ಗಾಂಧಿ ಸಿದ್ಧಾಾಂತ ನಿತ್ಯನೂತನ
ಅಕ್ಟೋೋಬರ್ 2 ರಂದು ಮಾತ್ರ ನಮಗೆ ಗಾಂಧೀಜಿ ನೆನಪಾಗುತ್ತಾಾರೆ. ನಂತರ ಮರೆಯಾಗುತ್ತಾಾರೆ. ಆದರೆ ಗಾಂಧಿ ಸಿದ್ಧಾಾಂತ ಹಾಗಲ್ಲ, ಅದು ನಿತ್ಯನೂತನ. ಪ್ರಪಂಚದ ಎಲ್ಲ ದೇಶಗಳು ಅನೇಕ ಸಿದ್ಧಾಾಂತಗಳ ಅಡಿಯಲ್ಲಿ ಬೆಳೆಯುತ್ತಿಿದ್ದರೂ ಈ ಸಿದ್ಧಾಾಂತ ಮಾತ್ರ ಇಂದೂ ಪ್ರಸ್ತುತವಾಗಿದೆ. ಭಾರತದಲ್ಲಿ ಅಹಿಂಸೆ, ಸತ್ಯಾಾಗ್ರಹ, ರಕ್ತರಹಿತ ಕ್ರಾಾಂತಿಯಿಂದ ಸ್ವಾಾತಂತ್ರ್ಯ ಬಂದಿದ್ದರಿಂದ, ಇಂದಿಗೂ ಇಲ್ಲಿ ಅನೇಕ ಭಾಷೆಗಳು ಧರ್ಮಗಳ ಮಧ್ಯೆೆ ಒಂದಿಷ್ಟು
ಸಹಿಷ್ಣುತೆ ಇದೆ. ಅದಕ್ಕೆೆ ಕಾರಣ ಗಾಂಧಿ ಸಿದ್ಧಾಾಂತ.
ಮರೆತೆವೋ ನಾವು ಮರೆಯಬಾರದವನ
ಕೊಂದೆವೋ ನಾವು ಕೊಲಬಾರದವನ
ಹೇ ರಾಮಾ, ನಾವೆಂತ ಪಾಪಿ ಜನಾ
ಎಂದು ಕವಿ ಕಯ್ಯಾಾರ ಕಿಂಞಣ್ಣ ರೈ ‘ಹೇ ರಾಮಾ’ ಎಂಬ ಕವಿತೆಯಲ್ಲಿ ಮರುಗುತ್ತಾಾರೆ.
ಸ್ವಾಾತಂತ್ರ್ಯೋೋತ್ತರ ಭಾರತದಲ್ಲಿರುವ ನಾವು ಗಾಂಧೀಜಿಯನ್ನು ಮರೆಯಬಾರದು. ಆದರೆ ಇಂದು ಅವರನ್ನು ಟೀಕಿಸುತ್ತಿಿದ್ದೇವೆ, ವ್ಯಂಗ್ಯ ಮಾಡುತ್ತಿಿದ್ದೇವೆ, ನಿಂದಿಸುತ್ತಿಿದ್ದೇವೆ. ಗಾಂಧೀಜಿ ತೋರಿದ, ಸಾರಿದ ಜೀವನಾದರ್ಶ ನಮಗೆ ಬೇಡವಾಗಿದೆ. ಅವರ ಸಿದ್ಧಾಾಂತದ ಬಗ್ಗೆೆ ಮಾತನಾಡುವವರೂ ಕಡಿಮೆಯಾಗುತ್ತಿಿದ್ದಾಾರೆ.
ಇದೇನೇ ಇದ್ದರೂ, ಗಾಂಧಿ ಸಿದ್ಧಾಾಂತ ಮಾತ್ರ ಸದಾ ನಿತ್ಯನೂತನ. ಪ್ರಪಂಚದ ಎಲ್ಲ ದೇಶಗಳು ಅನೇಕ ಸಿದ್ಧಾಾಂತಗಳ ಅಡಿಯಲ್ಲಿ ಬೆಳೆಯುತ್ತಿಿದ್ದರೂ ಈ ಸಿದ್ಧಾಾಂತ ಮಾತ್ರ ಬಲಪಂಥೀಯ, ಎಡಪಂಥೀಯ ಎನ್ನದೆ ಆಚಾರ, ವಿಚಾರಗಳಡಿಯಲ್ಲಿ ನಿತ್ಯನೂತನವಾಗಿ ಇಂದಿಗೂ ಪ್ರಸ್ತುತವಾಗಿದೆ.
ಬುದ್ಧ, ಬಸವಣ್ಣ ನೀಡಿದ ಅದೇ ವಿಚಾರಗಳನ್ನು ಹೊಸ ಹೊಳಪಿನೊಂದಿಗೆ ಗಾಂಧೀಜಿ ಪ್ರತಿಪಾದಿಸಿದರು. ಪ್ರಪಂಚದ ಅನೇಕ ದೇಶಗಳು ಸ್ವಾಾತಂತ್ರ್ಯಕ್ಕಾಾಗಿ ಅನೇಕ ಹೋರಾಟಗಳನ್ನು ಮಾಡಿ ರಕ್ತದ ಕೋಡಿಯನ್ನೇ ಹರಿಸಿ ಸ್ವಾಾತಂತ್ರ್ಯ ಪಡೆದಿದ್ದರೂ ಸ್ವಾಾತಂತ್ರ್ಯ ಸಿಕ್ಕ ನಂತರವೂ ಅಲ್ಲೆೆಲ್ಲ ಅಶಾಂತಿ, ದ್ವೇಷ, ಮಾನಸಿಕ ಕ್ಷೋಭೆ ಇದ್ದೇ ಇದೆ. ಭಾರತದಲ್ಲಿ ಅಹಿಂಸೆ, ಸತ್ಯಾಾಗ್ರಹ, ರಕ್ತರಹಿತ ಕ್ರಾಾಂತಿಯಿಂದ ಈ ಸ್ವಾಾತಂತ್ರ್ಯ ಬಂದಿದ್ದರಿಂದ ಇಂದಿಗೂ ಇಲ್ಲಿ ಅನೇಕ ಭಾಷೆಗಳು ಧರ್ಮಗಳ ಮಧ್ಯೆೆ ಒಂದಿಷ್ಟು ಸಹಿಷ್ಣುತೆ ಇದೆ. ಅದಕ್ಕೆೆ ಕಾರಣ ಗಾಂಧಿ ಸಿದ್ಧಾಾಂತ.
ಉಗ್ರಗಾಮಿಗಳು ಪ್ರಪಂಚವನ್ನೆೆಲ್ಲ ಆವರಿಸುತ್ತಿಿರುವಾಗ ಗಾಂಧೀಜಿಯ ಪರಧರ್ಮ ಸಹಿಷ್ಣುತೆ ನಮಗೆ ಆದರ್ಶವಲ್ಲವೇ? ವಿದೇಶೀಕರಣದ ಹುಚ್ಚು ವ್ಯಾಾಮೋಹದಲ್ಲಿ ತೇಲುತ್ತಿಿರುವಾಗ ಸ್ವದೇಶಿ ಚಳುವಳಿ ಎಷ್ಟು ಮುಖ್ಯ ಅನಿಸುವುದಿಲ್ಲವೇ? ಬಾದಾಮಿ ಕೊಳ್ಳಲಾಗದವನಿಗೆ ಶೇಂಗಾ ಬೀಜ ಅಪ್ಯಾಾಯವಾಗದೇ ಇನ್ನೇನು? ಸೂಟು ಬೂಟಿನ ವಸ್ತ್ರ ಪ್ರದರ್ಶನದ ಮಧ್ಯೆೆ ಸರಳ ಖಾದಿ ಎಷ್ಟು ಸುಂದರ ಅಲ್ಲವೇ? ಕೊಚ್ಚುವ, ಕೊಲ್ಲುವ ಹಿಂಸೆಗಳಿಗಿಂತ ಉಪವಾಸಗಳಿಂದ ಹೆದರಿಸುವುದು ದೊಡ್ಡ ಅಸ್ತ್ರವೇ ಅಲ್ಲವೇ? ಗಾಂಧಿ ಸಿದ್ಧಾಾಂತಗಳನ್ನು ಇಂದಿನ ಯುವಕ ಯುವತಿಯರು ಸಹ ಒಪ್ಪುತ್ತಾಾರೆ, ಒಪ್ಪುತ್ತಿಿದ್ದಾಾರೆ. ನೋಡಿ, ಅಣ್ಣಾಾ ಹಜಾರೆಯ ಭ್ರಷ್ಟಾಾಚಾರದ ವಿರುದ್ಧದ ಉಪವಾಸದ ಹೋರಾಟಕ್ಕೆೆ ಐ.ಟಿ. ಬಿ.ಟಿ. ಯಿಂದ ಹಿಡಿದು ಸಾಮಾನ್ಯವರ್ಗದ ಜನರು ಸಹ ಕೈ ಜೋಡಿಸಿದ್ದರು. ಗಾಂಧೀಜಿಯ ಆ ಸಿದ್ಧಾಾಂತವೇ ಪ್ರೇರಣೆ ಅಲ್ಲವೇ?
ನಮ್ಮ ಗಾಂಧಿಯ ಬಾಗು ಬಳುಕಿನ ದೇಹ, ಕೋಲಿನಾಸರೆಯ ಜೀವ, ಬರಿಮೈಯ ಆ ಶರೀರ, ಉಪವಾಸ, ಅಸಹಕಾರ, ಶಾಂತಿ ಮಂತ್ರದ ಹರಿಕಾರ. ಮದ್ದಿಲ್ಲ, ಗುಂಡಿಲ್ಲ, ಬರಿಕೈಯ ಫಕೀರ. ದಂಡು ಕಟ್ಟದಿದ್ದರೂ ಹಿಂಡಿಂಡು ಜನ ಅವರ ಹಿಂದೆ ಇರುತ್ತಿಿದ್ದರು. ಉಪವಾಸ ಸತ್ಯಾಾಗ್ರಹದಿಂದಲೇ ಕ್ಷಣಾರ್ಧದಲ್ಲಿ ಯುವಜನರನ್ನು ಗೆದ್ದರು. ಕೋಟಿ ಕೋಟಿ ನಾಯಕರು ಇರಬಹುದು ಈ ದೇಶದಲ್ಲಿ. ಆದರೂ ನೋಟಿನೊಳಗೆ ಅವರೊಬ್ಬರಿಗೇ ಸ್ಥಾಾನ. ಇದು ಅವರ ಪ್ರಸ್ತುತತೆಗೆ ಸಾಕ್ಷಿ.
ಪ್ರಪಂಚದ ಯಾವುದೇ ಭಾಗದಲ್ಲಿ ಯಾವುದೇ ಸಿದ್ಧಾಾಂತಗಳು ಒಂದಿಷ್ಟು ವರ್ಷ ಪ್ರಬಲವಾಗಿದ್ದರೂ ಕೊನೆಗೆ ಅವು ನಮ್ಮ ಗಾಂಧೀ ಸಿದ್ಧಾಾಂತದ ಆದರ್ಶದ ಪ್ರಭಾವಕ್ಕೆೆ ಒಳಗಾಗಲೇಬೇಕು. ಯಾಕೆಂದರೆ ಇದು ನಿತ್ಯನೂತನ.
‘ಸತ್ಯಮೇವ ಜಯತೇ’ ಎಂಬುದನ್ನು ಮತ್ತೆೆ ತೋರಿಸಿಕೊಟ್ಟವರು ಗಾಂಧೀಜಿ. ಹಿಂಸೆಯನ್ನು ಅಹಿಂಸೆಯ ಮೂಲಕ ಜಯಿಸಲು ಸಾಧ್ಯವೆಂಬುದನ್ನು ಜಗತ್ತಿಿಗೇ ಸಾರಿದವರು. ಗಾಂಧೀಜಿಯ ಕಾಲಾನಂತರ ಅವರು ತೋರಿದ ರಾಜಮಾರ್ಗದಲ್ಲೇ ಅಂದರೆ ಸತ್ಯ ಅಹಿಂಸೆಯ ಮೂಲಕವಾಗಿಯೇ ಜಗತ್ತಿಿನ ಅನೇಕ ರಾಷ್ಟ್ರಗಳು ಸ್ವತಂತ್ರವಾದುವು ಎಂಬುದನ್ನು ನೆನಪಿಸಿಕೊಳ್ಳಬೇಕು. ಗಾಂಧೀಜಿ ಸತ್ಯ ಅಹಿಂಸೆಯ ಮೂಲಕವೇ ನಾಡನ್ನು ಎಚ್ಚರಿಸಿದರು; ಕಟ್ಟಿಿದರು. ಆದರೆ ನಮಗಿಂದು ಸತ್ಯದ ಮುಖವಾಡವಿದೆ; ಅಹಿಂಸೆ ಬರಿಯ ಘೋಷಣೆಯಾಗಿ ಉಳಿದಿದೆ.
ಗಾಂಧೀಜಿ ಮಹಾತ್ಮರೆಂದು ಕರೆಸಿಕೊಂಡಿದ್ದು ಅವರ ನಡೆ-ನುಡಿಯ ಬದುಕಿನಿಂದಾಗಿ. ಸಾಧಿಸಿ ತೋರಿದ ಅಸಾಮಾನ್ಯ ಸಾಧನೆಯಿಂದಾಗಿ. ಸರ್ವಸಮತಾ ದೃಷ್ಟಿಿಯ ಉಜ್ವಲ ಮಾನವತಾವಾದಿಯಾಗಿ. ಅನೇಕ ವಿದೇಶೀಯ ಮಹಾವ್ಯಕ್ತಿಿಗಳೂ ಕೂಡ ಗಾಂಧೀಜಿಯವರನ್ನು ಕೊಂಡಾಡಿದ್ದಾಾರೆ.
ಗಾಂಧೀಜಿ ಸದಾ ಸರಳ ಜೀವನ ನಡೆಸಿದರು. ಅವರ ಉಡುಗೆ- ತೊಡುಗೆಗಳೇ ಇದಕ್ಕೆೆ ಸಾಕ್ಷ್ಯವಾಗಿದ್ದವು. ಅವರೆಂದೂ ಮದ್ಯ- ಮಾಂಸ ಮುಟ್ಟಲಿಲ್ಲ. ನಾಲಗೆಯ ಚಪಲಕ್ಕೆೆ ಒಳಗಾಗಲಿಲ್ಲ. ಹಿತಮಿತವಾಗಿತ್ತು ಅವರ ಆಹಾರ. ದಿನಾ ಸಾಮೂಹಿಕ ಪ್ರಾಾರ್ಥನೆ, ಆಗಾಗ ಮೌನ ಅವರಿಗೆ ವ್ರತವಾಗಿತ್ತು. ಸಹನೆ ಅವರ ಅಸ್ತ್ರವಾಗಿತ್ತು. ಇಂದ್ರಿಿಯ ನಿಗ್ರಹಕ್ಕಾಾಗಿ ಆಗಾಗ ಉಪವಾಸ ಅವರಿಗೆ ದೀಕ್ಷೆಯಾಗಿತ್ತು. ಎಲ್ಲಕ್ಕಿಿಂತ ಮಿಗಿಲಾಗಿ ಆತ್ಮಶೋಧನೆ ಅವರ ಬದುಕಿನ ಧ್ಯೇಯವಾಗಿತ್ತು. ಸರ್ವ ಮತ-ಧರ್ಮಗಳ ಸತ್ಯಶೋಧನೆ ಅವರ ಗುರಿಯಾಗಿತ್ತು. ಸರ್ವಹಿತ ಸಾಧನೆ ಅವರ ಜೀವನ ಪಥವಾಗಿತ್ತು.
published on oct 2
.............................

No comments:
Post a Comment