ಕಾಗೋಡು ಮತ್ತೆ ಸಚಿವ: ನಿರೀಕ್ಷೆ ಅಪಾರ
ಕಾಗೋಡು ತಿಮ್ಮಪ್ಪ ಮತ್ತೆ ಸಚಿವರಾಗಿದ್ದಾರೆ. ನೇರ, ನಿಷ್ಠುರ ಮತ್ತು ನಿಷ್ಕಳಂಕರೆನಿಸಿಕೊಂಡವರು. 5 ಬಾರಿ ಶಾಸಕರಾಗಿ, ಒಮ್ಮೆ ಎಂಎಲ್ಸಿಯಾಗಿ, 4 ಬಾರಿ ಸಚಿವರಾದ ಹೆಗ್ಗಳಿಕೆ ಇವರದ್ದು, ಜೊತೆಗೆ ವಿಧಾನಸಭಾಧ್ಯಕ್ಷ ಸ್ಥಾನ ಅಲಂಕರಿಸಿದ ಜಿಲ್ಲೆಯ ಏಕೈಕ ರಾಜಕಾರಣಿ. 82ರ ಹರಯದ ಕಾಗೋಡು ಸಚಿವರಾಗಿದ್ದರಿಂದ ಬಗರ್ಹುಕುಂ ಸಾಗುವಳಿದಾರರಲ್ಲಿ ಮತ್ತು ಶರಾವತಿ ಮುಳುಗಡೆ ಸಂತ್ರಸ್ಥರಲ್ಲಿ ಹೊಸ ಆಶಾಕಿರಣ ಮೂಡಿದೆ. ಸಮಸ್ಯೆಗಳ ಕೂಪದಲ್ಲಿ ಮುಳುಗಿರುವ ಮುಳುಗಡೆ ಸಂತ್ರಸ್ಥರು ಇನ್ನಾದರೂ ಬೆಳಕಿಗೆ ಬರಬಹುದೆಂಬ ಆಶಾವಾದ ಹೊಂದುವಂತಾಗಿದೆ.
ರಾಜ್ಯ ಸಚಿವ ಸಂಪುಟದ ವಿಸ್ತರಣೆಯ ಮೂಲಕ ಜಿಲ್ಲೆಯಲ್ಲೂ ಮಂತ್ರಿಸ್ಥಾನ ಬದಲಾಗಿದೆ. ಈವರೆಗೆ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಬದಲಿಗೆ ಕಾಗೋಡು ತಿಮ್ಮಪ್ಪ ಅವರಿಗೆ ಸ್ಥಾನ ಕೊಡಲಾಗಿದೆ. ಒಬ್ಬರನ್ನು ಬಿಟ್ಟು ಮತ್ತೊಬ್ಬರಿಗೆ ಅವಕಾಶ ಕೊಟ್ಟಂತಾಗಿದೆ. ಹಾಗೆ ನೋಡಿದರೆ ಒಂದು ಸ್ಥಾನ ಕೈತಪ್ಪಿದಂತಾಗಿದೆ. ಕಾಗೋಡು ವಿಧಾನಸಭಾಧ್ಯಕ್ಷ ಸ್ಥಾನದಿಂದ ಸಚಿವರಾದರೆ, ಕಿಮ್ಮನೆ ಮಂತ್ರಿಸ್ಥಾನದಿಂದ ಮತ್ತೆ ಶಾಸಕರಾಗಿ ಉಳಿಯುವಂತಾಗಿದೆ.
ಕಿಮ್ಮನೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದರು. ತಾನು ಸಚಿವನಾಗಿದ್ದೇ ಆಕಸ್ಮಿಕ, ಮಂತ್ರಿಗಿರಿಗೆ ಯಾವ ಲಾಬಿಯನ್ನೂ ಮಾಡಿರಲಿಲ್ಲ, ಸಿಕ್ಕ ಅವಕಾಶವನ್ನು ಜನತೆಯ ಸೇವೆಗೆ ಬಳಸಿದ್ದೇನೆ. ಇನ್ನೂ ಸಹ ಜನಸೇವಕನಾಗಿಯೇ ಇರುತ್ತೇನೆ. ಗೂಟದ ಕಾರಿನಲ್ಲಿ ಮಾತ್ರ ಅಧಿಕಾರವಿದೆ ಎಂದು ನಂಬಿದವ ತಾನಲ್ಲ ಎಂದಿದ್ದಾರೆ. ಮಂತ್ರಿಮಂಡಲದಲ್ಲಿ ಪ್ರಾಮಾಣಿಕ ಮತ್ತು ನಿಷ್ಕಳಂಕ ಸಚಿವರೆಂದೇ ಹೆಸರಾಗಿದ್ದ ಕಿಮ್ಮನೆಯವರನ್ನು ಕೈಬಿಟ್ಟಿದ್ದು ಜಿಲ್ಲೆಯ ಹಲವರಲ್ಲಿ ಬೇಸರ ಮೂಡಿಸಿದೆ. ಅವರು ಯಾವತ್ತೂ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ಸಚಿವ ಸ್ಥಾನದ ದರ್ಪ ತೋರಿಸಿದವರಲ್ಲ. ಕೆಲವೊಮ್ಮೆ ಖಡಕ್ ಆಗಿ ಮಾತನಾಡಿದ್ದಾರೆ. ಅದು ಆ ಸಂದರ್ಭದಲ್ಲಿ ಅನಿವಾರ್ಯವೂ ಆಗಿತ್ತು.
ಈಗ ಕಾಗೋಡು ಸಚಿವರಾಗಿದ್ದಾರೆ. ಜಿಲ್ಲೆಯಲ್ಲಿ ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಕೊಡಿಸುವುದು, ಶರಾವತಿ ಸಂತ್ರಸ್ಥರ ಸಮಸ್ಯೆ ಹಾಗೆಯೇ ಕೊಳೆಯುತ್ತಿರುವುದರ ಬಗ್ಗೆ ಅವರು ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಇದಕ್ಕೆ ಈಗ ಒಂದು ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆ ಹೊಂದಲಾಗಿದೆ. ವಿಧಾನಸಭೆಯ ಅಧ್ಯಕ್ಷರಾಗಿದ್ದುಕೊಂಡೇ ಸರಕಾರವನ್ನು ತರಾಟೆಗೆ ತೆಗದುಕೊಳ್ಳುತ್ತಿದ್ದ ಕಾಗೋಡು, ಸಚಿವರಾಗಿ ಯಾವ ರೀತಿ ಹೆಜ್ಜೆ ಇಡುತ್ತಾರೆ ಎನ್ನುವುದು ಮಹತ್ವದ್ದಾಗಿದೆ. ಆದರೆ, ಸದಾ ಖಡಕ್ ಮನುಷ್ಯ ಎಂದೇ ಖ್ಯಾತಿ ಪಡೆದವರು. 84ರ ಹರಯದ ಕಾಗೋಡು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಹಿಂದೆಯೇ ಸಚಿವರಾಗಬೇಕಿತ್ತು. ಆದರೆ ಆಗಿನ ಕೆಲವು ಬೆಳವಣಿಗೆಗಳು ಅನಿವಾರ್ಯವಾಗಿ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಅವರನ್ನು ತಂದು ಕೂಡ್ರಿಸಿದ್ದವು.
ಸದ್ಯದ ಪರಿಸ್ಥಿತಿಯಲ್ಲಿ ಕಾಗೋಡು ಅವರಿಂದ ಜಿಲ್ಲೆಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಅನುಭವಿ ಸಚಿವರಾಗಿರುವುದರಿಂದ, ಕ್ಯಾಬಿನೆಟ್ ಹುದ್ದೆಯಲ್ಲಿರುವುದರಿಂದ, ಸಿಎಂ ಅವರನ ಮನವೊಲಿಸುವ ತಾಕತ್ತಿರುವುದರಿಂದ ಹಾಗೂ ಮುಲಾಜಿಲ್ಲದೆ ಅಧಿಕಾರಿಗಳಿಗೆ ಚಾಟಿ ಬೀಸುವ ಪ್ರವೃತ್ತಿಯವರಾಗಿರುವುದರಿಂದ ನೆನೆಗುದಿಗೆ ಬಿದ್ದಿರುವ ಅನೇಕ ಯೋಜನೆಗಳಿಗೆ ಮತ್ತೆ ಹಣ ತರುವ ನಿರೀಕ್ಷೆ ಹೊಂದಲಾಗಿದೆ.
ಚಳವಳಿಯ ಮೂಲಕವೇ ರಾಜಕಿಯಕ್ಕೆ ಕಾಲಿಟ್ಟಿರುವ ಕಾಗೋಡು, ಯಾವುದೇ ವಿಚಾರವನ್ನು ಬಗೆಹರಿಸದೆ ಹಾಗೆಯೇ ಬಿಡುವವರಲ್ಲ. ಹೋರಾಟವೇ ಅವರ ಹುಟ್ಟುಗುಣ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಜಾಗೃತಿಗೊಳಿಸುವ ಮೂಲಕ ಜಿಲ್ಲೆಯಲ್ಲಿ ಒಂದಷ್ಟು ಕೆಲಸ ಆಗುವಂತೆ ಮಾಡಬಲ್ಲ ಶಕ್ತಿ ಹೊಂದಿದ್ದಾರೆ. ಜೊತೆಗೆ ಜಿಲ್ಲಾ ಕಾಂಗ್ರೆಸ್ನಲ್ಲೂ ಇನ್ನಷ್ಟು ಕ್ರಿಯಾಶೀಲತೆಯನ್ನು ತರಬಲ್ಲರು. ಪಕ್ಷವನ್ನು ಸಂಘಟಿಸುವ ಶಕ್ತಿ ಮತ್ತು ಕಾರ್ಯಕರ್ತರ ನೇರ ಸಂಪರ್ಕ ಹೊಂದಿರುವುದು ಅವರ ಪ್ಲಸ್ ಪಾಯಿಂಟ್. ಜನಸಾಮಾನ್ಯರನ್ನೂ ಸಹ ಸೌಜನ್ಯದಿಂದ ಕಂಡು ಮಾತನಾಡುವ ವಿಶೇಷ ಗುಣ ಅವರಲ್ಲಿದೆ. ಇವೆಲ್ಲವೂ ಸಹ ಕಾಗೋಡು ಮತ್ತೆ ಸಚಿವರಾಗುವಂತೆ ಮಾಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಂದಷ್ಟು ಬದಲಾವಣೆ, ಜನೋಪಯೋಗಿ, ವಿಶೇಷವಾಗಿ ಅರಣ್ಯ ಜಮೀನು ಒತ್ತುವರಿ ವಿಚಾರ ಬಗೆಹರಿಸುವ ಆಶಾವಾದವನ್ನು ಮತದಾರಾರರು, ಬಗರ್ಹುಕುಂ ಸಾಗುವಳಿದಾರರು ಹೊಂದಿದ್ದಾರೆ.

No comments:
Post a Comment