Monday, 16 September 2019

ಮೊಬೈಲ್ ಚಟ ಬಿಡಿಸಲು ಯೋಜನೆ ರೆಡಿ





ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಮೊಬೈಲ್‌ನಿಂದಾಗುವ ಅನಾಹುತಗಳ ಬಗ್ಗೆೆ ಪಾಲಕರು ಮೊದಲು ಜಾಗೃತರಾಗುವುದು ಒಳ್ಳೆೆಯದು. ಮನೆಯಲ್ಲಿ ಇದು ಆರಂಭವಾದರೆ ಆನಂತರ ಶಿಕ್ಷಕರು ಈ ಬಗ್ಗೆೆ ತಿಳಿವಳಿಕೆ ಮೂಡಿಸುವಲ್ಲಿ ಯಶಸ್ವಿಿಯಾಗುತ್ತಾಾರೆ. ಆದ್ದರಿಂದ ಪಾಲಕರು ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಲೇಬೇಕಿದೆ. ಈ ಹಿನ್ನೆೆಲೆಯಲ್ಲಿ ಜಿಲ್ಲಾಾ ಪಂಚಾಯತ್, ಶಿಕ್ಷಣ  ಮತ್ತು ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆೆಯಲ್ಲಿ ಮನೋವೈಜ್ಞಾಾನಿಕ ಕೌನ್ಸಿಿಲಿಂಗ್ ನಡೆಸಲು ಸರ್ವ ಸಿದ್ಧತೆ ನಡೆದಿದೆ. ಪ್ರತಿ ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಕೌನ್ಸೆೆಲಿಂಗ್ ನಡೆಸುವ ಯೋಜನೆ ರೂಪಿಸಲಾಗಿದೆ
 .

* ಇತ್ತೀಚೆಗೆ ಮೊಬೈಲ್ ಗೇಮ್ ಆಡುತ್ತ ನಡೆದುಕೊಂಡು ಹೋಗುತ್ತಿಿದ್ದ ಶಿವಮೊಗ್ಗದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿಿದ!
* ಬೆಳಗಾವಿಯಲ್ಲಿ ಮೊಬೈಲ್ ಗೇಮ್ ಆಡಲು ಇಂಟರ್‌ನೆಟ್‌ಗೆ ತಂದೆ ಹಣ ನೀಡದಿದ್ದಾಾಗ ತಂದೆಯ ತಲೆಯನ್ನು ಒಡೆದು ಕೊಂದು ಹಾಕಿದ ಮಗ!
* ಉತ್ತರ ಪ್ರದೇಶದ  ರಾಯ್‌ಬರೇಲಿ ಜಿಲ್ಲೆೆಯಲ್ಲಿ ದಿನದ 8 ತಾಸು ಮೊಬೈಲ್‌ನಲ್ಲೇ ಕಾಲ ಕಳೆಯುವ ಮೂರು ವರ್ಷದ ಮಗು!
* ನಮ್ಮ ಮಗು ಮೊಬೈಲ್ ಬಿಡುವುದೇ ಇಲ್ಲ, ಬೇಕು ಅಂತ ಹಠ ಮಾಡುತ್ತದೆ. ಶಾಲೆಯಿಂದ ಬಂದಾಕ್ಷಣ ಮೊಬೈಲ್ ಹಿಡಿದುಕೊಳ್ಳುತ್ತದೆ,  ಗೇಮ್‌ನಲ್ಲೇ ಮುಳುಗಿರುತ್ತದೆ, ಇತ್ತೀಚೆಗೆ ವಿದ್ಯಾಾಭ್ಯಾಾಸದತ್ತ ಗಮನ ಕಡಿಮೆಯಾಗಿ, ಪ್ರಗತಿ ಇಳಿಮುಖವಾಗುತ್ತಿಿದೆ ಎನ್ನುವ ಪಾಲಕರ ದೂರು!
* ನನ್ನ ಮಗನ ಮೊಬೈಲ್ ಹೇಗಾದರೂ ಮಾಡಿ ಸೀರ್ ಮಾಡಿ. ಓದು, ಊಟ, ನಿದ್ದೆೆ ಎಲ್ಲ ಬಿಟ್ಟು ಪಬ್‌ಜಿಯಲ್ಲಿ ಮುಳುಗಿಬಿಟ್ಟಿಿದ್ದಾಾನೆ ಎನ್ನುವ ಕಾಲೇಜು ವಿದ್ಯಾಾರ್ಥಿಗಳ ಪಾಲಕರ ಅಳಲು!

ಈ ಮೇಲಿನ ಘಟನೆಗಳನ್ನು ಅವಲೋಕಿಸಿದಾಗ ಮಕ್ಕಳನ್ನು ಮೊಬೈಲ್‌ನಿಂದ ರಕ್ಷಿಸದಿದ್ದರೆ ಭವಿಷ್ಯದಲ್ಲಿ ಬಹುದೊಡ್ಡ ಗಂಡಾಂತರ ಕಾದಿದೆ ಎನ್ನುವುದರ ಅರಿವಾಗದೇ ಇರದು.  ಮೊಬೈಲ್‌ನಿಂದಾಗುವ ದುಷ್ಪರಿಣಾಮವನ್ನು ಮಕ್ಕಳಿಗೆ ಹೇಳುವುದರ ಜೊತೆಗೆ ಅವರ ಪಾಲಕರನ್ನು ಈ ಬಗ್ಗೆೆ ಜಾಗೃತಗೊಳಿಸುವುದು. ಜೊತೆಗೆ ಶಿಕ್ಷಕರು ಪರಿಣಾಮಕಾರಿಯಾಗಿ ಇದನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳುವುದು ಸದ್ಯದ ಅತ್ಯಂತ ಜರೂರಿನ ಕೆಲಸವಾಗಿದೆ.
ವಿದ್ಯಾಾರ್ಥಿಗಳಲ್ಲಿ ಮೊಬೈಲ್ ಗೇಮ್ ಚಟ ಹೆಚ್ಚುತ್ತಿಿದೆ. ಮೊಬೈಲ್‌ನಿಂದಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳುಮಾಡಿಕೊಳ್ಳುತ್ತಿಿದ್ದಾಾರೆ. ಪಬ್‌ಜಿಯಂತಹ ಗೇಮ್‌ನಿಂದ ಜೀವ ಕೇಳದುಕೊಳ್ಳುತ್ತಿಿದ್ದಾಾರೆ. ಮೊಬೈಲ್ ಗೀಳು ತಪ್ಪಿಿಸಲು  ಈಗ ಹೆಣಗಾಡಬೇಕಾದ ಸ್ಥಿಿತಿ ಎದುರಾಗಿದೆ. ಇದಕ್ಕಾಾಗಿ ಪಾಲಕರು, ವಿದ್ಯಾಾಸಂಸ್ಥೆೆಯವರು , ಶಿಕ್ಷಕರು ವಿವಿಧ ಕ್ರಮಗಳನ್ನು ಅನುಸರಿಸುತ್ತಿಿದ್ದರೂ ಇದನ್ನು ನಿಯಂತ್ರಿಿಸಲು ಇನ್ನೂ ಸಾಧ್ಯವಾಗಿಲ್ಲ.
ಸಾಮಾಜಿಕ ಜಾಲತಾಣ ಮತ್ತು ಗೇಮ್‌ಗಳು ಹೆಚ್ಚು ಪ್ರಚಲಿತವಾಗುತ್ತಿಿರುವಂತೆಯೇ ಮಕ್ಕಳು  ಅದರತ್ತ ಆಕರ್ಷಿತರಾಗುತ್ತಿಿದ್ದಾಾರೆ. ಕೆಲವರಿಗೆ ಗೇಮ್, ಕೆಲವರಿಗೆ ಫೇಸ್‌ಬುಕ್, ಇನ್ನೂ ಕೆಲವರಿಗೆ ವಾಟ್ಸಾಾಪ್ ಗೀಳು ಅಂಟಿಕೊಂಡಿದೆ. ತಾವು ಹಾಕಿದ ಫೋಟೊ ಅಥವಾ ಮೆಸೇಜ್‌ಗೆ ಹೆಚ್ಚು ಲೈಕ್‌ಗಳು ಬರತೊಡಗಿದಂತೆ ಅವರ ಆಸಕ್ತಿಿಯೂ, ಅಪ್‌ಲೋಡ್ ಮಾಡುವ ಚಿತ್ರದ ಪ್ರಮಾಣವೂ ಹೆಚ್ಚುತ್ತದೆ. ಒಂದು ವೇಳೆ ಕಡಿಮೆ ಲೈಕ್ ಬಂತೆಂದರೆ ಶುರುವಾಗುತ್ತದೆ ಟೆನ್ಶನ್, ಕೀಳರಿಮೆ. ಇದೇ ಮೊಬೈಲ್‌ನ ದೊಡ್ಡ ರೋಗ. ಯಾವಾಗ ಇದಕ್ಕೆೆ ಅಂಟಿಕೊಂಡುಬಿಡುತ್ತಾಾರೋ ಅದರಿಂದ ಹೊರಬರುವುದು ತೀರಾ ಕಷ್ಟ. ಮೊಬೈಲ್ ದಾಸರಾದರೆ ಸುಲಭದಲ್ಲಿ ಹೊರಬರಲು ಸಾಧ್ಯವೇ ಇಲ್ಲ ಎನ್ನುತ್ತಾಾರೆ ಮನೋವೈದ್ಯರು. ಇದರಿಂದ ಹಠಮಾರಿತನ ಹೆಚ್ಚುತ್ತದೆ, ಪ್ರಗತಿ ಕುಂಠಿತವಾಗುತ್ತದೆ ಎನ್ನುತ್ತಾಾರೆ. 
ಮೊದಲೆಲ್ಲ ಬಾಲ್ಯದಲ್ಲಿದ್ದಾಾಗ ಮಕ್ಕಳಿಗೆ ಆಟಿಕೆ ವಸ್ತುಗಳನ್ನು ಕೊಟ್ಟು ಅವರಿಗೆ ಹಾಲು, ಊಟ ಕೊಡುವುದು, ಹಠ ಕಡಿಮೆ ಆಗುವಂತೆ ಮಾಡುವ ಪದ್ದತಿ ಇತ್ತು. ಈಗ ಆಟಿಕೆಗಳ ಸ್ಥಾಾನವನ್ನು ಮೊಬೈಲ್‌ಗಳು ಆಕ್ರಮಿಸಿಬಿಟ್ಟಿಿವೆ. ಹಾಲುಕುಡಿಯುವ ಮಗುವಿನ ಕೈಗೂ ಪಾಲಕರು ಕೊಡುವುದೇ ಮೊಬೈಲ್. ಅಪ್ಪ, ಅಮ್ಮನ ಜೊತೆ ಮಗುವೂ ಸಹ  ಮೊಬೈಲಿನಲ್ಲೇ ತಲ್ಲೀನವಾಗಿರುವ ಎಷ್ಟೋೋ ಚಿತ್ರಗಳನ್ನು ಕಾಣುತ್ತಿಿದ್ದೇವೆ. ಈ ಚಟ ಮಗುವನ್ನು ಖಿನ್ನತೆಗೆ ತಳ್ಳಿಿ ಕೊನೆಗೆ ಆತ್ಮಹತ್ಯೆೆಯೊಂದೇ ದಾರಿ ಎಂದು ಯೋಚಿಸುವ ಮಟ್ಟಕ್ಕೆೆ ತಳ್ಳಿಿಬಿಡುತ್ತದೆ.
ಮೊಬೈಲ್ ಅತಿಬಳಕೆಯಿಂದ ಮಗುವಿನ ಚಟುವಟಿಕೆ ಅತಿಯಾಗುತ್ತದೆ. ಏಕಾಗ್ರತೆ ಇರುವುದಿಲ್ಲ. ಯಾವುದೇ ಕೆಲಸವನ್ನು ಪೂರ್ತಿಯಾಗಿ ಮಾಡಲು ಆಗುವುದಿಲ್ಲ. ಆದರೆ ಮೊಬೈಲ್ ಆಡುವಾಗ ಮಾತ್ರ ಏಕಾಗ್ರತೆ ದ್ವಿಿಗುಣಗೊಳ್ಳುತ್ತದೆ. ಮಕ್ಕಳನ್ನು ಸೆಳೆಯುವಂತಹ ಅದ್ಭುತ ಶಕ್ತಿಿ ಮೊಬೈಲ್‌ಗಿದೆ. ಯುವಜನರು ಮೊಬೈಲ್ ಮೋಹಕ್ಕೆೆ ಸಿಲುಕಿ ಮಾನಸಿಕ ಸ್ವಾಾಸ್ಥ್ಯ ಮತ್ತು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿಿರುವುದು ಹೆಚ್ಚುತ್ತಿಿರುವಾಗಲೇ ಚಿಕ್ಕಮಕ್ಕಳೂ ಸಹ ಈ ಜಾಡ್ಯಕ್ಕೆೆ ಬಲಿಯಾಗುತ್ತಿಿರುವುದು ನಿಜಕ್ಕೂ ಆಘಾತ, ಆತಂಕಕಾರಿ ವಿಷಯ. 
ಮಕ್ಕಳನ್ನು ಮೊಬೈಲ್‌ನಿಂದ ಕಾಪಾಡಲು ಅಪಾಯಕಾರಿಯಾದ ಗೇಮ್‌ಗಳನ್ನು ಸರ್ಕಾರ ನಿಷೇಧಿಸಬೇಕಿದೆ. ಜೊತೆಗೆ ಪಾಲಕರು ಮೊಬೈಲ್‌ಗೆ ಲಾಕ್ ಅಳವಡಿಸಬೇಕು, ಮಕ್ಕಳು ಮೊಬೈಲ್‌ನಲ್ಲಿ ಆಡಲು ಸಮಯ ನಿಗದಿಪಡಿಸಬೇಕು. ಮೇಲ್ನೋೋಟಕ್ಕೆೆ ಮಾತ್ರ ಮೊಬೈಲ್ ಬಳಸಲು ಅವಕಾಶ ಕೊಡಬೇಕು. ಇದರ ಜೊತೆಗೆ ತಾವೂ ಸಹ ಎಷ್ಟು ಅವಶ್ಯವೋ ಅಷ್ಟೇ ಮೊಬೈಲ್ ಬಳಕೆಯನ್ನು ಮಾಡಿದರೆ ಇನ್ನೂ ಉತ್ತಮ. ಎಷ್ಟೋೋ ಶಾಲೆಯಲ್ಲಿ ಶಿಕ್ಷಕರೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಮ್ಮ ಕೆಲಸ ಮಾಡಿಕೊಳ್ಳುತ್ತಾಾರೆ. ಇನ್ನೂ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಸದಾ ಮೊಬೈಲಿನಲ್ಲಿ ತಲ್ಲೀನರಾಗಿರುತ್ತಾಾರೆ. ಇಂತಹವುಗಳಿಗೆ ಕಡಿವಾಣ ಹಾಕುವುದು, ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆೆ ಆಗಾಗ ಶಿಕ್ಷಕರು ಮಾಹಿತಿ ಕೊಡುವುದು ಇಂದಿನ ಅಗತ್ಯವಾಗಿದೆ.
ಮಕ್ಕಳಿಗೆ ತೀರಾ ಅಗತ್ಯ ಎಂದಾದಲ್ಲಿ ಬೇಸಿಕ್ ಮೊಬೈಲ್ ಕೊಡಿಸಬಹುದು. ಕಾಲೇಜು ಓದಿನವರೆಗೆ ಇದನ್ನು ಪಾಲಿಸಿದಲ್ಲಿ ಎಷ್ಟೋೋ ಮಕ್ಕಳು ಆತ್ಮಹತ್ಯೆೆ ಮಾಡಿಕೊಳ್ಳುವುದನ್ನು, ವಿವಿಧ ಚಟಗಳಿಗೆ ಬಲಿಯಾಗಿ ದಾರಿತಪ್ಪುವುದನ್ನು ತಪ್ಪಿಿಸಬಹುದಾಗಿದೆ. ಸಾಕಷ್ಟು ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಮಾಡಲಾಗಿದೆ. ಆದರೆ ಕಾಲೇಜಿನಿಂದ ಹೊರಬಿದ್ದ ಕ್ಷಣ ಕೈಗೆ ಮೊಬೈಲ್ ಬರುತ್ತದೆ. ಕೆಲವು ಮಕ್ಕಳು ದಾರಿಯಲ್ಲಿ ಹೋಗುವಾಗ, ಬರುವಾಗ ಮೊಬೈಲ್ ಕಿವಿಗಂಟಿಯೇ ಇರುವುದನ್ನು ದಿನನಿತ್ಯ ಕಾಣಬಹುದಾಗಿದೆ.
ಮಕ್ಕಳಿಗೆ ಅಂಟುತ್ತಿಿರುವ ಮೊಬೈಲ್ ಚಟವನ್ನು ದೂರೀಕರಿಸಲು ಜಿಲ್ಲಾಾ ಪಂಚಾಯತ್, ಶಿಕ್ಷಣ  ಮತ್ತು ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆೆಯಲ್ಲಿ ಮನೋವೈಜ್ಞಾಾನಿಕ ಕೌನ್ಸಿಿಲಿಂಗ್ ನಡೆಸಲು ಸರ್ವ ಸಿದ್ಧತೆ ನಡೆದಿದೆ. ಪ್ರತಿ ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಕೌನ್ಸೆೆಲಿಂಗ್ ನಡೆಸುವ ಯೋಜನೆ ರೂಪಿಸಲಾಗಿದೆ. ಈ ಬಗ್ಗೆೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ  ಮತ್ತು ಶಿಕ್ಷಕರಿಗೆ ತಜ್ಞ ವೈದ್ಯರು ತರಬೇತಿ ಕೊಡಲಿದ್ದಾಾರೆ. ನಗರದ ಮಾನಸಿಕ ತಜ್ಞರ ತಂಡವನ್ನು ರಚಿಸಲಾಗಿದ್ದು, ಅವರೆಲ್ಲ ಶಾಲೆಯನ್ನು ನಿಗದಿ ಮಾಡಿಕೊಂಡು ಅಲ್ಲಿಗೆ ತೆರಳಿ ಮಕ್ಕಳ ಪರೀಕ್ಷೆ ನಡೆಸಲಿದ್ದಾಾರೆ. ಈ ವೇಳೆ ಶಿಕ್ಷಕರು ಮಕ್ಕಳಲ್ಲಿ ವರ್ತನೆ ಬದಲಾಗುತ್ತಿಿದ್ದರೆ ಮಾಹಿತಿ ಕೊಡಬೇಕಾಗುತ್ತದೆ.
ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಮೊಬೈಲ್‌ನಿಂದಾಗುವ ಅನಾಹುತಗಳ ಬಗ್ಗೆೆ ಪಾಲಕರು ಮೊದಲು ಜಾಗೃತರಾಗುವುದು ಒಳ್ಳೆೆಯದು. ಮನೆಯಲ್ಲಿ ಇದು ಆರಂಭವಾದರೆ ಆನಂತರ ಶಿಕ್ಷಕರು ಈ ಬಗ್ಗೆೆ ತಿಳಿವಳಿಕೆ ಮೂಡಿಸುವಲ್ಲಿ ಯಶಸ್ವಿಿಯಾಗುತ್ತಾಾರೆ. ಆದ್ದರಿಂದ ಪಾಲಕರು ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಲೇಬೇಕಿದೆ.



ನಗರದ ಮನೋವೈದ್ಯ  ಅರವಿಂದ್ ತಿಮ್ಮಯ್ಯ ಅವರ ಪ್ರಕಾರ, ಮಕ್ಕಳು ಸಣ್ಣವರಿದ್ದಾಾಗ ರಂಪಾಟ ಮಾಡಿದರೆ, ಬಯಸಿದ್ದು ಸಿಗುತ್ತದೆ ಎಂದಾದರೆ  ಅದೇ ರಂಪಾಟವನ್ನು ಮತ್ತೆೆ ಮತ್ತೆೆ ಮುಂದುವರೆಸುತ್ತಾಾರೆ.  ಇದನ್ನು ಪಾಲಕರು ತಡೆಗಟ್ಟಬೇಕು. ಅಂದರೆ ಅವರು ಕೇಳಿದ್ದನ್ನೆೆಲ್ಲ ಕೊಡಿಸುವುದು, ಮೊಬೈಲ್ ಕೊಡಿಸುವುದನ್ನು ನಿಲ್ಲಿಸಬೇಕು. ಚಿಕ್ಕವರಿದ್ದಾಾಗಲೇ ಅವರ ಸ್ವಭಾವವನ್ನು ತಿದ್ದಬೇಕು. ಅತಿಯಾದ ಮೊಬೈಲ್ ಬಳಕೆ ಮಾಡುವ ಮಕ್ಕಳಲ್ಲಿ ವಿದ್ಯೆೆಯ ಕಲಿಕೆ ಹಿಂದೆ ಬೀಳುತ್ತದೆ. ಏಕಾಗ್ರತೆ ದೂರವಾಗುತ್ತದೆ.  ಅಸಹನೆ ಹೆಚ್ಚುತ್ತದೆ, ಆಸಕ್ತಿಿ ಕುಗ್ಗುತ್ತದೆ. ಇದನ್ನೆೆಲ್ಲ ಪೋಷಕರು ಬಾಲ್ಯದಲ್ಲೇ ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲವಾದಲ್ಲಿ ಮುಂದೆ ಮಗು ಮೊಬೈಲ್ ಕೈಯ್ಯಲ್ಲಿ ಇಲ್ಲದೆ ಬದುಕಲಾರದ ಸ್ಥಿಿತಿ ತಲುಪಬಹುದು ಎನುವ ಆತಂಕ ವ್ಯಕ್ತಪಡಿಸುತ್ತಾಾರೆ.

ಇನ್ನೊೊಬ್ಬ ಮನೋವೈದ್ಯ ಪ್ರಮೋದ್ ಹೇಳುವಂತೆ, ಮೊಬೈಲ್ ಗೀಳಿಗೆ ಬಲಿಯಾಗುವ ಮಕ್ಕಳು ಇನ್ನೊೊಬ್ಬರ ಜೊತೆ ಬೆರೆಯುವುದಿಲ್ಲ. ಒಂಟಿಯಾಗಿ ಕುಳಿತು ಮೊಬೈಲ್‌ನಲ್ಲಿ ತಲ್ಲೀನರಾಗುತ್ತಾಾರೆ. ಮೆದುಳಿನ ಮೇಲೆ ಮೊಬೈಲ್‌ನ ವಿಕಿರಣ ಪರಿಣಾಮ ಬೀರುತ್ತದೆ. ತಲೆನೋವು ಮಾತ್ರವಲ್ಲ, ಟ್ಯೂಮರ್ ಕೂಡ ಆಗಬಹುದು, ಮೆದುಳಿನ ಬೆಳವಣಿಗೆಗೆ ಅಡ್ಡಿಿಯಾಗಬಹುದು, ಕೆಟ್ಟ ದೃಶ್ಯ ಹಾಗೂ ಅಶ್ಲೀಲ ಚಿತ್ರಗಳನ್ನು ನೋಡಿ ಅದರ ಪ್ರಭಾವಕ್ಕೆೆ ಒಳಗಾಗಬಹುದು ಎನ್ನುತ್ತಾಾರೆ.


ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ 3 ವರ್ಷದ ಮಗು ಮೊಬೈಲನ್ನು 8 ತಾಸು ಪ್ರತಿದಿನ ಹಿಡಿದು ಅದರಲ್ಲೇ ತಲ್ಲೀನವಾಗುತ್ತಿಿದೆ. ಎಲ್ಲಿಯವರೆಗೆ ಎಂದರೆ
ರಾತ್ರಿಿ ಮಲಗುವಾಗಲೂ ಮೊಬೈಲ್ ದರ ಕೈಯ್ಯಲ್ಲೇ ಇರುತ್ತಿಿತ್ತು. ರಾತ್ರಿಿ ಎದ್ದು ಮೂತ್ರಕ್ಕೆೆ ಹೋದರೆ  ಪೋಷಕರು ಮೊಬೈಲ್ ಅಡಗಿಸಿಬಿಡುತ್ತಾಾರೆ ಎಂದು ಮಗು ಮೂತ್ರಕ್ಕೂ ಹೋಗದೆ ಹಾಸಿಗೆಯಲ್ಲೇ ಮೂತ್ರ ಮಾಡುತ್ತಿಿತ್ತು.  ಈ ರೀತಿ ಅದರ ಮೋಡಿಗೆ ಒಳಗಾಗಿತ್ತು ಮಗು.  ಮನೆಗೆಲಸಕ್ಕೆೆ ಅಡ್ಡಿಿಯಾಗಬಾರದು, ಅವರ ಹಠ ಕಡಿಮೆಯಾಗಬೇಕೆಂಬ ಉದ್ದೇಶದಿಂದ ಅಥವಾ ಅತಿ ಪ್ರೀತಿಯಿಂದ ಮಕ್ಕಳ ಕೈಗೆ ಮೊಬೈಲ್ ಹಿಡಿಸಿಬಿಡುವ ಪಾಲಕರು, ಆನಂತರ ಅದನ್ನು ವಾಪಸ್ ಪಡೆಯಲು ಹರಸಾಹಸ ಪಡಬೇಕಿದೆ. ಈಗ ಇದೇ ಅವರಿಗೆ ಮುಳುವಾಗಿ ಪರಿಣಮಿಸುತ್ತಿಿದೆ.
 published on 16-9.2019

Tuesday, 10 September 2019

ಕಾನನ ಸೇನಾನಿಗಳಿಗೆ ಒಂದು ಸಲಾಂ



 ನಾಳೆ ಸೆಪ್ಟೆೆಂಬರ್ 11 ರ್ಟ್ರೋಯ ಅರಣ್ಯ ಹುತಾತ್ಮರ ದಿನ. ಅರಣ್ಯ ಮತ್ತು ವನ್ಯಜೀ"ಗಳ ಸಂರಕ್ಷಣೆಗಾಗಿ ಇವರು ಮಾಡಿದ ತ್ಯಾಾಗ ಮತ್ತು ಬಲಿದಾನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿಿದೆ. ನಗರದ ಶ್ರೀಗಂಧ ಕೋಠಿಯಲ್ಲಿ ಈ ನಿ"ುತ್ತ ನಾಳೆ ಬೆಳಿಗ್ಗೆೆ 9 ಗಂಟೆಗೆ ಕಾರ‌್ಯಕ್ರಮ ಏರ್ಪಾಡಾಗಿದೆ.  




ಅರಣ್ಯ ಇಲಾಖೆಯ ಸಿಬ್ಬಂದಿ ದೇಶದ  ಅರಣ್ಯ ಮತ್ತು ವನ್ಯಜೀ"ಗಳ ಸಂರಕ್ಷಣೆಗಾಗಿ  ಮಾಡಿದ ತ್ಯಾಾಗ ಮತ್ತು ಬಲಿದಾನಗಳ "ನ್ನೆೆಲೆಯಲ್ಲಿ ಅವರ ಸ್ಮರಣೆಗಾಗಿ ರ್ಟ್ರೋಯ ಅರಣ್ಯ ಹುತಾತ್ಮರ ದಿನವನ್ನು ಪ್ರತಿವರ್ಷ ಸೆಪ್ಟೆೆಂಬರ್ 11ರಂದು ಆಚರಿಸಲಾಗುತ್ತಿಿದೆ.
ಅರಣ್ಯ ಸಂಪತ್ತನ್ನು ಮತ್ತು ವನ್ಯಜೀ"ಗಳನ್ನು ಉಳಿಸಲು ತಮ್ಮ ಪ್ರಾಾಣವನ್ನೇ ಸಮರ್ಪಿಸಿ ಸರ್ವೋಚ್ಛ ತ್ಯಾಾಗ ಮೆರೆದ, ಸಮರ್ಪಣಾ ಮನೋಭಾವದ ಹಲವಾರು ಅರಣ್ಯಾಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ. ಕರ್ನಾಟಕದಲ್ಲಿ ಇಂದಿಗೂ ಹಲವು ಅರಣ್ಯಾಾಧಿಕಾರಿಗಳು ಇಂತಹ ಬಲಿದಾನದಿಂದ ಹೆಸರಾಗಿದ್ದಾಾರೆ. ಇವರ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ‌್ಯಗಳು, ಅಪಾಯಕ್ಕೆೆ ಒಳಗಾದ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ವನ್ಯಜೀ"ಗಳನ್ನು ಸಂರಕ್ಷಿಸಲು, ಕಾಪಾಡಲು ಯುವಪೀಳಿಗೆಗೆ ಇದು ಸ್ಫೂರ್ತಿದಾಯಕವಾಗಿದೆ.
ಮರಗಳ್ಳರು, ಕಳ್ಳಸಾಗಾಣಿಕೆದಾರರು, ಬೇಟೆಗಾರರು, ಕಾಡ್ಗಿಿಚ್ಚು ಮೊದಲಾದವುಗಳಿಂದ ಅರಣ್ಯವನ್ನು ಸಂರಕ್ಷಿಸುವುದು ಇಂದು ಸವಾಲಿನ ಕೆಲಸವಾಗಿದೆ. ದಟ್ಟಕಾನನದ ಮಧ್ಯೆೆ ಅರಣ್ಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸದಾ ಗಮನ"ಡಬೇಕಿದೆ. ಇಂತಹ ಸ್ಥಿಿತಿಯಲ್ಲಿ ಮಳೆ, ಚಳಿ, ಬಿಸಿಲೆನ್ನದೆ ಎದುರಾಗುವ ಎಲ್ಲಾಾ ಅಪಾಯಗಳನ್ನೆೆದುರಿಸಲು ಸನ್ನದ್ಧರಾಗಿರಬೇಕಾಗುತ್ತದೆ. 
1730ರ ಸೆ. 11ರಂದು ಜೋಧಪುರ್‌ನ ಮಹಾರಾಜ ಅಭಯ್ ಸಿಂಗ್‌ನ ಸೈನಿಕರು ಕೇಜರ್ಲಿ ಎಂಬ ಪ್ರಾಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು  ತನ್ನ ಹೊಸ ಅರಮನೆಗೆ ಬೇಕೆಂದು ಕಡಿಯಲು ಕಳು"ಸಿದ್ದನು. ಇದನ್ನು "ರೋಧಿಸಿದ್ದ ಬಿಷ್ಣೋು ಸಮಾಜದ 263 ಪುರುಷ, ಮ"ಳೆ ಮತ್ತು ಮಕ್ಕಳನ್ನು ಈ ಸಂದರ್ಭದಲ್ಲಿ ಆತನ ಸೈನಿಕರು ಕೊಂದು ಹಾಕಿದ್ದರು. ಮರಗಳ ಸಂರಕ್ಷಣೆಗಾಗಿ ಪ್ರಾಾಣಾರ್ಪಣೆ ಮಾಡಿದ  ಬಿಷ್ಣೋುಗಳ  ತ್ಯಾಾಗ ಮತ್ತು ಬಲಿದಾನವನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತಿಿದೆ.
ಕರ್ನಾಟಕದಲ್ಲಿ ಇಂತಹ ಸಾಹಸ ಮೆರೆದ  ಐಎಫ್‌ಎಸ್ ಅಧಿಕಾರಿ ಪಿ. ಶ್ರೀನಿವಾಸ್,  ಎಸ್. ಮಣಿಕಂಠನ್, ಕೊಳ್ಳೆೆಗಾಲದ ಅರಣ್ಯ ರಕ್ಷಕ ಬಿ. ಸಿ. ಮೋಹನಯ್ಯ ಮತ್ತು ಶಿರಸಿಯ ಡಿಫ್‌ಓ ಆಗಿದ್ದ ಅರ"ಂದ್ ಹೆಗಡೆ ಸ"ತ ಹಲವರನ್ನು  ಇಂದಿಗೂ ಸ್ಮರಿಸಲಾಗುತ್ತಿಿದೆ. ಶ್ರೀನಿವಾಸ್ ಅವರು ಕಾಡಿಗಾಗಿ ಜನನ, ಕಾಡಿಗಾಗಿ ಜೀವನ ಮತ್ತು ಕಾಡಿಗಾಗಿ ಮರಣ ಎಂಬ ತತ್ವವನ್ನು ಹೊಂದಿದವರಾಗಿದ್ದರು. ಕರ್ನಾಟಕ ಅರಣ್ಯ ಇಲಾಖೆಯ ಅಭಿಮನ್ಯು ಎಂದೇ ಹೆಸರಾಗಿದ್ದರು. ದಂತಚೋರ "ೀರಪ್ಪನ್ ಮತ್ತು ಆತನ ಸಹಚರರು ಶ್ರೀನಿವಾಸ್ ಅವರನ್ನು ನಯವಂಚನೆಯ ಜಾಲದಲ್ಲಿ ಸಿಲುಕಿಸಿ 1991ರ ನವೆಂಬರ್ 10ರಂದು ಕೊಲೆ ಮಾಡಿದರು. ಶ್ರೀನಿವಾಸ್ ಅವರ ಕಾರ‌್ಯದಕ್ಷತೆಯನ್ನು ಮೆಚ್ಚಿಿ ಭಾರತ ಸರ್ಕಾರ ಮರಣೋತ್ತರವಾಗಿ ಕೀರ್ತಿಚಕ್ರ ಪ್ರಶಸ್ತಿಿ ನೀಡಿದೆ.
"ೀರಪ್ಪನ್‌ನ ವಂಚನೆುಂದ ಕೊಳ್ಳೆೆಗಾಲದ ಅರಣ್ಯ ರಕ್ಷಕ ಬಿ. ಸಿ. ಮೋಹನಯ್ಯ ಮತ್ತು ಮರಗಳ್ಳರ ಕ್ರೌೌರ‌್ಯಕ್ಕೆೆ ಅರ"ಂದ್ ಹೆಗಡೆ ಜೀವಕಳೆದುಕೊಂಡಿದ್ದಾಾರೆ. ಕಾವೇರಿ ವನ್ಯಜೀ" "ಬಾಗದ ಅರಣ್ಯ "ೀಕ್ಷಕ ದೊಡ್ಡಶೆಟ್ಟಿಿ ಎನ್ನುವವರು ರೈತರ ಅಪಾರ ಆಸ್ತಿಿಯನ್ನು ನಾಶ ಮಾಡುತ್ತಿಿದ್ದ ಕಾಡಾನೆಯನ್ನು ಅರಣ್ಯಕ್ಕೆೆ "ಮ್ಮೆೆಟ್ಟಿಿಸಲು ಹೋದಾಗ ಇತರ ಕಾಡಾನೆಗಳು ಅವರ ಮೇಲೆರಗಿ ತುಳಿದು ಸಾುಸಿದ್ದರಿಂದ ಹುತಾತ್ಮರಾಗಿದ್ದಾಾರೆ. ಕೆಲಸದ ವೇಳೆ ಧೈರ‌್ಯದಿಂದ ಪ್ರಾಾಣತ್ಯಾಾಗ ಮಾಡಿದ ಅವರ ಸೇವೆ ಅ"ಸ್ಮರಣಿಯ. ಇವರ ಮಗನಿಗೆ ಅನುಕಂಪದ ಆಧಾರದಲ್ಲಿ ಸರಕಾರ ಕೆಲಸ ನೀಡಿದೆ. ಮತ್ತು ಕುಟುಂಬಕ್ಕೆೆ 5 ಲಕ್ಷ ರೂ. ಪರಿಹಾರ ಧನ ನೀಡಿದೆ.
2017ರ ಫ್ರೆುವರಿ 18ರಂದು  ಬಂಡಿಪುರ ಹುಲಿಸಂರಕ್ಷಿತ ಪ್ರದೇಶದ ಕಲ್ಕೆೆರೆ ಎಂಬಲ್ಲಿ ಕಾಡ್ಗಿಿಚ್ಚು ಆರಿಸುವ ಕೆಲಸದಲ್ಲ್ಲ್‌ಿ ನಿರತರಾಗಿದ್ದ ಮುರಿಗೆಪ್ಪ ತಮ್ಮನಗೋಳ್ ಎನ್ನುವವರು ಸುತ್ತಲೂ ಬೆಂಕಿ ಏಕಾಏಕಿ ಆವರಿಸಿದ್ದರಿಂದ ಉಸಿರುಗಟ್ಟಿಿ ಸಾವನ್ನಪ್ಪಿಿದ್ದಾಾರೆ. ಇವರ ಕುಟುಂಬಕ್ಕೆೆ  25 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಅವರ ಪತ್ನಿಿಗೆ ಅನುಕಂಪದ ಆಧಾರದಲ್ಲಿ ಉದ್ಯೋೋಗ ಕೊಡಲಾಗಿದೆ.
2018ರ ಮಾರ್ಚ 3ರಂದು ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಫೈರ್‌ಲೈನ್ ಕೆಲಸ ನಡೆಯುತ್ತಿಿದ್ದುದನ್ನು ಪರಿಶೀಲಿಸಲು ಹೋಗಿದ್ದ ಐಎಫ್‌ಎಸ್ ಅಧಿಕಾರಿ ಮಣಿಕಂಠನ್ ಆನೆ ದಾಳಿಗೆ ಸಿಲುಕಿ ಸಾವುಕಂಡಿದ್ದಾಾರೆ.
ಇದೇ ರೀತಿ ಈ ಎಲ್ಲ ಅರಣ್ಯ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ವನ್ಯಜೀ"ಗಳ ಸಂರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟವರು ಇವರು. ಕಳ್ಳಸಾಗಾಣಿಕದಾರರ, ಮರಗಳ್ಳರ, ದಂತಚೋರರ "ರುದ್ಧ ಕೆಚ್ಚೆೆದೆುಂದ ಹೋರಾಡಿದವರು. ಈ ದಿನಾಚರಣೆಯನ್ನು ಎಲ್ಲಾಾ ಜಿಲ್ಲಾಾ ಕೇಂದ್ರದಲ್ಲಿ ಆಚರಿಸಲಾಗುತ್ತಿಿದೆ.
ಇವರ ಕುಟುಂಬಗಳಿಗೆ ನೆರವಾಗಲು ಹುತಾತ್ಮರ ದಿನಾಚರಣೆ ಸ"ುತಿ ರಚಿಸಲಾಗಿದೆ. ಈ ಸ"ುತಿಯು ದೇಣಿಗೆಗಳನ್ನು ಸಂಗ್ರ"ಸಿ ಹುತಾತ್ಮರ ಅವಲಂಬಿತರ ಏಳಿಗೆಗೆ ನೀಡುತ್ತಿಿದೆ. ಜೊತೆಗೆ ಹುತಾತ್ಮರ ಮಕ್ಕಳಿಗೆ ಶಿಕ್ಷಣ, "ದ್ಯಾಾರ್ಥಿ ವೇತನವನ್ನೂ ಸಹ ಕೊಡುತ್ತಿಿದೆ.  ಈ ಎಲ್ಲ ಹುತಾತ್ಮರ ನೆನಪಿನಲ್ಲಿ ಕಾನನ ಸೇನಾನಿಗಳು ಎಂಬ ಆಡಿಯೋ ಸಿ ಡಿ ಸಹ ರಚಿಸಲಾಗಿದೆ. ಇವರ ಬಗ್ಗೆೆ ಸಿನಿಮಾ ತಯಾರಿಸುವ ಪ್ರಸ್ತಾಾವನೆ ಸಹ ಸರಕಾರದ ಮುಂದಿದೆ.
published on 10.9.2019
..................................
          

Saturday, 7 September 2019

ಶಿಕ್ಷಕ ಇಂದಿಗೂ ಭರವಸೆಯ ಬೆಳಕು





ಪರಿವರ್ತನೆ ಜಗದ ನಿಯಮ. ಇದು ಶಿಕ್ಷಣ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಪ್ರಕೃತಿ ಹೇಗೆ ಬದಲಾಗುತ್ತಿಿರುತ್ತದೆಯೋ ಹಾಗೆಯೇ ಶಿಕ್ಷಣವೂ ಕೂಡ. ಇಂದಿನ ಶಿಕ್ಷಕರು ಹೊಸ ಬದಲಾವಣೆಗೆ ತಮ್ಮನ್ನು ತೆರೆದುಕೊಂಡು ಹೊಸತನದತ್ತ ದಾಪುಗಾಲಿರಿಸಬೇಕಿದೆ. ಏಕೆಂದರೆ, ಇದು ತಂತ್ರಜ್ಞಾಾನದ ಕಾಲ. ದಿನೇ ದಿನೇ ಆಶ್ಚರ್ಯವೆನಿಸುವ ಬೆಳವಣಿಗೆಗಳು ನಡೆಯುತ್ತಿಿವೆ. ಶಿಕ್ಷಕರೂ ಸಹ ನಿರಂತರ "ದ್ಯಾಾರ್ಥಿಯಾಗಿದ್ದು, ಕಲಿಸುವುದರ ಜೊತೆಗೆ ಕಲಿಯುವ ಜವಾಬ್ದಾಾರಿಯನ್ನೂ ಹೊಂದಿರಬೇಕು. ಶಿಕ್ಷಕ ಎನ್ನುವುದು ಕೇವಲ ಒಂದು ಹುದ್ದೆೆಯಲ್ಲ. ಮಕ್ಕಳ ಭ"ಷ್ಯವನ್ನು ರೂಪಿಸುವ ಒಂದು ದೊಡ್ಡ ಅವಕಾಶ. ಆದ್ದರಿಂದಲೇ ಇತರ ಎಲ್ಲಾಾ ವೃತ್ತಿಿಗಳಿಗಿಂತ ಇದು ಅತ್ಯಂತ ಶ್ರೇಷ್ಠ ಮತ್ತು ಪ"ತ್ರ. ನಾಳೆ ಸೆಪ್ಟೆೆಂಬರ್ 5, ಶಿಕ್ಷಕರ ದಿನಾಚರಣೆ. ಈ "ನ್ನೆೆಲೆಯಲ್ಲಿ ಶಿಕ್ಷಕರ ಬಗ್ಗೆೆ ಒಂದು ಅವಲೋಕನ.






ನಾನು ಗುರು"ಗೆ ಮೊದಲ ಪೂಜೆಯನ್ನು ಮಾಡುತ್ತೇನೆ. ಏಕೆಂದರೆ, ಅವರು ನನಗೆ ದೇವರು ಮತ್ತು ಮೋಕ್ಷದ ದಾರಿಯನ್ನು ತೋರಿಸಿದವರು-- ಸಂತ ಕಬೀರರು.
ನಾನು ಪಡೆದ ಪ್ರಶಸ್ತಿಿ  ಮತ್ತು ಹುದ್ದೆೆಗಳಲ್ಲಿ ಶಿಕ್ಷಕ ವೃತ್ತಿಿಯೇ ಶ್ರೇಷ್ಠವಾದುದು- ಸರ್ವಪಲ್ಲಿ ರಾಧಾಕೃಷ್ಣನ್.
ನಾನು ನನ್ನ ತಂದೆುಂದ ನಶ್ವರ ಶರೀರ ಪಡೆದೆ. ಆದರೆ ಗುರು ಅರಿಸ್ಟಾಾಟಲ್ ಮೂಲಕ ಅಮರ ಜೀವ ಪಡೆದೆ. ನನ್ನ ತಂದೆ ನನ್ನನ್ನು ಆಕಾಶದಿಂದ ಭೂಮಂಡಲಕ್ಕೆೆ ತಂದಿಟ್ಟರು, ನನ್ನ ಗುರು ನನ್ನನ್ನು ಭೂ"ುುಂದ ಆಕಾಶದೆತ್ತರಕ್ಕೆೆ ಏರಿಸಿದರು. ನನ್ನ ತಂದೆಯನ್ನು ನಾನು ಪ್ರೀತಿಸುತ್ತೇನೆ, ನನ್ನ ಗುರುವನ್ನು ನಾನು ಗೌರ"ಸುತ್ತೇನೆ- ಅರಿಸ್ಟಾಾಟಲ್ .
ನಮ್ಮ ಪರಂಪರೆಯಲ್ಲಿ ಗುರು"ಗೆ ಮಹತ್ವದ ಸ್ಥಾಾನ"ದೆ. ನಮಗೆ ಒಂದಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶನದ ಅವಶ್ಯಕತೆ ಇದೆ. ಈ ಮಹತ್ವದ ಸ್ಥಾಾನವನ್ನು ತುಂಬುವವರನ್ನೇ ಗುರು ಎನ್ನುತ್ತೇವೆ. ಪ್ರಾಾಚೀನ ಕಾಲದಿಂದಲೂ  ಭಕ್ತಿಿ, ಗೌರವ ಮತ್ತು ಕೃತಜ್ಞತೆುಂದ ಸ್ಮರಿಸುವ ಗುಣ ನಮ್ಮ ಸಂಸ್ಕೃತಿಯಲ್ಲಿ ಅಂತರ್ ವಾ"ನಿಯಾಗಿ ಬಂದಿದೆ. ಪುರಂದರದಾಸರು ಇದನ್ನೇ ಗುರು"ನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದರು.
ಒಂದಕ್ಷರ ಕಲಿಸಿದಾತನೂ ಗುರು ಎಂಬ ಮಾತಿದೆ. ನಾವು ಜ್ಞಾಾನವನ್ನು ಯಾರಿಂದಲಾದರೂ, ಯಾವ ಸಂದರ್ಭದಲ್ಲಾಾದರೂ ಪಡೆಯಬಹುದು. ಗುರು -ಶಿಷ್ಯ ಸಂಬಂಧವೆಂದರೆ ಒಬ್ಬರ ಜೀವನವನ್ನು ಮತ್ತೊೊಬ್ಬರು ಪ್ರಭಾ"ಸುವುದು. ಇಲ್ಲಿ ವಂಚನೆ, ಮೇಲು-ಕೀಳು, ಸಣ್ಣತನ, ಸಂಕೋಚ"ಲ್ಲ. ಅ"ನಾಭಾವ ಸಂಬಂಧ"ದೆ. ಟಿ. ಎಸ್. ವೆಂಕಣ್ಣಯ್ಯ- ಕುವೆಂಪು ಅವರ ಗುರು ಶಿಷ್ಯರ ಸಂಬಂಧ ಸದಾ ನೆನಪಾಗುತ್ತದೆ. ಶ್ರೀರಾಮಾಯಣದರ್ಶನಂ ಕೃತಿಯನ್ನೇ ಕುವೆಂಪು ತಮ್ಮ ಗುರು ವೆಂಕಣ್ಣಯ್ಯ ಅವರಿಗೆ ಅರ್ಪಿಸಿ ಗೌರವ ತೋರಿಸಿದ್ದಾಾರೆ. ಅಂದು ಗುರು ವೆಂಕಣ್ಣಯ್ಯ ಅವರನ್ನು ಸ್ವತಃ "ದ್ಯಾಾರ್ಥಿಗಳೇ ಸಾರೋಟಿನಲ್ಲಿ ಕೂಡ್ರಿಿಸಿ ಎಳೆದು ಕರೆತಂದಿದ್ದರಂತೆ. ಅಂದರೆ ಇಲ್ಲಿ ಅವರ ಹೃದಯದಿಂದ ಹರಿದುಬಂದ ಗುರುಪ್ರೇಮ ವ್ಯಕ್ತವಾಗುತ್ತದೆ. ಇಂತಹ ನಿರ‌್ಮಲ ಗುರುಪ್ರೇಮದ ಧಾರೆ ಜೀವಂತವಾಗಿ ಇಂದಿಗೂ ಹರಿದುಬರುತ್ತಿಿದೆ. ಈ ಮೂಲಕ ಗುರುವನ್ನು ಭಕ್ತಿಿ- ಗೌರವದಿಂದ ಕಾಣಲಾಗುತ್ತಿಿದೆ.
ಶಿಕ್ಷಕ ತನ್ನ ಬಾಳನ್ನು ಮೇಣದಂತೆ ಕರಗಿಸಿಕೊಂಡು ಇನ್ನೊೊಬ್ಬರಿಗೆ ಬೆಳಕು ಕೊಡುತ್ತಾಾನೆ ಎಂಬ ಮಾತಿದೆ. ಇದು ನಿಜ. ಅಸಂಖ್ಯಾಾತ "ದ್ಯಾಾರ್ಥಿಗಳ ಬಾಳನ್ನು ತಮ್ಮ ಸೇವಾವಧಿಯಲ್ಲಿ ಬೆಳಗುತ್ತಾಾರೆ. ಇದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ ಎನ್ನುವುದನ್ನು ಮರೆಯಲಾಗದು. ಅರ್ಥಪೂರ್ಣ ಬದುಕಿನಲ್ಲಿ ಶ್ರೇಯಸ್ಸನ್ನು ಸಾಧಿಸಲು ಮುಂದೆ ಗುರಿ ಎಷ್ಟು ಮುಖ್ಯವೋ ಅಷ್ಟೇ "ಂದೆ ನಿಂತ ಗುರುವೂ ಮುಖ್ಯ.
ವ್ಯಕ್ತಿಿಯ ವ್ಯಕ್ತಿಿತ್ವ ನಿರ್ಮಾಾಣದಲ್ಲಿ ಶಿಕ್ಷಕ ನಿಜವಾದ ಶಿಲ್ಪಿಿ. ದೇಶದ ಭ"ಷ್ಯವನ್ನು ನಿರ್ಮಿಿಸುವ ರೂವಾರಿ ಕೂಡ. ತಪ್ಪು ಮಾಡಿದ "ದ್ಯಾಾರ್ಥಿಗಳನ್ನು ಸರಿದಾರಿಗೆ ತರಬೇಕಾದ ಜವಾಬ್ದಾಾರಿ ಶಿಕ್ಷಕರದ್ದು. ಶಿಕ್ಷಕರು ಏಣಿುದ್ದಂತೆ. ಇದು ಪ್ರತಿಯೊಬ್ಬರೂ ಮೇಲೇರಲು ಸಾಧ್ಯವಾಗುವಂತಹುದು. ಏಣಿ ಯಾವಾಗಲೂ ಇದ್ದಲ್ಲಿಯೇ ಇರುತ್ತದೆ. ಆದರೆ ಅನೇಕರು ಇದನ್ನು ಏರಿ ಸಾಧಕರಾಗುತ್ತಾಾರೆ.
ಸರ್ವಪಲ್ಲಿ ರಾಧಾಕೃಷ್ಣ ಅವರು ಹೇಳುವಂತೆ- ಶಿಕ್ಷಕರು ಸ್ನೇಹ, ಗೌರವ, ಘನತೆಗಳಿಂದ ವರ್ತಿಸುವವರು. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಎನ್ನುವುದು ಸೇವೆಯ, ಸಮರ್ಪಣಾ ಮನೋಭಾವದ ಅಥವಾ ಜ್ಞಾಾನದಾಸೋಹದ ಕೇಂದ್ರವಾಗಿ ಉಳಿದಿಲ್ಲ. ಲಾಭದಾಯಕ ಉದ್ದಿಮೆಯಾಗಿ ಮಾರ್ಪಟ್ಟಿಿದೆ. ಇದಕ್ಕೆೆ ತಕ್ಕಂತೆ ಶಿಕ್ಷಕರ ಮನೋಧರ್ಮ ಕೂಡ ಬದಲಾಗತೊಡಗಿದೆ. ವೃತ್ತಿಿಯ "ಂದಿನ ಮೌಲ್ಯ ಕಡಿಮೆಯಾಗತೊಡಗಿದೆ. ಹಣವೇ ಎಲ್ಲವೂ ಆಗತೊಡಗಿದೆ. ಆದರ್ಶ ಮತ್ತು ಮಾದರಿ ಎನ್ನುವುದು ಕನಸಾಗತೊಡಗಿದೆ. ಸೃಜನಶೀಲತೆ ಶಿಕ್ಷಕರಲ್ಲಿ ಮಾಯವಾಗುತ್ತಿಿದೆ.
 ಶಿಕ್ಷಕ ಕೇವಲ ಪಾಠಾನುಭ"ಯಾಗದೆ, ಲೋಕಾನುಭ"ಯಾಗಬೇಕು. ಜ್ಞಾಾನ ದಾನ ಮಾಡಬೇಕಾದ ಶಿಕ್ಷಕನಿಗೆ ಉಳಿದೆಲ್ಲರಿಗಿಂತ ಹೆಚ್ಚಿಿನ ಜ್ಞಾಾನ ಅಗತ್ಯ. ಶಿಕ್ಷಕನೆಂದರೆ ಒಂದರ್ಥದಲ್ಲಿ ಜ್ಞಾಾನಕೋಶ. ಇದನ್ನು ಕಾಪಾಡಿಕೊಳ್ಳಬೇಕಾದರೆ ಮೊದಲು ಅವನಿಗೆ ವೃತ್ತಿಿಗೌರವ ಮುಖ್ಯ. ಇದರಿಂದ ಇಡೀ ಸಮುದಾಯವೇ ಆತನನ್ನು ಗೌರ"ಸುತ್ತದೆ ಎನ್ನುವುದನ್ನು ಯಾವ ಕಾರಣಕ್ಕೂ ಮರೆಯಬಾರದು.
ಶಿಕ್ಷಕರು ಇಂದಿಗೂ ಸಹ ಭರವಸೆಯ ಬೆಳಕು.  ಅವರು ನಿಷ್ಠೆುಂದ ಸೇವೆ ಸಲ್ಲಿಸಿದರೆ ದೇಶದ ನವನಿರ್ಮಾಾಣ ಸಾಧ್ಯ"ದೆ. ಶೀಲ, ಚಾರಿತ್ರ್ಯಶುದ್ಧಿಿ ವ್ಯಕ್ತಿಿಯನ್ನು ನಿರ್ಮಾಾಣ ಮಾಡಬೇಕಿದೆ. ವೃತ್ತಿಿ ನಿಷ್ಠೆೆಯನ್ನು ಬೆಳೆಸಿಕೊಳ್ಳಬೇಕಾದುದು ಶಿಕ್ಷಕರ ಕರ್ತವ್ಯ ಕೂಡ. ಪ್ರಾಾಮಾಣಿಕತೆ, ಕ್ರಿಿಯಾಶೀಲತೆ, ಸಹನಶೀಲತೆ ಮತ್ತು ಕರ್ತವ್ಯಬದ್ಧತೆ ಶಿಕ್ಷಕರಿಗೆ ಅತ್ಯವಶ್ಯ. ಈ ನಾಲ್ಕು ಗುಣಗಳನ್ನು  ಮೈಗೂಡಿಸಿಕೊಂಡರೆ ಆತ ಉತ್ತಮ ಶಿಕ್ಷಕನಾಗಬಲ್ಲ. ರಾಷ್ಟ್ರದ ಬದುಕಿಗೆ ಉಸಿರಾಗಿರುವ ಶಿಕ್ಷಕರು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯದಿದ್ದರೆ ಆ ಮಕ್ಕಳ ಭ"ಷ್ಯವೇ ಹಾಳಾಗುತ್ತದೆ. ಇವೆಲ್ಲವುಗಳನ್ನು ಸೇವೆಯ ಹಾದಿಯ ದೀಪಗಳನ್ನಾಾಗಿ ಮಾಡಿಕೊಳ್ಳುವುದು ಪ್ರಮುಖ ಕರ್ತವ್ಯ. ಶಿಕ್ಷಕನಾದವ ಇದನ್ನೆೆಲ್ಲ ಮೈಗೂಡಿಸಿಕೊಳ್ಳಬೇಕು. ಈ ಮಾತು ಕೊಳಲ ಮೇಲೆ ಸುಳಿದ ಗಾಳಿಯಂತಾಗದೆ, ಕೊಳಲೊಳಗಿಳಿದ ಮಧುರ ಇನಿದನಿಯಾಗಿ ಹೊರಹೊಮ್ಮಬೇಕು.
ಕೆಲವು ಆಪಾದನೆಗಳನ್ನು ಹೊರತುಪಡಿಸಿದರೆ, ಶಿಕ್ಷಕ ವೃಂದ  ಶಿಕ್ಷಣ ವ್ಯವಸ್ಥೆೆಯನ್ನು ಗಟ್ಟಿಿಗೊಳಿಸುತ್ತಿಿದೆ. "ಂದಿನ ಸ್ಥಿಿತಿ ಈಗಿಲ್ಲ. ಈಗ ಬರುವವರು ಬಹುತೇಕ ಉನ್ನತ ವ್ಯಾಾಸಂಗ ಮಾಡಿರುವವರಾಗಿರುವುದರಿಂದ  ತಂತ್ರಜ್ಞಾಾನಕ್ಕೆೆ ತಕ್ಕಂತೆ ಹೊಂದಿಕೊಳ್ಳುತ್ತಿಿದ್ದಾಾರೆ. ಮೌಢ್ಯ ಮತ್ತು ಕಂದಾಚಾರವನ್ನು ಹೊಡೆದೋಡಿಸುವ  ಪ್ರಮುಖ ಕೆಲಸವನ್ನು ಮಾಡುವುದರ ಜೊತೆಗೆ ವೈಜ್ಞಾಾನಿಕವಾಗಿಯೂ ತಮ್ಮ ಮನೋ"ಕಾಸವನ್ನು ಮಾಡಿಕೊಳ್ಳಬೇಕಿದೆ.
ಹೊಸತನವನ್ನು ಕಲಿಯುವ ಮನಸ್ಸು ಶಿಕ್ಷಕರಲ್ಲಿ ಬರಬೇಕಿದೆ. ಇದರಿಂದ "ದ್ಯಾಾರ್ಥಿಗಳನ್ನು ಸಮನ್ವಯಗೊಳಿಸಲು ಅನುಕೂಲವಾಗುತ್ತದೆ. ಆಗ ಶಿಕ್ಷಕ ತಾನೇ ಒಬ್ಬ ಪುಸ್ತಕ ಭಂಡಾರವಾಗುತ್ತಾಾನೆ. ಶಿಕ್ಷಕ ತನ್ನ ವೃತ್ತಿಿಯೇ ತಮ್ಮ ಆಸ್ತಿಿ ಎಂದು ತಿಳಿದಾಗ ಇದೆಲ್ಲಾಾ ಸಾಧ್ಯ. ಜೊತೆಗೆ ಇದು ಯಶಸ್ವಿಿಯಾಗುತ್ತದೆ. ಶಿಕ್ಷಕನಾದವನು ಜೀವಂತಿಕೆಯ, ಸೃಜನಶೀಲತೆಯ ಅವಕಾಶ ಮತ್ತು ಜವಾಬ್ದಾಾರಿಗಳನ್ನು ಹೆಚ್ಚು ಅರ್ಥೈಸಿಕೊಳ್ಳಬೇಕು. ಇದನ್ನು ತಿಳಿದುಕೊಂಡರೆ ವೃತ್ತಿಿ ಅಭಿಮಾನದ ಅವಕಾಶವೂ ಇಲ್ಲಿ ಹೆಚ್ಚುತ್ತದೆ. ಆತ್ಮಾಾವಲೋಕನ ಮಾಡಿಕೊಂಡು ಆರೋಗ್ಯಕರ ಸಮಾಜದ ನಿರ್ಮಾಾಣಕ್ಕೆೆ ಸಜ್ಜಾಾಗುವ ತುರ್ತು ಅವಶ್ಯಕತೆ ಎಂದಿಗಿಂತ ಈಗ ಹೆಚ್ಚಾಾಗಿದೆ.
published on 4th sept. 2019
.......................................