ವಿವಾದದಲ್ಲಿ ‘ಲೇಡಿ ಸಿಂಗಂ’ ರೂಪಾ ಐಪಿಎಸ್
ಡಿ. ರೂಪಾ ಕರ್ನಾಟಕ ಐಪಿಎಸ್ ಕೇಡರ್ನ ಲೇಡಿ ಸಿಂಗಂ. ತಮ್ಮ ಧೈರ್ಯ, ಸೇವಾನಿಷ್ಠೆ, ಭ್ರಷ್ಟ ವ್ಯವಸ್ಥೆಯನ್ನು ಮಟ್ಟ ಹಾಕುವ ಗುಣದಿಂದ ಸದಾ ವಿವಾದಕ್ಕೆ ಸಿಲುಕುತ್ತಿದ್ದಾರೆ. ಕಳೆದ ವಾರ ಬಂಧಿಖಾನೆ ಇಲಾಖೆಯಲ್ಲಿ ಖೈದಿಗಳಿಗೆ ವಿಶೇಷ ರಾಜೋಪಚಾರ ಕಲ್ಪಿಸಿದ್ದರ ಹಿಂದೆ ಅಪಾರ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಜ್ಯದಾದ್ಯಂತ ಸುದ್ದಿಯಾಗಿದ್ದಾರೆ. ತಮ್ಮ ಹಿರಿಯ ಅಧಿಕಾರಿ ಸತ್ಯನಾರಾಯಣರಾವ್ ವಿರುದ್ದವೇ ಮೇಲಧಿಕಾರಿಗೆ ವರದಿ ನೀಡಿದ್ದರಿಂದ ಅಖಿಲ ಭಾರತೀಯ ಸೇವೆ (ಶಿಸ್ತು) ಸಂಹಿತೆ-1968ರ ಪ್ರಕಾರ ಇಲಾಖೆಯ ಶಿಸ್ತು ಉಲ್ಲಂಘನೆಯಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ರೂಪಾ ಬಂದ ದಾರಿಯ ಒಂದು ಹಿನ್ನೋಟ ಇಲ್ಲಿದೆ
ಈ ದೇಶದಲ್ಲಿ ಪುರುಷ ಐಪಿಎಸ್ ಅಧಿಕಾರಿಗಳಿಗಿಂತ ಹೆಚ್ಚು ಸುದ್ದಿಯಲ್ಲಿರುವವರೆಂದರೆ ಮಹಿಳಾ ಐಪಿಎಸ್ ಅಧಿಕಾರಿಗಳು. ಏಕೆಂದರೆ ಅವರು ಯಾರದ್ದಾದರೂ ವಿರುದ್ದ ಸೆಟೆದು ನಿಂತರೆ, ಯಾವುದಾದರೂ ಅವ್ಯವಹಾರ, ಭ್ರಷ್ಟಾಚಾರದ ಗೂಡಿಗೆ ಕೈ ಹಾಕಿದರೆ ಅದು ವಿವಾದವಾಗಿ ಪರಿಣಮಿಸುತ್ತದೆ. ಪೊಲೀಸ್ ಇಲಾಖೆಯೇ ಹಾಗೆ. ಅಲ್ಲಿ ಮಹಿಳಾ ಐಪಿಎಸ್ಗಿಂತ ಪುರುಷ ಐಪಿಎಸ್ನವರದ್ದೇ ಮೇಲುಗಾರಿಕೆ ಹೆಚ್ಚು. ಇದರಿಂದ ಮಹಿಳಾ ಅಧಿಕಾರಿಗಳ ವಿರುದ್ದ ಸದಾ ಮಸಲತ್ತು ನಡೆಯುತ್ತಲೇ ಇರುತ್ತದೆ.
ಅದರಲ್ಲೂ ರಾಜಕಾರಣಿಗಳು ಇಂತಹ ಅಧಿಕಾರಿಣಿಗಳ ವಿರುದ್ಧ ಸದಾ ಬುಸುಗುಡುತ್ತಲೇ ಇರುತ್ತಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಆಳುವ ಪಕ್ಷದ ರಾಜಕಾರಣಿ ವಿರುದ್ದ ಕೇಸು ದಾಖಲಿಸಿದ್ದಕ್ಕೆ ಅವರನ್ನು ಗಡಿ ಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ತಮ್ಮ ದಿಟ್ಟತನ ತೋರುವ ಭರದಲ್ಲಿ ಕೆಲವು ವೇಳೆ ಅನಾಹುತವನ್ನೂ ಇಂತಹವರು ಮಾಡಿಕೊಂಡಿದ್ದೂ ಇದೆ.
ಡಿ. ರೂಪಾ ನಾಲ್ಕೈದು ದಿನದಿಂದ ರಾಜ್ಯದಲ್ಲಿ ಸುದ್ದಿ ಹಾಗೂ ಸದ್ದು ಮಾಡುತ್ತಿರುವ ಮಹಿಳಾ ಐಪಿಎಸ್ ಅಧಿಕಾರಿಣಿ. ಬಂಧೀಖಾನೆ ಇಲಾಖೆಯ ಡಿಐಜಿ ಆಗಿದ್ದ ರೂಪಾ ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಗೆಳತಿ ಶಶಿಕಲಾಗೆ ವಿಶೇಷ ಉಪಚಾರ ಕಲ್ಪಿಸಿರುವ ಬಗ್ಗೆ ಬಹಿರಂಗಪಡಿಸಿದ ವರದಿಯಿಂದ ಇಂದು ಅವರ ಹೆಸರು ಎಲ್ಲರ ಬಾಯಲ್ಲಿ ಇರುವಂತಾಗಿದೆ.
ರೂಪಾ ದಿಟ್ಟ ಅಧಿಕಾರಿಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾವುದೇ ಭ್ರಷ್ಟಾಚಾರ, ಅಧಿಕಾರ ದುರುಪಯೋಗಕ್ಕೆ ಮಣೆ ಹಾಕುವವರಲ್ಲ. ಆದರೆ ತಮ್ಮ ಧೀರೋದಾತ್ತ ವಿಚಾರದಿಂದಲೇ ಈಗ ವಿವಾದಕ್ಕೀಡಾಗಿ ವರ್ಗಾವಣೆಗೊಂಡಿದ್ದಾರೆ. ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಶಶಿಕಲಾ ಮತ್ತು ಅಬ್ದುಲ್ ಕರೀಂ ತೆಲಗಿ ಅವರಿಂದ ಅಪಾರ ಪ್ರಮಾಣದ ಹಣ ಪಡೆದು ರಾಜೋಪಚಾರ ನೀಡಲಾಗುತ್ತಿದೆ ಎಂಬ ವರದಿಯನ್ನು ಮೇಲಧಿಕಾರಿಗಳಿಗೆ ನೀಡಿದ್ದರು. ಅದರಲ್ಲಿ ಮೇಲಧಿಕಾರಿಗಳ ಹೆಸರನ್ನೂ ಸೂಚಿಸಿದ್ದರಿಂದ ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿತ್ತು.
ರಾಜ್ಯದಲ್ಲಿ ಸುಮಾರು 16 ವರ್ಷಗಳ ಸೇವೆಯನ್ನು ಸಲ್ಲಿಸಿರುವ ರೂಪಾ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಯಾವುದನ್ನೂ ಲೆಕ್ಕಿಸುವವರಲ್ಲ. ಮಹಿಳಾ ಅಧಿಕಾರಿಯೊಬ್ಬರು ಇಂತಹ ಸಂದರ್ಭದಲ್ಲಿ ವಿವಾದ ಎದುರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ವಿಶೇಷವೆಂದರೆ, ಇವರ ದಿಟ್ಟ ಹೋರಾಟಕ್ಕೆ ಈಗ ವರ್ಗಾವಣೆಯ ಫಲ ಸಿಕ್ಕಿದೆ.
ರೂಪಾ ಕಳೆದ ವರ್ಷ ಎರಡು ಪ್ರತ್ಯೇಕ ಸಂದರ್ಭದಲ್ಲಿ ಸುದ್ದಿಯಾಗಿದ್ದರು. ಮೊದಲನೆಯದೆಂದರೆ, ಕೂಡ್ಲಿಗಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ಬಳ್ಳಾರಿ ಉಸ್ತುವಾರಿ ಸ ಚಿವರಾಗಿದ್ದ ಪರಮೇಶ್ವರ ನಾಯ್ಕ್ ವಿರುದ್ದ ಸೆಟೆದು ನಿಂತಾಗ ಅವರಿಗೆ ಬೆಂಬಲ ನೀಡಿ ರಾಜಕಾರಣಿಗಳ ಕೆಂಗಣ್ಣಿಗೆ ತುತ್ತ್ತಾಗಿದ್ದರು. ಇಷ್ಟೇ ಅಲ್ಲ, ಅನುಪಮಾ ಸಾಮಾಜಿಕ ಜಾಲತಾಣಗಳಲ್ಲಿ ಈ ಸಚಿವರ ಮತ್ತು ರಾಜಕರಣಿಗಳ ಬಗ್ಗೆ ಸಾಕಷ್ಟು ಬರೆದಾಗ ಅದನ್ನು ಲೈಕ್ ಮಾಡಿಯೂ ಎಲ್ಲ ರೂ ಹುಬ್ಬೇರಿಸುವಂತೆ ಮಾಡಿದ್ದರು. ಇನ್ನೊಂದು ಘಟನೆಯೆಂದರೆ, ಮೈಸೂರು ಸಾಂಸದ ಪ್ರತಾಪ್ಸಿಂಹ ಫೇಸ್ಬುಕ್ನಲ್ಲಿ ರೂಪಾ ವಿರುದ್ದ ಗರಂ ಆಗಿ ಬರೆದಿದ್ದರು. ಇದನ್ನು ವಿರೋಧಿಸಿದ್ದ ರೂಪಾ ಫೇಸ್ಬುಕ್ನಲ್ಲೇ ಕಾದಾಟ ನಡೆಸಿ ಮತ್ತೆ ಬೆಳಕಿಗೆ ಬಂದಿದ್ದರು. ಆನಂತರ ಪ್ರತಾಪ್ಸಿಂಹ ಕ್ಷಮೆ ಯಾಚಿಸುವುದರೊಂದಿಗೆ ಪ್ರಕರಣ ಅಂತ್ಯಗೊಂಡಿತ್ತು.
ಈ ರೀತಿ ಯಾವ ಕೆಟ್ಟ ಹೇಳಿಕೆ, ಘಟನೆಯನ್ನೂ ಸಹಿಸದ ಸ್ವಭಾವ ರೂಪಾ ಅವರದ್ದು. ಅದನ್ನು ದಿಟ್ಟೆದೆಯಿಂದಲೇ ಎದುರಿಸುವ ಮನೋಭಾವ ಕೆಲವು ಸಂದರ್ಭದಲ್ಲಿ ಅನಾಹುತಕ್ಕೆ ಕಾರಣವಾಗುತ್ತದೆ. ಸಮಯ, ಸಂದರ್ಭಕ್ಕಾಗಿ ಕಾಯುವ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಕಾಲದಲ್ಲಿ ಸರಿಯಾದ ಏಟು ಕೊಡುತ್ತಾರೆ. ಈಗ ರೂಪಾ ಎದುರಿಸುತ್ತಿರುವುದು ಇದನ್ನೇ.
ಬಂಧಿಖಾನೆ ಇಲಾಖೆಯ ಘಟನೆಯ ಬಗ್ಗೆ ರೂಪಾ ಅವರು ಸರಿಯಾದ ಕೆಲಸವನ್ನು ತಪ್ಪು ಮಾರ್ಗದಲ್ಲಿ ಮಾಡಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರವನ್ನು ಹೊರಹಾಕುವ ಅವಸರದಲ್ಲಿ ಅವರು ಕೆಲವು ಎಡವಟ್ಟು ಮಾಡಿಕೊಂಡಿದ್ದಾರೆ. ರೂಪಾ ಅವರ ಉದ್ದೇಶ ಬಂಧೀಖಾನೆಯಲ್ಲಿ ಅಕ್ರಮ ವ್ಯವಹಾರ ನಿಗ್ರಹಿಸುವುದು ಎಲ್ಲರೂ ಮೆಚ್ಚುವಂತಹುದೇ ಆಗಿದೆ. ಆದರೆ ಇದನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ತನ್ನ ಮೇಲಧಿಕಾರಿ ತಾನು ನೀಡಿದ ವರದಿಗೆ ಸ್ಪಂದಿಸದಿದ್ದಾಗ ಅದನ್ನು ಗೃಹ ಇಲಾಖೆಯ ಕಾರ್ಯದರ್ಶಿಗೆ ತಲುಪಿಸಬೇಕಿತ್ತು. ಡಿಐಜಿ ಆಗಿ ತಾನೇ ಅದನ್ನು ಪ್ರಕಟಿಸಲು ಹೋಗಬಾರದಿತ್ತು. ಇದರಿಂದ ಅವರಿಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಚ್. ಟಿ. ಸಾಂಗ್ಲಿಯಾನಾ.
ಬಂಧೀಖಾನೆ ಇಲಾಖೆಯು ಸ್ವತಂತ್ರ ಅಧಿಕಾರ ಹೊಂದಿದ ವಿಭಾಗ. ಇದಕ್ಕೆ ಡಿಜಿಪಿಯೇ ಮುಖ್ಯಸ್ಥ. ಸೆರೆಮನೆಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಿರಂತರವಾಗಿದೆ. ಮಾದಕ ವಸ್ತುಗಳ ವ್ಯವಹಾರ ಎಲ್ಲೆಡೆ ಇದೆ. ರೂಪಾ ಈ ಸಂಬಂಧಿತ ವರದಿಯನ್ನು ಡಿಜಿ ಮತ್ತು ಡಿಜಿಪಿಗೆ ನೀಡುವ ಮುನ್ನ ತನ್ನ ಮೇಲಧಿಕಾರಿಗೇಕೆ ನೀಡಲಿಲ್ಲ ಎನ್ನುವ ಪ್ರಶ್ನೆಯೇ ಅವರಿಗೆ ಮುಳುವಾಗಿದೆ.
ರೂಪಾ ಬಗ್ಗೆ ಒಂದಿಷ್ಟು ಮಾಹಿತಿ:
ರೂಪಾ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. 2001ರ ಬ್ಯಾಚಿನ ರೂಪಾ ದಾವಣಗೆರೆಯವರು. ಹುಟ್ಟಿ ಬೆಳೆದು, ಓದಿದ್ದು ದಾವಣಗೆರೆಯಲ್ಲಿ. ಇವರ ತಂದೆ ದಿವಾಕರ್ ತಮ್ಮಿಬ್ಬರು ಹೆಣ್ಣುಮಕ್ಕಳಾದ ರೂಪಾ ಮತ್ತು ರೋಹಿಣಿ ಅವರಿಗೆ ತಮ್ಮ ಕೈಲಾದಷ್ಟು ಉತ್ತಮ ಶಿಕ್ಷಣ ಕೊಡಿಸಿದರು. ರೂಪಾ ಮತ್ತು ರೋಹಿಣಿ ಇಬ್ಬರೂ ಕೇಂದ್ರ ಲೋಕಸೇವಾ ಪರೀಕ್ಷೆಯನ್ನು ಬರೆದು ಅದರಲ್ಲಿ ಉತ್ತೀರ್ಣಗೊಂಡರು. ರೂಪಾ ಐಪಿಎಸ್ ಅಧಿಕಾರಿಯಾದರೆ, ರೋಹಿಣಿ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಸೆವೆಗೆ ನಿಯುಕ್ತರಾದರು. ಇಬ್ಬರದೂ ಒಂದೇ ಜಾಯಮಾನ, ಅದೆಂದರೆ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆಯುವ ಅದರ ವಿರುದ್ದ ಸೆಟೆದು ನಿಲ್ಲುವ ಸ್ವಭಾವ, ಇಬ್ಬರೂ ಅದನ್ನು ಅನೇಕ ಬಾರಿ ಸಾಧಿಸಿ ತೋರಿಸಿದ್ದಾರೆ.
ನೋಡಲು ಸ್ಫುರದ್ರೂಪಿ ಸುಂದರಿಯಾಗಿರುವ ರೂಪಾ ಮನಃಶಾಸ್ತ್ರದಲ್ಲಿ ಎಎಂಎಸ್ಸಿ ಮುಗಿಸಿ ಐಪಿಎಸ್ನಲ್ಲಿ 49ನೆಯ ರ್ಯಾಂಕ್ ಗಳಿಸಿದ್ದರು. ಐಐಟಿ ಇಂಜಿನಿಯರ್ ಆಗಿರುವ, ಪಂಜಾಬ್ ಮೂಲದ, ಓಡಿಶಾ ಕೇಡರ್ನ ಐಎಎಸ್ ಅಧಿಕಾರಿ ಮನೀಷ್ ಮೌದ್ಗೀಲ್ ಅವರನ್ನು ಪ್ರೀತಿಸಿ 2003ರಲ್ಲಿ ವಿವಾಹವಾಗಿದ್ದಾರೆ. ಮನೀಶ್ ಈಗ ಕರ್ನಾಟಕ ಸೇವೆಯಲ್ಲಿದ್ದಾರೆ. ಈ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ.
,,,,,,,,,,,,,,,,,,,,,,,,,,

No comments:
Post a Comment