ರಘುರಾಮ್ ರಾಜನ್ ಆರ್ಬಿಐನಲ್ಲೇ ಮುಂದುವರೆಯುವರೇ?
ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಗವರ್ನರ್ ಎಂಬ ಪ್ರಶಂಸೆಗೆ ಪಾತ್ರರಾಗಿರುವ ರಘುರಾಮ್ ರಾಜನ್, 2013ರಲ್ಲಿ ಆರ್ಬಿಐ ಗವರ್ನರ್ ಆಗಿ ನೇಮಕಗೊಳ್ಳುವ ಮುನ್ನ 2012ರಲ್ಲಿ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. 2003ರಿಂದ 2007ರವರೆಗೆ ಐಎಂಎಫ್ನ ಮುಖ್ಯ ಆರ್ಥಿಕ ತಜ್ಞರಾಗಿದ್ದರು. ಶಿಕಾಗೊ ವಿವಿಯಿಂದ ಪಿಎಚ್ಡಿ ಪಡೆದಿರುವ ಭೋಪಾಲ್ ಮೂಲದ ತಮಿಳು ಬ್ರಾಹ್ಮಣ ರಾಜನ್, ಪ್ರಖರ ವಿದ್ವತ್ಗೆ, ವಿಶಿಷ್ಟ ವ್ಯಕ್ತಿತ್ವಕ್ಕೆ ಹೆಸರಾದವರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ ಮತ್ತು ಪಕ್ಷದ ಕೆಲವು ರಾಜಕಾರಣಿಗಳು ರಾಜನ್ ಬಗ್ಗೆ ಸಹಮತ ಹೊಂದಿಲ್ಲ. ಅವರನ್ನು ಮರಳಿ ಶಿಕಾಗೊಗೆ ಕಳುಹಿಸಲು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಸಾಂಸದ ಸುಬ್ರಮಣಿಯಂ ಸ್ವಾಮಿ ರಾಜನ್ ಅವರನ್ನು ವಜಾ ಮಾಡಬೇಕೆಂಬ ಆಗ್ರಹ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು
ಕೆಲವು ದಿನಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನ ಗವರ್ನರ್ ರಘುರಾಮ್ ರಾಜನ್ ಹೆಸರು ಪದೇ ಪದೆ ಚರ್ಚೆಗೀಡಾಗುತ್ತಿದೆ. ಮತ್ತೆ ಅವರು ಆರ್ಬಿಐ ಗವರ್ನರ್ ಆಗಿ ಮುಂದುವರೆಯುವರೇ, ಕೇಂದ್ರ ಸರಕಾರ ಅವರನ್ನು ಮುಂದುವರೆಸುವುದೇ ಮುಂತಾದ ಪ್ರಶ್ನೆಗಳು ಕೇಳಿಬರುತ್ತಿವೆ.
ರಾಜನ್ ಬಗ್ಗೆ ಒಳ್ಳೆಯ ಮಾತುಗಳೇ ಹೆಚ್ಚು ಕೇಳಿಬರುತ್ತಿವೆ. ಕೆಲವು ಪ್ರಮಾಣದಲ್ಲಿ ಅಪಸ್ವರವೂ ಇದೆ. ಆದರೆ, ಭಾರತದ ಆರ್ಥಿಕ ವ್ಯವಸ್ಥೆ ಇಷ್ಟೊಂದು ವೇಗವಾಗಿ ಬೆಳೆಯಲು ಅವರ ಸಮಯೋಚಿತ ನಿರ್ಧಾರ ಮತ್ತು ದೂರದೃಷ್ಟಿಯೇ ಕಾರಣ ಎನ್ನುವುದನ್ನು ವಿಶ್ವದ ಹಲವು ದೇಶಗಳ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ನಿನ್ನೆಯಷ್ಟೇ ಆರ್ಬಿಐ ನ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿ, ಅದರಲ್ಲಿ ಬ್ಯಾಂಕ್ ಬಡ್ಡಿದರವನ್ನು ಯಥಾಸ್ಥಿಯತಿಯಲ್ಲಿ ಮುಂದುವರೆಯುವಂತೆ ಮಾಡಿದ್ದಾರೆ.
ರಾಜನ್ ಅವರ ಮೂರು ವರ್ಷಗಳ ಸೇವಾವಧಿ ಸೆಪ್ಟೆಂಬರ್ 4ಕ್ಕೆ ಅಂತ್ಯವಾಗಲಿದೆ. ಅವರ ಮುಂದುವರಿಕೆ ವಿಚಾರದ ಚರ್ಚೆಗೆ ಕಾರಣವಾದ ಅಂಶವೆಂದರೆ, ರಾಜನ್ ತೆಗೆದುಕೊಂಡ ಕೆಲವು ನಿರ್ಧಾರಗಳು. ಹಣದುಬ್ಬರ ಮತ್ತು ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ರಾಜನ್ ವಹಿಸಿದ್ದ ಪಾತ್ರ ಮಹತ್ತರವಾದದ್ದು. ದೇಶದ ಅರ್ಥ ವ್ಯವಸ್ಥೆ ಯನ್ನು ಸರಿದಾರಿಗೆ ತರಲು ದಿಟ್ಟ ನಿರ್ಧಾರ ಕೈಗೊಳ್ಳುತ್ತಿರುವ ರಾಜನ್ ಅವರ ಅನುಭವ ಮತ್ತು ದಾಖಲೆಯ ಸಾಧನೆಗಳು ಇಡೀ ವಿಶ್ವದ ಹೂಡಿಕೆ ಅದರಲ್ಲೂ ಪ್ರಶಂಸೆಗೆ ಒಳಗಾಗಿದೆ. ಒಂದು ವೇಳೆ ಅವರೇನಾದರೂ ಆರ್ಬಿಐ ತ್ಯಜಿಸಿದರೆ, ಭಾರತೀಯ ಶೇರು ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರಲಿದೆ ಮತ್ತು ಕರೆನ್ಸಿ ಇನ್ನಷ್ಟು ದುರ್ಬಲವಾಗಲಿದೆ ಎನ್ನುತ್ತಾರೆ ಅಲೈಯಂಜಾ ಎಸ್ಇ ಕಂಪನಿಯ ಸಲಹೆಗಾರ ಎ. ಮೊಹಮದ್.
ಈಗ ರಾಜನ್ ಅವರನ್ನು ಮುಂದುವರೆಸಬೇಕೆಂದು ಚಳವಳಿಯೇ ಆರಂಭವಾಗಿದೆ. ಆನ್ಲೈನ್ನಲ್ಲಿ ಈ ಬಗ್ಗೆ ನಡೆದ ಸಹಿ ಸಂಗ್ರಹಣೆಯಲ್ಲಿ ಸುಮಾರು 60 ಸಾವಿರ ಜನ ರಾಜನ್ ಪರ ಸಹಿ ಹಾಕಿದ್ದಾರೆ. ದಿನಪತ್ರಿಕೆಗಳು, ಮ್ಯಾಗಜಿನ್ಗಳೂ ಸಹ ರಾಜನ್ ಪರವೇ ನಿಂತಿವೆ. ಇಷ್ಟಾದರೂ ರಾಜನ್ ಅವರನ್ನು ಕೇಂದ್ರ ಸರಕಾರ ಮುಂದುವರೆಸದಿದ್ದರೆೆ ರಾಜನ್ ಅವರೇನೂ ಕಳೆದುಕೊಳ್ಳುವುದಿಲ್ಲ. ದೇಶೀಯ ಅರ್ಥವ್ಯವಸ್ಥೆಗೆ ಮಾತ್ರ ಸಮರ್ಥ ತಜ್ಞನ ಮಾರ್ಗದರ್ಶನ ಎರವಾಗಬಹುದು. ಇದರಿಂದ ಜಾಗತಿಕವಾಗಿ ದೇಶಕ್ಕೆ ಕೆಟ್ಟ ಹೆಸರು ಬರಬಹುದು.
ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಬ್ಯಾಂಕ್ ಬಡ್ಡಿ ದರ ಕಡಿತಗೊಳಿಸಬೇಕೆಂದು ಬಡಬಡಿಸುತ್ತಿದ್ದ ಕಾರ್ಪೊರೇಟ್ ಸಂಸ್ಥೆಗಳ ಒತ್ತಡಕ್ಕೆ ಮಣಿಯದ ರಾಜನ್, ಹಂತಹಂತವಾಗಿ ಬಡ್ಡಿದರ ಇಳಿಸುವ ಮೂಲಕ ಉದ್ಯಮಿಗಳ ಕೆಂಗಣ್ಣಿಗೆ ತುತ್ತ್ತಾಗಿದ್ದಾರೆ. ಇವರೆಲ್ಲ ಸೇರಿ ರಾಜನ್ ಮುಂದುವರೆಯದಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಬಡ್ಡಿದರಗಳ ತೀವ್ರ ಸ್ವರೂಪದ ಕಡಿತ ಮಾಡಿದ್ದ ರಾಜನ್, ಸ್ಥಿರ ಠೇವಣಿದಾರರಿಗೆ ಮತ್ತು ಸಣ್ಣ ಉಳಿತಾಯದವರ ಆದಾಯಕ್ಕೆ ಖೋತಾ ಆಗುವುದನ್ನು ತಪ್ಪಿಸಿದ್ದಾರೆ. ಹಣದುಬ್ಬರಕ್ಕೆ ಕಡಿವಾಣ ಹಾಕಿ, ಭಾರತದ ಅರ್ಥವ್ಯವಸ್ಥೆ ಬಗ್ಗೆ ವಿಶ್ವ ಹೂಡಿಕೆದಾರರಿಗೆ ವಿಶ್ವಾಸ ಮೂಡುವಂತೆ ಮಾಡಿದ್ದಾರೆ.
ವಿಶೇಷವೆಂದರೆ, ಪ್ರಧಾನಿ ಮೋದಿಯಾಗಲಿ, ಹಣಕಾಸು ಸಚಿವ ಅರುಣ್ ಜೇಟ್ಲಿಯಾಗಲಿ ಈ ಬಗ್ಗೆ ತುಟಿಪಿಟಕ್ಕೆಂದಿಲ್ಲ. ಏಕೆಂದರೆ, ಕೈಗಾರಿಕೋದ್ಯಮಿಗಳು, ಅರ್ಥಶಾಸ್ತ್ರಜ್ಞರು ಮತ್ತು ಸಾರ್ವಜನಿಕರು ರಾಜನ್ ಪರ ನಿಂತಿದ್ದಾರೆ. ಅವರನ್ನೇ ಎರಡನೆ ಅವಧಿಗೆ ಮುಂದುವರೆಸುವಂತೆ ಆಗ್ರಹಿಸುತ್ತಿದ್ದಾರೆ.
53ರ ಹರಯದ ರಾಜನ್, ಕಠಿಣ ಸ್ವರೂಪದ ವಿತ್ತೀಯ ನೀತಿ ಅನುಸರಿಸುವಂತೆ ಕೇಂದ್ರವನ್ನು ಆಗ್ರಹಿಸುತ್ತಲೇ ಇದ್ದಾರೆ. ಏಕೆಂದರೆ, ಅವರಿಗೆೆ ಜಾಗತಿಕ ಅರ್ಥ ವ್ಯವಸ್ಥೆಯ ಮುನ್ನೋಟವಿದೆ. 2008ರಲ್ಲಿ ಅವರು ಅಮೆರಿಕದ ಹಣಕಾಸು ಬಿಕ್ಕಟ್ಟಿನ ಬಗ್ಗೆ ಮೊದಲೇ ನುಡಿದಿದ್ದರು. ಬ್ಯಾಂಕಿಂಗ್ ಸುಧಾರಣಾ ಕ್ರಮಗಳು, ಹಣದುಬ್ಬರ ನಿಯಂತ್ರಣ, ಉಳಿತಾಯ ಹೆಚ್ಚಳ, ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಗೊಳಿಸುವುದು ರಾಜನ್ ಆದ್ಯತೆಗಳಾಗಿವೆ. ಇಂತಹ ದೂರದೃಷ್ಟಿಯ ರಾಜನ್ ಮತ್ತೆ ಮುಂದುವರೆಯುವಂತೆ ರಾಜಕಾರಣಿಗಳೇ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆದರೆ ಇಲ್ಲಿಯೂ ವಿವಾದ ಎದ್ದಿರುವುದು ದುರಾದೃಷ್ಟವೇ ಸರಿ.

No comments:
Post a Comment