ವಿಫಲವಾದ ಹೆಬ್ಬೆಟ್ಟು ಮಂಜನ ಯೋಜನೆ:
ರೌಡಿ ಕೊರಂಗುವಿಗೆ ಜೀವದಾನ
- ಪಿಸ್ತೂಲು ಇಟ್ಟುಕೊಂಡು, ಮಾರಾಟ ಮಾಡಲೆತ್ನಿಸಿ ಸಿಕ್ಕಿಬಿದ್ದ ಅಶ್ರಫ್
ಶಿವಮೊಗ್ಗದ ಪಾತಕ ಲೋಕದಲ್ಲಿ ಹೆಸರುವಾಸಿಯಾಗಿದ್ದ ಹೆಬ್ಬೆಟ್ಟು ಮಂಜನು ಕ್ರಮೇಣ ಬೆಂಗಳೂರಿಗೆ ತನ್ನ ಚಟುವಟಿಕೆ ಸ್ಥಳಾಂತರಿಸಿಕೊಂಡಿದ್ದ. ಬೆಂಗಳೂರಿನ ರೌಡಿ ಕೊರಂಗು ಕೃಷ್ಣನ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ. ಅದರಂತೆ ವಿವಿಧ ಪ್ರಕರಣಗಳಲ್ಲಿ ಜೈಲ್ನಲ್ಲಿದ್ದ ಕೊರಂಗು ಕೃಷ್ಣನನ್ನು ಪೊಲೀಸರು ಪ್ರಕರಣವೊಂದರ ವಿಚಾರಣೆಗಾಗಿ ಚಿತ್ರದುರ್ಗ ನ್ಯಾಯಾಲಯಕ್ಕೆ ಕರೆತಂದಿದ್ದರು. ಅಲ್ಲಿಂದ ಬೆಂಗಳೂರಿನ ಜೈಲ್ಗೆ ತೆರಳುವ ಮಾರ್ಗಮಧ್ಯೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿಯ ಡಾಬಾದ ಬಳಿ ಊಟಕ್ಕೆ ತೆರಳಿದ್ದರು. ಈ ವೇಳೆ ಹೆಬ್ಬೆಟ್ಟು ಮಂಜನು ಕೊರಂಗು ಕೃಷ್ಣನ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದ. ಮಾರಣಾಂತಿಕ ಗಾಯಗೊಂಡಿದ್ದ ಕೊರಂಗು ಕೃಷ್ಣ ಬದುಕುಳಿದಿದ್ದ. ತದನಂತರ ಹೆಬ್ಬೆಟ್ಟು ಹತ್ಯೆಗೆ ಸಾಕಷ್ಟು ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿಯೇ ಹೆಬ್ಬೆಟ್ಟು ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.
ಶಿವಮೊಗ್ಗ; ಶಿವಮೊಗ್ಗ ರೌಡಿಯಿಸಂ ಇತಿಹಾಸದಲ್ಲಿ ಹೆಬ್ಬೆಟ್ಟು ಮಂಜನ ಹೆಸರು ಪ್ರಮುಖವಾದುದು. ಜಿಲ್ಲೆಯಲ್ಲಿ ರೌಡಿಯಿಸಂ ಬೆಳೆಸಿ, ಸಾಕಷ್ಟು ಶಿಷ್ಯರನ್ನು ಹೊಂದಿದ ನಂತರ ಬೆಂಗಳೂರಿನ ರೌಡಿಗಳನ್ನು ಎದುರು ಹಾಕಿಕೊಂಡು, ಅವರ ಕೊಲೆಗೆ ಯತ್ನಿಸಿದವನು ಈತ. ನಂತರ ಜೀವಭಯ, ಪೊಲೀಸರ ಭಯದಿಂದ ಪಾರಾಗಲು ಮಲೇಶಿಯಾಕ್ಕೆ ಪರಾರಿಯಾಗಿದ್ದಾನೆ ಎಂದು ಊಹಿಸಲಾಗುತ್ತಿದೆ.
ಅಲ್ಲಿಂದಲೇ ಶಿಷ್ಯರ ಮೂಲಕ ಗೂಂಡಾಗಿರಿ ನಡೆಸುತ್ತ ಕಾಲಕಳೆಯುತ್ತಿದ್ದಾನೆ. ಈತನ ಕಟ್ಟಾ ವೈರಿ ಬೆಂಗಳೂರಿನ ಕೊರಂಗು ಕೃಷ್ಣನನ್ನು ಕೊಲೆ ಮಾಡುವ ಸಂಚನ್ನು ರೂಪಿಸಿ ಅದರಲ್ಲಿ ಎಡವಟ್ಟು ಮಾಡಿಕೊಂಡಿದ್ದಾನೆ. ಈ ಮೂಲಕ ಮತ್ತೆ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿದ್ದಾನೆ. ಪೊಲೀಸರು ತನ್ನ ಬಗ್ಗೆ ಇನ್ನಷ್ಟು ಗಮನಹರಿಸುವಂತೆ ಮಾಡಿಕೊಂಡಿದ್ದಾನೆ. ಇಷ್ಟಾದರೂ ಕೊರಂಗು ಕೊಲೆಗೆ ಮತ್ತೆ ಮತ್ತೆ ಯತ್ನ ನಡೆಸುತ್ತಲೇ ಇರುವುದು ಈಗ ಬೆಳಕಿಗೆ ಬಂದಿದೆ. ಮೊನ್ನೆ ಶಿವಮೊಗ್ಗ ಸಮೀಪದ ಮಂಡಗದ್ದೆಯ ಲಿಂಗಾಪುರ ಗ್ರಾಮದಲ್ಲಿ ಈ ಸಂಬಂಧ ತಂದಿಡಲಾಗಿದ್ದ ಪಿಸ್ತೂಲ್ ಮತ್ತು ಜೀವಂತ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡ ನಂತರ ಹೆಬ್ಬೆಟ್ಟು ಮಂಜನ ಕೃತ್ಯದ ಬಗ್ಗೆ ಜಿಲ್ಲೆಯ ಇನ್ನಷ್ಟು ನಿಗಾಹಿಸುವಂತಾಗಿದೆ.
ಸ್ನೇಹಿತನ ನಂಬಿ ಕೆಟ್ಟ :
ಮೊನ್ನೆ ಪೊಲೀಸರಿಗೆ ಸಿಕ್ಕಿಬಿದ್ದ ಹೆಬ್ಬೆಟ್ಟು ಮಂಜನ ಬಾಲ್ಯ ಸ್ನೇಹಿತ ಅಶ್ರಫ್ ಮೂಲತಃ ಶಿವಮೊಗ್ಗದವನಾಗಿದ್ದು, ತದನಂತರ ಸಾಗರದಲ್ಲಿ ನೆಲೆಸಿದ್ದ. ಈತನ ತಂದೆ ನಗರದಲ್ಲಿ ಚಿಕ್ಕ ಟೀ ಸ್ಟಾಲ್ ಇಟ್ಟುಕೊಂಡಿದ್ದರು.ಅಂಗಡಿ ವ್ಯವಹಾರದಲ್ಲಿ ನಷ್ಟಕ್ಕೀಡಾಗಿ ತಂದೆಯೊಂದಿಗೆ ಕೇರಳದ ಮಲಪ್ಪುರಂ ಜಿಲ್ಲೆಯ ಕರಾಡುಪರ್ಮ ಎಂಬ ಗ್ರಾಮಕ್ಕೆ ತೆರಳಿ ನೆಲೆಸಿದ್ದ. ಆದರೂ ಶಿವಮೊಗ್ಗ ಜಿಲ್ಲೆಯ ನಂಟನ್ನು ಬಿಟ್ಟಿರಲಿಲ್ಲ. ಈತನ ಸಂಪರ್ಕ ಸಾಧಿಸಿದ್ದ ಹೆಬ್ಬೆಟ್ಟು ಆತನ ಬಳಿ ಪಿಸ್ತೂಲ್-ಗುಂಡುಗಳನ್ನು ದಾಸ್ತಾನು ಮಾಡುವ ನಿರ್ಧಾರ ಮಾಡಿದ್ದ. ಈತನಿಗೆ ಸಾಕಷ್ಟು ಹಣ ಕೂಡ ಕೊಟ್ಟಿದ್ದ.
ಕೊರಂಗು ಕೊಲೆಗೆ ಸ್ಕೆಚ್ ಹಾಕಿದ್ದ ಹೆಬ್ಬೆಟ್ಟು ಅಶ್ರಫ್ ಮೇಲೆ ವಿಶ್ವಾಸವಿಟ್ಟಿದ್ದ. ಒಡಿಶಾದ ಬೆಹರಾಮ್ಪುರ ಜಿಲ್ಲೆಯ ವಾಸಿ ಜಾವೇದ್ ಎನ್ನುವವನಿಂದ ಒಟ್ಟೂ 6 ಪಿಸ್ತೂಲನ್ನು ತರಿಸಿ ಕೊಟ್ಟಿದ್ದ. ಇದನ್ನು ಲಿಂಗಾಪುರದ ಮಥಾನ್ ಎನ್ನುವವನ ಮನೆಯಲ್ಲಿ ಬಚ್ಚಿಡಲಾಗಿತ್ತು. ಇದು ಇಲ್ಲಿಗೆ ಯಾವಾಗ ಬಂದು ತಲುಪಿತ್ತು ಎನ್ನುವ ಬಗ್ಗೆ ಮಾಹಿತಿ ನಿಖರವಾಗಿ ಸಿಕ್ಕಿಲ್ಲ. ಅಶ್ರಫ್ ಈ 6ರ ಪೈಕಿ ಎರಡನ್ನು ಒಂದನ್ನು ಮಂಗಳೂರಿನ ಚಿನ್ನದ ವ್ಯಾಪಾರಿ ಇಕ್ಬಾಲ್ಗೆ ಮತ್ತೊಂದನ್ನು ಮಂಡಗದ್ದೆಯ ಗಫಾರ್ಖಾನ್ (ಮಥಾನ್)ಗೆ ಮಾರಾಟ ಮಾಡಿದ್ದನು. ಅಶ್ರಫ್ನು ಹಣದಾಸೆಗೆ ಪಿಸ್ತೂಲ್ಗಳನ್ನು ಮಾರಿಕೊಳ್ಳಲಾರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೆಬ್ಬೆಟ್ಟುವಿನ ಸಂಪರ್ಕದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತವೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹೆಬ್ಬೆಟ್ಟು ಮಂಜನಿಗೆ ದೇಶಕ್ಕೆ ವಾಪಾಸ್ ಆಗುವ ಬಯಕೆ ಉಂಟಾಗಿರಬಹುದು. ತನ್ನ ಎದುರಾಳಿ ಕೊರಂಗು ಕೃಷ್ಣನ ಹತ್ಯೆ ನಡೆಸಿದರೆ ಆರಾಮಾಗಿ ಕರ್ನಾಟಕದಲ್ಲಿರಬಹುದು ಎಂದು ಯೋಚಿಸಿ ಈ ಹತ್ಯೆಗೆ ವಿದೇಶದಲ್ಲಿ ಕುಳಿತು ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಾರೆ. ಇದಕ್ಕಾಗಿಯೇ ಅಮೆರಿಕಾ, ಜರ್ಮನಿ ದೇಶಗಳ ಅತ್ಯಾಧುನಿಕ ಪಿಸ್ತೂಲ್ಗಳನ್ನು ತನ್ನ ಸಹಚರರ ಮೂಲಕ ಖರೀದಿಸಿಟ್ಟಿದ್ದ ಎನ್ನಲಾಗುತ್ತಿದೆ.
ಈಗ ಎಲ್ಲವೂ ಬಯಲಾಗುವ ಮೂಲಕ ಕೊರಂಗು ಹತ್ಯೆ ಸಂಚು ಮತ್ತೆ ವಿಫಲಗೊಂಡಿದೆ. ಇದರ ಜೊತೆಗೆ ಅಶ್ರಫ್ ಸಹ ಹೆಬ್ಬೆಟ್ಟುವಿನ ಕೆಂಗಣ್ಣಿಗೆ ತುತ್ತಾಗುವಂತಾಗಿದೆ. ಕಾರಣ ಪಿಸ್ತೂಲ್ ಮಾರಾಟ ಮಾಡಿದ್ದಕ್ಕೆ. ಅಶ್ರಫ್ ಇನ್ನುಳಿದ 4 ಪಿಸ್ತೂಲನ್ನೂ ಸಹ ಮಾರಾಟ ಮಾಡಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ. ಈ ಮಾರಾಟಕ್ಕೆ ಆರ್ಎಂಎಲ್ ನಗರದ ವಾಸಿ , ಟಯರ್ ವ್ಯಾಪಾರಿ ನದೀಮ್ ಎನ್ನುವವನನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿದ್ದು, ಆತನೂ ಸಹ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸ್ತೂಲ್ ಖರೀದಿ ಮಾಡಿದ ಇಬ್ಬರು, ತರಿಸಿದ ಹೆಬ್ಬೆಟ್ಟು ಮಂಜ, ಅಕ್ರಮವಾಗಿ ಇಟ್ಟುಕೊಂಡ ಲಿಂಗಾಪುರದ ಮಥಾನ್ ಮತ್ತು ಓಡಿಶಾದಿಂದ ಬೆಂಗಳೂರಿಗೆ ತಂದು ಕೊಟ್ಟವ, ಬೆಂಗಳೂರಿನಿಂದ ಪಿಸ್ತೂಲನ್ನು ಅಶ್ರಫ್ಗೆ ತಂದುಕೊಟ್ಟ ಅಂಬರೀಶ್ ಬಂಧನಕ್ಕೆ ಪೊಲೀಸರು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಕೊರಂಗು ಹತ್ಯೆಯು ಪೊಲೀಸರ ಸಕಾಲಿಕ ಪ್ರವೇಶದಿಂದ ತಪ್ಪಿದಂತಾಗಿದೆ.
-------------------------------------------

No comments:
Post a Comment