ಭಿನ್ನಮತೀಯರ ಅಮಾನತು: ಜೆಡಿಎಸ್ ಮುಂದಿನ ದಾರಿ ಏನು?
ಜೆಡಿಎಸ್ ಚಿಂತನೆ ಬದಲಾಗಬೇಕಿದೆ. ಪಕ್ಷಕ್ಕೇ ಆರ್ಥಿಕ ಸಂಪನ್ಮೂಲವಿರುವವರೇ ಬೇಕಿಲ್ಲ. ಸಂಘಟನಾ ಚತುರರೂ ಬೇಕು. ತೂಕದ ಮಾತನಾಡುವವರೂ, ಮೋಡಿ ಮಾಡುವವರೂ ಬೇಕು. ಅಂತಹವರನ್ನು ಗುರುತಿಸುವ ಕೆಲಸ ಮಾಡಬೇಕಿತ್ತು. ಜೆಡಿಎಸ್ನ 40 ಶಾಸಕರಲ್ಲಿ ಭಿನ್ನಮತೀಯ 6-8 ಶಾಸಕರನ್ನು ಬಿಟ್ಟರೆ ಉಳಿದವರೆಲ್ಲಾ ಕುಮಾರಸ್ವಾಮಿಗೆ ಜೈ ಎನ್ನುವವರೇ ಇದ್ದಾರೆ. ಅವರೊಂದಿಗೆ ನಾಯಕತ್ವ ಬೆಳೆಸಬೇಕೆನ್ನುವ ಬಗ್ಗೆ ಚಿಂತನೆ, ಚರ್ಚೆ ನಡೆಸಿದವರಿಲ್ಲ. ನಾಯಕತ್ವದ ಗಟ್ಟಿತನ ಎಲ್ಲಿರುವುದಿಲ್ಲವೋ ಅಲ್ಲಿ ಟೊಳ್ಳುತನ ಎದುರಾಗುತ್ತದೆ, ಪಕ್ಷ ಬಲಹೀನವಾಗುತ್ತದೆ.
ಜಾತ್ಯತೀತ ಜನತಾ ದಳ (ಜೆಡಿಎಸ್) ಬಿಕ್ಕಟ್ಟಿನ ಮೇಲೆ, ಬಿಕ್ಕಟ್ಟು ಎದುರಿಸುತ್ತಿದ. ಮೊನ್ನೆ ನಡೆದ ಎಂಎಲ್ಸಿ ಚುನಾವಣೆಯಲ್ಲೂ ಅದರ ಕೆಲವು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿ ತಮ್ಮ ಪಕ್ಷದ ಅಧಿಕೃತ ಎರಡನೆಯ ಅಭ್ಯರ್ಥಿ ಸೋಲುವಂತೆ ಮಾಡಿದ್ದಾರೆ. ಇದಾದ ಬಳಿಕ ಮಾರನೆಯ ದಿನ ಜರುಗಿದ ರಾಜ್ಯಸಭೆ ಅಭ್ಯರ್ಥಿಯ ಚುನಾವಣೆಯಲ್ಲೂ ಇದೇ ಮರುಕಳಿಸಿದೆ. ಭಿನ್ನಮತೀಯರೆನಿಸಿಕೊಂಡ 8 ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸುವ ಧೈರ್ಯವನ್ನು ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿಯೂ, ಜೆಡಿಎಸ್ ರಾಷ್ಟ್ರೀಯ ಅದ್ಯಕ್ಷರೂ ಆದ ಎಚ್. ಡಿ. ದೇವೇಗೌಡರು ತೋರಿಸಿದ್ದಾರೆ.
ಜೆಡಿಎಸ್ ಬಿಕ್ಕಟ್ಟು ಇಂದು-ನಿನ್ನೆಯದಲ್ಲ. ಆರೆಂಟು ತಿಂಗಳಿಂದ ಮುದುವರೆದುಕೊಂಡೇ ಬಂದಿದೆ. ಶಾಸಕ ಚೆಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್ ಮತ್ತು ಎಚ್. ಸಿ. ಬಾಲಕೃಷ್ಣ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅದ್ಯಕ್ಷ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡೇ ಬಂದಿದ್ದಾರೆ. ಆಗಾಗ್ಗೆ ಇದು ಜ್ವಲಿಸುತ್ತಾ, ಕೆಲವೊಮ್ಮೆ ತಣ್ಣಗಾಗುತ್ತ ಇದ್ದಿತ್ತು. ಆದರೆ ಯಾವಾಗಲಾದರೊಮ್ಮೆ ಭುಗಿಲೇಳುವುದು ನಿಶ್ಚಿತವಾಗಿತ್ತು. ಅದು ಈಗ ನಿಜವಾಗಿದೆ. ಪರಿಣಾಮವಾಗಿ 8 ಶಾಸಕರನ್ನು ಪಕ್ಷದಿಂದ ಹೊರಹಾಕಲಾಗಿದೆ.
ಯಾವುದೇ ಪಕ್ಷದಲ್ಲಿರಲಿ, ಯಾವಾಗ ಪಕ್ಷದ ಹೈಕಮಾಂಡ್ ಬಲಿಷ್ಠವಿರುತ್ತದೆಯೋ ಪಕ್ಷ ಬಲಿಷ್ಠವಿರುತ್ತದೆ. ಯಾವಾಗ ಸ್ಥಳಿಯ ನಾಯಕರೇ ಬಲಿಷ್ಠರಾಗುತ್ತಾರೋ ಆಗ ಹೈಕಮಾಂಡ್ ಬಲಹೀನವಾಗುತ್ತದೆ. ಜೆಡಿಎಸ್ ಉದಾಹರಣೆಯನ್ನು ಇಲ್ಲಿ ಗಮನಿಸಬಹುದು. ಹೈಕಮಾಂಡ್ ದೇವೇಗೌಡರು ಮತ್ತು ಅವರ ಪುತ್ರರಾದ ಕುಮಾರಸ್ವಾಮಿ , ರೇವಣ್ಣ ಎಲ್ಲ ಅಧಿಕಾರ ಚಲಾಯಿಸುತ್ತ ಇಲ್ಲಿಯವರೆಗೆ ನಿಯಂತ್ರಿಸುತ್ತಿದ್ದರು. ಆದರೆ ಭಿನ್ನಮತೀಯ ಐವರು ಹಿರಿಯ ನಾಯಕರು ತೊಡೆತಟ್ಟಿದಂದಿನಿಂದ ಯಾವ ಕ್ರಮವನನೂ ತೆಗೆದುಕೊಳ್ಳದೆ ಭಿನ್ನಮತ ಬೆಳೆಯಲು ಅವಕಾಶ ಕಲ್ಪಿಸಿದ್ದರು. ಮೊದಲೇ ಚಿವುಟಿ ಹಾಕಿದ್ದರೆ ಪಕ್ಷಕ್ಕೆ ಈ ಕ್ಯಾನ್ಸರ್ ಅಂಟುತ್ತಿರಲಿಲ್ಲ. ಈಗ ಅದು ವ್ಯಾಪಿಸುತ್ತಿರುವುದನ್ನು ಅರಿತು ಕ್ರಮ ಜರುಗಿಸಿದ್ದಾರೆ.
ಹಾಗಾದರೆ ಇದಕ್ಕೆಲ್ಲ ಕಾರಣ ಹೈಕಮಾಂಡೇ ಅಥವಾ ಭಿನ್ನಮತಿಯರೇ ಎನ್ನುವುದನ್ನು ವಿಶ್ಲೇಷಿಸಿದರೆ, ಒಂದು ಹಂತದಲ್ಲಿ ಅಪ್ಪ-ಮಕ್ಕಳೇ ಕಾರಣ ಎನ್ನಬಹುದು. ಏಕೆಂದರೆ, ದೇವೇಗೌಡ ಮತ್ತು ಕುಮಾರಸ್ವಾಮಿ ಪಕ್ಷದ ಮೇಲೆ ಹಿಡಿತ ಹೊಂದಿರುವವರಾದರೂ ಪಕ್ಷ ಸಂಘಟಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಎರಡನೆಯ ತಲೆಮಾರಿನ ನಾಯಕರನ್ನು ಬೆಳೆಸಲೇ ಇಲ್ಲ. ಬೆಳೆಸಿದರೆ ತಮ್ಮ ಬುಡಕ್ಕೇ ಇವರು ಕೊಡಲಿ ಹಾಕುತ್ತಾರೆಂಬ ಭಯ ಇವರಲ್ಲಿರಬಹುದು. ಅತವ ತಮ್ಮ ಕುಟುಂಬದ ಆಸ್ತಿಯಾಗಿರುವ ಪಕ್ಷ ಬೇರೆಯವರ ಕೈವಶವಾಗಬಹುದೆನ್ನುವ ಭಯವೂ ಆಗಿರಬಹುದು.
ಅದಕ್ಕಾಗಿಯೇ ದೇವೇಗೌಡರು ತಮ್ಮ ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಬೆಳೆಸಲಾರಂಭಿಸಿದ್ದರು. ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕಾರಣ ಎಂದೂ ಯಶಸ್ವಿಯಾಗದು. ಎಲ್ಲೋ ಆಗೊಮ್ಮೆ, ಈಗೊಮ್ಮೆ ಇದು ಸಾಧನೆ ಮಾಡಿರಬಹುದು. ಇದು ದೇವೇಗೌಡ ಮತ್ತು ಅವರ ಮಕ್ಕಳಿಗೆ ಗೊತ್ತಿರದ ವಿಷಯವೇನಲ್ಲ. ಇಡೀ ದಿನ ರಾಜಕೀಯದಲ್ಲೇ ಮುಳುಗಿರುವ, ತಂತ್ರಗಾರಿಕೆಯಲ್ಲೇ ಕಾಲಕಳೆಯುವ ಇವರಿಗೆ ಇದು ಅರ್ಥವಾಗದ ವಿಚಾರವಂತೂ ಅಲ್ಲ. ಇಷ್ಟಾದರೂ ಇದರಲ್ಲೇ ಮುಂದುವರೆಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.
ಸಿದ್ಧಾಂತವಿಲ್ಲದವರು:
ಮೊದಲನೆಯದಾಗಿ, ಭಿನ್ನಮತೀಯ ಕೆಲಸಕ್ಕೆ ಕೈ ಹಾಕಿದವರನ್ನು ಮಾತುಕತೆ ಮೂಲಕ ಸರಿದಾರಿಗೆ ತರುವ ಕೆಲಸ ಮಾಡಲಿಲ್ಲ. ಎರಡನೆಯದಾಗಿ, ದುಡ್ಡಿದ್ದವರಿಗೆ, ರಿಯಲ್ ಎಸ್ಟೇಟ್ನವರಿಗೆ ಟಿಕೆಟ್ ಕೊಡುತ್ತ ಚುನಾವಣೆ ನಡೆಸಿದ್ದನ್ನು (ಮಲ್ಯ, ಫಾರೂಕ್ ಮೊದಲಾದವರು) ಕುಮಾರಸ್ವಾಮಿ ಮುಂದಾದ ಹಲವರು ನಿದರ್ಶನ ಕಾಣಬಹುದು. ಆದರೆ, ದೇವೇಗೌಡರಿಗೆ ಶಾಸಕ ವೈಎಸ್ವಿ ದತ್ತ್ತಾ ಅವರಂತಹ ಕೆಲವು ಚಿಂತಕರು ಹೇಳಿದ ಮಾತು ಹಿಡಿಸುತ್ತಿತ್ತು. ಹಾಗಾಗಿ, ಅವರು ದುಡ್ಡಿದ್ದವರಿಗೆ ಟಿಕೆಟ್ ಕೊಡಲು ಒಪ್ಪುತ್ತಿರಲಿಲ್ಲ. ಆದರೆ, ಎಚ್ಡಿಕೆ ಮಾತ್ರ ಹಣದ ಹಿಂದೆ ಬಿದ್ದವರಾಗಿದ್ದರು. ಮೂರನೆಯದಾಗಿ, ಜಾತ್ಯತೀತ ಹೆಸರನ್ನು ಇಟ್ಟುಕೊಂಡಾಕ್ಷಣ ಆ ಪಕ್ಷ ಅದೇ ಸಿದ್ಧಾಂತಕ್ಕೆ ಅಂಟಿಕೊಂಡಿರಬೇಕಿಲ್ಲ ಎನ್ನುವುದು ಅಪ್ಪ-ಮಕ್ಕಳ ನಿಲುವು. ಇದನ್ನು ಪದೇ ಪದೇ ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಸಿದ್ಧಾಂತವಿಲ್ಲದ ಪಕ್ಷ ಇದಾಗಿದೆ.
ಇನ್ನಾದರೂ ಜೆಡಿಎಸ್ ಚಿಂತನೆ ಬದಲಾಗಬೇಕಿದೆ. ಪಕ್ಷಕ್ಕೇ ಆರ್ಥಿಕ ಸಂಪನ್ಮೂಲವಿರುವವರೇ ಬೇಕಿಲ್ಲ. ಸಂಘಟನಾ ಚತುರರೂ ಬೇಕು. ತೂಕದ ಮಾತನಾಡುವವರೂ, ಮೋಡಿ ಮಾಡುವವರೂ ಬೇಕು. ಅಂತಹವರನ್ನು ಗುರುತಿಸುವ ಕೆಲಸ ಮಾಡಬೇಕಿತ್ತು. ಜೆಡಿಎಸ್ನ 40 ಶಾಸಕರಲ್ಲಿ ಭಿನ್ನಮತೀಯ 6-8 ಶಾಸಕರನ್ನು ಬಿಟ್ಟರೆ ಉಳಿದವರೆಲ್ಲಾ ಕುಮಾರಸ್ವಾಮಿಗೆ ಜೈ ಎನ್ನುವವರೇ ಇದ್ದಾರೆ. ಅವರೊಂದಿಗೆ ನಾಯಕತ್ವ ಬೆಳೆಸಬೇಕೆನ್ನುವ ಬಗ್ಗೆ ಚಿಂತನೆ, ಚರ್ಚೆ ನಡೆಸಿದವರಿಲ್ಲ. ನಾಯಕತ್ವದ ಗಟ್ಟಿತನ ಎಲ್ಲಿರುವುದಿಲ್ಲವೋ ಅಲ್ಲಿ ಟೊಳ್ಳುತನ ಎದುರಾಗುತ್ತದೆ, ಪಕ್ಷ ಬಲಹೀನವಾಗುತ್ತದೆ. ಈ ರೀತಿಯಾದರೆ, ತಮ್ಮ ನಂತರ ಪಕ್ಷದ ಗತಿ ಏನಾದೀತೆಂಬ ಕಲ್ಪನೆಯೇ ಅಪ್ಪ-ಮಕ್ಕಳಿಗಿಲ್ಲ. ಕುಮಾರಸ್ವಾಮಿ ಹೇಳುವುದು ಒಂದು, ಮಾಡುವುದು ಒಂದು. ಏಕೆಂದರೆ ಇನ್ನೊಬ್ಬರ ಚಾಡಿಮಾತಿಗೆ ಬೆಲೆ ಕೊಡುವುದೇ ಹೆಚ್ಚು. ಸ್ವಂತ ನಿಲುವಿಲ್ಲ.
ಕೌಟುಂಬಿಕ ಪಕ್ಷವಾಗಿರುವ ಜೆಡಿಎಸ್ನಲ್ಲಿರುವ ಶಾಸಕರಿಗೆ ಈಗ ಅಸ್ತಿತ್ವದ ಪ್ರಶ್ನೆ ಎದ್ದಿದೆ. ಯಾವಾಗ ವ್ಯಕ್ತಿಗೆ ಈ ರೀತಿ ಸಂಭವಿಸುತ್ತದೆಯೋ ಆಗ ಅವಕಾಶವಿರುವಲ್ಲಿ ಆತ ಹೋಗುತ್ತಾನೆ.
ಭಿನ್ನಮತೀಯರ ಆಟ:
ಇನ್ನು, ಭಿನ್ನಮತೀಯರೇನೂ ಸುಭಗರಲ್ಲ. ಜಮೀರ್ ಅಹಮದ್ ಖಾನ್ ಮೊದಲಿನಿಂದಲೂ ಕುಮಾರಸ್ವಾಮಿಯನ್ನು ಹೆದರಿಸುತ್ತಲೇ ಬಂದವರು. ಇವರ ಬಗ್ಗೆ ಎಚ್ಚರವಹಿಸಿ ನಿಯಂತ್ರಿಬೇಕಿತ್ತು. ಆದರೆ ಮುಸ್ಲಿಮ್ ನಾಯಕನೆಂಬ ಕಾರಣಕ್ಕೆ ಮತ್ತು ಇಬ್ಬರೂ ಒಂದು ಕಾಲದಲ್ಲಿ ಜಿಗ್ರಿ ದೋಸ್ತ್ ಆಗಿದ್ದರಿಂದ ಸುಮ್ಮನಾದರು. ಇದನ್ನೇ ಜಮೀರ್ ಸಹ ದುರುಪಯೋಗಪಡಿಸಿಕೊಂಡರು. ಬೆಂಗಳೂರು ನಗರದಲ್ಲಿ ಪ್ರಮುಖ ಜೆಡಿಎಸ್ ನಾಯಕನಾದರು. ತನ್ನನ್ನು ಎದುರು ಹಾಕಿಕೊಂಡರೆ ಕಷ್ಟ ಎಂಬ ಪರಿಸ್ಥಿತಿ ನಿರ್ಮಿಸಿದರು. ಪರಿಣಾಮ ಈಗ ಎದುರಿಸುವಂತಾಗಿದೆ.
ಚೆಲುವರಾಯಸ್ವಾಮಿ ಮಂಡ್ಯ ಸಾಂಸದನಾಗಿದ್ದಾಗಲೇ ಭಿನ್ನಮತೀಯ ಚಟುವಟಿಕೆಗೆ ನಾಂದಿ ಹಾಡಿದವರು. ನಂತರ ಶಾಸಕರಾದರು. ಮಂಡ್ಯದಲ್ಲಿ ತಮ್ಮದೇ ಹಠ ನಡೆಯಬೇಕೆಂದು ಕುಳಿತರು. ಮೊನ್ನೆ ಶಿಕ್ಷಕರ ಕ್ಷೇತ್ರದ ಚುನಾವಣೆಯ ಟಿಕೆಟ್ ಕೊಡುವ ವೇಳೆ ತಾನು ಹೇಳಿದವರಿಗೆ ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಿದ್ದಾಜಿದ್ದಿಗೆ ಬಿದ್ದವರಂತೆ ಅಡ್ಡಮತ ಹಾಕಿ ಮುಯ್ಯಿ ತೀರಿಸಿಕೊಂಡಿದ್ದಾರೆ. ನಿನ್ನೆ ಅಮಾನತಾಗಿದ್ದಾರೆ.
ಮಾಗಡಿ ಶಾಸಕ ಎಚ್. ಸಿ ಬಾಲಕೃಷ್ಣ ಈ ಹಿಂದೆಯೇ ಜಮೀರ್ರಂತೆ ಸಿಡಿದೆದ್ದವರು. ಒಂದು ಹಂತದಲ್ಲಿ ಬಿಜೆಪಿ ಸೇರುತ್ತಾರೆಂಬ ವದಂತಿ ಹಬ್ಬಿತ್ತು. ಇದನ್ನು ಈಗ ಅವರೇ ಹೇಳಿಕೊಂಡಿದ್ದಾರೆ. ಅದರೆ ಜಮೀರ್, ಚೆಲುವರಾಯಸ್ವಾಮಿಯಿಂದಾಗಿ ಇಲ್ಲೇ ಉಳಿದು ಅವರ ಜೊತೆ ಸೇರಿ ಅಪ್ಪ-ಮಕ್ಕಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದರು. ಇವರ ಜೊತೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಹ ಸೇರಿದ್ದಾರೆ. ಇವರೆಲ್ಲರ ಮುಖಂಡತ್ವದಲ್ಲಿ ಹಲವು ತಿಂಗಳಿಂದ ನಡೆದಿದ್ದ ಭಿನ್ನಮತೀಯ ಚಟುವಟಿಕೆ ನಿನ್ನೆ ಒಂದು ಹಂತಕ್ಕೆ ಬಂದಿದೆ.
ಜೆಡಿಎಸ್ ಸಮಸ್ಯೆ:
ಜೆಡಿಎಸ್ಗೆ ಮೊದಲಿನಿಂದಲೂ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಸವಾಲಿನ ಕೆಲಸವಾಗಿತ್ತು. ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ವೇಳೆ ಇವರ ಜಗಳ ತಾರಕಕ್ಕೇರಿದ್ದರಿಂದ ಅಭ್ಯರ್ಥಿಯ ಗೆಲುವು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಅದರಂತೆ ಹಠ ಸಾಧಿಸಿ ತೋರಿಸಿದ್ದಾರೆ ಭಿನ್ನಮತೀಯ ನಾಯಕರು. ಬಂಡಾಯ ಉಪಶಮನ ಮಾಡಲು ಕುಮಾರಸ್ವಾಮಿ ಮುಂದಾಗದೇ ಇದ್ದುದು, ಅನಗತ್ಯ ಹೇಳಿಕೆ ಕೊಟ್ಟು ಪರಿಸ್ಥಿತಿ ವಿಷಮಿಸುವಂತೆ ಮಾಡಿದ್ದು ಇನ್ನಷ್ಟು ಅದು ಬೆಳೆಯಲು ಕಾರಣ ಎನ್ನಲೇಬೇಕು. ಕನಿಷ್ಟ ಮಾತುಕತೆ ಮೂಲಕವಾದರೂ ಇದನ್ನು ಪರಿಹರಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಬದಲಾಗಿ ಈ ಭಿನ್ನಮತೀಯರ ಕ್ಷೇತ್ರದಲ್ಲಿ ಬದಲೀ ನಾಯಕರನ್ನು ಬೆಳೆಸಲು ಎಚ್ಡಿಕೆ ಯತ್ನಸಿದ್ದೂ ಸಹ ಇವರ ಹೆಚ್ಚಿನ ಆಕ್ರೋಶಕ್ಕೆ ಕಾರಣವಾಗಿತ್ತು.
ಅಪ್ಪ-ಮಗ ಬದಲಾಗದಿದ್ದರೆ ಜೆಡಿಎಸ್ಗೆ ಖಂಡಿತ ಭವಿಷ್ಯವಿಲ್ಲ. 40 ಶಾಸಕರನ್ನು ಹೊಂದಿರುವುದರಿಂದ ಆರ್ಭಟಿಸುತ್ತಿರುವ ದೇವೇಗೌಡ ಮತ್ತು ಎಚ್ಡಿಕೆ ಶಾಸಕರನ್ನು ಕನಿಷ್ಠ ನಂಬಿಕೆಯಲ್ಲಿಟ್ಟುಕೊಳ್ಳುವಲ್ಲಿಯೂ ವಿಫಲರಾದರು. ಅವರು ಸಿಟ್ಟಿಗೆದ್ದಾಗ ಅವರನ್ನು ಒಲೈಸುವ ಕೆಲಸವನ್ನೂ ಮಾಡಲಿಲ್ಲ. ಪರಿಣಾಮವಾಗಿ, ಬೆಂಗಳೂರು ನಗರದಲ್ಲಿ ಇದ್ದ ತನ್ನ ಮೂವರೂ ಶಾಸಕರನ್ನೂ ಈಗ ಕಳೆದುಕೊಳ್ಳುವ ಹಂತದಲ್ಲಿದೆ. ಶಾಸಕರಾದ ಗೋಪಾಲಯ್ಯ ಮತ್ತು ಅಖಂಡ ಶ್ರೀನಿವಾಸ್ ಸಹ ಅಮಾನತಾಗಿದ್ದಾರೆ. ಬಿಜೆಪಿ ಜೊತೆ ಸೇರಿ ಬಿಬಿಎಂಪಿ ಅಡಳಿತ ಮಾಡಲು ಮುಂದಾಗಿದ್ದ ಜೆಡಿಎಸ್ಗೆ ಇದೂ ಸಹ ಮುಳ್ಳಾಗಲಿದೆ. ಏಕೆಂದರೆ, ಅಲ್ಲಿರುವ ಜೆಡಿಎಸ್ನ 14 ಬಿಬಿಎಂಪಿ ಸದಸ್ಯರಲ್ಲಿ 12 ಸದಸ್ಯರು ಈ ಶಾಸಕತ್ರಯರ ಶಿಷ್ಯರಾಗಿದ್ದಾರೆ.

No comments:
Post a Comment