ಶಾಲಾ ಬಸ್ ಕಾಳಜಿ: ಆಡಳಿತ ಮಂಡಳಿಗೂ ಇರಲಿ
* ಪೋಷಕರ ಆತಂಕ, ದುಗುಡ ತಪ್ಪಿಸಿ* ಚಾಲಕರನ್ನು ಗೌರವದಿಂದ ಕಾಣಲಿ
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಸಂಸ್ಥೆಯ ಬಸ್ಗಳನ್ನೇ ಅವಲಂಬಿಸಿದ್ದಾರೆ. ಶಾಲೆ ಮಗುವಿಗೆ ಅನುಕೂಲಕರ ದೂರದಲ್ಲಿದೆಯೇ ಎನ್ನುವುದನ್ನೂ ಸಹ ಗಮನಿಸದೆ ಕಳುಹಿಸುತ್ತಾರೆ. ಇದರ ಜೊತೆಗೆ ಶಾಲಾ ಬಸ್ಗಳ ಹೆಸರಲ್ಲೂ ಈ ಸಂಸ್ಥೆಗಳು ಹಣ ಗಳಿಸುತ್ತಿವೆ. ಆದರೆ ಚಾಲಕರನ್ನು ಮಾತ್ರ ಗೌರವದಿಂದ ಕಾಣದೆ, ಸರಿಯಾಗಿ ಸೌಲಭ್ಯ ಕೊಡದೆ, ಎಲ್ಲ ತಪ್ಪಿಗೂ ಅವರನ್ನೇ ಹೊಣೆ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. ಇದರಿಂದ ಚಾಲಕರ ಮನಃಸ್ಥಿತಿ ಕುಸಿಯುತ್ತಿದೆ. ತಾಂತ್ರಿಕ ಕಾರಣ ಹೊರತುಪಡಿಸಿದರೆ ಬಹುತೇಕ ಚಾಲಕರು ಬಸ್ನಲ್ಲಿ ಮಕ್ಕಳಿರುವ ವೇಳೆ ಯಾವುದೇ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಆದರೂ ಚಾಲಕರನ್ನು ಪರೀಕ್ಷಿಸುವ ಕೆಲಸವನ್ನು ಮಾಡುತ್ತಲೇ ಇರಬೇಕು.
ಚಾಲಕರೂ ಸಹ ಬೇಜವಾಬ್ದಾರಿ ಚಾಲನೆ ಮಾಡದೆ ಬಸ್ನಲ್ಲಿರುವ ಮಕ್ಕಳು ತಮ್ಮ ಮಕ್ಕಳು ಎಂಬ ಭಾವನೆಯಲ್ಲೇ ಚಾಲನೆ ಮಾಡಿದರೆ ಪೋಷಕರ, ಪಾಲಕರ ಆತಂಕವನ್ನು ತಪ್ಪಿಸಬಹುದು.
ಶಿವಮೊಗ್ಗ; ಶಾಲೆಗೆ ಮಕ್ಕಳನ್ನು ವಿವಿಧ ಬಡಾವಣೆಗಳಿಂದ ಕರೆದೊಯ್ಯಲು ಬಹುತೇಕ ವಿದ್ಯಾಸಂಸ್ಥೆಗಳು ಸ್ಪರ್ಧೆಯೆಂಬಂತೆ ಬಸ್ಗಳನ್ನು ಓಡಿಸುತ್ತಿದ್ದಾರೆ. ಬಸ್ ಚಾಲಕರು ಸ್ವಲ್ಪ ಎಡವಟ್ಟು ಮಾಡಿದರೂ ಬಸ್ನಲ್ಲಿರುವ ವಿದ್ಯಾರ್ಥಿಗಳಿಗೆ ಅಪಾಯ ಕಟ್ಟಿಟ್ಟದ್ದು. ಇದರಿಂದ ಪೋಷಕರು, ಪಾಲಕರು ಆತಂಕ, ದುಗುಡದಿಂದ ಮಕ್ಕಳನ್ನು ಕಳುಹಿಸುವ ಸ್ಥಿತಿ ಎದುರಾಗುತ್ತದೆ.
ನಿನ್ನೆ ನಗರದ ಖಾಸಗಿ ವಿದ್ಯಾಸಂಸ್ಥೆಯೊಂದರ ಬಸ್ಗಳೆರಡು ಡಿಕ್ಕಿ ಹೊಡೆದುಕೊಂಡು ಹಲವು ಮಕ್ಕಳು ಗಾಯಗೊಂಡಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಪಾಲಕರು ಎಚ್ಚರದಿಂದ ಇರುವಂತಾಗಿದೆ. ಶಾಲಾ ಬಸ್ಗಳು ಮಿತಿಮೀರಿದ ವೇಗ, ಓವರ್ಟೇಕ್ ಮಾಡುವಂತಹ ಸಾಹಸಕ್ಕೆ ಕೈ ಹಾಕಬಾರದು. ಚಾಲಕನೂ ಸಹ ತನ್ನ ಕೈಲಿ ಮಕ್ಕಳ ಜೀವವಿದೆ ಎನ್ನುವುದನ್ನು ಮೊದಲು ಅರಿಯಬೇಕಿದೆ. ಇವುಗಳ ಜೊತೆಗೆ, ಶಾಲಾ ಬಸ್ ಹೇಗಿರಬೇಕೆನ್ನುವ ಬಗ್ಗೆ ಶಿಕ್ಷಣ ಇಲಾಖೆ, ಆರ್ಟಿಓದಲ್ಲಿ ನಿಯಮವಿದೆ. ಈ ನಿಯಮ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವ ಪ್ರಶ್ನೆ ಇಂತಹ ಸಂದರ್ದಲ್ಲಿ ಉದ್ಭವಿಸುತ್ತದೆ.
ಎರಡನೆಯದಾಗಿ, ಎಲ್ಲಾ ಅಪಘಾತದ ಸಂದರ್ಭದಲ್ಲೂ ಶಾಲಾ ಬಸ್ ಚಾಲಕರದ್ದೇ ತಪ್ಪಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಬಸ್ ಚಾಲಕರು ಬಹುತೇಕ ಅನುಭವಿಗಳೇ ಆಗಿರುವುದು ಕಂಡುಬರುತ್ತಿದೆ. ಇದರಿಂದ ಅವರಿಗೆ ಬಸ್ ಓಡಿಸುವ ಪರಿ, ಮಕ್ಕಳೊಂದಿಗೆ ವರ್ತನೆ ಮೊದಲಾದವುಗಳ ಅರಿವಿರುತ್ತದೆ. ಆದರೆ ಈ ಬಸ್ ಚಾಲಕರಿಗೆ ನೆಮ್ಮದಿ ಹಾಳುಮಾಡುವವರೇ ವಿದ್ಯಾಸಂಸ್ಥೆಯವರು ಅಥವಾ ಶಾಲಾ ಮುಖ್ಯಸ್ಥರು ಎಂದು ವಿಷಾದದಿಂದ ಹೇಳಬೇಕಾಗಿದೆ.
ವಿದ್ಯಾಸಂಸ್ಥೆಗಳು ರೂಟ್ ಲೆಕ್ಕದಲ್ಲಿ ಬಸ್ ಓಡಿಸುತ್ತಾರೆ. ಶಾಲೆಗೆ ನಿಗದಿತ ವೇಳೆಗೆ ಬರಬೇಕೆಂದು ಗಡುವು ವಿಧಿಸುತ್ತಾರೆ. ಈಗಿನ ಟ್ರಾಫಿಕ್ ಒತ್ತಡದಿಂದ ಬಸ್ ಸ್ವಲ್ಪ ವಿಳಂಬವಾದರೂ ಚಾಲಕನಿಗೆ ಬರೆ ಹಾಕುತ್ತಾರೆ. ಇನ್ನೊಂದೆಡೆ, ಚಾಲಕ ಮಕ್ಕಳನ್ನು ಬಿಟ್ಟು ಬರುವಂತಿಲ್ಲ. ಒಂದು ವೇಳೆ ಬಿಟ್ಟು ಬಂದರೆ ಮತ್ತ್ತೆ ಅದೇ ಚಾಲಕ ತಪ್ಪಿತಸ್ಥನಾಗುತ್ತಾನೆ. ಪೋಷಕರು ಬಂದು ದೂರು ಕೊಡುತ್ತಾರೆ. ಅದರ ಪರಿಣಾಮ ಚಾಲಕನ ಮೇಲೆ.
ಮತ್ತೊಂದೆಡೆ, ಮಕ್ಕಳು ಒಂದು ನಿಮಿಷ ತಡವಾಗಿ ಬಂದರೂ ಅವರನ್ನು ಕರೆತರುವ ಸ್ಥಿತಿ ಚಾಲಕನದ್ದು. ಪ್ರತಿ ಸ್ಟಾಪ್ನಲ್ಲಿ ನಿಗದಿತ ಮಕ್ಕಳಿರುತ್ತಾರೆ. ಅವರು ಬಂದಿಲ್ಲ ಎಂದರೆ ಬಿಟ್ಟು ಬಂದರೂ ಕಷ್ಟ. ಮತ್ತದೇ ದೂರು ಶಾಲಾ ಆಡಳಿತ ಮಂಡಳಿಗೆ ಬರುತ್ತದೆ. ಇಂತಹ ಸ್ಥಿತಿಯಲ್ಲಿ ಶಾಲಾವೇಳೆಗೆೆ ಬಸ್ ತರುವುದು ಕಷ್ಟವಾಗುತ್ತದೆ ಎನ್ನುವುದನ್ನು ಸ್ವತಃ ಚಾಲಕರೇ ಹೇಳುತ್ತಾರೆ. ಆದರೆ ಆಡಳಿತ ಮಂಡಳಿಯಾಗಲಿ, ಪ್ರಾಚಾರ್ಯರಾಗಲಿ ಚಾಲಕರ ಸಮಸ್ಯೆ ಬಗ್ಗೆ ಗಮನಹರಿಸುವುದೇ ಇಲ್ಲ. ಪಾಲಕರ ದೂರಿಗೆ ಗಮನ ಕೊಡುವಾಗ ಇದರಲ್ಲಿ ಸತ್ಯಾಂಶ ಇದೆಯೇ ಎನ್ನುವುದನ್ನೂ ಸಹ ಗಮನಿಸಬೇಕು. ಶಿಸ್ತಿನ ಹೆಸರಲ್ಲಿ ಚಾಲಕನನ್ನೇ ತಪ್ಪಿತಸ್ಥ ಎಂದು ನಿರ್ಣಯಿಸಿಬಿಡುವುದು, ಆತನಿಗೆ ಬೇರೆ ಬೇರೆ ತರಹದ ತೊಂದರೆ, ಕಿರುಕುಳ ಕೊಡುವುದು ಸರಿಯಲ್ಲ. ಇದನ್ನೆಲ್ಲ ಸಹಿಸಿಕೊಂಡ ಚಾಲಕ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ. ಕೆಲವು ವೇಳೆ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ವೇಳೆ ಸಂಸ್ಥೆ ಆತನ ಬಗ್ಗೆ ಗಮನಹರಿಬೇಕಾಗುತ್ತದೆ.
ಮೂರನೆಯದಾಗಿ, ಪಾಲಕರೂ ಸಹ ತಮ್ಮ ಮಕ್ಕಳನ್ನು ಬಸ್ ಸ್ಟಾಪ್ಗೆ ನಿಗದಿತ ವೇಳೆಗೆ ಕಳುಹಿಸುವುದು ತಮ್ಮ ಜವಾಬ್ದಾರಿ ಎನುವುದನ್ನು ಮರೆತುಬಿಟ್ಟಿದ್ದಾರೆ. ಕೇವಲ ದೂರುವುದನ್ನೇ ಕೆಲವರು ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಚಾಲಕರೂ ಸಹ ಸಹಜವಾಗಿಯೇ ಕರ್ತವ್ಯದ ಬಗ್ಗೆ ನಿರಾಸಕ್ತರಾಗುವಂತಾಗುತ್ತದೆ. ಇದೆಲ್ಲವುಗಳಿಗೆ ಪರಿಹಾರವೆಂದರೆ, ವಿದ್ಯಾಸಂಸ್ಥೆಗಳು ಚಾಲಕರ ಬಗ್ಗೆ ತಮ್ಮ ಸಿಬ್ಬಂದಿ ಎಂಬ ಹೆಮ್ಮೆಯನ್ನು ಮೊದಲು ತಾಳಬೇಕಿದೆ. ಅವರ ಕಷ್ಟ-ಸುಖಗಳಿಗೆ ಸ್ಪಂದಿಸಲು ಒಂದಷ್ಟು ವೇಳೆಯನ್ನಿಟ್ಟುಕೊಳ್ಳಬೇಕು. ವೃತ್ತಿಗೆ ಸಂಬಂಧಿಸಿ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಅವರು ತಪ್ಪು ಮಾಡಿದಲ್ಲಿ ಮಾತ್ರ ಕ್ರಮ ಜರುಗಿಸಬೇಕೇ ವಿನಾ ಸಂಬಳ ಕೊಡುತ್ತೇವೆಂಬ ಏಕೈಕ ಕಾರಣಕ್ಕೆ ಕೇಳಿಬಂದ ಆರೋಪಕ್ಕೆಲ್ಲಾ ಅವರನ್ನೇ ಗುರಿಮಾಡಬಾರದು. ತಮ್ಮ ಸಂಸ್ಥೆಯ ವಾಹನದ ಗುಣಮಟ್ಟದ ಬಗ್ಗೆ ಆಗಾಗ ಗಮನ ಹರಿಸುವಂತಹ ಕೆಲಸವನ್ನು ಕೇವಲ ಚಾಲಕನಿಗೆ ಮಾತ್ರ ವಹಿಸದೆ ಸಂಸ್ಥೆಯವರೂ ಜವಾಬ್ದಾರಿ ಹೊರಬೇಕು. ಅಂದರೆ ಮಾತ್ರ ಉತ್ತಮ ವಾಹನ, ಉತ್ತಮ ಚಾಲಕನನ್ನು ಹೊಂದುವ ಮೂಲಕ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ.
.........................................

No comments:
Post a Comment