ಅಡಿಕೆಗೆ ಬೆಂಬಲ ಬೆಲೆ: ಯಾರಿಗೆ ಪ್ರಯೋಜನ?
ಶಿವಮೊಗ್ಗ: ಮಲೆನಾಡು, ಅರೆಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬೆಲೆಯುತ್ತಿರುವ ಅಡಿಕೆಗೆ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಅಡಿಕೆಗೆ ಸೂಕ್ತ ಪ್ರೋತ್ಸಾಹಕ ಕ್ರಮಗಳನ್ನು 2016 ನೆಯ ಸೀಸನ್ಗೆ ಮಾತ್ರ ಇದನ್ನು ಸೀಮಿತಗೊಳಿಸಿದೆ. ಈ ಯೋಜನೆಯು ಡಿ. 7 ರಿಂದ 31 ರವರೆಗಿನ ಅವಧಿಯಲ್ಲಿ ಜಾರಿಯಲ್ಲಿರುತ್ತದೆ. ಆದರೆ ಇದರ ಪ್ರಯೋಜನ ಬಹುತೇಕ ಬೆಳೆಗಾರರಿಗೆ ಸಿಗದಂತಾಗಿದೆ.
ಗರಿಷ್ಠ 40 ಸಾವಿರ ಮೆಟ್ರಿಕ್ ಟನ್ (28 ಸಾವಿರ ಚಾಲಿ ಅಡಿಕೆ ಮತ್ತು 12 ಸಾವಿರ ಕೆಂಪಡಿಕೆ) ಅಡಿಕೆಯನ್ನು ರಾಜ್ಯದ ಏಜನ್ಸಿಯ ಮೂಲಕ ಖರೀದಿಸಬಹುದಾಗಿದೆ. ಕೇಂದ್ರದ ಈ ಬೆಂಬಲ ಬೆಲೆಯ ಖರೀದಿ ಡಿ. 31ರವರೆಗೆ. ಈ ಅವಧಿಯನ್ನು ಇನ್ನೂ ಹೆಚ್ಚು ಅವಧಿಗೆ ವಿಸ್ತರಿಸಬೇಕಾದ ಅನಿವಾರ್ಯತೆ ಇದೆ.
ಕೆಂಪು ಅಡಿಕೆಗೆ 27 ಸಾವಿರ ಹಾಗೂ ಚಾಲಿ ಅಡಿಕೆಗೆ (ಪ್ರತಿ ಕ್ವಿಂಟಾಲ್ಗೆ) 25,100 ರೂ. ಘೋಷಣೆ ಮಾಡಿದೆ. ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಸಾಗರ ಮತ್ತು ಅರೆಮಲೆನಾಡಿನಲ್ಲಿ ಮಾತ್ರ ಈಗ ಅಡಿಕೆ ಕೊಯ್ಲು ನಡೆಯುತ್ತಿದೆ. ಇದು ಸುಲಿದು, ಒಣಗಿ, ಸಂಸ್ಕರಣೆಯಾಗುವವರೆಗೆ ಡಿಸೆಂಬರ್ ಮುಗಿದಿರುತ್ತದೆ. ಅಂದರೆ ಈಗಿನ ಗಡುವು ಯಾತಕ್ಕೂ ಸಾಲದು .
ಇನ್ನು ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಕರಾವಳಿ ಭಾಗದಲ್ಲಿ ಅಡಿಕೆ ಕೊಯ್ಲು ಆರಂಭವಾಗುವುದೇ ಡಿಸೆಂಬರ್ ಮಧ್ಯಭಾಗ ಅಥವಾ ಕೊನೆಯ ವಾರದಲ್ಲಿ. ಇದು ಫೆಬ್ರವರಿ ಅಂತ್ಯದವರೆಗೂ ಸಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕೊಯ್ಯುವವರು ಸಿಗದ ಕಾರಣ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಆದ್ದರಿಂದ ಈ ಬೆಂಬಲ ಬೆಲೆಯಿಂದ ಉತ್ತರ ಕನ್ನಡ ಮತ್ತು ಕರಾವಳಿಯವರಿಗೆ ಎಳ್ಳಷ್ಟೂ ಪ್ರಯೋಜನವಿಲ್ಲ.
ಎರಡನೆಯದಾಗಿ, ಬೆಂಬಲ ಬೆಲೆ ಕಡಿಮೆಯಾಯಿತೆಂದೇ ಹೇಳಬಹುದು. ಏಕೆಂದರೆ ಕ್ವಿಂಟಾಲ್ಗೆ ಸುಮಾರು 90 ಸಾವಿರವದವರೆಗೆ ರೇಟನ್ನು ಅಡಿಕೆ ಬೆಳೆಗಾರರು ಪಡೆದಿದ್ದಾರೆ. ಆದರೆ ಇತ್ತೀಚಿನ ಒಂದೆರಡು ವರ್ಷಗಳಲ್ಲಿ ದರ ಪಾತಾಳ ಕಂಡಿದ್ದರಿಂದ ಬೆಂಬಲ ಬೆಲೆಯ ಆಗ್ರಹ ಮಾಡಿದ್ದರು. ಹಿಂದೆಂದೂ ಇಂತಹ ಸ್ಥಿತಿ ಬಂದಿರಲಿಲ್ಲ. ಈಗ ಸತತ ದರ ಕುಸಿತದ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಕೇಳಿದ್ದರು. ಪ್ರಸ್ತುತ ಸಾಲಿನಲ್ಲಿ ಸುಮಾರು 30 ಸಾವಿರ ರೂ ಪ್ರತಿ ಕ್ವಿಂಟಾಲ್ಗೆ ಅಡಿಕೆ ದರವಿದೆ. ಆದ್ದರಿಂದ ಕನಿಷ್ಠ 35 ಸಾವಿರ ರೂ. ವಾದರೂ ಬೆಂಬಲ ಬೆಲೆ ಘೋಷಿತವಾಗಬಹುದೆನ್ನುವ ಲೆಕ್ಕಾಚಾರ ಅಡಿಕೆ ಬೆಳೆಗಾರರದ್ದಾಗಿತ್ತು. ಆದರೆ ಇದು ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಸಮಾಧಾನಕರ ಸಂಗತಿ ಎಂದರೆ, ಇನ್ನೂ ದರ ಕುಸಿತವಾಗುವ ಸಾಧ್ಯತೆ ಕಡಿಮೆಯಾಗಿದೆ. ಸ್ಥಿರತೆ ಬರಬಹುದೆನ್ನುವುದೊಂದೇ ನಿಟ್ಟುಸಿರು ಬಿಡುವಂತಹ ವಿಚಾರ.
ಬೆಂಬಲ ಬೆಲೆಯನ್ನು ಸರಕಾರ ಕನಿಷ್ಟ ಎಪ್ರಿಲ್ವರೆಗಾದರೂ ಮುಂದುವರೆಸಿದರೆ ಮಾತ್ರ ಎಲ್ಲ ಅಡಿಕೆ ಬೆಳೆಗಾರರಿಗೆ ಲಾಭವಾಗುತ್ತದೆ. ಇಲ್ಲವಾದರೆ ಕೆಲವೇ ಬೆಳೆಗಾರರು ಮಾತ್ರ ಇದರ ಲಾಭ ಪಡೆಯುವಂತಾಗುತ್ತದೆ. ಅಕ್ಕಪಕ್ಕದ ಜಿಲ್ಲೆಯಲ್ಲಿ ದೊಡ್ಡ ಹಿಡುವಳಿದಾರರ ಅಡಿಕೆ ಕೊಯ್ಲು ಮುಗಿಯುವಾಗಲೇ ಫೆಬ್ರುವರಿ ದಾಟುತ್ತದೆ. ಸಂಸ್ಕರಣೆಗೆ ಕೆಲವು ಕಾಲ ತಗುಲುತ್ತದೆ. ಹೀಗಾಗಿ ಅವಧಿಯನ್ನು ವಿಸ್ತರಿಸಿದರೆ ಮಾತ್ರ ಅನುಕೂಲವಾಗಲು ಸಧ್ಯ.
ಬೆಂಬಲ ಬೆಲೆಯಲ್ಲಿ ಖರೀದಿ ಮಿತಿಯನ್ನು 40 ಸಾವಿರ ರೂ. ಮೆಟ್ರಿಕ್ ಟನ್ಗೆ ನಿಗದಿಗೊಳಿಸಿದೆ. ಇದು ಅಡಿಕೆ ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಮಾರಾಟ ಮಾಡುವ ಅವಕಾಶವನ್ನು ಕ್ಷೀಣಿಸುವಂತೆ ಮಾಡಿದೆ. ರಾಜ್ಯದಲ್ಲಿ ವಾರ್ಷಿಕ 4.50 ಮೆಟ್ರಿಕ್ ಟನ್ನಷ್ಟು ಅಡಿಕೆ ಬೆಳೆಯಲಾಗುತ್ತಿದೆ. ಅಂದರೆ ಶೇ. 10ರಷ್ಟು ಮಾತ್ರ ಖರೀದಿಗೆ ಅವಕಾಶ ಕಲ್ಪಿಸಿದಂತಾಗಿದೆ.
ಅನಾವೃಷ್ಟಿ, ಬೆಲೆಯಲ್ಲಿ ಅಸ್ಥಿರತೆ, ಮಧ್ಯವರ್ತಿಗಳ ಹಾವಳಿ ಮೊದಲಾದವುಗಳಿಂದ ಕಂಗೆಟ್ಟಿದ್ದ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಮಾಧಾನ ನೀಡುವ ಪ್ರೋತ್ಸಾಹಕ ಕ್ರಮಗಳನ್ನು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ. ಇದರಿಂದ ಅತಿ ಹೆಚ್ಚಿನ ಅಡಿಕೆ ಬೆಳೆಗಾರರಿರುವ ಮಲೆನಾಡು ಭಾಗವೂ ಸೇರಿದ0ತೆ ರಾಜ್ಯದ ಎಲ್ಲಾ ಭಾಗಗಳಲ್ಲಿರುವ ಅಡಿಕೆ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎನ್ನುವುದು ಮಾತ್ರ ಸರಿಯಲ್ಲ.
ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಎನ್ನಬಹುದು. ರಾಜ್ಯದ 22 ಜಿಲ್ಲೆಯಲ್ಲಿ 2.15 ಹೆಕ್ಟೇರ್ನಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಉತ್ಪಾದನೆ 3.16 ಲಕ್ಷ ಟನ್ನಷ್ಟಿದೆ. ದೇಶದ ಅಡಿಕೆ ಉತ್ಪಾದನೆಯ ಶೇ. 47 ಭಾಗವನ್ನು ಕರ್ನಾಟಕವೊಂದೇ ಬೆಳೆಯುತ್ತಿದೆ. ಅಡಿಕೆ ಉತ್ಪಾದನೆ ಈಗ ಬೇಡಿಕೆಗಿಂತ ಹೆಚ್ಚಿದೆ. ನ್ಯಾಯಸಮ್ಮತ ಬೆಲೆ ಬೆಳೆಗಾರರಿಗೆ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಅಡಿಕೆ ಮಂಡಳಿ ಸ್ಥಾಪಿಸುವ ಚಿಂತನೆ ಆರಂಭವಾಗಿದೆ. ಅಡಿಕೆ ಬೆಳೆ ಮತ್ತು ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಿತವನ್ನು ರಕ್ಷಿಸುವ ಏಕೈಕ ಉದ್ದೇಶದಿಂದ ಅಡಿಕೆ ಮಂಡಳಿ ಸ್ಥಾಪನೆಯಾಗುವುದು ಒಳ್ಳೆಯದು ಎಂದು ಬೆಳೆಗಾರರು, ಸಹಕಾರಿಗಳು, ಸಂಶೋಧಕರು ಅಭಿಪ್ರಾಯಪಡುತ್ತಿದ್ದಾರೆ.
..............................

No comments:
Post a Comment