ನೀರು ಕಂಡರೆ ಅದೆಂತಹ ಖುಷಿ!
ಶಿವಮೊಗ್ಗ: ಒಂದೆಡೆ ಬಿರುಬಿಸಿಲು, ಇನ್ನೊಂದೆಡೆ ಮಳೆಯೇ ನಾಪತ್ತೆ. ವರುಣನ ಆಗಮನಕ್ಕಾಗಿ ಹೋಮ, ಹವನಗಳು ನಡೆಯುತ್ತಲೇ ಇವೆ. ಆದರೂ ಆತ ನಾಪತ್ತೆಯಾಗಿದ್ದಾನೆ. ಆತನ ಬರುವಿಕೆಗಾಗಿ ಆಗಸ ನೋಡುತ್ತಲೇ ನಿಟ್ಟುಸಿರು ಬಿಡುತ್ತ ದಿನದೂಡುತ್ತಿದ್ದೇವೆ.
ಇನ್ನೊಂದೆಡೆ, ಕುಡಿಯಲು ನೀರಿಲ್ಲದ ಸ್ಥಿತಿ, ಕೆರೆ-ಕಟ್ಟೆಗಳೆಲ್ಲ ಒಣಗಿ ಬರಿದಾಗಿ ಬಿರುಕುಬಿಟ್ಟಿವೆ. ಮನುಷ್ಯರಂತೆ ಪ್ರಾಣಿ-ಪಕ್ಷಿಗಳೂ ಸಹ ನೀರಿಗಾಗಿ ಚಡಪಡಿಸುತ್ತಿವೆ. ಆಗೊಮ್ಮೆ, ಈಗೊಮ್ಮೆ ಮೋಡವಾಗುತ್ತಿದೆ. ಇದರಿಂದ ಇದ್ದ ನೀರೂ ಬತ್ತುತ್ತಿದೆ.
ರಜೆ ಮುಗಿದು ಶಾಲೆ ಆರಂಭವಾಗಿದೆ. ಬೇಸಿಗೆಯ ರಜೆಯ ದಿನಗಳಲ್ಲಿ ಕೆರೆಗೆ ಹಾರುತ್ತ, ಈಜುತ್ತ, ತೇಲುತ್ತ, ಮುಳುಗುತ್ತ ಆನಂದಿಸುತ್ತಿದ್ದ ಮಕ್ಕಳು ಮಗದೊಂದೆಡೆಯಾದರೆ, ನೀರಿರುವ ಜಾಗವನ್ನೇ ಕೆರೆಯನ್ನಾಗಿ ಮಾಡಿ, ಅಲ್ಲಿಯೇ ಹೊರಳುತ್ತ, ಮಲಗುತ್ತ, ಬಾಲಬಡಿಯುತ್ತ ಸಂಜೆ ಕಳೆಯುವ ಎಮ್ಮೆಗಳು. ಎಂತಹ ಆನಂದ. ಮಕ್ಕಳು ಕೆರೆಯನ್ನು ಈಜಿಗಾಗಿ ಬಳಸಿಕೊಂಡು ಖುಷಿಪಟ್ಟರೆ, ಎಮ್ಮೆಗಳು ಲೋಕದ ಯಾವ ಜಂಜಡವೂ ಇಲ್ಲದೆ ನಿಶ್ಚಿಂತೆಯಿಂದ ತಮ್ಮದೇ ಲೋಕದಲ್ಲಿ ಹಾಯಾಗಿ ಮಲಗಿ ಕಾಲಕಳೆಯುತ್ತಿವೆ.
ಮನುಷ್ಯರು ಒಳ್ಳೆಯ ನೀರಿರುವ ಕೆರೆಗಳಲ್ಲಿ ಮಾತ್ರ ಈಜುತ್ತಾರೆ. ಅಲ್ಲಿನ ನೀರನ್ನೂ ಕುಲಗೆಡಿಸುತ್ತಾರೆ. ಆದರೆ ಎಮ್ಮೆಗಳಿಗೆ ಯಾವ ನೀರಾದರೂ ಒಂದೇ. ಅದರಲ್ಲಿ ಉರುಳಾಡಿದ್ದೇ ಉರುಳಾಡಿದ್ದು. ಅಲ್ಲಿ ಅವುಗಳಿಗೆ ಸಿಗುವ ಖುಷಿಯೇ ಬೇರೆ. ನಿಜಕ್ಕೂ ಸಿಕ್ಕಿದ್ದೇ ಸೀರುಂಡೆ ಎನ್ನುವ ಮನೋಭಾವ ಎಮ್ಮೆಗಳದ್ದು. ಹುಡುಗರು ಉರಿ ಬಿಸಿಲಿನಲ್ಲಿ ಈಜಿ ಮನ-ಮೈಯನ್ನು ಹಗುರ, ಮುದಗೊಳಿಸಿ, ಶುಚಿಗೊಳಿಸಿಕೊಂಡು ಜಿಗಿದಾಡುತ್ತ ಮನೆ ಸೇರುತ್ತಾರೆ. ಆದರೆ ಎಮ್ಮೆಗಳು ಮೈಯನ್ನು ಕೆಸರು ಮಾಡಿಕೊಂಡೇ ಮನೆ ದಾರಿ ಹಿಡಿಯುತ್ತವೆ. ಇಬ್ಬರಲ್ಲೂ ಒಂದೇ ಗುಣ, ಅದೇನೆಂದರೆ, ಒಬ್ಬಂಟಿಯಾಗಿ ಇಬ್ಬರೂ ಹೋಗುವುದಿಲ್ಲ. ಜೊತೆಗೆ ಸಂಗಡಿಗರು ಜಾಸ್ತಿ ಇದ್ದಂತೆ ಉತ್ಸಾಹ ಉನ್ಮಾದಕ್ಕೇರುತ್ತದೆ. ನೀರು ಕಂಡರೆ ಇಬ್ಬರಿಗೂ ಎಂತಹ ಖುಷಿ ಅಲ್ಲವೇ?
........................................................

No comments:
Post a Comment