ಜಡ್ಡುಗಟ್ಟಿರುವ ಪಾಲಿಕೆ ಆಡಳಿತಕ್ಕೆ ಚುರುಕು ಸಿಕ್ಕಿತೇ?
ನೂತನ ಮೇಯರ್ ಏಳುಮಲೈ ಮುಂದಿವೆ ಹತ್ತಾರು ಸವಾಲುಗಳು
ಆಡಳಿತ ಸುಧಾರರಣೆಯ ಗುರಿ: ಏಳುಮಲೈ
ಪಾಲಿಕೆ ಆಡಳಿತದಲ್ಲಿ ಸುಧಾರಣೆ ತರುವುದಕ್ಕೆ ಮೊದಲ ಆದ್ಯತೆ ಎಂದಿದ್ದಾರೆ ಮೇಯರ್ ಏಳುಮಲೈ. ಕುಡಿಯುವ ನೀರು, ಮೂಲಸೌಕರ್ಯ ಕಲ್ಪಿಲಸು ಎಂದಿನಂತೆ ಗಮನ ಕೊಡಲಾಗುವುದು. ಮಿಳಘಟ್ಟ ಸಂತೆ ಮೈದಾನವನ್ನು ಡಿಪೊ ಎದುರು ಗುರುತಿಸಲಾಗಿರುವ ಜಾಗಕ್ಕೆ ಸ್ಥಳಾಂತರಿಸಲಾಗುವುದು. ಅಲ್ಲಿ ಸಕಲ ಸೌಲಭ್ಯ ಕಲ್ಪಿಸುವ ಕೆಲಸ ಮಾತ್ರ ಬಾಕಿ ಇದೆ. ಅದನ್ನು ಆದಷ್ಟು ಶೀಘ್ರ ಕೈಗೊಳ್ಳಲಾಗುವುದು. ಮೂರು ತಿಂಗಳಲ್ಲಿ ಸಂತೆ ಸ್ಥಳಾಂತರ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ ಅವರು.
ಜನರ ಸಮಸ್ಯೆಯ ಅರಿವಿದೆ. ಈಗ ಜನರ ಪ್ರೀತಿ, ವಿಶ್ವಾಸ ಗಳಿಸುವ ಕೆಲಸ ಮಾಡುತ್ತೇನೆ. ನಗರ ಸಂಚಾರ ಮಾಡುವ ಮೂಲಕ ಮತ್ತು ಹಿಂದಿನ ಮೇಯರ್ಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತೇನೆ. ಎಲ್ಲ ಸದಸ್ಯರ, ನಾಗರಿಕರ ಸಹಕಾರವನ್ನು ಪಡೆಯುತ್ತೇನೆ. ನಗರದ ಸಮಸ್ಯೆಗಳ ಇತ್ಯರ್ಥವೇ ತನ್ನ ಗುರಿ ಎಂದಿದ್ದಾರೆ ಏಳುಮಲೈ.
..........................
ಶಿವಮೊಗ್ಗ: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಏಳುಮಲೈ (ಕೇಬಲ್ ಬಾಬು) ಆಯ್ಕೆಯಾಗಿದ್ದಾರೆ.
ನಗರಪಾಲಿಕೆಯಲ್ಲಿ ಮೊದಲೆರಡು ಬಾರಿ ಮಹಿಳೆಯರಿಬ್ಬರು ಮೇಯರ್ ಹುದ್ದೆ ಅಲಂಕರಿಸಿದ್ದರೂ ನಿರೀಕ್ಷಿತ ಕೆಲಸ ಏನೂ ಆಗಿಲ್ಲ. ಅಧಿಕಾರಿಗಳೇ ದರ್ಬಾರು ನಡೆಸುತ್ತಿದ್ದಾರೆ ಎಂದು ಪಾಲಿಕೆ ಸದಸ್ಯರೇ ಸಭೆಯಲ್ಲಿ ಗುಡುಗುತ್ತಿದ್ದರು. ಮೂರನೆಯ ಅವಧಿಕಗೆ ಖಡಕ್ ಸದಸ್ಯ ಎಂದ ಹೆಸರಾದ ಎಸ್. ಕೆ. ಮರಿಯಪ್ಪ ಅವರೇ ಮೇಯರ್ ಆಗಿದ್ದರು. ಇವರ ಅವಧಿಯಲ್ಲಿ ಸಾಕಷ್ಟು ಕೆಲಸ ಆಗಿದೆ. ನೇರ, ನಿಷ್ಠುರರಾಗಿದ್ದರಿಂದ ಅವರು ಎಷ್ಟೋ ಬಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೂ ಇದೆ.
ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಪ್ರಪ್ರಥಮ ಬಾರಿಗೆ ಆಯ್ಕೆಯಾಗಿರುವ ಏಳುಮಲೈ ಮೇಯರ್ ಆಗಿದ್ದಾರೆ. ಇವರು ಮೃದು ಸ್ವಭಾವದವರಾದರೂ ಎಲ್ಲರೊಂದಿಗೆ ಸ್ನೇಹ, ವಿಶ್ವಾಸ ಬಯಸುವವರು. 27ನೆಯ ಮಿಳಘಟ್ಟ ವಾರ್ಡಿನಿಂದ ಗೆದ್ದಿರುವ ಇವರು, ಗುಡುಗುವ ಸ್ವಭಾವವನ್ನು ಮೈಗೂಡಿಸಿಕೊಳ್ಳಬೇಕಿದೆ. ಅನೇಕ ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರಬೇಕಿದೆ. ಜನಸಮಸ್ಯೆಗೆ ಸ್ಪಂದನೆ ಸಿಗುವಂತೆ ಮಾಡಬೇಕಿದೆ. ನಗರದಲ್ಲಿ ನಡೆಯುತ್ತಿರುವ ನೂರಾರು ಕೋಟಿ ರೂ. ಗಳ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿ ಹೊಂದಿರುವುದರ ಜೊತೆಗೆ ವಿಚಕ್ಷಣೆ ಮಾಡಬೇಕಿದೆ. ಇಂತಹ ಹತ್ತಾರು ಗುರುತರ ಸವಾಲು ಅವರ ಮುಂದಿದೆ.
ಸವಾಲುಗಳು:
ಪಾರ್ಕ್ ಬಡಾವಣೆಯಲ್ಲಿರುವ ಕನ್ಸರ್ವೆನಿಗಳನ್ನು ಅಭಿವೃದ್ಧಿಗೊಳಿಸಿ ಕಿರುಸಂತೆ ಮತ್ತು ಕಿರುಮಾರುಕಟ್ಟೆಗಳನ್ನು ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಭಾಗದಲ್ಲಿ ಮಾರುಕಟ್ಟೆಗಳು ಇಲ್ಲದಿರುವುದರಿಂದ ಮತ್ತು ಗಾಂಧಿ ಬಜಾರ್ ತರಕಾರಿ, ಹೂವು, ಹಣ್ಣು ಮಾರುಕಟ್ಟೆಯನ್ನೇ ಇಲ್ಲಿನವರು ಅವಲಂಬಿಸಬೇಕಾದ ಪರಿಸ್ಥಿತಿ ಇರುವುದರಿಂದ ಇದನ್ನು ತಪ್ಪಿಸಲು ಮತ್ತು ಅಲ್ಲಿನ ನಾಗರಿಕರಿಗೆ ಅನುಕೂಲ ಕಲ್ಪಿಸಲು ಈ ಮಹತ್ವದ ಯೋಜನೆ ತಯಾರಿಸಲಾಗಿದೆ. ಮತ್ತು ಕಿರು ಮಾರುಕಟ್ಟೆ ನಿರ್ಮಿಸುವುದರಿಂದ ಗಾಂಧಿ ಬಜಾರ್ ಮೇಲೆ ಈಗ ಬೀಳುತ್ತಿರುವ ಒತ್ತಡ ಕಡಿಮೆಯಾಗಲಿದೆ.
ವೃತ್ತಗಳ ಅಭಿವೃದ್ಧಿ:
ನಗರದ ಹಲವು ವೃತ್ತಗಳ ಅಭಿವೃದ್ದಿ ಯೋಜನೆಯನ್ನೂ ಸಹ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಮಹಾವೀರ ವೃತ್ತ, ಸರ್ಕ್ಯೂಟ್ ಹೌಸ್ ವೃತ್ತ, ಆಲ್ಕೊಳ ವೃತ್ತ, ಸಂದೇಶ್ ಮೋಟಾರ್ ಎದುರಿನ ವೃತ್ತ, ಶಾಂತಿನಗರ ವೃತ್ತ ಇವುಗಳಲ್ಲಿ ಮುಖ್ಯವಾದವು. ಈ ವೃತ್ತವನ್ನು ಇನ್ನಷ್ಟು ವಿಸ್ತರಿಸಲಾಗುವುದು. ವೃತ್ತ ಸುಂದರವಾಗಿರಿಸುವುದು, ಸಿಗ್ನಲ್ ದೀಪ ಅಳವಡಿಸುವುದು ಮುಂತಾದವು ಸೇರಿವೆ.
ಗಾರ್ಡನ್ ಏರಿಯಾದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಹೂವು-ಹಣ್ಣಿನ ಮಾರುಕಟ್ಟೆ ನಿರ್ಮಾಣ, ಕೆಎಸ್ಸಾರ್ಟಿಸಿ ಡಿಪೋ ಪಕ್ಕದಲ್ಲಿರುವ ಮೈದಾನವನ್ನು 1 ಕೋಟಿ ರೂ. ವೆಚ್ಚದಲ್ಲಿ ಎಕ್ಸಿಬಿಷನ್ ಗ್ರೌಂಡ್ ಆಗಿ ಪರಿವರ್ತಿಸುವುದು ಆಗಬೇಕಿದೆ.
ಇವೆಲ್ಲವುಗಳ ಜೊತೆಗೆ ಸಮರ್ಪಕ ಕುಡಿಯುವ ನೀರು, ಬೀದಿದೀಪಗಳ ವ್ಯವಸ್ಥೆ, ಉದ್ಯಾನವನಗಳನ್ನು ಮೇಲ್ದರ್ಜೆಗೇರಿಸುವುದು, ಪಾಲಿಕೆ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ, ಅನಧಿಕೃತ ಕಟ್ಟಡಗಳಿಂದಾಗುತ್ತಿರುವ ತೊಂದರೆ ತಪ್ಪಿಸುವುದು, ನಗರದಲ್ಲಿ ವ್ಯವಸ್ಥಿತ ಪಾರ್ಕಿಂಗ್ಗೆ ಅನುಕೂಲ ಕಲ್ಪಿಸುವುದು, ಕಡ್ಡಾಯವಾಗಿ ಮಳೆನೀರು ಸಂಗ್ರಹಣೆ, ಕಟ್ಟಡದ ತಳ ಅಂತಸ್ತಿನಲ್ಲಿ ಪಾರ್ಕಿಂಗ್ಗೆ ಸ್ಥಳಾವಕಾಶ ಕಲ್ಪಿಸುವುದು, ಒತ್ತುವರಿಯಾದ ಪಾಲಿಕೆಯ ಜಾಗವನ್ನು ವಾಪಸ್ ಪಡೆಯುವುದು, ಪಾಲಿಕೆ ನಿರ್ಮಿಸಿದ ಕಟ್ಟಡಗಳನ್ನು ಬಾಡಿಗೆಗೆ ನೀಡುವುದು, ಪಾಲಿಕೆಯ ಕಟ್ಟಡದಲ್ಲಿದ್ದೂ ಬಾಡಿಗೆ ನೀಡದೆ ಟೋಪಿ ಹಾಕುತ್ತಿರುವ ಬಾಡಿಗೆದಾರರನ್ನು ತೆರವುಗೊಳಿಸುವುದು, ಕಂದಾಯ ಸಂಗ್ರಹದಲ್ಲಿ ಬಿಗಿ ನಿಲುವು ತಾಳುವುದು ಮೊದಲಾದ ಮಹತ್ವದ ಕೆಲಸ ಆಗಬೇಕಿದೆ. ಜೊತೆಗೆ ಜಡ್ಡುಗಟ್ಟಿರುವ ಪಾಲಿಕೆ ಆಡಳಿತವನ್ನು ಚುರುಕುಗೊಳಿಸಬೇಕಾದ ಮಹತ್ತರ ಸವಾಲಿದೆ.
...................................................

No comments:
Post a Comment