ಎಸ್‌ಪಿ- ಕಾಂಗ್ರೆಸ್ ಮೈತ್ರಿ: ಯಾರಿಗೆ ಲಾಭ, ಯಾರಿಗೆ ನಷ್ಟ?
* ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ-2017
ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಯಿಂದ ಬಿಜೆಪಿ ಮತ್ತು ಬಹುಜನ ಸಮಾಜವಾದಿ ಪಕ್ಷಕ್ಕೆ ನಷ್ಟವಾಗುತ್ತದೆಯೇ ಅಥವಾ ಸಮಾಜವಾದಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆಯೇ ಎನ್ನುವ ಪ್ರಶ್ನೆ ಈಗ ಚರ್ಚಿತವಾಗುತ್ತಿದೆ. ಎಸ್‌ಪಿಯು ಪಕ್ಷದೊಳಗಿನ ಇತ್ತೀಚಿನ ಒಡಕನ್ನು ಮುಚ್ಚಿಕೊಂಡ ನಂತರ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿ ನಾಲ್ಕಾರು ಪಕ್ಷಗಳು ಸೇರಿ ಮೈತ್ರಿ ಮಾಡಿಕೊಂಡು ಜಯಗಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಮೈತ್ರಿಯನ್ನು ಮಹಾಘಟಬಂಧನ್ ಎಂದು ಕರೆಯಲಾಗಿತ್ತು.
ಈಗ ಉ. ಪ್ರ. ದಲ್ಲಿ ಈ ಘಟಬಂಧನ್‌ದಿಂದ ಆಗುವ ಲಾಭ- ನಷ್ಟಗಳ ಬಗ್ಗೆ ಚಿಂತನೆ ನಡೆಯುತ್ತಿದೆ. ಆಳ್ವಿಕೆಯಲ್ಲಿರುವ ಎಸ್‌ಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ನಡೆಸಿರುವ ಪ್ರಯತ್ನವಿದು. ಕಾಂಗ್ರೆಸ್ ಮತ್ತು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ಜೊತೆ ಮೈತ್ರಿ ನಡೆದಿದೆ.ಬಿಜೆಪಿಯ ಪ್ರಾಬಲ್ಯವನ್ನು ಕಡಿಮೆಮಾಡುವುದು ಇದರ ಮೂಲ ಉದ್ದೇಶ ಎಂದು ಬೇರೆ ಹೇಳಬೇಕಾಗಿಲ್ಲ. ಬಿಜೆಪಿ ಉಪ್ರದಲ್ಲಿ ವಿಧಾನಸಭೆಯ ಆಧಿಕಾರಕ್ಕೇರುವ ಅವಕಾಶವನ್ನು ಕಳೆದುಕೊಂಡರೆ ಮುಂದೆ ಬರಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಇದರ ಪರಿಣಾಮವಾಗಲಿದೆ ಎಂದು ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೈತ್ರಿಯಿಂದ ಗೆಲುವಿನ ಸಾಧ್ಯತೆಯನ್ನು ಎಸ್ಪಿ ಹೆಚ್ಚಿಸಿಕೊಂಡಿದೆ. ಮುಸ್ಲಿಂ ಮತವನ್ನು ಇನ್ನಷ್ಟು ಹೆಚ್ಚು ಪಡೆಯಲು ಸಾಧ್ಯವಿದೆ. ಜೊತೆಗೆ ಬ್ರಾಹ್ಮಣ ಸಮುದಾಯದ ಒಂದಷ್ಟು ಮತವು ಅದರ ಪಾಲಿಗೆ ಬರಲಿದೆ. ಕಾಂಗ್ರೆಸ್‌ಗೆ ಮೈತ್ರಿಯಿಂದ ಹೆಚ್ಚಿನ ಲಾಭವಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಧನೆ ಮಾಡಿದಂತೆ ಇಲ್ಲಿಯೂ ಎಸ್ಪಿ ನೆರವಿನಿಂದ ಇನ್ನಷ್ಟು ತಲೆ ಎತ್ತಲು ಅವಕಾಶವಾಗಲಿದೆ. ಆದರೆ ಮಾಯಾವತಿ ಮಾತ್ರ ಇಲ್ಲಿಯವರಗೆ ಮೈತ್ರಿಯಿಂದ ತನಗೆ ಲಾಭ ಅಥವಾ ಹಾನಿ ಆಗುವುದರ ಬಗ್ಗೆ ಚಕಾರ ಎತ್ತಿಲ್ಲ. ಕಾಂಗ್ರೆಸ್ ಸುಮಾರು 6 ತಿಂಗಳ ಹಿಂದೆಯೇ ರಾಜಕೀಯ ತಂತ್ರಜ್ಞ ಪ್ರಶಾಂತ್ ಭೂಷಣ್ ಅವರಿಂದ ಚುನಾವಣೆ ಎದುರಿಸುವ ಬಗ್ಗೆ ಸಾಕಷ್ಟು ತಂತ್ರಗಾರಿಕೆಯನ್ನು ಪಡೆದುಕೊಂಡಿತ್ತು. ಸ್ವತಂತ್ರವಾಗಿ ಗೆದ್ದುಬರುವುದು ಸಾಧ್ಯವಿಲ್ಲದ ಮಾತು ಎನ್ನುವುದು ಕಾಂಗ್ರೆಸ್‌ಗೂ ಗೊತ್ತಿತ್ತು. ಅದೇ ಕಾರಣದಿಂದ ಈಗ ಎಸ್‌ಪಿ ಜೊತೆ ಸೈಕಲ್ ಸವಾರಿ ಆರಂಭಿಸಿದೆ.
ಮೈತ್ರಿ ಆಶ್ಚರ್ಯಕರ ಫಲಿತಾಂಶವನ್ನು ಉಂಟು ಮಾಡಬಲ್ಲದೇ? :
ಮೊದಲನೆಯದಾಗಿ, ಚುನಾವಣೆ ಸಮೀಕ್ಷೆ ನಡೆಸಿದ ಎಬಿಪಿ- ನೈಲ್ಸೆನ್, ಎಬಿಪಿ-ಸಿಎಸ್ಡಿಎಸ್ ಯುಪಿಯಲ್ಲಿ ಅತಂತ್ರ ವಿಧಾನಸಭೆ ಬರಲಿದೆ ಎಂದಿವೆ. ಬಿಎಸ್‌ಪಿ ಅಥವಾ ಎಸ್‌ಪಿ ಅಧಿಕಾರದ ಹತ್ತಿರಕ್ಕೆ ಬರಬಹುದು ಎನ್ನುವ ಮಾತನ್ನು ಹೇಳಿವೆ. ಕಾಂಗ್ರೆಸ್ ಶೇ 8ರಿಂದ 10ರಷ್ಟು ಮತ ಗಳಿಸಬಹುದೆಂಬ ಲೆಕ್ಕಾಚಾರವಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ನಡೆದಿದೆ. 2007 ಮತ್ತು 2012ರಲ್ಲಿ ಎಸ್‌ಪಿ ಶೇ. 30ರಷ್ಟು ಮತಗಳಿಸಿತ್ತು. 2017ರಲ್ಲಿ ಪೈಪೋಟಿ ಹೆಚ್ಚಿದೆ. ಈ ಬಾರಿ ಶೇ. 30ರಷ್ಟು ಮತಗಳಿಸುವವರಿಗೆ ಗೆಲುವು ಗ್ಯಾರಂಟಿ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಡೆಯುವ ಮತಗಳು ಅಧಿಕಾರಕ್ಕೇರುವವರಿಗೆ ಬಹಳ ಉಪಯೋಗಕ್ಕೆ ಬರಲಿವೆ. ಕಾಂಗ್ರೆಸ್ ಜೊತೆ ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು ಇದೇ ಉದ್ದೇಶಕ್ಕೆ.
ಉಪ್ರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಪಿಯ ಶೇ. 54ರಷ್ಟು ಮತದಾರರು ಯಾದವರು, ಮುಸ್ಲಿಮರು ಮತ್ತು ಹಿಂದುಲಿದ ವರ್ಗದವರು. ಮೈತ್ರಿ ಮಾಡಿಕೊಂಡರೆ ಒಂದೋ ಎಸ್‌ಪಿಗೆ ಅಥವಾ ಕಾಂಗ್ರೆಸ್‌ಗೆ ಈ ಮತ ಸೇರುತ್ತದೆ. ಬ್ರಾಹ್ಮಣರ ಮತ ಶೇ. 5ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಎಸ್‌ಪಿ- ಕಾಂಗ್ರೆಸ್‌ಗೆ ಬರಲಿದೆ. ಯಾದವರ ಮತ ಹೆಚ್ಚುಕಡಿಮೆ ಮುಲಾಯಂಗೆ ಸೇರುವುದು ನಿಶ್ಚಿತ. ಕಾಂಗ್ರೆಸ್ ತನ್ನದೇ ಆದ ಕೆಲವು ಸಾಂಪ್ರದಾಯಿಕ ಮತಬ್ಯಾಂಕ್ ಇದೆ. ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬ್ರಾಹ್ಮಣರು, ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರು ಮತ್ತು ದಲಿತರಿದ್ದಾರೆ. ಬಿಎಸ್‌ಪಿಯು ದಲಿತ ಮತಗಳ ಬ್ಯಾಂಕ್ ಆಗಿರುವುದರಿಂದ ಕಾಂಗ್ರೆಸ್ ಪರ ದಲಿತ ಮತ ಕಡಿಮೆಯಾಗುತ್ತಿದೆ. ಆದರೆ ಮುಸ್ಲಿಂ ಪ್ರಮಾಣ ಇಳಿಕೆಯಾಗಿಲ್ಲ. ಅಧಿಕಾರಕ್ಕೆ ಬರುವ ಸಂಭವನೀಯತೆಯನ್ನು ಗಮನಿಸಿ ದಲಿತ ಮತ ಚಲಾವಣೆ ಹೆಚ್ಚುಕಡಿಮೆಯಾಗಲಿದೆ.
ಶೀಲಾ ದೀಕ್ಷಿತ್ ಅವರನ್ನು ಉಪ್ರ ಸಿಎಂ ಎಂದು ಘೋಷಿಸಲು ಕಾಂಗ್ರೆಸ್ ಮುಂದಾಗಿದ್ದು ಬ್ರಾಹ್ಮಣ ಮತ ಪಡೆಯುವ ಉದ್ದೇಶದಿಂದ. ಆದರೆ ಮೈತ್ರಿ ನಂತರ ಶೀಲಾ ಅಖಿಲೇಶ್ ನಂತರದ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಸಿದ್ದರಾಗಲಿಲ್ಲ. ಇದರಿಂದ ಬ್ರಾಹ್ಮಣ ಮತಗಳು ಎಸ್‌ಪಿಗೆ ಮುಳುವಾಗಬಹುದು ಎಂದು ಸಹ ಲೆಕ್ಕಾಚಾರ ಹಾಕಲಾಗುತ್ತಿದೆ. ಆದರೆ ಕಾಂಗ್ರೆಸ್‌ಗೆ ಇವು ಲಭಿಸಲಿವೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಬ್ರಾಹ್ಮಣ ಮತಗಳು ಕಾಂಗ್ರೆಸ್ ಪರವಾದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್‌ನ ಬ್ರಾಹ್ಮಣ ಮುಖಂಡರಾದ ಜಿತಿನ್ ಪ್ರಸಾದ್, ಪ್ರಮೋದ್ ತಿವಾರಿ ಅಥವಾ ಶೀಲಾ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರನ್ನು ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಎರಡನೆಯದಾಗಿ, ಉಪ್ರದ ಜನಸಂಖ್ಯೆಯಲ್ಲಿ ಶೇ. 20ರಷ್ಟು ಮುಸ್ಲಿಮರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರೇ ಕಿಂಗ್‌ಮೇಕರ್ ಆಗುವ ಸಾಧ್ಯತೆ ಇದೆ. ಒಟ್ಟೂ 403 ಸ್ಥಾನಗಳ ಪೈಕಿ 143 ಸ್ಥಾನಗಳು ಮುಸ್ಲೀಂ ಮತಬಾಹುಳ್ಯದ ಕ್ಷೇತ್ರಗಳು. ಹಿಂದಿನ ಚುನಾವಣೆಗಳನ್ನು ಗಮನಿಸಿದಾಗ ಇಲ್ಲಿನ ಮತಗಳು ಬಿಜೆಪಿ ವಿರೋಧಿಯಾಗಿ ಚಲಾವಣೆಯಾಗಿವೆ. ಬಿಎಸ್‌ಪಿಗೆ ಸಾಕಷ್ಟು ಸಂದರ್ದಲ್ಲಿ ಇವರು ನೆರವಾಗಿದ್ದಾರೆ. ಆದರೆ ಈ ಬಾರಿ ಬಿಎಸ್‌ಪಿ ಈ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂದಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಸಿಎಸ್‌ಡಿಎಸ್ ನಡೆಸಿದ ಸಮೀಕ್ಷೆ ಪ್ರಕಾರ, ಈ ಬಾರಿ ಶೇ. 68ರಷ್ಟು ಮುಸ್ಲೀಂ ಮತದಾರರು ಸಮಾಜವಾದಿ ಬೆಂಬಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್‌ಗೂ ಅದರದ್ದೇ ಆದ ಮುಸ್ಲಿಂ ಮತಬ್ಯಾಂಕ್ ಇದೆ. ಇದು ಸಾಧ್ಯವಾದರೆ ಸುಮಾರು ಅರ್ಧದಷ್ಟು ವಿಧಾನಸಭೆಯ ಸ್ಥಾನಗಳನ್ನು ಮೈತ್ರಿ ಪಕ್ಷಗಳು ಗೆಲ್ಲಲು ಸಾಧ್ಯವಿದೆ.
ಮೂರನೆಯದಾಗಿ, ಏಕರೂಪ ನಾಗರಿಕ ನೀತಿ ಸಂಹಿತೆ ಮತ್ತು ತ್ರಿವಳಿ ತಲಾಖ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಕೇಂದ್ರ ಸರಕಾರವು ಇದನ್ನು ಜಾರಿತರಲು ಮುಂದಾಗಿರುವುದರ ವಿರುದ್ದ ಅತಿ ಹೆಚು ಪ್ರತಿಭಟನೆ ಈ ವಿಚಾರವಾಗಿ ನಡೆದಿದ್ದು ಉತ್ತರ ಪ್ರದೇಶದಲ್ಲಿ. ಇದರ ಲಾಭವನ್ನೂ ಮೈತ್ರಿ ಪಕ್ಷಗಳು ಪಡೆಯುವುದರಲ್ಲಿ ಸಂದೇಹವಿಲ್ಲ.
ನಾಲ್ಕನೆಯದಾಗಿ, ಸುಮಾರು 50-60 ಸ್ಥಾನದಲ್ಲಿ ಈ ಮೈತ್ರಿಯಿಂದ ಎಸ್ಪಿ- ಕಾಂಗ್ರೆಸ್‌ಗೆ ಲಾಭವಿದೆ. ಏಕೆಂದರೆ, ಈ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೆ ಬಿಎಸ್ಪಿ ಅಥವಾ ಬಿಜೆಪಿಗೆ ಅನುಕೂಲವಾಗುತ್ತಿತ್ತು. ಈ ಸ್ಥಾನಗಳಲ್ಲಿ ಸುಮಾರು 25 ಕಾಂಗ್ರೆಸ್‌ಗೆ, ಇನ್ನುಳಿದ 25-30 ಸ್ಥಾನ ಎಸ್‌ಪಿ ಪಾಲಾಗಬಹುದು.
ಐದನೆಯದಾಗಿ, ಕಾಂಗ್ರೆಸ್- ಎಸ್‌ಪಿ ಮೈತ್ರಿಯಿಂದಾಗಿ ಇತರೆ ಸಣ್ಣ ಪಕ್ಷಗಳಾದ ಜೆಡಿಯು, ಪೀಸ್ ಪಾರ್ಟಿ, ಆರ್‌ಎಲ್‌ಡಿ ಸಹ ಮೈತ್ರಿಗೆ ಸೇರಿಕೊಂಡಿವೆ. ಇವು ಕನಿಷ್ಠ 20-25 ಸ್ಥಾನ ಗಳಿಸುವುದರಲ್ಲಿ ಸಂಶಯವಿಲ್ಲ. ಇವೆಲ್ಲವುಗಳ ಬೆಂಬಲದಿಂದ ಮೈತ್ರಿಗೆ ಲಾಭವಿದೆ ಎಂದು ಅಂದಾಜಿಸಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದರೆ ದಲಿತ ಮತ್ತು ಬ್ರಾಹ್ಮಣ ಮತಗಳು ಸೇರ್ಪಡೆಯಾಗುತ್ತಿರಲಿಲ್ಲ. ಇದರ ಲಾಭ ಮೂರನೆಯ ಪಕ್ಷಕ್ಕಾಗುತ್ತಿತ್ತು. ಇದನ್ನರಿತೇ ಮುಲಾಯಂ- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ.
......................................................