ಇಂದಿನಿಂದ ಜಿಲ್ಲೆಯಲ್ಲಿ ಬಾಗಿಲು ಮುಚ್ಚಲಿವೆ
ಸುಮಾರು 100 ಮದ್ಯದಂಗಡಿಗಳು
ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ *
ನಿರುದ್ಯೋಗಿಗಳಾಗುವ ಆತಂಕದಲ್ಲಿ ಕೆಲಸಗಾರರು
ಶಿವಮೊಗ್ಗ, ಜುಲೈ 1: ಸುಪ್ರೀಂ ಕೋರ್ಟ್ ತೀರ್ಪಿನಂತೆ ಜುಲೈ 1 ರಿಂದ (ಇಂದಿನಿಂದ) ರಾಷ್ಟ್ರೀಯ ಹೆದ್ದಾರಿಯಂಚಿನಿಂದ ನಿರ್ದಿಷ್ಟ ಅಂತರದಲ್ಲಿರುವ ಮದ್ಯದಂಗಡಿಗಳ ಬಾಗಿಲು ಮುಚ್ಚಲಿವೆ. ಜಿಲ್ಲೆಯಲ್ಲಿ ನೂರಾರು ಮದ್ಯದಂಗಡಿಗಳು ಬಾಗಿಲು ಮುಚ್ಚಲಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ವಹಿವಾಟು ಸ್ಥಬ್ಧಗೊಳಿಸಬೇಕಿದೆ.
ಮತ್ತೊಂದೆಡೆ ಅಬಕಾರಿ ಇಲಾಖೆಯು ಸುಪ್ರೀಂ ಕೋರ್ಟ್ ತೀರ್ಪಿನ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಮುಂದಾಗಿದೆ. ಈಗಾಗಲೇ ಸಂಬಂಧಿಸಿದ ಮದ್ಯದಂಗಡಿಗಳಿಗೆ ನೋಟೀಸ್ ಜಾರಿಗೊಳಿಸಿರುವ ಇಲಾಖೆಯು, ಜುಲೈ 1 ರಿಂದ ಯಾವುದೇ ಕಾರಣಕ್ಕೂ ವಹಿವಾಟು ನಡೆಸಬಾರದು. ನಿಯಮ ಉಲ್ಲಂಘಿಸಿ ವಹಿವಾಟು ನಡೆಸುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಜಿಲ್ಲೆಯ ಇತರೆ ನಗರ ಪಟ್ಟಣಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ನಗರದಲ್ಲಿಯೇ ಅತ್ಯದಿಕ ಮದ್ಯದಂಗಡಿಗಳು ಬಾಗಿಲು ಮುಚ್ಚಲಿವೆ. ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ 206 ಹಾಗೂ 13 ಹಾದು ಹೋಗಿದೆ. ಈ ಎರಡು ಹೆದ್ದಾರಿಯಂಚಿನಲ್ಲಿ ಹಲವು ವೈನ್ಶಾಪ್, ಬಾರ್, ಮದ್ಯ ಮಾರಾಟ ವ್ಯವಸ್ಥೆಯಿರುವ ಹೋಟೆಲ್-ಲಾಡ್ಜ್, ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳು ವಹಿವಾಟು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ.
ತೆರವುಗೊಳ್ಳುವ ಭೀತಿಯಲ್ಲಿದ್ದ ಸುಮಾರು ಆರು ಮದ್ಯದಂಗಡಿಗಳು ಈಗಾಗಲೇ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡು ವಹಿವಾಟು ನಡೆಸುತ್ತಿವೆ. ಉಳಿದ ಕೆಲವು ಅಂಗಡಿಗಳು ಸ್ಥಳಾಂತರ ಪ್ರಕ್ರಿಯೆಯಲ್ಲಿವೆ. ಉಳಿದಂತೆ ಹಲವು ಮದ್ಯ ಮಾರಾಟ ಕೇಂದ್ರಗಳು ನಾನಾ ಕಾರಣಗಳಿಂದ ಇವ್ಯಾವ ಪ್ರಕ್ರಿಯೆ ಆರಂಭಿಸಿಲ್ಲ. ಈ ಮಾರಾಟ ಕೇಂದ್ರಗಳು ಜುಲೈ 1 ರಿಂದ ತಮ್ಮ ವಹಿವಾಟು ಸ್ಥಗಿತಗೊಳಿಸಲೇಬೇಕು.
ಮದ್ಯ ಮಾರಾಟ ಕೇಂದ್ರಗಳ ಬಾಗಿಲು ಮುಚ್ಚಲೇಬೇಕಾದ ಸ್ಥಿತಿಯಲ್ಲಿರುವ ವರ್ತಕರು ಪಾಡಂತೂ ಹೇಳತೀರದಾಗಿದೆ. ತಮ್ಮ ಅಂಗಡಿಯಲ್ಲಿ ಮಾರಾಟವಾಗದೆ ಬಾಕಿ ಉಳಿದಿರುವ ಮದ್ಯವನ್ನು ನಿಯಮಾನುಸಾರ ಬೇರೇಡೆ ವಿಲೇವಾರಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಬೇರೇಡೆ ಸ್ಥಳಾಂತರಗೊಳ್ಳಲು ಜಾಗ ಹುಡುಕಾಡುತ್ತಿದ್ದು, ಸೂಕ್ತ ಸ್ಥಳಾವಕಾಶ ದೊರಕದೆ ಪರದಾಡುವಂತಾಗಿದೆ. ಮತ್ತೊಂದೆಡೆ ಈ ಅಂಗಡಿಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಕೆಲಸಗಾರರು ನಿರುದ್ಯೋಗಿಗಳಾಗುವ ಆತಂಕದಲ್ಲಿದ್ದಾರೆ.
ಜಿಲ್ಲೆಯಲ್ಲಿವೆ 230 ಲೈಸೈನ್ಸ್ ಮದ್ಯದಂಗಡಿಗಳು:
ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ವೈನ್ಶಾಪ್, ಬಾರ್-ರೆಸ್ಟೋರೆಂಟ್, ಎಂಎಸ್ಐಎಲ್, ಹೋಟೆಲ್ - ಲಾಡ್ಜ್ಗಳು, ಕ್ಲಬ್ಗಳು ಸೇರಿದಂತೆ ಒಟ್ಟಾರೆ 230 ಲೈಸೈನ್ಸ್ ಮದ್ಯ ಮಾರಾಟ ಕೇಂದ್ರಗಳಿವೆ. ಇದರಲ್ಲಿ 126 ಮದ್ಯ ಮಾರಾಟ ಕೇಂದ್ರಗಳ ಕಾರ್ಯನಿರ್ವಹಣೆಗೆ ಯಾವುದೇ ಅಡೆತಡೆಯಿಲ್ಲವಾಗಿದೆ. ಉಳಿದ ಮದ್ಯ ಮಾರಾಟ ಕೇಂದ್ರಗಳು ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿವೆ. ಇದರಲ್ಲಿ ಹಲವು ಮದ್ಯದಂಗಡಿಗಳು ಮಾರ್ಪಡಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ಆದೇಶದ ತೂಗುಕತ್ತಿಯಿಂದ ತಪ್ಪಿಸಿಕೊಂಡಿವೆ. ಉಳಿದಂತೆ 100 ಮದ್ಯದಂಡಿಗಳು ಸಂಕಷ್ಟದಲ್ಲಿವೆ ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳುತ್ತವೆ.
’ -----------------------------------
ಸುಮಾರು 100 ಮದ್ಯದಂಗಡಿಗಳು
ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ *
ನಿರುದ್ಯೋಗಿಗಳಾಗುವ ಆತಂಕದಲ್ಲಿ ಕೆಲಸಗಾರರು
ಈ ಮೊದಲು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಂಚಿನ 500 ಮೀಟರ್ ಒಳಗಡೆಯಿರುವ ಮದ್ಯ ಮಾರಾಟ ಕೇಂದ್ರಗಳನ್ನು ಸ್ಥಳಾಂತರಗೊಳಿಸಬೇಕಾಗಿತ್ತು. ತದನಂತರ ಸುಪ್ರೀಂ ಕೋರ್ಟ್ ಮತ್ತೊಂದು ಆದೇಶ ಹೊರಡಿಸಿ 20 ಸಾವಿರ ಜನಸಂಖ್ಯೆಯೊಳಗಿರುವ ನಗರ, ಪಟ್ಟಣ ಪ್ರದೇಶದೊಳಗೆ 220 ಮೀಟರ್ ಒಳಗಡೆ ಹಾಗೂ 20 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪ್ರದೇಶಗಳಲ್ಲಿ 500 ಮೀಟರ್ ಒಳಗಡೆಯಿರುವ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಿದೆ. ಪ್ರಸ್ತುತ ರಾಜ್ಯ ಸರ್ಕಾರವು ಮದ್ಯ ಮಾರಾಟ ಮಳಿಗೆಗಳನ್ನು ಉಳಿಸುವ ಉದ್ದೇಶದಿಂದ ನಗರ - ಪಟ್ಟಣ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ - ರಾಜ್ಯ ಹೆದ್ದಾರಿಗಳನ್ನು ಡಿನೋಟೀಫೈ ಮಾಡಿ ಇವುಗಳನ್ನು ಸ್ಥಳೀಯ ಆಡಳಿತಕ್ಕೆ ಒಪ್ಪಿಸುವ ತೀರ್ಮಾನ ಕೈಗೊಂಡಿದೆ. ಇದರಿಂದ ರಾಜ್ಯ ಹೆದ್ದಾರಿಯಂಚಿನಲ್ಲಿರುವ ಮದ್ಯದಂಗಡಿಗಳು ಸುಪ್ರೀಂಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿರುವ ಮಾರಾಟ ಕೇಂದ್ರಗಳಿಗೆ ಸದ್ಯಕ್ಕೆ ಸಂಕಟ ತಪ್ಪದಂತಾಗಿದೆ.
ಶಿವಮೊಗ್ಗ, ಜುಲೈ 1: ಸುಪ್ರೀಂ ಕೋರ್ಟ್ ತೀರ್ಪಿನಂತೆ ಜುಲೈ 1 ರಿಂದ (ಇಂದಿನಿಂದ) ರಾಷ್ಟ್ರೀಯ ಹೆದ್ದಾರಿಯಂಚಿನಿಂದ ನಿರ್ದಿಷ್ಟ ಅಂತರದಲ್ಲಿರುವ ಮದ್ಯದಂಗಡಿಗಳ ಬಾಗಿಲು ಮುಚ್ಚಲಿವೆ. ಜಿಲ್ಲೆಯಲ್ಲಿ ನೂರಾರು ಮದ್ಯದಂಗಡಿಗಳು ಬಾಗಿಲು ಮುಚ್ಚಲಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ವಹಿವಾಟು ಸ್ಥಬ್ಧಗೊಳಿಸಬೇಕಿದೆ.
ಮತ್ತೊಂದೆಡೆ ಅಬಕಾರಿ ಇಲಾಖೆಯು ಸುಪ್ರೀಂ ಕೋರ್ಟ್ ತೀರ್ಪಿನ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಮುಂದಾಗಿದೆ. ಈಗಾಗಲೇ ಸಂಬಂಧಿಸಿದ ಮದ್ಯದಂಗಡಿಗಳಿಗೆ ನೋಟೀಸ್ ಜಾರಿಗೊಳಿಸಿರುವ ಇಲಾಖೆಯು, ಜುಲೈ 1 ರಿಂದ ಯಾವುದೇ ಕಾರಣಕ್ಕೂ ವಹಿವಾಟು ನಡೆಸಬಾರದು. ನಿಯಮ ಉಲ್ಲಂಘಿಸಿ ವಹಿವಾಟು ನಡೆಸುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಜಿಲ್ಲೆಯ ಇತರೆ ನಗರ ಪಟ್ಟಣಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ನಗರದಲ್ಲಿಯೇ ಅತ್ಯದಿಕ ಮದ್ಯದಂಗಡಿಗಳು ಬಾಗಿಲು ಮುಚ್ಚಲಿವೆ. ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ 206 ಹಾಗೂ 13 ಹಾದು ಹೋಗಿದೆ. ಈ ಎರಡು ಹೆದ್ದಾರಿಯಂಚಿನಲ್ಲಿ ಹಲವು ವೈನ್ಶಾಪ್, ಬಾರ್, ಮದ್ಯ ಮಾರಾಟ ವ್ಯವಸ್ಥೆಯಿರುವ ಹೋಟೆಲ್-ಲಾಡ್ಜ್, ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳು ವಹಿವಾಟು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ.
ತೆರವುಗೊಳ್ಳುವ ಭೀತಿಯಲ್ಲಿದ್ದ ಸುಮಾರು ಆರು ಮದ್ಯದಂಗಡಿಗಳು ಈಗಾಗಲೇ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡು ವಹಿವಾಟು ನಡೆಸುತ್ತಿವೆ. ಉಳಿದ ಕೆಲವು ಅಂಗಡಿಗಳು ಸ್ಥಳಾಂತರ ಪ್ರಕ್ರಿಯೆಯಲ್ಲಿವೆ. ಉಳಿದಂತೆ ಹಲವು ಮದ್ಯ ಮಾರಾಟ ಕೇಂದ್ರಗಳು ನಾನಾ ಕಾರಣಗಳಿಂದ ಇವ್ಯಾವ ಪ್ರಕ್ರಿಯೆ ಆರಂಭಿಸಿಲ್ಲ. ಈ ಮಾರಾಟ ಕೇಂದ್ರಗಳು ಜುಲೈ 1 ರಿಂದ ತಮ್ಮ ವಹಿವಾಟು ಸ್ಥಗಿತಗೊಳಿಸಲೇಬೇಕು.
ಮದ್ಯ ಮಾರಾಟ ಕೇಂದ್ರಗಳ ಬಾಗಿಲು ಮುಚ್ಚಲೇಬೇಕಾದ ಸ್ಥಿತಿಯಲ್ಲಿರುವ ವರ್ತಕರು ಪಾಡಂತೂ ಹೇಳತೀರದಾಗಿದೆ. ತಮ್ಮ ಅಂಗಡಿಯಲ್ಲಿ ಮಾರಾಟವಾಗದೆ ಬಾಕಿ ಉಳಿದಿರುವ ಮದ್ಯವನ್ನು ನಿಯಮಾನುಸಾರ ಬೇರೇಡೆ ವಿಲೇವಾರಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಬೇರೇಡೆ ಸ್ಥಳಾಂತರಗೊಳ್ಳಲು ಜಾಗ ಹುಡುಕಾಡುತ್ತಿದ್ದು, ಸೂಕ್ತ ಸ್ಥಳಾವಕಾಶ ದೊರಕದೆ ಪರದಾಡುವಂತಾಗಿದೆ. ಮತ್ತೊಂದೆಡೆ ಈ ಅಂಗಡಿಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಕೆಲಸಗಾರರು ನಿರುದ್ಯೋಗಿಗಳಾಗುವ ಆತಂಕದಲ್ಲಿದ್ದಾರೆ.
ಜಿಲ್ಲೆಯಲ್ಲಿವೆ 230 ಲೈಸೈನ್ಸ್ ಮದ್ಯದಂಗಡಿಗಳು:
ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ವೈನ್ಶಾಪ್, ಬಾರ್-ರೆಸ್ಟೋರೆಂಟ್, ಎಂಎಸ್ಐಎಲ್, ಹೋಟೆಲ್ - ಲಾಡ್ಜ್ಗಳು, ಕ್ಲಬ್ಗಳು ಸೇರಿದಂತೆ ಒಟ್ಟಾರೆ 230 ಲೈಸೈನ್ಸ್ ಮದ್ಯ ಮಾರಾಟ ಕೇಂದ್ರಗಳಿವೆ. ಇದರಲ್ಲಿ 126 ಮದ್ಯ ಮಾರಾಟ ಕೇಂದ್ರಗಳ ಕಾರ್ಯನಿರ್ವಹಣೆಗೆ ಯಾವುದೇ ಅಡೆತಡೆಯಿಲ್ಲವಾಗಿದೆ. ಉಳಿದ ಮದ್ಯ ಮಾರಾಟ ಕೇಂದ್ರಗಳು ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿವೆ. ಇದರಲ್ಲಿ ಹಲವು ಮದ್ಯದಂಗಡಿಗಳು ಮಾರ್ಪಡಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ಆದೇಶದ ತೂಗುಕತ್ತಿಯಿಂದ ತಪ್ಪಿಸಿಕೊಂಡಿವೆ. ಉಳಿದಂತೆ 100 ಮದ್ಯದಂಡಿಗಳು ಸಂಕಷ್ಟದಲ್ಲಿವೆ ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳುತ್ತವೆ.
’ -----------------------------------
No comments:
Post a Comment