ಕುಮಾರ್ ರಾಜಕೀಯ ಭವಿಷ್ಯ ಬಿಜೆಪಿಯಲ್ಲಿದೆಯೇ?
ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿ ಸೇರುವ ಹವಣಿಕೆಯಲ್ಲಿದ್ದಾರೆ. ಸೊರಬದಲ್ಲಿ ತಾನು ಸೋತು, ಕಾಂಗ್ರೆಸ್ ಸಂಘಟಿಸದೆ ಅದು ನೆಲಕಚ್ಚುವಂತೆ ಮಾಡಿ, ಸಚಿವ ಕಾಗೋಡು ಮತ್ತು ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಅವರಿಗೇ ಸೆಡ್ಡು ಹೊಡೆದಿದ್ದರು. ಇದರಿಂದ ಕಾಂಗ್ರೆಸ್ಸಿನಲ್ಲಿ ತಾನು ಮೂಲೆಗುಂಪಾಗುತ್ತಿರುವುದನ್ನು ಅರಿತು ಮುಂದಿನ ರಾಜಕೀಯ ಭವಿಷ್ಯಕ್ಕೆ ನೆಲೆ ಕಂಡುಕೊಳ್ಳುವತ್ತ ಹೊರಟಿದ್ದಾರೆ. ಕೇವಲ ಅಪ್ಪನ ನಾಮಬಲದಿಂದಲೇ ಮುಂದೆ ಬಂದು, ತಮ್ಮ ವರ್ಚಸ್ಸನ್ನು ಬೆಳೆಸಿಕೊಳ್ಳದವರು ಯಾವ ಪಕ್ಷದಲ್ಲಿದ್ದರೂ ಆ ಪಕ್ಷಕ್ಕೆ ಹಾನಿ ನಿಶ್ಚಿತ. ಇಂತಹವರಿಂದ ವಿಶೇಷ ಕೊಡುಗೆಯನ್ನು ಯಾರೂ ನಿರೀಕ್ಷಿಸಬೇಕಿಲ್ಲ.
’ಕುಮಾರ್ ಪಕ್ಷದಲ್ಲಿದ್ದುಕೊಂಡೇ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ತಾವು ಕೆಲಸ ಮಾಡಲಿಲ್ಲವೆಂದು ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡದವರು ಕಾಂಗ್ರೆಸ್ಗೆ ಅಗತ್ಯವಿಲ್ಲ. ಅವರು ವಿಫಲ ನಾಯಕರಾಗಿದ್ದಾರೆ. ಸೊರಬದಲ್ಲಿ ಪಕ್ಷವನ್ನು ಸ್ವಂತ ಬಲದಿಂದ ಕಟ್ಟುವ ಕೆಲಸವನ್ನು ಮಾಡಲೇ ಇಲ್ಲ. ಅವರಿಂದ ಪಕ್ಷಕ್ಕೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಇತ್ತೀಚಿನ ಅವರ ವರ್ತನೆ ಗಮನಿಸಿದರೆ, ಪಕ್ಷದ ಸಂಘಟನೆಗೆ ಅವರಿಂದ ಸಾಕಷ್ಟು ಧಕ್ಕೆಯಾಗಿದೆ’.
- ಮಂಜುನಾಥ ಭಂಡಾರಿ
ಶಿವಮೊಗ್ಗ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಇತ್ತೀಚೆಗೆ ಕಾಂಗ್ರೆಸ್ ತೊರೆದಿರುವುದರಿಂದ ಈ ಮೊದಲೇ ಕುಮಾರ್ ಬಗ್ಗೆಯೂ ಇದೇ ಭವಿಷ್ಯ ನುಡಿಯಲಾಗಿತ್ತು. ಈಗ ಅದು ನಿಜವಾಗುತ್ತಿದೆ. ಆದರೆ ಕುಮಾರ್ ಕಾಂಗ್ರೆಸ್ ತೊರೆಯುವುದರಿಂದ ಸೊರಬದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ಗೆ ಪೆಟ್ಟು ಬೀಳುವುದು ನಿಶ್ಚಿತ. ಜೊತೆಗೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕುಟುಂಬದವರೆಲ್ಲ ಆ ಪಕ್ಷದಿಂದ ದೂರಸರಿದಂತಾಗುತ್ತದೆ.
ಸೊರಬದಲ್ಲಿ ಕಾಂಗ್ರೆಸ್ಗೆ ಕಳೆದ ಎರಡು- ಮೂರು ಚುನಾವಣೆಯಿಂದೀಚೆಗೆ ಕುಮಾರ್ ಅವರಿಂದ ಏನೂ ಲಾಭವಾಗಿರಲಿಲ್ಲ. ಜಿಪಂ ಇರಲಿ, ತಾಪಂ ಇರಲಿ, ಎಲ್ಲದರಲ್ಲೂ ಕಾಂಗ್ರೆಸ್ ಪರಾಭವಗೊಂಡಿದೆ. ಇದಕ್ಕೆ ಸಹೋದರರ ಮಧ್ಯೆ ಇದ್ದ ದ್ವೇಷ ಸಹ ಕಾರಣ ಎನ್ನುವುದು ಒಂದೆಡೆಯಾದರೆ, ಹಾಲಿ ಶಾಸಕ ಮಧು ಬಂಗಾರಪ್ಪ ವರ್ಚಸ್ಸು ಸದ್ಯ ಚೆನ್ನಾಗಿದೆ. ಕಾಂಗ್ರೆಸ್ನಂತೆಯೇ ಬಿಜೆಪಿ ಸ್ಥ್ತಿತಿಯೂ ಅಲ್ಲಿದೆ. ಜಿಪಂನಲ್ಲಿ ಒಂದು ಸ್ಥಾನ ಮಾತ್ರ ಗೆದ್ದಿದೆ. ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಇಬ್ಬರು ವಿಫಲ ನಾಯಕರಾಗಿ ಅವರವರ ಪಕ್ಷದಲ್ಲಿದ್ದರು.
ಕುಮಾರ್ಗೆ ಸೊರಬದಲ್ಲಿ ಕೆಲವು ನಾಯಕರನ್ನು ಬಿಟ್ಟರೆ ಕಾರ್ಯಕರ್ತರ ಬೆಂಬಲ ತೀರಾ ಕಡಿಮೆ ಇತ್ತು. ಯಾವಾಗ ಬಂಗಾರಪ್ಪ ಕಾಂಗ್ರೆಸ್ಸನ್ನು ಬಿಟ್ಟರೋ ಅಂದಿನಿಂದಲೇ ಕುಮಾರ್ ರಾಜಕೀಯ ಜೀವನವೂ ಅಧೋಗತಿಯಲ್ಲಿತ್ತು. ಬಂಗಾರಪ್ಪ ನಂತರ ಬಿಜೆಪಿ ಸೇರಿದಾಗ ಕುಮಾರ್ ಸಹ ಬಿಜೆಪಿ ಹೊಸ್ತಿಲು ತುಳಿದು ಕೇವಲ 21 ದಿನದಲ್ಲಿ ಮರಳಿ ಕಾಂಗ್ರೆಸ್ಗೆ ಬಂದಿದ್ದರು. ಆದರೆ ಅವರ ಭವಿಷ್ಯವೂ ಉಜ್ವಲವಾಗಲಿಲ್ಲ. ಇಂದಿಗೂ ಅವರು ರಾಜಕೀಯದಲ್ಲಿ ಮೇಲೇಳಲೇ ಇಲ್ಲ.
ಬಂಗಾರಪ್ಪ ನಾಮಬಲ:
ಬಂಗಾರಪ್ಪ ನಂತರ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಸ್ವಂತ ಬಲಕ್ಕಿಂತ ತಂದೆ ಎಸ್.ಬಂಗಾರಪ್ಪ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡಿದ್ದೇ ಅಧಿಕ. ಏಕೆಂದರೆ ಇಬ್ಬರಿಗೂ ಆಗಲೇ ಕ್ಷೇತ್ರದಲ್ಲಿ ವರ್ಚಸ್ಸು, ನೆಲೆ ಇಲ್ಲವಾಗಿತ್ತು. ಇಬ್ಬರ ಮಧ್ಯೆಯ ಆಸ್ತಿ ಜಗಳವೂ ತಾರಕಕ್ಕೇರಿತ್ತು. ಆದರೆ ನಂತರ ಕಳೆದ ಚುನಾವಣೆಯಲ್ಲಿ ಬಂಗಾರಪ್ಪ ನಾಮಬಲದಿಂದಲೇ ಮಧು ಗೆದ್ದುಬಂದರು. ಈ ಮೂಲಕ ಅವರು ನೆಲೆಕಂಡುಕೊಂಡರು. ಆದರೆ ಇಂದಿಗೂ ಅವರು ಜಪಿಸುವುದು ಬಂಗಾರಪ್ಪ ಹೆಸರನ್ನು. ಏಕೆಂದರೆ ಸೊರಬದ ಜನರಲ್ಲಿ ಇಂದಿಗೂ ಬಂಗಾರಪ್ಪ ನೆಲೆಸಿದ್ದಾರೆ.
ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ವಿರುದ್ದ ತಮ್ಮ ತಾಲೂಕಿನ ಆಶ್ರಯ ಸಮಿತಿಯ ನೇಮಕದಲ್ಲಾದ ಕೆಲವು ವೈರುಧ್ಯಗಳ ಸಂಬಂಧ ಜಗಳ ತೆಗೆದು ಸದಾ ಟೀಕಿಸತೊಡಗಿದರು. ಈ ಮಧ್ಯೆ ಮಧು ಅವರು ಕಾಗೋಡುಗೆ ಹತ್ತಿರವಾಗತೊಡಗಿದರು. ಇದರಿಂದ ಆಕ್ರೋಶಗೊಂಡ ಕುಮಾರ್, ಸೊರಬಕ್ಕೆ ಬಂದಾಗಲೆಲ್ಲ ವಾಗ್ಬಾಣವನ್ನೇ ಹರಿಯಬಿಟ್ಟರು. ಈ ಸಂಬಂಧ ಜಿಲ್ಲಾ ಕಾಂಗ್ರೆಸ್ ಎಷ್ಟೇ ಎಚ್ಚರಿಕೆ ಕೊಟ್ಟರೂ ಅದನ್ನು ನಿರ್ಲಕ್ಷಿಸಿಯೇ ಮುನ್ನಡೆದರು. ಇದಕ್ಕೂ ಮುನ್ನ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗೋಡು ತನ್ನ ಪರ ನಿಲ್ಲದೆ ಮಧು ಪರ ಕೆಲಸ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ಈ ಎರಡು ಪ್ರಮುಖ ಕಾರಣದಿಂದ ಕುಮಾರ್ ಬಿಜೆಪಿ ಸೇರಬಹುದೆಂಬ ಮಾತು ಕೇಳಿಬಂದಿತ್ತು. ಆದರೆ ಈಗ ನಿಜವಾಗತೊಡಗಿದೆ.
ಮೂರನೆಯದಾಗಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರನೆಯ ಸ್ಥಾನಕ್ಕೆ ಅವರು ತೃಪ್ತಿ ಪಡಬೇಕಾಯಿತು. ಇದರ ನಂತರ ಸೊರಬದಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಮಾಡಲೇ ಇಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದರು. ಇದರಿಂದ ಸೊರಬದಲ್ಲಿ ತಾ.ಪಂ., ಜಿ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಹೀನಾಯ ಸೋಲುಂಡಿತು ಎನ್ನುವ ಬಲವಾದ ಆರೋಪ ಇದೆ. ತಾಲೂಕಲ್ಲಿ ಪಕ್ಷಕ್ಕೆ ನೆಲೆ ಇಲ್ಲದಿರುವುದು, ಜಿಲ್ಲಾ ಸಚಿವ ಮತ್ತು ಕಾಂಗ್ರೆಸ್ ನಾಯಕರ ವಿರೋಧವನ್ನು ಮೊದಲೇ ಕಟ್ಟಿಕೊಂಡಿದ್ದು, ಮುಂದೆ ತನಗೆ ಟಿಕೆಟ್ ಕೈತಪ್ಪಲು ಕಾರಣವಾಗುತ್ತದೆ ಎಂದರಿತು ಪಕ್ಷ ಬಿಡುವ ಯೋಚನೆ ಮಾಡಿದ್ದಾರೆಂದು ವಿಶ್ಲೇಷಿಸಬಹುದಾಗಿದೆ.
ನಾಲ್ಕನೆಯದಾಗಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಇನ್ನಿಲ್ಲದ ಹರಸಾಹಸ ಮಾಡಿದ್ದ ಕುಮಾರ್ಗೆ ಕೊಗೂ ಟಿಕೆಟ್ ಸಿಗಲೇ ಇಲ್ಲ. ಜಿಲ್ಲೆಯ ಬಹುತೇಕ ನಾಯಕರು ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಪರ ನಿಂತಿದ್ದರು. ಇದರಿಂದ ಟಿಕೆಟ್ ಭಂಡಾರಿ ಪಾಲಾದಾಗ ಕುಮಾರ್ ಬಂಡಾಯ ಸಾರಿದ್ದರು. ನಂತರ ಸುಮ್ಮನಾದರೂ ಗುಟ್ಟಾಗಿ ಪಕ್ಷ ವಿರೋಧಿ ಕೆಲಸ ಮಾಡಿದ್ದು ಬಹಿರಂಗವಾಯಿತು. ಈ ಎಲ್ಲ ಕಾರಣಗಳಿಂದ ಅವರು ವಿಶ್ವಾಸ ಕಳೆದುಕೊಂಡಿದ್ದರು. ತನ್ನ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತ ಈಗ ಬಿಜೆಪಿ ಪ್ರವೇಶಿಸುವ ಹಂತಕ್ಕೆ ಬಂದು ನಿಂತಿದ್ದಾರೆ.
ವಕೀಲ ಲಕ್ಷ್ಮೀಕಾಂತ್ ಚಿಮನೂರು ಕಾಂಗ್ರೆಸ್ ಅಭ್ಯರ್ಥಿ?
ಸೊರಬ ವಿಧಾನಸಭಾ ಕ್ಷೇತ್ರದಿಂದ ಶತಾಯಗತಾಯ ಕುಮಾರ್ ಬಂಗಾರಪ್ಪಗೆ ಟಿಕೆಟ್ ತಪ್ಪಿಸಲು ಕಾಂಗ್ರೆಸ್ನಲ್ಲಿರುವ ಅವರ ವಿರೋಧಿ ಪಾಳೇಯ ಸಿದ್ಧತೆ ನಡೆಸಿತ್ತು. ವಿಶೇಷವಾಗಿ ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಕುಮಾರ್ ಬಂಗಾರಪ್ಪಗೆ ಟಾಂಗ್ ನೀಡುವ ಉದ್ದೇಶದಿಂದಲೇ ಸೊರಬ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿ ಕಾರ್ಯ ಚಟುವಟಿಕೆ ನಡೆಸುತ್ತಿದ್ದರು.
ಸೊರಬ ಕ್ಷೇತ್ರದ ಯುವಕ, ವಕೀಲ, ಈಡಿಗ ಸಮುದಾಯಕ್ಕೆ ಸೇರಿದ ಲಕ್ಷ್ಮೀಕಾಂತ್ ಚಿಮನೂರ್ಗೆ ಟಿಕೆಟ್ ಕೊಡಿಸುವ ಇರಾದೆ ಹೊಂದಿದ್ದರು. ಲಕ್ಷ್ಮೀಕಾಂತ್ ಚಿಮನೂರು ಕೂಡ ಕ್ಷೇತ್ರದಾದ್ಯಂತ ಈಗಾಗಲೇ ಓಡಾಡುತ್ತಿದ್ದಾರೆ. ಈ ನಡುವೆ ಕುಮಾರ್ ಬಂಗಾರಪ್ಪರವರು ಕಾಂಗ್ರೆಸ್ ತೊರೆಯುವುದು ಖಚಿತವಾಗಿದೆ. ಇದರಿಂದ ಮಂಜುನಾಥ ಭಂಡಾರಿ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮೀಕಾಂತ್ಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.
ಲಕ್ಷ್ಮೀಕಾಂತ್ ಅವರ ಅಜ್ಜ ಚಿಮನೂರು ಬಂಗಾರಪ್ಪ ಅವರ ಹೆಸರು ಸೊರಬ ರಾಜಕೀಯದಲ್ಲಿ ಚಿರಪರಿಚಿತ. ಅವರು ಮಾಜಿ ಸಿಎಂ ಬಂಗಾರಪ್ಪ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಜೊತೆಗೆ ಹಲವು ಬಾರಿ ಅವರ ವರ್ತನೆಯ ವಿರುದ್ದ ಸಿಡಿದೆದ್ದಿದ್ದರು. 1994 ರಲ್ಲಿ ಅವರ ವಿರುದ್ದವೇ ಚುನಾವಣಾ ಕಣಕ್ಕೆ ಪ್ರವೇಶಿಸಿದ್ದರು. ಈಗ ಅವರ ಮೊಮ್ಮಗ ಲಕ್ಷ್ಮೀಕಾಂತ ವಿಧಾನಸಭಾ ಚುನಾವಣಾ ರಂಗ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
.............................

No comments:
Post a Comment