ಗಾಢ ನಿದ್ದೆಯಲ್ಲಿ ಜಿಪಂ, ತಾಪಂ ಅಧ್ಯಕ್ಷರು
* ಇನ್ನೂ ರಚನೆಯಾಗದ ಸ್ಥಾಯಿ ಸಮಿತಿ * ನಡೆಯದ ಸಾಮಾನ್ಯ ಸಭೆ
ಶಿವಮೊಗ್ಗ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ 80ರ ದಶಕದಲ್ಲಿ ಜಾರಿಯಾದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಈಗ ತಮ್ಮ ಮೂಲ ಉದ್ದೇಶವನ್ನೇ ಮರೆತಂತೆ ಕಂಡುಬರುತ್ತಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲಾ ಪಂಚಾಯತ್‌ಗೆ ಹೊಸದಾಗಿ ಚುನಾವಣೆ ನಡೆದು ಮೂರು ತಿಂಗಳು ಕಳೆದು ಹೊಸ ಸಮಿತಿ ಅಸ್ತಿತ್ವಕ್ಕೆ ಬಂದರೂ ಸಹ ಈವರೆಗೆ ಒಂದೇ ಒಂದು ಸಭೆಯನ್ನು ಕರೆಯದೆ ತನ್ನ ಅಸ್ತಿತವ್ವನ್ನೇ ಪ್ರಶ್ನಿಸುವಂತೆ ಮಾಡಿಕೊಂಡಿದೆ.
ಜಿಪಂನಲ್ಲಿ 31 ಸದಸ್ಯರಿದ್ದಾರೆ. ಸಾಕಷ್ಟು ಅಧಿಕಾರಿ ವೃಂದವಿದೆ. ಆದರೂ ತನ್ನ ಕಾರ್ಯವನ್ನು ಆರಂಭಿಸಿಲ್ಲ. ಏಕೆ ಗೊತ್ತೆ? ಇನ್ನೂ ಸ್ಥಾಯಿ ಸಮಿತಿಯನ್ನೇ ರಚನೆ ಮಾಡಲು ಅಧ್ಯಕ್ಷರಿಗೆ ಸಾಧ್ಯವಾಗಿಲ್ಲ. ಸ್ಥಾಯಿ ಸಮಿತಿ ರಚನೆಯಾಗದೆ ಸಭೆ ಕರೆಯುವಂತಿಲ್ಲ. ಅಧ್ಯಕ್ಷರಿಗೆ ಸರ್ವಾನುಮತದ ಅಧಿಕಾರವನ್ನು ಸುಮಾರು 20 ದಿನದ ಹಿಂದೆಯೇ ಸ್ಥಾಯಿ ಸಮಿತಿ ರಚನೆಗೆ ನೀಡಲಾಗಿದೆ. ಆದರೆ ಇನ್ನೂ ಅದು ಕಾರ್ಯಗತವಾಗಿಲ್ಲ.
ಒಂದೆಡೆ, ಮಳೆಗಾಲ ಆರಂಭವಾಗಿ 15 ದಿನ ಕಳೆದಿದೆ. ರೈತರಿಗೆ ಸಿಗಬೇಕಾದ ಸರ್ಕಾರದ ನೆರವನ್ನು ಕೊಡಿಸಬೇಕಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಭತ್ತ, ಅಡಕೆ, ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಸಾಲಿನಲ್ಲಿ ಯಾವ್ಯಾವ ಯೋಜನೆ, ಉಪಕರಣಗಳ ಲಭ್ಯತೆ ಇದೆ ಎನ್ನುವುದನ್ನು ತಿಳಿಸಬೇಕಿದೆ. ಮತ್ತೊಂದೆಡೆ, ಬೆಳೆವಿಮೆಯ ಬಗ್ಗೆ ಗೊಂದಲ ಉಂಟಾಗಿದ್ದು, ಅದನ್ನು ಬಗೆಹರಿಸಬೇಕಿದೆ. ಇದ್ಯಾವುದರ ಬಗ್ಗೆ ಜಿಪಂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ರೈತರ ಹಿತವನ್ನೇ ಮರೆತಿರುವ ಜಿಪಂನಿಂದ ಇನ್ನೇನನ್ನು ನಿರೀಕ್ಷಿಸಬಹುದು?
ಜಿಪಂನಲ್ಲಿ ಮಾಜಿ ಸದಸ್ಯರು, ಅಧ್ಯಕ್ಷರು ಇದ್ದಾರೆ. ಅಧ್ಯಕ್ಷರ ಸುತ್ತ ಅನುಭವಿಗಳಿದ್ದಾರೆ. ಇವರೆಲ್ಲ ಸೇರಿ ಸ್ಥಾಯಿ ಸಮಿತಿ ರಚನೆಯನ್ನು ಕೂಡಲೇ ಮಾಡಬಹುದಿತ್ತು. ಕಾಂಗ್ರೆಸ್- ಜೆಡಿಎಸ್ ವರ್ಸಸ್ ಬಿಜೆಪಿ ರಾಜಕೀಯ ಇಲ್ಲಿ ಇರುವುದರಿಂದ ಸ್ಥಾಯಿ ಸಮಿತಿಯ ರಚನೆಯನ್ನೇ ಮಾಡದೆ ಕುಳಿತಿದ್ದಾರೆ. ಮಳೆಯಿಂದ ಅಲ್ಲಲ್ಲಿ ಮನೆ, ರಸ್ತೆ, ಬೆಳೆ, ಜೀವ ಹಾನಿಯಾಗಿದೆ. ಇದರ ಬಗ್ಗೆ ಕೇಳುವವರೇ ಇಲ್ಲ. ಜಿಪಂ ಸದಸ್ಯರು ಅಧ್ಯಕ್ಷರಿಗೆ ಹಿಂದಿನ ತುರ್ತು ಸಭೆಯಲ್ಲಿ ಕೂಡಲೇ ಸಾಮಾನ್ಯ ಸಭೆ ಕರೆದು ಚರ್ಚಿಸುವಂತೆ ಆಗ್ರಹಿಸಿದ್ದರು. ಆದರೆ ಇನ್ನೂ ಗಮನಹರಿಸದ ಬಗ್ಗೆ ಸಂಶಯ ಉಂಟಾಗುವಂತಾಗಿದೆ.
ಜಿಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೊಸಬರು. ಅಧಿಕಾರ ನಡೆಸಿ ಗೊತ್ತಿಲ್ಲ. ಆದರೆ ಅವರ ಸುತ್ತ ಇರುವವರು ಇದರ ಬಗ್ಗೆ ಗಮನಹರಿಸಬೇಕಿತ್ತು. ರೈತರ ಸಮಸ್ಯೆ, ಗ್ರಾಮಾಂತರದ ಸಮಸ್ಯೆ ಮತ್ತು ಅಭಿವೃದ್ಧಿ ಬಗ್ಗೆ ಮುಂಗಾರಿನ ಹಂತದ ಕ್ರಮ ಕೈಗೊಳ್ಳದಿದ್ದರೆ ಜಿಪಂ ಅವಶ್ಯಕತೆ ಇದೆಯೇ? ರೈತರು ಸರಿಯಾದ ಮಾರ್ಗದರ್ಶನ ಸಿಗದೆ ಅತಂತ್ರರಾಗಿದ್ದಾರೆ. ಗೊಬ್ಬರ, ಬೀಜ, ಇನ್ನಿತರ ತಾಂತ್ರಿಕ ನೆರವಿನ ಬಗ್ಗೆ ಕೇವಲ ಅಧಿಕಾರಿಗಳನ್ನೇ ನೆಚ್ಚಿಕೊಳ್ಳುವಂತಾಗಿದೆ. ಜಿಪಂ ಸದಸ್ಯರು ಇವುಗಳ ಬಗ್ಗೆ ಮಾಹಿತಿ ಪಡೆದು ತಮ್ಮ ಕ್ಷೇತ್ರಗಳಿಲ್ಲಿ ರೈತರಿಗೆ ಮಾಹಿತಿ ಕೊಡುವ ಕೆಲಸವಾಗಬೇಕು. ಈ ಹಿನ್ನಲೆಯಲ್ಲಿ ಅವರೇ ಮತ್ತೆ ಮತ್ತೆ ಒತ್ತಾಯ ಮಾಡಿ ಸಭೆ ಕರೆಯುವಂತೆ ಮಾಡಬೇಕಿದೆ.
ಇದೇ ರೀತಿ ಶಿವಮೊಗ್ಗ ತಾಪಂ ಕತೆಯೂ ಆಗಿದೆ. ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದರೂ ಇಂದಿನವರೆಗೆ ಸ್ಥಾಯಿ ಸಮಿತಿ ರಚನೆಯಾಗಿಲ್ಲ. ನೂತನ ಸದಸ್ಯರು ತಾಪಂ ಕಚೇರಿಯನ್ನೇ ಪ್ರವೇಶಿಸಿಲ್ಲ.
ತಾಪಂ, ಜಿಪಂ ಅಧಿಕಾರಿಗಳು ಈ ಬಗ್ಗೆ ಏಕೆ ಕ್ರಮ ಜರುಗಿಸುತ್ತಿಲ್ಲ ಎನ್ನುವುದು ಮತದಾರರ ಪ್ರಶ್ನೆಯಾಗಿದೆ.
.................................

No comments:
Post a Comment