ಕೆರೆ ಒತ್ತುವರಿ ತೆರವು ನಾಟಕ ಅಂತ್ಯ?
**ಕಠಿಣ ಕ್ರಮಕ್ಕೆ ಮುಂದಾಗದ ಜಿಲ್ಲಾಡಳಿತ ** ನಗರದ ಕೆರೆಗಳ ಶಾಪ ವಿಮೋಚನೆ ಎಂದು?
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನಡೆದಿದ್ದು, ಅವುಗಳನ್ನು ತೆರವುಗೊಳಿಸಿ ಮತ್ತೆ ಕೆರೆಗಳು ನಳನಳಿಸುವಂತೆ ಮಾಡಬೇಕೆನ್ನುವ ಸದುದ್ದೇಶದಿಂದ ಹೋರಾಟ ಆರಂಭವಾದಾಗ ಅದಕ್ಕೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು. ಕಳೆದ ಮಳೆಗಾಲಕ್ಕೆ ಸ್ವಲ್ಪ ದಿನ ಮುಂಚೆ ಅಂದಿನ ಜಿಲ್ಲಾಧಿಕಾರಿಯವರೂ ಸಹ ಶಿವಮೊಗ್ಗ ಪಾಲಿಕೆ ಮತ್ತು ತಾಲೂಕು ವ್ಯಾಪ್ತಿಯ ಹಲವು ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವಿಗೆ ಮುಂದಾಗಿದ್ದರು. ಈ ಪ್ರಕಾರ ಕೆಲಸವೂ ನಡೆದಿತ್ತು. ಆದರೆ ಮಳೆಗಾಲದ ಹಿನ್ನೆಲೆಯಲ್ಲಿ ಕೆಲಸ ನಿಂತಿತ್ತು. ಎರಡನೆಯ ಹಂತದ ಕೆಲಸ ಆರಂಭವಾಗಿದ್ದು ಕಳೆದ ತಿಂಗಳು ನೂತನ ಜಿಲ್ಲಾಧಿಕಾರಿಯಾಗಿ ಡಾ. ಲೋಕೇಶ್ ಆಗಮಿಸಿದ ನಂತರ.
ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾದಾಗ ಭಾರೀ ಪ್ರಚಾರ ಕೂಡ ದೊರಕಿತ್ತು. ಒತ್ತುವರಿದಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳು ಘೋಷಿಸಿದ್ದರು. ನೆಪಮಾತ್ರಕ್ಕೆ ಒಂದೆರೆಡು ಕೆರೆಗಳ ಒತ್ತುವರಿ ತೆರವು ಮಾಡಿದ ಅಧಿಕಾರಿಗಳ ತಂಡವು ನಂತರ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲಿಲ್ಲ. ಪ್ರಭಾವಿಗಳಿಂದ ಒತ್ತುವರಿಯಾಗಿದ್ದ ಕೆರೆಗಳತ್ತ ಕಾಲು ಇಡಲಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಡಾ. ಎಂ. ಲೋಕೇಶ್ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಿದ್ದು, ತಿಂಗಳಲ್ಲಿ ಇಂತಿಷ್ಟು ದಿನಗಳ ಕಾಲ ತಮ್ಮ ತಾಲೂಕು ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಪರಿಣಾಮವಾಗಿ ಇಷ್ಟು ದಿನ ಅಕ್ಷರಶಃ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನೇ ಮರೆತಂತಿದ್ದ ತಾಲೂಕು ಆಡಳಿತಗಳು, ತಮ್ಮ ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವಿಗೆ ಕಾರ್ಯೋನ್ಮುಖವಾಗಿದ್ದವು. ಇದಕ್ಕೆ ಜಿಲ್ಲೆಯ ನಾಗರಿಕ ವಲಯದಿಂದ ಮುಕ್ತಕಂಠದ ಶ್ಲಾಘನೆ ಕೂಡ ವ್ಯಕ್ತವಾಗಿತ್ತು. ಕೆರೆಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಮಹತ್ತರ ನಿರ್ಧಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾದುದಾಗಿದೆ ಎಂದು ನಾಗರಿಕರು ಸಂತಸಪಟ್ಟಿದ್ದರು.
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ನಡೆದಿರುವ ಕೆರೆಗಳ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸದಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತಾಲೂಕು ಆಡಳಿತವಾಗಲಿ, ಮಹಾನಗರ ಪಾಲಿಕೆ ಆಡಳಿತವಾಗಲಿ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದಿರುವುದು, ಸಂಬಂಧಿಸಿದ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿರುವುದು ಹಲವು ರೀತಿಯ ಚರ್ಚೆಗಳಿಗೆ ಆಸ್ಪದವಾಗಿದೆ.
ಜಿಲ್ಲೆಯ ಇತರೆ ನಗರ-ಪಟ್ಟಣಗಳಿಗೆ ಹೋಲಿಕೆ ಮಾಡಿದರೆ, ಶಿವಮೊಗ್ಗ ನಗರದಲ್ಲಿ ದೊಡ್ಡ ಪ್ರಮಾಣದ ಕೆರೆಗಳನ್ನು ಕಬಳಿಸಲಾಗಿದೆ. ಹಲವೆಡೆ ಕೆರೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗಿವೆ. ಎಲ್ಲದಕ್ಕಿಂತ ವಿಶೇಷವೆಂದರೆ ಕೆರೆಗಳನ್ನು ಉಳಿಸಿ, ಸಂರಕ್ಷಣೆ ಮಾಡಬೇಕಾದ ಗುರುತರ ಜವಾಬ್ದಾರಿ ಹೊತ್ತಿರುವ ಜಿಲ್ಲಾಡಳಿತವೇ ಹಲವು ಸರ್ಕಾರಿ ಕಚೇರಿ, ಸಂಘಸಂಸ್ಥೆಗಳಿಗೆ ಕೆರೆಗಳನ್ನು ಧಾರೆ ಎರೆದು ಕೊಟ್ಟಿದ್ದು, ಇಂತಹ ಕೆರೆಗಳ ಪ್ರದೇಶಗಳಲ್ಲಿ ಬೃಹದಾಕಾರದ ಕಟ್ಟಡಗಳು ತಲೆಎತ್ತಿವೆ.
ಇನ್ನೊಂದೆಡೆ, ಕೆಲವು ಭೂಗಳ್ಳರು ವ್ಯವಸ್ಥಿತವಾಗಿ ಕೆರೆಗಳನ್ನು ಮುಚ್ಚಿ ಲೇಔಟ್ ನಿರ್ಮಿಸುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಕೆರೆ ಜಾಗಗಳಲ್ಲಿ ನಿವೇಶನ ರಚಿಸಿ ಪರಭಾರೆ ಮಾಡುತ್ತಿದ್ದಾರೆ. ನಗರದ ಹೊರವಲಯ ಗಾಡಿಕೊಪ್ಪದಲ್ಲಿ ಜಿಲ್ಲಾಧಿಕಾರಿಗಳೇ ಗೌರವಾಧ್ಯಕ್ಷರಾಗಿರುವ ಪ್ರತಿಷ್ಠಿತ ಕ್ಲಬ್ವೊಂದಕ್ಕೆ ಕಳೆದ ಹಲವು ವರ್ಷಗಳ ಹಿಂದೇ ನೀರಿನಿಂದ ತುಂಬಿ ತುಳುಕುತ್ತಿದ್ದ ಕೆರೆಯ ಪ್ರದೇಶವನ್ನು ಲೀಸ್ ಆಧಾರದ ಮೇಲೆ ನೀಡಲಾಗಿತ್ತು. ಕ್ಲಬ್ನವರು ಕೆರೆಗೆ ಮಣ್ಣು ತುಂಬಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಕೆರೆಯ ಇಕ್ಕೆಲಗಳಲ್ಲಿ ಖಾಸಗಿಯವರು ಒತ್ತುವರಿ ಮಾಡುತ್ತಿದ್ದು, ಹೇಳುವವರು ಕೇಳುವವರ್ಯಾರೂ ಇಲ್ಲದಂತಾಗಿದೆ.
ಇದೇ ಗಾಡಿಕೊಪ್ಪದ ಗೋಪಾಲಗೌಡ ಬಡಾವಣೆಗೆ ಹೊಂದಿಕೊಂಡಂತೆ ಜಿಲ್ಲಾಡಳಿತವೇ ಕೆರೆಯ ಪ್ರದೇಶವನ್ನು ಸರ್ಕಾರಿ ಕಚೇರಿಗಳಿಗೆ ನೀಡಿದೆ. ಕೆಆರ್ಐಡಿಎಲ್ ಕಚೇರಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣವಾಗುತ್ತಿವೆ. ಮತ್ತೊಂದೆಡೆ ಪುರಲೆ ಗ್ರಾಮದಲ್ಲಿರುವ ಕೆರೆಯನ್ನು ಕೆಲವು ಪ್ರಭಾವಿಗಳು ಅತಿಕ್ರಮಿಸಿದ್ದಾರೆ. ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಕೆರೆಗಳು ಲೇಔಟ್ಗಳಾಗಿ ಪರಿವರ್ತಿತವಾಗಿವೆ. ಆಲ್ಕೋಳ, ಕಾಶೀಪುರ, ಸೋಮಿನಕೊಪ್ಪ ಸೇರಿದಂತೆ ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಭಾರೀ ಪ್ರಮಾಣದಲ್ಲಿ ಕೆರೆಗಳು ಒತ್ತುವರಿಯಾಗಿವೆ.
ಬಾಕ್ಸ್
110 ರಲ್ಲಿ ಉಳಿದಿರುವುದು ಕೆಲವೇ ಕೆರೆಗಳು!
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸುಮಾರು 110 ಕ್ಕೂ ಅಧಿಕ ಕೆರೆಗಳಿವೆ ಎಂದು ಮಹಾನಗರ ಪಾಲಿಕೆ ಆಡಳಿತ ಹೇಳುತ್ತದೆ. ಆದರೆ ಜೀವಂತವಾಗಿರುವುದು 20 ರಿಂದ 30 ಕೆರೆಗಳು ಮಾತ್ರ. ಮುಕ್ಕಾಲು ಪಾಲು ಕೆರೆಗಳು ಒತ್ತುವರಿಯಾಗಿವೆ. ಮತ್ತೆ ಕೆಲವು ಒತ್ತುವರಿಯ ಹಂತದಲ್ಲಿವೆ. ಮಹಾನಗರ ಪಾಲಿಕೆ ಆಡಳಿತಕ್ಕಂತೂ ಕೆರೆ ಸಂರಕ್ಷಣೆಯ ಯಾವುದೇ ಆಸಕ್ತಿ ಇಲ್ಲವಾಗಿದೆ. ಉಳಿದಂತೆ ತಾಲೂಕು ಆಡಳಿತವು ಗಮನಹರಿಸುತ್ತಿಲ್ಲ. ಇನ್ನೊಂದೆಡೆ ಭೂಗಳ್ಳರು ಕೆರೆಗಳ ಕಬಳಿಕೆ ಮುಂದುವರಿಸಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಕೆರೆಗಳೇ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಲಿದೆ. ಇನ್ನಾದರೂ ಜಿಲ್ಲಾಧಿಕಾರಿ ನಗರ ವ್ಯಾಪ್ತಿಯಲ್ಲಿ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕಿದೆ.
-----------------------------------------------------

No comments:
Post a Comment