ಜಿಲ್ಲೆೆಯಲ್ಲಿ ಕಾಂಗ್ರೆೆಸ್ಗೆ ಸೋಲು: ನೀರವ ಮೌನ
ಶಿವಮೊಗ್ಗ: ಅನಿರೀಕ್ಷಿತ ಸೋಲು ಎಂತಹವರನ್ನೂ ಕಂಗೆಡಿಸುತ್ತದೆ. ಕನಿಷ್ಠ 5 ಕ್ಷೇತ್ರವನ್ನಾಾದರೂ ಗೆಲ್ಲುತ್ತೇವೆ ಎಂದು ಹೇಳುತ್ತಿಿದ್ದ ಜಿಲ್ಲಾಾ ಕಾಂಗ್ರೆೆಸ್ ಮುಖಂಡರು ಏಕೈಕ ಸ್ಥಾಾನ ದಕ್ಕಿಿದ್ದರಿಂದ ಸ್ವಾಾಭಾವಿಕವಾಗಿಯೇ ಹತಾಶರಾಗಿದ್ದಾಾರೆ. ಹಿಂದುತ್ವದ ಅಲೆಯಲ್ಲಿ ತಾವು ಸೋತಿರುವುದು ಅವರಿಗೆ ಸ್ಪಷ್ಟವಾಗಿ ಅರಿವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಸ್ಪರ್ಧಿಸಿದ್ದರಿಂದ ಮೂರು ಸ್ಥಾಾನಗಳನ್ನು ಪಡೆದು ತಮ್ಮದೇ ಸರ್ಕಾರ ರಚನೆಯಾಗಿದ್ದರಿಂದ ಸಚಿವ ಸ್ಥಾಾನ, ವಿಧಾನಸಭಾಧ್ಯಕ್ಷ ಸ್ಥಾಾನವೂ ಜಿಲ್ಲೆೆಯ ಪಾಲಾಗಿತ್ತು. ಜಿಲ್ಲೆೆಯಲ್ಲಿ ಕಾಂಗ್ರೆೆಸ್ ಬಲಿಷ್ಠವಿತ್ತು. ಸಚಿವರಾಗಲಿ, ಶಾಸಕರಾಗಲಿ ಹೆಸರು ಕೆಡಿಸಿಕೊಂಡಿರಲಿಲ್ಲ. ಜೊತೆಗೆ ಸರ್ಕಾರದ ಸಾಧನೆಯ ಆಧಾರದಲ್ಲೂ ಮತವನ್ನು ಕೇಳಿದ್ದರು. ಈ ಹಿನ್ನೆೆಲೆಯಲ್ಲಿ ಕನಿಷ್ಠ 5 ಸ್ಥಾಾನವನ್ನು ಗೆಲ್ಲಬಹುದೆಂಬ ಲೆಕ್ಕಾಾಚಾರವನ್ನು ಕಾಂಗ್ರೆೆಸ್ಸಿಿಗರು ಹಾಕಿದ್ದರು.
ಆದರೆ ಚುನಾವಣೆಯಲ್ಲಿ ಆಗಿದ್ದೇ ಬೇರೆ. ಎಲ್ಲವೂ ಉಲ್ಟಾಾ ಹೊಡೆದಿದೆ. ಭದ್ರಾಾವತಿಯಲ್ಲಿ ಮಾತ್ರ ಜೆಡಿಎಸ್ ಸ್ಥಾಾನವನ್ನು ಕಾಂಗ್ರೆೆಸ್ ಕಿತ್ತುಕೊಂಡಿದೆ. ಸೊರಬ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಎರಡನೆಯ ಸ್ಥಾಾನಕ್ಕೆೆ ತೃಪ್ತಿಿಪಟ್ಟಿಿದೆ. ಸಣ್ಣಪುಟ್ಟ ವೈಮನಸ್ಸುಗಳಿದ್ದರೂ ಚುನಾವಣೆಯ ಆರಂಭದಿಂದ ಕೊನೆಯ ಕೆಲವು ದಿನಗಳವರೆಗೆ ಕಾಂಗ್ರೆೆಸ್ ಹವಾ ಜಿಲ್ಲೆೆಯಲ್ಲಿ ಚೆನ್ನಾಾಗಿಯೇ ಇತ್ತು. ಯಾವಾಗ ಪ್ರಧಾನಿ ನರೇಂದ್ರ ಮೋದಿ ಬಂದು ಹೋದರೋ ಅಲ್ಲಿಂದ ಬದಲಾವಣೆ ಆಗಿದ್ದನ್ನು ಗಮನಿಸಬಹುದು. ಹಿಂದುತ್ವದ ಆಧಾರದ ಮೇಲೆಯೇ ಜನರು ಮತ ಹಾಕಿರುವುದು ಅರಿವಾಗುತ್ತದೆ. ಅದರಲ್ಲೂ ವಿಶೇಷವಾಗಿ ಯುವಕರು ಮತ್ತು ಹೊಸ ಮತದಾರರು ಇದಕ್ಕೆೆ ಹೆಚ್ಚಿಿನ ಒತ್ತು ಕೊಟ್ಟರು. ಇದರಿಂದ ಬಿಜೆಪಿ ಮೊದಲಿದ್ದ ಒಂದೆರಡು ಸ್ಥಾಾನಗಳ ಗೆಲುವಿನ ಅಂದಾಜನ್ನು ಇನ್ನೊೊಂದೆರಡಕ್ಕೇರಿಸಿಕೊಂಡಿತು ಎನ್ನಬಹುದು.
ಆದರೆ ಕಾಂಗ್ರೆೆಸ್ 6 ಸ್ಥಾಾನವನ್ನು ಸೋಲುತ್ತದೆ. ಬಿಜೆಪಿ 6 ಸ್ಥಾಾನ ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕಾಂಗ್ರೆೆಸ್ಗೆ ಕನಿಷ್ಠ 3ರಿಂದ 4 ಸ್ಥಾಾನವಾದರೂ ದಕ್ಕಬಹುದೆಂಬ ನಿರೀಕ್ಷೆ ಇತ್ತು. ಅದರಲ್ಲೂ ತೀರ್ಥಹಳ್ಳಿಿ, ಸಾಗರ ಕೈತಪ್ಪಲಿದೆ ಎಂದು ತಿಳಿದಿರಲಿಲ್ಲ. ಮಾಜಿ ಸಚಿವ ಕಿಮ್ಮನೆ ಮತ್ತು ಕಾಗೋಡು ಗೆಲುವಿನ ವಿಶ್ವಾಾಸ ಎಲ್ಲರಲ್ಲಿತ್ತು. ಆದರೆ ಕೊನೆಯ ವಾರದಲ್ಲಾಾದ ಬದಲಾವಣೆ ಯಾರಿಗೂ ಅರಿವಾಗಲೇ ಇಲ್ಲ. ಇದರ ಒಳಪೆಟ್ಟು ಚೆನ್ನಾಾಗಿಯೇ ಕಾಂಗ್ರೆೆಸ್ಗೆ ಬಿತ್ತು.
ಭದ್ರಾಾವತಿಯಲ್ಲಿ ಕಾಂಗ್ರೆೆಸ್- ಜೆಡಿಎಸ್ ಕಾದಾಟ ನಡೆಯಲಿದ್ದು, ಇಲ್ಲಿಯೂ ಸಮಾನ ಅವಕಾಶ ಎರಡೂ ಪಕ್ಷಕ್ಕಿಿತ್ತು. ಆದರೆ ಕೊನೆಯ ದಿನಗಳಲ್ಲಿ ಕಾಂಗ್ರೆೆಸ್ ಪರ ವಾತಾವರಣ ಹೆಚ್ಚು ಕಂಡುಬಂದಿತ್ತು. ಸೊರಬದಲ್ಲಿ ಬಿಜೆಪಿ- ಜೆಡಿಎಸ್ (ಸಹೋದರರ ಸವಾಲ್) ನಡೆಯಲಿದೆ ಎನ್ನುವುದನ್ನು ಮೊದಲೇ ಕಾಂಗ್ರೆೆಸಿಗರು ಅರಿತಿದ್ದರು. ಬಂಗಾರಪ್ಪ ಕುಟುಂಬದವರು ಕಾಂಗ್ರೆೆಸ್ನಿಂದ ಹೊರಬಿದ್ದ ನಂತರ ಕಾಂಗ್ರೆೆಸ್ ಬೇರು ಅಲ್ಲಿ ಸಡಿಲವಾಗಿದೆ. ಸಹೋದರರ ಮಧ್ಯೆೆಯ ಕಾದಾಟ (ಕಾಂಗ್ರೆೆಸ್- ಜೆಡಿಎಸ್) ಇದಾಗಿರುತ್ತಿಿತ್ತು. ಆದರೆ ಕುಮಾರ್ ಬಂಗಾರಪ್ಪ ಕಾಗೋಡು ತಿಮ್ಮಪ್ಪ ಅವರೊಂದಿಗೆ ಮುನಿಸಿಕೊಂಡು ಬಿಜೆಪಿಗೆ ಪಕ್ಷಾಂತರ ಮಾಡಿದ್ದರಿಂದ ಕಾಂಗ್ರೆೆಸ್ ಇನ್ನಷ್ಟು ಸೊರಗಿರುವುದು ಸತ್ಯ. ಪಕ್ಷವನ್ನು ಅಲ್ಲಿ ಕಟ್ಟಲು ಸಾಕಷ್ಟು ಯತ್ನವನ್ನು ಜಿಲ್ಲಾಾಧ್ಯಕ್ಷ ಸಹಿತ ಮುಖಂಡರು ಯತ್ನಿಿಸಿದ್ದರಾದರೂ ತಾಲೂಕಿನ ನಾಯಕರಾರೂ ಅಣ್ಣ-ತಮ್ಮನೆದುರು ಸೆಣೆಸುವ ಮಟ್ಟಕ್ಕೆೆ ಬೆಳೆಯದಿರುವುದು ದೊಡ್ಡ ಪೆಟ್ಟಾಾಗಿ ಪರಿಣಮಿಸಿತು.
ಹೊಸಬರಿಗೆ ಟಿಕೆಟ್ ಕೊಟ್ಟ ಬಗ್ಗೆೆಯೂ ಪಕ್ಷದೊಳಕ್ಕೆೆ ಬೇಸರವಿತ್ತು. ಟಿಕೆಟ್ಗೆ ಮೊದಲೇ ಕಣ್ಣಿಿಟ್ಟಿಿದ್ದ ಹುಲ್ತಿಿಕೊಪ್ಪ ಶ್ರೀಧರ್ ಟಿಕೆಟ್ ಗಿಟ್ಟಿಿಸಿದ್ದ ರಾಜು ತಲ್ಲೂರು ವಿರುದ್ದ ಆರಂಭದಲ್ಲೇ ಗುಡುಗಿದ್ದು ಇದಕ್ಕೆೆ ಸಾಕ್ಷಿಯಾಗಿತ್ತು. ಆದರೆ ಇದು ಬಹಿರಂಗವಾಗಿ ಆನಂತರ ಕಾಣಿಸಿಕೊಳ್ಳಲಿಲ್ಲವಾದರೂ ಬೂದಿ ಮುಚ್ಚಿಿದ ಕೆಂಡದಂತಿತ್ತು. ಇನ್ನಾಾದರೂ ಪಕ್ಷದ ನಾಯಕರು ಸೊರಬದ ಮಟ್ಟಿಿಗೆ ಇನ್ನಷ್ಟು ಕೆಲಸ ಮಾಡಲೇಬೇಕಿದೆ. ಇಲ್ಲವಾದಲ್ಲಿ ಸಂಘಟನೆಗೆ ಇನ್ನಷ್ಟು ಗೆದ್ದಲು ಹತ್ತುವ ಸಂಭವವಿದೆ. ವೈಮನಸ್ಸು, ಅಂತಃಕಲಹವನ್ನು ಬದಿಗೊತ್ತಿಿ ಉತ್ತಮ ನಾಯಕನನ್ನು ಈಗಿನಿಂದಲೇ ಬೆಳೆಸುವ ಕೆಲಸವನ್ನು ಸೊರಬದ ಮಟ್ಟಿಿಗೆ ಮಾಡುವ ಅವಶ್ಯಕತೆ ತುರ್ತಾಗಿದೆ.
ತೀರ್ಥಹಳ್ಳಿಿಯಲ್ಲಿ ಕಿಮ್ಮನೆ ರತ್ನಾಾಕರ್ ಅವರ ಅಭಿವೃದ್ಧಿಿ ಕೆಲಸಗಳೆಲ್ಲ ಕಣ್ಣುಕುಕ್ಕುವಂತಹವಾಗಿದ್ದರೂ ಜನರು ಮಾತ್ರ ಅವರ ಆಯ್ಕೆೆಗೆ ಮುಂದಾಗಲಿಲ್ಲ. ಪ್ರಾಾಮಾಣಿಕ, ಸಜ್ಜನ ಎಂಬ ಹೆಸರು ಗಿಟ್ಟಿಿಸಿದ್ದರೂ ಅಭಿವೃದ್ಧಿಿ ಕಾರ್ಯ ಕೈಹಿಡಿಯಲಿಲ್ಲ. ಜೆಡಿಎಸ್ ಅಭ್ಯರ್ಥಿ ಕಾಂಗ್ರೆೆಸ್ನ ಮತವನ್ನು ಪಡೆದಿದ್ದು ಮತ್ತು ಹಿದುಂತ್ವದ ಒಂದಷ್ಟು ಮತಗಳು ಆರಗ ಜ್ಞಾಾನೇಂದ್ರ ಪರವಾಗಿದ್ದು ಕಾಂಗ್ರೆೆಸ್ ಸೋಲಿಗೆ ಕಾರಣವಾಯಿತು. ಶಿವಮೊಗ್ಗ ಗ್ರಾಾಮಾಂತರದಲ್ಲಿ ಮಾಜಿ ಶಾಸಕ ಕರಿಯಣ್ಣ ಅವರ ವರ್ಚಸ್ಸಿಿನ ಮೇಲೆ ಅವರ ಪುತ್ರ ಸ್ಪರ್ಧಿಸಿದ್ದರಾದರೂ ಮತದಾರರು ಅವರನ್ನು ಗೆಲ್ಲಿಸಲಿಲ್ಲ. ಇಲ್ಲಿಯೂ ಹಿಂದುತ್ವ ಕೆಲಸ ಮಾಡಿದ್ದು ನಿಜ.
ಕಾಂಗ್ರೆೆಸ್ಸಿಿಗರು ಸೋಲಿಗೆ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡುವ ಬದಲು ಪಕ್ಷವನ್ನು ಸಂಘಟಿಸುವುದೇ ಮೇಲೆಂದು ಅದರ ನಾಯಕರು ಅರಿಯಬೇಕಿದೆ. ಸೋಲಿನಿಂದ ಧೈರ್ಯಗುಂದದೆ, ಒಬ್ಬರನ್ನು ಒಬ್ಬರು ದೂರದೆ, ದ್ವೇಷ ಸಾಧಿಸದೆ ಮುಂದಿನ ಚುನಾವಣೆಗಳಿಗೆ ಸಿದ್ಧರಾಗುವತ್ತ ಹೆಜ್ಜೆೆ ಹಾಕಬೇಕಿದೆ.
published on May 19-2018
.................................

No comments:
Post a Comment