ನಗರದಲ್ಲಿ ಶುರುವಾಯ್ತು ಕ್ಯಾಶ್ಲೆಸ್ ಬಿಸಿನೆಸ್
ನಗದು ಹಣದ ಸಮಸ್ಯೆಯಿಂದ ಹೊಸ ಮಾದರಿಯ ವ್ಯಾಪಾರ
ನಗದಿಗೆ ಹೋಲಿಕೆ ಮಾಡಿದರೆ ’ಕ್ಯಾಶ್ಲೆಸ್’ ಮೂಲಕ ವ್ಯವಹಾರ ನಡೆಸುವುದು ಸುರಕ್ಷಿತವಾಗಿದೆ. ಈ ವಿಧಾನದಲ್ಲಿ ವೆಚ್ಚ ಮಾಡಿದ ಪ್ರತಿಯೊಂದ ಪೈಸೆಗೂ ಲೆಕ್ಕ ಸಿಗಲಿದೆ. ವೆಚ್ಚ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮೊಬೈಲ್ಗೆ ಎಸ್ಎಂಎಸ್ ವಿವರಗಳು ನಿರಂತರವಾಗಿ ಲಭ್ಯವಾಗುವುದರಿಂದ ಖಾತೆಯಲ್ಲಿರುವ ಹಣದ ವಿವರ ಗೊತ್ತಾಗುತ್ತದೆ. ’ಕ್ಯಾಶ್ಲೆಸ್’ ವಿಧಾನ ನಾಗರಿಕರಿಗೆ ಅತ್ಯಂತ ಉಪಯುಕ್ತವಾಗಿದೆ ಎನ್ನುತ್ತಾರೆ ಗ್ರಾಹಕರು.
ಕ್ಯಾಶ್ಲೆಸ್ ವಿಧಾನದ ಬಗ್ಗೆ ಇನ್ನೂ ವಿದ್ಯಾವಂತ - ಪ್ರಜ್ಞಾವಂತ ವಲಯದಲ್ಲಿಯೇ ಮಾಹಿತಿಯ ಕೊರತೆಯಿದೆ. ಇನ್ನೂ ಗ್ರಾಮೀಣ, ಅನಕ್ಷರಸ್ಥ, ಬಡ ವರ್ಗದವರು ಈ ವ್ಯವಹಾರದತ್ತ ಮುಖ ಮಾಡಬೇಕಾದರೆ ಹಲವು ದಶಕಗಳ ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಆದರೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಜಾಗೃತಿ ಕಾರ್ಯಕ್ರಮಗಳು ಯಾವುದಕ್ಕೂ ಸಾಲದು ಎನ್ನುವುದು ಬ್ಯಾಂಕ್ ವ್ಯವಸ್ಥಾಪಕರೊಬ್ಬರ ಅನಿಸಿಕೆ.
’ಡೆಬಿಟ್, ಕ್ರೆಡಿಟ್, ನೆಟ್ ಬ್ಯಾಂಕಿಂಗ್, ಎನ್ಇಎಫ್ಟಿ, ಆರ್ಟಿಜಿಎಸ್...’ ನಂತಹ ’ನಗದು ರಹಿತ’ (ಕ್ಯಾಶ್ಲೆಸ್) ವ್ಯವಹಾರ ಶಿವಮೊಗ್ಗ ನಗರದಲ್ಲಿ ಕ್ರಮೇಣ ಹೆಚ್ಚಾಗತೊಡಗಿದೆ.
ಕೇಂದ್ರ ಸರ್ಕಾರವು ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟ್ ಚಲಾವಣೆ ರದ್ದುಗೊಳಿಸಿದ ನಂತರ ್ಲ ನಗದು ವ್ಯವಹಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಹಣಕ್ಕಾಗಿ ನಾಗರಿಕರು ಪರದಾಡುವಂತಾಗಿತ್ತು. ನಗದು ಪಡೆದುಕೊಳ್ಳಲು ಬ್ಯಾಂಕ್ - ಎಟಿಎಂಗಳ ಮುಂಭಾಗ ಗಂಟೆಗಟ್ಟಲೆ ಕ್ಯೂ ನಿಲ್ಲುವಂತಾಗಿತ್ತು. ಇದರ ಜೊತೆ ಚಿಲ್ಲರೆ ಸಮಸ್ಯೆಯೂ ಉದ್ಭವವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟಿನ ಮೇಲೆ ಅಡ್ಡ ಪರಿಣಾಮ ಸೃಷ್ಟಿಸಿತ್ತು.
ಇದೆಲ್ಲದರ ಪರಿಣಾಮದಿಂದ, ನಗದು ಸಮಸ್ಯೆಯಿಂದ ಪಾರಾಗಲು ನಾಗರಿಕರು ’ಕ್ಯಾಶ್ಲೆಸ್’ ವ್ಯವಹಾರದತ್ತ ಮುಖಮಾಡುತ್ತಿದ್ದಾರೆ. ಕೆಲವು ದಿನಗಳಿಂದ ’ಕ್ಯಾಶ್ಲೆಸ್’ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿದೆ.
ಆಧುನಿಕ ಅರ್ಥ ವ್ಯವಸ್ಥೆಯತ್ತ ಒಲವು ತೋರುತ್ತಿರುವುದು ಕಂಡುಬರುತ್ತಿದೆ. ನಗರ ಮಾತ್ರವಲ್ಲದೆ ದೇಶದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಕ್ಯಾಶ್ಲೆಸ್ ವಿಧಾನದ ಮೂಲಕ ವ್ಯವಹಾರಕ್ಕೆ ಮುಂದಾಗುತ್ತಿರುವುದು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ’ಕ್ಯಾಶ್ಲೆಸ್’ ಸಮಾಜ ನಿರ್ಮಾಣಕ್ಕೆ ಇದು ದಿಕ್ಸೂಚಿಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಇದರಿಂದ ವ್ಯವಹಾರದಲ್ಲಿ ಸಂಪೂರ್ಣ ಪಾರದರ್ಶಕತೆ ಬರಲಿದೆ.
ನಗರದಲ್ಲಿ ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳು, ಕೆಲವು ಪೆಟ್ರೋಲ್ ಬಂಕ್ಗಳು ಸೇರಿದಂತೆ ಸೀಮಿತ ವ್ಯವಹಾರ ಸ್ಥಗಳಲ್ಲಿ ಮಾತ್ರ ’ಡೆಬಿಟ್ - ಕ್ರೆಡಿಟ್’ ಕಾರ್ಡ್ ಮೂಲಕ ಮೊತ್ತ ಪಾವತಿಗೆ ಅವಕಾಶವಿತ್ತು. ಕೆಲವೆಡೆ ನೆಟ್ ಬ್ಯಾಂಕಿಂಗ್ ಮೂಲಕವೂ ಗ್ರಾಹಕರು ಹಣ ವರ್ಗಾವಣೆ ಮಾಡುತ್ತಿದ್ದರು. ಆದರೆ ಈ ಪ್ರಮಾಣ ಬಹಳ ಕಡಿಮೆಯಿತ್ತು. ನಾನಾ ಕಾರಣಗಳಿಂದ ಕೆಲವು ವಿದ್ಯಾವಂತರೂ ಕೂಡ ’ಕ್ಯಾಶ್ಲೆಸ್’ ವ್ಯವಹಾರಕ್ಕೆ ಮುಂದಾಗುತ್ತಿರಲಿಲ್ಲ. ನಗದು ಮೂಲಕವೇ ವ್ಯವಹರಿಸುತ್ತಿದ್ದರು. ಆದರೆ ನೋಟ್ ರದ್ದು ಆದೇಶದ ನಂತರ ವಿದ್ಯಾವಂತರು, ನಗರ ಪ್ರದೇಶದವರು ಮಾತ್ರವಲ್ಲದೆ ಗ್ರಾಮೀಣ ಭಾಗದವರು ಕೂಡ ಡೆಬಿಟ್-ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಎನ್ಇಎಫ್ಟಿ, ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ.
ಅಂಗಡಿಗಳಲ್ಲಿ ಡೆಬಿಟ್ - ಕ್ರೆಡಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸುವ ವ್ಯವಸ್ಥೆಯಿರಲಿಲ್ಲ. ನಗದು ಮೂಲಕವೇ ವ್ಯವಹಾರ ನಡೆಯುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ಅಂಗಡಿಯಲ್ಲಿ ಡೆಬಿಟ್ - ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಹೊಸದಾಗಿ ಸ್ವಯ್ಪಿಂಗ್ ಯಂತ್ರ ಕೂಡ ಖರೀದಿಸುತ್ತಿದ್ದಾರೆ. ನಗರ ಭಾಗದವರು ಮಾತ್ರವಲ್ಲ, ಗ್ರಾಮೀಣ ಭಾಗದ ಕೆಲವರು ತಮ್ಮ ಡೆಬಿಟ್ - ಕ್ರೆಡಿಟ್ ಕಾರ್ಡ್ ಮೂಲಕವೇ ಹಣ ಪಾವತಿಸುತ್ತಿದ್ದಾರೆ.
---------------------------------

No comments:
Post a Comment