ಮರಗಳ ಆರ್ತ ಮೊರೆ....
ಶಿವಮೊಗ್ಗದ ಸಾಗರ ರಸ್ತೆೆಯನ್ನು ಚತುಷ್ಪಥ ರಸ್ತೆೆಯನ್ನಾಾಗಿಸುವ ಕೆಲಸಕ್ಕೆೆ ಚಾಲನೆ ನೀಡಲಾಗಿದೆ. ಇಲ್ಲಿ ಕೆಲವು ಮರಗಳನ್ನು ಅತ್ತ ಕಡಿಯಲೂ ಆಗದೆ, ಇತ್ತ ಜೀವಂತ ಬಿಡಲೂ ಆಗದೆ ಇರುವುದರಿಂದ ಹೇಗಾದರೂ ಸಾಯಿಸಬೇಕೆಂಬ ಯೋಚನೆ ಕಾಮಗಾರಿ ಮಾಡುವವರಲ್ಲಿ ಇದ್ದಂತಿದೆ. ಅದಕ್ಕಾಾಗಿ ಅವರು ಮಾಡಿದ್ದೇನೆಂದರೆ ಮರದ ಎಡ- ಬಲಕ್ಕೆೆ ಮಣ್ಣನ್ನು ತೆಗೆದು ಬಿಟ್ಟಿಿದ್ದಾಾರೆ. ಇದರಿಂದ ತಾನಾಗಿ ಅದು ಬಿದ್ದು ಹೋಗಬೇಕು, ಇಲ್ಲವೇ ಆಹಾರ ಸರಬರಾಜಾಗದೆ ಒಣಗಿ ಸಾಯಬೇಕು.. ಎಂತಹ ಆಲೋಚನೆ!
ಹೇ ಮನುಜ, ಹತ್ತು ಬಾವಿಗಳು ಒಂದು ಕೊಳಕ್ಕೆೆ ಸಮಾನ, ಹತ್ತು ಕೊಳಗಳು ಒಂದು ಕೆರೆಗೆ ಸಮಾನ, ಹತ್ತು ಕೆರೆಗಳು ಒಬ್ಬ ಪುತ್ರನಿಗೆ ಸಮಾನ, ಹತ್ತು ಪುತ್ರರು ಒಂದು ಮರಕ್ಕೆೆ ಸಮಾನ ಎಂಬ ಮಾತಿದೆ.
ಇದಕ್ಕಾಾಗಿ ಹಿಂದಿನವರು ಸಾಲುಮರ ನೆಟ್ಟರು, ರಕ್ಷಿಸಿ ಬೆಳೆಸಿದರು. ಅವೆಲ್ಲ ಇಂದು ನಿನಗೆ ಬೀದಿಬದಿಯಲ್ಲಿ ನೆರಳು ಕೊಡುತ್ತ ನಿಂತಿವೆ. ಆದರೆ ಈಗ ಅಭಿವೃದ್ಧಿಿ ಹೆಸರಿನಲ್ಲಿ ನಮ್ಮ ಕುಲಕ್ಕೆೆ ಸಂಚಕಾರ ತಂದೊಡ್ಡಿಿರುವೆ. ರಸ್ತೆೆಯಂಚಿನಲ್ಲಿ ನೂರಾರು ವರ್ಷದಿಂದ ನಿನಗೆ ನೆರಳು, ಹಣ್ಣು ನೀಡುತ್ತ, ಉಪಕಾರದಲ್ಲೇ ಕಾಲಕಳೆಯುತ್ತಿಿರುವೆವು. ಉಪಕಾರಕ್ಕೆೆ ಪ್ರತ್ಯುಪಕಾರ ಮಾಡುವುದಿರಲಿ, ನಮ್ಮನ್ನೂ ಸಾಯಿಸಹೊರಟಿರುವೆಯಾ? ಬುಡಕ್ಕೆೆ ನೇರವಾಗಿ ಕೊಡಲಿ ಹಾಕಲು ಭಯ. ಏಕೆಂದರೆ ಹೋರಾಟ, ಪ್ರತಿಭಟನೆ ಶುರವಾಗುತ್ತದೆ. ಅದಕ್ಕೆೆ ಸುತ್ತ ಮಣ್ಣು ತೆಗೆದು ನನಗೆ ಏನೂ ಸಿಗದಂತೆ ಮಾಡುವುದರ ಜೊತೆಗೆ ನಾನಾಗಿಯೇ ಸಾಯುವಂತೆ ಮಾಡುವ ಹುನ್ನಾಾರ ಮಾಡಿರುವೆಯಾ?
ಇನ್ನಾಾದರೂ ಎಚ್ಚರವಾಗು, ನನಗೊಂದು ಕೊಡ ನೀರುಣಿಸು. ನಿನ್ನ ಪೀಳಿಗೆಯನ್ನು ಸಂರಕ್ಷಿಸುವೆ. ನನ್ನನ್ನು ಕೇವಲ ಮೂರು ವರ್ಷ ಸಲುಹಿದರೆ ಸಾಕು, ನಾನು ನಿನ್ನ ಪೀಳಿಗೆಯನ್ನು ನೂರು ವರ್ಷ ರಕ್ಷಿಸುವೆ.
ನನ್ನಿಿಂದ ನೂರಾರು ಮರಗಳಾಗಿವೆ. ಹೂವಾಗಿ, ಕಾಯಾಗಿ, ಹಣ್ಣಾಾಗಿ, ಹಣ್ಣಿಿನ ಉದರದಲ್ಲಿ ಬೀಜವಾಗಿ ಹೊರಬಂದು ಭೂಮಿಗೆ ಬಿದ್ದು ಮತ್ತೆೆ ಮೊಳಕೆಯೊಡೆದು, ಸೊಂಪಾಗಿ ಬೆಳೆದು ನಿಮ್ಮೆೆದುರು ಬೆಳೆಯುತ್ತಿಿರುವೆ. ಇಂತಹ ನನಗೆ ದಿನಕ್ಕೊೊಂದು ಕೊಡ ನೀರು ಹಾಕಿ, ಜನ, ಜಾನುವಾರುಗಳಿಂದ ರಕ್ಷಿಸುವ ಬದಲು ಸಾಯಿಸುತ್ತಿಿರುವೆಯಲ್ಲಾಾ? ನನ್ನ ಮೌಲ್ಯ ಬೆಲೆ ಕಟ್ಟಲಾಗದ್ದು ಎಂದರಿತು ಅದರ ಲಾಭಕ್ಕಾಾಗಿ ಯತ್ನಿಿಸುತ್ತಿಿರುವೆಯಾ? ನಿಮಗಾಗಿ, ನಿಮ್ಮ ಮಕ್ಕಳಿಗಾಗಿ, ನಿಮ್ಮ ಮೊಮ್ಮಕ್ಕಳಿಗಾಗಿ, ಮುಂದಿನ ತಲತಲಾಂತರಗಳಿಗಾಗಿ ಗಾಳಿ, ನೀರು, ಆಹಾರ, ಹೂವು, ಹಣ್ಣು, ನೆರಳು, ಕಾಯಿ, ಬೀಜ, ಔಷಧಿ ಇನ್ನಿಿತರ ಉಪಯೊಗ ನನ್ನಿಿಂದಿದೆ. ಒಂದು ವೃಕ್ಷದ ಜೀವಿತ ಕಾಲದಲ್ಲಿ ಅದರಿಂದ ಸಿಗುವ ಆಮ್ಲಜನಕದ ಮೌಲ್ಯ 15 ಮಿಲಿಯನ್ ರೂಪಾಯಿಗಳು, ಪರಿಸರ ಮಾಲಿನ್ಯವನ್ನು ನಿಯಂತ್ರಿಿಸುವುದಕ್ಕಾಾಗಿ, ಮಣ್ಣು ಸವಕಳಿ ತಡೆಗಾಗಿ, ಆರ್ದ್ರತೆ ಕಾಪಾಡುವುದಕ್ಕಾಾಗಿ, ನೀರು ಮರುಬಳಕೆ, ಪಶುಪಕ್ಷಿಗಳಿಗೆ ಆಶ್ರಯ, ಸಸಾರಜನಕದ ಉತ್ಪಾಾದನೆ ಮುಂತಾದುವುಗಳಿಗೆಲ್ಲ ಬೇಕೇ ಬೇಕು. ಆದ್ದರಿಂದ ನನ್ನನ್ನು ಸಾಯಿಸುವ ಮುನ್ನ ಅಥವಾ ಕಡಿಯುವ ಮುನ್ನ ಯೋಚಿಸು.
ನಿನಗೆ ನನ್ನ ಸಹಾಯ ಬೇಕೆಂದಾದರೆ, ನಿನ್ನ ಮುಂದಿನ ತಲೆಮಾರು ಶುದ್ಧ ಗಾಳಿಯಿಂದ ಬದುಕಬೇಕೆಂದಾದಲ್ಲಿ, ಕನಿಷ್ಠ ನೀರನ್ನಾಾದರೂ ಉಣಿಸು. ಅಮೂಲ್ಯವಾದ ಕುಡಿಯುವ ನೀರನ್ನು ಕೊಡು ಎಂದು ನಾನು ಕೇಳುತ್ತಿಿಲ್ಲ. ನೀನು ಕೈಕಾಲು ಮುಖ ತೊಳೆದ, ಸ್ನಾಾನ ಮಾಡಿದ ನೀರು, ಯಾವುದಾದರೂ ಆದೀತು. ಅದನ್ನು ಶುದ್ಧಗೊಳಿಸಿ ನಾನು ಮರುಬಳಕೆ ಮಾಡಿಕೊಳ್ಳುತ್ತೇನೆ. ಪುನಃ ನಿನಗೆ ಶುದ್ಧ ನೀರನ್ನು ಕೊಡುತ್ತೇನೆ. ಈಗಲೂ ಕಾಲ ಮಿಂಚಿಲ್ಲ. ಯೋಚಿಸು.
ನಿನ್ನ ಹಿತ ಚಿಂತಕ ನಾನು, ಆದರೆ ನನ್ನ ಹಿತವನ್ನು ನೀನೇಕೆ ಯೋಚಿಸುತ್ತಿಿಲ್ಲ? ನನ್ನನ್ನು ಸಾಯಿಸಬೇಡ, ಇರಲುಬಿಡು. ಮುಂದಿನ ಪೀಳಿಗೆ ನೆಮ್ಮದಿಯಿಂದಿರಲು ಸಹಕರಿಸು. ಒಮ್ಮೆೆ ಯೋಚಿಸು. ಚತುಷ್ಪಥ ರಚಿಸಿ ಎಲ್ಲಾಾ ಬೋಳುಗಡ್ಡೆೆಯಂತಾದರೆ ನಿನಗೆ ನೆರಳು ಕೊಡುವವರಾರು? ಆಗ ಮತ್ತೆೆ ನನ್ನ ನೆನಪು ಆದೀತು. ಅದಕ್ಕಾಾಗಿ ಸಾಯಿಸಬೇಡ, ನನ್ನ ಮಕ್ಕಳು, ಮರಿಮಕ್ಕಳನ್ನು ಪೋಷಿಸಿ, ಬೆಳೆಸು. ಸಾವಿರಾರು ಜನರಿಗೆ ಉಪಕಾಕಾರಿಯಾಗುವೆ.
published on 28-9-2018
...................................

No comments:
Post a Comment