’ಶಿವಮೊಗ್ಗಕ್ಕೆ ಯಡಿಯೂರಪ್ಪ, ಶಿಕಾರಿಪುರಕ್ಕೆ
ರಾಘವೇಂದ್ರ, ಲೋಕಸಭೆಗೆ ರುದ್ರೇಗೌಡ?
*ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪುವುದು ಸದ್ಯದ ಸ್ಥಿತಿಯಲ್ಲಿ ನಿಶ್ಚಿತ ಎಂಬಂತೆ ಕಂಡುಬರುತ್ತಿದೆ. ಹೈಕಮಾಂಡ್ ಸಹ ಭಿನ್ನಮತವನ್ನು ನಿರ್ಲ ಕ್ಷಿಸಿರುವುದರಿಂದ ಬಿಎಸ್‌ವೈ ತಮ್ಮ ಪ್ರಭಾವವನ್ನು ನಗರದಲ್ಲಿ ಹೆಚ್ಚಿಸಿಕೊಳ್ಳಲಾರಂಭಿಸಿದ್ದಾರೆ. ಇದು ಕೆಎಸ್‌ಇಗೆ ನುಂಗಲಾರದ ತುತ್ತ್ತಾಗಿದೆ. ಜೊತೆಗೆ ಜಿಲ್ಲೆಯ ಮಟ್ಟಿಗೆ ಬಿಎಸ್‌ವೈ ಪ್ರಭಾವವೇ ಅಧಿಕ. ಈಶ್ವರಪ್ಪ ಏನಿದ್ದರೂ ನಗರ ಕ್ಷೇತ್ರಕ್ಕೆ ಮಾತ್ರ ಸಿಮಿತ, ಅದರಲ್ಲೂ ಅಸಂಬದ್ಧ ಹೇಳಿಕೆ ಕೊಡುತ್ತ ಏನಾದರೂ ಫಜೀತಿಗೆ ಸಿಕ್ಕಿಬೀಳುತ್ತಲೇ ಇರುತ್ತಾರೆ. ಬಿಎಸ್‌ವೈ ಸದಾ ಸಿಡುಕುತ್ತಲೇ ಇರುವಂತೆ ಕಂಡುಬಂದರೂ ವಿವಾದದ ಗೋಜಿಗೆ ಹೋಗುವುದಿಲ್ಲ. ಬಿಜೆಪಿ ಕಚ್ಚಾಟದಿಂದ ಎದುರಾಳಿಗೆ ಅನುಕೂಲವಾಗುವುದು ಅಷ್ಟೇ ಸತ್ಯ.
ಶಿವಮೊಗ್ಗ : ವಿಧಾನಸಭೆ ಚುನಾವಣೆಗೆ ಸುಮಾರು 14 ತಿಂಗಳು ಬಾಕಿ ಇದೆ. ಆದರೆ ಜಿಲ್ಲೆಯಲ್ಲಿ ಅದರಲ್ಲೂ ಶಿವಮೊಗ್ಗ ನಗರ ಕ್ಷೇತ್ರಕ್ಕೆ ರಾಜಕೀಯ ಪಕ್ಷಗಳು ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿವೆ. ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯಲ್ಲಿದ್ದಾರೆಂಬ ಚರ್ಚೆಗಳು ಬಿರುಸುಗೊಳ್ಳಲಾರಂಭಿಸಿವೆ. ಈ ನಡುವೆ ಬಿಜೆಪಿಯಲ್ಲಿ ಮನೆ ಮಾಡಿರುವ ಗೊಂದಲದಿಂದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಆ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಸೋಲನುಭವಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಈಶ್ವರಪ್ಪ ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಂಡಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆ.ಎಸ್.ಇ. ಪ್ರಾರಂಭಿಸಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವೈಮನಸ್ಸು ಸೃಷ್ಟಿಸಿಕೊಂಡಿದ್ದಾರೆ. ಬ್ರಿಗೇಡ್ ತೊರೆಯುವಂತೆ ಬಿ.ಎಸ್.ವೈ. ನೀಡಿರುವ ಸೂಚನೆಯನ್ನು ಈಗಾಗಲೇ ಕೆ.ಎಸ್.ಇ. ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಇದು ಇಬ್ಬರ ನಡುವಿನ ವೈಮನಸ್ಸನ್ನು ಮತ್ತಷ್ಟು ತೀವ್ರಗೊಳ್ಳುವಂತೆ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಷದ ಬರ ಅಧ್ಯಯನ ತಂಡದಿಂದ ಕೆ.ಎಸ್.ಇ.ಗೆ ಖೊಕ್ ನೀಡಲಾಗಿದೆ.
ಪಕ್ಷದಲ್ಲಿ ತಮಗೆ ಮಗ್ಗಲು ಮುಳ್ಳಾಗಿ ಪರಿಣಮಿಸಿರುವ ಕೆ.ಎಸ್.ಇ.ಗೆ ಶತಾಯಗತಾಯ ತಕ್ಕ ಪಾಠ ಕಲಿಸಲು ನಿರ್ಧರಿಸಿದಂತಿರುವ ಬಿ.ಎಸ್.ವೈ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಅವರಿಗೆ ಟಿಕೆಟ್ ಸಿಗದಂತೆ ಮಾಡುವ ವ್ಯವಸ್ಥಿತ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ವತಃ ತಾವೇ ಅಖಾಡಕ್ಕಿಳಿಯುವ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಬಿ.ಎಸ್.ವೈ ಶಿವಮೊಗ್ಗ ನಗರದತ್ತ ಹೆಚ್ಚಿನ ಗಮನ ಕೇಂದ್ರಿಕರಿಸುತ್ತಿದ್ದಾರೆ. ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ಈ ಎಲ್ಲ ಚಟುವಟಿಕೆಗಳನ್ನು ಗಮನಿಸಿದರೆ ಮುಂದಿನ ಚುನಾವಣೆಗೆ ಈಗಿನಿಂದಲೇ ಅವರು ಕ್ಷೇತ್ರದಲ್ಲಿ ತಯಾರಿ ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎನ್ನಬಹುದಾಗಿದೆ.
ಪುತ್ರನಿಗೆ ಸ್ವಕ್ಷೇತ್ರ:
ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿ.ಎಸ್.ವೈ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಕಣಕ್ಕಿಳಿಸಿ ಭಾರೀ ಪ್ರಯತ್ನದಿಂದ ಗೆಲ್ಲಿಸಿಕೊಂಡು ಬರುವಲ್ಲಿ ಸಫಲರಾಗಿದ್ದರು. ಮುಂಬರುವ ಚುನಾವಣೆಯಲ್ಲಿ ಪುತ್ರನನ್ನು ಶಿಕಾರಿಪುರ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಸುವ ಚಿಂತನೆಯನ್ನು ಬಿ.ಎಸ್.ವೈ. ನಡೆಸುತ್ತಿದ್ದಾರೆ.
ಲೋಕಸಭೆ ಚುನಾವಣೆಗೆ ತಮ್ಮ ಬಲಗೈ ಭಂಟ, ಹಾಲಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಅವರನ್ನು ಅಖಾಡಕ್ಕಿಳಿಸುವ ಇರಾದೆ ಬಿ.ಎಸ್.ವೈ.ಅವರದ್ದಾಗಿದೆ. ಈ ಮೂಲಕ ಈಶ್ವರಪ್ಪ ಅವರನ್ನು ಚುನಾವಣಾ ರಾಜಕಾರಣದಿಂದ ದೂರವಿಡುವ ಮೂಲಕ ತಕ್ಕ ತಿರುಗೇಟು ನೀಡುವ ಯೋಜನೆಯನ್ನು ಬಿ.ಎಸ್.ವೈ.ರೂಪಿಸುತ್ತಿದ್ದಾರೆ. ಇದು ಈಶ್ವರಪ್ಪ ಅವರಿಗೂ ಗೊತ್ತಾಗಿದೆ. ಅದಕ್ಕಾಗಿಯೇ ಇನ್ನಷ್ಟು ಹೇಳಿಕೆ- ಪ್ರತಿ ಹೇಳಿಕೆ ಬರತೊಡಗಿದೆ. ಕಳೆದ ಒಂದು ತಿಂಗಳಲ್ಲಿ ಇಬ್ಬರ ನಡುವಿನ ಬಿರುಸಿನ ಕಾಳಗಕ್ಕೂ ಇದೇ ಅಂಶ ಕಾರಣ ಎನ್ನುವುದು ಈಗ ಬೆಳಕಿಗೆ ಬರತೊಡಗಿದೆ.
ಇದರಿಂದ ಅವರಿಬ್ಬರೂ ಹಾವು - ಮುಂಗಸಿಯಂತಾಗಿ ಪರಿವರ್ತಿತರಾಗಿದ್ದಾರೆ. ಒಬ್ಬರು ಮತ್ತೊಬ್ಬರ ಮುಖ ನೋಡದ ಮಟ್ಟಕ್ಕೆ ಅವರಿಬ್ಬರ ನಡುವೆ ವೈಮನಸ್ಸು ಆವರಿಸಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದ ನಂತರ ಇಬ್ಬರೂ ಅಕ್ಷರಶಃ ಶತೃಗಳಾಗಿ ಮಾರ್ಪಟ್ಟಿದ್ದಾರೆ. ಇವರಿಬ್ಬರ ವೈಮನಸ್ಸು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಗೋಚರವಾಗುವುದು ಸ್ಪಷ್ಟವಾಗಿದೆ. ಕಳೆದ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಇ. ಸೋಲಿಸುವುದೇ ತಮ್ಮ ಗುರಿಯಾಗಿದೆ ಎಂದು ಹೇಳಿ ಅದರಂತೆ ಸೋಲಿಸಿದ್ದ ಬಿ.ಎಸ್.ವೈ., ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಿಂದ ಟಿಕೆಟ್ ಸಿಗದಂತೆ ಮಾಡುವ ಕಾರ್ಯತಂತ್ರ ನಡೆಸುತ್ತಿದ್ದಾರೆ. ಈಶ್ವರಪ್ಪ ಕಣದಿಂದ ಹಿಂದೆ ಸರಿಯುವ ಸ್ಥಿತಿಯಲ್ಲಿಲ್ಲ. ಇದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದು ಕುತೂಹಲ ಹುಟ್ಟಿಸಿದೆ.
ಕಳೆದ ಚುನಾವಣೆಯಂತೆ ಬಿಜೆಪಿಯಲ್ಲಿ ಗೊಂದಲ ಏರ್ಪಟ್ಟರೆ ಮತ್ತೆ ಶಿವಮೊಗ್ಗ ಕ್ಷೇತ್ರ ಕಾಂಗ್ರೆಸ್ ಅಥವಾ ಜೆಡಿಎಸ್ ಪಾಲಾಗುವುದು ಖಚಿತ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯಲು ಹೋಗಿ ಇಬ್ಬರೂ ಗುಂಡಿಗೆ ಬೀಳುವುದು ನಿಶ್ಚಿತ.

No comments:
Post a Comment