ಕಂಪನಿ ನಾಟಕದಂತೆ ಭಾಸವಾದ ‘ಸಂಸಾರದಲ್ಲಿ ಸನಿದಪ’
ರಂಗಾಯಣ ಶಿವಮೊಗ್ಗದವರು ತಮ್ಮ ಎರಡನೆಯ ನಾಟಕ ‘ಸಂಸಾರದಲ್ಲಿ ಸನಿದಪ’ವನ್ನು ಜುಲೈ 8ರಂದು ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಅಭಿನಯಿಸಿದರು. ಗಟ್ಟಿಯಾದ ಸತ್ವವನ್ನು ಹೊಂದಿರದ, ಕೇವಲ ಹಾಸ್ಯನಾಟಕವಾಗಿ, ಪ್ರೇಕ್ಷಕರು ನಗೆಗಡಲಲ್ಲಿ ತೇಲಲು ನಾಟಕ ಕಾರಣವಾಯಿತು. ನಿರ್ದೇಶನ ಇನ್ನಷ್ಟು ಬಿಗಿಯಾಗಿದ್ದರೆ ನಾಟಕ ಕಳೆಗಟ್ಟುತ್ತಿತ್ತು. ಜೊತೆಗೆ ಬೈಗುಳ ಪದಗಳಿಗೆ ಕೊರತೆ ಕಂಡುಬರಲಿಲ್ಲ. ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಂತೂ ಸುಳ್ಳಲ್ಲ. ಆದರೆ ಪ್ರೇಕ್ಷಕರು ನಿರೀಕ್ಷಿಸಿದ ಗುಣಮಟ್ಟದ ನಾಟಕ ಇದಾಗಿರಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ದಂಪತಿಗಳ ನಡುವಿನ ಸಂಬಂಧ ಮಧುರವಾಗಿ ನೆಲೆಗೊಳ್ಳುತ್ತಿಲ್ಲ. ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ದಾಂಪತ್ಯದಲ್ಲೂ ನೈತಿಕತೆ, ಸಾಮರಸ್ಯ ದೂರವಾಗುತ್ತಿದೆ. ಕುಟುಂಬದಲ್ಲಿನ ಅಭಿರುಚಿ, ಸಂಬಂಧಗಳ ಗ್ರಹಿಕೆಯ ಪಲ್ಲಟವಾಗುತ್ತಿದೆ. ಸಂಸಾರ ಎನ್ನುವುದು ತನ್ನತನವನ್ನು ಉಳಿಸಿಕೊಳ್ಳದೆ ಗಂಡನ ದಾರಿ ಗಂಡನಿಗೆ, ಹೆಂಡತಿಯ ದಾರಿ ಹೆಂಡತಿಗೆ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಈ ದುರಂತವನ್ನು ಕಟ್ಟಿಕೊಡುವ ನಾಟಕವೇ ‘ಸಂಸಾರದಲ್ಲಿ ಸನಿದಪ’.
ಶಿವಮೊಗ್ಗ ರಂಗಾಯಣದವರು ಪ್ರದರ್ಶಿಸಿದ ಎರಡನೆಯ ನಾಟಕ ಇದು. ರಂಗಾಯಣದ ಕಲಾವಿದರು ಉತ್ತಮ ನಟನೆಗೆ ಹೆಸರುವಾಸಿ. ಇದರಲ್ಲಿ ಎರಡು ಮಾತಿಲ್ಲ. ಇದನ್ನು ಈ ನಾಟಕದಲ್ಲೂ ಸಾಬೀತುಪಡಿಸಿದ್ದಾರೆ. ಇಟಲಿಯ ನಾಟಕಕಾರ ದಾರಿಯೋ ಪೋ ಅವರ ಕೃತಿಯನ್ನು ನೀನಾಸಂನ ಕೆ. ವಿ. ಅಕ್ಷರ ಕನ್ನಡಕ್ಕೆ ತರ್ಜುಮೆ ಮಾಡಿದ್ದು, ಮಂಜು ಕೊಡಗು ಇದನ್ನು ನಿರ್ದೇಶಿಸಿದ್ದಾರೆ. ಆದರೆ ಈ ನಾಟಕವನ್ನು ಮರುರೂಪಿಸಲಾಗಿದೆ. ಎರಡು ಪಾತ್ರಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಲಾಗಿದೆ.
ಪ್ರಸ್ತುತ ನಾಟಕದ ಹೆಸರೇ ‘ಸಂಸಾರದಲ್ಲಿ ಸನಿದಪ’ ಹೇಳುವಂತೆ ಇಲ್ಲಿ ಬರುವ ಸಂಸಾರಗಳೆಲ್ಲ ಸರಿಗಮಪದನಿಸವಾಗದೆ ಸನಿದಪಗಳಾಗಿವೆ, ಉಲ್ಟಾಪಲ್ಟಾ ಆಗಿವೆ. ಸರಿಯಾಗಿ ಸಾಗದೆ ಅಡ್ಡದಾರಿ ಹಿಡಿಯುತ್ತವೆ. ಕಳ್ಳನ ದಾಂಪತ್ಯದಿಂದ ಹಿಡಿದು ವಿದ್ಯಾವಂತನೆನಿಸಿಕೊಂಡ ಪೊಲೀಸ್ ಅಧಿಕಾರಿಯ ಕುಟುಂಬದವರೆಗೆ ಸಂಬಂಧಗಳು ಅಡ್ಡದಾರಿ ಹಿಡಿಯುತ್ತಿರುವುದನ್ನು ಸಮರ್ಥವಾಗಿ ಇಲ್ಲಿ ನಿರೂಪಿಸಲಾಗಿದೆ. ನಾಟಕದ ಸಂದೇಶ ಎಲ್ಲರಿಗೂ ಮನದಟ್ಟಾಗುತ್ತದೆ. ತೀರ ಸರಳವಾಗಿ ನಾಟಕ ರಚಿಸಲಾಗಿದೆ.
ಗಂಡ ಇನ್ನೊಂದು ಹೆಣ್ಣಿನ ಸಂಗಡ, ಹೆಣ್ಣು ಇನ್ನೊಂದು ಗಂಡಿನ ಸಂಗಡ ಸಂಬಂಧ ಇಟ್ಟುಕೊಂಡ ನಾಲ್ಕು ದಂಪತಿಗಳ ಕಥೆ ಇದು. ಗಂಡನ ಸ್ತ್ರೀ ವ್ಯಾಮೋಹ ಆತನ ಹೆಂಡತಿಗೆ ಗೊತ್ತ್ತಾಗುವುದಿಲ್ಲ. ಹೀಗೆ ಕೆಲವು ದಿನಗಳವರೆಗೆ ಸಂಬಂಧ ಮುಂದುವರೆದು ನಂತರ ಬಯಲಾಗುತ್ತದೆ. ಕಳ್ಳತನಕ್ಕೆ ಬಂದ ವ್ಯಕ್ತಿ ಮನೆಯ ಮಾಲಕನ ಅನೈತಿಕತೆಯನ್ನು ಅಡಗಿ ಕುಳಿತು ಪತ್ತೆ ಮಾಡುತ್ತಾನೆ. ಈ ವೇಳೆ ಕಳ್ಳನು ಹೇಳುವ ಉಪದೇಶದ ಮಾತುಗಳು, ಕೆಲವು ಡೈಲಾಗ್ಗಳು, ಸರ್ವಜ್ಞನ ವಚನಗಳು ಕೇಳಲು ಮಾತ್ರ ಹಿತವೆನಿಸುತ್ತವೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇದೇ ಮನೆಗೆ ಅನೈತಿಕತೆಯ ಪೊಲೀಸ್ ಅಧಿಕಾರಿಯೊಬ್ಬ ಬರುವುದು, ಆತನನ್ನು ಹುಡುಕಿಕೊಂಡು ಆತನ ಪತ್ನಿ ಬರುವುದು, ಮನೆಯ ಮಾಲಕನ ಪತ್ನಿ ಬರುವುದು, ಆ ಪತ್ನಿ ತನ್ನ ಯಜಮಾನ ಕರೆದುಕೊಂಡು ಬಂದ ಮಹಿಳೆಯ ಪತಿಯನ್ನು ತಾನು ಕರೆದುಕೊಂಡು ಬರುವುದು....
ಹೀಗೆ ನಾಟಕ ಸಾಗುತ್ತದೆ. ಒಬ್ಬರ ಅನೈತಿಕತೆಯನ್ನು ಇನ್ನೊಬ್ಬರು ಬಯಲು ಮಾಡುವುದು, ನಂತರ ಎಲ್ಲರೂ ತಾವೆಲ್ಲರೂ ಹಾದಿತಪ್ಪಿದವರೆಂದು ಒಪ್ಪಿಕೊಳ್ಳುವುದು, ಮತ್ತೆ ಸರಿದಾರಿಗೆ ಬರುವುದರೊಂದಿಗೆ ನಾಟಕ ಅಂತ್ಯಗೊಳ್ಳುತ್ತದೆ.
ಒಟ್ಟಾರೆಯಾಗಿ, ನಾಟಕ ಮುಗಿದಾಗ ಇದೊಂದು ತೀರಾ ತಮಾಷೆಯ, ಹಾಸ್ಯ ನಾಟಕವಾಗಿಯಷ್ಟೇ ಗೋಚರವಾಗುತ್ತದೆ. ನಿರ್ದೇಶಕರು ನಾಟಕದ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿಕೊಡಬಹುದಿತ್ತೇನೋ ಎಂದೆನಿಸುತ್ತದೆ. ಕೇವಲ ನಗೆಯುಕ್ಕಿಸುವ, ಗಂಡು- ಹೆಣ್ಣಿನ ಹಾದರದ ಬಗ್ಗೆ ತಿಳಿಸುವುದಕ್ಕಷ್ಟೇ ಇದು ಸೀಮಿತವಾಗುತ್ತದೆ. ರಂಗಾಯಣದಂತಹ ತಂಡಗಳು ನಾಟಕದ ಕಥಾವಸ್ತುವನ್ನು ಇಷ್ಟೊಂದು ಜೊಳ್ಳಾಗಿ ಅಥವಾ ಸರಳವಾಗಿ ಆಯ್ಕೆಮಾಡುತ್ತವೆ ಎಂದರೆ ಆಶ್ಚರ್ಯವಾಗುತ್ತದೆ. ಇನ್ನಷ್ಟು ಪ್ರಬುದ್ಧತೆಯ ನಿರ್ದೇಶನ ಇರಬೇಕಿತ್ತು. ನಾಟಕ ಒಂದು ಗಟ್ಟಿಯಾದ ಸತ್ವವನ್ನು ಒಳಗೊಂಡಾಗ ಮಾತ್ರ ಅದು ಶಾಶ್ವತವಾಗಿ ನಮ್ಮಲ್ಲಿ ತಳವೂರಲು ಸಾಧ್ಯ. ಇಲ್ಲವಾದಲ್ಲಿ ಇಂತಹ ಕತೆಗಳು ಕಂಪನಿ ನಾಟಕಗಳನ್ನು ನೆನಪಿಗೆ ತರುತ್ತವೆ. ಏಕೆಂದರೆ ಅವುಗಳ ಕತೆಗಳೂ ಇದೇ ತೆರನಾಗಿರುತ್ತವೆ. ಅಂತಹ ಸಾಮ್ಯತೆ ರಂಗಾಯಣದಂತಹ ತಂಡದಲ್ಲಿ ಬರಬಾರದು.
ಎರಡನೆಯದಾಗಿ, ನಾಟಕದಲ್ಲಿ ಕಳ್ಳ ಮತ್ತು ಆತನ ಹೆಂಡತಿಯ ಬಾಯಿಯಿಂದ ಬರುವ ಅಣಿಮುತ್ತುಗಳನ್ನು ಕೇಳಿದರೆ ಎಂತಹವರೂ ತಲೆತಗ್ಗಿಸುತ್ತಾರೆ. ಅಷ್ಟೊಂದು ಕೆಟ್ಟ, ಅವಾಚ್ಯ ಶಬ್ದಗಳನ್ನು ಬಳಸುವ ಅವಶ್ಯಕತೆ ಇತ್ತೇ ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡದಿರದು. ಕೇವಲ ಅನೈತಿಕತೆಯನ್ನೇ ಇಡೀ ನಾಟಕದ ತುಂಬಾ ಬಿಂಬಿಸುವಂತಹ ನಾಟಕ ಬೇಕೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಇದೇನೇ ಇದ್ದರೂ ನಟರೆಲ್ಲ ತಮ್ಮ ಪಾತ್ರಕ್ಕೆ ಜೀವ ತುಂಬುವಲ್ಲಿ ಸಫಲರಾಗಿದ್ದಾರೆ. ಕಳ್ಳನ ಪಾತ್ರ ಮಾಡಿದ ರವಿಕುಮಾರ್ ಎಲ್ಲರ ಮನಸೆಳೆಯುತ್ತಾರೆ. ತಮ್ಮ ವೇಷಭೂಷಣ, ಹಾವಭಾವ, ಕುಡುಕನ ಪಾತ್ರ, ಮಾತುಗಾರಿಕೆ ಮೂಲಕ ಕೊನೆಯವರೆಗೂ ನಾಟಕಕ್ಕೆ ಕಳೆಗಟ್ಟುವಂತೆ ಮಾಡುತ್ತಾರೆ. ಅವರ ಪತ್ನಿಯ ಪಾತ್ರಧಾರಿ ರೇವತಿಯ ಪಾತ್ರವೂ ಅಷ್ಟೇ ಸೊಗಸಾಗಿದೆ. ಇವರಿಬ್ಬರೇ ಇಡೀ ನಾಟಕದ ಜೀವಾಳ ಎನ್ನಬಹುದು.
ರಂಗಸಜ್ಜಿಕೆ ಮತು ಬೆಳಕಿನ ನಿರ್ವಹಣೆ ಎಲ್ಲವೂ ಸೊಗಸಾಗಿತ್ತು. ರಂಗಯಣದ ನಾಟಕವಾದ್ದರಿಂದಲೋ ಏನೋ ಜನಸಮೂಹವೂ ಸಹ ಉತ್ತಮವಾಗಿಯೇ ಇತ್ತು. ಒಟ್ಟಾರೆಯಾಗಿನಾಟಕ ಉತ್ತಮ ಮನರಂಜನೆ ಮೂಲಕ ಪ್ರೇಕ್ಷಕರನ್ನು ಸೆೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
..............................

No comments:
Post a Comment