ಶರ್ಮಿಳಾಗೆ ಏಕೆ ಹೀಗಾಯ್ತು?
ಮತದಾರರ ಪ್ರಜ್ಞೆ ಯಾವ ವಿಷಯದತ್ತ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಾರದ ಇಂದಿನ ರಾಜಕೀಯದ ಸಂದರ್ಭದಲ್ಲಿ ಮಣಿಪುರದ ಸಾತ್ವಿಕ ಹೋರಾಟಗಾರ್ತಿ ಐರೋಮ್ ಶರ್ಮಿಳಾ ಚುನಾವಣೆ ಕಣಕ್ಕಿಳಿದು ಹೀನಾಯವಾಗಿ ಪರಾಭವಗೊಂಡಿದ್ದಾರೆ. ಜನರ ಹಿತಕ್ಕೋಸ್ಕರ ಹೋರಾಟ ಮಾಡಿದರೂ ಅವರಿಗೆ ಬೆಂಬಲ ನೀಡಿ ಗೆಲ್ಲಿಸಲಾಗದ ಸ್ಥಿತಿ ಇಂದಿದೆ. ಚುನಾವಣೆಯಲ್ಲಿ ಅವರು ಪ್ರಚಾರ ಮಾಡಿದ್ದು ಮಾನವ ಹಕ್ಕುಗಳ ವಿಚಾರ, ಭ್ರಷ್ಟಾಚಾರ, ಜನರು ಎದುರಿಸುತ್ತಿರುವ ಶೋಷಣೆ, ತಾರತಮ್ಯ ಮೊದಲಾದ ವಿಚಾರಗಳೇ ವಿನಾ ಯಾವ ವ್ಯಕ್ತಿ, ಪಕ್ಷವನ್ನೂ ತೆಗಳಲಿಲ್ಲ. ಆದರೆ ಹಣ-ಹೆಂಡ ಹಂಚಿ, ಆಮಿಷ ಒಡ್ಡಿಯೇ ಗೆಲ್ಲಬೇಕಾದ ಇಂದಿನ ವ್ಯವಸ್ಥೆಯಲ್ಲಿ ಅವರು ಖರ್ಚು ಮಾಡಿದ್ದು ಕೇವಲ 3 ಲಕ್ಷ ರೂ ಮಾತ್ರ. ಮತದಾರರು ವ್ಯಕ್ತಿಯ ಹಿನ್ನೆಲೆ, ಹೋರಾಟ, ಸಾಧನೆ, ನೋಡಿ ಮತ ಹಾಕುವ ಕಾಲ ಮುಗಿದಿದೆ. ಇದರಿಂದ ಹೋರಾಟಗಾರರು, ಕಲಾವಿದರು, ಸಾಹಿತಿಗಳು ಚುನಾವಣೆಗೆ ಸ್ಪರ್ಧಿಸಿ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಕನಸು ಹೊತ್ತು ಬರುವುದು ದುರ್ಭರವಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತ ಅವರನ್ನೇ ಸೋಲಿಸಿದ ಕೀರ್ತಿ ಕನ್ನಡಿಗರದ್ದು. ಶರ್ಮಿಳಾ ಸಹ ಈಗ ಇನ್ನೊಂದು ಉದಾಹರಣೆಯಾಗಿದ್ದಾರೆ.
ಹೋರಾಟ ಬೇರೆ, ರಾಜಕೀಯ ಬೇರೆ. ಹೋರಾಟದ ದಾರಿಯನ್ನು ಬಿಟ್ಟು ರಾಜಕಿಯಕ್ಕಿಳಿಯುವಾಗ ಅವರಿಗಿರುವ ಜನಪ್ರಿಯತೆಯೂ ಕೈ ಹಿಡಿಯುವುದಿಲ್ಲ. ಒಬ್ಬ ಹೋರಾಟಗಾರನನ್ನು ರಾಜಕೀಯ ನಾಯಕನನ್ನಾಗಿ ಅವರು ನೋಡಲು ಇಚ್ಛಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹೋರಾಟಗಾರರು ಕಡಿಮೆಯಾಗುತ್ತಿದ್ದಾರೆ. ಆದರೆ ರಾಜಕೀಯ ನಾಯಕರು ಹೆಚ್ಚುತ್ತಿದ್ದಾರೆ. ಎಲ್ಲರಿಗೂ ರಾಜಕೀಯದ ಆಕರ್ಷಣೆ ಹೆಚ್ಚುತ್ತಾ ಹೋಗುತ್ತಿದೆ. ಹೋರಾಟಗಾರರೂ ಸಹ ರಾಜಕೀಯದ ಮೂಲಕ ಬದಲಾವಣೆ ತರಲು ಯೋಚಿಸಿ ರಾಜಕೀಯಕ್ಕೆ ಕಾಲಿಡುವ ಯತ್ನ ಮಾಡುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಮಣಿಪುರದ ಐರೋಮ್ ಶರ್ಮಿಳಾ.
ಶರ್ಮಿಳಾ ಮೊನ್ನೆ ಮಣಿಪುರದಲ್ಲಿ ಮುಕ್ತಾಯವಾದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 90 ಮತ ಗಳಿಸಲಷ್ಟೇ ಶಕ್ತರಾದರು. ಮಾನವ ಹಕ್ಕುಗಳ ಹೋರಾಟದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿದ ಶರ್ಮಿಳಾ ಏಕೆ ವಿಫಲರಾದರು ಎನ್ನುವ ಪ್ರಶ್ನೆ ಎಲ್ಲೆಡೆ ಚಿಂತಕರನ್ನು ವಿಶ್ಲೇಷಣೆಗೆ ನೂಕಿದೆ. 16 ವರ್ಷಗಳ ಕಾಲ ಮಣಿಪುರದಲ್ಲಿ ಸಶಸ್ತ್ರ ದಳಗಳ ಕಾಯ್ದೆ (ವಿಶೇಷ ಅಧಿಕಾರ) ವಿರುದ್ದ ಹೋರಾಡಿ ಸತ್ಯಾಗ್ರಹ ಕುಳಿತವರು ಶರ್ಮಿಳಾ. ಕಳೆದ ವರ್ಷ ಸತ್ಯಾಗ್ರಹವನ್ನು ಹಿಂದೆಗೆದುಕೊಂಡು ಪೀಪಲ್ಸ್ ರಿಸರ್ಜೆನ್ಸ್ ಆಂಡ್ ಜಸ್ಟೀಸ್ ಅಲೈಯೆನ್ಸ್ (ಪಿಆರ್ಜೆಎ) ಎಂಬ ಪಕ್ಷವನ್ನು ಕಟ್ಟಿದರು. ಇದಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಚಾರ ಸಿಕ್ಕಿತ್ತು. ಅವರ ಉದ್ದೇಶ ಸಶಸ್ತ್ರ ದಳಗಳ ಅಧಿಕಾರವನ್ನು ರಾಜಕೀಯದ ಮೂಲಕ ಹಿಮ್ಮೆಟ್ಟಿಸುವುದಾಗಿತ್ತು. ಆದರೆ ಮತದಾರ ಅವರ ಕೈ ಹಿಡಿಯಲಿಲ್ಲ.
ಅವರ ಸೋಲಿಗೆ ಈಗ ಮೂರು ಪ್ರಮುಖ ಕಾರಣಗಳನ್ನು ಕೊಡಲಾಗುತ್ತಿದೆ. ಮೊದಲನೆಯದಾಗಿ, ತನ್ನ ದೀರ್ಘಾವಧಿಯ ಉಪವಾಸವನ್ನು ಅಂತ್ಯಗೊಳಿಸುವ ಮೂಲಕ ಜನರ ಬೆಂಬಲವನ್ನು ಕಳೆದುಕೊಂಡರು. ಮಣಿಪುರದಲ್ಲಿ ಸುಮಾರು 1500ರಷ್ಟು ಪ್ರಕರಣಗಳು ಸಶಸ್ತ್ರದಳಗಳ ದೌರ್ಜನ್ಯದ ವಿರುದ್ದ ಇವೆ. ಅವುಗಳ ವಿರುದ್ಧ ಹೋರಾಡುವುದನ್ನು ಅರ್ಧದಲ್ಲೇ ಬಿಟ್ಟು ರಾಜಕೀಯಕ್ಕೆ ಬರುವುದನ್ನು ಜನರು ಒಪ್ಪಲಿಲ್ಲ.
ಎರಡನೆಯದಾಗಿ, ವಿವಾಹ ಬಂಧನಕ್ಕೆ ಸಿಲುಕಿದ್ದು, 44ರ ಹರಯದ ಶರ್ಮಿಳಾ ಗೋವಾ ಮೂಲದ ವ್ಯಕ್ತಿಯನ್ನು ವರಿಸಿದರು. ಇಲ್ಲಿ ಹೋರಾಟವನ್ನು ಅವರ ಬೆಂಬಲಿಗರು ದಾರಿತಪ್ಪಿಸಿದರೆಂಬ ಆರೋಪ ಕೇಳಿಬರುತ್ತಿದೆ. ಮೂರನೆಯದಾಗಿ, ರಾಜಕೀಯದ ಆಳ, ಅರಿವಿಲ್ಲದೆ ಕಾಲಿಟ್ಟಿದ್ದು. ಅದರಲ್ಲೂ ಶರ್ಮಿಳಾ ಸ್ಪರ್ಧಿಸಿದ್ದು ಮೂರು ಬಾರಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಓಕ್ರಮ್ ಇಬೊಬಿ ಸಿಂಗ್ ವಿರುದ್ಧ. ತನ್ನ ಪಕ್ಷವನ್ನು ರಾಜ್ಯಮಟ್ಟದಲ್ಲಿ ಸ್ಥಾಪಿಸಿ ಅದಕ್ಕೆ ತಕ್ಕ ಪ್ರಚಾರ ಕೊಡಲಿಲ್ಲ. ಚುನಾವಣೆಗೆ ಅವರು ಕೇವಲ ಮೂವರು ಅಭ್ಯರ್ಥಿಗಳನ್ನು ಮಾತ್ರ ಪಕ್ಷದಿಂದ ಕಣಕ್ಕಿಳಿಸಿದ್ದರು. ಇಂದಿನ ಹಣ, ಹೆಂಡದ ರಾಜಕೀಯದ ಕಾಲದಲ್ಲಿ ಶರ್ಮಿಳಾ ಅವರು ಖರ್ಚು ಮಾಡಿದ್ದು 3 ಲಕ್ಷ ರೂ. ಮಾತ್ರ. ಸಾಂಕೇತಿಕವಾಗಿ ಚುನಾವಣೆ ಕಣಕ್ಕೆ ಅವರು ಇಳಿದಿದ್ದರೇ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ.
ಚುನಾವಣೆಯಲ್ಲಿ ಅವರು ಪ್ರಚಾರ ಮಾಡಿದ್ದು ಮಾನವ ಹಕ್ಕುಗಳ ವಿಚಾರ, ಮತ್ತು ಭ್ರಷ್ಟಾಚಾರ, ಜನರು ಎದುರಿಸುತ್ತಿರುವ ಶೋಷಣೆ, ತಾರತಮ್ಯ ಮೊದಲಾದ ವಿಚಾರಗಳು. ರಾಷ್ಟ್ರೀಯ ಪಕ್ಷಲಾದ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕಾಗಿ ಎಲ್ಲ ಯತ್ನ ಮಾಡುತ್ತಿರುವಾಗ ರಾಜಕಿಯದ ಯಾವುದೇ ಹಿನ್ನೆಲೆ, ಯೋಜನೆ, ತಂತ್ರಗಾರಿಕೆ ಇಲ್ಲದೆ ಆ ಪಕ್ಷಗಳ ವಿರುದ್ದ ಸ್ಪರ್ಧಿಸುವುದು ಹುಡುಗಾಟಿಕೆಯಲ್ಲ. ಚುನಾವಣೆ ಸಂದರ್ಭದಲ್ಲೇ ಶರ್ಮಿಳಾ ತಾನು ಹೋರಾಟದ ಮೂಲಕ ಗಳಿಸಿದ ಸ್ಥಳೀಯ ಮತ್ತು ಅಂತಾರಾಷ್ಟ್ರಿಯ ಜನಪ್ರಿಯತೆಯನ್ನು ರಾಜಕೀಯವಾಗಿ ಲಾಭಮಾಡಿಕೊಳ್ಳುವಲ್ಲಿ ಎಡವಿದರು.
ಈ ಚುನಾವಣೆಯಿಂದ ಶರ್ಮಿಳಾ ರಾಜಕೀಯವಾಗಿ ಕಲಿಯುವುದು ಬಹಳಷ್ಟಿದೆ ಎನ್ನಬಹುದು. ಮಣಿಪುರದ ರಾಜಕೀಯದಲ್ಲಿ ಗಂಭೀರವಾಗಿ ಮುಂದುವರೆಯಬೇಕೆಂದಿದ್ದರೆ ಒಂದು ಯೋಜನಾಬದ್ಧ ರಾಜಕೀಯ ತಂತ್ರಗಾರಿಕೆಯನ್ನು ಹೊಂದಿರಬೇಕಿತ್ತು. ಚುನಾವಣೆಯನ್ನು ಎದುರಿಸುವುದು ಹೇಗೆನ್ನುವ ಪರಿಕಲ್ಪನೆ ಅವರಲ್ಲಿರಬೇಕಿತ್ತು. ಕೆಲವು ಅನುಭವಿ ರಾಜಕರಣಿಗಳನ್ನು ತಮ್ಮೊಂದಿಗೆ ಸೇರಿಸಿಕೊಳ್ಳಬೇಕಿತ್ತು. ಇವರ ಪಕ್ಷ ಹಲವು ಯುವಕರನ್ನು ಸೆಳೆದಿತ್ತಾದರೂ ಬಿಜೆಪಿ- ಕಾಂಗ್ರೆಸ್ ಹಣಾಹಣಿಯ ಮಧ್ಯೆ ಇವರ ಹೋರಾಟ ಏನೂ ಆಗಿರಲಿಲ್ಲ.
ಮೊನ್ನೆಯ ಚುನಾವಣೆಯಲ್ಲಿ ಶರ್ಮಿಳಾ ಪಕ್ಷಕ್ಕೆ ಆಶಾದಾಯಕ ಸ್ಥಿತಿ ಕಂಡುಬರಲಿಲ್ಲ. ರಾಜಕೀಯಕ್ಕೆ ಬಂದು ಹೋರಾಟ ಮಾಡಿ ಸಶಸತ್ರದಳದ ಅಧಿಕಾರದ ವಿರುದ್ದ ಹೋರಾಟ ಮಾಡುವ ಕನಸನ್ನು ಅವರು ಕಂಡಿದ್ದರು. ಆದರೆ ಈ ಚುನಾವಣೆ ತಾನು ಅಂದುಕೊಡಂತೆ ನಡೆಯುವುದಿಲ್ಲ ಎನ್ನುವುದು ಅವರಿಗೆ ತಿಳಿದಿರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ. ಕೊನೆಯದಾಗಿ, ಮಿಲಿಯನ್ಗಟ್ಟಲೆ ಮಹಿಳಾ ಮತದಾರರಿರುವ ರಾಜ್ಯದಲ್ಲಿ ಕೇವಲ 90 ಮತವನ್ನು ಮಹಿಳಾ ಹೋರಾಟಗಾರ್ತಿಯೊಬ್ಬಳು ಪಡೆಯುತ್ತ್ತಾರೆಂದರೆ ನಿಜಕ್ಕೂ ಜನರ ಪ್ರಜ್ಞೆ ಯಾವುದರತ್ತ, ಜನರಿಗೆ ಬೇಕಾದ ವಿಷಯಗಳು ಯಾವುವು ಎನ್ನುವುದನ್ನು ಯೋಚಿಸಬೇಕಾಗುತ್ತದೆ. ಆದರೆ ಒಂದಂತೂ ಸತ್ಯ, ಸೋತಿದ್ದು ಶರ್ಮಿಳಾ ಅಲ್ಲ, ಪ್ರಜಾಸತ್ತೆ.

No comments:
Post a Comment