ಪರೀಕ್ಷೆಯನ್ನು ಪ್ರೀತಿಸಿ, ಧೈರ್ಯದಿಂದ ಎದುರಿಸಿ
ಮಾಚ್ 9ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗುತ್ತಿದೆ. ಇದಾದ ಬಳಿಕ ಎಸ್ಸೆಸೆಲ್ಸಿಯವರ ಸರತಿ. ಇದರೊಟ್ಟಿಗೆ ಹೈಸ್ಕೂಲು, ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಎಂಬ ಭೂತವನ್ನು ಓಡಿಸುವ ಬಗೆ, ಅದರ ಭಯವನ್ನು ದೂರೀಕರಿಸುವ ಬಗ್ಗೆ ಕೆಲವು ಟಿಪ್ಸ್ಸ್ಗಳನ್ನು ನೀಡಲಾಗಿದೆ. ಇವುಗಳನ್ನು ಅಳವಡಿಸಿಕೊಂಡು ಉತ್ತಮ ಮನಃಸ್ಥಿತಿಯೊಂದಿಗೆ ಪರೀಕ್ಷೆಯನ್ನು ನಿಶ್ಚಿಂತೆಯಿಂದ ಎದುರಿಸಿ, ಯಶಸ್ವಿಯಾಗಿ. ಅಳುಕು, ಆತಂಕ ಬಿಡಿ, ಉತ್ತಮ ಫಲಿತಾಂಶ ಖಂಡಿತ ಪಡೆಯುವಿರಿ.
ನೆನಪಿಡಬೇಕಾದ ಸಂಗತಿಗಳು
* ವಿದ್ಯಾರ್ಥಿಗಳು ನಿದ್ದೆಗೆಟ್ಟು ಓದಬಾರದು
* ದೈನಂದಿನ ಓದನ್ನೇ ಮುಂದುವರೆಸಬೇಕು
* ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು
* ಓದುವ ಹಂತದಲ್ಲಿ ಏಕಾಗ್ರತೆ, ಏಕನಿಷ್ಠೆ ಹೊಂದಿರಬೇಕು
* ಪಠ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಮಿತ್ರರ ಜೊತೆ ಚರ್ಚಿಸಬೇಕು
* ತಯಾರಿಸಿದ ನೋಟ್ಸ್ನ್ನು ಹಲವಾರು ಬಾರಿ ಓದಿ ಸ್ವತಃ ಬರೆದು ಅಭ್ಯಾಸ ಮಾಡಬೇಕು.
* ಟಿವಿ, ಮೊಬೈಲ್, ಇಂಟರ್ನೆಟ್ ಮೊದಲಾದವುಗಳಿಂದ ಆದಷ್ಟು ದೂರವಿರುವುದು ಲೇಸು.
* ಅವು ಮನಸ್ಸನ್ನು ಕಲಕುವ ಕೆಲಸವನ್ನು ಮಾಡದಂತೆ ಪಾಲಕರು ಎಚ್ಚರವಹಿಸಬೇಕು.
* ಮಕ್ಕಳೊಂದಿಗೆ ಪಾಲಕರು ಮನೆಯಲ್ಲಿ ಆತ್ಮೀಯರಾಗಿರಬೇಕು. ಈ ಮೂಲಕ ಮಗುವಿನ ಮನಸ್ಸು ಹೇಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.
* ಪರೀಕ್ಷಾ ಕೇಂದ್ರಕ್ಕೆ ಹೊರಡುವಾಗ ಸಮಯಪ್ರಜ್ಞೆ ಇರಲಿ. ಆತುರದಲ್ಲಿ ಹೋಗಿ ಗಡಿಬಿಡಿ, ಗೊಂದಲ ಸೃಷ್ಟಿಸಿಕೊಳ್ಳಬಾರದು.
ಯಶಸ್ಸು ಗಳಿಸಲು ಯಾವುದೇ ಸಂಕ್ಷಿಪ್ತ ಮಾರ್ಗವಿಲ್ಲ. ಪೂರ್ವತಯಾರಿ, ಕಠಿಣ ಶ್ರಮ ಮತ್ತು ವೈಫಲ್ಯತೆಯಿಂದ ಕಲಿತ ಪಾಠದ ಮೂಲಕ ಯಶಸ್ಸನ್ನು ಸಂಪಾದಿಸಬಹುದು. ನಾವು ಏನನ್ನು ಮಾಡುತ್ತೇವೆಯೋ ಅದರಲ್ಲಿ ಪ್ರೀತಿ, ವಿಶ್ವಾಸ ಮತ್ತು ಅಚಲ ನಂಬಿಕೆ ಇರಬೇಕು. ಆಗ ತನ್ನಿಂತಾನೇ ಯಶಸ್ಸು ಬರುತ್ತ್ತದೆ ಎಂದು ಆಂಗ್ಲ ಚಿಂತಕನೊಬ್ಬ ಹೇಳಿದ್ದಾನೆ.
ಮಾರ್ಚ್ ತಿಂಗಳು ಬಂತು ಎಂದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕಾಲ ಆರಂಭವಾಗುತ್ತದೆ. ಮಕ್ಕಳು ಹೇಗೆ ಓದುತ್ತಾರೋ, ಪರೀಕ್ಷೆಯನ್ನು ಎದುರಿಸುತ್ತಾರೋ ಎಂಬ ಆತಂಕ ಒಂದೆಡೆ ಪಾಲಕರದ್ದಾದರೆ, ಇನ್ನೊಂದೆಡೆ ಪರೀಕ್ಷೆಯನ್ನು ಹೇಗೆ ಎದುರಿಸಲಿ ಎಂಬ ದುಗುಡ ಮಕ್ಕಳಲ್ಲಿರುತ್ತದೆ. ಒಟ್ಟಿನಲ್ಲಿ ಇಬ್ಬರನ್ನೂ ಒತ್ತಡಕ್ಕೆ ಸಿಲುಕಿಸುವ ಸಮಯ ಎನ್ನಬಹುದು.
ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿದೆ. ಮಕ್ಕಳು ಉತ್ತಮ ಅಂಕ ಪಡೆಯಬೇಕು, ಉನ್ನತ ಸ್ಥಾನದಲ್ಲಿ ತೇರ್ಗಡೆಯಾಗಬೇಕೆಂಬ ಪಾಲಕರ ಆಶಯ ಸಹಜ. ಆದರೆ ಅದು ಅವರಿಗೆ ಶಿಕ್ಷೆಯಾಗಿ ಪರಿಣಮಿಸಬಾರದು. ಇಂದು ಎಲ್ಲೆಡೆ ನಡೆಯುತ್ತಿರುವುದು ಅಂಕಗಳಿಕೆಯ ಓಟ. ಇದರಲ್ಲಿ ಮೊದಲ ಸ್ಥಾನವನ್ನು ತಮ್ಮ ಮಕ್ಕಳು ಪಡೆಯಲಿ ಎಂಬ ಪಾಲಕರ ತುಡಿತವನ್ನು ಮಕ್ಕಳು ಸರಿಯಾಗಿ ಅರ್ಥೈಸಿಕೊಂಡರೆ ಒಳ್ಳೆಯದು. ಇಲ್ಲವಾದಲಿ ್ಲ ಅದೇ ಅವರಿಗೆ ಶಿಕ್ಷೆಯಾಗಿ, ಮುಂದಿನ ಅವರ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು..
ಅಂಕಗಳ ಲೋಕದಲ್ಲಿ ಮುಳುಗುವ ಪಾಲಕರು ಜೀವನಪಥವನ್ನು ಬದಲಿಸಬಾರದು. ಜೊತೆಗೆ ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಹೋಲಿಕೆ ಮಾಡಿ ಹಿಯಾಳಿಸುವುದು, ನಿಂದಿಸುವುದನ್ನು, ಬಯ್ಯುವುದನ್ನು ಪಾಲಕರು ಈ ಸಂದರ್ಭದಲ್ಲಿ ಮಾಡಬಾರದು. ಮಕ್ಕಳು ಪರೀಕ್ಷೆಯನ್ನು ಪ್ರೀತಿಸುವಂತೆ ಮಾಡಬೇಕೇ ವಿನಾ ಪರೀಕ್ಷೆ ಎಂದರೆ ಮನಸ್ಸು ಭಯದಿಂದಾವೃತವಾಗುವ ಅಥವಾ ಕಲಿತಿದ್ದೆಲ್ಲ ಬ್ಲಾಕ್ ಆಗುವ ಸನ್ನಿವೇಶವನ್ನು ಪಾಲಕರು ತಂದೊಡ್ಡಬಾರದು.
ಪರೀಕ್ಷೆ ಜೀವನದ ಒಂದು ಭಾಗ. ಕಲಿಕೆಯ ಹಂತದಲ್ಲಿ ಎದುರಾಗುವ ಒಂದು ಮಹತ್ವದ ಘಟನೆಯೇ ವಿನಾ ಅದೇ ಜೀವನವಲ್ಲ. ಶಾಲಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರು ಅಥವಾ ಫೇಲಾದವರು ಜೀವನದಲ್ಲಿ ಮಹಾನ್ ಸಾಧನೆ ಮಾಡಿದ ಸಾಕಷ್ಟು ಉದಾಹರಣೆ ನಮ್ಮ ಮುಂದಿರುವಾಗ ಪಾಲಕರು ಪರೀಕ್ಷೆಯೇ ಕಲಿಕೆಯ ಅಂತಿಮ ಎಂದು ಯಾವತ್ತೂ ಭಾವಿಸಬಾರದು. ಪರೀಕ್ಷೆಯ ಭಯ ಹೋಗಲಾಡಿಸಿ, ಒತ್ತಡ ಹೇರದೆ, ಧೈರ್ಯ ಮತ್ತು ವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು. ನಾವು ಸಹನೆಯಿಂದ ಅವರನ್ನು ಪ್ರೋತ್ಸಾಹಿಸಬೇಕೇ ವಿನಾ ಅವರ ಮನಸ್ಸನ್ನು ಅನವಶ್ಯಕವಾಗಿ ಕಲಕಬಾರದು. ಅರಳುವ ಮೊಗ್ಗನ್ನು ಒತ್ತಡದಿಂದ ಹೂವನ್ನಾಗಿ ಮಾಡಬಾರದು. ಅದು ತಾನೇ ತಾನಾಗಿ ಅರಳಿದರೆ ಮಾತ್ರ ಚೆಂದ.
ಜೀರ್ಣವಾಗದ ಆಹಾರ ಹೇಗೆ ದೇಹದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವುದಿಲ್ಲವೋ, ಹಾಗೆಯೇ ಅರ್ಥವಾಗದೆ ಕಲಿತ ವಿದ್ಯೆಯು ಬುದ್ಧಿಶಕ್ತಿಯನ್ನು, ಚಿಂತನೆಯನ್ನು ಹೆಚ್ಚಿಸುವುದಿಲ್ಲ. ಆತ್ಮವಿಶ್ವಾಸ ಬೆಳೆಸುವುದಿಲ್ಲ. ಆದ್ದರಿಂದ ಮೊದಲು ಓದಿ, ಅರ್ಥಮಾಡಿಕೊಂಡು ಅಭ್ಯಾಸ ಮಾಡಿದರೆ ಮಾತ್ರ ನೆನಪಿನಂಗಳದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಓದು, ಕಲಿಕೆ-ಏಕಾಗ್ರತೆ, ಚಿಂತನೆ ಹಾಗೂ ಮನನ-ನಂತರ ನಿರಂತರ ಅಭ್ಯಾಸ ಇವು ಪರಿಪಕ್ವತೆಗೆ ಪೂರಕವಾಗಿರುತ್ತವೆ.
ಇದು ಸ್ಪರ್ಧೆಯ ಯುಗ, ಎಲ್ಲಿ ನೋಡಿದರೂ ಸ್ಪರ್ಧಾತ್ಮಕ ಜೀವನ. ಈ ಸ್ಪರ್ಧೆಯಲ್ಲಿ ಜಯಗಳಿಸಬೇಕಾದರೆ ಪ್ರಯತ್ನ ಅತೀ ಅವಶ್ಯ, ತಮ್ಮ ಜೀವನದ ಪ್ರತಿ ಕ್ಷಣವನ್ನು ಉಪಯೋಗಿಸಿಕೊಳ್ಳಬೇಕು. ಮುತ್ತಿಗಿಂತ ಹೊತ್ತು ಉತ್ತಮ, ಈ ನಾಣ್ಣುಡಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಅರ್ಥಮಾಡಿಕೊಂಡು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಮೂಲಕ ಉತ್ತಮ ಅಂಕಗಳನ್ನು ಗಳಿಸಲು ನಿರಂತರವಾಗಿ ಪ್ರೇರೇಪಿಸುತ್ತಾ, ಪ್ರೋತ್ಸಾಹಿಸಿ ಸಹಕರಿಸಬೇಕು. ಆತ್ಮವಿಶ್ವಾಸದಿಂದ ಇಂದಿನ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವಂತಾಗಬೇಕು.
ಪರೀಕ್ಷೆಯನ್ನು ಉತ್ತಮ ತಯಾರಿ ಮತ್ತು ಧೈರ್ಯದಿಂದ ಎದುರಿಸುತ್ತೇನೆಂಬ ಮನೋಭಾವವನ್ನು ಮೊದಲು ಬೆಳೆಸಿಕೊಳ್ಳಬೇಕು. ಇದರಿಂದ ಅವರಲ್ಲಿ ಗಟ್ಟಿತನ ಬರುತ್ತದೆ. ಪಾಲಕರೂ ಸಹ ಪರೀಕ್ಷೆ ಎಂಬ ಏಕೈಕ ಕಾರಣಕ್ಕೆ ಮಕ್ಕಳನ್ನು ಎಲ್ಲದರಿಂದಲೂ ನಿರ್ಬಂಧಿಸುವ ವಾತಾವರಣವನ್ನು ಸೃಷ್ಟಿಸಬಾರದು. ಪ್ರತಿ ವಿಷಯದಲ್ಲಿ ಕಟ್ಟಳೆ ಹೇರುವುದನ್ನು, ಇಂತಿಷ್ಟೇ ಹೊತ್ತು ಓದು ಎಂಬ ನಿಯಮವನ್ನು ಹಾಕಬಾರದು. ಹೆಚ್ಚಿನ ವೇಳೆ ಓದಲು ಹುರಿದುಂಬಿಸಬೇಕು, ಒಂದಷ್ಟು ಹೊತ್ತು ಮನಸ್ಸು ಪ್ರಫುಲ್ಲ್ತವಾಗಲು ಆಡಲು ಬಿಡಬೇಕು. ಇದರಿಂದ ಮನಸ್ಸು ಸಮತೋಲಿತವಾಗುತ್ತದೆ.
ವಿದ್ಯಾರ್ಥಿಗಳೇ, ಪರೀಕ್ಷೆ ಎಂಬ ಭೂತವನ್ನು ಮನಸ್ಸಿನಿಂದ ಕಿತ್ತೊಗೆಯಿರಿ. ಹೆದರಿಕೆ, ಗಾಬರಿ, ಆತಂಕ, ದುಗುಡ ಎಲ್ಲವನ್ನೂ ಬಿಡಿ, ನಿಶ್ಚಿಂತೆಯಿಂದ ಪರೀಕ್ಷೆ ಬರೆಯಿರಿ. ಪರೀಕ್ಷೆ ಮುಗಿದೊಡನೆ ಎಲ್ಲರೊಡನೆ ಮನಬಿಚ್ಚಿ ಮಾತನಾಡಿ. ಮನೆಯಲ್ಲೂ ಪರೀಕ್ಷೆ ಎಂಬ ಕಾರಣಕ್ಕೆ ಏಕಾಂಗಿಯಾಗಬೇಡಿ. ಪಾಲಕರ ಜೊತೆ ಆತ್ಮೀಯವಾಗಿರಿ.
................................

No comments:
Post a Comment