ಬಿಟ್ಟೆನೆಂದರೂ ಬಿಡದೀ ಮಾಯೆ
ಚಿವ ಜಾರ್ಜ್ಗೆ ಬೆನ್ನುಬಿದ್ದ ವಿವಾದಗಳು
ಜಾರ್ಜ್ ವಿರುದ್ದ ಒಂದು ವರ್ಷದಲ್ಲಿ ಎರಡು ವಿವಾದಗಳು ಕೇಳಿಬಂದಿವೆ. ಇದು ರಾಜ್ಯ ಸರ್ಕಾರದ ಘನತೆಗೆ ಸಾಕಷ್ಟು ಪೆಟ್ಟು ನೀಡಲಿದೆ. ಜೊತೆಗೆ ಜಾರ್ಜ್ ಘನತೆಗೂ ಕಪ್ಪು ಚುಕ್ಕೆಯಾಗಲಿದೆ. ಜಾರ್ಜ್ ತಪ್ಪಿತಸ್ಥರೊ ಅಲ್ಲವೋ ಎನ್ನುವುದಕ್ಕಿಂತ ಪದೇ ಪದೇ ಅವರ ವಿರುದ್ಧವೇ ಈ ಆರೋಪಗಳು ಕೇಳಿರುತ್ತಿರುವುದೇಕೆ ಎನ್ನುವ ಚಿಂತನೆಯನ್ನು ಸರ್ಕಾರ ಮಾಡಬೇಕಿದೆ. ಮುಖ್ಯಮಂತ್ರಿಯಾಗಲಿ, ಇತರೆ ಸಚಿವರಾಗಲಿ ಅವರನ್ನು ಸಮರ್ಥಿಸಿಕೊಳ್ಳುವುದಕ್ಕಿಂತ, ಬಚಾವ್ ಮಾಡುವುದಕ್ಕಿಂತ ಸಂಪುಟದಿಂದ ಕೈ ಬಿಡುವುದು ಲೇಸು. ಇದರಿಂದ ಸರ್ಕಾರದ ವರ್ಚಸ್ಸು ಉಳಿಯಲಿದೆ. ಜನರಲ್ಲೂ ಉಂಟಾಗಿರುವ ಅಸಮಾಧಾನಕ್ಕೆ ಪೂರ್ಣವಿರಾಮ ಬೀಳಲಿದೆ.
ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್ಗೆ ಇತ್ತೀಚೆಗೆ ವಿವಾದಗಳು ಸದಾ ಬೆನ್ನುಬಿದ್ದಿವೆ. ಅದರಲ್ಲೂ ಅಧಿಕಾರಿಗಳ ಆತ್ಮಹತ್ಯೆ ಕೇಸುಗಳು ಬೆಂಬಿಡದೆ ಕಾಡುತ್ತಿವೆ. ಇದರಿಂದ ಅವರು ಪಾರಾಗಲು ಎಷ್ಟೇ ಯತ್ನ ನಡೆಸಿದ್ದರೂ ಮತ್ತೆ ಮತ್ತೆ ಅಂಟಿಕೊಳ್ಳುತ್ತಿವೆ. ಈ ಕೇಸುಗಳಿಂದ ಅವರ ವರ್ಚಸ್ಸಿಗೆ, ಪಕ್ಷದ ಹೆಸರಿಗೆ ಹಾನಿಯಾಗಿದೆ. ಜೊತೆಗೆ ಆರೋಪಗಳಿಂದ ಅವರೂ ಸಹ ಹೈರಾಣಾಗಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಹೆಸರು ಕೇಳಿಬರುತ್ತಿದೆ. ಜಾರ್ಜ್ ರಾಜ್ಯದ ಗೃಹ ಸಚಿವರಾಗಿದ್ದ ಕಾಲದಲ್ಲಿ ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗಲೂ ಜಾರ್ಜ್ ಆತ್ಮಹತ್ಯೆಗೆ ಕಾರಣ ಎಂದೇ ಬಿಂಬಿಸಲಾಗಿತ್ತು. ಈ ಸಂಬಂಧ ಕೆಲವು ದಿನ ಹೋರಾಟ ನಡೆದವು. ಈಗಲೂ ಸಹ ಅದೇ ನಡೆಯುತ್ತಿದೆ. ಆದರೆ ಜಾರ್ಜ್ ಮಾತ್ರ ಈ ಆತ್ಮಹತ್ಯೆಗೂ ತನಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ.
ಡಿ ಕೆ ರವಿ ಆತ್ಮಹತ್ಯೆ ಮಾಡಿಕೊಂಡ ನಂತರ ಬೆಂಗಳೂರಿನ ಭೂ ಮಾಫಿಯಾದವರು ರವಿ ಅವರನ್ನು ಕೊಲೆ ಮಾಡಿಸಿದರೆಂಬ ಮಾತು ಕೇಳಿಬಂದಿತ್ತು. ಆಗ ಜಾರ್ಜ್ ಹೆಸರು ತಳುಕು ಹಾಕಿಕೊಂಡಿತ್ತು. ಏಕೆಂದರೆ ಬೆಂಗಳೂರಿನಲ್ಲಿ ಜಾರ್ಜ್ ಅವರದ್ದು ರಿಯಲ್ ಎಸ್ಟೇಟ್ ವ್ಯವಹಾರವಿದೆ. ಆದರೆ ನಂತರ ಸಿಬಿಐ ತನಿಖೆಯಲ್ಲಿ ಜಾರ್ಜ್ ವಿರುದ್ದ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಲಿಲ್ಲ. ಬಳಿಕ ರವಿ ಆತ್ಮಹತ್ಯೆಯಲ್ಲಿ ಬೇರೆ ವಿಚಾರಗಳು ಪ್ರಸ್ತಾಪವಾಗಿ ಆ ಕೇಸು ಮುಕ್ತಾಯವಾಗಿತ್ತು. ನಂತರ ಕೆಲವೇ ದಿನದಲ್ಲಿ ಜಾರ್ಜ್ ಅವರಿಂದ ಗೃಹ ಖಾತೆಯನ್ನು ಪರಮೇಶ್ವರ್ಗೆ ವರ್ಗಾಯಿಸಲಾಗಿತ್ತು.
ಈಗ ಡಿವೈಎಸ್ ಪಿ ಗಣಪತಿ ವಿವಾದ ಶುರುವಾಗಿದೆ. ಬಿಜೆಪಿ ಆಳ್ವಿಕೆಯಲ್ಲಿದ್ದಾಗ, ಅಶೋಕ್ ಗೃಹ ಸಚಿವರಾಗಿದ್ದಾಗ ರೌಡಿಯೊಬ್ಬನ ಎನ್ಕೌಂಟರ್ ಘಟನೆ ಸಂಬಂಧ ಗಣಪತಿ ಅವರನ್ನು ಅಮಾನತುಗೊಳಿಸಲಾಗಿತ್ತು. ಅಂದು ರೌಡಿ ಬೀಸಿದ ಮಚ್ಚಿನಿಂದ ಕೈಗೆ ಏಟು ತಗುಲಿ ಗಣಪತಿ ಆಸ್ಪತ್ರೆ ಸೇರಿದ್ದರೂ ಸಹ ಇದೊಂದು ನಕಲಿ ಎನ್ಕೌಂಟರ್ ಎಂದು ಬಿಂಬಿಸಲಾಗಿತ್ತು. ಎರಡನೆಯ ಬಾರಿಗೆ, ಜಾರ್ಜ್ ಗೃಹ ಸಚಿವರಾಗಿದ್ದಾಗ ಅವಧಿಯಲ್ಲಿ ಗಣಪತಿ ಅವರನ್ನು ಮಂಗಳೂರು ಚರ್ಚ್ ದಾಳಿ ಸಂಬಂಧ ನಡೆದ ಸಭೆಯಲ್ಲಿ ಬಂದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. ಇದರಲ್ಲಿ ತನ್ನ ತಪ್ಪಿಲ್ಲ ಎಂದರೂ ತನ್ನ ಮಾತನ್ನು ಜಾರ್ಜ್ ಕೇಳಲಿಲ್ಲ ಎಂದು ಗಣಪತಿ ಹೇಳಿದ್ದರು. ಜಾರ್ಜ್ ಇದೇ ದ್ವೇಷವನ್ನೇ ಮುಂದುವರೆಸಿ ಗಣಪತಿ ಅವರಿಗೆ ಕಿರುಕುಳ ಕೊಟ್ಟರೇ ಎನ್ನುವುದು ಈಗಿರುವ ಪ್ರಶ್ನೆ.
ಎರಡು ಬಾರಿ ಗಣಪತಿ ಅಮಾನತಾಗಿದ್ದರಿಂದ, ಇಲಾಖಾ ತನಿಖೆ ನಿಗದಿತ ಅವಧಿಯಲ್ಲಿ ನಡೆಯದೆ ಅಲ್ಲಿಯೂ ಅವರು ತೊಂದರೆ ಅನುಭವಿಸಬೇಕಾಯಿತು. ಇದರಿಂದ ದೊರೆಯಬೇಕಿದ್ದ ಭಡ್ತಿ ವಿಳಂಬವಾಗಿತ್ತು. ಈ ಸಂದರ್ದಲ್ಲಿ ಜಾರ್ಜ್ ಅವರನ್ನು ಗಣಪತಿ ಭೇಟಿ ಮಾಡಿ ಎರಡೂ ಪ್ರಕರಣಗಳಲ್ಲಿ ತನ್ನ ಪಾತ್ರವಿಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದ್ದರೂ ಅದು ಫಲ ಕೊಟ್ಟಿರಲಿಲ್ಲ. ತನಿಖೆ ನಡೆಯುತ್ತಿರುವುದರಿಂದ ತಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಜಾರ್ಜ್ ಕೈ ಚೆಲ್ಲಿದ್ದರೆಂಬ ಮಾತು ಕೇಳಿಬಂದಿದೆ.
ತನಗೆ ಕಿರುಕುಳ ಕೊಟ್ಟಿದ್ದರೆಂದು ಜಾರ್ಜ್ ಸಹಿತ ಇತರೆ ಇಬ್ಬರು ಐಪಿಎಸ್ ಅಧಿಕಾರಿಗಳ ಹೆಸರು ಹೇಳಿದ್ದಾರೆ. ಆದರೆ ಯಾರ ಮೇಲೂ ದೂರು ದಾಖಲಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸಾಯುವ ಮುನ್ನ ವ್ಯಕ್ತಿ ನೀಡಿದ ಹೇಳಿಕೆಯ ಆಧಾರದಲ್ಲಿ ಕೇಸು ದಾಖಲಾಗಿ ಅವರ ವಿಚಾರಣೆಯಾಗಬೇಕು.
ಇದರಲ್ಲಿ ಇವರೆಲ್ಲ ನಿಜಕ್ಕೂ ಭಾಗಿದಾರರೋ ಎನ್ನುವುದನ್ನು ತನಿಖೆಯೇ ಹೇಳಬೇಕಿದೆ. ಆದರೆ ಜಾರ್ಜ್ ಮಾತ್ರ 1990ರಲ್ಲಿ ಬಂಗಾರಪ್ಪ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ತನ್ನ ವಿರುದ್ದ ಕೇಳಿಬಂದ ಭೂ ಕಬಳಿಕೆ ಆರೋಪದಿಂದ ಪಾರಾದಂತೆ ಈ ಬಾರಿಯೂ ಪಾರಾಗುತ್ತಾರೋ ಅಥವಾ ರಾಜೀನಾಮೆ ನೀಡುವ ಸ್ಥಿತಿ ಎದುರಾಗುತ್ತದೆಯೋ ಕಾದುನೋಡಬೇಕಿದೆ.
ಬಾಕ್ಸ್
ಜಾರ್ಜ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಅವರು ಹೈಕಮಾಂಡಿನಲ್ಲಿ ತುಂಬಾ ಪ್ರಭಾವಿ. ಎಐಸಿಸಿ ಮುಖಂಡ ಎ. ಕೆ. ಆಂಟನಿ ಅವರ ಕೃಪಾಕಟಾಕ್ಷವಿದೆ. ಜಾರ್ಜ್ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಟಿಕೆಟ್ ಗಿಟ್ಟಿಸಿ ಗೆದ್ದು ಸಚಿವರಾಗಲು ಇದೇ ಆಂಟನಿ ಕಾರಣ. 2013ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿದಾಗ ಜಾರ್ಜ್ ಗೃಹ ಇಲಾಖೆ ಸಚಿವರಾಗುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ದೆಹಲಿಯಲ್ಲಿ ಅವರಿಗೆ ಇರುವ ಸಂಪರ್ಕ ಬಹಳ ಶಕ್ತಿಯುತವಾದದ್ದು. ಮೂಲತಃ ಕೇರಳಿಗರಾದ ಜಾರ್ಜ್ ಬೆಂಗಳೂರಿನಲ್ಲಿ ಬಹುದೊಡ್ಡ ಲ್ಯಾಂಡ್ ಉದ್ಯಮಿಯಾಗಿದ್ದು, ಹಲವಾರು ಐ ಟಿ ಪಾರ್ಕುಗಳನ್ನು ನಿರ್ಮಿಸಿದ್ದಾರೆ. ಹೊಟೆಲ್ಗಳಿವೆ. ತಿಂಗಳಿಗೆ ಹತ್ತಾರು ಕೋಟಿ ರೂ. ಬಾಡಿಗೆ ಅವರಿಗೆ ಬರುತ್ತಿದೆ. ಹೈಕಮಾಂಡ್ಗೆ ಜಾರ್ಜ್ ವಿರುದ್ಧ ವರದಿ ಹೋದರೂ ಸಹ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮಾಜಕ್ಕೆ ಸೇರಿದ ಏಕೈಕ ಸಚಿವ ಎಂಬ ಕಾರಣವೂ ಅವರನ್ನು ರಕ್ಷಿಸಬಹುದು. ಇದೆಲ್ಲ ಸಿದ್ದರಾಮಯ್ಯ, ಪರಮೇಶ್ವರ್ಗೆ ಗೊತ್ತಿರುವುದರಿಂದ ಅವರು ಜಾರ್ಜ್ ವಿರುದ್ಧ ಏನೂ ಮಾಡದಂತಾಗಿದ್ದಾರೆ.
.......................................

No comments:
Post a Comment