’ಸ್ಮಾರ್ಟ್ ಸಿಟಿ’ ಯೋಜನೆ ಅನುಷ್ಠಾನದಲ್ಲಿ
ಸಾರ್ವಜನಿಕರ ಸಹಭಾಗಿತ್ವವಿಲ್ಲವೇ?
’ಸ್ಮಾರ್ಟ್ ಸಿಟಿ’ ಎಂದರೇ ರಸ್ತೆ, ಸೇತುವೆ ನಿರ್ಮಾಣ, ಕಟ್ಟಡಗಳ ಅಭಿವೃದ್ಧಿಯಲ್ಲ. ಈ ಯೋಜನೆಯು ಸಮಾಜದ ತಳಮಟ್ಟದ ವ್ಯಕ್ತಿಯನ್ನು ಒಳಗೊಳ್ಳಬೇಕು. ಯೋಜನೆಗಳ ಅನುಷ್ಠಾನದಲ್ಲಿ ದೂರದೃಷ್ಟಿಯಿರಬೇಕು. ಮುಂದಿನ 20 ವರ್ಷಗಳ ಅವಧಿಯಲ್ಲಿ ನಗರದಲ್ಲಿನ ಜನಸಂಖ್ಯೆ ಎಷ್ಟಾಗಲಿದೆ, ನಗರದ ಬೆಳವಣಿಗೆಯ ಗತಿ ಯಾವ ರೀತಿಯಲ್ಲಿರಲಿದೆ, ವಾಹನಗಳ ಸಂಚಾರ ಎಷ್ಟಾಗಲಿದೆ ಎಂಬಿತ್ಯಾದಿ ಮಹತ್ವದ ಅಂಶಗಳ ಪರಿಗಣನೆ ಮಾಡಬೇಕು.
- ಎನ್.ಗೋಪಿನಾಥ್, ’ನನ್ನ ಕನಸಿನ ಶಿವಮೊಗ್ಗ’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ
ಶಿವಮೊಗ್ಗ: ’ಸ್ಮಾರ್ಟ್ ಸಿಟಿ’ ಯೋಜನೆಯಡಿ ಆಯ್ಕೆಯಾದ ನಗರಗಳಲ್ಲಿ ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳು ಅನುಷ್ಠಾನಗೊಳ್ಳಲು ಸಿದ್ದತೆ ನಡೆದಿದೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿಯೇ ಪ್ರತ್ಯೇಕ ವಾಹಕ ಘಟಕ, ಕಚೇರಿ, ಐಎಎಸ್ ದರ್ಜೆಯ ಅಧಿಕಾರಿಗಳ ನಿಯೋಜನೆಯನ್ನು ಕೂಡ ಕೇಂದ್ರ ಸರ್ಕಾರ ಮಾಡಿದೆ. ಅದರಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನಕ್ಕೆ ಮಹಾನಗರ ಪಾಲಿಕೆಯ ಆಯುಕ್ತ ಮುಲ್ಲೈ ಮುಹಿಲನ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಕಚೇರಿ ಕಟ್ಟಡಕ್ಕೂ ಈಗಾಗಲೇ ಜಾಗ ಗುರುತಿಸಲಾಗಿದೆ. ಕನ್ಸಲೆಂಟ್ಗಳನ್ನು ನೇಮಕ ಮಾಡಲಾಗಿದ್ದು, ಈಗಾಗಲೇ ಇವರು ನಗರದ ವಿವಿಧೆಡೆ ಸಂಚರಿಸಿ ಯೋಜನೆಗಳ ಅನುಷ್ಠಾನದ ರೂಪುರೇಷೆಗಳನ್ನು ಭರದಿಂದಲೇ ಸಿದ್ದಪಡಿಸಲಾರಂಭಿಸಿದ್ದಾರೆ. ’ಸ್ಮಾರ್ಟ್ ಸಿಟಿ’ ಯೋಜನೆಯ ಕಾಮಗಾರಿಗಳ ಅನುಷ್ಠಾನದ ಕುರಿತಂತೆ ಆಡಳಿತ ವ್ಯವಸ್ಥೆಯಲ್ಲಿ ಸಮರೋಪಾದಿಯ ಪೂರ್ವಭಾವಿ ಸಿದ್ದತೆಗಳು ನಡೆಯುತ್ತಿವೆ. ಆದರೆ ಇದರ ಬಗ್ಗೆ ನಾಗರಿಕರಿಗೆ ಮಾತ್ರ ಸೂಕ್ತ ಮಾಹಿತಿಯೇ ಇಲ್ಲ.
’ಸ್ಮಾರ್ಟ್ ಸಿಟಿ’ ಯೋಜನೆ ಅನುಷ್ಠಾನದ ಪ್ರತಿ ಹಂತದಲ್ಲಿಯೂ ಸ್ಥಳಿಯ ನಾಗರಿಕರ ಅಭಿಪ್ರಾಯ, ಸಲಹೆ-ಸೂಚನೆ ಪಡೆದುಕೊಳ್ಳುವುದು, ಅವರ ಸಹಭಾಗಿತ್ವದಲ್ಲಿಯೇ ಯೋಜನೆ ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದ್ದರೂ ಜಾರಿಯಾಗುತ್ತಿಲ್ಲ.
ಈ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಗೆ ನಗರಗಳ ಆಯ್ಕೆಗೂ ಮುನ್ನ ಮಹಾನಗರ ಪಾಲಿಕೆ ಆಡಳಿತವು ನಗರಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆಸಿತ್ತು. ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಸಮಾಜದ ನಾನಾ ವರ್ಗದವರು ನಗರದ ಅಭಿವೃದ್ಧಿ ಯಾವ ದಿಕ್ಕಿನಲ್ಲಿರಬೇಕು ಎಂಬುವುದರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ನಾಗರಿಕರ ಅಭಿಪ್ರಾಯದ ಆಧಾರದ ಮೇಲೆಯೇ, ಹತ್ತು ಹಲವು ಯೋಜನೆಗಳ ಪಟ್ಟಿ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದರು. ಈ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ಕೂಡ ದೊರಕಿದೆ. ನೂರಾರು ಕೋಟಿ ರೂ. ಮಂಜೂರಾಗಿದೆ. ಕೆಲವು ಯೋಜನೆಗಳ ಅನುಷ್ಠಾನಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಕೂಡ ಮಾಡಲಾಗಿದೆ. ಆದರೆ ಯೋಜನೆಯಡಿ ಯಾವ್ಯಾವ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ, ಮಾಡುತ್ತಿರುವ ವೆಚ್ಚವೆಷ್ಟು, ವಿನೂತನ ಕಾರ್ಯಕ್ರಮಗಳ್ಯಾವುವು, ಕಾಮಗಾರಿಗಳ ನಿರ್ವಹಣೆ ಯಾವ ರೀತಿಯಲ್ಲಾಗುತ್ತದೆ, ಪರಿಸರ ಸಂರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳೇನು ಎಂಬುವುದರ ಬಗ್ಗೆ ನಾಗರಿಕರಿಗೆ ಮಾಹಿತಿಯೇ ಇಲ.
ನಾಗರಿಕರನ್ನು ಕತ್ತಲಲ್ಲಿಟ್ಟು ಕೇವಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಇದರ ಯೋಜನೆ, ಕಾಮಗಾರಿ ನಿರ್ವಹಣೆ ಮಾಡುವರೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
’ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಂತ ಅವಶ್ಯ. ಅದರಲ್ಲಿಯೂ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯಗತದಲ್ಲಿ, ಪ್ರತಿ ಹಂತದಲ್ಲಿಯೂ ಸಾರ್ವಜನಿಕರ ಬೆಂಬಲ ಬೇಕೆ ಬೇಕು. ಈಗಾಗಲೇ ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆಯೇ ಯೋಜನೆಗಳನ್ನು ರೂಪಿಸಲಾಗಿದೆ. ಯೋಜನೆಗಳ ಅನುಷ್ಠಾನದ ವೇಳೆಯೂ ಸಾರ್ವಜನಿಕರ ಸಲಹೆ-ಸೂಚನೆಯನ್ನು ಸ್ಮಾರ್ಟ್ ಸಿಟಿ ಕಚೇರಿ ಘಟಕದವರು ಪರಿಗಣನೆ ಮಾಡಬೇಕೆನ್ನುವುದು ನಾಗರಿಕರ ಒತ್ತಾಯ.
........................................

No comments:
Post a Comment