ಅಲ್ಲಿ ಮರಿಗೌಡ, ಇಲ್ಲಿ ಖಾಂಡ್ಯ ಪ್ರವೀಣ್
ಕಾಂಗ್ರೆಸ್-ಬಿಜೆಪಿಗರ ನಿಜಬಣ್ಣ ಬಿಚ್ಚಿಟ್ಟ ಎರಡು ಪ್ರಕರಣ
ಯಾರು ಏನೇ ಹೇಳಲಿ, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇಬ್ಬರೂ ಅಧಿಕಾರದಲ್ಲಿದ್ದಾಗ ಮಾಡಬಾರದ್ದನ್ನೆಲ್ಲ ಮಾಡಿದವರೇ. ಒಬ್ಬರು ಜಾಸ್ತಿ ಭ್ರಷ್ಟಾಚಾರ ಮಾಡಿರಬಹುದು, ಮತ್ತೊಬ್ಬರು ಕಡಿಮೆ ಮಾಡಿರಬಹುದು. ಅಧಿಕಾರವಿಲ್ಲದಿದ್ದಾಗ ಮಾತ್ರ ತಾವೇ ಸುಭಗರಂತೆ, ನೈಜ ಹೋರಾಟಗಾರರೂ, ಕಳಕಳಿ ಉಳ್ಳವರೂ ನಾಚುವಂತೆ ಪೋಸು ಕೊಡುತ್ತಿದ್ದಾರೆ. ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸಿ, ಸ್ವಜನಪಕ್ಷಪಾತ, ಅಧಿಕಾರ, ಜಾತಿ ವ್ಯಾಮೋಹದಿಂದ ಜನರ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಇತ್ತೀಚೆಗೆ ನಡೆದ ಕೆಲವು ಘಟನೆಗಳು ಇವರ ನೈಜತನವನ್ನು ಜನರ ಮುಂದೆ ಮತ್ತಷ್ಟು ಬಿಚ್ಚಿಟ್ಟಿವೆ.
ರಾಜಕೀಯ ಪುಢಾರಿಗಳು ಯಾವುದೇ ಅಪರಾಧ ಎಸಗಿದರೂ ಅವರನ್ನು ಬಂಧಿಸುವುದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸುಲಭದ ಮಾತಲ್ಲ. ಪಕ್ಷಗಳು ಬೇಕಾದಷ್ಟು ಹಾರಾಟ ಮಾಡಲಿ, ಕೆಸರೆರೆಚಿಕೊಳ್ಳಲಿ, ಮಾಡುವುದು ಮಾತ್ರ ತಮ್ಮ ಹಿಂಬಾಲಕರನ್ನು ಅಥವಾ ನಾಯಕರನ್ನು ರಕ್ಷಿಸುತ್ತಾರೆ. ಜೊತೆಗೆ ಅಧಿಕಾರಕ್ಕೇರಿದಾಗ ಅವರ ಮೇಲಿನ ಕೇಸುಗಳನ್ನೆಲ್ಲ ವಾಪಸ್ ಪಡೆದು ಪ್ರಕರಣ ಮುಕ್ತರನ್ನಾಗಿಸುತ್ತಾರೆ.
ಇತ್ತೀಚೆಗೆ ರಾಜ್ಯದಲ್ಲಿ ಘಟಿಸಿದ ಎರಡು ಪ್ರಮುಖ ಪ್ರಕರಣಗಳ ಹಿನ್ನೆಲೆಯಲ್ಲಿ ಇದನ್ನು ಗಮನಿಸಬಹುದು. ಒಂದು ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಸಿಎಂ ಎದುರೇ ತನ್ನ ಪಟಾಲಂ ಜೊತೆ ಸೇರಿ ಧಮ್ಕಿ ಹಾಕಿದ ಸಿದ್ದರಾಮಯ್ಯ ಅವರ ಆಪ್ತ ಮತ್ತು ಮಾಜಿ ಜಿಪಂ ಅಧ್ಯಕ್ಷ ಮರಿಗೌಡ, ಇನ್ನೊಬ್ಬ ಚಿಕ್ಕಮಗಳೂರು ಡಿವೈಎಸ್ಪಿಯಾಗಿದ್ದ ದಿ.ಕಲ್ಲಪ್ಪ ಹಂಡೀಬಾಗ್ ಅವರನ್ನು ಅಪಹರಣ ಪ್ರಕರಣ ಮತ್ತು 10 ಲಕ್ಷ ರೂ ಪ್ರಕರಣದಲ್ಲಿ ಸಿಲುಕಿಸಿದ ಖಾಂಡ್ಯ ಪ್ರವೀಣ್.
ವಿಶೇಷವೆಂದರೆ, ಈಗ ಇಬ್ಬರು ಕಾಣೆಯಾಗಿದ್ದಾರೆ. ಪೊಲೀಸರಿಗೆ ಸಿಗುತ್ತಿಲ್ಲ. ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಇದರಿಂದ ಅವರ ಆಪ್ತರನ್ನೆಲ್ಲ ಪೊಲೀಸರು ಬಂಧಿಸಿ ವಿಚಾರಿಸುತ್ತಿದ್ದಾರೆ. ಆದರೂ ಇವರಿಬ್ಬರು ಎಲ್ಲೋ ಅಡಗಿ ಕುಳಿತು ನಿರೀಕ್ಷಣಾ ಜಾಮೀನಿಗೆ ಜಿಲ್ಲಾ ಮತ್ತು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮರಿಗೌಡ ಸಿಎಂ ಆಪ್ತ ಎಂಬ ಕಾರಣಕ್ಕೆ ಇಷ್ಟೊಂದು ಪ್ರಚಾರವನ್ನು ಪಡೆದುಕೊಂಡರು. ಮೈಸೂರು ತಹಶೀಲ್ದಾರ್ ಅವರಿಗೆ ವರ್ಗಾವಣೆಯಾದರೂ ಜಿಲ್ಲಾಧಿಕಾರಿ ಬಿಡುಗಡೆ ಮಾಡಿರಲಿಲ್ಲ. ಇದನ್ನೇ ದೊಡ್ಡದನ್ನಾಗಿ ಮಾಡಿ ಸಿಎಂ ಎದುರು ಡಿಸಿಗೆ ಅವಾಜ್ ಹಾಕಿದ್ದ ಮರಿಗೌಡ ವಿರುದ್ದ ಡಿಸಿ ದೂರು ಸಲ್ಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಸುಮ್ಮನಿದ್ದ ಮರಿಗೌಡ, ಒತ್ತಡ ಹೆಚ್ಚಾಗಿ ರಾಜಕೀಯ ಲೇಪಿತವಾಗಿ ಆತನನ್ನು ಬಂಧಿಸಲೇಬೇಕೆಂಬ ಪೊಲೀಸರ ಯತ್ನ ಶುರುವಾಯಿತೋ ಅಲ್ಲಿಂದ ಕಾಣೆಯಾಗಿದ್ದಾರೆ. ಆವರ ಕಾರನ್ನು ಮೈಸೂರಿನ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಮನೆಗೆ ಬೀಗ ಹಾಕಿ ಕುಟುಂಬ ಸಹಿತ ನಾಪತ್ತೆಯಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ನವರು ಮರಿಗೌಡ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ಮಾಡಿದ್ದಾಗಿದೆ. ಮರಿಗೌಡ ಕಾಂಗ್ರೆಸ್ ಮುಖಂಡನಾಗಿದ್ದು, ಕಳೆದ ವಿಧಾನಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ಬಯಸಿ ಅದನ್ನು ಪಡೆಯುವಲ್ಲಿ ವಿಫಲನಾಗಿದ್ದ. ಆಗ ಸಿದ್ದರಾಮಯ್ಯ ಅವರಿಗೂ ಅವಾಜ್ ಹಾಕಿ ನಿಂದಿಸಿದ್ದ ಎನ್ನುವುದು ಬಯಲಾಗಿದೆ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಅವರ ಬೆಂಬಲಿಗನಾದ ಮರಿಗೌಡ ಸಿದ್ದರಾಮಯ್ಯ ಜೊತೆಗೆ ಮಿಂಚುತ್ತಿದ್ದರು. ಜುಲೈ 3ರಂದು ಶಿಖಾ ಪ್ರಕರಣ ಆರಂಭವಾದಂದಿನಿಂದ ಕಣ್ಮರೆಯಾಗಿರುವ ಮರಿಗೌಡನನ್ನು ಸಿಎಂ ರಕ್ಷಿಸುತ್ತಿದ್ದಾರೆಂಬ ಬಲವಾದ ಆರೋಪ ಕೇಳಿಬರುತ್ತಿದೆ.
ಖಾಂಡ್ಯ ಪ್ರವೀಣ್ ಸಹ ಕಲ್ಲಪ್ಪ ಆತ್ಮಹ್ತತ್ಯೆ ನಂತರ ನಾಪತ್ತೆಯಾದ ವ್ಯಕ್ತಿ. ಈತ ಹಿಂದು ಸಂಘಟನೆಯೊಂದರ ವಿಭಾಗೀಯ ಮುಖಂಡನಾಗಿದ್ದ. ಈತನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳಿವೆ ಎನ್ನುವುದು ಈಗಾಗಲೆ ವರದಿಯಾಗಿದೆ. ಹಿಂದೂ ಸಂಘಟನೆಗೆ ಈತ ಸೇರಿದ್ದರಿಂದ ಈತನ ವಿರುದ್ಧ ಬಿಜೆಪಿಯವರು ಬಾಯ್ಬಿಡಲೇ ಇಲ್ಲ. ಈ ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ. ಜೊತೆಗೆ ಸಂಘ ಪರಿವಾರದವರು ಮತ್ತು ಬಿಜೆಪಿಯವರೇ ಈತನನ್ನು ರಕ್ಷಿಸುತ್ತಿದ್ದಾರೆನ್ನುವ ಮಾತೂ ಸಹ ಕೇಳಿಬರುತ್ತಿದೆ. ಪ್ರವೀಣ್ ಎಲ್ಲಿ ಅಡಗಿದ್ದಾನೆನ್ನುವುದು ಗೊತ್ತಿಲ್ಲವಾದರೂ ಪೊಲೀಸರಂತೂ ಈತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಬಾಳೆಹೊನ್ನೂರು ಸಮೀಪದ ಖಾಂಡ್ಯ ಗ್ರಾಮದವನಾದ ಈತ ಎಲ್ಲಾ ವೃತ್ತಾಂತಗಳೂ ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.
ಈತನ ಬಗ್ಗೆ ಇಷ್ಟೆಲ್ಲ ಗೊತ್ತಿದ್ದೂ ಆತನನ್ನು ಹಿಂದೂ ಸಂಘಟನೆಗಳು ಮುಖಂಡನನ್ನಾಗಿಸಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ. ಅಂದರೆ ಇವರು ಪೋಷಿಸುತ್ತಿರುವುದು ಯಾರನ್ನು ಎನ್ನುವುದನ್ನು ಜನರು ಮಾತನಾಡಿಕೊಳ್ಳುವಂತಾಗಿದೆ. ಕಲ್ಲಪ್ಪ ಪ್ರಕರಣದಲ್ಲಿ ಬೇಕಾದವನಾದ ಕಾರಣ ಈತನ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಸಮಾಜದಲ್ಲಿ ಮುಖವಾಡ ಹಾಕಿಕೊಂಡು ಬದುಕುತ್ತ ಹಿಂಬಾಗಿಲಿನಲ್ಲಿ ಇನ್ನೇನನ್ನೋ ಮಾಡುತ್ತ ಬದುಕುವ ಇಂತಹವರು ಯಾವುದೇ ಪಕ್ಷ, ಸಂಘಟನೆಗೆ ಸೇರಲಿ, ಅವರನ್ನು ಯಾರೂ ಬೆಂಬಲಿಸಬಾರದು.
ಖಾಂಡ್ಯ ಮತ್ತು ಮರಿಗೌಡ ಪ್ರಕರಣದಂತೆಯೇ ಮಂಗಳೂರಿನ ದೇವಸ್ಥಾನದ ಪ್ರಕರಣವೊಂದರಲ್ಲಿ ತನ್ನ ಸಮಾಜದವನೇ ಆದ ವಿನಾಯಕ ಬಾಳಿಗಾ ಎನ್ನುವವನನ್ನು ಕೊಲೆ ಮಾಡಿ ಸುಮಾರು 6 ತಿಂಗಳು ತಲೆಮರೆಸಿಕೊಂಡಿದ್ದ ಹಿಂದೂ ಸಂಘಟನೆಯ ಮುಖಂಡ, ನಮೋ ಬ್ರಿಗೇಡ್ನ ನರೇಶ್ ಶೆಣೈ ಪ್ರಕರಣವೂ ನಮ್ಮ ಮುಂದಿದೆ. ಶೆಣೈ ಇತ್ತಿಚೆಗಷ್ಟೇ ಬಂಧನಕ್ಕೊಳಗಾಗಿದ್ದಾನೆ.
ರಾಜಕೀಯ ಅಥವಾ ಬಲಿಷ್ಠ ಸಂಘಟನೆಯ ವ್ಯಕ್ತಿ ಏನೇ ತಪ್ಪು ಮಾಡಿದರೂ ಆತ ಅದರಿಂದ ಬಚಾವಾಗುತ್ತಾನೆ ಎನ್ನುವುದನ್ನು ಇದು ತೋರಿಸುತ್ತದೆ. ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಸಚಿವ ಜಾರ್ಜ್ ರಾಜಿನಾಮೆ ಕೊಡಬೇಕು, ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದ ಬಿಜೆಪಿ ಮತ್ತು ಸಂಘ ಪರಿವಾರದವರು ಖಾಂಡ್ಯನನ್ನು ಬಂಧಿಸಬೇಕು ಅಥವಾ ಶೆಣೈ ಬಂಧಿಸಬೇಕೆಂದು ಒಮ್ಮೆಯೂ ರಸ್ತೆಗಿಳಿದು ಹೋರಾಡಿಲ್ಲ. ನಮ್ಮ ವ್ಯವಸ್ಥೆಯಲ್ಲಿ ತಮ್ಮವರನ್ನು ರಾಜಕೀಯದವರು ಹೇಗೆ ರಕ್ಷಿಸುತ್ತ್ತಾರೆ ಎನ್ನುವುದನ್ನು ಇದು ತೋರಿಸುತ್ತದೆ.
ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂದು ಎಲ್ಲರೂ ಹೇಳುತ್ತಾರೆ. ಜೊತೆಗೆ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುತ್ತೇವೆ. ಆದರೆ ಕೆಲವರು ಮಾತ್ರ ಹೆಚ್ಚು ಸಮಾನರಾಗುತ್ತಿರುವುದು ದೌರ್ಭಾಗ್ಯವೇ ಸರಿ.
.....................................

No comments:
Post a Comment