ಇವರಿಗೆ ಬುದ್ಧಿ ಹೇಳುವವರಾರು?
ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜನರು ಮತ್ತು ಸಂಘ-ಸಂಸ್ಥೆಗಳು ಇಲಾಖೆಗಳೊಂದಿಗೆ ಕೈಜೋಡಿಸಬೇಕಿದೆ. ಶಿವಮೊಗ್ಗದಲ್ಲಂತೂ ಬಹುಮಹಡಿ ಕಟ್ಟಡಗಳೇ ದೊಡ್ಡ ತಲೆನೋವಾಗಿವೆ. ಉದ್ದೇಶಪೂರ್ವಕವಾಗಿ ಇವರು ಟ್ರಾಫಿಕ್ಗೆ ತೊಂದರೆ ಮಾಡುತ್ತಿದ್ದಾರೆ. ಪಾರ್ಕಿಂಗ್ಗೆ ಬಿಡುವ ಜಾಗದಲ್ಲೂ ಮಳಿಗೆ ನಿರ್ಮಿಸುತ್ತಾರೆ. ಅದನ್ನು ತೆರವುಗೊಳಿಸಲು ಮುಂದಾಗುವ ಅಧಿಕಾರಿಯನ್ನು ವರ್ಗಾವಣೆ ಅಥವಾ ಅಮಾನತು ಬೇಕಾದರೂ ಮಾಡಿಸುತ್ತಾರೆ. ಅದೇ ರೀತಿ ಅಂಗಡಿ ಮಾಲಕರೂ ಫುಟ್ಪಾತ್ ತಮ್ಮ ಅಂಗಡಿಗೆ ಸೇರಿದ ಜಾಗ. ತಾವು ಅದಕ್ಕೆ ಬಾಡಿಗೆ ಕೊಡುತ್ತಿದ್ದೇವೆ ಎಂದು ತಿಳಿದಂತಿದೆ.
ಇವರೆಲ್ಲರೂ ವಿದ್ಯಾವಂತರು. ಜೊತೆಗೆ ಆರ್ಥಿಕವಾಗಿ ಸದೃಢರು. ಬಹುವರ್ಷದಿಂದ ವ್ಯಾಪಾರ- ವಹಿವಾಟು ನಡೆಸುತ್ತಿರುವವರು. ಆದರೆ ಪಾದಚಾರಿ ಮಾರ್ಗ ಬಿಡುವುದು, ಪಾರ್ಕಿಂಗ್ಗೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲ.
ಇದು ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಸಮಸ್ಯೆಯಾಗಿ ಕಾಡುತ್ತಿರುವ ಪಾರ್ಕಿಂಗ್ ಅವ್ಯವಸ್ಥೆ ಮತ್ತು ಪಾದಚಾರಿ ಮಾರ್ಗಗಳ ಒತ್ತುವರಿಯ ಬಗ್ಗೆ ಗಮನಿಸಿದಾಗ ಕಂಡುಬರುವ ಪ್ರಮುಖ ಅಂಶಗಳು. ಇಲ್ಲಿ ಮಹಾನಗರ ಪಾಲಿಕೆ ಇದೆ. ಪೊಲೀಸ್ ಇಲಾಖೆ ಇದೆ. ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ನಿಗಮ ಇದೆ. ಆದರೂ ಸಂಚಾರ ವ್ಯವಸ್ಥೆ ಮಾತ್ರ ಹದಗೆಟ್ಟಿದೆ. ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆ ಕೇವಲ ವಾಹನಗಳ ಭರಾಟೆಯಿಂದ ಮಾತ್ರವಲ್ಲ. ತಾಂತ್ರಿಕವಾಗಿ ರಸ್ತೆಗಳನ್ನು ನಿರ್ಮಾಣ ಮಾಡದಿದ್ದರೆ, ವೃತ್ತಗಳನ್ನು ರಚಿಸದಿದ್ದರೆ, ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಿದರೆ ಎದುರಾಗುತ್ತದೆ. ಇವುಗಳನ್ನು ಸಂಬಂಧಿತ ಇಲಾಖೆಯವರು ಜವಾಬ್ದಾರಿಯಿಂದ ನಿರ್ವಹಿಸಬೇಕಾಗುತ್ತದೆ. ಆದರೆ ಪ್ರಸ್ತುತ ಟ್ರಾಫಿಕ್ ಎಂದಾಕ್ಷನ ಪೊಲೀಸ್ ಇಲಾಖೆಯೊಂದನ್ನು ಮಾತ್ರ ದೂಷಿಸುವ ಪದ್ಧತಿ ಜನರಲ್ಲಿ ಬೆಳೆದುಬಂದಿದೆ.
ಅಂಡರ್ ಗ್ರೌಂಡ್ನಲ್ಲಿ ಪಾರ್ಕಿಂಗ್ಗೆ ಸ್ಥಳಾವಕಾಶ ಬಿಡಬೇಕೆಂದು ಹೈಕೋರ್ಟ್ ಆದೇಶವಿದ್ದರೂ ಇದನ್ನು ಪಾಲಿಸುವವರಿಲ್ಲ. ಈ ಆದೇಶವನ್ನು ಜಾರಿಗೊಳಿಸುವವರೇ ಇಲ್ಲ. ಎಲ್ಲರೂ ಉಲ್ಲಂಘಿಸುವವರೇ ಆಗಿದ್ದಾರೆ. ಬಹುಮಹಡಿ ಕಟ್ಟಡವನ್ನು ಸ್ವಲ್ಪವೂ ಜಾಗ ಬಿಡದೆ ಫುಟ್ಪಾತ್ವರೆಗೆ ಕಟ್ಟುತ್ತಾರೆ. ಇನ್ನೂ ಹಲವೆಡೆ ಒತ್ತುವರಿ ಮಾಡಿ ನಿರ್ಮಿಸಿದ್ದೂ ಇದೆ. ಹೀಗಾದರೆ ಪಾರ್ಕಿಂಗ್ಗೆ ಎಲ್ಲಿ ಅವಕಾಶ ಸಿಗುತ್ತದೆ. ಆ ಕಟ್ಟಡಕ್ಕೆ ಬರುವವರು ರಸ್ತೆಯಂಚಿನಲ್ಲೇ ವಾಹನ ನಿಲ್ಲಿಸುತ್ತಾರೆ. ಇದರಿಂದ ವಾಹನಗಳು ಜಾಮ್ ಆಗುತ್ತವೆ. ಇಕ್ಕಟ್ಟಾದ ರಸ್ತೆ ಆದರಂತೂ ಸಮಸ್ಯೆ ಬಗೆಹರಿಯುವುದೇ ಇಲ್ಲ.
ಪಾಲಿಕೆಯವರು ಮತ್ತು ರಸ್ತೆ ಇಂಜಿನಿಯರಿಂಗ್ ನಿರ್ವಹಿಸುವವರು ಎಸಗುತ್ತಿರುವ ಬಹುದೊಡ್ಡ ತಪ್ಪುಗಳಿಗೆ ಸಾರ್ವಜನಿಕರು ಅದರಲ್ಲೂ ವಾಹನ ಸವಾರರು ಬೆಲೆತೆರಬೇಕಾಗುತ್ತಿದೆ. ಪಾಲಿಕೆಯವರು ಕಟ್ಟಡ ಅನುಮತಿ ನೀಡುವಾಗ ಕೆಲವು ಶರತ್ತುಗಳನ್ನು ವಿಧಿಸುತ್ತಾರೆ. ಅದನ್ನು ಅಳವಡಿಸಿಕೊಂಡು ಪರವಾನಿಗೆ ಪಡೆದವರು ಕಟ್ಟಡ ನಿರ್ಮಿಸಬೇಕು. ಆದರೆ ಹಾಗೆ ಮಾಡದೆ ಅದನ್ನು ಪಾಲಿಸದೆ ತಮಗಿಷ್ಟ ಬಂದಂತೆ ಕಟ್ಟಡ ನಿರ್ಮಿಸುತ್ತಾರೆ. ಜೊತೆಗೆ ಪಾಲಿಕೆಯವರೂ ಸಹ ಇದನ್ನು ಪರಿಶೀಲನೆ ಮಾಡುವ ಗೋಜಿಗೆ ಹೋಗುವುದೇ ಇಲ್ಲ. ಈ ಮಧ್ಯೆ ನಗರಾಭಿವೃದ್ಧಿ ಪ್ರಾಧಿಕಾರ ಇದೆ. ಅವರು ಈ ವಿಷಯದಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದೇ ಯಾರಿಗೂ ಗೊತ್ತಿಲ್ಲ.
ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುಮಹಡಿ ಕಟ್ಟಡಗಳು ಅಧಿಕವಾಗುತ್ತಿವೆ. ಮುಂದಿನ ದಿನಗಳಲ್ಲಿ ಇವೇ ರಾರಾಜಿಸಲಿವೆ. ಇವರೆಲ್ಲ ಕಾನೂನು ಮೀರುವವರಾದರೆ ಪಾರ್ಕಿಂಗ್ ಹಾಳಾಗಿ ಹೋಗಲಿ, ನಡೆದಾಡಲೂ ಜಾಗವಿಲ್ಲದಂತಹ ಪರಿಸ್ಥಿತಿ ತಲೆದೋರುವುದು ನಿಶ್ಚಿತ. ಬಹುಮಹಡಿ ಕಟ್ಟುವವರು ಶ್ರೀಮಂತರೇ ವಿನಾ ಬಡವರಲ್ಲ. ಅವರಿಗೆ ಕಾನೂನು ಉಲ್ಲಂಘಿಸುವುದೂ ಗೊತ್ತು, ಅದರಿಂದ ಪಾರಾಗುವುದೂ ಗೊತ್ತಿರುತ್ತದೆ. ಇಂತಹವರಿಗೆ ರಾಜಕಾರಣಿಗಳ ಬೆಂಬಲ ಸದಾ ಇರುತ್ತದೆ. ಈ ಎಲ್ಲವುಗಳ ಉದಾಹರಣೆ ನಮ್ಮ ಕಣ್ಣೆದುರೇ ಇದೆ.
ಈ ರೀತಿ ಕಾನೂನು ಉಲ್ಲಂಘಿಸುವವರು ಜಾಸ್ತಿ ಇರುವಾಗ ಟ್ರಾಫಿಕ್ ನಿರ್ವಹಣೆ ಮಾಡುವುದು ಹೇಗೆ ಸಾಧ್ಯ. ಮೊನ್ನೆ ಪೊಲೀಸ್ ವರಿಷ್ಠರು ಕರೆದಿದ್ದ ಈ ಕುರಿತ ಸಂವಾದದಲ್ಲಿ ಮಾತನಾಡಿದ ಬಹುತೇಕರು ಬಹುಮಹಡಿ ಕಟ್ಟಡಗಳು ಮತ್ತು ಆಸ್ಪತ್ರೆಗಳು ಪಾರ್ಕಿಂಗ್ಗೆ ಜಾಗ ಬಿಡದೆ ಫುಟ್ಪಾತ್ವರೆಗೆ ಕಟ್ಟಡ ನಿರ್ಮಿಸಿದ್ದು ಪ್ರಸ್ತ್ತಾಪವಾಯಿತು. ಎರಡನೆಯದಾಗಿ , ಅಂಗಡಿಕಾರರು ಫುಟ್ಪಾತ್ನಲ್ಲಿ ತಮ್ಮ ಮಾರಾಟದ ಸರಕುಗಳನ್ನು ಇಟ್ಟು ಜನಸಂಚಾರಕ್ಕೆ ಅಡ್ಡಿ ಮಾಡುವುದು, ಮೂರನೆಯದಾಗಿ, ತಪ್ಪಾದ ಇಂಜಿನಿಯರಿಂಗ್ ವ್ಯವಸ್ಥೆಗಳಿಂದ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯಿತು.
ಜನರು ಎಲ್ಲಿಯವರೆಗೆ ಪಾರ್ಕಿಂಗ್, ಕಾನೂನು, ಟ್ರಾಫಿಕ್ ಸಮಸ್ಯೆ ಬಗ್ಗೆ ಅರಿವು ಹೊಂದುವುದಿಲ್ಲವೋ ಅಲ್ಲಿಯವರೆಗೆ ಏನೇ ಮಾಡಿದರೂ ಅವರನ್ನು ಸುಧಾರಿಸಲು ಸಾಧ್ಯವಿಲ್ಲ. ಪೊಲೀಸರು ಎಷ್ಟೇ ಕಷ್ಟಪಟ್ಟರೂ, ಜನ ಎಷ್ಟೇ ಅವರನ್ನು ಬೈದರೂ ಲಾಭವಿಲ್ಲ. ನೆಹರೂ ರಸ್ತೆ ಮತ್ತು ಬಿಎಚ್ ರಸ್ತೆ ಅಮೀರ್ ಅಹಮದ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಇರುವ ಫುಟ್ಪಾತ್ ಗಮನಿಸಿ. ಫುಟ್ಪಾತ್ ಇರುವುದು ಓಡಾಟಕ್ಕಲ್ಲ, ಅಂಗಡಿಕಾರರ ಸಾಮಗ್ರಿ ಸಂಗ್ರಹಿಸಿಡಲು ಎನ್ನುವುದು ಗೊತ್ತ್ತಾಗುತ್ತದೆ.
ತಮ್ಮ ಜವಾಬ್ದಾರಿ ಈ ಸಮಾಜದಲ್ಲಿ ಏನು ಎನ್ನುವುದನ್ನು ಪ್ರತಿಯೊಬ್ಬ ಮನುಷ್ಯ ಅರ್ಥ ಮಾಡಿಕೊಳ್ಳಬೇಕು. ತಾನು ತಪ್ಪು ಮಾಡಿದರೆ ಎಷ್ಟು ಜನ ತೊಂದರೆಪಡಬಹುದು ಎಂಬ ಅರಿವು ಇರಬೇಕು. ಇಲ್ಲವಾದರೆ ಪತ್ರಿಕೆಯಲ್ಲಿ ಎಷ್ಟೇ ಬರೆಯಲಿ, ಪೊಲೀಸರು ಎಷ್ಟೇ ಎಚ್ಚರಿಸಲಿ, ಅದರಿಂದ ಲಾಭವಿಲ್ಲ. ಇನ್ನುಮುಂದೆ ಪೊಲೀಸರು ಫುಟ್ಪಾತ್ನಲ್ಲಿಡುವ ಅಂಗಡಿಕಾರರ ಸಾಮಗ್ರಿಗಳನ್ನು ಎತ್ತಿಹಾಕಿಕೊಂಡು ಹೋಗಿ ಪಾಠ ಕಲಿಸಲು ಮುಂದಾಗಬೇಕಿದೆ.
ನಗರದ ಸಂಚಾರ ವ್ಯವಸ್ಥೆ ಸುಧಾರಿಸಬೇಕಾದಲ್ಲಿ ಇವರೆಲ್ಲ ಮುಕ್ತ ಮನಸ್ಸಿನಿಂದ ಮುಂದೆ ಬಂದು ಸಹಕರಿಬೇಕೇ ವಿನಾ ಪೊಲೀಸರನ್ನು ಬಯ್ಯುವುದಲ್ಲ. ವಾಹನಗಳ ನಿರ್ವಹಣೆ ಪೊಲೀಸರ ಜವಾಬ್ದಾರಿ. ಸುಗಮ ಸಂಚಾರಕ್ಕೆ ಇಲಾಖೆ ಎಲ್ಲ ರೀತಿಯ ಯತ್ನವನ್ನು ಮಾಡುತ್ತಿದೆ. ಜನರಿಂದ ಸಲಹೆಗಳನ್ನೂ ಪಡೆಯುತ್ತಿದೆ. ಇದನ್ನರಿತು ಸಾರ್ವಜನಿಕರು ಸಹಕಾರ ಕೊಟ್ಟರೆ ಮಾತ್ರ ಸುವ್ಯವಸ್ಥಿತ ಸಂಚಾರ ಸಾಧ್ಯ.

No comments:
Post a Comment