ಅಪರಾಧ ಕೃತ್ಯ: ಯುವಶಕ್ತಿ ಮುಂದೆ
ನಗರದ ಬಹುತೇಕ ಅಪರಾಧ ಕೃತ್ಯಗಳಲ್ಲಿ ಯುವಕರೇ ಹೆಚ್ಚು ಆರೋಪಿಗಳು
ಸುಲಭದಲ್ಲಿ ಹಣಗಳಿಸುವ ದಂಧೆ ಒಮ್ಮೆ ವಿದ್ಯಾರ್ಥಿಗಳಿಗೆ ಅಥವಾ ಯುವಜನತೆಗೆ ಎದುರಾದರೆ ಅದರಿಂದ ಇನ್ನಷ್ಟು ಶೋಕಿ ಜೀವನಕ್ಕೆ ಅವರು ಮಾರುಹೋಗುತ್ತಾರೆ. ವಿವಿಧ ಆಕರ್ಷಣೆಗಳು ಸಹ ಈ ರೀತಿ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿವೆ. ಒಮ್ಮೆ ದರೋಡೆ ಮಾಡಿದ ನಂತರ ಅದರಲ್ಲಿ ಯಶಸ್ವಿಯಾದರೆ ಇನ್ನೊಂದಷ್ಟು ಇಂತಹ ಕೃತ್ಯ ಮಾಡಲು ಆತ ಉದ್ಯುಕ್ತನಾಗುತ್ತಾನೆ. ಕಾನೂನು, ಪೊಲೀಸ್ ಎಲ್ಲರನ್ನೂ ನಿರ್ಲಕ್ಷಿಸುತ್ತಾನೆ. ಹೆಚ್ಚು ಹೆಚ್ಚು ಹಣ ಸಂಪಾದಿಸುವುದರತ್ತ ಆತನ ಗುರಿ ಇರುತ್ತದೆ. ತಾನು ಮಾತ್ರವಲ್ಲ, ಇತರ ಕೆಲವು ಯುವಕರನ್ನು ಇದಕ್ಕೆ ಬಳಸಿಕೊಳ್ಳುತ್ತಾನೆ. ಇದರಿಂದ ಅವರೂ ಕೂಡ ಹಾದಿ ತಪ್ಪುತ್ತಾರೆ. ಯುವಜನತೆ ಅಪರಾಧ ಕೃತ್ಯದಲ್ಲಿ ಹೆಚ್ಚು ಹೆಚ್ಚು ಸಿಕ್ಕಿಬೀಳುತ್ತಿರುವುದು ನಿಜಕ್ಕೂ ಆತಂಕದ ವಿಚಾರ.
- ಎಸ್ಪಿ ಅಭಿನವ್ ಖರೆ
ಅಂದು 2016ರ ಸೆಪ್ಟೆಂಬರ್ 12. ಐವರು ಯುವಕರು ಬೈಕಿನಲ್ಲಿ ರಾತ್ರಿ ವೇಳೆ ಸುತ್ತಾಡುತ್ತಾ, ರಸ್ತೆಯಂಚಿನ ಸ್ಟಾಲಲ್ಲಿ ಟೀ ಕುಡಿಯುತ್ತಾ, ಸಿಗರೇಟು ಎಳೆಯುತ್ತಾ ನಿಲ್ಲುತ್ತಾರೆ. ಇಷ್ಟೆಲ್ಲಾ ಆದ ಮೇಲೆ ಮತ್ತೆ ರೌಂಡ್ ಹೊಡೆಯುವ ಆಸೆ ಹುಟ್ಟುತ್ತದೆ. ಹೀಗೆ ಬೆಳಗಿನ ಜಾವ 4 ಗಂಟೆಯವರೆಗೆ ಸುತ್ತುತ್ತಾ ಬೈಪಾಸ್ ಬಳಿ ಬರುತ್ತಾರೆ. ಆ ವೇಳೆ ಎಷ್ಟೋ ದೂರದಿಂದ ಸರಕು ಸಾಗಾಣೆಯ ಲಾರಿ ಚಾಲಕ ಬಂದು ನಿಲ್ಲಿಸಿ ನಿದ್ದೆಗೆ ಶರಣಾಗುತ್ತಾನೆ. ಅಂಡಲೆಯುತ್ತಿದ್ದ ಈ ಯುವಕರ ಗುಂಪಿಗೆ ಲಾರಿ ಹೊರರಾಜ್ಯದ್ದು ಮತ್ತು ತುಂಬಾ ಸರಕು ಇರುವುದು ಗಮನಕ್ಕೆ ಬಂದು ಚಾಲಕನಲ್ಲಿ ಅಪಾರ ಹಣವಿರಬಹುದೆಂದು ಊಹಿಸುತ್ತಾರೆ. ಎಲ್ಲಿಂದಲೋ ಮಾರಕಾಸ್ತ್ರ ತರುತ್ತಾರೆ. ಲಾರಿಗೆ ಏಕಾಏಕಿ ನುಗ್ಗಿ ಹಣ ಕೊಡುವಂತೆ ಮಾರಕಾಸ್ತ್ರದಿಂದ ಹೆದರಿಸುತ್ತಾರೆ. ಭಯಗೊಂಡ ಚಾಲಕ ಮತ್ತು ಕ್ಲೀನರ್ ಜೀವ ಉಳಿದರೆ ಸಾಕೆಂದು ತಮ್ಮಲ್ಲಿದ್ದ ನಗದು 55 ಸಾವಿರ ರೂ. ಮತ್ತು ಮೊಬೈಲ್, ವಾಚು ಕೊಟ್ಟುಬಿಡುತ್ತಾರೆ.
ಗುಂಪಿನಲ್ಲಿದ್ದ ಐವರು ತಲಾ 11 ಸಾವಿರದಂತೆ ಹಂಚಿಕೊಂಡು ಮನೆಗೆ ಹೋಗಿ ಮಲಗುತ್ತಾರೆ. ಮತ್ತೆ ಸಂಜೆ ಸೇರುತ್ತಾರೆ. ಶ್ರಮವಿಲ್ಲದೆ ಹಣ ಲೂಟಿ ಮಾಡಿದ್ದನ್ನು ಸ್ಮರಿಸುತ್ತ ಇದನ್ನು ಮತ್ತೆ ಇನ್ನು ಕೆಲವರನ್ನು ಸೇರಿಸಿಕೊಂಡು ಮುಂದುವರೆಸಲು ನಿರ್ಧರಿಸುತ್ತಾರೆ. ಇದಾದ ಎರಡು ದಿನದ ನಂತರ ಮತ್ತೆ ಸ್ಕೆಚ್ ಹಾಕುತ್ತಾರೆ. ಕಿಸೆಯಲ್ಲಿ ಚಾಕು, ಸಣ್ಣದೊಂದು ಕತ್ತಿ, ಮಚ್ಚು ಇಟ್ಟುಕೊಂಡು ಕತ್ತಲಾಗುತ್ತಿದ್ದಂತೆಯೇ ನಗರ ಸಂಚಾರಕ್ಕಿಳಿಯುತ್ತಾರೆ. ಕೆ.ಆರ್. ಪುರಂ ರಸ್ತೆಯಲ್ಲಿ ರಾತ್ರಿ 10:30ರ ವೇಳೆ ಜನಸಂದಣಿ ಸ್ವಲ್ಪ ಕಡಿಮೆ ಇರುತ್ತದೆ. ವ್ಯಕ್ತಿಯೊಬ್ಬರು ನಡೆದು ಬರುತ್ತಿರುತ್ತಾರೆ. ಅವರನ್ನು ಕಂಡಕೂಡಲೇ ದರೋಡೆ ಮಾಡುವ ಯೋಚನೆ ಹೊಳೆಯುತ್ತದೆ. ದೂರದಿಂದ ಅವರಿಗೆ ಕಲ್ಲಿನಲ್ಲಿ ಹೊಡೆಯುತ್ತಾರೆ. ನಂತರ ಹತ್ತ್ತಿರ ಬಂದು ಬ್ಲೇಡ್ ತೋರಿಸಿ ಹಣಕ್ಕಾಗಿ ಒತ್ತಾಯಿಸುತ್ತಾರೆ. ಹಣ ಕೊಡಲೊಲ್ಲೆ ಎಂದಾಗ ಬ್ಲೇಡ್ನಿಂದ ಕುತ್ತಿಗೆಗೆ ಗಾಯಮಾಡುತ್ತಾರೆ. 2200 ರೂ. ಕಿತ್ತುಕೊಂಡು ಕಾಲ್ಕೀಳುತ್ತಾರೆ.
ಇದು ಯಾವ ಸಿನಿಮಾ ಕತೆಯಲ್ಲ. ನಗರದ 11 ಯುವಕರು ಶ್ರಮವಿಲ್ಲದೆ ಹಣಗಳಿಸುವ ಮಾರ್ಗವನ್ನು ಕಂಡುಕೊಂಡ ರೀತಿ. ಈ ಯುವಕರು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಮೇಲಿನ ಎರಡು ಘಟನೆ ನಂತರ ತಾವು ಯಶಸ್ವಿ ದರೋಡೆಕೋರರಾಗಿದ್ದರಿಂದ ಇನ್ನೂ ನಾಲ್ಕು ದರೋಡೆ ಮಾಡಿದ್ದಾರೆ. ಆದರೆ ಅಲ್ಲಿಗೆ ಅವರ ನಸೀಬು ಕೈಕೊಟ್ಟಿತ್ತು. ಪೊಲೀಸರು ಕಾದು ಕುಳಿತಿದ್ದರು. ಅವರ ದಾಳಕ್ಕೆ ಸಿಕ್ಕುಬಿದ್ದು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.
ಯುವಕರು ಶೋಕಿಗಾಗಿ ತಮ್ಮ ಯೌವ್ವನವನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ. ಶ್ರಮವಹಿಸಿ ದುಡಿದು ಕುಟುಂಬವನ್ನು ಸಾಕುವುದರ ಜೊತೆಗೆ ಆರ್ಥಿಕವಾಗಿ ಬಲಿಷ್ಠವಾಗುವುದನ್ನು ಯೋಚಿಸುವ ಅಥವಾ ಜೀವನದ ದಾರಿಯನ್ನು ಕಂಡುಕೊಳ್ಳುವುದನ್ನು ಬಿಟ್ಟು ಮೋಜು-ಮೇಜವನಿಗಾಗಿ ತಪ್ಪು ದಾರಿ ತುಳಿಯುತ್ತಿದ್ದಾರೆ,ಜೈಲು ಪಾಲಾಗುತ್ತಿದ್ದಾರೆ. ಇದೇ ರೀತಿಯ ಇನ್ನೂ ಎರಡು ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಯುವಕರು 2 ತಿಂಗಳಲ್ಲಿ ಶಿವಮೊಗ್ಗದಲ್ಲಿ ಸೆರೆಮನೆ ಸೇರಿದ್ದಾರೆ.
ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಯುವಕರಾಗಿ, ಸಮಾಜಮುಖಿಯಾಗಿ ಬಾಳುವುದನ್ನು ಕಲಿಯಬೇಕಿದ್ದ ವಯಸ್ಸಿನಲ್ಲಿ ಮಾಡಬಾರದ ಕೆಲಸಕ್ಕೆ ಕೈ ಹಾಕಿ ಇಡೀ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಮೋಜಿನ ಜೀವನದ ಬಯಕೆ. ಕೈಲೊಂದು ಆಧುನಿಕ ಮಾಡೆಲ್ ಬೈಕ್, ಬೆಲೆಬಾಳುವ ಮೊಬೈಲ್, ಸದಾ ಹೊಗೆ ಹಾರುವ ಸಿಗರೇಟು, ಸಂಜೆಯಾಯಿತೆಂದರೆ ಬಾರಿನಲ್ಲಿ ಕಾರುಬಾರು, ಹಣ ಬೇಕೆಂದರೆ ಮತ್ತೆ ದರೋಡೆಗಿಳಿಯುವುದು.
ವಿದ್ಯಾರ್ಥಿ ಜೀವನದಲ್ಲೇ ಕೆಟ್ಟ ಸಹವಾಸಕ್ಕೆ ಬಿದ್ದು, ಬೇಡದ ಚಟಗಳನ್ನು ಅಂಟಿಸಿಕೊಂಡು ಕುಟುಂಬದವರೊಂದಿಗೆ ಜಗಳವಾಡುತ್ತ ಅವರಿಗೇ ಹೊರೆಯಾಗುತ್ತಿರುವುದು ಕಂಡುಬರುತ್ತಿದೆ. ಕುಟುಂಬದ ಜವಾಬ್ದಾರಿ ಹೊರುವುದನ್ನು ಬಿಟ್ಟು ಅವರಿಗೇ ಭಾರವಾಗುತ್ತಿದ್ದಾರೆ. ಇನ್ನೊಂದೆಡೆ ಬಹುತೇಕ ಸಂದರ್ಭಗಳಲ್ಲಿ ಪಾಲಕರಿಗೆ ತಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ., ಏನು ಮಾಡುತ್ತಾರೆ ಎನ್ನುವುದೇ ತಿಳಿದಿರುವುದಿಲ್ಲ. ಸಂಜೆಯಾಯಿತೆಂದರೆ ಮನೆಯಿಂದ ಹೊರಹೋಗುವುದು ಏಕೆ ಎಂದು ಯಾವ ಪಾಲಕರೂ ಪ್ರಶ್ನಿಸುವುದಿಲ್ಲ. ಮಕ್ಕಳು ದಾರಿತಪ್ಪುವಲ್ಲಿ ತಮ್ಮ ಪಾತ್ರವೂ ಇದೆ ಎನ್ನುವುದು ಅವರಿಗೆ ಗೊತ್ತ್ತಾಗುವ ವೇಳೆ ಮಕ್ಕಳು ಜೈಲು ಹಕ್ಕಿಯಾಗಿರುತ್ತಾರೆ.
18ರಿಂದ 23ರ ಯುವಕರೇ ಇತ್ತೀಚಿನ ಬಹುತೇಕ ಅಪರಾಧಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಹೆಸರಿಗೆ ಗಾರೆ ಕೆಲಸ, ಪೇಂಟಿಂಗ್, ಹಣ್ಣು, ತರಕಾರಿ ಮಾರಾಟ ಎಂದು ಹೇಳುತ್ತಾರೆ. ಆದರೆ ಎಲ್ಲೋ ಒಂದು ದಿನ ಕೆಲಸಕ್ಕೆ ಹೋಗುವುದು, ಉಳಿದ ದಿನ ಕೆಟ್ಟವರ ಸಹವಾಸಕ್ಕೆ ಬಿದ್ದು ದಾರಿ ತಪ್ಪಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಇಂತಹ ಯುವಶಕ್ತಿ ದೇಶದ ಆಶಾಕಿರಣವಾಗಬೇಕಿತ್ತು. ಭವ್ಯ ಭಾರತದ ನಿರ್ಮಾರ್ತೃರಾಗಬೇಕಾದವರು ದರೋಡೆಯಂತಹ ಕೃತ್ಯ ಎಸಗಿ ಸಿಕ್ಕಿಬೀಳುತ್ತಿದ್ದಾರೆ.
ಇದು ಪೊಲೀಸರಿಗೆ ಒಂದು ರೀತಿಯ ತಲೆನೋವನ್ನು ತಂದಿದ್ದರೆ, ಇನ್ನೊಂದೆಡೆ ಇಡೀ ಕುಟುಂಬದವರಿಗೆ ಅವಮಾನಕರ ವಿಚಾರ. ಸಮಾಜಕ್ಕೆ ಕಂಟಕಪ್ರಾಯರಾಗುತ್ತಿರುವ ಇಂತಹವರನ್ನು ಸರಿ ದಾರಿಗೆ ತರುವವರಾರು ಎನ್ನುವ ಪ್ರಶ್ನೆ ಮತ್ತೆ ನಮ್ಮ ಮುಂದೆ ಬೃಹದಾಕಾರವಾಗಿ ನಿಲ್ಲುತ್ತದೆ.
,,,,,,,,,,,,,,,,,,,,,,,,,,

No comments:
Post a Comment