ಪೊಲೀಸರಿಂದ ಲರ್ಕಿಂಗ್ ಬೀಟ್, ಗುಡ್ ಮಾರ್ನಿಂಗ್ ಬೀಟ್
ಅಪರಾಧ ಕೃತ್ಯ ತಡೆಗೆ ಪೊಲೀಸ್ ಇಲಾಖೆಯಿಂದ ವಿನೂತನ ಹೆಜ್ಜೆ
ಶಿವಮೊಗ್ಗ : ರಾತ್ರಿ ಮತ್ತು ಬೆಳಗಿನ ಜಾವ ನಡೆಯುವ ಅಪರಾಧ ಕೃತ್ಯಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ನಗರದಲ್ಲಿ ’ಲರ್ಕಿಂಗ್ ಬೀಟ್’ ವ್ಯವಸ್ಥೆಯನ್ನು ಈಗಾಗಲೆ ಜಾರಿಗೊಳಿಸಿದ್ದು, ಇನ್ನಷ್ಟು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ.
ಪೊಲೀಸ್ ಇಲಾಖೆಯಲ್ಲಿರುವ ಗಸ್ತು ವ್ಯವಸ್ಥೆಗಳಲ್ಲಿ ’ಲರ್ಕಿಂಗ್ ಬೀಟ್’ ಕೂಡ ಒಂದಾಗಿದೆ. ಈ ಬೀಟ್ ವ್ಯವಸ್ಥೆಯಲ್ಲಿ ಪೊಲೀಸರು ರಾತ್ರಿ 12 ಗಂಟೆಯಿಂದ ಮುಂಜಾನೆಯವರೆಗೂ ಆಯಕಟ್ಟಿನ ಪ್ರದೇಶಗಳಲ್ಲಿ ಮಫ್ತಿ ಬಟ್ಟೆ ತೊಟ್ಟು ಕಾರ್ಯನಿರ್ವಹಣೆ ಮಾಡುತ್ತಾರೆ. ಕಳ್ಳಕಾಕರಿಗೆ ಇವರು ಪೊಲೀಸರೆಂಬ ಅನುಮಾನಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಇದನ್ನು ಇಂಗ್ಲಿಷ್‌ನಲ್ಲಿ ’ಲರ್ಕಿಂಗ್ ಬೀಟ್’ ಎಂದು ಕರೆಯಲಾಗುತ್ತದೆ.
’ಪೊಲೀಸರು ಸಮವಸ್ತ್ರ ತೊಟ್ಟು ಓಡಾಡುವುದನ್ನು ಕಳ್ಳಕಾಕರು-ಕಿಡಿಗೇಡಿಗಳು ಗಮನಿಸುತ್ತಾರೆ. ಪೊಲೀಸರು ಹೋಗುವವರಗೆ ಕಾದು ನಂತರ ದುಷ್ಕೃತ್ಯ ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಬೀಟ್‌ಗಳಲ್ಲಿ ’ಲರ್ಕಿಂಗ್ ಬೀಟ್’ ಅತ್ಯಂತ ಮಹತ್ವದ್ದಾಗಿದೆ. ಪೊಲೀಸರಿಲ್ಲವೆಂಬ ಕಾರಣದಿಂದ ಕಳ್ಳಕಾಕರು, ದುಷ್ಕರ್ಮಿಗಳು ದುಷ್ಕೃತ್ಯ ನಡೆಸಲು ಮುಂದಾಗುತ್ತಾರೆ. ಇಂತಹ ವೇಳೆ ಮಫ್ತಿ ಬಟ್ಟೆ ತೊಟ್ಟು, ಪೊಲೀಸರೆಂಬ ಅನುಮಾನ ಬಾರದ ರೀತಿಯಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ತಕ್ಷಣವೇ ಕಿಡಿಗೇಡಿಗಳ ದುಷ್ಕೃತ್ಯ ಪತ್ತೆ ಹಚ್ಚಿ ತಡೆಗಟ್ಟುತ್ತಾರೆ. ಜೊತೆಗೆ ದುಷ್ಕರ್ಮಿಗಳನ್ನು ಸುಲಭವಾಗಿ ಸೆರೆ ಹಿಡಿಯುತ್ತಾರೆ.
ಇದರಿಂದ ಕಿಡಿಗೇಡಿಗಳು ಭಯಭೀತರಾಗಿ ದುಷ್ಕೃತ್ಯ ನಡೆಸಲು ಹಿಂಜರಿಯುತ್ತಾರೆ. ರಾತ್ರಿ ವೇಳೆ ರಸ್ತೆಗಿಳಿಯಲು ಅಂಜುತ್ತಾರೆ. ಇದರಿಂದ ಸಾಮಾನ್ಯವಾಗಿ ರಾತ್ರಿ ವೇಳೆ ನಡೆಯುವ ಅಪರಾಧ ಕೃತ್ಯಗಳು ಇಳಿಮುಖವಾಗುತ್ತವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತ್ತಾರೆ.
’ಶಿವಮೊಗ್ಗ ನಗರದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ’ಲರ್ಕಿಂಗ್ ಬೀಟ್’ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ. ಸಿಬ್ಬಂದಿಗಳ ಕೊರತೆಯ ಹಿನ್ನೆಲೆಯಲ್ಲಿ ಕೆಲವು ಠಾಣೆಗಳಲ್ಲಿ ಈ ಬೀಟ್ ವ್ಯವಸ್ಥೆಗೆ ನಿಯೋಜನೆ ಮಾಡಿರುವ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಿದೆ. ಉಳಿದಂತೆ ಪ್ರಮುಖ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಈ ಬೀಟ್ ವ್ಯವಸ್ಥೆಗೆ ತೊಡಗಿಸಲಾಗಿದೆ’ ಎಂದು ಅವರು ವಿವರಿಸುತ್ತಾರೆ.
ಇಳಿಮುಖ: ಈ ಬೀಟ್ ವ್ಯವಸ್ಥೆಯಿಂದ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ತಡರಾತ್ರಿಯ ನಂತರ ನಡೆಯುತ್ತಿದ್ದ ಅಪರಾಧ ಚಟುವಟಿಕೆಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ. ಯಾವ ರೂಪದಲ್ಲಿ, ಎಲ್ಲಿ ಪೊಲೀಸರು ಬರುತ್ತಾರೋ ಎಂಬ ಆತಂಕದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ನಡೆಸಲು ಹಿಂಜರಿಯುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಹೇಳುತ್ತವೆ.
’ಗುಡ್ ಮಾರ್ನಿಂಗ್ ಬೀಟ್:
ಮುಂಜಾನೆಯ ವೇಳೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯದಲ್ಲಿರುವುದಿಲ್ಲ ಎಂಬುವುದನ್ನರಿತು ಕಳ್ಳರುಮ ಕಿಡಿಗೇಡಿಗಳು ತಮ್ಮ ದುಷ್ಕೃತ್ಯಗಳಿಗೆ ಮುಂಜಾನೆಯ ಸಮಯವನ್ನೇ ಆಯ್ದುಕೊಳ್ಳುತ್ತಿದ್ದರು. ಮುಂಜಾನೆಯ ವೇಳೆಯೇ ಕೆಲವೊಮ್ಮೆ ಹೆಚ್ಚಿನ ಅಪರಾಧ ಕೃತ್ಯಗಳು ವರದಿಯಾಗುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ’ಗುಡ್ ಮಾರ್ನಿಂಗ್’ ಬೀಟ್ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದೆ. ಮುಂಜಾನೆ 4 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಪೊಲೀಸರು ನಗರಾದ್ಯಂತ ಗಸ್ತು ನಡೆಸುತ್ತಾರೆ. ಪೊಲೀಸರ ಗಸ್ತು ಹಿನ್ನೆಲೆಯಲ್ಲಿ ಮುಂಜಾನೆಯ ವೇಳೆ ನಡೆಯುತ್ತಿದ್ದ ಅಪರಾಧ ಕೃತ್ಯಗಳ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ.
’ಪೊಲೀಸ್ ಇಲಾಖೆಯಲ್ಲಿ ನಾನಾ ರೀತಿಯ ಗಸ್ತು ವ್ಯವಸ್ಥೆಗಳಿದ್ದು, ಇದರಲ್ಲಿ ’ಲರ್ಕಿಂಗ್ ಬೀಟ್’ ಕೂಡ ಒಂದಾಗಿದೆ. ಈ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ತಡರಾತ್ರಿಯ ನಿರ್ದಿಷ್ಟ ಸಮಯಗಳಂದು ಪೊಲೀಸರು ಮಫ್ತಿ ಬಟ್ಟೆಯಲ್ಲಿ ಬೀಡುಬಿಟ್ಟು ಕಿಡಿಗೇಡಿಗಳ ಚಲನವಲನಗಳ ಮೇಲೆ ನಿಗಾ ಇಡಲಿದ್ದಾರೆ. ಈ ಬೀಟ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಡರಾತ್ರಿಯ ನಂತರ ನಡೆಯುತ್ತಿದ್ದ ಅಪರಾಧ ಕೃತ್ಯಗಳಲ್ಲಿ ಗಣನೀಯ ಇಳಿಮುಖ ಕಂಡುಬಂದಿದೆ.
-ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ.
------------------------------