ಶರವೇಗದಿ ಏರುತ್ತಿದೆ ಕಾಳುಬೇಳೆಗಳ ದರ
* ಗ್ರಾಹಕರು ಕಂಗಾಲು* ದರ ಇಳಿಸಲು ಸರಕಾರಗಳ ಕಸರತ್ತು
ಕಾಳುಬೇಳೆಗಳ ದರ ರಾಕೆಟ್ನಂತೆ ಏರಿಕೆಯಾಗುತ್ತಿದೆ. ದೈನಂದಿನ ಆಹಾರ, ತಿಂಡಿ, ಪದಾರ್ಥಗಳ ತಯಾರಿಕೆಗೆ ಬೇಳೆ ಬೇಕೇ ಬೇಕು. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆಯಾದರೆ ಅವನ ಪರಿಸ್ಥಿತಿ ಶೋಚನೀಯವಾಗುತ್ತದೆ. ಈಗ ಮಾರುಕಟ್ಟೆಗೆ ಖರೀದಿಗೆ ಹೋದರೆ ಯಾವುದನ್ನು, ಎಷ್ಟು ಪ್ರಮಾಣದಲ್ಲಿ ಖರೀದಿಸಬೇಕು ಎಂದು ಯೋಚಿಸುವಂತಾಗಿದೆ. ಏಕೆಂದರೆ ಬೇಳೆಗಳ ದರ 200ರ ಗಡಿಯಲ್ಲಿದೆ.
ಪ್ರತಿ ಮನೆಯಲ್ಲಿ ಇದರದ್ದೇ ಚರ್ಚೆ. ಕೇವಲ ತರಕಾರಿ ದರ ಏರಿಕೆಯಾಗುತ್ತ, ಇಳಿಕೆಯಾಗುವುದನ್ನು ಜನಸಾಮಾನ್ಯರು ಈವರೆಗೆ ಅನುಭವಿಸಿದ್ದರು. ಆದರೆ ಕಲೆದೊಂದು ವರ್ಷದಿಂದ ಬೇಳೆಕಾಳುಗಳ ದರ ಗಗನಮುಖಿಯಾಗುತ್ತಿದೆ. ಜನಸಾಮಾನ್ಯರ ಅದರಲ್ಲೂ ಮಧ್ಯಮ ಮತ್ತು ಬಡವರ್ಗದವರು ತತ್ತರಿಸಿ ಹೋಗಿದ್ದಾರೆ. ಕೆಜಿಗಟ್ಟಲೆ ತರುತ್ತಿದ್ದವರು ಈಗ ಗ್ರಾಮ್ ಲೆೆಕ್ಕದಲ್ಲಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಬೇಳೆಗಳಿಲ್ಲದೆ ಸಾರು, ತಿಂಡಿ ಮಾಡುವಂತಿಲ್ಲ.
ಇಡೀ ದೇಶದಲ್ಲೇ ಈಗ ದರ ಏರಿಕೆ ಬಗ್ಗೆ ಚಿಂತನೆ ನಡೆಯುತ್ತಿದೆ. ಒಂದೆಡೆ ಕೆಟ್ಟ ಹವಾಮಾನ ಅಥವಾ ಕೈಕೊಟ್ಟ ಮುಂಗಾರು ಎಂದು ಕೆಲವರು ಹೇಳುತ್ತಿದ್ದಾರೆ. ಜೊತೆಗೆ ದೇಶದ ಬೆನ್ನೆಲುಬಾಗಿರುವ ಕೃಷಿ ಇಳಿಮುಖವಾಗುತ್ತಿರುವುದು, ರೈತನಿಗೆ ಅತಿಯಾದ ಖರ್ಚು, ಮಾರುಕಟ್ಟೆ ಕೊರತೆ, ನ್ಯಾಯಯುತ, ಸಮರ್ಪಕ ಬೆಲೆ ಸಿಗದಿರುವುದು, ಕೂಲಿ ಮತ್ತು ರೋಗದ ಸಮಸ್ಯೆಗಳಿಂದ ಕಂಗಾಲಾಗಿ ಕೃಷಿಯೇ ಬೇಡ ಎನ್ನುವ ಹಂತ ತಲುಪಿದ್ದಾನೆ. ಇದರಿಂದ ಉತ್ಪಾದನೆ ಕುಂಠಿತವಾಗಿದೆ. ಆದರೆ ಇದರ ಹೊರತಾಗಿಯೂ ಕೆಲವು ಕಾರಣಗಳಿವೆ. ಅವೆಂದರೆ, ಜಾಗತಿಕ ಹಣದುಬ್ಬರ, ಹೆಚ್ಚುತ್ತಿರುವ ಬೇಡಿಕೆ, ಕೃಷಿ ಇಳಿಮುಖ, ದ್ವಿದಳ ಧಾನ್ಯಗಳ ಬೆಳೆ ಕಡಿಮೆಯಾಗಿರುವುದು, ಅಸಮರ್ಪಕ ನಿರ್ವಹಣೆ ಮತ್ತು ವಿತರಣೆ, ದಲ್ಲಾಳಿಗಳಿಂದ ಅನಧಿಕೃತ ದಾಸ್ತಾನು, ಸಾರಿಗೆ ದರ, ಪೆಟೊ್ರೀೀಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮೊದಲಾದವು ಕಾರಣವಾಗಿವೆ.
ಸದ್ಯ ಮಾರುಕಟ್ಟೆಯಲ್ಲಿ ಉದ್ದಿನಬೇಳೆ 196 ರೂ, ತೊಗರಿ 166 ರೂ, ಹೆಸರು 120 ರೂ.ನಲ್ಲಿ ಮಾರಾಟವಾಗುತ್ತಿದೆ. ಕೇಂದ್ರ ಸರಕಾರ ಬೆಲೆ ಇಳಿಕೆಯಾಗಿ ಎಲ್ಲ ದ್ವಿದಳ ಧಾನ್ಯಗಳು 120 ರೂ.ನಲ್ಲಿ ಲಭ್ಯವಾಗುವಂತೆ ಮಾಡಬೇಕೆಂದು ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಜೊತೆಗೆ ಕಾಪು ದಾಸ್ತಾನು ಮಾಡುವವರ ವಿರುದ್ಧ ದಾಳಿ ನಡೆಸಿ ವಶಪಡಿಸಿಕೊಳ್ಳಲು ಸೂಚಿಸಿದೆ. ಇದರ ಫಲವಾಗಿ ಮೂರು ತಿಂಗಳ ಹಿಂದೆ ಕರ್ನಾಟಕದಲ್ಲಿ (ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ) ಅತ್ಯಧಿಕ ಪ್ರಮಾಣದಲ್ಲಿ ಕಾಪು ದಾಸ್ತಾನು ಪತ್ತೆ ಮಾಡಲಾಗಿದೆ. ತೊಗರಿಯ ಕಣಜ ಎಂದೇ ಕರೆಯಲ್ಪಡುವ ಈ ಜಿಲ್ಲೆಗಳಲ್ಲಿ ಈ ವರ್ಷ ಇಳುವರಿ ಕಡಿಮೆಯಾಗಿದೆ. ಜೊತೆಗೆ ಬೆಳೆಯುವ ಪ್ರಮಾಣವೂ ಸಾಕಷ್ಟು ಕುಂಠಿತಗೊಂಡಿದೆ.
ಇವುಗಳನ್ನು ವಿಶ್ಲೇಷಿಸಿದರೆ, ಇತ್ತೀಚೆಗೆ ರೈತರು ಅಸಮರ್ಪಕ ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ ಸಿಗದ ಕಾರಣ ಕೃಷಿಯಿಂದ ಬಹುತೇಕ ವಿಮುಖರಾಗಿದ್ದಾರೆ. ಆಧುನಿಕ ತಂತ್ರಜ್ಞಾನ ಕೃಷಿಯಲ್ಲಿ ಅಳವಡಿಕೆಯಾಗುತ್ತಿರುವುದರಿಂದ ಹೆಚ್ಚು ಪ್ರಮಾಣದಲ್ಲಿ ದ್ವಿದಳ ಧಾನ್ಯ ಬೆಳೆಯುವ ಕ್ರಾಂತಿಯನ್ನು ಮಾಡಬೇಕಿದೆ. ಈ ವರ್ಷವನ್ನು ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷವೆಂದು ಆಚರಿಸಲಾಗುತ್ತಿದೆ. ರೈತರಲ್ಲಿ ಈ ಬಗ್ಗೆ ಆಸಕ್ತಿ ಹುಟ್ಟಿಸಿ ಹೆಚ್ಚು ಇಳುವರಿಯ ಬೀಜ ನೀಡಿ, ಸೌಲಭ್ಯಗಳನ್ನು ಒದಗಿಸಬೇಕಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಬರಗಾಲ ಈ ವರ್ಷ ಎದುರಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲೂ ಇದರ ಪರಿಣಾಮವಾಗಿ ಳೆೆ ಸಿಗಲೇ ಇಲ್ಲ. ಸಕಾಲದಲ್ಲಿ ಮಳೆಯಾಗದೆ ಬೆಳೆಗಳೆಲ್ಲ ಒಣಗಿಹೋದವು. ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ತಳಿಯ ಸಂಶೋಧನೆಯಾಗಬೇಕು. ಭಾರತ ದ್ವಿದಳ ಧಾನ್ಯಗಳನ್ನು ಅತ್ಯಧಿಕ ಪ್ರಮಾಣದಲ್ಲಿ (ಶೇ. 39ರಷ್ಟು)ಬೆಳೆಯುವ ದೇಶವಾದರೂ ಪ್ರತಿವರ್ಷ ಸುಮಾರು 3.5 ಮಿಲಿಯನ್ ಟನ್ನಷ್ಟು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ತಾಂಜಾನಿಯಾದಿಂದ ತೊಗರಿಬೇಳೆಯನ್ನು, ಟರ್ಕಿಯಿಂದ ಉದ್ದಿನಬೇಳೆಯನ್ನು ಮತ್ತು ಮ್ಯಾನ್ಮಾರ್ನಿಂದ ವಿವಿಧ ಧಾನ್ಯಗಳನ್ನು ತರಿಸಿಕೊಳ್ಳುತ್ತಿದೆ. ದೇಶಕ್ಕೆ ವರ್ಷಕ್ಕೆ ಸುಮಾರು 22 ಮಿಲಿಯನ್ ಟನ್ನಷ್ಟು ದ್ವಿದಳ ಧಾನ್ಯ ಬೇಕಾಗಿದೆ.
ದೇಶದಲ್ಲಿ ಕನಿಷ್ಟ ಬೆಂಬಲ ಬೆಲೆ ಸಂಪೂರ್ಣ ವಿಫಲವಾಗಿದೆ. ಏಕೆಂದರೆ ಸರಕಾರ ಕೊಡುವ ಬೆಲೆ ರೈತರಿಗೆ ಯಾತಕ್ಕೂ ಸಾಲದಂತಾಗಿದೆ. ಇದೇ ವೇಳೆ ಖಾಸಗಿಯವರು ಬೆಂಬಲಬೆಲೆಯ ದುಪ್ಪಟ್ಟು ಬೆಲೆಯನ್ನು ಕೊಟ್ಟು ಮನೆ ಬಾಗಿಲಲ್ಲೇ ಖರೀದಿಸುತ್ತಾರೆ. ರೈತರು ಇದರಿಂದ ಖಾಸಗಿಯವರಿಗೇ ಕೊಡುವ ಸ್ಥಿತಿಯನ್ನು ಸರಕಾರವೇ ನಿರ್ಮಿಸಿದೆ.
ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ. ಬೆಲೆ ಕಡಿಮೆ ಇದ್ದಾಗ ಸಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಟ್ಟುಕೊಂಡು ಸಾಮಾನ್ಯ ಜನರಿಗೆ ಸಿಗದಂತೆ ಮಾಡುತ್ತಾರೆ. ಸರಬರಾಜು ತನ್ನಿಂತಾನೆ ಕಡಿಮೆಯಾಗುವಂತೆ ಮಾಡಿ ಬೆಲೆ ಏರಿಸುತ್ತಾರೆ. ನಂತರ ತಮ್ಮ ಕಾಪು ದಾಸ್ತಾನನ್ನು ಮಾರುಕಟ್ಟೆಗೆ ಬಿಡುತ್ತಾರೆ. ಆಗ ಅತಿ ಹೆಚ್ಚಿನ ಬೆಲೆಯ ಲಾಭ ಪಡೆಯುತ್ತಾರೆ. ಸರಕಾರ ಇಂತಹ ಕಾಪು ದಾಸ್ತಾನಿಗರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು.
ಜೊತೆಗೆ ಹೆಚ್ಚು ಹೆಚ್ಚು ಬೆಳೆಯಲು ರೈತರನ್ನು ಉತ್ತೇಜಿಸುವ, ಆ ದಿಸೆಯಲ್ಲಿ ಆಂದೋಲನವನ್ನೇ ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷದಲ್ಲಿ ಮಾಡಬೇಕಿದೆ. ರೈತರಿಗೆ ಬೇಕಾದ ತಂತ್ರಜ್ಞಾನ ಸಿಗುವಂತೆ ಮಾಡಬೇಕಿದೆ. ಬೆಳೆ ವಿಮೆಯನ್ನು ಕೊಡಬೇಕಿದೆ. ಮರಳಿ ರೈತ ಕೃಷಿಯತ್ತ ಬರುವಂತೆ ಮಾಡುವುದೊಂದೇ ಬೆಳೆ ಹೆಚ್ಚು ಮಾಡಲು ಇರುವ ದಾರಿ. ಸರಕಾರಗಳು ಈ ದಿಸೆಯಲ್ಲಿ ಯತ್ನಿಸಬೇಕಿದೆ. ಆಗ ಮಾತ್ರ ಸುಲಭ ಬೆಲೆಯಲ್ಲಿ ಎಲ್ಲ ಬೆಳೆಗಳು ಸಿಗುವಂತಾಗಲಿವೆ. ಆ ದಿನಗಳಿಗಾಗಿ ಭಾರತದ ಜನರು ಕಾಯುತ್ತಿದ್ದಾರೆ.

No comments:
Post a Comment