ಲಾಬಿಗೆ ಮಣಿಯದಿರಲಿ ಜಿಲ್ಲಾಡಳಿತ
ಜಿಲ್ಲಾ ಸೇವಾ ಪ್ರಶಸ್ತಿಗೆ 22 ಅರ್ಜಿ
ಕೆಲವು ಪ್ರಶಸ್ತಿಗಳಂತೆ ಈ ಪ್ರಶಸ್ತಿಯೂ ಕೂಡ ಆರೋಪದಿಂದ ಮುಕ್ತವಾಗಿಲ್ಲ. ಲಾಬಿ, ಪ್ರಭಾವ, ಜಾತಿ, ರಾಜಕಾರಣಗಳ ಶಿಫಾರಸ್ಸು ಪ್ರಮುಖ ಪಾತ್ರವಹಿಸುತ್ತಿರುವ ಆರೋಪಗಳು ನೌಕರರ ವಲಯದಿಂದಲೇ ಕೇಳಿಬರುತ್ತಿವೆ. ಕೆಲವು ನೌಕರರು ಪ್ರಶಸ್ತಿ ಪಡೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿರುವ ಮಾಹಿತಿ ಬರುತ್ತಿದೆ. ’ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಭಾವ, ಒತ್ತಡಗಳಿಂದ ಮುಕ್ತವಾಗಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ನೌಕರರಿಗಷ್ಟೆ ಸಿಗುವಂತಾಗಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಭಾರೀ ಪೈಪೋಟಿ ಕಂಡುಬರುತ್ತಿದೆ. ಇದಕ್ಕಾಗಿ ವಶೀಲಿ ಸರಿಯಲ್ಲ. ರಾಜಕಾರಣಿಗಳಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುವ ಕೆಲಸ ನಡೆಯುತ್ತದೆ. ಇದಕ್ಕೆ ಕಡಿವಾಣ ಬೀಳಬೇಕು. ಜನಪರಕಾಳಜಿ, ಕೆಲಸ ನಿಷ್ಠತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಮಾತ್ರ ಈ ಪ್ರಶಸ್ತಿ ಸಿಗಬೇಕು.
- ಓರ್ವ ಸರ್ಕಾರಿ ನೌಕರ.
ಜಿಲ್ಲಾ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ, ನೌಕರರಿಗೆ, ಸಿಬ್ಬಂದಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಗಣರಾಜ್ಯೋತ್ಸವದಂದು ಪ್ರದಾನ ಮಾಡುವ ಪದ್ದತಿ ಬೆಳೆದುಬಂದಿದೆ. ಇದು ಈಗ ಜಾತಿ, ಪ್ರಭಾವ, ಲಾಬಿಯಿಂದ ತತ್ತರಿಸುತ್ತಿದೆ.
ಪ್ರಶಸ್ತಿ - ಬಿರುದು - ಸಮ್ಮಾನಗಳು ನಾನಾ ಕಾರಣಗಳಿಂದ ಮಹತ್ವ ಕಳೆದುಕೊಳ್ಳುತ್ತಿವೆ. ಇದು ಕೇವಲ ಸಾಹಿತಿ, ಕಲಾವಿದರು, ಪತ್ರಕರ್ತರು ಅಥವಾ ಸಮಾಜ ಸೇವಕರಿಗೆ ಮಾತ್ರ ಸೀಮಿತವಾಗಿಲ್ಲ. ಸರ್ಕಾರಿ ನೌಕರರು ಮತ್ತು ಅಧಿಕಾರಿ, ಸಿಬ್ಬಂದಿಗಳೂ ಪ್ರಶಸ್ತಿಗಳಿಗೆ ಹೋರಾಟ ನಡೆಸುತ್ತಿದ್ದಾರೆ. ನಿಜವಾಗಿಯೂ ಅರ್ಹರು, ಪ್ರಾಮಾಣಿಕರಿಗೆ ಪ್ರಶಸ್ತಿ ದೊರಕುವುದೇ ದುರ್ಲಭ ಎನ್ನವಂತಾಗಿದೆ. ಕೇವಲ ಕೇಂದ್ರ, ರಾಷ್ಟ್ರೀಯ ಅಥವಾ ರಾಜ್ಯ ಪ್ರಶಸ್ತಿಗೆ ನಡೆಯುತ್ತಿದ್ದ ಈ ವಶೀಲಿ ಈಗ ಜಿಲ್ಲಾ ಮಟ್ಟದಲ್ಲೇ ಅಧಿಕವಾಗುತ್ತಿದೆ. ಜಿಲ್ಲಾ ಮಟ್ಟದ ಕೆಲವು ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ತಮ್ಮ ಮೇಲೆ ಸಾಕಷ್ಟು ಆರೋಪವಿದ್ದರೂ ಯಾರದ್ದೋ ಪ್ರಭಾವ ಬೀರಿ ಪ್ರಶಸ್ತಿ ಗಿಟ್ಟಿಸಿದ ಉದಾಹರಣೆ ಕಣ್ಣಮುಂದಿದೆ.
ಕೆಲವು ನೌಕರರು ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಭಾರೀ ದೊಡ್ಡ ಪ್ರಮಾಣದಲ್ಲಿ ಲಾಬಿ ನಡೆಸುವ, ಪ್ರಭಾವಿ ರಾಜಕಾರಣಿಗಳ ಮೂಲಕ ಒತ್ತಡ ಹಾಕಿಸುವ ಕೆಲಸ ನಡೆಸುತ್ತಿರುವ ಮಾಹಿತಿಗಳು ಸ್ವತಃ ಸರ್ಕಾರಿ ನೌಕರರ ವಲಯದಿಂದಲೇ ಕೇಳಿಬರುತ್ತಿವೆ. ಯಾರು ನೌಕರರ ಪ್ರಾಮಾಣಿಕತೆಯ ಬಗ್ಗೆ ಸರ್ಟಿಫಿಕೆಟ್ ಕೊಡಬೇಕಿತ್ತೋ ಅಂತಹವರೇ ಲಾಬಿ ಮಾಡಿಸುತ್ತಿದ್ದಾರೆ. ಕಳೆದ ವರ್ಷವಂತೂ ಲಾಬಿಯಲ್ಲೇ ಬಹುತೇಕ ಪ್ರಶಸ್ತಿಗಳು ಹಂಚಿಹೋಗಿತ್ತು ಎನ್ನುವ ಗುರುತರ ಆರೋಪವಿದೆ.
ಈ ಬಾರಿ ಕಟ್ಟುನಿಟ್ಟಿನ ಡಿಸಿ ಡಾ. ಲೋಕೇಶ್ ಈ ಲಾಬಿಕೋರರನ್ನು ಮಟ್ಟಹಾಕುವ ಕೆಲಸವನ್ನು ಮೊದಲು ಮಾಡಬೇಕಿದೆ. ಜೊತೆಗೆ ಪ್ರಶಸ್ತಿಗೆ ಆಯ್ಕೆಯಾಗುವವರ ಹಿನ್ನೆಲೆಯನ್ನು ಪಡೆಯಬೇಕು. ಜಿಲ್ಲಾಡಳಿತವನ್ನೇ ಅಂಗೈಯಲ್ಲಿಟ್ಟುಕೊಂಡಂತೆ ವರ್ತಿಸುತ್ತಿರುವ ಕೆಲವರನ್ನು ದೂರವಿಡಬೇಕು. ಹೀಗೆ ಮಾಡಿದರೆ ಇದರಿಂದ ಅದೆಷ್ಟೋ ಪ್ರಾಮಾಣಿಕ, ನಿಷ್ಠಾವಂತ, ದಕ್ಷ ನೌಕರರು ಈ ಪ್ರಶಸ್ತಿ ಪಡೆಯಲು ಸಾಧ್ಯವಿದೆ.
ಜಿಲ್ಲೆಯಲ್ಲಿ ಲಾಬಿ, ಪ್ರಭಾವ ಬಳಸುವ ನೌಕರರಿಗೆ ಈ ಪ್ರಶಸ್ತಿಯನ್ನು ಕೊಡಿಸುವ ಕೆಲಸವನ್ನು ಕೆಲವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದಾಕ್ಷಣ ಜಾಗೃತವಾಗುವ ಇವರು, ಜಾತಿ, ಆಪ್ತತೆಯನ್ನು ಮುಂದಿಟ್ಟುಕೊಂಡು ಪ್ರಭಾವ ಬೀರು ಕೆಲಸ ಶುರುವಿಟ್ಟುಕೊಳ್ಳುತ್ತಾರೆ. ಈ ಆರೋಪ ಬಾರದಂತೆ, ಈಗಿರುವ ಹಣೆಪಟ್ಟಿಯನ್ನು ಕಿತ್ತೊಗೆಯುವ ಕೆಲಸವನ್ನು ಡಿಸಿಯವರು ಮಾಡಬೇಕಿದೆ.
ಪ್ರಸ್ತುತ ವರ್ಷ ಮತ್ತೊಮ್ಮೆ ಜಿಲ್ಲಾಡಳಿತ ಪ್ರಶಸ್ತಿಗೆ ಸರ್ಕಾರಿ ನೌಕರರಿಂದ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಹಲವು ನೌಕರರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು, ಇಷ್ಟರಲ್ಲಿಯೇ ಜಿಲ್ಲಾಧಿಕಾರಿಗಳ ನೇತೃತ್ವ ಆಯ್ಕೆ ಸಮಿತಿಯ ಸಭೆ ನಡೆಯಲಿದೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಈ ಬಾರಿ ಪ್ರಶಸ್ತಿಗೆ ಸುಮಾರು 22 ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಪ್ರಶಸ್ತಿಗೆ ಭಾರೀ ಪೈಪೋಟಿ ಕಂಡುಬಂದಿದೆ.
ಎ, ಬಿ ಹಾಗೂ ಸಿ ವರ್ಗಗಳಲ್ಲಿ ತಲಾ ಇಬ್ಬರು ನೌಕರರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅರ್ಹ ನೌಕರರನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಅಧಿಕಾರಿಗಳ ಸಮಿತಿಯು ಆಯ್ಕೆ ಮಾಡುತ್ತದೆ. ಗಣರಾಜೋತ್ಸವ ಸಮಾರಂಭದಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಪ್ರಾಮಾಣಿಕರು, ದಕ್ಷರು ಈ ಪ್ರಶಸ್ತಿ ಪಡೆಯುವಂತಾಗಲಿ.
---------------------------------------

No comments:
Post a Comment