Saturday, 29 September 2018

ಮರಗಳ ಆರ್ತ ಮೊರೆ....


ಶಿವಮೊಗ್ಗದ ಸಾಗರ ರಸ್ತೆೆಯನ್ನು ಚತುಷ್ಪಥ ರಸ್ತೆೆಯನ್ನಾಾಗಿಸುವ ಕೆಲಸಕ್ಕೆೆ ಚಾಲನೆ ನೀಡಲಾಗಿದೆ. ಇಲ್ಲಿ ಕೆಲವು ಮರಗಳನ್ನು ಅತ್ತ ಕಡಿಯಲೂ ಆಗದೆ, ಇತ್ತ ಜೀವಂತ ಬಿಡಲೂ ಆಗದೆ ಇರುವುದರಿಂದ ಹೇಗಾದರೂ ಸಾಯಿಸಬೇಕೆಂಬ ಯೋಚನೆ ಕಾಮಗಾರಿ ಮಾಡುವವರಲ್ಲಿ ಇದ್ದಂತಿದೆ. ಅದಕ್ಕಾಾಗಿ ಅವರು ಮಾಡಿದ್ದೇನೆಂದರೆ ಮರದ ಎಡ- ಬಲಕ್ಕೆೆ ಮಣ್ಣನ್ನು ತೆಗೆದು ಬಿಟ್ಟಿಿದ್ದಾಾರೆ. ಇದರಿಂದ  ತಾನಾಗಿ ಅದು ಬಿದ್ದು ಹೋಗಬೇಕು, ಇಲ್ಲವೇ ಆಹಾರ ಸರಬರಾಜಾಗದೆ ಒಣಗಿ ಸಾಯಬೇಕು.. ಎಂತಹ ಆಲೋಚನೆ!

ಹೇ ಮನುಜ, ಹತ್ತು ಬಾವಿಗಳು ಒಂದು ಕೊಳಕ್ಕೆೆ ಸಮಾನ, ಹತ್ತು ಕೊಳಗಳು ಒಂದು ಕೆರೆಗೆ ಸಮಾನ, ಹತ್ತು ಕೆರೆಗಳು ಒಬ್ಬ ಪುತ್ರನಿಗೆ ಸಮಾನ, ಹತ್ತು ಪುತ್ರರು ಒಂದು ಮರಕ್ಕೆೆ ಸಮಾನ ಎಂಬ ಮಾತಿದೆ.
ಇದಕ್ಕಾಾಗಿ ಹಿಂದಿನವರು ಸಾಲುಮರ ನೆಟ್ಟರು, ರಕ್ಷಿಸಿ ಬೆಳೆಸಿದರು. ಅವೆಲ್ಲ ಇಂದು ನಿನಗೆ ಬೀದಿಬದಿಯಲ್ಲಿ ನೆರಳು ಕೊಡುತ್ತ ನಿಂತಿವೆ. ಆದರೆ ಈಗ ಅಭಿವೃದ್ಧಿಿ ಹೆಸರಿನಲ್ಲಿ ನಮ್ಮ ಕುಲಕ್ಕೆೆ ಸಂಚಕಾರ ತಂದೊಡ್ಡಿಿರುವೆ. ರಸ್ತೆೆಯಂಚಿನಲ್ಲಿ ನೂರಾರು ವರ್ಷದಿಂದ ನಿನಗೆ ನೆರಳು, ಹಣ್ಣು ನೀಡುತ್ತ, ಉಪಕಾರದಲ್ಲೇ ಕಾಲಕಳೆಯುತ್ತಿಿರುವೆವು. ಉಪಕಾರಕ್ಕೆೆ ಪ್ರತ್ಯುಪಕಾರ ಮಾಡುವುದಿರಲಿ, ನಮ್ಮನ್ನೂ ಸಾಯಿಸಹೊರಟಿರುವೆಯಾ?  ಬುಡಕ್ಕೆೆ ನೇರವಾಗಿ ಕೊಡಲಿ ಹಾಕಲು ಭಯ. ಏಕೆಂದರೆ ಹೋರಾಟ, ಪ್ರತಿಭಟನೆ ಶುರವಾಗುತ್ತದೆ. ಅದಕ್ಕೆೆ ಸುತ್ತ ಮಣ್ಣು ತೆಗೆದು ನನಗೆ ಏನೂ ಸಿಗದಂತೆ ಮಾಡುವುದರ ಜೊತೆಗೆ ನಾನಾಗಿಯೇ ಸಾಯುವಂತೆ ಮಾಡುವ ಹುನ್ನಾಾರ ಮಾಡಿರುವೆಯಾ?
ಇನ್ನಾಾದರೂ ಎಚ್ಚರವಾಗು, ನನಗೊಂದು ಕೊಡ ನೀರುಣಿಸು. ನಿನ್ನ ಪೀಳಿಗೆಯನ್ನು ಸಂರಕ್ಷಿಸುವೆ. ನನ್ನನ್ನು ಕೇವಲ ಮೂರು ವರ್ಷ ಸಲುಹಿದರೆ ಸಾಕು, ನಾನು ನಿನ್ನ ಪೀಳಿಗೆಯನ್ನು ನೂರು ವರ್ಷ ರಕ್ಷಿಸುವೆ.
ನನ್ನಿಿಂದ ನೂರಾರು ಮರಗಳಾಗಿವೆ. ಹೂವಾಗಿ, ಕಾಯಾಗಿ, ಹಣ್ಣಾಾಗಿ, ಹಣ್ಣಿಿನ ಉದರದಲ್ಲಿ ಬೀಜವಾಗಿ ಹೊರಬಂದು ಭೂಮಿಗೆ ಬಿದ್ದು ಮತ್ತೆೆ ಮೊಳಕೆಯೊಡೆದು, ಸೊಂಪಾಗಿ ಬೆಳೆದು ನಿಮ್ಮೆೆದುರು ಬೆಳೆಯುತ್ತಿಿರುವೆ. ಇಂತಹ ನನಗೆ ದಿನಕ್ಕೊೊಂದು ಕೊಡ ನೀರು ಹಾಕಿ, ಜನ, ಜಾನುವಾರುಗಳಿಂದ ರಕ್ಷಿಸುವ ಬದಲು ಸಾಯಿಸುತ್ತಿಿರುವೆಯಲ್ಲಾಾ?  ನನ್ನ ಮೌಲ್ಯ ಬೆಲೆ ಕಟ್ಟಲಾಗದ್ದು ಎಂದರಿತು ಅದರ ಲಾಭಕ್ಕಾಾಗಿ ಯತ್ನಿಿಸುತ್ತಿಿರುವೆಯಾ? ನಿಮಗಾಗಿ, ನಿಮ್ಮ ಮಕ್ಕಳಿಗಾಗಿ, ನಿಮ್ಮ ಮೊಮ್ಮಕ್ಕಳಿಗಾಗಿ, ಮುಂದಿನ ತಲತಲಾಂತರಗಳಿಗಾಗಿ  ಗಾಳಿ, ನೀರು, ಆಹಾರ, ಹೂವು, ಹಣ್ಣು, ನೆರಳು, ಕಾಯಿ, ಬೀಜ, ಔಷಧಿ ಇನ್ನಿಿತರ ಉಪಯೊಗ ನನ್ನಿಿಂದಿದೆ. ಒಂದು ವೃಕ್ಷದ ಜೀವಿತ ಕಾಲದಲ್ಲಿ ಅದರಿಂದ ಸಿಗುವ ಆಮ್ಲಜನಕದ ಮೌಲ್ಯ 15 ಮಿಲಿಯನ್ ರೂಪಾಯಿಗಳು, ಪರಿಸರ ಮಾಲಿನ್ಯವನ್ನು ನಿಯಂತ್ರಿಿಸುವುದಕ್ಕಾಾಗಿ, ಮಣ್ಣು ಸವಕಳಿ ತಡೆಗಾಗಿ, ಆರ್ದ್ರತೆ ಕಾಪಾಡುವುದಕ್ಕಾಾಗಿ, ನೀರು ಮರುಬಳಕೆ, ಪಶುಪಕ್ಷಿಗಳಿಗೆ ಆಶ್ರಯ, ಸಸಾರಜನಕದ ಉತ್ಪಾಾದನೆ ಮುಂತಾದುವುಗಳಿಗೆಲ್ಲ ಬೇಕೇ ಬೇಕು. ಆದ್ದರಿಂದ ನನ್ನನ್ನು ಸಾಯಿಸುವ ಮುನ್ನ ಅಥವಾ ಕಡಿಯುವ ಮುನ್ನ ಯೋಚಿಸು.
ನಿನಗೆ ನನ್ನ ಸಹಾಯ ಬೇಕೆಂದಾದರೆ, ನಿನ್ನ ಮುಂದಿನ ತಲೆಮಾರು ಶುದ್ಧ ಗಾಳಿಯಿಂದ ಬದುಕಬೇಕೆಂದಾದಲ್ಲಿ, ಕನಿಷ್ಠ ನೀರನ್ನಾಾದರೂ ಉಣಿಸು.  ಅಮೂಲ್ಯವಾದ ಕುಡಿಯುವ ನೀರನ್ನು ಕೊಡು ಎಂದು ನಾನು ಕೇಳುತ್ತಿಿಲ್ಲ. ನೀನು ಕೈಕಾಲು ಮುಖ ತೊಳೆದ, ಸ್ನಾಾನ ಮಾಡಿದ ನೀರು, ಯಾವುದಾದರೂ ಆದೀತು. ಅದನ್ನು ಶುದ್ಧಗೊಳಿಸಿ ನಾನು ಮರುಬಳಕೆ ಮಾಡಿಕೊಳ್ಳುತ್ತೇನೆ. ಪುನಃ ನಿನಗೆ ಶುದ್ಧ ನೀರನ್ನು ಕೊಡುತ್ತೇನೆ. ಈಗಲೂ ಕಾಲ ಮಿಂಚಿಲ್ಲ. ಯೋಚಿಸು.
   ನಿನ್ನ ಹಿತ ಚಿಂತಕ ನಾನು, ಆದರೆ ನನ್ನ ಹಿತವನ್ನು ನೀನೇಕೆ ಯೋಚಿಸುತ್ತಿಿಲ್ಲ? ನನ್ನನ್ನು ಸಾಯಿಸಬೇಡ, ಇರಲುಬಿಡು. ಮುಂದಿನ ಪೀಳಿಗೆ ನೆಮ್ಮದಿಯಿಂದಿರಲು ಸಹಕರಿಸು. ಒಮ್ಮೆೆ ಯೋಚಿಸು. ಚತುಷ್ಪಥ ರಚಿಸಿ ಎಲ್ಲಾಾ ಬೋಳುಗಡ್ಡೆೆಯಂತಾದರೆ ನಿನಗೆ ನೆರಳು ಕೊಡುವವರಾರು? ಆಗ ಮತ್ತೆೆ ನನ್ನ ನೆನಪು ಆದೀತು. ಅದಕ್ಕಾಾಗಿ ಸಾಯಿಸಬೇಡ, ನನ್ನ ಮಕ್ಕಳು, ಮರಿಮಕ್ಕಳನ್ನು ಪೋಷಿಸಿ, ಬೆಳೆಸು. ಸಾವಿರಾರು ಜನರಿಗೆ ಉಪಕಾಕಾರಿಯಾಗುವೆ.

published on 28-9-2018
...................................

Monday, 24 September 2018

ಇಂತಹ ಡಿಸಿ ಎಲ್ಲ ಜಿಲ್ಲೆೆಗೂ ಬೇಕು



ಜಿಲ್ಲಾಾಧಿಕಾರಿ ಕೆ. ಎ. ದಯಾನಂದ ಸಮಯ ವ್ಯರ್ಥ ಮಾಡದ ಅಧಿಕಾರಿ. ಎಲ್ಲಿಯೇ ಸಮಸ್ಯೆೆ ಕಂಡುಬರಲಿ, ಅಲ್ಲಿಗೆ ತತಕ್ಷಣವೇ ದೌಡಾಯಿಸುತ್ತಾಾರೆ.  ದೂರು-ದುಮ್ಮಾಾನಗಳನ್ನು ಆಲಿಸಿ, ನಾಗರಿಕರು ನೀಡುವ ದೂರನ್ನು ಗಮನಿಸಿ ಸ್ಥಳ ಸಂದರ್ಶಿಸಿ ಸಮಸ್ಯೆೆ ಪರಿಹರಿಸುತ್ತಿಿದ್ದಾಾರೆ. ಕಳೆದ ವಾರ ಪ್ರಮುಖವಾಗಿ ಭದ್ರಾಾವತಿ ಸರ್ಕಾರಿ ಆಸ್ಪತ್ರೆೆ, ವಿದ್ಯಾಾನಗರದ ವಿದ್ಯಾಾರ್ಥಿನಿಲಯ, ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ದೂರಿನನ್ವಯ ಕ್ರಮ ಜರುಗಿಸಿದ್ದಾಾರೆ. ತಮ್ಮ ಬಿಡುವಿಲ್ಲದ ಸರ್ಕಾರಿ ಸಭೆ, ಸಮಾರಂಭಗಳ ಮಧ್ಯೆೆಯೂ ಬೆಳಿಗ್ಗೆೆ, ಮಧ್ಯಾಾಹ್ನ ಅಥವಾ ಸಂಜೆ ದಿಢೀರ್ ಭೇಟಿ ನೀಡುವ ಮೂಲಕ ಅದಿಕಾರಿಗಳಲ್ಲಿ, ನೌಕರರಲ್ಲಿ ಸಂಚಲನ ಮೂಡಿಸಿದ್ದಾಾರೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗುವ ಮೂಲಕ ಎಲ್ಲಾಾ ಕಚೇರಿಗಳಲ್ಲೂ ಶಿಸ್ತು, ಸಮರ್ಪಕ ಕಾರ್ಯ ನಡೆಯುವಂತೆ ಮಾಡಬೇಕಿದೆ.     



 ಜಿಲ್ಲಾಾ ಆಡಳಿತದ ಶಕ್ತಿಿ ಕೇಂದ್ರವೆಂದೇ ಬಿಂಬಿತವಾಗಿರುವ ಜಿಲ್ಲಾಾಧಿಕಾರಿ ಕಚೇರಿಯು, ಜಿಲ್ಲೆೆಯಲ್ಲಿ ಈಗ ಎಲ್ಲರ ಗಮನಸೆಳೆಯುತ್ತಿಿದೆ. ಪ್ರತಿ ಕೆಲಸ ಕಾರ್ಯಗಳೂ ಇಲ್ಲಿ ವೇಗ ಪಡೆದಿವೆ, ಕಡತಗಳ ವಿಲೇವಾರಿ ಸಕಾಲದಲ್ಲಿ ನಡೆಯುತ್ತಿಿದೆ. ನಾಗರಿಕರ ದೂರು- ದುಮ್ಮಾಾನಗಳೂ ಪರಿಹರಿಸಲ್ಪಡುತ್ತಿಿವೆ. ಇದೆಲ್ಲಕ್ಕಿಿಂತ ಮುಖ್ಯವಾಗಿ ಜನರ ಸಮಸ್ಯೆೆಗೆ ಉತ್ತಮ ಸ್ಪಂದನೆ ಸಿಗುತ್ತಿಿದೆ.
 ದಯಾನಂದ ಅವರು ಜಿಲ್ಲಾಾಧಿಕಾರಿಯಾಗಿ ಆಗಮಿಸಿ ಸುಮಾರು ಎರಡು ತಿಂಗಳಾಗಿದೆ. ಇಷ್ಟರಲ್ಲೇ ಆಡಳಿತ ವ್ಯವಸ್ಥೆೆ ದಿಢೀರ್ ಆಗಿ ಚುರುಕುಗೊಂಡಿದೆ. ಅಧಿಕಾರಿ, ಸಿಬ್ಬಂದಿಗಳು ಮೈಚಳಿ ಬಿಟ್ಟವರ ರೀತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾಾರೆ. ಅಂಕೆಗೆ ಸಿಗದಂತಾಗಿದ್ದ ತಾಲೂಕು ಆಡಳಿತದ ಕೆಲವು ಅಧಿಕಾರಿಗಳೂ ಸಹ ಸರಿದಾರಿಗೆ ಬರಲಾರಂಭಿಸಿದ್ದಾಾರೆ. ಇದು ಸಾರ್ವಜನಿಕರಲ್ಲಿ ಸಂತಸವನ್ನುಂಟು ಮಾಡಿದೆ.   
ದಯಾನಂದ ನೇರ, ನಿರ್ಭಿಡೆಯ ವ್ಯಕ್ತಿಿತ್ವದವರು. ಕೆಲಸವಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿಬಿಡುತ್ತಾಾರೆ. ದಕ್ಷ, ಪ್ರಾಾಮಾಣಿಕ ಕಾರ್ಯನಿರ್ವಹಣೆಯ ಮೂಲಕ ಜನರ ವಿಶ್ವಾಾಸಗಳಿಸಿದ್ದಾಾರೆ. ಓರ್ವ ಡಿ.ಸಿ. ಮನಸ್ಸು ಮಾಡಿದರೆ ಒಂದು ಜಿಲ್ಲೆೆಯ ಆಡಳಿತ ವ್ಯವಸ್ಥೆೆಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವುದನ್ನು ಜಿಲ್ಲೆೆಗೆ ಆಗಮಿಸಿದ ಕೆಲವೇ ತಿಂಗಳಲ್ಲಿ ಮಾಡಿ ತೋರಿಸಲಾರಂಭಿಸಿದ್ದಾಾರೆ. ಇತರರಿಗೆ ಮಾದರಿಯಾಗಿ ನಿಂತುಕೊಂಡಿದ್ದಾಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಡಿಸಿ ಕಚೇರಿ ಬಗ್ಗೆೆ ವಿಶ್ವಾಾಸ ಮೂಡುವಂತೆ ಮಾಡಿದ್ದಾಾರೆ.
  ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರದ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆೆ, ಗ್ರಾಾಪಂ ಕಚೇರಿಗೆ ದಿಢೀರ್ ಭೇಟಿಯಿತ್ತು ಪರಿಶೀಲಿಸುವ ಕೆಲವಾಗಬೇಕಿದೆ. ಈಗಷ್ಟೇ ಈ ಕಾರ್ಯ ಆರಂಭವಾಗಿದೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಡಿಸಿ ನಿರಂತರವಾಗಿ ಮಾಡುತ್ತಿಿದ್ದಾಾರೆ. ದಿಢೀರ್ ಭೇಟಿಯ ವೇಳೆ ಹಲವು ಲೋಪಗಳನ್ನು ಪತ್ತೆೆ ಹಚ್ಚಿಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿಿದ್ದಾಾರೆ. ಕರ್ತವ್ಯ ಲೋಪ ಎಸಗುವವರನ್ನು ಸಸ್ಪೆೆಂಡ್ ಮಾಡುವ, ನೋಟೀಸ್ ಜಾರಿಗೊಳಿಸುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸುತ್ತಿಿದ್ದಾಾರೆ.
ಇದು ನೌಕರರ ವಲಯದಲ್ಲಿ ಸಂಚಲನ ಮೂಡಿಸಿದೆ.
 ಡಿ.ಸಿ.ಯವರು ಯಾವಾಗ ಭೇಟಿ ನೀಡುತ್ತಾಾರೋ ಎಂಬ ಭಯದಿಂದ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡಲಾರಂಭಿಸಿದ್ದಾಾರೆ. ಕಚೇರಿ ಒಳ, ಹೊರಗಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಿಡಿದು ಕಡತಗಳ ವಿಲೇವಾರಿಯವರೆಗೆ ಪರಿಶೀಲನೆ ನಡೆಸುತ್ತಿಿದ್ದಾಾರೆ. ಜೊತೆಗೆ ಡಿ.ಸಿ.ಯವರು ನಡೆಸುವ ಪ್ರತಿಯೊಂದು ಸಭೆಗೂ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಕಟ್ಟುನಿಟ್ಟಾಾಗಿ ಹಾಜರಾಗುತ್ತಿಿದ್ದಾಾರೆ.
 ಜಿಪಂ ಕಾರ್ಯನಿರ್ವಹಣಾಧಿಕಾರಿಯೂ ಆಗಿ ಪ್ರಭಾರ ಹುದ್ದೆೆಯಲ್ಲಿದ್ದರೂ, ಕಾರ್ಯಬಾಹುಳ್ಯ ಸಾಕಷ್ಟಿಿದ್ದರೂ ಜಿಲ್ಲೆೆಯ ಜನರ ಸಮಸ್ಯೆೆಗೆ ಮೊದಲ ಆದ್ಯತೆ ಕೊಡುತ್ತಿಿದ್ದಾಾರೆ. ಇದೇ ವೇಳೆ ನಾಳೆ 25ರಂದು ಜನಸ್ಪಂದನ ಮತ್ತು ಗ್ರಾಾಮವಾಸ್ತವ್ಯವನ್ನೂ ಸೊರಬ ತಾಲೂಕಿನ ಕುಗ್ರಾಾಮಗಳಾದ ಕೊರವಂದ ಮತ್ತು ಅಗಸನಹಳ್ಳಿಿಯಲ್ಲಿ ಏರ್ಪಡಿಸಿದ್ದಾಾರೆ. ಜಿಲ್ಲಾಾ ಕೇಂದ್ರದಿಂದ ಬಹಳ ದೂರವಿರುವ ಗ್ರಾಾಮಗಳನ್ನು ಮೊದಲ ಹಂತದಲ್ಲಿ ಆಯ್ಕೆೆಮಾಡಿಕೊಂಡಿದ್ದು, ಅಲ್ಲಿನ ಸಮಸ್ಯೆೆ ಬಗೆಹರಿಸುವ ಉತ್ಸುಕತೆ ಹೊಂದಿದ್ದಾಾರೆ. ಅದಕ್ಕೆೆ ತಕ್ಕಂತೆ ಈಗಾಗಲೇ ಜಿಲ್ಲಾಾ ಮಟ್ಟದ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾಾರೆ. ಬಹಳ ಸಿಂಪಲ್ ಆಗಿ ಗ್ರಾಾಮವಾಸ್ತವ್ಯ ಮಾಡಬೇಕು. ಜನರ ಸಮಸ್ಯೆೆಗೆ ಆದ್ಯತೆ ಕೊಡಬೇಕು ಎನ್ನುವುದು ಅವರ ಆಶಯ.
ಇಲ್ಲಿಯವರೆಗೆ ತಾವು ಕೆಲಸ ಮಾಡಿದ ಜಿಲ್ಲೆೆಗಳಲ್ಲಿ ಹೆಜ್ಜೆೆ ಗುರುತು ಬಿಟ್ಟು ಬಂದಿರುವ ದಯಾನಂದ, ಜಿಲ್ಲೆೆಯಲ್ಲೂ ಸಹ ಮಾದರಿಯ ಮತ್ತು ಸದಾ ಜನರು ನೆನೆಪಿಸುವ ಕೆಲಸಕ್ಕೆೆ ಮುಂದಾಗಿದ್ದಾಾರೆ. ಇಂತಹ ಜನಮೆಚ್ಚುವ ಅಧಿಕಾರಿಗೆ ರಾಜಕಾರಣಿಗಳ ಸಹಕಾರವೂ ಅಷ್ಟೇ ಪ್ರಮುಖವಾದುದು. ಕನಿಷ್ಠ ಎರಡು ವರ್ಷವಾದರೂ ಜಿಲ್ಲೆೆಯಲ್ಲಿ ಉಳಿಸಿಕೊಂಡು ಅಧಿಕಾರಿಗಳಲ್ಲಿ ಒಂದಷ್ಟು ಹೊಸತನ ಬರುವಂತೆ, ಕೆಲವು ಸಮಸ್ಯೆೆ ಶಾಶ್ವತ ಪರಿಹಾರ ಕಾಣುವಂತೆ, ಸಾಕಷ್ಟು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಬಹುದು. 


ದಯಾನಂದ ಯಾವುದೇ ವಿಷಯದ ಬಗ್ಗೆೆ ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದಾಾರೆ. ಅಧ್ಯಯನ ಮಾಡಿಯೇ ಮಾತನಾಡುವುದು ಇನ್ನೊೊಂದು ವಿಶೇಷ. ಸಮಾರಂಭಗಳಲ್ಲಿ ಅವರ ಮಾತು ಕೇಳಿದವರಿಗೆ ಇದು ಗೊತ್ತಾಾಗುತ್ತದೆ. ಅಧಿಕಾರಿಗಳಿಗೂ ಸಹ ಎಚ್ಚರಿಕೆ ಕೊಡುತ್ತಾಾರೆ, ಪ್ರೀತಿಯಿಂದ ಹೇಳುತ್ತಾಾರೆ. ಕೆಲಸ ಮಾಡದವರನ್ನು ಕಂಡರೆ ಗರಂ ಆಗುತ್ತಾಾರೆ. ಇದರಿಂದಾಗಿ ಅಧಿಕಾರಿಗಳು ಮತ್ತು ನೌಕರರು ಸರಿದಾರಿಗೆ ಬರುವಂತಾಗಿದೆ. ಗ್ರಾಾಮಾಂತರ ಸಮಸೆಗೆ ಹೆಚ್ಚಿಿನ ಆದ್ಯತೆ ಕೊಡುತ್ತಿಿದ್ದಾಾರೆ. ಎಲ್ಲಕ್ಕಿಿಂತ ಮಹತ್ವವಾದದ್ದೆೆಂದರೆ ಜನರ ಸಮಸ್ಯೆೆಗೆ ಸ್ಪಂದಿಸುವುದು. ಜನಸ್ಪಂದನೆಗೆ ಬಂದ ಅರ್ಜಿಗಳನ್ನು ಆಯಾಯ ಇಲಾಖಾಧಿಕಾರಿಗಳಿಗೆ ಕಳುಹಿಸಿ ಆಮೇಲೆ ಅದರ ಬಗ್ಗೆೆ ಕೈಗೊಂಡ ಕ್ರಮವನ್ನೂ ಕೇಳುತ್ತಾಾರೆ. ಜನಪರ ಕಾಳಜಿಯುಳ್ಳ ಒಬ್ಬ ಅಧಿಕಾರಿ ನಿಜಕ್ಕೂ ಮಾಡಬೇಕಾದ ಕೆಲಸ ಇದು. ವರ್ಗಾವಣೆಯಾಗಿ ಹೋಗುವ ಮುನ್ನ ಈ ಜಿಲ್ಲೆೆಯಲ್ಲಿ ನಿಮ್ಮ ಹೆಜ್ಜೆೆ ಗುರುತು ಬಿಟ್ಟು ಹೋಗಿ ಎಂದು ಸದಾ ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಿಿರುತ್ತಾಾರೆ.   

24.9.18
...............................

Saturday, 1 September 2018

ಗೌರಿ-ಗಣೇಶ ವಿಗ್ರಹಗಳ ಅಂತಿಮ ಹಂತದ ಸಿದ್ಧತೆ 
75 ವರ್ಷದಿಂದ ವಿಗ್ರಹ ತಯಾರಿಕೆ ನಡೆಸುತ್ತಿಿರುವ ನಂಜುಂಡಪ್ಪ ಕುಟುಂಬಸ್ಥರು








ಶಿವಮೊಗ್ಗ: ಗಣೇಶ ಚವತಿಗೆ ಇನ್ನು 20 ದಿವಸ ಉಳಿದಿದೆ. ನಾಡಿನಾದ್ಯಂತ ಗಣೇಶ ಮತ್ತು ಗೌರಿ ಆಗಮನಕ್ಕೆೆ ಸಿದ್ಧತೆಯೂ ಆರಂಭವಾಗಿದೆ. ಈ ಸಂದರ್ಭದಲ್ಲಿ ಗಣೇಶ ಮತ್ತು ಗೌರಿಯ ವಿಗ್ರಹ ತಯಾರಕರು ಬಿರುಸಿನಿಂದ ತಮ್ಮ ಕೆಲಸ ಮುಂದುವರೆಸಿದ್ದಾಾರೆ.
ಶಿವಮೊಗ್ಗದಲ್ಲಿ ಗೌರಿ-ಗಣೇಶ ವಿಗ್ರಹ ತಯಾರಿಸುವುದರಲ್ಲಿ ರಾಮಣ್ಣ ಶ್ರೇಷ್ಠಿಿ ಪಾರ್ಕ್ ಬಳಿ ಬಿ.ಬಿ. ರಸ್ತೆೆಯಲ್ಲಿರುವ ಜಿ.ಎನ್.ನಂಜುಂಡಪ್ಪ ವಂಶಸ್ಥರು ಸುಮಾರು 75 ವರ್ಷದಿಂದ ಪ್ರಖ್ಯಾಾತರು. ನಗರದ ಅನೇಕ ಪ್ರಖ್ಯಾಾತ ಗಣಪತಿ ವಿಗ್ರಹ ಇವರ ಕೈಯಿಂದಲೇ ಅರಳುತ್ತದೆ. ಈ ವಂಶದ ಗಣೇಶ್ ಮತ್ತು ಸಹೋದರರ ಕುಟುಂಬದವರು ಈಗ ಈ ವೃತ್ತಿಿಯನ್ನು ಮುಂದುವರೆಸಿಕೊಂಡು ಬಂದಿದ್ದಾಾರೆ. ಪ್ರತಿವರ್ಷ ಸುಮಾರು 400 ರಷ್ಟು ವಿಗ್ರಹವನ್ನು ತಯಾರಿಸುತ್ತಾಾರೆ.
ಗೌರಿ-ಗಣೇಶ ಹಬ್ಬದಲ್ಲಿ ಈ ವಿಗ್ರಹಗಳೇ ಪೂಜೆಗೊಳ್ಳಬೇಕಿರುವುದರಿಂದ ಪೂಜಿಸುವವರು ಸಾಕಷ್ಟಿಿರುವುದರಿಂದ ಅಂತಹವರೆಲ್ಲ ಖಾಯಂ ಆಗಿ ವಿಗ್ರಹ ತಯಾರಕರನ್ನು ಹೊಂದಿರುತ್ತಾಾರೆ. ನಂಜುಂಡಪ್ಪ ವಂಶಸ್ಥರು ಈ ರೀತಿ ಖಾಯಂ ಗ್ರಾಾಹಕರನ್ನೇ ಹೊಂದಿದ್ದಾಾರೆ.
ಇವರ ಜೊತೆಗೆ ಶೃಂಗೇರಿ, ಕಳಸ ಮತ್ತು ಹೊರನಾಡಿಗೆ ನೂರಾರು ವಿಗ್ರಹಗಳನ್ನು ಕಳುಹಿಸುತ್ತಾಾರೆ. ಇಲ್ಲಿಯು ಅವರ ಖಾಯಂ ಗ್ರಾಾಹ್ರಕರಿದ್ದು, ಅವರು ಗಣೇಶನ ಹಬ್ಬ ನಾಲ್ಕು ತಿಂಗಳಿರುವಾಗಲೇ ನೆನೆಪು ಮಾಡುತ್ತಾಾರೆ. ಕೆಲಸವೂ ಆಗಲೇ ಆರಂಭಗೊಳ್ಳುತ್ತದೆ. ಈಗ ಗಣಪತಿಯ ವಿಗ್ರಹಗಳೆಲ್ಲ ಸಿದ್ಧಗೊಂಡಿದ್ದು, ಅಲಂಕಾರ ಮತ್ತು ಬಣ್ಣ ಬಳಿಯುವುದು ಮಾತ್ರ ಬಾಕಿ ಇದೆ. ಅವರ ಮನೆ ಆವರಣದಲ್ಲಿ ಎಲ್ಲಿ ನೋಡಿದರೂ ಗಣಪತಿ ಮತ್ತು ಗೌರಿ ವಿಗ್ರಹ ತುಂಬಿಕೊಂಡಿದೆ. ಹೆಂಗಸರು ಮತ್ತು ಮಕ್ಕಳೂ ಸಹ ಇದೇ ಕೆಲಸದಲ್ಲಿನಿರತಾಗಿರುವುದು ಕಂಡುಬರುತ್ತಿಿದೆ.
ಸತತವಾಗಿ ನಾಲ್ಕು ತಿಂಗಳು ಕುಳಿತು ಎಡೆಬಿಡದೆ ವಿಗ್ರಹ ತಯಾರಿಸುವುದು ಸುಲಭದ ಕೆಲಸವಲ್ಲ. ಆದರೂ ತಮ್ಮ ವೃತ್ತಿಿ ಮತ್ತು ಹಬ್ಬದ ವಿಶೇಷ ಕೆಲಸವಾಗಿರುವುದರಿಂದ ಹಗಲು- ರಾತ್ರಿಿ ಎನ್ನದೆ ಈ ದಿನಗಳಲ್ಲಿ ಕಾಯಕ ನಿರತರಾಗಿರುತ್ತಾಾರೆ. ವಿಗ್ರಹಕ್ಕೆೆ ಮಣ್ಣು ತರುವುದೇ ಈಗ ಸಾಹಸದ ಕೆಲಸವಾಗಿದೆ. ಕುಂಸಿ, ಭದ್ರಾಾವತಿ, ನಗರದ ರಾಗಿಗುಡ್ಡ ಮೊದಲಾದೆಡೆ ಈ ಮಣ್ಣಿಿನ ಲಭ್ಯತೆ ಇದೆ. ಸುಮಾರು ಎರಡು ಟ್ರ್ಯಾಾಕ್ಟರ್ ಮಣ್ಣು ತರಿಸಿ, ಅದನ್ನು ಹದಗೊಳಿಸಿದ ನಂತರ ವಿಗ್ರಹ ತಯಾರಿಕೆ ಶುಭದಿನದಂದು ಆರಂಭಗೊಳ್ಳುತ್ತದೆ. ಹೀಗೆ ಮನೆಯ ಎಲ್ಲರ ಕೈಯಲ್ಲಿ ಗಣಪ- ಗೌರಿ ಅರಳತೊಡಗುತ್ತಾಾರೆ.
ಈಗ ಬಣ್ಣ ಹಚ್ಚುವ ಕೆಲಸವೂ ಆರಂಭವಾಗಿದೆ. ಇನ್ನೊೊಂದು 10 ದಿನದಲ್ಲಿ ವಿಗ್ರಹಗಳೆಲ್ಲ ಮಾರುಕಟ್ಟೆೆಗೆ ಮತ್ತು ಗ್ರಾಾಹಕರ ಮನೆ ಸೇರಲು ಸಿದ್ಧಗೊಳ್ಳುತ್ತಿಿವೆ. ಇದು ಕುಟುಂಬದ ವೃತ್ತಿಿಯಾಗಿ ಪಾರಂಪರಿಕವಾಗಿ ಬಂದಿರುವುದರಿಂದ ಎಷ್ಟೇ ತೊಂದರೆಯಾದರೂ ಎಲ್ಲರೂ ಇದರಲ್ಲಿ ಪಾಲ್ಗೊೊಳ್ಳುತ್ತಾಾರೆ. ಒಂದಷ್ಟು ದಿನ ಮಾತ್ರ ತೊಂದರೆ, ಆನಂತರ ಸಮಸ್ಯೆೆ ಇಲ್ಲ ಎನ್ನುವ ಗಣೇಶ್, ಎಲ್ಲರೂ ಕೈಜೋಡಿಸುವುದರಿಂದ ಸಾಂಗವಾಗಿ ಕೆಲಸ ಪ್ರತಿವರ್ಷ ನಡೆಯುತ್ತಿಿದೆ. ಮಗಳು ಸಹನಾ ಉತ್ತಮ ಪೇಂಟರ್ ಆಗಿರುವುದರಿಂದ ಆ ಕೆಲಸದ ಜವಾಬ್ದಾಾರಿಯನ್ನು ಅವಳಿಗೆ ವಹಿಸಿದ್ದೇನೆ ಎನ್ನುತ್ತಾಾರೆ.
ವಿಗ್ರಹದ ಜೊತೆಗೆ ಉಳಿದ ದಿನಗಳಲ್ಲಿ ಬಾಸಿಂಗ ತಯಾರಿಕೆ, ಮಡಿಕೆ ತಯಾರಿಕೆ ಮಾಡುತ್ತಾಾರೆ. ಇವಗಳಿಗೆ ಅಷ್ಟೇನೂ ಮಾರುಕಟ್ಟೆೆ ಇಲ್ಲದಿರುವುದರಿಂದ ಬೇಡಿಕೆ ಇದ್ದಾಾಗಲಷ್ಟೇ ಮಾಡಿಕೊಡುತ್ತಾಾರೆ. ನಗರದ ಪ್ರಖ್ಯಾಾತ ಗಣಪತಿಗಳೆನಿಸಿಕೊಂಡಿರುವ ಹಿಂದು ಮಹಾಸಭಾ,  ರಾಮಣ್ಣ ಶ್ರೇಷ್ಠಿಿ ಪಾರ್ಕ್, ಭಾವಸಾರ ಕ್ಷತ್ರಿಿಯ ಸಮಾಜ, ಕಡೆಕಲ್, ಶಾಂತಿನಗರ ಮೊದಲಾದೆಡೆಗಳಿಗೆ ಇವರು ದೊಡ್ಡ ಗಾತ್ರದ ಮತ್ತು ಅವರು ಸೂಚಿಸಿದ ಭಂಗಿಯ ವಿಗ್ರಹ ತಯಾರಿಸಿಕೊಡುತ್ತಾಾರೆ. ಈ ವಿಗ್ರಹಗಳೆಲ್ಲ ಈಗ ಸಿದ್ಧಗೊಂಡಿವೆ. ಗಣೇಶನಿಗೆ ಅಂತಿಮ ಟಚಪ್ ಕೊಟ್ಟು ಕಳುಹಿಸಲು ಸನ್ನದ್ಧರಾಗಿದ್ದಾಾರೆ.   
published on aug 25-2018
................................