ಶುಂಠಿ ಬೆಳೆಯಲು ಬಂದು ಗಾಂಜಾ ರುಚಿ ತೋರಿಸಿದರು
ಬಗರ್ಹುಕುಂ ಮತ್ತು ಅರಣ್ಯ ಭೂಮಿಯಲ್ಲಿ ಇದನ್ನು ಬೆಳೆಯುವುದು ಜಾಸ್ತಿ. ಏಕೆ ಗೊತ್ತೆ, ಇಲ್ಲಿನ ಮಣ್ಣು ಫಲವತ್ತಾದುದರಿಂದ ಉತ್ತಮ ಗುಣಮಟ್ಟದ ಬೆಳೆ ಬರುತ್ತದೆ. ಜೊತೆಗೆ ಇದು ಯಾರಿಗೂ ಸುಲಭದಲ್ಲಿ ಗೊತ್ತಾಗುವುದಿಲ್ಲ. ಯಾವ ಬಂಡವಾಳವಿಲ್ಲದೆ ನೋಟು ಎಣಿಸುವ ದಂಧೆಯಾಗಿದೆ. ಈ ಜಾಲದ ಹಿಂದೆ ಅರಣ್ಯಾಧಿಕಾರಿಗಳೂ ಶಾಮೀಲಾಗಿರುವ ಬಗ್ಗೆ ಗುಸುಗುಸು ವದಂತಿ ಕೇಳಿಬರುತ್ತಿದೆ. ಖಾತೆ ಇಲ್ಲದ ಜಮೀನಿನಲ್ಲಿ ಗಾಂಜಾ ಬೆಳೆಯುವುದು ಹೆಚ್ಚು. ಏಕೆಂದರೆ, ಇದನ್ನು ಅಧಿಕಾರಿಗಳು ಪತ್ತೆ ಮಾಡಿದರೂ ಏನೂ ಮಾಡಲಿಕ್ಕಾಗುವುದಿಲ್ಲ. ಜಮೀನಿಗೆ ದಾಖಲೆಯೇ ಇಲ್ಲದ ಮೇಲೆ ಯಾರ ಮೇಲೂ ಕೇಸು ಹಾಕುವಂತಿಲ್ಲ್ಲ. ಜಮೀನನ್ನೂ ಏನೂ ಮಾಡುವಂತಿಲ್ಲ
ಗಾಂಜಾವನ್ನು ಬಗರ್ಹುಕುಂ ಜಮೀನಿನಲ್ಲಿ ಬೆಳೆದರೆ ಹಕ್ಕುಪತ್ರ ಕೊಡುವುದಿಲ್ಲ. ಹಕ್ಕುಪತ್ರ ಕೊಡುವ ಕೆಲಸ ಈಗ ಸನಿಹವಿರುವುದರಿಂದ ಇದನ್ನು ಬೆಳೆದಿದ್ದರೆ ರೈತರೇ ಕಿತ್ತುಹಾಕಬೇಕು. ಅಧಿಕಾರಿಗಳ ದಾಳಿಗೆ ಒಳಗಾದರೆ ರೈತರು ಜಮೀನು ಕಳೆದುಕೊಳ್ಳುವುದರ ಜೊತೆಗೆ ಕೇಸು ಹಾಕಿಸಿಕೊಂಡು ಜೈಲು ಸೇರಬೇಕಾಗುತ್ತದೆ. ಗಾಂಜಾ ಕೇಸಿನಲ್ಲಿ ಜಾಮೀನೂ ಸಹ ಸಿಗುವುದಿಲ್ಲ. 3 ವರ್ಷ ಶಿಕ್ಷೆ ಖಚಿತ. ನೂರಾರು ರೈತರು ಈ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದಾರೆ. ನಾರ್ಕೊಟಿಕ್ ಆಕ್ಟ್ನ ತೀವ್ರತೆಯನ್ನು ಅರಿತು ರೈತರು ಗಾಂಜಾದಿಂದ ದೂರ ಸರಿಯಬೇಕು. ಅಬಕಾರಿ ಪೊಲೀಸ್ ಇಲಾಖೆಯವರು ಸಂಶಯಬಂದ ಕಡೆಯೆಲ್ಲ ಪರಿಶೀಲಿಸುವ ಕೆಲಸವನ್ನು ಈಗ ಮಾಡುತ್ತಿದ್ದಾರೆ. ಯಾವ ಕಾರಣಕ್ಕೂ ಪತ್ತೆ ಹಚ್ಚದೆ ಬಿಡುವುದಿಲ್ಲ. ರೈತರಲ್ಲಿ ಈ ಬಗ್ಗೆ ಜಾಗೃತಿ ಅಗತ್ಯ. ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳಬೇಡಿ.
-ವೈ.ಆರ್. ಮೋಹನ್, ಜಿಲ್ಲಾ ಅಬಕಾರಿ ವರಿಷ್ಠಾಧಿಕಾರಿ
ಪಶ್ಚಿಮಘಟ್ಟದ ತಪ್ಪಲಲ್ಲಿರುವ, ಹಸಿರಿನ ಸೆರಗನ್ನೇ ಹೊದ್ದಿರುವ, ಮಲೆನಾಡಿನ ಹೆಬ್ಬಾಗಿಲೆಂದೇ ಖ್ಯಾತವಾಗಿರುವ ಶಿವಮೊಗ್ಗ ಜಿಲ್ಲೆ ತನ್ನ ಪಾರಿಸಾರಿಕ ಸಂಪತ್ತಿನಿಂದ ಒಂದೆಡೆ ಹೆಸರಾದರೆ, ಇನ್ನೊಂದೆಡೆ ಇದೇ ಹಸಿರಿನ ಒಡಲಲ್ಲಿ ಗಾಂಜಾ ದಂಧೆಯ ನಡೆಸುವ ಮೂಲಕ ಕುಖ್ಯಾತಿಯನ್ನೂ ಪಡೆಯುತ್ತಿದೆ. ಯಾರೋ ಕೆಲವರು ಮಾಡುತ್ತಿರುವ ಈ ಅಕ್ರಮ ದಂಧೆಯಿಂದ ಜಿಲ್ಲೆಯ ಹೆಸರು ಈಗ ಗಾಂಜಾದಿಂದ ಕಳಂಕಿತವಾಗುವಂತಾಗಿದೆ.
ಒಂದು ಕಾಲದಲ್ಲಿ ಅತಿ ಹೆಚ್ಚು ಶ್ರೀಗಂಧ ಮರಗಳನ್ನು ಬೆಳೆಯುತ್ತಿದ್ದ ಜಿಲ್ಲೆ ನಂತರ ಅದರ ಕಳ್ಳಸಾಗಾಣಿಕೆಗೂ ಹೆಸರಾಗಿ, ತನ್ನೆಲ್ಲ ಶ್ರೀಗಂಧವನ್ನು ದಂಧೆಕೋರರಿಂದ ಬರಿದುಮಾಡಿಕೊಂಡಿತು. ಈಗ ಪಶ್ಚಿಮಘಟ್ಟದಲ್ಲಿರುವ ಅಪೂರ್ವ ಔಷಧಿ ಸಸ್ಯಗಳ ನಾಶ ಮತು ವನ್ಯ ಜೀವಿಗಳ ಸಂತತಿಯ ಹನನವೂ ಸಾಗಿದೆ. ಇದೇ ವೇಳೆ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗಾಂಜಾವನ್ನು ಬೆಳೆಯುವ ಮೂಲಕ ಗಾಂಜಾ ಕಾರ್ಖಾನೆ ಎಂಬ ಹೆಸರಿಗೂ ಕಾರಣವಾಗುತ್ತಿದೆ.
ರೈತರು ಬೆಳೆ ಮಧ್ಯೆ ಗಾಂಜಾ ಬೆಳೆದು ಹೊರರಾಜ್ಯ ಮತ್ತು ಜಿಲ್ಲೆಗೆ ಕಳುಹಿಸುತ್ತಿರುವುದು ಈಗ ಹೆಚ್ಚುತ್ತಿದೆ. ಈ ವರ್ಷವಂತೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಬಕಾರಿ ಪೊಲೀಸರಿಂದ ದಾಳಿ ನಡೆಯುತ್ತಿದೆ. ಶುಂಠಿ ಬೆಳೆಯುವ ನೆಪದಲ್ಲಿ ಜಿಲ್ಲೆಗೆ ಕಾಲಿಟ್ಟ ಕೇರಳಿಗರು ಬರುವಾಗ ಗಾಂಜಾ ದಂಧೆಯನ್ನು ತಂದರು. ರೈತರಿಗೆ ಇದರ ರುಚಿ ತೋರಿದರು. ಇದರಿಂದ ಮಲೆನಾಡಿನಲ್ಲಿ ಗಾಂಜಾಗುಂಗು ಹೆಚ್ಚುವಂತೆ ಮಾಡಿದ್ದಾರೆ. ರೈತರ ಬದುಕು ಯಾವತ್ತೂ ಹಣದ ಅಮಿಷಕ್ಕೆ ಬಲಿಯಾಗಬಾರದು. ಆದರೇನು ಮಾಡುವುದು, ನಾರ್ಕೊಟಿಕ್ ಆಕ್ಟ್ ಬಗ್ಗೆ ಗೊತ್ತಿಲ್ಲದೆ ಗಾಂಜಾ ಬೆಳೆದು ಮೈಮೇಲೆ ಕೇಸು ಎಳೆದುಕೊಂಡು ಜೈಲು ಸೇರುತ್ತಿದ್ದಾರೆ.
ಹವಾಮಾನ ವೈಪರಿತ್ಯ, ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರನ್ನು ದಾರಿ ತಪ್ಪಿಸಿದ್ದೇ ಈ ಗಾಂಜಾ ದಂಧೆ. ಮೂಲ ಕೃಷಿ ಮತ್ತು ಸಾಂಪ್ರದಾಯಿಕವಾಗಿ ಬಂದ ಕೃಷಿಯನ್ನು ಬಿಟ್ಟು ಆರ್ಥಿಕವಾಗಿ ಹೆಚ್ಚು ಲಾಭವನ್ನು ಕೆಲವೇ ತಿಂಗಳಲ್ಲಿ ಗಳಿಸಿಕೊಡಬಲ್ಲ ಗಾಂಜಾ ಬೆಳೆಯಲಾರಂಭಿಸಿದ್ದಾರೆ. ಇದಕ್ಕೆ ಕೇರಳಿಗರೇ ಕಾರಣ. ಗಾಂಜಾ ಬೀಜವನ್ನು ನೀಡಿ ಬೆಳೆಯಲು ಪ್ರೇರೇಪಿಸಿದರು. ನಂತರ ಖರೀದಿಯ ಜವಾಬ್ದಾರಿಯನ್ನೂ ಹೊತ್ತರು. ನೀರು, ಗೊಬ್ಬರ, ಔಷಧ ಯಾವುದೂ ಬೇಕಾಗದ ಗಾಂಜಾ ಕೇವಲ ಮೂರು ತಿಂಗಳಲ್ಲಿ ಹೂವು ಬಿಡುವ ಸಸ್ಯ. ಯಾವ ಚಿಂತೆಯೂ ಇಲ್ಲದೆ ಹಣ ಗಳಿಸಬಹುದೆಂಬ ಆಸೆ ತೋರಿಸಿ ರೈತರು ಈಗ ಜೈಲು ಕಾಣಬೇಕಾದ ಸ್ಥಿತಿಯನ್ನು ಈ ದಂಧೆಕೋರರು ತಂದೊಡ್ಡಿದ್ದಾರೆ.
ಒಂದು ಗಾಂಜಾ ಗಿಡ 250ರಿಂದ 300 ಗ್ರಾಂ ಗಾಂಜಾವನ್ನು ಕೊಡುತ್ತದೆ. ಒಂದು ಎಕ್ರೆಯಲ್ಲಿ 30ರಿಂದ 40 ಗಿಡವನ್ನು ಬೆಳೆಯಬಹುದು. 3 ತಿಂಗಳಲ್ಲಿ ಇದರ ಬೆಳೆ ಸಿಗುವುದರಿಂದ ರೈತನಿಗೆ ಕನಿಷ್ಟ 10 ಸಾವಿರ ರೂ. ತಿಂಗಳಿಗೆ ಲಾಭ ಬರಲಿದೆ. ಹಸಿ ಗಾಂಜಾ ಒಂದು ಕೆಜಿಗೆ 2 ಸಾವಿರ ರೂ. ಒಣ ಗಾಂಜಾ ಕೆಜಿಗೆ 10 ಸಾವಿರ ರೂ. ಅದರಲ್ಲೂ ಮಲೆನಾಡಿನ ಗಾಂಜಾಕ್ಕೆ ವಿಶೇಷ ಬೇಡಿಕೆ ಇದೆಯಂತೆ. ಇದರಲ್ಲಿರುವ ಕಿಕ್ ಅಥವಾ ರುಚಿಯೇ ಉಳಿದ ಗಾಂಜಾಕ್ಕಿಂತ ಶ್ರೇಷ್ಠವಾದುದು ಎಂದು ತಜ್ಞರು ಹೇಳುತ್ತಾರೆ. ಈಗ ವರ್ಷವಿಡೀ ದುಡಿದರೂ ಇಷ್ಟು ಲಾಭ ರೈತನಿಗೆ ಸಿಗದಿರುವ ಕಾರಣ ಸುಲಭದಲ್ಲಿ ಆಕರ್ಷಿತನಾಗುತ್ತಿದ್ದಾನೆ. ಒಂದು ರೀತಿಯಲ್ಲಿ ಪರ್ಯಾಯ ಬೆಳೆ ಎನ್ನುವಂತಾಗಿದೆ.
ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹುಹಿಂದಿನಿಂದಲೂ ಕಾಫಿ ತೋಟದಲ್ಲಿ ಜೊತೆಗೆ ದಟ್ಟಾರಣ್ಯದಲ್ಲಿ ಗಾಂಜಾ ಬೆಳೆೆಯಲಾಗುತ್ತಿತ್ತು. ಇದೂ ಸಹ ಕೇರಳಿಗರ ಕೊಡುಗೆಯೇ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿರುವುದು ಮತ್ತು ಇಲ್ಲಿನ ಯುವಕರನ್ನು ಗಾಂಜಾ ಗುಂಗಿಗೆ ನೂಕಿರುವುದು ಪ್ರಜ್ಞಾವಂತರ ಜಿಲ್ಲೆಯ ಜನ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಇದರಿಂದಾಗಿ ಗಾಂಜಾ ಜಾಲ ಹಬ್ಬುತ್ತಿದೆ. ಎಷ್ಟೇ ಕೇಸು ಹಾಕುತ್ತಿದ್ದರೂ ಅವರ ಕಣ್ತಪ್ಪಿಸಿಯೇ ಬೆಳೆ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತಿರುವುದು ಜಿಲ್ಲೆಯಲ್ಲಿ ಕಳವಳವನ್ನುಂಟು ಮಾಡಿದೆ.
ಚೆಂಡು ಹೂವಿನ ಮಧ್ಯೆ ಇದನ್ನು ಬೆಳೆದರೆ ಯಾರಿಗೂ ಗೊತ್ತ್ತಾಗುವುದೇ ಇಲ್ಲ. ಏಕೆಂದರೆ ಚೆಂಡು ಹೂವಿನ ಎಲೆ ಮತ್ತು ಗಾಂಜಾ ಎಲೆ ಒಂದೇ ರೀತಿಯಾಗಿರುತ್ತದೆ. ಗಾಂಜಾ 3 ತಿಂಗಳಿಗೆ ಹೂವು ಬಿಟ್ಟ ನಂತರ ಸುವಾಸನೆ ಬರಲಾರಂಭಿಸುತ್ತದೆ. ಆಗ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಬೆಳೆದರೆ ಎದುರಿಸಬೇಕಾಗಬಹುದಾದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಕೃಷಿ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.
.................................

No comments:
Post a Comment