕ  ಪುಂಡಪೋಕರಿಗಳಿಗೆ ಬುದ್ಧಿ ಕಲಿಸುವ ಕೆಲಸವಾಗಬೇಕಿದೆ.
ವಿಶೇಷವಾಗಿ ಓ. ಟಿ. ರಸ್ತೆಯಲ್ಲಿ ನಡೆದುಕೊಂಡು ಹೋಗುವ ವಿದ್ಯಾರ್ಥಿನಿಯರನ್ನು ಕೆಲವು ಪುಂಡರು ಕಿಚಾಯಿಸುತ್ತಾರೆ. ಅವರ ಹಿಂದೆಯೇ ಹೋಗುವುದು, ಅವರಿಗಾಗಿ ಅಂಗಡಿ ಎದುರು ಕಾದು ನಿಲ್ಲುವುದು, ಅವರನ್ನು ಬಲವಂತದಿಂದ ಮಾತನಾಡಲು ಯತ್ನಿಸುವುದು ಕಂಡುಬರುತ್ತಿದೆ. ನೆಹರು ರಸ್ತೆ ಬಸ್ ಸ್ಟಾಪ್‌ನಲ್ಲೂ ಇವರ ಕಾಟ ಮಿತಿಮೀರಿದೆ. ಇಲ್ಲಿಸ ಸದಾ ಬಸ್‌ಗಾಗಿ ಕಾಯುವವರಿರುತ್ತಾರೆ. ಆದರೂ ಧೈರ್ಯದಿಂದ ಅವರ ಪಕ್ಕಕ್ಕೆ ಕುಳಿತು ಚುಡಾಯಿಸುತ್ತಾರೆ.  ಕೆಲವು ಯುವತಿಯರು ಇವರಿಗೆ ಸಾಥ್ ಕೊಡುತ್ತಾ ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲಿನ ಕುರ್ಚಿಯ ಮೇಲೆ ಕಾಲಿಡುವುದು, ಪ್ರಯಾಣಿಕರಿಗೆ ಖುರ್ಚಿ ಕೊಡದೆ ಕುಳಿತು ಹರಟುವುದು ಮಾಮೂಲಾಗಿದೆ.
ಈ ಹಿನ್ನೆಲೆಯಲ್ಲಿ ಓಬವ್ವ ಪಡೆ ಸಕ್ರಿಯಗೊಳಿಸಬೇಕಿದೆ. ಈ ಪಡೆಗೆ ಪ್ರತ್ಯೇಕ ಸಿಬ್ಬಂದಿ, ವಾಹನದ ವ್ಯವಸ್ಥೆ ಮಾಡಬೇಕು. ವರ್ಷದ ಎಲ್ಲ ದಿನಗಳಂದು ಈ ಪಡೆ ಕಾರ್ಯನಿರ್ವಹಣೆ ಮಾಡುವಂತಹ ವ್ಯವಸ್ಥೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್.ಪಿ.ಯವರು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಈ ಪಡೆಯಿದ್ದರೆ ಯುವತಿಯರು, ವಿದ್ಯಾರ್ಥಿನಿಯರು, ಮಹಿಳೆಯರು ನಗರದ ರಸ್ತೆಗಳಲ್ಲಿ ನೆಮ್ಮದಿಯಿಂದ ಓಡಾಡುವಂತಾಗುತ್ತದೆ.


-----------------------------------------------

Friday, 6 January 2017


 ನೆನೆಗುದಿಗೆ ಬಿದ್ದ ಪ್ರಮುಖ ರಸ್ತೆಗಳ ಅಗಲೀಕರಣ ಎಂದು?


  ’ಶಿವಮೊಗ್ಗ ನಗರವು ಕೇಂದ್ರ ಸರ್ಕಾರದ ಪ್ರತಿಷ್ಠಿತ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿದೆ. ಆದರೆ ನಗರದ ಸದ್ಯದ ಟ್ರಾಫಿಕ್ ಸ್ಥಿತಿಗತಿ ಗಮನಿಸಿದರೆ ಇನ್ಯಾವ ರೀತಿಯಲ್ಲಿ ಸ್ಮಾರ್ಟ್ ಸಿಟಿಯಾಗಿ ನಗರ ಅಭಿವೃದ್ದಿಗೊಳ್ಳಲಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ನಿಜವಾಗಿಯೂ ನಗರವನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಇಚ್ಛಾಶಕ್ತಿ ಆಡಳಿತಗಾರರಿಗಿದ್ದರೆ ಮೊದಲು ಜನಸಂಖ್ಯೆ - ವಾಹನಗಳಿಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸುವುದರತ್ತ ಗಮನಹರಿಸಬೇಕು. ಭವಿಷ್ಯದ ಜನಸಂಖ್ಯೆ, ವಾಹನಗಳಿಗೆ ಅನುಗುಣವಾಗಿ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಲಿ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬದಿಗಿಟ್ಟು ನಗರದ ಸರ್ವಾಂಗೀಣ ಅಭಿವೃದ್ದಿಯತ್ತ ಜನನಾಯಕರು ಗಮನಹರಿಸಬೇಕು. ವ್ಯವಸ್ಥಿತವಾಗಿ ನಗರದ ಬೆಳವಣಿಗೆಗೆ ಗಮನಹರಿಸಬೇಕು.


ಶಿವಮೊಗ್ಗ, ಜ. 3: ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೆಥಿ ಹಂತದ ನಗರಗಳಲ್ಲಿ ಶಿವಮೊಗ್ಗವೂ ಕೂಡ ಒಂದಾಗಿದೆ. ನಗರದ ಜನಸಂಖ್ಯೆ, ವಾಹನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ದಿಯಾಗುತ್ತಿಲ್ಲ. ಅದರಲ್ಲಿಯೂ ವಿಶೇಷವಾಗಿ ರಸ್ತೆಗಳ ವಿಷಯದಲ್ಲಂತೂ ನಗರದ ಸ್ಥಿತಿ ಶೋಚನೀಯವಾಗಿದ್ದು, ಇದರಿಂದ ದಿನದಿಂದ ದಿನಕ್ಕೆ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯೇ ಅಸಾಧ್ಯವೆನ್ನುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.
ನಗರದ ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ, ಕೆಲ ಪ್ರಮುಖ ರಸ್ತೆಗಳ ಅಭಿವೃದ್ದಿಗೆ ಕಳೆದ ಹಲವು ವರ್ಷಗಳ ಹಿಂದೆಯೇ ಜಿಲ್ಲಾಡಳಿತ ರೂಪುರೇಷೆ ಸಿದ್ದಪಡಿಸಿತ್ತು. ಕೆಲ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವುದರ ಜೊತೆಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳ ಅಸಹಕಾರ, ಅನುದಾನದ ಕೊರತೆ, ರಾಜಕೀಯ ಮೇಲಾಟ ಮತ್ತೀತರ ಕಾರಣಗಳಿಂದ ಅಭಿವೃದ್ದಿ ಪ್ರಸ್ತಾಪ ಅಕ್ಷರಶಃ ನೆನೆಗುದಿಗೆ ಬೀಳುವಂತಾಗಿದೆ.
ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನಗಳಿರಲಿ ಜನ ಕೂಡ ಓಡಾಡಲು ಸಾಧ್ಯವಾಗದ ಮಟ್ಟಕ್ಕಿವೆ. ಮತ್ತೆ ಕೆಲ ರಸ್ತೆಗಳಲ್ಲಿ ವಾಹನ ದಟ್ಟಣೆ ವಿಪರೀತ ಮಟ್ಟಕ್ಕೆ ತಲುಪಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇನ್ನೂ ಕೆಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲವಾಗಿವೆ. ಇದರಿಂದ ನಾಗರೀಕರು ರಸ್ತೆಯ ಮೇಲೆಯೇ ಓಡಾಡುವಂತಹ ದುಃಸ್ಥಿತಿಯಿದೆ.
 ಮಹಾನಗರ ಪಾಲಿಕೆ ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಸಂಬಂಧಿಸಿದ ಇಲಾಖೆಗಳು ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆ ಗಮನಹರಿಸುವ ಗೋಜಿಗೆ ಹೋಗುತ್ತಿಲ್ಲ. ಮತ್ತೊಂದೆಡೆ, ಎಲ್ಲಿ ನಾಗರಿಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಯೋ ಎಂಬ ಕಾರಣದಿಂದ ಜನಪ್ರತಿನಿಧಿಗಳೂ ಕೂಡ ರಸ್ತೆ ಅಗಲೀಕರಣದ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಇದರಿಂದ ನಗರದ ಅದೆಷ್ಟೋ ರಸ್ತೆಗಳು ಇಂದಿಗೂ 20 - 3.0 ವರ್ಷಗಳ ಹಿಂದೆ ಹೇಗಿದ್ದವೋ ಈಗಲೂ ಅದೇ ಸ್ಥಿತಿಯಲ್ಲಿವೆ. ಆಗಾಗ ಡಾಂಬರು, ತೇಪೆ ಹಾಕುವ ಕೆಲಸವನ್ನಷ್ಟೇ ಮಾಡಲಾಗುತ್ತಿದೆ.
  ಕಳೆದ ವರ್ಷ ನಗರದ ಪ್ರಮುಖ ರಸ್ತೆಗಳಲ್ಲೊಂದಾದ, ಅತ್ಯಧಿಕ ಜನ-ವಾಹನ ದಟ್ಟಣೆಯಿರುವ ಕುವೆಂಪು ರಸ್ತೆಯ ಅಗಲೀಕರಣಗೊಳಿಸಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಪಿಡಬ್ಲ್ಯೂಡಿ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಭೂ ಸ್ವಾದೀನ ಪ್ರಕ್ರಿಯೆ, ರಸ್ತೆ ಅಭಿವೃದ್ದಿಗೆ ಸರಿಸುಮಾರು 80 ಕೋಟಿ ರೂ. ಅನುದಾನ ಕೋರಲಾಗಿತ್ತು.  ಆದರೆ ಇಲ್ಲಿವರೆಗೂ ಈ ರಸ್ತೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಗುವುದಿರಲಿ, ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ.
  ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ, ’ಈ ರಸ್ತೆ ನಮ್ಮ ಇಲಾಖೆಗೆ ಸೇರಿದ್ದಲ್ಲ. ಆದರೆ ಈ ರಸ್ತೆಯನ್ನು ತಮ್ಮ ಇಲಾಖೆಯ ಮೂಲಕ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ನಡೆಸಲು  ಪಾಲಿಕೆ ಆಡಳಿತ ನಿರ್ಧರಿಸಿತ್ತು. ಈ ರಸ್ತೆಯಲ್ಲಿ ತೆರವಾಗುವ ಕಟ್ಟಡಗಳ ಮಾಹಿತಿ, ಭೂ ಸ್ವಾಧೀನಕ್ಕೆ ಅಗತ್ಯವಾದ ಅನುದಾನ, ದ್ವಿ ಪಥ ಮಾರ್ಗ ನಿರ್ಮಾಣಕ್ಕೆ ತಗಲುವ ವೆಚ್ಚದ ಬಗ್ಗೆ ವರದಿ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ರಸ್ತೆ ಅಭಿವೃದ್ದಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದಂತೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳುತ್ತಾರೆ.
ಆದರೆ ಕಿರಿದಾಗಿರುವ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಸಾಧ್ಯ ಎಂಬಂತಾಗಿದೆ. ಪಾದಚಾರಿ ಮಾರ್ಗವಂತೂ ಇಲ್ಲವಾಗಿದ್ದು, ರಸ್ತೆಯೇ ಮೇಲೆಯೇ ಜನರು ಓಡಾಡುವಂತಾಗಿದೆ. ಹಲವೆಡೆ ರಸ್ತೆಯ ಜಾಗ ಒತ್ತುವರಿ ಮಾಡಿಕೊಂಡು ಬೃಹದಾಕಾರದ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ರಸ್ತೆ ಅಗಲೀಕರಣ ಮಾಡುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಈ ಪ್ರಕ್ರಿಯೆ ನಡೆಸಿಲ್ಲ.
ಗಮನಹರಿಸಲಿ:
 ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆ ಗಮನಹರಿಸಬೇಕಾಗಿದೆ. ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ, ಸರ್ಕಾರದಿಂದ ಸೂಕ್ತ ಅನುದಾನ ದೊರಕಿಸಿ ಕೊಡಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ನಗರದ ಹಲವು ರಸ್ತೆಗಳಲ್ಲಿ ವಾಹನಗಳಿರಲಿ, ಜನರೇ ಓಡಾಡಲು ತೊಂದರೆ ಪಡುವಂತಹ ಸ್ಥಿತಿ ಸೃಷ್ಟಿಯಾಗಲಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.


  ಪೊನ್ನುರಾಜ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ನಗರದ ಕುವೆಂಪು ರಸ್ತೆ, ಎನ್.ಟಿ.ರಸ್ತೆ, ದುರ್ಗಿಗುಡಿ ರಸ್ತೆ, ಜೈಲ್ ರಸ್ತೆ, ಸವಾರ್‌ಲೈನ್ ರಸ್ತೆ ಸೇರಿದಂತೆ ಅತ್ಯದಿಕ ಜನ-ವಾಹನ ಸಂಚಾರವಿದ್ದ ಏಳೆಂಟು ರಸ್ತೆ ಹಾಗೂ ಪ್ರಮುಖ ವೃತ್ತಗಳನ್ನು ಅಗಲೀಕರಣಗೊಳಿಸಿ, ಅಭಿವೃದ್ದಿಗೊಳಿಸುವ ಯೋಜನೆ ಸಿದ್ದಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಿದ್ದರು. ಡಿ.ಸಿ.ಯವರ ಪ್ರಸ್ತಾಪಕ್ಕೆ ಕೆಲವು ರಾಜಕಾರಣಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.  ನಂತರ ವಿ. ಪೊನ್ನುರಾಜ್ ಅವರನ್ನೂ ಕೂಡ ಶಿವಮೊಗ್ಗದಿಂದ ಎತ್ತಂಗಡಿ ಮಾಡಲಾಗಿತ್ತು.  
-----------------------------------------------

ಜೀವಹಾನಿಯಾಗುತ್ತಿದ್ದರೂ ಹೋರಿ ಸ್ಪರ್ಧೆಗೆ ಇಲ್ಲ ತಡೆ

 ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ನಡೆಯುವ ಅನಾಹುತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಾಗಿದೆ. ಏಕೆಂದರೆ, ಈ ವರ್ಷ ಮೂವರು ಬಲಿ: 15ಕ್ಕೂ ಹೆಚ್ಚು ಜನರಿಗೆ ಇರಿತದಿಂದ ಗಾಯಗೊಂಡಿದ್ದಾರೆ. ಈ ಹಿಂದೆ ಜಿಲ್ಲಾಡಳಿತ ಸ್ಪರ್ಧೆ ಆಯೋಜಿಸುವವರಿಗೆ ವಿಧಿಸಿದ್ದ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಾಗಿದೆ. ನಿಯಮ ಪಾಲನೆ ಮಾಡದವರ ವಿರುದ್ದ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಬೇಕಿದೆ. 


ಶಿವಮೊಗ್ಗ ಜಿಲ್ಲೆಯಲ್ಲಿ  ಹೋರಿ ಬೆದರಿಸುವ ಸ್ಪರ್ಧೆಯ ಕ್ರೇಜ್ ಹೆಚ್ಚುತ್ತಿದೆ. ಇದರೊಟ್ಟಿಗೆ ಅಲ್ಲಿ ಸಾವು-ನೋವು ಸಹ ಸಂಭವಿಸುತ್ತಿದೆ. ಇದು ಜಾನಪದರಿಂದ ಬೆಳೆದುಬಂದಿದ್ದರೂ  ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ. ಹಾಗಾಗಿ ನಿಷೇಧಿಸಬೇಕೆಂಬ ಕೂಗೆದ್ದಿದೆ. ಆದರೆ ಇನ್ನೂ ಅಧಿಕೃತವಾಗಿ ನಿಷೇಧಿಸಿಲ್ಲ. ಆದ್ದರಿಂದ ಈ ಕ್ರೀಡೆ ನಡೆಸುವವರು  ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ.
ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎರಡು ಸಂದರ್ದಲ್ಲಿ ನಡೆಯುತ್ತದೆ. ದೀಪಾವಳಿ ಹಬ್ಬದ ನಂತರ ಜಿಲ್ಲೆಯ ವಿವಿಧೆಡೆ ಇದನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತದೆ.  ಎರಡನೆಯ ಬಾರಿ ಸಂಕ್ರಾಂತಿ ಹಬ್ಬದ ಸುತ್ತಮುತ್ತ ನಡೆಯುತ್ತದೆ. ಇದನ್ನು ಎರಡನೆಯ ಹಟ್ಟಿಹಬ್ಬ ಎಂದು ಕರೆಯಲಾಗುತ್ತದೆ. ಹೋರಿ ಬೆದರಿಸುವ ಸ್ಪರ್ಧೆಗಳು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಪ್ರಮಾಣ ಏರಿಕೆಯಾಗುತ್ತಿದೆ.  ಇಷ್ಟೇ ಏಕೆ, ಇದರ ಬಹುಮಾನವಾಗಿ ಕಾರು, ಬೈಕುಗಳನ್ನು ನೀಡಲಾಗುತ್ತದೆ.
ಇದರಿಂದ ಈ ಸ್ಪರ್ಧೆ ಅಂತರ್‌ಜಿಲ್ಲಾ ಮಟ್ಟದಲ್ಲಿ ನಡೆಯಲಾರಂಭಿಸಿದೆ. ಶಿವಮೊಗ್ಗ ಗ್ರಾಮಾಂತರ, ಸೊರಬ, ಶಿಕಾರಿಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಅಕ್ಕಪಕ್ಕದ ಹಾವೇರಿ, ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಹೋರಿಗಳನ್ನು ಸ್ಪರ್ಧೆಗೆ ತರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ರಂಗೇರುತ್ತಿದೆ.
ಕಳೆದ ದೀಪಾವಳಿಯಿಂದೀಚೆ ಮೂವರು ಈ ಕ್ರೀಡೆಗೆ ಬಲಿಯಾಗಿದ್ದಾರೆ  ಶಿಕಾರಿಪುರದ ಚುರ್ಚುಗುಂಡಿಯಲ್ಲಿ ಹೋರಿಯಡಿ ವ್ಯಕ್ತಿಯೊಬ್ಬ ಸಿಲುಕಿ ಗಾಯಗೊಂಡ ಘಟನೆ ಸಹ ಸಂಭವಿಸಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಹಾರ‌್ನಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಐದರಿಂದ ಆರು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಓರ್ವ ಮೃತಪಟ್ಟು, ಐದಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಜನವರಿ 2ರಂದು ಆನವಟ್ಟಿ ಸಮೀಪದ ತತ್ತೂರಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಯುವಕ ಪ್ರಾಣ ತೆತ್ತಿದ್ದಾರೆ.  9 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೆಲವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕ್ರೀಡೆ ಆಯೋಜಿಸುವವರಿಗೆ ಪೊಲೀಸ್ ಇಲಾಖೆ ಅನುಮತಿ ಕೊಡುತ್ತಿಲ್ಲ. ಆದ್ದರಿಂದ ಹೇಳಕೇಳದೆಯೇ ಕ್ರೀಡೆ ನಡೆಸುತ್ತಾರೆ. ಪೊಲೀಸರು ನೋಟೀಸ್ ನೀಡಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ತತ್ತೂರು ಘಟನೆಯೇ ಇದಕ್ಕೆ ಸಾಕ್ಷಿ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು  ಆಯೋಜಕರು ಕೈಗೊಳ್ಳುತ್ತಿಲ್ಲ.
ಅನುಮತಿ ಕಡ್ಡಾಯ:
ಇತ್ತೀಚಿನ ವರ್ಷಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಹಾಗೂ ಸಾವು-ನೋವುಗಳು ಹೆಚ್ಚುತ್ತಿರುವುದನ್ನು ಮನಗಂಡಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು, ಸ್ಪರ್ಧೆ ಆಯೋಜನೆ ಮಾಡುವವರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ಆದೇಶಿಸಿತ್ತು. ಹಾಗೆಯೇ ಅನಾಹುತಕ್ಕೆ ಆಸ್ಪದವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡುವಂತೆ ಆಯೋಜಕರಿಗೆ ಸೂಚಿಸಿತ್ತು. ಸ್ಪರ್ಧೆಗಳ ಬಗ್ಗೆ ಗಮನಹರಿಸುವಂತೆ ತಾಲೂಕು ಆಡಳಿತಗಳಿಗೂ ನಿರ್ದೇಶನ ನೀಡಲಾಗಿತ್ತು. ಮತ್ತೊಂದೆಡೆ, ಸ್ಥಳೀಯ ಪೊಲೀಸರಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಅನುಮತಿ ಪಡೆಯದೆ ಆಯೋಜಿಸುವ ಸ್ಪರ್ಧೆಗಳನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಎಲ್ಲಿ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆಯೋ ಎಂಬ ಆತಂಕದಿಂದ ಸುಮ್ಮನಾಗುತ್ತಿದ್ದಾರೆ.
ತಾವು ಹಲವು ದಶಕಗಳಿಂದ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದೇವೆ. ಈಗೇಕೆ ಪೊಲೀಸರ ಅನುಮತಿ ಪಡೆದುಕೊಳ್ಳಬೇಕು ಎನ್ನುವುದು ಆಯೋಜಕರ ಪ್ರಶ್ನೆ.
ನಿಷೇಧಿಸಲಿ:
ಹೋರಿಗಳು ಓಡುವಾಗ ಗಾಬರಿಯಿಂದ ಜನರ ಮೈಮೇಲೆ ನುಗ್ಗುವುದರಿಂದ ಸರ್ವೇಸಾಮಾನ್ಯವಾಗಿ ನೂಕುನುಗ್ಗಲು, ಕಾಲ್ತುಳಿತ, ಸಾವು ಉಂಟಾಗುತ್ತದೆ. ಸಾವು-ನೋವುಗಳು ಸಂಭವಿಸುತ್ತ್ತಿವೆ. ಇನ್ನೂ ಎಷ್ಟು ಸಾವು ಸಂಭವಿಸಬೇಕು ಇದನ್ನು ನಿಲ್ಲಿಸಲು? ಈ ಹಿನ್ನೆಲೆಯಲ್ಲಿ ಆಯೋಜಕರಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗುತ್ತದೆ. ಇದು ಅನಿವಾರ್ಯ ಕೂಡ.
ಜನರ ಜೀವದ ಜೊತೆ ಆಡುವ ಇಂತಹ ಸ್ಪರ್ಧೆ ನಿಷೇಧವಾಗಬೇಕಿದೆ. ಆಯೋಜಕರಿಗೆ ಯಾವ ಕಾರಣಕ್ಕೂ ಸ್ಪರ್ಧೆ ನಡೆಸದಂತೆ ಸೂಚಿಸಬೇಕು. ಜಿಲ್ಲೆಯ ಮಟ್ಟಿಗೆ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಪ್ರತಿ ವರ್ಷ ಅಮಾಯಕರು ಇದಕ್ಕೆ ಬಲಿಯಾಗುತ್ತಿರುವುದರಿಂದ ನಿಲ್ಲಿಸುವತ್ತ ಕ್ರಮ ಜರುಗಿಸಲೇಬೇಕಿದೆ.

ಬಾಕ್ಸ್
ಎಷ್ಟೋ ಕಡೆ ಸ್ಪರ್ಧೆ ಆಯೋಜಕರು ಅನುಮತಿ ಪಡೆಯುವುದಿರಲಿ, ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಕೂಡ ಮಾಡುತ್ತಿಲ್ಲವೆಂಬ ಮಾಹಿತಿ ಸ್ವತಃ ಅಧಿಕಾರಿಗಳ ವಲಯದಿಂದಲೇ ಕೇಳಿಬರುತ್ತ್ತಿದೆ. ಕೆಲವೊಮ್ಮೆ ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಲತಲಾಂತರದಿಂದ ಸ್ಪರ್ಧೆ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈಗೇಕೆ ಅನುಮತಿ ಪಡೆಯಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ.  ಅನುಮತಿ  ಕುರಿತಂತೆ ತಹಶೀಲ್ದಾರ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿ, ಸ್ಪರ್ಧೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳ ಪಾಲನೆ ಮಾಡುವಂತೆಯೂ ಜಿಲ್ಲಾಡಳಿತ ಆದೇಶಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದೆ. ಆದರೂ ಇದು ಪಾಲನೆಯಾಗುತ್ತಿಲ್ಲ. ನಿಯಮ ಪಾಲನೆ ಮಾಡುವಂತೆ ಆಯೋಜಕರ ಮನವೊಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಕಿರಿಕಿರಿಯಾಗಿ ಪರಿಣಮಿಸುತ್ತಿದೆ ಎನ್ನುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು.
---------------------------------------------
ಜೀವಬಲಿಗಾಗಿ ಕಾದಿವೆ ಕೆರೆ ಏರಿ ರಸ್ತೆಗಳು







ನಮ್ಮ ಇಂದಿನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಬೇಕಾದರೂ ಅದಕ್ಕೆ ಒಂದಿಷ್ಟು ಸಾವು-ನೋವುಗಳು ಸಂಭವಿಸಬೇಕು. ನಾಗರಿಕರು ಬೀದಿಗಿಳಿದು ಹೋರಾಟ ನಡೆಸಬೇಕು. ಇಲ್ಲವೇ ನ್ಯಾಯಾಲಯಗಳು ನಿರ್ದೇಶನ ನೀಡಬೇಕು. ಆಗ ಮಾತ್ರ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತಹ ಸ್ಥಿತಿ ನೆಲೆಸಿದೆ. ಇಲ್ಲದಿದ್ದರೆ ನಮ್ಮ ಕಣ್ಮುಂದೆಯೇ ಅವ್ಯವಸ್ಥೆ ರಾರಾಜಿಸುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುವ ಗೋಜಿಗೆ ಆಡಳಿತ ವ್ಯವಸ್ಥೆ ಹೋಗುತ್ತಿಲ್ಲ. ಇದಕ್ಕೆ ಇಚ್ಛಾಶಕ್ತಿಯ ಕೊರತೆ ಎನ್ನಬೇಕೋ, ಬೇಜವಾಬ್ದಾರಿತನ ಎನ್ನಬೇಕೋ ತಿಳಿಯುತ್ತಿಲ್ಲ.

ಇತ್ತೀಚೆಗೆ ಶಿವಮೊಗ್ಗ-ಹೊನ್ನಾಳಿ ರಸ್ತೆಯ ಗೊಂಧಿಚಟ್ನಳ್ಳಿ ಗ್ರಾಮದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ವೊಂದು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿತ್ತು. ಕೆರೆಯಲ್ಲಿ ನೀರು ತುಂಬಿರದಿದ್ದ ಕಾರಣ ಪ್ರಯಾಣಿಕರೆಲ್ಲ ಅಪಾಯದಿಂ ಪಾರಾಗಿದ್ದರು. ಜ. 4ರಂದು ನಗರದ ಹೊರವಲಯ ಪುರಲೆ ಗ್ರಾಮದ ಬಳಿ ಕಾರೊಂದು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದೆ. ಇಲ್ಲೂ ಕೂಡ ಕೆರೆಯಲ್ಲಿ ನೀರಿನ ಸಂಗ್ರಹ ಸಾಕಷ್ಟು ಕಡಿಮೆಯಿತ್ತು. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಈ ಕೆರೆಯಲ್ಲಿ ವರ್ಷಕ್ಕೆರಡಾದರೂ ಇಂತಹ ಘಟನೆ ಸಂಭವಿಸುತ್ತಲೇ ಇರುತ್ತದೆ.
ಇವು ಎರಡು ಉದಾಹರಣೆಯಷ್ಟೆ. ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಕೆರೆಗಳಿವೆ. ಯಾವ ಕೆರೆಗೂ ಸುರಕ್ಷಿತ ತಡೆಗೋಡೆಗಳಿಲ್ಲ. ಈ ಕೆರೆ ದಂಡೆಗಳ ಮೇಲೆಯೇ  ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಅಥವಾ ಗ್ರಾಮದ ಮುಖ್ಯ ರಸ್ತೆ ಇದೆ. ಆದರೆ ಇವುಗಳಿಗೆ ಸುರಕ್ಷಿತ ತಡೆಗೋಡೆಗಳಿಲ್ಲ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಹಲವು ಜನರು ಪ್ರಾಣ ಕಳೆದುಕೊಂಡಿದ್ದರೂ, ಬಿದ್ದೆದ್ದಿದ್ದರೂ ಸಂಬಂಧಿತ ಅಧಿಕಾರಿಗಳು ಇನ್ನೂ ಎಚ್ಚೆತ್ತಿಲ್ಲ.
ಶಿವಮೊಗ್ಗ ನಗರದೊಳಗೆ ನವುಲೆ ಕೆರೆ ಇದೆ. ಅಲ್ಲಿಯೂ ಯಾವುದೇ ತಡೆಗೋಡೆ ಇಲ್ಲ. ಇದರಂತೆ ಸಾಗರ ಮತ್ತು ಸೊರಬ ತಾಲೂಕಿನ ಅರ್ಧದಷ್ಟು ರಸ್ತಗೆಳು ಕೆರೆ ದಂಡೆಯಲ್ಲೇ ಇವೆ. ಏನಾದರೂ ಅನಾಹುತವಾಗಿ  ಜೀವಹಾನಿಯಾದಾಗ ಮಾತ್ರ  ಅಥವಾ  ದೊಡ್ಡ ಅನಾಹುತ ಸಂಭವಿಸಿದ ನಂತರವಷ್ಟೆ ಇಲಾಖೆಯವರು ಎಚ್ಚೆತ್ತುಕೊಳ್ಳಲು ಕಾದು ಕುಳಿತಿರುವಂತೆ ಭಾಸವಾಗುತ್ತಿದೆ. ಸಂಬಂಧಿಸಿದವರ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದರೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದ್ದು, ಅಮಾಯಕರು ಸಾವು-ನೋವಿಗೆ ತುತ್ತಾಗುವುದು ನಿಶ್ಚಿತ.
ಮೊನ್ನೆ ಸಂಭವಿಸಿದ ಎರಡು ಅನಾಹುತಗಳು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಬಹುತೇಕ ಸ್ಥಳಗಳು ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿವೆ.  ಚಾಲನೆಯಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ ವಾಹನಗಳು ನೇರವಾಗಿ ಕೆರೆಗೆ ಧುಮುಕುವಂತಹ ಸ್ಥಿತಿಯಲ್ಲಿವೆ. ಇಂತಹ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ, ತಡೆಗೋಡೆ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಆಗುತ್ತಿಲ್ಲ. ಇದಕ್ಕೆ ಅನುದಾನದ ಕೊರತೆಯ ನೆಪವೊಡ್ಡುತ್ತವೆ.  ಹಾಗಾದರೆ ಅಪಾಯ ಸಂಭವಿಸಿ ಅಮಾಯಕರು ಬಲಿಯಾಗಬೇಕೇ, ಸರ್ಕಾರಗಳೇಕೆ ಇಂತಹ ಕೆರೆ ಏರಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ.
 ರಸ್ತೆಯಂಚಿನಿಂದ ಕೆರೆಗಳಿಗೆ ವಾಹನಗಳು ಉರುಳಿ ಬಿದ್ದು ಅಮಾಯಕರ ಸಾವು-ನೋವುಗಳು ಸಂಭವಿಸಿದಾಗ ಅಧಿಕಾರಸ್ಥರು ರಾಜ್ಯದಲ್ಲಿರುವ ಅಪಾಯಕಾರಿ ಕೆರೆ ಏರಿ ರಸ್ತೆಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ಕೆರೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ರಸ್ತೆಗಳ ವಿಸ್ತರಣೆ ಮಾಡಲಾಗುವುದು. ಸೂಚನಾ ಫಲಕ ಅಳವಡಿಸಲಾಗುವುದು ಸೇರಿದಂತೆ ಅನಾಹುತಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಲಾಗುವುದು ಎಂಬ ಭರವಸೆ ನೀಡುತ್ತಾರೆ. ಆದರೆ ಕ್ರಮೇಣ ಈ ಭರವಸೆಗಳು ಮರೆಯಾಗುತ್ತವೆ. ಮತ್ತೆ ಎಲ್ಲೋ ಕೆರೆಗಳಿಗೆ ವಾಹನಗಳು ಉರುಳಿಬಿದ್ದು ಅಮಾಯಕರು ಬಲಿಯಾದಾಗ ಮತ್ತೆ ಈ ಭರವಸೆಗಳು ನೆನಪಾಗುತ್ತವೆ. ಹಾಗೆಯೇ ಸಂಬಂಧಿಸಿದ ಇಲಾಖೆಗಳು ಕೂಡ ಇತ್ತ ಗಮನಹರಿಸುವುದಿಲ್ಲ.  
ಇನ್ನಾದರೂ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಕೆರೆ ಏರಿ ರಸ್ತೆಗಳಿಗೆ ಕಾಯಕಲ್ಪ ಕಲ್ಪಿಸಲು ಮುಂದಾಗಬೇಕು. ತಡೆಗೋಡೆ ನಿರ್ಮಾಣ ಸೇರಿದಂತೆ ಕನಿಷ್ಠ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಮೂಲಕ ಅಮಾಯಕರು ಬಲಿಯಾಗುವುದನ್ನು ತಪ್ಪಿಸಲು ಕಾರ್ಯೋನ್ಮುಖವಾಗಬೇಕಿದೆ.
--------------------------------------

Wednesday, 4 January 2017


ಜೀವಹಾನಿಯಾಗುತ್ತಿದ್ದರೂ ಹೋರಿ ಸ್ಪರ್ಧೆಗೆ ಇಲ್ಲ ತಡೆ  

 ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ನಡೆಯುವ ಅನಾಹುತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಾಗಿದೆ. ಏಕೆಂದರೆ, ಈ ವರ್ಷ ಮೂವರು ಬಲಿ: 15ಕ್ಕೂ ಹೆಚ್ಚು ಜನರಿಗೆ ಇರಿತದಿಂದ ಗಾಯಗೊಂಡಿದ್ದಾರೆ. ಈ ಹಿಂದೆ ಜಿಲ್ಲಾಡಳಿತ ಸ್ಪರ್ಧೆ ಆಯೋಜಿಸುವವರಿಗೆ ವಿಧಿಸಿದ್ದ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಾಗಿದೆ. ನಿಯಮ ಪಾಲನೆ ಮಾಡದವರ ವಿರುದ್ದ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಬೇಕಿದೆ. 




ಶಿವಮೊಗ್ಗ ಜಿಲ್ಲೆಯಲ್ಲಿ  ಹೋರಿ ಬೆದರಿಸುವ ಸ್ಪರ್ಧೆಯ ಕ್ರೇಜ್ ಹೆಚ್ಚುತ್ತಿದೆ. ಇದರೊಟ್ಟಿಗೆ ಅಲ್ಲಿ ಸಾವು-ನೋವು ಸಹ ಸಂಭವಿಸುತ್ತಿದೆ. ಇದು ಜಾನಪದರಿಂದ ಬೆಳೆದುಬಂದಿದ್ದರೂ  ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ. ಹಾಗಾಗಿ ನಿಷೇಧಿಸಬೇಕೆಂಬ ಕೂಗೆದ್ದಿದೆ. ಆದರೆ ಇನ್ನೂ ಅಧಿಕೃತವಾಗಿ ನಿಷೇಧಿಸಿಲ್ಲ. ಆದ್ದರಿಂದ ಈ ಕ್ರೀಡೆ ನಡೆಸುವವರು  ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕಿದೆ.
ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎರಡು ಸಂದರ್ದಲ್ಲಿ ನಡೆಯುತ್ತದೆ. ದೀಪಾವಳಿ ಹಬ್ಬದ ನಂತರ ಜಿಲ್ಲೆಯ ವಿವಿಧೆಡೆ ಇದನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತದೆ.  ಎರಡನೆಯ ಬಾರಿ ಸಂಕ್ರಾಂತಿ ಹಬ್ಬದ ಸುತ್ತಮುತ್ತ ನಡೆಯುತ್ತದೆ. ಇದನ್ನು ಎರಡನೆಯ ಹಟ್ಟಿಹಬ್ಬ ಎಂದು ಕರೆಯಲಾಗುತ್ತದೆ. ಹೋರಿ ಬೆದರಿಸುವ ಸ್ಪರ್ಧೆಗಳು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಪ್ರಮಾಣ ಏರಿಕೆಯಾಗುತ್ತಿದೆ.  ಇಷ್ಟೇ ಏಕೆ, ಇದರ ಬಹುಮಾನವಾಗಿ ಕಾರು, ಬೈಕುಗಳನ್ನು ನೀಡಲಾಗುತ್ತದೆ.
ಇದರಿಂದ ಈ ಸ್ಪರ್ಧೆ ಅಂತರ್‌ಜಿಲ್ಲಾ ಮಟ್ಟದಲ್ಲಿ ನಡೆಯಲಾರಂಭಿಸಿದೆ. ಶಿವಮೊಗ್ಗ ಗ್ರಾಮಾಂತರ, ಸೊರಬ, ಶಿಕಾರಿಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಅಕ್ಕಪಕ್ಕದ ಹಾವೇರಿ, ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಹೋರಿಗಳನ್ನು ಸ್ಪರ್ಧೆಗೆ ತರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ರಂಗೇರುತ್ತಿದೆ.
ಕಳೆದ ದೀಪಾವಳಿಯಿಂದೀಚೆ ಮೂವರು ಈ ಕ್ರೀಡೆಗೆ ಬಲಿಯಾಗಿದ್ದಾರೆ  ಶಿಕಾರಿಪುರದ ಚುರ್ಚುಗುಂಡಿಯಲ್ಲಿ ಹೋರಿಯಡಿ ವ್ಯಕ್ತಿಯೊಬ್ಬ ಸಿಲುಕಿ ಗಾಯಗೊಂಡ ಘಟನೆ ಸಹ ಸಂಭವಿಸಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಹಾಗೂ ಹಾರ‌್ನಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಐದರಿಂದ ಆರು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಶಿಕಾರಿಪುರ ಹಾಗೂ ಶಿವಮೊಗ್ಗ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಓರ್ವ ಮೃತಪಟ್ಟು, ಐದಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಜನವರಿ 2ರಂದು ಆನವಟ್ಟಿ ಸಮೀಪದ ತತ್ತೂರಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಯುವಕ ಪ್ರಾಣ ತೆತ್ತಿದ್ದಾರೆ.  9 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೆಲವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕ್ರೀಡೆ ಆಯೋಜಿಸುವವರಿಗೆ ಪೊಲೀಸ್ ಇಲಾಖೆ ಅನುಮತಿ ಕೊಡುತ್ತಿಲ್ಲ. ಆದ್ದರಿಂದ ಹೇಳಕೇಳದೆಯೇ ಕ್ರೀಡೆ ನಡೆಸುತ್ತಾರೆ. ಪೊಲೀಸರು ನೋಟೀಸ್ ನೀಡಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ತತ್ತೂರು ಘಟನೆಯೇ ಇದಕ್ಕೆ ಸಾಕ್ಷಿ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು  ಆಯೋಜಕರು ಕೈಗೊಳ್ಳುತ್ತಿಲ್ಲ.
ಅನುಮತಿ ಕಡ್ಡಾಯ:
ಇತ್ತೀಚಿನ ವರ್ಷಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಹಾಗೂ ಸಾವು-ನೋವುಗಳು ಹೆಚ್ಚುತ್ತಿರುವುದನ್ನು ಮನಗಂಡಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು, ಸ್ಪರ್ಧೆ ಆಯೋಜನೆ ಮಾಡುವವರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ಆದೇಶಿಸಿತ್ತು. ಹಾಗೆಯೇ ಅನಾಹುತಕ್ಕೆ ಆಸ್ಪದವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡುವಂತೆ ಆಯೋಜಕರಿಗೆ ಸೂಚಿಸಿತ್ತು. ಸ್ಪರ್ಧೆಗಳ ಬಗ್ಗೆ ಗಮನಹರಿಸುವಂತೆ ತಾಲೂಕು ಆಡಳಿತಗಳಿಗೂ ನಿರ್ದೇಶನ ನೀಡಲಾಗಿತ್ತು. ಮತ್ತೊಂದೆಡೆ, ಸ್ಥಳೀಯ ಪೊಲೀಸರಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಅನುಮತಿ ಪಡೆಯದೆ ಆಯೋಜಿಸುವ ಸ್ಪರ್ಧೆಗಳನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಎಲ್ಲಿ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆಯೋ ಎಂಬ ಆತಂಕದಿಂದ ಸುಮ್ಮನಾಗುತ್ತಿದ್ದಾರೆ.
ತಾವು ಹಲವು ದಶಕಗಳಿಂದ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದೇವೆ. ಈಗೇಕೆ ಪೊಲೀಸರ ಅನುಮತಿ ಪಡೆದುಕೊಳ್ಳಬೇಕು ಎನ್ನುವುದು ಆಯೋಜಕರ ಪ್ರಶ್ನೆ.
ನಿಷೇಧಿಸಲಿ:
ಹೋರಿಗಳು ಓಡುವಾಗ ಗಾಬರಿಯಿಂದ ಜನರ ಮೈಮೇಲೆ ನುಗ್ಗುವುದರಿಂದ ಸರ್ವೇಸಾಮಾನ್ಯವಾಗಿ ನೂಕುನುಗ್ಗಲು, ಕಾಲ್ತುಳಿತ, ಸಾವು ಉಂಟಾಗುತ್ತದೆ. ಸಾವು-ನೋವುಗಳು ಸಂಭವಿಸುತ್ತ್ತಿವೆ. ಇನ್ನೂ ಎಷ್ಟು ಸಾವು ಸಂಭವಿಸಬೇಕು ಇದನ್ನು ನಿಲ್ಲಿಸಲು? ಈ ಹಿನ್ನೆಲೆಯಲ್ಲಿ ಆಯೋಜಕರಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗುತ್ತದೆ. ಇದು ಅನಿವಾರ್ಯ ಕೂಡ.
ಜನರ ಜೀವದ ಜೊತೆ ಆಡುವ ಇಂತಹ ಸ್ಪರ್ಧೆ ನಿಷೇಧವಾಗಬೇಕಿದೆ. ಆಯೋಜಕರಿಗೆ ಯಾವ ಕಾರಣಕ್ಕೂ ಸ್ಪರ್ಧೆ ನಡೆಸದಂತೆ ಸೂಚಿಸಬೇಕು. ಜಿಲ್ಲೆಯ ಮಟ್ಟಿಗೆ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಪ್ರತಿ ವರ್ಷ ಅಮಾಯಕರು ಇದಕ್ಕೆ ಬಲಿಯಾಗುತ್ತಿರುವುದರಿಂದ ನಿಲ್ಲಿಸುವತ್ತ ಕ್ರಮ ಜರುಗಿಸಲೇಬೇಕಿದೆ.
ಎಷ್ಟೋ ಕಡೆ ಸ್ಪರ್ಧೆ ಆಯೋಜಕರು ಅನುಮತಿ ಪಡೆಯುವುದಿರಲಿ, ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಕೂಡ ಮಾಡುತ್ತಿಲ್ಲವೆಂಬ ಮಾಹಿತಿ ಸ್ವತಃ ಅಧಿಕಾರಿಗಳ ವಲಯದಿಂದಲೇ ಕೇಳಿಬರುತ್ತ್ತಿದೆ. ಕೆಲವೊಮ್ಮೆ ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಲತಲಾಂತರದಿಂದ ಸ್ಪರ್ಧೆ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈಗೇಕೆ ಅನುಮತಿ ಪಡೆಯಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ.  ಅನುಮತಿ  ಕುರಿತಂತೆ ತಹಶೀಲ್ದಾರ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿ, ಸ್ಪರ್ಧೆಗಳಲ್ಲಿ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳ ಪಾಲನೆ ಮಾಡುವಂತೆಯೂ ಜಿಲ್ಲಾಡಳಿತ ಆದೇಶಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದೆ. ಆದರೂ ಇದು ಪಾಲನೆಯಾಗುತ್ತಿಲ್ಲ. ನಿಯಮ ಪಾಲನೆ ಮಾಡುವಂತೆ ಆಯೋಜಕರ ಮನವೊಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಕಿರಿಕಿರಿಯಾಗಿ ಪರಿಣಮಿಸುತ್ತಿದೆ ಎನ್ನುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು.
---------------------------------------------

Monday, 2 January 2017

ಕಾಲಚಕ್ರಕೆ ಶರಣು 



 -
ಕಳೆದ ಕಾಲ (ವರ್ಷ)ವನ್ನು ನೆನೆಪಿಸಿಕೊಂಡರೆ ಏನು ಬಂತು ಫಲ, ಆ ಕಾಲ ಬರುವುದಿಲ್ಲ. ಅದರ ಬದಲು ಹೊಸಕಾಲದಲ್ಲಿ ಏನು ಮಾಡಬಹುದು, ಎಷ್ಟು ಸಂತಸದಾಯಕವಾಗಿ, ಇರಬಹುದು ಎನ್ನುವುದರತ್ತ ಚಿಂತನೆ ನಡೆಸಬೇಕಿದೆ. ನಾವು ನಾಳೆಯ ನಿರೀಕ್ಷೆಯ ಕನಸಲ್ಲಿರುತ್ತೇವೆ. ಇದನ್ನು ಸಾಧಿಸುತ್ತೇನೆ, ಅದನ್ನು ಮಾಡಿತೋರಿಸುತ್ತೇನೆ ಎಂದೆಲ್ಲ ಮಾತನಾಡುತ್ತೇವೆ. ಆದರೆ ಇದರಲ್ಲೇ ಕಾಲಕಳೆಯುತ್ತೇವೆಯೇ ವಿನಾ  ನಾವು ಸ್ಪಂದಿಸಬೇಕಾಗಿರುವುದು ವರ್ತಮಾನಕ್ಕೆ, ಬದುಕಬೇಕಾಗಿರುವುದು ವರ್ತಮಾನದಲ್ಲಿ ಎನ್ನುವುದನ್ನು ಮರೆತುಬಿಡುತ್ತೇವೆ. ಇನ್ನಾದರೂ ಹೊಸ ವರ್ಷದಲ್ಲಿ ಬಾಳಿನ ಅರ್ಥ ಹುಡುಕುವ ಕೆಲಸ ಮಾಡಬೇಕಿದೆ.


ಕಾಲಕ್ರಮಿಸುತಲಿಹುದು
ಬಾಳಿದರ ಜತೆಗಿಹುದು
ಬಾಳಿನರ್ಥವ ಹುಡುಕು- ಕಾಲಕಾಲಕ್ಕೆ
2016 ಸರಿದಿದೆ. 2017 ಕಾಲಿಟ್ಟಿದೆ.  ಹೊಸ ಆಕಾಂಕ್ಷೆ, ನಿರೀಕ್ಷೆಗಳನ್ನು ಇಟ್ಟುಕೊಂಡೇ ಪ್ರತಿವರ್ಷ ಹೊಸ ವರ್ಷವನ್ನು ಅದ್ದೂರಿಯಿಂದಲೇ ಸ್ವಾಗತಿಸುತ್ತೇವೆ. ವರ್ಷ ಕಳೆದಂತೆ ನಿರಾಸೆಯನ್ನು ವ್ಯಕ್ತಪಡಿಸುತ್ತೇವೆ. ವರ್ಷದಲ್ಲಿ ನಡೆದ ಘಟನೆಗಳನ್ನೆಲ್ಲ ಅವಲೋಕಿಸುತ್ತೇವೆ. ಒಳ್ಳೆಯ ಘಟನೆ ಸಂಭವಿಸಿದ್ದರೆ ಅದನ್ನು ಇನ್ನಷ್ಟು ಬಾರಿ ಮೆಲುಕು ಹಾಕುತ್ತೇವೆ.  ಕೆಟ್ಟದ್ದು ಘಟಿಸಿದ್ದರೆ  ಆ ಪುಟವನ್ನು ನೆನೆಪಿನಾಳದಿಂದ ಕಿತ್ತೆಸೆಯಲು ಯತ್ನಿಸುತ್ತೇವೆ. ಈ ಕಾಲಚಕ್ರ ವರ್ಷಕ್ಕೊಮ್ಮೆ ಸುತ್ತುತ್ತ ಇದನ್ನೇ ಬಿತ್ತರಿಸುತ್ತಿದ್ದರೂ ಮತ್ತೆ ಹೊಸ ವರ್ಷವನ್ನು ಹರ್ಷದಿಂದ ಆಚರಿಸುತ್ತೇವೆ.
ಈ ಕಾಲದಾಟದ ಮಹಿಮಯೇ ಇಷ್ಟು. ಸುಖ-ಕಷ್ಟಗಳಿಂದ ಕೂಡಿದ ಬದುಕಿನ ಸೂಕ್ಷ್ಮಗಳೆಲ್ಲ ಕಾಲದಲ್ಲಿ ಅಡಗಿದೆ. ನಮ್ಮನ್ನು ಆವರಿಸಿರುವ ಕಾಲ ಹೊರಗಡೆಯೂ ಇದೆ, ಬಯಲು -ಆಲಯದ ಸಂಬಂಧ ಕಾಲಕ್ಕಿದೆ. ಕಾಲ ಕೆಲವೊಮ್ಮೆ ಸುಖವನ್ನು ತಂದಿತ್ತರೆ, ಮತ್ತೆ ಕೆಲವೊಮ್ಮೆ ಕೆಟ್ಟ ಅನುಭವವನ್ನು ನೀಡಿ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತದೆ. ಕಾಲದ ಧಾರೆಯಲ್ಲಿ ಸಿಕ್ಕ ನಾವು ಕಾಲಚಕ್ರದಲ್ಲಿ ಉರುಳುತ್ತ ಅಸ್ಥಿರರಾಗಿದ್ದೇವೆ.
  ನಮ್ಮ ಹಿರಿಯರು ಕಾಲವನ್ನು ಕಾಲಪ್ರವಾಹ ಎಂದರು. ಪ್ರವಾಹವೆಂದರೆ ತುಂಬು ಹರಿಯುವುದು. ಹರಿಯುವುದು ನೀರಿನ ಸಹಜ ಸ್ವಭಾವ. ನೀರು ಹರಿಯದೆ ಮಡುಗಟ್ಟಿ ನಿಂತರೆ ಕಾಲಕ್ರಮೇಣ ಕೊಳೆ ತುಂಬಿಕೊಳ್ಳುತ್ತದೆ;ನಾರುತ್ತದೆ. ಯಾರಿಗೂ, ಯಾವುದಕ್ಕೂ ಬೇಡವಾಗುತ್ತದೆ. ನೀರು ತುಂಬಿ ಹರಿಯಬೇಕು. ಹರಿಯುತ್ತ ಕೊಳೆಯನ್ನು ಕೊಂಡೊಯ್ಯಬೇಕು. ಮತ್ತೆ ತಿಳಿಗೊಳ್ಳಬೇಕು. ತಿಳಿಗೊಂಡು ಹರಿಯುತ್ತಲೇ ಇರಬೇಕು. ಹೀಗೆ ಹರಿಯುತ್ತ ನೆಲದ ಹಸಿರಿಗೆ, ಜನರ ಉಸಿರಿಗೆ ಜೀವ ಚೈತನ್ಯ ತುಂಬಬೇಕು. ಕಾಲ ಪ್ರವಾಹದಲ್ಲಿ ನಾವೆಲ್ಲ ಕೊಚ್ಚಿಹೋಗುತ್ತೇವೆ; ಜೋಲಿ ಹೊಡೆಯುತ್ತೇವೆ; ಹೊಸಕಲ್ಪಡುತ್ತೇವೆ.
 ಕಾಲ ಸದಾ ಕ್ರಿಯಾಶೀಲವಾದುದು. ಕಾಲಕ್ಕೆ ತಕ್ಕಂತೆ ಮನುಷ್ಯನೂ ಮುಂದುವರೆಯುತ್ತಿದ್ದಾನೆ. ಬಸ್ಸು, ಕಾರು, ವಿಮಾನಗಳ ಮೂಲಕ ಕಾಲವನ್ನು ಹಿಡಿದಿಡುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ಕಾಲವನ್ನು ಮೀರಿ ಬೆಳೆಯಲು ತವಕಿಸುತ್ತಾನೆ. ಆದರೆ ಅದು ಅಸಾಧ್ಯ ಎಂದು ತಿಳಿದಾಗ ಕೈಚೆಲ್ಲುತ್ತಾನೆ. ನಮಗೆ  ಹೊಸಕಾಲದ ಶೋಧಗಳು ಮತ್ತು ಹಳೆಯದರ ನಡುವೆ  ಸದಾ ಸಂಘರ್ಷ. ಹೊಸಕಾಲದ ಇಂದಿನ ಪೀಳಿಗೆಗೆ ಹಳೆಯದೆಲ್ಲ ನಿರರ್ಥಕ ಎನಿಸುತ್ತದೆ. ಹಳೆಯದನ್ನು ಬಿಡಲಾಗದೆ, ಹೊಸದನ್ನು ಪೂರ್ಣ ಸ್ವೀಕರಿಸಲೂ ಆಗದೆ, ಕಾಲದ ಅಡಕತ್ತರಿಯಲ್ಲಿ ಮನುಷ್ಯ ನಲುಗುತ್ತಿದ್ದಾನೆ.
ಕಾಲ ಬದಲಾದಂತೆ ನಾವು ಬದಲಾಗಬೇಕು. ಕಾಲದೊಂದಿಗೆ ಹೊಂದಿಕೊಂಡು ಸಾಗಬೇಕು. ಬದಲಾವಣೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆಯಾಯ ಕಾಲದ ಅನುಭವಗಳನ್ನು ಹೀರಿ ಹದಗೊಳ್ಳಬೇಕು. ಕಾಲಕ್ಕೆ ತಕ್ಕಂತೆ ಪ್ರಕೃತಿ ಬದಲಾಗುತ್ತದೆ; ಪ್ರಪಂಚದಲ್ಲಿ ಪರಿವರ್ತನೆ ನಡೆಯುತ್ತದೆ. ಕಾಲ ಹಿಂದೆಯೂ ಇತ್ತು. ಇಂದೂ ಇದೆ. ನಾಳೆಯೂ ಇರುತ್ತದೆ. ಇದು ಆದಿ ಅಂತ್ಯವಿಲ್ಲದ್ದು. ಇದಕ್ಕಾಗಿಯೇ ಕಾಲಾಯ ತಸ್ಮೈ ನಮಃ ಎಂದು ಹೇಳುತ್ತೇವೆ. ಈ ಗತಿಶೀಲವಾದ ಕಾಲವೇ ಕಾಲಚಕ್ರ.
ಕಾಲದಲ್ಲಿ, ಕಾಲದೊಂದಿಗೆ ಬದುಕಬೇಕಾದ ನಾವು ಅದಕ್ಕೆ ಹೊಂದಿಕೊಂಡೇ ಬದುಕುವುದು ಜಗದ ನಿಯಮ.  ಈ ಬದುಕಿನಲ್ಲಿ ಹಸಿರುತನವಿರಬೇಕು. ಚೆಲುವಿರಬೇಕು. ಆ ಸೊಬಗನ್ನು ಅನುಭವಿಸುತ್ತಿರಬೇಕು.
ಬಂದುದನ್ನು ಅಪ್ಪಿಕೊಂಡ ನಾವು ಇದ್ದುದನ್ನು ಅಪ್ಪಿಕೊಳ್ಳೊಣ
ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ  ಚೆನ್ನಾಗಿ ಬದುಕೋಣ.