ದಿಟ್ಟ ಅಧಿಕಾರಿಣಿ ಈ ರೀತಿ ವರ್ತಿಸುತ್ತಿರುವುದೇಕೇ?
ಸಚಿವ ಪರಮೇಶ್ವರ್ ನಾಯ್ಕ ಅನುಪಮಾ ರಾಜಿನಾಮೆಗೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ. ಅನುಪಮಾ ಅವರ ವರ್ಗಾವಣೆ ಪ್ರಕರಣದ ನಂತರ ಎಲ್ಲೂ ಸಚಿವರ ಹೆಸರು ಈ ವಿಚಾರದಲ್ಲಿ ಕೇಳಿಬಂದಿಲ್ಲ. ಕೆಲಸ ಮಾಡಲು ಕೂಡ್ಲಿಗಿಯಲ್ಲಿ ತಮಗೆ ಸಾಧ್ಯವಿಲ್ಲ ಎಂದಾದಲ್ಲಿ ಹಿರಿಯ ಅಧಿಕಾರಿಗಳಿಗೆ ಮನದಟ್ಟು ಮಾಡಿ ಬೇರೆಡೆಗೆ ವರ್ಗಾಯಿಸಿಕೊಳ್ಳಬಹುದಿತ್ತು.
ಈ ಪ್ರಕರಣದಲ್ಲಿ ಸಚಿವರ ತಪ್ಪಿದ್ದರೆ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಅವರ ರಾಜಿನಾಮೆ ಪಡೆಯಬೇಕು ಅಥವಾ ವಜಾ ಮಾಡಬೇಕು. ಅನುಪಮಾ ಅವರಿಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸಬೇಕು. ಆದರೆ, ಅನಗತ್ಯವಾಗಿ ರಾಜ್ಯದಾದ್ಯಂತ, ರಾಷ್ಟ್ರದಾದ್ಯಂತ ಹಬ್ಬಿಸುವುದು ಸರಿಯಲ್ಲ. ಜನರೂ ಸಹ ಜಾತಿ-ಮತ ಬಿಟ್ಟು ವಿವೇಕಯುತವಾಗಿ ಯೋಚಿಸಬೇಕು. ಒಂದು ವೇಳೆ ಸಚಿವರದ್ದೇ ತಪ್ಪಿದೆ ಎಂದಾದಲ್ಲಿ ಅವರ ವಿರುದ್ದ ಹೋರಾಡಲ
ಅನುಪಮಾ ಶೆಣೈ ದಿಟ್ಟ ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ಹೆಸರಾದವರು. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪವಿಭಾಗದಲ್ಲಿ ಡಿವೈಎಸ್ಪಿಯಾಗಿ, ಅಲ್ಲಿನ ಲಿಕ್ಕರ್ ಲಾಬಿಯನ್ನು ಮಟ್ಟಹಾಕಲು ಯತ್ನಿಸಿದವರು. ಈ ದೇಶದಲ್ಲಿ ಅತಿ ಬಲಿಷ್ಠ ಮಾಫಿಯಾ ಅಗಿರುವ ಲಿಕ್ಕರ್ ಲಾಬಿ ಎಂದಿಗೂ, ಯಾರಿಗೂ ಮಣಿಯುವುದಿಲ್ಲ. ಇಲ್ಲಿ ಆಗಿದ್ದು ಅದೇ. ಪರಿಣಾಮವಾಗಿ, ಅನುಪಮಾ ಬೇಸತ್ತು ರಾಜಿನಾಮೆ ಕೊಟ್ಟು, ಅಜ್ಞಾತ ಸ್ಥಳದಿಂದ ಫೇಸ್ಬುಕ್ ಮೂಲಕ ಮಾತನಾಡುತ್ತಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಈ ರಾಜಿನಾಮೆ ಅಂಗೀಕರಿಸದಂತೆ ಗೃಹ ಇಲಾಖೆಗೆ ಸೂಚಿಸಿದ್ದಾರೆ.
ಮೂರ್ನಾಲ್ಕು ತಿಂಗಳ ಹಿಂದೆ ಬಳ್ಳಾರಿ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಅವರ ಮೊಬೈಲ್ ಕರೆಯನ್ನು ಸ್ವೀಕರಿಸದೇ ಇದ್ದ ಕಾರಣಕ್ಕೆ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಇದೂ ಸಹ ಒಂದಷ್ಟು ದಿನ ರಾದ್ಧಾಂತಕ್ಕೆ ಕಾರಣವಾಯಿತು. ನಂತರ ಮತ್ತೆ ಕೂಡ್ಲಿಗಿಯಲ್ಲೇ ಅವರನ್ನು ಮುಂದುವರೆಸಲಾಯಿತು. ಈಗ ಅನುಪಮಾ ಮತ್ತೆ ಪರಮೇಶ್ವರ್ ನಾಯ್ಕ ವಿರುದ್ದ ತಿರುಗಿಬಿದ್ದಿದ್ದಾರೆ. ಫೇಸ್ಬುಕ್ನಲ್ಲಿ ಅವರ ವಿರುದ್ದ ಹರಿಹಾಯುತ್ತಿದ್ದಾರೆ.
ಅನುಪಮಾ ವೈಯಕ್ತಿಕ ಕಾರಣಕ್ಕೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಪತ್ರ ಬರೆದಿರುವುದು ಮಾಧ್ಯಮದ ಮೂಲಕ ಬೆಳಕಿಗೆ ಬಂದಿದೆ. ವೈಯಕ್ತಿಕ ಎಂಬ ಪದದ ಅರ್ಥವೇ ಗೊತ್ತಿಲ್ಲದಂತೆ ಈಗ ಅವರು ವರ್ತಿಸುತ್ತಿರುವುದೂ ಸಹ ವಿಚಿತ್ರವೆನಿಸುತ್ತಿದೆ. ಎಷ್ಟೇ ಒಳ್ಳೆಯ ಅಧಿಕಾರಿಯಾದರೂ ತಮ್ಮ ಇತಿಮಿತಿಯಲ್ಲೇ ವರ್ತಿಸಬೇಕು. ರಮ್ ರಾಜ್ಯ ಎನ್ನುವ ಮೂಲಕ ಸರ್ಕಾರದ ವಿರುದ್ದವೇ ತಿರುಗಿಬಿದ್ದಂತಿದೆ. ಸರ್ಕಾರಿ ಅಧಿಕಾರಿಗೆ ಸೇವಾ ನಿಯಮಾವಳಿಗಳ ಶರತ್ತಿರುತ್ತದೆ. ಎಲ್ಲರಂತೆ ಅನಿಸಿಕೆ ಹಂಚಿಕೊಳ್ಳು, ಟೀಕಿಸಲು ಸಾಧ್ಯವಿಲ್ಲ. ಇದನ್ನು ಉಲ್ಲಂಘಿಸುವ ಮೂಲಕ ಕರ್ತವ್ಯಚ್ಯುತಿ ಎಸಗುತ್ತಿದ್ದಾರೆ. ಇದೆಲ್ಲ ಗೊತ್ತಿದ್ದೂ ರಾಜ್ಯದಲ್ಲಿ ರಾದ್ಧಾಂತವನ್ನಾಗಿಸಿ ಅನೇಕ ಜನರ ಬೆಂಬಲವನ್ನು ಅವರು ಪಡೆಯುತ್ತಿದ್ದಾರೆ. ಜೊತೆಗೆ ರಾಜೀನಾಮೆ ಕೊಟ್ಟ ನಂತರ ಈ ವಿಷಯಕ್ಕೆ ಅಲ್ಲಿಗೆ ಪೂರ್ಣವಿರಾಮ ಬಿದ್ದಂತೆ. ಆದರೆ, ರಾಜೀನಾಮೆ ನಂತರವೇ ಈಗ ವಿವಾದ ಭುಗಿಲೆದ್ದಿದೆ.
ರಾಜೀನಾಮೆಯಲ್ಲಿ ಸಚಿವರ ಹೆಸರನ್ನೇನೂ ಅವರು ಉಲ್ಲೇಖಿಸಿಲ್ಲ. ಹೀಗಿರುವಾಗ ಅನಗತ್ಯವಾಗಿ ತಮ್ಮ ಘನತೆಗೇ ಅವರು ಮಸಿ ಬಳಿದುಕೊಳ್ಳುತ್ತಿದ್ದಾರೆ ಎನ್ನಬಹುದು. ರಾಜಿನಾಮೆ ಪ್ರಕರಣದ ನಂತರ ಸಚಿವರು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ. ಪೊಲೀಸ್ ಇಲಾಖೆಯ ತಮ್ಮ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳ ಮೂಲಕವೂ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಸಚಿವರ ರಾಸಲೀಲೆ ಬಯಲು ಮಾಡುತ್ತೇನೆ, ಸಿ.ಡಿ. ಬಿಡುಗಡೆ ಮಾಡುತ್ತೇನೆ ಎಂದೆಲ್ಲ ಪ್ರಲಾಪಿಸುತ್ತಿರುವುದು ಹಾಸ್ಯಾಸ್ಪದ ಎನಿಸುತ್ತಿದೆ. ಯಾವುದೇ ಇಲಾಖೆಯ ಅಧಿಕಾರಿ ಇರಲಿ, ರಾಜಕೀಯ ಒತ್ತಡ ಇದ್ದೇ ಇರುತ್ತದೆ. ಅದು ಎಲ್ಲರಿಗೂ ತಿಳಿದ ಸತ್ಯ. ಇದು ಕೇವಲ ಅನುಪಮಾ ಅವರಿಗೆ ಮಾತ್ರ ಎದುರಾದ ಒತ್ತಡವಲ್ಲ. ಇದನ್ನು ಸಮಾಧಾನ ಚಿತ್ತದಿಂದ ತೆಗೆದುಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬೇಕೇ ವಿನಾ ವಿವಾದ ಎಬ್ಬಿಸುವುದರ ಮೂಲಕವಲ್ಲ. ಪ್ರಾಮಾಣಿಕ ಅಧಿಕಾರಿಯಾದ ಅನುಪಮಾ ಈ ರೀತಿ ವರ್ತಿಸುತ್ತಿರುವುದೇಕೆ ಎನ್ನುವುದೇ ಯಾರಿಗೂ ಅರ್ಥವಾಗುತ್ತಿಲ್ಲ. ರಾಜೀನಾಮೆ ಕೊಟ್ಟ ನಂತರ ತಮ್ಮ ಮುಂದಿನ ದಾರಿಯನ್ನು ನೋಡಿಕೊಳ್ಳಬೇಕೇ ವಿನಾ ಅನಗತ್ಯ ವಿವಾದ ಸೃಷ್ಟಿಸುವುದು ಯಾರಿಗೂ ಶೋಭೆ ತರದು.
ಪರಿಣಾಮವಾಗಿ ಇದಕ್ಕಾಗಿಯೇ ಕಾದು ಕುಳಿತ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಸತ್ಯಾಸತ್ಯತೆಯನ್ನರಿಯದ ಫೇಸ್ಬುಕ್ ಪ್ರಿಯರು ಲೈಕ್ ಬಟನ್ ಒತ್ತುತ್ತ, ಕಮೆಂಟ್ಸ್ ಬರೆಯುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಅನುಪಮಾ ಮನವೊಲಿಕೆಗೆ ಯತ್ನ ನಡೆಸಲು ಸಿದ್ಧವಾಗಿದ್ದಾರೆ. ಈ ಮಧ್ಯೆ ಅವರ ಸಮಾಜದವರೂ ಸಹ ಅನುಪಮಾಗೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಅನುಪಮಾ ಕೇಸಿಗೂ ಅವರ ಜಾತಿಗೂ ಏನು ಸಂಬಂಧವೋ ಗೊತ್ತಿಲ್ಲ. ಅನುಪಮಾ ಎಂದೂ ತಮ್ಮ ಕರ್ತವ್ಯದಲ್ಲಿ ಜಾತಿಯನ್ನು ತಂದಿಲ್ಲ, ಅಧಿಕಾರಿ ಅಥವಾ ನೌಕರ ಯಾವ ಮತ-ಧರ್ಮ- ಜಾತಿ- ಪಕ್ಷವನ್ನೂ ನೋಡದೆ ಸಮಾನತೆಯಿಂದ ಕೆಲಸ ಮಾಡುತ್ತಾನೆ. ಮೆಚ್ಚುಗೆ ಗಳಿಸುತ್ತಾನೆ. ಅನುಪಮಾ ಸಹ ಇದನ್ನೇ ಮಾಡಿದ್ದಾರೆ. ಹೀಗಿರುವಾಗ ಜಾತಿಯತೆ ತರುವ ಮೂಲಕ ಇನ್ನಷ್ಟು ದಿನ ಈ ವಿಚಾರವನ್ನು ಜೀವಂತವಾಗಿಡಲು ಕೆಲವರು ಯತ್ನಿಸುತ್ತಿರುವುದು ನಿಜಕ್ಕ್ಕೂ ವಿಷಾದನೀಯ. ಐಎಎಸ್ ಅಧಿಕಾರಿಯಾಗಿದ್ದ ಡಿ. ಕೆ. ರವಿ ಆತ್ಮಹತ್ಯೆ ಪ್ರಕರಣದಲ್ಲೂ ಇದೇ ರೀತಿ ಜಾತೀಯತೆ ನುಸುಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಷ್ಟೇ ಸವಾಲೆದುರಾದರೂ ಅದನ್ನು ಎದುರಿಸುವ ತಾಕತ್ತು ತೋರಬೇಕು. ಕಿರಣ್ ಬೇಡಿ, ಸೋನಿಯಾ ನಾರಂಗ್ ಸಹ ಇದನ್ನೆಲ್ಲ ಎದುರಿಸಿಯೇ ಖ್ಯಾತಿ ಗಳಿಸಿದವರು. ರಾಜಿನಾಮೆ ನೀಡಿ ಎಲ್ಲೋ ಕುಳಿತು ಮಾತನಾಡಿದರೆ, ‘ಕೊಟ್ಟ ಕುದುರೆಯನೇರಲರಿಯದವ ವೀರನೂ ಅಲ್ಲ, ಧೀರನೂ ಅಲ್ಲ’ ಎಂಬ ಮಾತು ಜನರ ಬಾಯಲ್ಲಿ ಬರುತ್ತದೆ.

No comments:
Post a Comment