ಶಿವಮೊಗ್ಗದಲ್ಲಿ ಹೆಚ್ಚುತ್ತಿವೆ ಬ್ಯಾಂಕ್ ಅವ್ಯವಹಾರಗಳು
ಶಿವಮೊಗ್ಗ: ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸಾಲುಸಾಲಾಗಿ ಬೆಳಕಿಗೆ ಬರುತ್ತಿರುವ ಬ್ಯಾಂಕ್ ಅವ್ಯಹಾರ ಪ್ರಕರಣಗಳು ನಾಗರಿಕ ವಲಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಬ್ಯಾಂಕ್ನಲ್ಲಿರುವ ಕೆಲವು ಭ್ರಷ್ಟ, ಅಪ್ರಾಮಾಣಿಕ ಅಧಿಕಾರಿಗಳು ಮತ್ತು ನೌಕರರು ಸೇರಿ ಮಾಡುತ್ತಿರುವ ವಂಚನೆಯಿಂದಾಗಿ ಇಡೀ ಬ್ಯಾಂಕಿಂಗ್ ವಲಯವನ್ನು ಗ್ರಾಹಕರು ಅನುಮಾನ ದ ದೃಷ್ಟಿಯಿಂದ ನೋಡುವಂತಾಗಿದೆ.
ಜಿಲ್ಲೆಯ ಕೆಲವು ಪ್ರಮುಖ ಬ್ಯಾಂಕ್ ಅವ್ಯವಹಾರಗಳು:
1. ಎರಡು ವರ್ಷಗಳ ಹಿಂದೆ ಡಿ.ಸಿ.ಸಿ. ಬ್ಯಾಂಕ್ನ ಶಿವಮೊಗ್ಗ ನಗರ ಶಾಖೆಯಲ್ಲಿ ಬೆಳಕಿಗೆ ಬಂದ ಸುಮಾರು 62 ಕೋಟಿ ರೂ. ಮೀರಿದ ಹಗರಣವು ರಾಷ್ಟ್ರ, ರಾಜ್ಯದ ಗಮನ ಸೆಳೆದಿತ್ತು. ಇಡೀ ಸಹಕಾರಿ ಬ್ಯಾಂಕಿಂಗ್ ವಲಯವನ್ನೇ ತಲ್ಲಣಗೊಳ್ಳುವಂತೆ ಮಾಡಿತ್ತು. ಈ ಹಗರಣದಲ್ಲಿ ಬ್ಯಾಂಕ್ನ ಮ್ಯಾನೇಜರ್ ಸೇರಿದಂತೆ ಹಲವು ಸಿಬ್ಬಂದಿಗಳು ಭಾಗಿಯಾಗಿದ್ದರು. ಗ್ರಾಹಕ ಖಾತೆಗಳಲ್ಲಿ ವಂಚನೆ ಮಾಡಲಾಗಿತ್ತು. ಗ್ರಾಹಕರು ಅಡಮಾನವಿಟ್ಟಿದ್ದ ಅಸಲಿ ಚಿನ್ನಾಭರಣವನ್ನು ತೆಗೆದುಕೊಂಡು ನಕಲಿ ಚಿನ್ನಾಭರಣ ಇಟ್ಟು ವಂಚಿಸಲಾಗಿತ್ತು. ಈ ಹಗರಣದ ಕುರಿತಂತೆ ಸಿಓಡಿ ತನಿಖೆ ಕೂಡ ನಡೆದಿತ್ತು. ಹಲವು ಪ್ರಭಾವಿಗಳ ಬಂಧನ ಕೂಡ ಆಗಿ, ಮುಖ್ಯ ಆರೋಪಿ ಎನ್ನಲಾಗಿದ್ದ ಮ್ಯಾನೇಜರ್ ಅವರಿಂದ ಅವ್ಯವಹಾರದ ಮೊತ್ತ ವಸೂಲು ಮಾಡಲಾಗಿದೆ.
2. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಸಹಕಾರಿ ಬ್ಯಾಂಕ್ವೊಂದರಲ್ಲಿ ಗ್ರಾಹಕರ ಲಾಕರ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಅಪಹರಿಸಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದರು. ಅಲ್ಲಿಯೂಸಹ ಅವರಿಂದಲೇ ಎಲ್ಲ ಅವ್ಯವಹಾರದ ಮೊತ್ತವನ್ನು ಭರಿಸಿಕೊಳ್ಳಲಾಯಿತು.
3. ನಗರದ ರವೀಂದ್ರನಗರದ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯೊಂದರಲ್ಲಿ ಕೋಟ್ಯಂತರ ರೂ.ಗಳನ್ನು ವಂಚಿಸಲಾಗಿತ್ತು. ವಂಚನೆಯ ಆಧಾರದ ಮೇಲೆ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇಲ್ಲಿಯೂ ಕೂಡ ಗ್ರಾಹಕರ ಖಾತೆಗಳಿಗೆ ಕನ್ನ ಹಾಕಲಾಗಿತ್ತು. ಇದರ ತನಿಖೆ ಇನ್ನೂ ನಡೆಯುತ್ತಲೇ ಇದೆ.
4. 6 ತಿಂಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ಸಹಕಾರಿ ಸಂಘವೊಂದರಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಬ್ಯಾಂಕ್ನ ಸಿಬ್ಬಂದಿಗಳು ಹಾಗೂ ಸಹಕಾರಿ ವಲಯದ ಕೆಲವರು ಈ ಹಗರಣದಲ್ಲಿ ಭಾಗಿಯಾಗಿದ್ದ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ ಇಲ್ಲಿಯವರೆಗೂ ಈ ಹಗರಣದ ಸಮಗ್ರ ವಿವರ ಬೆಳಕಿಗೆ ಬಂದಿಲ್ಲ.
5. ನಗರದ ಕಾರ್ಪೋರೇಷನ್ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ರೈತರ ಸಾಲ ಮಂಜೂರಾತಿಯಲ್ಲಿ ಹತ್ತಾರು ಕೋಟಿ ರೂ. ಗೋಲ್ಮಾಲ್ ನಡೆದಿದೆ. ಇದು ಈಗ ತನಿಖಾ ಹಂತದಲ್ಲಿದ್ದು, ನಂತರವಷ್ಟೇ ನೈಜ ಮೊತ್ತ ಎಷ್ಟೆನ್ನುವುದು ಬೆಳಕಿಗೆ ಬರಬೇಕಿದೆ.
ಇನ್ನೂ ಪತ್ತೆಯಾಗದ ಬ್ಯಾಂಕ್ ಲೂಟಿ
ನಗರದ ಹೊರವಲಯ ಮಾಚೇನಹಳ್ಳಿ ಸಮೀಪ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯೊಂದರಲ್ಲಿ ಹಲವು ಕೋಟಿ ರೂ.ಗಳನ್ನು ರಾತ್ರೋರಾತ್ರಿ ಕಳ್ಳರ ತಂಡ ದೋಚಿ ಪರಾರಿಯಾಗಿತ್ತು. ಈ ವೇಳೆ ಗ್ರಾಹಕರು ಬ್ಯಾಂಕ್ ಲಾಕರ್ ಹಾಗೂ ಅಡಮಾನವಿಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಬ್ಯಾಂಕಿನ ಹಿಂಭಾಗದ ಗೋಡೆಯನ್ನು ಕೊರೆದು ಒಳನುಗ್ಗಿದ್ದ ಕಳ್ಳರು ಲಾಕರ್ನ್ನು ಬ್ಯಾಂಕಿನಿಂದ ಸ್ವಲ್ಪ ದೂರ ಒಯ್ದು ಅಲ್ಲಿ ಒಡೆದು ಸುಮಾರು 9 ಕೆಜಿ ಚಿನ್ನಾಭರಣ ಮತ್ತು 36. 77 ಲಕ್ಷ ರೂ. ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಇವರ ಪತ್ತೆಗೆ ನಾಲ್ಕು ವಿಶೇಷ ತಂಡವನ್ನು ರಚಿಸಿ ಬೆಂಗಳೂರು, ಹೈದ್ರಾಬಾದ್, ತಮಿಳುನಾಡು, ಉತ್ತರ ಭಾರತದ ಹಲವೆಡೆ ಕಳುಹಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಪ್ರಕರಣದ ಆರೋಪಿಗಳಾರೆನ್ನುವುದು ಇಂದಿಗೂ ಬಯಲಾಗಿಲ್ಲ.
-----------------------------------

No comments:
Post a Comment