ಮಾನಸಿಕ ಅಸ್ವಸ್ಥರ ಬಾಳು ಬೆಳಗಲು ಮುಂದಾದ ನ್ಯಾಯಾಲಯ
ಸರ್ಕಾರದ ಎಷ್ಟೋ ಯೋಜನೆಗಳು ಜನರಿಗೆ ಗೊತ್ತಿಲ್ಲದೆ, ಪ್ರಚಾರ ಸಿಗದೆ ಮೂಲೆಗುಂಪಾಗುತ್ತವೆ. ಹಾಗೆಯೇ ಕಾನೂನಿನಲ್ಲಿ ಇರುವ ಒಳ್ಳೆಯ ಅವಕಾಶಗಳೂ ಸಹ ಜನಸಾಮಾನ್ಯರಿಗೆ ಗೊತ್ತಾಗುವುದೇ ಇಲ್ಲ. ಕಾನೂನಿನಲ್ಲಿ ಮಾನಸಿಕ ಅಸ್ವಸ್ಥರಿಗೆ ಬದುಕು ಕಟ್ಟಿಕೊಡಲು ದಾರಿ ಇದೆ ಎನ್ನುವುದನ್ನು ನಗರದ ಒಬ್ಬ ಹಿರಿಯ ನ್ಯಾಯಾಧೀಶರು ತೋರಿಸಿಕೊಟ್ಟಿದ್ದಾರೆ. ಇದು ನಗರದಲ್ಲಿರುವ ಎಲ್ಲ ಅಧಿಕಾರಿ, ಇಲಾಖೆಗಳ ಮುಖ್ಯಸ್ಥರ, ಜನಸಾಮಾನ್ಯರ ಕಣ್ತೆರೆಸಬೇಕಿದೆ. ಜೀವನದಲ್ಲಿ ಸಂಭವಿಸಿದ ಯಾವುದೋ ಘಟನೆಯಿಂದ ಮಾನಸಿಕ ಅಸ್ವಸ್ಥರಾಗಿ ಮನೆ ಬಿಟ್ಟು ಅಲೆಯುತ್ತಿರುವವರನ್ನು ಹಾಗೆಯೇ ಬಿಡದೆ ಸಮಾಜದ ಮುಖ್ಯವಾಹಿನಿಗೆ ತರಲು ನ್ಯಾಯಾಲಯಕ್ಕೆ ಹಾಜರ್ಪಡಿಸಿ ನಿಮ್ಹಾನ್ಸ್ಗೆ ಸೇರಿಸಿ ಉಚಿತ ಚಿಕಿತ್ಸೆಗೆ ಅನುವು ಮಾಡಿಕೊಡಬೇಕು.
ಮಾನಸಿಕ ಅಸ್ಥಸ್ಥರು ರಸ್ತೆಯಲ್ಲಿ ತಿರುಗಾಡುತ್ತಿದ್ದರೆ ಅವರ ಬಗ್ಗೆ ಪೊಲೀಸರಿಗೆ ಇಲ್ಲವೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಾಹಿತಿ ಕೊಡಿ. ಇವರ ಮೂಲಕ ಅವರನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದರೆ ನ್ಯಾಯಾಧೀಶರು ಸ್ವೀಕೃತಿ ಆದೇಶವನ್ನು ಹೊರಡಿಸುತ್ತಾರೆ. ಕೂಡಲೇ ನಿಮ್ಹಾನ್ಸ್ಗೆ ಸೇರಿಸಲು ಆದೇಶಿಸುತ್ತಾರೆ. ಇದರಿಂದ ಈ ರೋಗಿಗೆ ಉಚಿತ ಚಿಕಿತ್ಸೆ ನಿಮ್ಹಾನ್ಸ್ನಲ್ಲಿ ದೊರೆಯುತ್ತದೆ.
ಇಂತಹ ಯೋಜನೆ ಜಾರಿಯಲ್ಲಿರುವುದು ಬಹುತೇಕರಿಗೆ ಗೊತ್ತಿಲ್ಲ. ಸ್ವತಃ ಪೊಲೀಸರಿಗೇ ಗೊತ್ತಿಲ್ಲ. ಹಾಗಾಗಿಯೇ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಬೀದಿಯಲ್ಲಿ ಕೂಗಾಡುತ್ತಾ, ಗಲಾಟೆ ಮಾಡುತ್ತ ಅಥವಾ ಅಂಡಲೆಯುತ್ತಿರುವುದು ಕಂಡುಬರುತ್ತಿದೆ. ಕೆಲವೆಡೆ ಇಂತಹವರನ್ನು ಚುಡಾಯಿಸುವುದು, ತಮಾಷೆ ಮಾಡುವುದು ಕಂಡುಬರುತ್ತದೆ. ಆದ್ದರಿಂದ ಇನ್ನುಮು ಂದೆ ಇಂತಹವರು ಎಲ್ಲೇ ಕಂಡುಬಂದರೂ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ. ಅವರು ಈ ರೋಗಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಲು ಮನವಿ ಮಾಡಿ. ಇದರಿಂದ ಮಾನಸಿಕ ಅಸ್ವಸ್ಥರು ಬೀದಿಗಳಲ್ಲಿ ಅಲೆಯುವುದು ತಪ್ಪುತ್ತದೆ. ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
ನಗರಪಾಲಿಕೆಯವರು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು, ಪೊಲೀಸರು ಇಂತಹ ಮಹತ್ತರ ಯೋಜನೆಗಳ ಬಗ್ಗೆ ತಾವೇ ತಿಳಿದುಕೊಂಡಿಲ್ಲ. ಜನರಲ್ಲೂ ಜಾಗೃತಿ ಮೂಡಿಸಿಲ್ಲ.
ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ. ಮಾನಸಿಕ ಅಸ್ಥಸ್ಥರು ಎಲ್ಲರಂತೆ ಜೀವನ ನಡೆಸಲು ಹಕ್ಕಿದೆ. ಇದನ್ನು ತಿಳಿದುಕೊಂಡು ಅವರಿಗೆ ಉಚಿತ ತಪಾಸಣೆ ನಡೆಸಲಾಗುತ್ತಿದೆ. ಅವಶ್ಯವಿದ್ದರೆ ಚಿಕಿತ್ಸೆಯನ್ನೂ ಎಲ್ಲ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಡಿಸಲು ಅವಕಾಶವಿದೆ. ಅದರೆ ನ್ಯಾಯಾಧೀಶರು ನಿಮ್ಹಾನ್ಸ್ನಲ್ಲಿ ಹೆಚ್ಚಿನ ಅನುಕೂಲಗಳು, ಸೌಲಭ್ಯಗಳು ಇರುವುದರಿಂದ ಅಲ್ಲಿಗೇ ಆದೇಶ ಹೊರಡಿಸುತ್ತಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಆಸ್ಪತ್ರೆಯಲ್ಲಿ ಯಾರೂ ಇರಬೇಕೆಂದಿಲ್ಲ. ಆಸ್ಪತ್ರೆಗೆ ದಾಖಲಿಸಿದ ನಂತರ ಅವರು ಬಿಡುಗಡೆಯಾಗುವವರೆಗೂ ಆಸ್ಪತ್ರೆಯವರೇ ಜವಾಬ್ದಾರರಾಗಿರುತ್ತಾರೆ. ಅವರಿಗೆ ಸಲಹೆ, ಸಮಾಲೋಚನೆ ಆಯೋಜಿಸಲಾಗುತ್ತದೆ.
ಈ ಬಗ್ಗೆ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಜಿಲ್ಲೆಗೆ ಇತ್ತೀಚೆಗಷ್ಟೇ ಬಂದಿರುವ ನೂತನ ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶ ಭೀಮನಗೌಡ ಕೆ. ನಾಯಿಕ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ನಗರದಲ್ಲಿ ಮಾನಸಿಕ ಅಸ್ಥಸ್ಥ ಮತ್ತು ಮಾನಸಿಕ ವಿಕಲಚೇತನರಿಗೆ ಕಾನೂನು ಸೇವೆಗಳ ಬಗ್ಗೆ ಒಂದು ದಿನ ಕಾರ್ಯಾಗಾರವನ್ನು ಮತ್ತು ಉಚಿತ ಆಪ್ತಸಮಾಲೋಚನೆ, ಚಿಕಿತ್ಸೆ ಶಿಬಿರವನ್ನು ಮೊನ್ನೆ ಏರ್ಪಡಿಸಿದ್ದರು. ಇದರ ಬಗ್ಗೆ ಜಾಗೃತಿಯನ್ನು ಯಾರಲ್ಲಿ ಮೂಡಿಸಬೇಕೋ ಅಂತಹವರನ್ನೇ ಈ ಶಿಬಿರಕ್ಕೆ ವಿಶೇಷವಾಗಿ ಆಹ್ವಾನಿಸಿದ್ದರು. ಅವರೆಂದರೆ, ಪೊಲೀಸ್ ಅಧಿಕಾರಿಗಳು, ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು. ಹೆಸರಾಂತ ಮಾನಸಿಕ ತಜ್ಞರನ್ನು ಕರೆಯಿಸಿ ಅವರಿಂದ ಸಲಹೆ ಕೊಡಿಸಿದ್ದಾರೆ. ಇನ್ನಾದರೂ ಸಂಬಂಧಿತ ಇಲಾಖೆಯವರು ಅಥವಾ ಸಾರ್ವಜನಿಕರು ಇಂತಹವರ ಸಂಖ್ಯೆಯನ್ನು ನಗರದಲ್ಲಿ ಕಡಿಮೆ ಮಾಡಲು ಮುಂದೆಬರಬೇಕಿದೆ.
ನಗರಗಳಲ್ಲಿ ಬೀದಿಗಳಲ್ಲಿ ತಿರುಗುತ್ತ ಇರುವ ಇಂತಹವರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಲಾಗುತ್ತಿದೆ. ಅಲ್ಲಿ ಕೆಲವು ದಿನ ಅವರಿಗೆ ಉಪಚಾರ ಮಾಡಲಾಗುತ್ತದೆ. ನಂತರ ಮತ್ತೆ ಬಿಟ್ಟುಬಿಡುತ್ತಾರೆ. ಅವರು ಮತ್ತೆ ಅದೇ ರಸ್ತೆಯಲ್ಲಿ ತಿರುಗಾಡುತ್ತಾ ಇರುತ್ತಾರೆ. ಅಂದರೆ ಈ ಕೇಂದ್ರಗಳು ಜವಾಬ್ದಾರಿಯನ್ನು ಹೊರುವುದಿಲ್ಲ. ದಾಖಲೆಯಲ್ಲಿ ಮಾತ್ರ ಇಂತಹ ರೋಗಿಗಳನ್ನು ಸೇರಿಸಿಕೊಂಡಿದ್ದನ್ನು, ಅವರಿಗೆ ಚಿಕಿತ್ಸೆ ನೀಡಿದ್ದನ್ನು ತೋರಿಸುತ್ತಾರೆ. ಆದರೆ ನಂತರ ಆ ರೋಗಿ ಗುಣಮುಖನಾದನೇ, ಎಲ್ಲಿದ್ದಾನೆ ಎನ್ನುವುದನ್ನು ಮಾತ್ರ ಎಲ್ಲಿಯೂ ಬಹಿರಂಗಪಡಿಸುವುದಿಲ್ಲ.
ಶಿವಮೊಗ್ಗದಲ್ಲಿ ಇಂತಹ ಕೇಂದ್ರಗಳು ಸುಮಾರು ಎಂಟು-ಹತ್ತರಷ್ಟಿವೆ. ಈ ಎನ್ಜಿಒಗಳು ಯಾವ ಮಾನಸಿಕ ರೋಗಿಯನ್ನೂ ಇಲ್ಲಿಯವರೆಗೆ ಪೊಲೀಸರ ಸಹಾಯದಿಂದ ನ್ಯಾಯಾಧೀಶರ ಬಳಿ ಕರದೊಯ್ದು ನಿಮ್ಹಾನ್ಸ್ಗೆ ದಾಖಲಿಸುವ ಕೆಲಸ ಮಾಡಿಲ್ಲ. ನಿರಾಶ್ರಿತರ, ಅಸ್ವಸ್ಥರ ಸೇವೆ ಎಂದು ಹೇಳಿಕೊಂಡು ಕೆಲಸ ಮಾಡುತ್ತಿವೆ. ನಿಜಕ್ಕೂ ಮಾನಸಿಕ ಅಸ್ವಸ್ಥ ಗುಣಮುಖನಾಗಲು ಸಹಕರಿಸಿದ್ದರೆ ಅವರ ಸಂಸ್ಥೆ ಇನ್ನಷ್ಟು ಜನಪ್ರಿಯವಾಗುತ್ತಿತ್ತು.
ಸಾರ್ವಜನಿಕರಿಗೂ ಈ ಬಗ್ಗೆ ಮಾಹಿತಿ ಇಲ್ಲದ್ದರಿಂದ ಇಲ್ಲಿಯವರೆಗೆ ಮಾನಸಿಕ ಅಸ್ವಸ್ಥರು ನಗರದಲ್ಲಿ ಸಾಕಷ್ಟು ತಿರುಗಾಡುತ್ತಿರುವುದು ಕಂಡುಬರುತ್ತಿದೆ. ಇನ್ನಾದರೂ ಇಂತಹವರು ಕಂಡುಬಂದರೆ ಕೂಡಲೇ ಪೊಲೀಸರಿಗೆ ತಿಳಿಸಿ, ಅವರ ಮೂಲಕ ಆ ರೋಗಿ ಚಿಕಿತ್ಸೆಗೆ ದಾಖಲಾಗಲು ಸಹಕರಿಸುವಂತಾಗಬೇಕಿದೆ. ಆತ ಗುಣಮುಖನಾದಲ್ಲಿ ಎಂದಿನಂತೆ ತನ್ನ ಕುಟುಂಬದ ಜೊತೆ ಜೀವನ ಸಾಗಿಸಲು ಸಮರ್ಥನಾಗುತ್ತಾನೆ. ಮಾನಸಿಕ ಅಸ್ವಸ್ಥರಿಗೂ ಎಲ್ಲರಂತೆ ಸಮಾಜದಲ್ಲಿ ಬದುಕುವ ಹಕ್ಕಿದೆ ಎನ್ನುವುದು ಇದರಿಂದ ಬಹಿರಂಗವಾಗುತ್ತದೆ. ಇಂತಹ ಉತ್ತಮ ಯೋಜನೆಯನ್ನು ಸಾರ್ವಜನಿಕರು ಅರಿತು ಮಾನಸಿಕ ಅಸ್ವಸ್ಥರ ಬಾಳು ಬೆಳಗಿಸಲು ಮುಂದಾಗಬೇಕಿದೆ.
...............................

No comments:
Post a Comment