ಕೆಐಡಿಬಿಗೆ ಬೇಡವಾಗಿದೆ ಅದರ ಕೂಸು
ಅವ್ಯವಸ್ಥೆಯ ಆಗರವಾಗಿದೆ ಆಟೋ ಕಾಂಪ್ಲೆಕ್ಸ್ ಆವರಣ
ಶಿವಮೊಗ್ಗ : ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ... ಹಂದಿಗಳ ಹಾವಳಿ... ಯಾವುದೇ ರಸ್ತೆಗೆ ಕಾಲಿಟ್ಟರೂ ಮೈ, ಕೈಗೆ ಮೆತ್ತಿಕೊಳ್ಳುವ ಧೂಳು... ಚರಂಡಿ, ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳು... ರಸ್ತೆಯ ಫುಟ್ಪಾತ್ ಅತಿಕ್ರಮಿಸಿ ನಿಂತಿರುವ ಹಳೇಯ ವಾಹನಗಳು...!’
ಇದು ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಕೆಐಡಿಬಿ ಸಂಸ್ಥೆಗೆ ಸೇರಿದ ಕೈಗಾರಿಕಾ ವಸಾಹತು (ಆಟೋ ಕಾಂಪ್ಲೆಕ್ಸ್) ಆವರಣದಲ್ಲಿ ಕಂಡುಬರುವ ಅವ್ಯವಸ್ಥೆಯ ಪ್ರಮುಖ ಅಂಶಗಳು.
ಅಸಮರ್ಪಕ ನಿರ್ವಹಣೆ, ಮೇಲ್ವಿಚಾರಣೆಯ ಕೊರತೆ, ಯರ್ರಾಬಿರ್ರಿಯಾಗಿ ನಡೆಯುತ್ತಿರುವ ಒತ್ತುವರಿಯಿಂದ ಇಡೀ ಆಟೋ ಕಾಂಪ್ಲೆಕ್ಸ್ ಪ್ರದೇಶ ಕಿಷ್ಕ್ಕಿಂಧೆಯಂತಾಗಿದೆ. ಗಲೀಜಿನ ತಾಣವಾಗಿ ಪರಿವರ್ತಿತವಾಗಿದ್ದು, ನಾಗರಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಲ್ಲಿ ಹೇಳುವವರು, ಕೇಳುವವರ್ಯಾರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿನದಿಂದ ದಿನಕ್ಕೆ ಕೈಗಾರಿಕಾ ಪ್ರದೇಶದ ಸ್ಥಿತಿ ಮತ್ತಷ್ಟು ಅಧೋಗತಿಗಿಳಿಯುತ್ತಿದೆ. ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡು ಇಲ್ಲಿರುವ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಿದೆ.
ನಗರದ ಹೃದಯ ಭಾಗದಲ್ಲಿರುವ ಆಟೋ ಕಾಂಪ್ಲೆಕ್ಸ್ ಆವರಣದಲ್ಲಿ ಮಾತ್ರ ಸ್ವಚ್ಛತಾ ಅಭಿಯಾನ ನಡೆಯುತ್ತಿಲ್ಲ. ಅಭಿಯಾನಕ್ಕೂ ಈ ಪ್ರದೇಶಕ್ಕೂ ಸಂಬಂಧವೇ ಇಲ್ಲವೇನೋ ಎಂಬ ಸ್ಥಿತಿ ಆ ಪ್ರದೇಶಕ್ಕೆ ಕಾಲಿಟ್ಟರೆ ಭಾಸವಾಗುತ್ತದೆ. ಎಲ್ಲೆಂದರಲ್ಲಿ ಘನತ್ಯಾಜ್ಯದ ರಾಶಿ ಕಂಡುಬರುತ್ತದೆ. ಹಂದಿಗಳ ಹಾವಳಿಯಂತೂ ವಿಪರೀತ ಮಟ್ಟಕ್ಕೆ ತಲುಪಿದೆ. ರಾಜಕಾಲುವೆ, ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿಕೊಂಡಿದ್ದು ದುರ್ನಾತ ಬೀರುತ್ತಿವೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಶುರುವಾಗುತ್ತದೆ. ಮತ್ತೊಂದೆಡೆ ಸಂಕೀರ್ಣದ ಯಾವುದೇ ರಸ್ತೆಗೆ ಕಾಲಿಟ್ಟರೂ ಧೂಳು ಮೈ, ಕೈಗೆ ಮೆತ್ತಿಕೊಳ್ಳುತ್ತದೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಕೆಲವು ಅಂಗಡಿಗಳ ಮಾಲಕರು ಚರಂಡಿ, ರಾಜಕಾಲುವೆ, ಪುಟ್ಪಾತ್ ಒತ್ತುವರಿ ಮಾಡಿ ಕಟ್ಟಡ ಕಟ್ಟಿದ್ದಾರೆ. ಮತ್ತೆ ಕೆಲವರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಮಳೆಗಾಲದ ವೇಳೆ ಮಳೆಯ ನೀರು ಸರಾಗವಾಗಿ ಹರಿಯದೆ ಅಂಗಡಿಗಳಿಗೆ ನುಗ್ಗುತ್ತಿದೆ ಎಂಬ ಆರೋಪ ಇದೆ. ಇನ್ನೊಂದೆಡೆ, ಕೆಲವು ಅಂಗಡಿಗಳ ಮಾಲೀಕರು ರಿಪೇರಿಗೆ ಆಗಮಿಸುವ ಹಳೇಯ ವಾಹನಗಳು, ಮತ್ತಿತರ ಕಬ್ಬಿಣದ ವಸ್ತುಗಳನ್ನು ಪುಟ್ಪಾತ್ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ದಾಸ್ತಾನು ಮಾಡುತ್ತಿದ್ದಾರೆ. ಇದರಿಂದ ಜನ - ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಕೆಲ ಅಂಗಡಿ ಮಾಲೀಕರು ಜಗಳಕ್ಕಿಳಿಯುತ್ತಾರೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಸದ್ಯ ಈ ಜಾಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಶದಲ್ಲಿದೆ. ಇದರ ಕಚೇರಿ ಇರುವುದು ದಾವಣಗೆರೆಯಲ್ಲಿ. ಆದ್ದರಿಂದ ಅಧಿಕಾರಿಗಳು ಇಲ್ಲಿಗೆ ಬರುವುದೇ ತೀರಾವಿರಳ. ಬಂದರೂ ಸಮಸ್ಯೆ ಆಲಿಸಿ ಹೋಗಿದ್ದಾರೆಯೇ ವಿನಾ ಪರಿಹಾರದತ್ತ ತಲೆಕೆಡಿಸಿಕೊಂಡಿಲ್ಲ. ಉಳಿದ ಸಂಸ್ಥೆಗಳಾರೂ ಅಭಿವೃದ್ಧಿಗೆ ಬರುವಂತಿಲ್ಲದ ಕಾರಣ ಇಲ್ಲಿನ ಪ್ರಗತಿ ಬಗ್ಗೆ ಚಿಂತಿಸುತ್ತಿಲ್ಲ. ಯಾರಿಗೂ ಬೇಡವಾದ ಸ್ಥಳವಾಗಿದೆ.
ಕೆಐಡಿಬಿಯವರು ಮನಸ್ಸು ಮಾಡಿದ್ದರೆ ಎಷ್ಟೋ ಉತ್ತಮವಾಗಿ ಬೆಳೆಸಬಹುದಿತ್ತು. ಈಗ ಮೂಲಸೌಕರ್ಯವೂ ಇಲ್ಲ. ಇಲ್ಲಿ ಗ್ಯಾರೇಜು, ಅಂಗಡಿ ಮಾಡಿಕೊಂಡವರು ಪರದಾಡುವಂತಾಗಿದೆ. ಸ್ಥಳೀಯ ಅಂಗಡಿ, ವರ್ಕ್ಶಾಪ್ ಸಂಘಟನೆಯವರು ಹಲವು ಬಾರಿ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದ್ದಾರೆ. ಕೆಲವು ಸಲ ಕೆಐಡಿಬಿ ದಾವಣಗೆರೆ ಕಚೇರಿಗೂ ಹೋಗಿ ಗಮನ ಸೆಳೆದಿದ್ದಾರೆ. ಆದರೆ ಅಧಿಕಾರಿಗಳು ಇಲ್ಲಿಗೆ ಬಂದು ಸಮಸ್ಯೆ ಅರಿಯುವ ಕೆಲಸವನ್ನೇ ಮಾಡುತ್ತಿಲ್ಲ.
ಮಾಲಿನ್ಯ ಕಚೇರಿ ಸುತ್ತಮುತ್ತಲೇ ಪರಿಸರ ಮಾಲಿನ್ಯ.:
ಆಟೋ ಕಾಂಪ್ಲೆಕ್ಸ್ ಪ್ರದೇಶದಲ್ಲಿಯೇ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಿದೆ. ಆದರೆ ಕಚೇರಿ ಸುತ್ತಮುತ್ತಲೇ ಭಾರೀ ದೊಡ್ಡ ಪ್ರಮಾಣದಲ್ಲಿ ವಾಯು, ಭೂ ಮಾಲಿನ್ಯ ವಾಗುತ್ತಿದೆ. ಅಸ್ವಚ್ಚತೆ ಆವರಿಸಿದೆ. ಪರಿಸರ ಹಾಗೂ ಜನಸಾಮಾನ್ಯರ ಮೇಲೆ ಮಾರಣಾಂತಿಕ ಪರಿಣಾಮ ಬೀರುತ್ತಿದೆ. ಆದರೆ ಇಲ್ಲಿಯವರೆಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಿಸಿದವರಿಗೆ ನೋಟೀಸ್ ನೀಡಿ ಎಚ್ಚರಿಸುವ ಕೆಲಸ ಮಾಡಿಲ್ಲ.
ಪಾಲಿಕೆಗೆ ಹಸ್ತಾಂತರವಾಗಿಲ್ಲ
ಸಾಗರ ರಸ್ತೆಯಲ್ಲಿರುವ ಕೈಗಾರಿಕಾ ವಸಾಹತು ಸ್ಥಾಪನೆಯಾಗಿ ಹಲವು ವರ್ಷಗಳೇ ಕಳೆದಿವೆ. ಪ್ರಸ್ತುತ ನೂರಾರು ಶಾಪ್ಗಳಿವೆ. ಪ್ರತಿನಿತ್ಯ ಸಾವಿರಾರು ಜನರು ಇಲ್ಲಿಗೆ ಬಂದು ಹೋಗುತ್ತಾರೆ. ನಗರದ ಹೃದಯಭಾಗವಾಗಿ ಪರಿವರ್ತಿತವಾಗಿದೆ. ಆದರೆ ಇಲ್ಲಿಯವರೆಗೂ ಈ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿಲ್ಲ. ಈ ಪ್ರದೇಶದಲ್ಲಿ ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲಿಯವರೆಗೂ ಕಲ್ಪಿಸಿಲ್ಲ. ತತಕ್ಷಣವೇ ಈ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ.
- ಆಟೊ ಕಾಂಪ್ಲೆಕ್ಸ್ ಅಂಗಡಿ, ವರ್ಕ್ಶಾಪ್ ಮಾಲಕರು
---------------------------------------

No comments:
Post a Comment