ರಾಸಲೀಲೆಯಿಂದ ರಾಡಿಯಾದ ರಾಜಕಾರಣ
ಸಾರ್ವಜನಿಕ ಕ್ಷೇತ್ರದಲ್ಲಿರುವವರು ತಮ್ಮ ಖಾಸಗಿ ಜೀವನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಮಾಜಕ್ಕೆ ಮಾದರಿಯಾಗಿರಬೇಕೇ ವಿನಾ ಇತರರು ಅಸಹ್ಯಪಡುವಂತಹ ರೀತಿಯಲ್ಲಿ ನಡೆದುಕೊಳ್ಳಬಾರದು. ಆದರಿಂದು ಅಧಿಕಾರ ಮತ್ತು ಹಣ ಬಂದಾಕ್ಷಣ ಮೈಮರೆಯುವವರೇ ಜಾಸ್ತಿಯಾಗುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳಲ್ಲಿ ವಿಶೇಷವಾಗಿ ಇಂತಹ ಗುಣ ರಾರಾಜಿಸುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿವುದು ಆತಂಕದ ವಿಚಾರವಾಗಿದೆ.
ಕೆಟ್ಟ ಕೆಲಸ ಮಾಡುವವರಿಗೆ ಜಾತಿ , ಪಕ್ಷ, ಪಂಗಡ, ಧರ್ಮ ಯಾವುದೂ ಇಲ್ಲ. ಜನರು ಮಾತ್ರ ಆ ಪಕ್ಷ, ಈ ಪಕ್ಷ ಎಂದು ಟೀಕಿಸುತ್ತ, ಕೆಸರೆರಚಿಕೊಳ್ಳುತ್ತಾರೆಯೇ ವಿನಾ ಅದನ್ನು ಮಾಡುವವನಿಗೆ ತನ್ನ ಮೈಮೇಲಿನ ಪರಿವೆಯೂ ಇರುವುದಿಲ್ಲ. ಎಲ್ಲಾ ಮೌಲ್ಯ ಮತ್ತು ಬದ್ಧತೆಯನ್ನು ಮರೆಯುತ್ತಾನೆ. ಅಧಿಕಾರ ಮತ್ತು ಹಣವೇ ಸರ್ವಸ್ವವಾಗುತ್ತದೆ. ಆ ಮದದಲ್ಲಿ ತಾನು ಏನು ಮಾಡಿದರೂ ದಕ್ಕಿಸಿಕೊಳ್ಳಬಲ್ಲೆ ಎನ್ನುವ ಅಹಂಭಾವದ ಅಮಲು ಆತನ ತಲೆಗೇರುತ್ತದೆ. ಕೊನೆಗೆ ಇದೇ ಆತನನ್ನು ಬಲಿತೆಗೆದುಕೊಳ್ಳುತ್ತದೆ.
ಇದಕ್ಕೆ ರಾಜ್ಯದ ಹಲವು ರಾಜಕಾರಣಿಗಳನ್ನು ಉದಾಹರಿಸಬಹುದು. ನಿನ್ನೆಯಷ್ಟೇ ರಾಸಲೀಲೆ ಮೂಲಕ ‘ಹೆಸರುವಾಸಿಯಾದ’ ಮಾಜಿ ಸಚಿವ ಎಚ್. ವೈ. ಮೇಟಿ ತಮ್ಮ ಇಳಿವಯಸ್ಸಿನಲ್ಲಿ ಇಂತಹ ಅನಾಚಾರಕ್ಕೆ ಕೈಹಾಕಿ ಭವಿಷ್ಯದ ಮೇಲೆ ಬರೆ ಎಳೆದುಕೊಂಡಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಘಟಿಸುತ್ತಿದ್ದರೂ ರಾಜಕಾರಣಿಗಳು ಮಾತ್ರ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.
ಈ ಹಿಂದೆ ಮಂತ್ರಿಯಾಗಿದ್ದ ಹರತಾಳು ಹಾಲಪ್ಪ, ರೇಣುಕಾಚಾರ್ಯ, ಎಸ್.ಎಸ್. ಪಾಟೀಲ್, ಲಕ್ಷ್ಮಣ ಸವದಿ, ಮಾಜಿ ಸಚಿವ ರಾಮದಾಸ್, ಹಾಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಇವರೆಲ್ಲ ವಿವಿಧ ರೀತಿಯಲ್ಲಿ ರಾಸಲೀಲೆ ಅಥವಾ ಬ್ಲೂಫಿಲ್ಮ್ ಮೂಲಕ ಸುದ್ದಿ ಮಾಡಿದವರೇ. ಇದು ಗೊತ್ತಿದ್ದೂ ಸಹ ರಾತ್ರಿ ಕಂಡ ಬಾವಿಯಲ್ಲಿ ನಮ್ಮ ರಾಜಕಾರಣಿಗಳು ಬೀಳುತ್ತಿದ್ದಾರೆ.
ಮೇಟಿ ವಿಚಾರ ಒಂದು ವಾರದಿಂದ ಗುಲ್ಲೆಬ್ಬಿಸಿದರೂ, ನಿನ್ನೆಯಷ್ಟೇ ರಾಜಿನಾಮೆ ಕೊಡುವ ಮಟ್ಟಕ್ಕೆ ತಲುಪಿದೆ. ರಾಸಲೀಲೆಯ ಸಿಡಿಯನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತ ಕೊನೆಗೂ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮೇಟಿ ಮಹಿಳೆಯೊಂದಿಗೆ ಕೃಷ್ಣಲೀಲೆ ನಡೆಸಿರುವುದು ಸಾಬೀತಾಗಿದೆ. ನಮ್ಮ ರಾಜಕಿಯ ಪಕ್ಷಗಳು ಆರೋಪ ಬಂದೊಡನೆ ಅದರ ಬಗ್ಗೆ ಕೂಡಲೇ ವಿಚಾರಣೆ ನಡೆಸಿ, ವರದಿ ತರಿಸುವುದನ್ನು ಬಿಟ್ಟು ಅವರನ್ನು ಸಮರ್ಥಿಸಿಕೊಳ್ಳುವುದಕ್ಕೆ ಮಹತ್ವ ಕೊಡುವ ಮೂಲಕ ಪ್ರಕರಣ ಇನ್ನಷ್ಟು ಬೆಳೆಯಲು, ಪ್ರತಿಪಕ್ಷಗಳಿಗೆ ಆಹಾರವಾಗಲು ಬಿಡುತ್ತಿವೆ. ಮೇಟಿ ವಿಚಾರದಲ್ಲಿ ಕಾಂಗ್ರೆಸ್ ಅಂದೇ ಕ್ರಮ ಜರುಗಿಸಿದ್ದರೆ ಇಷ್ಟೆಲ್ಲ ಸುದ್ದಿಯಾಗುತ್ತಿರಲಿಲ್ಲ.
ಜನಪ್ರತಿನಿಧಿಗಳು ತಮ್ಮ ಚಾರಿತ್ರ್ಯವನ್ನು ಉಳಿಸಿಕೊಳ್ಳುವತ್ತ ಗಮನಹರಿಸಬೇಕಿದೆ. ನೈತಿಕತೆ ಬಗ್ಗೆ ಭಾಷಣ ಮಾಡುವವರು ಅದರ ಅರ್ಥವನ್ನು ಅರಿಯದಾಗಿದ್ದಾರೆ. ಅಥವಾ ತಮಗೆ ಮಾತ್ರ ಅದು ಸಂಬಂಧಿಸಿದ್ದಲ್ಲ ಎಂದುಕೊಂಡಿದ್ದಾರೋ ಏನೋ....?. ಏಕೆಂದರೆ ಇಂಗ್ಲಿಷ್ನಲ್ಲಿ ಒಂದು ಮಾತಿದೆ: ‘‘ ನಡತೆ ಕೆಟ್ಟರೆ ಎಲ್ಲವನ್ನೂ ಕಳೆದುಕೊಡಂತೆ’’ ಎಂದು. ನಮ್ಮ ಜೀವನ ಪೂರ್ತಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಕೆಲವು ರಾಜಕಾರಣಿಗಳು ಇಂತಹ ಚಟಗಳಿಂದಾಗಿಯೇ ತಮ್ಮ ಸ್ಥಾನ, ಮಾನ ಕಳೆದುಕೊಂಡು, ರಾಜಕೀಯ ಜೀವನವನ್ನೇ ನಾಶಮಾಡಿಕೊಂಡ ಉದಾಹರಣೆ ಕಣ್ಮುಂದಿದೆ.
ಈ ಸಂದರ್ಭದಲ್ಲಿ ಸರ್ವಜ್ಞನ ತ್ರಿಪದಿಯೊಂದು ನೆನಪಾಗುತ್ತಿದೆ.
"ಕಚ್ಚೆ, ಕೈ, ಬಾಯಿ ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ, ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ"
-ಇವು ಮೂರು ಸರಿಯಾಗಿದ್ದರೆ ಲೋಕದಲ್ಲಿ ನಿಶ್ಚಿಂತೆಯಿಂದಿರಬಹುದೆನ್ನುವ ಅರ್ಥವನ್ನು ಈ ತ್ರಿಪದಿ ನೀಡುತ್ತದೆ. ಆದರೆ ಕೈ, ಬಾಯಿಯನ್ನು ಶುದ್ಧವಿಟ್ಟುಕೊಳ್ಳುವವರನ್ನು ಇಂದು ಜರಡಿ ಹಿಡಿದು ನೋಡಬೇಕಿದೆ. ಕಚ್ಚೆ ಹರಕುತನವೂ ಈಗ ಜೋರಾಗುತ್ತಿದೆ. ಸರ್ವಜ್ಞ ಇಂತಹವರನ್ನು ಗಮನಿಸಿಯೇ ಎಚ್ಚರಿಕೆ ಕೊಟ್ಟಿರಬಹುದು. ಅಥವಾ ಈ ಮಾತನ್ನು ಸಾಬೀತುಪಡಿಸಲೆಂದೇ ಇಂತಹ ರಾಜಕಾರಣಿಗಳು ಹುಟ್ಟಿರಬಹುದು.
್ದ ಎಚ್. ವೈ ಮೇಟಿ ಎಷ್ಟೇ ಒಳ್ಳೆಯವರಿದ್ದರೂ ರಾಸಲೀಲೆ ನಡೆಸುವ ಮೂಲಕ ತಮ್ಮ ಎಲ್ಲ ಒಳ್ಳೆಯತನವನ್ನು ರಾಸಲೀಲೆ ಮೂಲಕ ಕಳೆದುಕೊಂಡಿದ್ದಾರೆ. ಜೆಡಿಎಸ್ನಲ್ಲಿದ್ದು, ನಂತರ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್ಗೆ ಕಾಲಿಟ್ಟು, ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿದ್ದ ಇವರಿಗೆ ಇಳಿವಯಸ್ಸಿನಲ್ಲಿ ಇಂತಹ ಕೆಲಸ ಬೇಕಿತ್ತೇ ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಪ್ರಾಯಶಃ "ಮರ ಮುಪ್ಪಾದರೂ ಹುಳಿ ಮುಪ್ಪೇ" ಎನ್ನುವ ಮಾತು ಇಂಥವರನ್ನು ನೋಡಿಯೇ ಹುಟ್ಟಿಕೊಂಡಿರಬೇಕು. ಇದರ ಜೊತೆಗೆಯೇ ಅವರ ಗನ್ಮ್ಯಾನ್ ಮತ್ತು ರಾಸಲೀಲೆಯಲ್ಲಿ ಪಾಲ್ಗೊಂಡ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮಸಾಜ್ ಥೆರಪಿಸ್ಟ್ ಕೈವಾಡ ಇದರಲ್ಲಿದೆಯೇ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
"ಎನ್ನ ನಡೆಯೊಂದು ಪರಿ, ನುಡಿಯೊಂದು ಪರಿ
ಎನ್ನೊಳಗೇನೂ ಶುದ್ಧವಿಲ್ಲವಯ್ಯಾ"
-ಇದು ಸಮಾಜ ಸುಧಾರಕ ಬಸವಣ್ಣನವರು ತನ್ನನ್ನು ತಾನೇ ವಿಮರ್ಶೆಗೊಡ್ಡಿದ ವಚನದ ಸಾಲು. ನಮ್ಮ ರಾಜಕಾರಣಿಗಳಿಗೆ ಅದಾವ ಕಾಲಕ್ಕೆ ಈ ಮಾತಿನ ಮರ್ಮ ತಿಳಿದೀತು?
ಮೇಟಿಯವರ ರಾಸಲೀಲೆ ಬಯಲಾಗಿದೆ. ಇಂತಹ ರಾಜಕಾರಣಿಗಳಿಗೆ ಆಯಾಯ ಪಕ್ಷದವರು ಮೊದಲು ಗೇಟ್ಪಾಸ್ ಕೊಟ್ಟು ಮನೆಗಟ್ಟುವುದರ ಜೊತೆಗೆ ಮುಂದೆಯೂ ಇಂತಹ ಕೃತ್ಯ ಎಸಗುವವರಿಗೆ ಎಚ್ಚರಿಕೆ ಕೊಡಬೇಕಿದೆ. ರಾಜೀನಾಮೆ ಪಡೆಯುವುದಷ್ಟೇ ಶಿಕ್ಷೆಯಲ್ಲ ಎನ್ನುವುದನ್ನು ಪಕ್ಷಗಳು ಮನಗಾಣಬೇಕಾಗಿದೆ. ರಾಜಕಾರಣಿಗಳೆಂದರೆ ಕೆಟ್ಟ ಭಾವನೆ ಬರುವಂತಾಗದಿರಲು ಪಕ್ಷಗಳು ಸದ್ಗುಣಗಳ ಪಾಠ ಮಾಡಬೇಕಾದ ಸ್ಥಿತಿ ಎದುರಾಗಿರುವುದು ದುರಂತವೇ ಸರಿ.
,,,,,,,,,,,,,,,,,,,,,,,,,,,,,,,,

No comments:
Post a Comment