ಇಂತಹ ಡಿಸಿ ಎಲ್ಲ ಜಿಲ್ಲೆಗೂ ಬೇಕು
ಜಿಲ್ಲಾಧಿಕಾರಿ ಡಾ. ಲೋಕೇಶ್ ಸಮಯ ವ್ಯರ್ಥ ಮಾಡದ ಅಧಿಕಾರಿ. ಕೆಲವೊಮ್ಮೆ ರಜೆ ದಿನಗಳಂದು ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಎಲ್ಲಿಯೇ ಸಮಸ್ಯೆ ಕಂಡುಬರಲಿ, ಅಲ್ಲಿಗೆ ತತಕ್ಷಣವೇ ದೌಡಾಯಿಸುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಓಡಾಡುತ್ತಾರೆ. ಪತ್ರಿಕೆಗಳಲ್ಲಿ ಬರುವ ದೂರು-ದುಮ್ಮಾನಗಳನ್ನು ಓದಿ, ಸಾಧ್ಯವಾದರೆ ತಾವೇ ಆ ಸ್ಥಳಕ್ಕೆ ತೆರಳುತ್ತಾರೆ. ನಾಗರಿಕರು ನೀಡುವ ದೂರಿನನ್ವಯ ಗ್ರಾಮ ಸಂದರ್ಶಿಸಿ ಸಮಸ್ಯೆ ಪರಿಹರಿಸುತ್ತಿದ್ದಾರೆ. ಇತ್ತೀಚೆಗೆ ನವುಲೆ ಕೆರೆಯಲ್ಲಿ ರಸ್ತೆ ಮಾಡುತ್ತಿರುವ ಬಗ್ಗೆ ಎದ್ದ ವಿವಾದವನ್ನೂ ಬಹು ಜಾಣ್ಮೆಯಿಂದ ಬಗೆಹರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಐಎಎಸ್ ಅಧಿಕಾರಿ ಜಿಲ್ಲೆಗೆ ಬಂದಿರಲಿಲ್ಲ. ಕಚೇರಿ, ಮನೆ, ಮೀಟಿಂಗ್, ಭಾಷಣ ಬಿಗಿಯುವುದಕ್ಕೇ ಹಿಂದಿನ ಕೆಲವು ಜಿಲ್ಲಾಧಿಕಾರಿಗಳು ಮೀಸಲಾದಂತಿದ್ದರು. ಆದರೆ ಲೋಕೇಶ್ ಇವೆಲ್ಲವುಗಳನ್ನು ಎಷ್ಟು ಬೇಕೋ ಅಷ್ಟಕ್ಕೇ ಸೀಮಿತಗೊಳಿಸಿದ್ದಾರೆ. ಇವರು ತಮ್ಮ ಮೊಟ್ಟಮೊದಲ ಮೀಟ್ ದಿ ಪ್ರೆಸ್ನಲ್ಲಿ ಕೆರೆ ಒತ್ತುವರಿ ತೆರವು ಮತ್ತು ಗ್ರಾಮೀಣ ಜನರ ಸಮಸ್ಯೆ ಬಗೆಹರಿಸಲು ಅಲ್ಲಿಗೇ ತೆರಳುವ ಬಗ್ಗೆ ಹೇಳಿದ್ದರು. ಅದನ್ನು ಚಾಚೂತಪ್ಪದೆ ನಡೆಸಿಕೊಂಡು ಬಂದಿದ್ದಾರೆ.
* ದತ್ತಾತೇಯ ಹೆಗಡೆ
ಶಿವಮೊಗ್ಗ, ಮಾ. 20: ಜಿಲ್ಲಾ ಆಡಳಿತದ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿರುವ ಜಿಲ್ಲಾಧಿಕಾರಿ ಕಚೇರಿಯು, ಇತ್ತೀಚಿನ ವರ್ಷಗಳಲ್ಲಿ ನಿಸ್ತೇಜವಾಗಿದ್ದ ಅನುಭವ ನಾಗರಿಕರಲ್ಲಿತ್ತು. ಯಾವುದೇ ಕೆಲಸ ಕಾರ್ಯಗಳಿಗೂ ವೇಗವೇ ಸಿಗದಂತಹ ಸ್ಥಿತಿಯಿತ್ತು. ಕಡತಗಳ ವಿಲೇವಾರಿ ಹಳ್ಳ ಹಿಡಿದಿತ್ತು. ಕೆಲವು ಅಧಿಕಾರಿ, ನೌಕರರು ತಮ್ಮ ಕೆಲಸವೇನೆನ್ನುವುದನ್ನೇ ಮರೆತಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ’ಪ್ರಭಾವಿ ರಾಜಕಾರಣಿ’ಗಳ ಬೆಂಬಲದೊಂದಿಗೆ ತಾಲೂಕು ಆಡಳಿತ ಹಾಗೂ ಇಲಾಖೆಯ ಕೆಲವು ಅಧಿಕಾರಿಗಳು ದರ್ಬಾರು ನಡೆಸಲಾರಂಭಿಸಿದ್ದವು. ಸರ್ಕಾರಿ ಕಚೇರಿಗಳಲ್ಲಂತೂ ’ಹಣ’, ’ಪ್ರಭಾವ’ ವಿಲ್ಲದೆ ಯಾವುದೇ ಕೆಲಸವಾಗುವುದಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿತ್ತು. ಇದರಿಂದ ನಾಗರಿಕರು ಜಿಲ್ಲಾಡಳಿತ ಹಾಗೂ ಅಧಿಕಾರಿಶಾಹಿ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದಿದ್ದರು. ವಿಶೇಷವಾಗಿ ಗ್ರಾಮೀಣ ಭಾಗದ ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವ ಲಕ್ಷಣವೇ ಇಲ್ಲವಾಗಿತ್ತು.
ಇವರು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ, ಆಡಳಿತ ವ್ಯವಸ್ಥೆ ದಿಢೀರ್ ಆಗಿ ಚುರುಕುಗೊಂಡಿದೆ. ಕೆಲವು ಅಧಿಕಾರಿ, ಸಿಬ್ಬಂದಿಗಳು ಮೈಚಳಿ ಬಿಟ್ಟವರ ರೀತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾರೆ. ಅಂಕೆಗೆ ಸಿಗದೆ ವರ್ತಿಸುತ್ತಿದ್ದ ಕೆಲವು ತಾಲೂಕು ಆಡಳಿತಗಳೂ ಸಹ ಸರಿದಾರಿಗೆ ಬರಲಾರಂಭಿಸಿವೆ. ಜಾತಿ ವ್ಯವಸ್ಥೆಯ ಮೇಲೆ ತಳವೂರಿರುವ ಕೆಲವು ಅಧಿಕಾರಿಗಳ ಮೆರೆದಾಟ ಮೇರೆ ಮೀರಿತ್ತು.
್ಲ ಡಾ. ಲೋಕೇಶ್ ನೇರ, ನಿರ್ಭಿಡೆಯ ವ್ಯಕ್ತಿತ್ವದವರು. ಕೆಲಸವಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿಬಿಡುತ್ತಾರೆ. ದಕ್ಷ, ಪ್ರಾಮಾಣಿಕ ಕಾರ್ಯನಿರ್ವಹಣೆಯ ಮೂಲಕ ಜನರ ವಿಶ್ವಾಸಗಳಿಸಿದ್ದಾರೆ. ಓರ್ವ ಡಿ.ಸಿ. ಮನಸ್ಸು ಮಾಡಿದರೆ ಒಂದು ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವುದನ್ನು ಲೋಕೇಶ್ ಜಿಲ್ಲೆಗೆ ಆಗಮಿಸಿದ ಕೆಲವೇ ತಿಂಗಳಲ್ಲಿ ಮಾಡಿ ತೋರಿಸಿದ್ದಾರೆ. ಇತರರಿಗೆ ಮಾದರಿಯಾಗಿ ನಿಂತುಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಡಿಸಿ ಕಚೇರಿ ಬಗ್ಗೆ ವಿಶ್ವಾಸ ಮೂಡುವಂತೆ ಮಾಡಿದ್ದಾರೆ.
ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರದ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆ, ಗ್ರಾಪಂ ಕಚೇರಿಗೆ ದಿಢೀರ್ ಭೇಟಿಯಿತ್ತು ಪರಿಶೀಲಿಸುವ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಡಿಸಿ ನಿರಂತರವಾಗಿ ಮಾಡುತ್ತಿದ್ದಾರೆ. ದಿಢೀರ್ ಭೇಟಿಯ ವೇಳೆ ಹಲವು ಲೋಪಗಳನ್ನು ಪತ್ತೆ ಹಚ್ಚಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕರ್ತವ್ಯ ಲೋಪ ಎಸಗುವವರನ್ನು ಸಸ್ಪೆಂಡ್ಗೊಳಿಸುವ, ನೋಟೀಸ್ ಜಾರಿಗೊಳಿಸುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸುತ್ತಿದ್ದಾರೆ.
ಇದು ನೌಕರರ ವಲಯದಲ್ಲಿ ಸಂಚಲನ ಮೂಡಿಸಿದೆ. ಡಿ.ಸಿ.ಯವರು ಯಾವಾಗ ಭೇಟಿ ನೀಡುತ್ತಾರೋ ಎಂಬ ಭಯದಿಂದ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕಚೇರಿ ಒಳ, ಹೊರಗಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಿಡಿದು ಕಡತಗಳ ವಿಲೇವಾರಿಯವರೆಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಡಿ.ಸಿ.ಯವರು ನಡೆಸುವ ಪ್ರತಿಯೊಂದು ಸಭೆಗೂ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಹಾಜರಾಗುತ್ತಿದ್ದಾರೆ.
ಡಾ. ಎಂ. ಲೋಕೇಶ್ ಜಿಲ್ಲೆಗೆ ಆಗಮಿಸುತ್ತಿದ್ದಂತೆ ಗ್ರಾಮೀಣ ಭಾಗದ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಿದ್ದರು. ಕೆರೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಂಡಿದ್ದರು. ತಾಲೂಕು ಆಡತಳಿಗಳಿಗೆ ತಮ್ಮ ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವಿಗೆ ಗುರಿ ನಿಗದಿ ಮಾಡಿದ್ದರು. ಈ ವಿಷಯದಲ್ಲಿ ಯಾವುದೇ ಒತ್ತಡ, ಪ್ರಭಾವಕ್ಕೆ ಮಣಿಯದೆ ಕಾರ್ಯನಿರ್ವಹಿಸುತ್ತಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬರ ಪೀಡಿತ ಗ್ರಾಮಗಳಿಗೂ ದಿಢೀರ್ ಭೇಟಿ
ಪ್ರಸ್ತುತ ಜಿಲ್ಲೆಯಲ್ಲಿ ತೀವ್ರ ಸ್ವರೂಪದ ಬರಗಾಲ ಆವರಿಸಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ಜಿಲ್ಲಾಧಿಕಾರಿ ಸ್ಥಳೀಯ ಅಧಿಕಾರಿಗಳ ತಂಡದೊಂದಿಗೆ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸುವ ಕೆಲಸ ಆರಂಭಿಸಿದ್ದಾರೆ. ಗ್ರಾಮಸ್ಥರ ಅಹವಾಲು ಆಲಿಸುತ್ತಿದ್ದಾರೆ. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುತ್ತಿದ್ದಾರೆ. ಇದು ತಾಲೂಕು ಆಡಳಿತಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಕಂಡುಬರುವ ಸಮಸ್ಯೆ ಪರಿಹಾರಕ್ಕೆ ಕಾರ್ಯೋನ್ಮುಖವಾಗುವಂತೆ ಮಾಡಿದೆ. ಮತ್ತೊಂದೆಡೆ ಜಿಲ್ಲಾಧಿಕಾರಿ ಭೇಟಿಗೆ ಜಿಲ್ಲೆಯ ಹಲವು ಗ್ರಾಮಸ್ಥರು ಕಾದು ಕುಳಿತುಕೊಂಡಿದ್ದಾರೆ.
ನಾಗರಿಕರ ಮೆಚ್ಚುಗೆ
ತಮ್ಮ ಗ್ರಾಮಕ್ಕೆ ದಿಢೀರ್ ಭೇಟಿಯಿತ್ತು ಇಲ್ಲಿನ ಸಮಸ್ಯೆಗಳ ಖುದ್ದು ಪರಿಶೀಲನೆ ನಡೆಸಿ, ಸಾರ್ವಜನಿಕರ ಅಹವಾಲು ಆಲಿಸಿ, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಅವರ ಕ್ರಮಕ್ಕೆ ತಟ್ಟೆಹಳ್ಳಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ’ಅದೆಷ್ಟೋ ಬಾರಿ ನಾವೇ ಖುದ್ದಾಗಿ ಅಧಿಕಾರಿಗಳನ್ನು ಗ್ರಾಮಕ್ಕೆ ಆಹ್ವಾನಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಆಗಮಿಸುವುದಿಲ್ಲ. ಆದರೆ ಡಾ. ಲೋಕೇಶ್ ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಅರಿತು ಅವರೇ ಖುದ್ದಾಗಿ ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ದಿಢೀರ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದ್ದಾರೆ.
- ತಟ್ಟೆಹಳ್ಳಿ ಗ್ರಾಮಸ್ಥರು.
...............................

No comments:
Post a Comment