ಎಟಿಎಂ ನಿರ್ವಹಣೆ: ಬ್ಯಾಂಕ್ಗಳ ನಿರ್ಲಕ್ಷ್ಯ ಧೋರಣೆ
ಎಮ್ಮೆ ಖರೀದಿಸಿದವರಿಗೆ ಹಗ್ಗ ತರುವುದು ಭಾರವೇ ಎಂಬ ಗಾದೆ ಮಾತಿದೆ. ಬ್ಯಾಂಕುಗಳು ಎಟಿಎಂನ್ನು ಸ್ಥಾಪಿಸಿ ಅದಕ್ಕೆ ಸರಿಯಾದ ಭದ್ರತೆ ನೀಡದೆ, ಹಣಕ್ಕೆ ರಕ್ಷಣೆ ನೀಡದೆ ಬೇಜವಾಬ್ದಾರಿ ತೋರುತ್ತಿರುವುದನ್ನು ಕಂಡಾಗ ಈ ಗಾದೆ ನೆನೆಪಾಗುತ್ತದೆ. ಬ್ಯಾಂಕುಗಳಿಗೆ ಎಟಿಎಂ ತಮ್ಮದು ಎನ್ನುವ ಕಾಳಜಿಯೇ ಇಲ್ಲ. ಅದನ್ನು ಸ್ಥಾಪಿಸುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಲು ಗನ್ಮ್ಯಾನ್ ನೇಮಿಸಬೇಕೆಂಬ ವಿಚಾರ ಗೊತ್ತಿದ್ದರೂ ಅದನ್ನು ಜಾರಿಮಾಡುತ್ತಿಲ್ಲ. ನಗರದ ಸುತ್ತಮುತ್ತ ಎರಡು ವರ್ಷಗಳಲ್ಲಿ ಎಟಿಎಂ ದೋಚುವ ನಾಲ್ಕೈದು ಘಟನೆ ನಡೆದಿದೆ. ಇದರಿಂದ ಎಚ್ಚರಗೊಳ್ಳಬಹುದಿತ್ತು. ಬ್ಯಾಂಕಿನಲ್ಲಿರುವ ಹಣಕ್ಕೆ ಮಾತ್ರ ರಕ್ಷಣೆ ಕೊಡುವ ಕೆಲಸವಾಗದೆ ಎಟಿಎಂ ಹಣಕ್ಕೂ ತಾವು ಜವಾಬ್ದಾರರು ಎನ್ನುವುದನ್ನು ಅರಿಯಬೇಕಿದೆ. ಗ್ರಾಹಕರಿಗೆ ಉತ್ತಮ ಸೇವೆ ಕೊಡುವಂತಾಗಬೇಕು.
ಶಿವಮೊಗ್ಗ: ಹಣಕಾಸು ಸಂಸ್ಥೆಗಳು ಮೊದಲ ಆದ್ಯತೆ ಕೊಡಬೇಕಿರುವುದು ಸುರಕ್ಷತೆಗೆ. ಇತ್ತೀಚಿನ ದಿನಗಳಲ್ಲಿ ಇವುಗಳಿಗೆ ಭದ್ರತೆಯೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದರಿಂದ ಅದನ್ನು ನಿರ್ಲಕ್ಷಿಸಲಾಗದು. ಸಾರ್ವಜನಿಕರಿಗೆ ಬೇಕಾದಾಗ ಹಣ ದೊರೆಯಲೆಂದು 24*7 ಸೇವೆಯಲ್ಲಿ ಎಟಿಎಂಗಳನ್ನು ತೆರೆಯಲಾಗಿದೆ. ಆದರೆ ಇವುಗಳ ಭದ್ರತೆ ಬಗ್ಗೆ ಮಾತ್ರ ಸ್ವಲ್ಪವೂ ಕಾಳಜಿ ವಹಿಸದಿರುವುದು ತೀರಾ ಬೇಸರದ ವಿಚಾರ.
ಲಕ್ಷಾಂತರ ರೂ. ಗಳನ್ನು ಎಟಿಎಂನಲ್ಲಿ ಇಟ್ಟಿದ್ದರೂ ಅದರ ಕಾವಲಿಗೆ ಶಸ್ತ್ರಸಜ್ಜಿತ ಗಾರ್ಡ್ ಇರುವುದಿಲ್ಲ. ಕೆಲವೆಡೆ ಇದ್ದರೂ ಅವರ ಕೈಲಿ ಶಸ್ತ್ರಗಳಿರುವುದಿಲ್ಲ. ಬ್ಯಾಂಕಿನವರು ದೇಶೀಯ ಶಸ್ತ್ರ ಬಳಕೆಗೆ ಅನುಮತಿ ಪಡೆದು ಖಾಸಗಿ ಸಂಸ್ಥೆಗಳಿಗೆ ಭದ್ರತೆಯ ಜವಾಬ್ದಾರಿ ವಹಿಸಬೇಕು. ಆದರೆ ಅದನ್ನು ಮರೆತಿದ್ದಾರೆ. ಇದರ ಪರಿಣಾಮವನ್ನು ಗ್ರಾಹಕರು ಎದುರಿಸುವಂತಾಗಿದೆ.
ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಾಷ್ಟ್ರಿಕೃತ ಬ್ಯಾಂಕೊಂದರ ಎಟಿಎಂನಿಂದ ಹಣ ಪಡೆಯಲು ಅದೇ ಬ್ಯಾಂಕಿನ ನೌಕರಳ ಮೇಲೆ ಹಲ್ಲೆ ನಡೆದು ಅವರ ಹಣ ದೋಚಲಾಗಿತ್ತು. ಇದು ದೇಶದಾದ್ಯಂತ ಸುದ್ದಿಯಾಗಿ ಬ್ಯಾಂಕಿನವರೆಲ್ಲ ತುರ್ತು ಸಭೆ ಸೇರಿ ಎಟಿಎಂಗಳಿಗೆ ಭದ್ರತೆ ನೀಡಲು ಸಿಸಿ ಕ್ಯಾಮರಾ ಹಾಕಲು ಆರಂಭಿಸಿದರು. ಅಂದಿನಿಂದ ಆರಂಭವಾದ ಸಿಸಿ ಕ್ಯಾಮರಾ ಅಳವಡಿಕೆ ಅಭಿಯಾನವೇನೊ ಇಂದಿಗೂ ಮುಂದುವರೆದಿದೆ. ಆದರೆ ಅದರ ನಿರ್ವಹಣೆಯನ್ನು ಮಾತ್ರ ಯಾವ ಬ್ಯಾಂಕಿನವರೂ ಮಾಡುತ್ತಿಲ್ಲ.
ಕ್ಯಾಮರಾ ಅಳವಡಿಕೆ ಎಲ್ಲಿ ಮಾಡಬೇಕು ಎನ್ನುವುದೇ ಬಹುತೇಕ ಅಧಿಕಾರಿಗಳಿಗೆ ಗೊತ್ತಿಲ್ಲ. ಎರಡನೆಯದಾಗಿ, ಅಳವಡಿಸಿದ ಕ್ಯಾಮರಾ ಸರಿಯಾಗಿ ಕೆಲಸ ಮಾಡುತ್ತಿದೆಯೇ, ಯಾರ್ಯಾರು ಎಟಿಎಂಗೆ ಬಂದು ಹೋಗಿದ್ದಾರೆ, ಎನ್ನುವುದರ ಪರಿಶೀಲನೆ ನಡೆಸುತ್ತಿಲ್ಲ. ವಾರಕ್ಕೊಮ್ಮೆಯಾದರೂ ಅದನ್ನು ಗಮನಿಸುವ ತಾಳ್ಮೆ ಅವರಲ್ಲಿಲ್ಲ. ಎಟಿಎಂ ಸುತ್ತಮುತ್ತಲಿನ ಚಟುವಟಿಕೆಯನ್ನು ಅಪರೂಪಕ್ಕೆ ಪರೀಕ್ಷಿಸಬೇಕು. ಈ ಎಲ್ಲವನ್ನೂ ಬ್ಯಾಂಕರ್ಗಳು ಮರೆತಿದ್ದಾರೆ. ಬದಲಾಗಿ ಪೈಪೋಟಿಗೆ ಬಿದ್ದವರಂತೆ ಎಟಿಎಂ ತೆರೆಯುವುದಲ್ಲಿ ತಲ್ಲೀನವಾಗಿದ್ದಾರೆ.
ನಗರದಲ್ಲೇ ಜೆಎನ್ಎನ್ಸಿಇ ಬಳಿ ಇರುವ ಎಟಿಎಂನ್ನು ಕಳ್ಳರು ದೋಚಲು ಯತ್ನಿಸಿದ್ದ ಘಟನೆ ವರ್ಷದ ಹಿಂದೆ ನಡೆದಿತ್ತು. ಇದಾದ ನಂತರ ಅದೇ ಮಾರ್ಗದಲ್ಲಿ ಇರುವ ಚೆನ್ನಮುಂಬಾಪುರದಲ್ಲಿರುವ ಎಟಿಎಂನ್ನು ಹೊತ್ತೊಯ್ಯಲು ಯತ್ನ ನಡೆದ ಘಟನೆ ಸಹ ಜರುಗಿತ್ತು. ಮೂರು ವರ್ಷಗಳ ಹಿಂದೆ ಮಾಚೇನಹಳ್ಳಿ ಎಸ್ಬಿಎಂ ಶಾಖೆಯನ್ನು ದರೋಡೆ ಮಾಡಲಾಗಿತ್ತು. ಇವೆಲ್ಲವೂ ಕಣ್ಣೆದುರಿದ್ದರೂ ಅಧಿಕಾರಿಗಳು ಎಚ್ಚೆತ್ತಿಲ್ಲ.
ಮೊನ್ನೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬ್ಯಾಂಕಿನವರು ಕೈಗೊಂಡ ಭದ್ರತಾ ಕ್ರಮಗಳ ಪರಿಶೀಲನೆ ನಡೆಯಿತು. ಅಚ್ಚರಿಯೆಂದರೆ, ಬ್ಯಾಂಕಿನವರ ಭದ್ರತೆ ವಿಚಾರ ಕೇಳಿ ಸ್ವತಃ ಜಿಲ್ಲಾಧಿಕಾರಿಯವರೇ ಹೌಹಾರಿದರು. ಜಿಲ್ಲೆಯಲ್ಲಿ ವಿವಿಧ 36 ಬ್ಯಾಂಕುಗಳ 234 ಎಟಿಎಂಗಳಿವೆ. ಇದರಲ್ಲಿ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನದು 134 . ಕೆನರಾ ಬ್ಯಾಂಕಿನವರು ಒಂದೇ ಒಂದು ಎಟಿಎಎಂಗಳು ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ. ಕಾರ್ಪೊರೇಶನ್ ಬ್ಯಾಂಕಿನವರು ಕೇವಲ ಎರಡು ಎಟಿಎಂಗೆ ಮಾತ್ರ ಗಾರ್ಡ ಇಟ್ಟಿದ್ದಾರೆ. ಈ ರೀತಿ ನಿರ್ಲಕ್ಷ್ಯವನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ ಬ್ಯಾಂಕಿನವರ ಬಳಿ ಉತ್ತರವಿರಲಿಲ್ಲ. ಎಸ್ಬಿಎಂ ಮತ್ತು ಎಸ್ಬಿಐನದು ಎರಡನೆಯ ಅತಿ ಹೆಚ್ಚು ಎಟಿಎಂ ಜಿಲ್ಲೆಯಲ್ಲಿದೆ. ಅವರು ಗಾರ್ಡ್ ಇಟ್ಟಿರುವರಾದರೂ ಅವರಿಗೆ ಶಸ್ತ್ರ ನೀಡಿಲ್ಲ. ಆಗಾಗ ದುಷ್ಕರ್ಮಿಗಳು ಹಾಡಹಗಲೇ ಲೂಟಿ ಮಾಡುತ್ತಿರುವ ಬಗ್ಗೆ ಕೇಳುತ್ತಿದ್ದರೂ ಸುರಕ್ಷತೆಯ ಬಗ್ಗೆ ಇನ್ನೂ ಜಾಗೃತರಾಗದಿರುವುದಕ್ಕೆ ಅವರು ತೀರಾ ವಿಷಾದ ವ್ಯಕ್ತಪಡಿಸಿದರು.
ಬ್ಯಾಂಕ್ ಶಾಖೆಗಳಲ್ಲಿ ಸೈರನ್ ಮತ್ತು ಅಗ್ನಿ ನಿರೋಧಕ ಮಿನಿಸಿಲಿಂಡರ್ ಇಟ್ಟಿರುತ್ತಾರೆ. ಅವು ಸುಸ್ಥ್ತಿತಿಯಲ್ಲಿವೆಯೇ, ಕೆಲಸ ಮಾಡುತ್ತಿವೆಯೇ, ಸೈರನ್ ಕರೆಂಟ್ ಇಲ್ಲದ ವೇಳೆ ಕೆಲಸ ಮಾಡುತ್ತದೆಯೇ ಎನ್ನುವುದನ್ನು ಅವರು ಚೆಕ್ ಮಾಡುತ್ತಿಲ್ಲ. ಅಣಕು ಕಾರ್ಯಾಚರಣೆ ಮಾಡುವ ಮೂಲಕ ಹೊರಜಗತ್ತಿಗೆ ತಾವೆಷ್ಟು ಭದ್ರರಿದ್ದೇವೆ ಎನ್ನುವುದನ್ನು ತೋರಿಸಬೇಕಿತ್ತು. ಮಿನಿಸಿಲಿಂಡರ್ಗಳ ಅವಧಿ ಮುಗಿದಿದ್ದರೂ ಶೋ ಪೀಸ್ ಆಗಿ ಜೋತುಬಿದ್ದಿವೆ. ಅವುಗಳನ್ನು ಬಳಸುವ ರೀತಿಯೂ ಎಷ್ಟೋ ಸಿಬ್ಬಂದಿಗಳಿಗೆ ಗೊತ್ತಿಲ್ಲ. ಇವೆಲ್ಲವುಗಳ ತರಬೇತಿಯನ್ನು ಸಿಬ್ಬಂದಿಗಳಿಗೆ ನೀಡುವ ಮೂಲಕ ಎಚ್ಚರದ ಸ್ಥಿತಿಯಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇದೆ.
ಬ್ಯಾಂಕ್ ಶಾಖೆಯವರು ಸಮೀಪದ ಪೊಲೀಸ್ ಠಾಣೆಯ ಅಧಿಕಾರಿಯ ನಂಬರ್ ಇಟ್ಟುಕೊಂಡಿರಬೇಕು. ಆಗಾಗ ಅವರೊಂದಿಗೆ ಚರ್ಚಿಸುತ್ತಿರಬೇಕು. ಸ್ನೇಹಿತರಂತೆ ಸಭೆ ನಡೆೆಸುತ್ತಿದ್ದರೆ ಇನ್ನಷ್ಟು ಕಾಳಜಿಯನ್ನು ಪೊಲೀಸರು ವಹಿಸುತ್ತಾರೆ.
ಇನ್ನಾದರೂ ಬ್ಯಾಂಕಿನವರು ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡಬೇಕಿದೆ. ಎಟಿಎಂಗಳನ್ನು ಸುಸ್ಥಿತಿಯಲ್ಲಿಡುವತ್ತ ಮುಂದಾಗಬೇಕಿದೆ. ಎಷ್ಟೋ ಎಟಿಎಂಗಳು ನೋಟು ನಿಷೇಧದ ನಂತರ ಬಾಗಿಲನ್ನೇ ತೆರೆದಿಲ್ಲ. ಅವುಗಳಿಗೆ ಸಕಾಲದಲ್ಲಿ ಹಣ ತುಂಬಿಸದೆ ನೋ ಕ್ಯಾಶ್ ಎಂಬ ನಾಮಫಲಕ ತೂಗುಹಾಕಲಾಗಿದೆ. ಕೆಲವು ಎಟಿಎಂಗಳಂತೂ ಓಬೇರಾಯನ ಕಾಲದ್ದಾಗಿದ್ದು, ಅವುಗಳ ಕೀ ಸಹಿತ ವಿವಿಧ ಭಾಗಗಳು ಕೆಟ್ಟು ಹೋಗಿದ್ದರೂ ದುರಸ್ತಿಪಡಿಸುವ ಕೆಲಸ ನಡೆಯುತ್ತಿಲ್ಲ. ಎಟಿಎಂಗಳ ಬಾಗಿಲು ಸರಿಇಲ್ಲ. ಒಳಗೆ ಒಬ್ಬೊಬ್ಬರನ್ನೇ ಬಿಡುವ ಪದ್ದತಿ ಇಲ್ಲ. ಹಣ ತೆಗೆದುಕೊಂಡು ಹೊರಬರುವ ಗ್ರಾಹಕನಿಗೆ ಭದ್ರತೆ ಇಲ್ಲವೇ ಇಲ್ಲ.
ಇವೆಲ್ಲವೂ ಗ್ರಾಹಕನಿಗೆ ಬ್ಯಾಂಕುಗಳು ನೀಡುತ್ತಿರುವ ಸೇವೆಗಳು! ಇತ್ತೀಚೆಗೆ ಎಟಿಎಂಗಳ ಮೇಲೆಯೇ ಗ್ರಾಹಕರ ಅವಲಂಬನೆ ಅಧಿಕವಾಗತೊಡಗಿದೆ. ಆದರೂ ಗ್ರಾಹಕರ ಹಣದ ಬಗ್ಗೆ ಬೇಜವಾಬ್ದಾರಿ ತೋರುತ್ತಿರುವುದು ಖಂಡನಿಯ. ಒಟ್ಟಿನಲ್ಲಿ, ಎಟಿಎಂ ನಿರ್ವಹಣೆ ಮತ್ತು ಭದ್ರತೆ ಬಗ್ಗೆ ಬ್ಯಾಂಕುಗಳು ಅತಿ ನಿರ್ಲಕ್ಷ್ಯ ತೋರುತ್ತಿವೆ ಎಂದರೆ ತಪ್ಪೇನಿಲ್ಲ.
...............................

No comments:
Post a Comment