ಎಂಎಲ್ಸಿಯಾಗಲು ಶುರುವಾಗಿದೆ ಪೈಪೋಟಿ
* ಮೂರು ನಾಮನಿರ್ದೇಶನ ಸ್ಥಾನಕ್ಕೆ ನಟರು, ಸಮಾಜಸೇವಕರು, ಸಾಹಿತಿಗಳ ಯತ್ನ
ವಿಧಾನಪರಿಷತ್ನ ಮೂರು ನಾಮನಿರ್ದೇಶಿತ ಸದಸ್ಯರ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ. ಸಿನಿಮಾ ನಟರು, ಸಮಾಜ ಸೇವಕರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಈ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ. ಈ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಮುಂದಿನ ತಿಂಗಳ ಮೊದಲ ವಾರದಲ್ಲಿ ಅಂತಿಮ ಪಟ್ಟಿ ಪ್ರಕಟವಾಗಲಿದೆ.
ನಟ ಜಗ್ಗೇಶ್, ಪ್ರೊ. ಪಿ.ವಿ.ಕೃಷ್ಣ ಭಟ್ ಮತ್ತು ವಿ. ಸೋಮಣ್ಣ ಅವರನ್ನು ಹಿಂದಿನ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ನಾಮನಿರ್ದೇಶನ ಮಾಡಿತ್ತು. ಆದರೆ ಅವರ ಅವಧಿ ಮುಗಿದು ಸುಮಾರು ಎರಡು ತಿಂಗಳೇ ಗತಿಸಿದೆ. ಶೀಘ್ರದಲ್ಲಿ ಈ ಮೂರು ಸ್ಥಾನವನ್ನು ಹಾಲಿ ಸರ್ಕಾರ ತುಂಬಬೇಕಿದೆ.
ಈ ಮೂರು ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಗಳೆಂದರೆ, ಸಿನಿಮಾ ಕ್ಷೇತ್ರದಿಂದ ನಟಿಯರಾದ ರಮ್ಯಾ ಮತ್ತು ಭಾವನಾ, ಸಾಹಿತ್ಯ ಕ್ಷೇತ್ರದಿಂದ ಬರಗೂರು ರಾಮಚಂದ್ರಪ್ಪ, ಪ್ರೊ.ಎಸ್. ಜಿ. ಸಿದ್ದರಾಮಯ್ಯ, ಪ್ರೊ. ಜಿ.ಕೆ. ಗೋವಿಂದರಾವ್, ಸಮಾಜ ಸೇವಕರ ಕ್ಷೇತ್ರದಿಂದ ಕೆ.ಪಿ.ನಂಜುಂಡಿ, ರಾಜಕಾರಣಿಗಳಾದ ಬೆಂಗಳೂರಿನ ಮಾಜಿ ಮೇಯರ್ ಮತ್ತು ಕೆಪಿಸಿಸಿ ಮುಖಂಡ ರಾಮಚಂದ್ರಪ್ಪ ಮತ್ತು ಮೂಲತಃ ಚಿಕ್ಕಮಗಳೂರಿನವರಾದ, ಕೆಪಿಸಿಸಿ ವಕ್ತಾರರಾದ ಬಿ.ಎಲ್. ಶಂಕರ್ ಇವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಆಯ್ಕೆ ಕೆಪಿಸಿಸಿ ಮತ್ತು ಮುಖ್ಯಮಂತ್ರಿಗೆ ಬಿಟ್ಟಿದ್ದಾಗಿದೆ.
ನಟಿ ರಮ್ಯಾ ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾದವರು. ಜೊತೆಗೆ ಎಐಸಿಸಿಯಲ್ಲೂ ಹೆಚ್ಚಿನ ಪ್ರಭಾವವಿರುವವರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ನಾಯಕರ ಭಿನ್ನಮತದಿಂದ ಅವರು ಸೋಲುಂಡಿದ್ದಾರೆ. ನಂತರ ರಾಜ್ಯ ರಾಜಕಾರಣದಲ್ಲಿ ಅಷ್ಟೇನೂ ಸಕ್ರಿಯರಾಗಿರದಿದ್ದರೂ ಆಗಾಗ ಹೆಸರು ಕೇಳಿಬರುತ್ತಿತ್ತು. ಇತ್ತೀಚೆಗೆ ನಡೆದ ಎಂಎಲ್ಸಿ ಚುನಾವಣೆ ವೇಳೆಯೂ ಅವರ ಹೆಸರು ಕೇಳಿಬಂದಿತ್ತು. ನಟಿ ಭಾವನಾ ಸಹ ಕಾಂಗ್ರೆಸ್ನಲ್ಲಿದ್ದುಕೊಡೇ ಮಕ್ಕಳ ಹಕ್ಕುಗಳ ಸಮಿತಿ (ಬಾಲಭವನ) ರಾಜ್ಯಾಧ್ಯಕ್ಷೆಯಾಗಿದ್ದಾರೆ. ಇವರ ಹೆಸರೂ ಸಹ ಇತ್ತೀಚೆಗೆ ಜರುಗಿದ ಎಂಎಲ್ಸಿ ಚುನಾವಣೆ ವೇಳೆ ಕೇಳಿಬಂದಿತ್ತು. ಆದರೆ ಕೊನೆಗಳಿಗೆಯಲ್ಲಿ ಅವರಿಗೆ ಟಿಕೆಟ್ ಕೈತಪ್ಪಿತ್ತು. ಈ ಬಾರಿ ಇವರಿಬ್ಬರಲ್ಲಿ ಯಾರಿಗಾದರೊಬ್ಬರಿಗೆ ಟಿಕೆಟ್ ಸಿಗುವುದು ಬಹುತೇಕ ನಿಶ್ಚಿತವಾಗಿದೆ.
ಸಾಹಿತ್ಯ ವಲಯದಿಂದ ಹೆಚ್ಚಿನ ಪೈಪೋಟಿ ಎದುರಾಗಿದೆ. ಎಲ್ಲ ಆಕಾಂಕ್ಷಿಗಳೂ ತಮ್ಮ ಪ್ರಭಾವ ಬೀರಲಾರಂಭಿಸಿದ್ದಾರೆ. ಪ್ರಮುಖವಾಗಿ ಬರಗೂರು ಮತ್ತು ಪ್ರೊ. ಸಿದ್ದರಾಮಯ್ಯ ಅವರ ಹೆಸರು ಚಾಲ್ತಿಯಲ್ಲಿದೆ. ಜೊತೆಗೆ ಇನ್ನೂ ಹಲವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇಲ್ಲಿ ಬರಗೂರು ಅವರಿಗೆ ಅವಕಾಶ ಹೆಚ್ಚಿನ ಪ್ರಮಾಣದಲ್ಲಿದೆ. ಜೊತೆಗೆ ಅನೇಕ ಸಚಿವರು ಮತ್ತು ಕಾಂಗ್ರೆಸಿಗರು ಬರಗೂರು ಅವರನ್ನೇ ನಾಮಕರಣ ಮಾಡುವಂತೆ ಕೆಪಿಸಿಸಿಗೆ ಮತ್ತು ಸಿಂಎಗೆ ಮನವಿ ಮಾಡಿದ್ದಾರೆ. ಇವರನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಮತ್ತು ಜಿ. ಕೆ. ಗೋವಿಂದರಾವ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಸಮಾಜ ಸೇವೆ ಕ್ಷೇತ್ರದಿಂದ ಕೆ. ಪಿ. ನಂಜುಂಡಿ ಸ್ಥಾನ ಪಡೆದರೆ ಆಶ್ಚರ್ಯವೇನಿಲ್ಲ. ಏಕೆಂದರೆ, ಕೆಲವು ವರ್ಷಗಳಿಂದ ಕಾಂಗ್ರೆಸ್ನಲ್ಲಿರುವ ನಂಜುಂಡಿ ಪಕ್ಷಕ್ಕೆ ಫೈನಾನ್ಶಿಯರ್ ಸಹ ಆಗಿದ್ದಾರೆ. ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಎಂಬ ಸ್ವರ್ಣೋದ್ಯಮದ ಮೂಲಕ ರಾಜ್ಯದಲ್ಲಿ ಹೆಸರುಗಳಿಸಿರುವ ಅವರು, ಉತ್ತಮ ಸಂಘಟಕರೂ, ಧಾರಾವಾಹಿ ಮೂಲಕ ನಟನೆ, ನಿರ್ಮಾಪಕರಾಗಿ ಮನೆಮಾತಾದವರು. ಕಾಂಗ್ರೆಸ್ನಲ್ಲಿ ಆಸ್ಕರ್ ಫರ್ನಾಂಡೀಸ್ ಅವರ ಅತ್ಯಾಪ್ತರೆಂಬ ಮಾತಿದೆ. ಕಳೆದ ಎಂಎಲ್ಸಿ ಚುನಾವಣೆಯಲ್ಲೂ ಇವರಿಗೆ ಕೊನೆಹಂತದಲ್ಲಿ ಅವಕಾಶ ತಪ್ಪಿದೆ. ಇದೆಲ್ಲ ಈ ಬಾರಿ ಅವರಿಗೆ ಪ್ಲಸ್ ಆಗಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ಆದರೆ ಇವರಿಗೆ ಅಷ್ಟೇ ಪ್ರಬಲ ಸ್ಪರ್ಧೆ ಒಡ್ಡುತ್ತಿರುವವರೆಂದರೆ, ಹಿರಿಯರಾದ ರಾಮಚಂದ್ರಪ್ಪ ಮತ್ತು ಬಿ.ಎಲ್.ಶಂಕರ್. ರಾಮಚಂದ್ರಪ್ಪ ಮತ್ತು ಶಂಕರ್ ಪಕ್ಷದಲ್ಲಿ ಪ್ರಭಾವಿಗಳು. ಶಂಕರ್ ಪಕ್ಷವನ್ನು ಸಮರ್ಥಿಸಿಕೊಳ್ಳುವ ಮಾತುಗಾರ. ಆದರೂ ರಾಮಚಂದ್ರಪ್ಪ ಬಹುುತೇಕ ಟಿಕೆಟ್ ಪಡೆಯುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇವರೆಲ್ಲರ ಹೊರತಾಗಿ ಇನ್ನೂ ಹಲವರು ಪಟ್ಟಿ ಸೇರಲೂಬಹುದು.
ಅಂತಿಮವಾಗಿ, ಏನಿದ್ದರೂ ಜಾತಿ ಲೆಕ್ಕಾಚಾರದ ಮೇಲೆ ಎಲ್ಲವೂ ನಿರ್ಧರಿತವಾಗಲಿದೆ. ಪ್ರಭಾವವೂ ಕೆಲಸ ಮಾಡುತ್ತದೆ. ಆದ್ದರಿಂದ ಮೂರು ಸ್ಥಾನದ ಆಯ್ಕೆ ಅಷ್ಟು ಸಲೀಸಾಗಿಲ್ಲ. ಮುಖಂಡರು ಅಳೆದು-ತೂಗಿ ತಿಂಗಳಾಂತ್ಯದ ವೇಳೆ ಆಯ್ಕೆ ಮಾಡುವ ಸಾಧ್ಯತೆ ಇದೆ.
.................................................

No comments:
Post a Comment