ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಹಲವರ ಕಣ್ಣು
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರ ಅಧಿಕಾರ ಮುಂದಿನ ತಿಂಗಳು 2ನೆಯ ವಾರ ಮುಕ್ತಾಯವಾಗಲಿದೆ. ಈ ಅಧ್ಯಕ್ಷ ಸ್ಥಾನಕ್ಕೇರಲು ನಗರದ ಹಲವು ಕಾಂಗ್ರೆಸ್ ಮುಖಂಡರು ತೀವ್ರ ಯತ್ನ ನಡೆಸಿದ್ದಾರೆ. ಪ್ರಭಾವಿ ರಾಜಕಾರಣಿಗಳ ಮೂಲಕ ಒತ್ತಡ ಹೇರಲಾರಂಭಿಸಿದ್ದಾರೆ. ಇದರಿಂದ ಮುಂದಿನ ಸ್ಬುಡಾ ಅಧ್ಯಕ್ಷರು ಯಾರು ಎನ್ನುವ ಬಗ್ಗೆ ಸಾರ್ವಜನಿಕರಲ್ಲೂ ತೀವ್ರ ಕುತೂಹಲ ಮನೆ ಮಾಡಿದೆ.
ಈ ಬಾರಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳೆಂದರೆ, ಇಮ್ತಿಯಾಜ್ ಖಾನ್, ಸಯ್ಯದ್ ವಾಹಿದ್ ಅಡ್ಡು, ಮುಕ್ತಿಯಾರ್ ಅಹಮದ್ ಮತ್ತು ಆರೀಫ್ ಖಾನ್.
ಇಮ್ತಿಯಾಜ್ ಖಾನ್ ಈ ಬಾರಿ ಕೂಡ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಯತ್ನ ಅವರಿಂದ ನಡೆದಿದೆ. ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಸೇರಿದಂತೆ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಬಾರಿ ತಮಗೆ ಸ್ಬುಡಾ ಅಧ್ಯಕ್ಷ ಸ್ಥಾನದ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.
ಇನ್ನೊಂದೆಡೆ, ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಂ ಅವರ ಆಪ್ತರಾಗಿರುವುದರಿಂದ ಅವರ ಪ್ರಭಾವ ಬಳಸಿ ಅಧ್ಯಕ್ಷರಾದರೂ ಆಗಬಹುದು. ಆದರೆ ಸದ್ಯ ಇಬ್ರಾಹಿಂ ಕಾಂಗ್ರೆಸ್ನಲ್ಲಿ ಸೈಲಂಟ್ ಆಗಿರುವುದರಿಂದ ಅವರ ಪ್ರಭಾವ ಎಷ್ಟರ ಮಟ್ಟಿಗೆ ನಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೆ.
ಸಯ್ಯದ್ ವಾಹಿದ್ ಅಡ್ಡು ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದರು. ನಂತರ ಲೋಕಸಭೆ ಚುನಾವಣೆ ವೇಳೆ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇತ್ತೀಚೆಗೆ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಇವರು ಸಚಿವ ರೋಷನ್ ಬೇಗ್ ಅವರ ಆಪ್ತರಾಗಿದ್ದು, ಅವರ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೇಗ್ ಶಿವಮೊಗ್ಗಕ್ಕೆ ಬಂದರೆ ಅಡ್ಡು ಮನೆಗೆ ಭೇಟಿ ಕೊಡುತ್ತಾರೆ. ಅಡ್ಡು ಬೆಂಗಳೂರಿಗೆ ತೆರಳಿದರೆ ಬೇಗ್ ಮನೆಗೆ ಭೇಟಿ ಕೊಡುತ್ತಾರೆ. ಇಷ್ಟೊಂದು ಆಪ್ತತೆ ಇರುವ ಕಾರಣ ಅಡ್ಡು ಅಧ್ಯಕ್ಷರಾದರೂ ಆಶ್ಚರ್ಯವೇನಿಲ್ಲ.
ಮುಕ್ತಿಯಾರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಂದವರು. ಈ ಹಿಂದೆ ಅವರು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದವರು. ಪ್ರಭಾವಿ ಮುಖಂಡರೂ ಹೌದು.
ಆರೀಫ್ ಖಾನ್ ಅವರು ಶಾಸಕ ಕೆ. ಬಿ. ಪ್ರಸನ್ನಕುಮಾರ್ ಅವರ ಅತ್ಯಾಪ್ತರಾಗಿದ್ದು, ಅವರ ಮೂಲಕ ಒತ್ತಡ ಹಾಕಿಸಿ ಅಧ್ಯಕ್ಷರಾಗಲೂಬಹುದು. ಅಧ್ಯಕ್ಷ ರೇಸ್ನಲ್ಲಿ ತಾನಿರುವುದನ್ನು ಅವರು ಖಾತ್ರಿಪಡಿಸಿದ್ದಾರೆ. ಯುವ ಮುಖಂಡರಾಗಿರುವುದರಿಂದ, ಶಾಸಕರು ಮನಸ್ಸು ಮಾಡಿದರೆ ಖಾನ್ ಅಧ್ಯಕ್ಷರಾಗಬಹುದು. ಒಟ್ಟಿನಲ್ಲಿ, ತುರುಸಿನ ಹಣಾಹಣಿ ಇದೆಯಾದರೂ ಯಾರು ಅಧ್ಯಕ್ಷರಾದರೂ ಆಶ್ಚರ್ಯವೇನಿಲ್ಲ.
ಈ ಮಧ್ಯೆ ಎನ್.ರಮೇಶ್ ಹಾಲಿ ಅಧ್ಯಕ್ಷರಾಗಿದ್ದು, ಉಳಿದ ಒಂದೂವರೆ ವರ್ಷದ ಅವಧಿಗೆ ತಾವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಯತ್ನ ನಡೆಸುತ್ತಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ರಮೇಶ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಅವಕಾಶ ಕಡಿಮೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಏಕೆಂದರೆ, ಹೊಸಬರಿಗೆ ಅದರಲ್ಲೂ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದ ಮುಂಡರಿದ್ದು, ಅವರಿಗೆ ಹುದ್ದೆ ನೀಡುವ ಸಂಪ್ರದಾಯ ಇರುವುದರಿಂದ ಅವಕಾಶ ಕಲ್ಪಿಸಲು ಇದು ಉತ್ತಮ ವೇದಿಕೆಯಾಗಿದೆ. ಪಕ್ಷದಲ್ಲಿ ಈ ಬಾರಿ ಅಲ್ಪಸಂಖ್ಯಾತರಿಗೆ ಸುಡಾ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಈ ಹಿಂದೆಯೇ ತೀರ್ಮಾನ ಮಾಡಲಾಗಿತ್ತೆಂಬ ಮಾತು ಸಹ ಕೇಳಿಬರುತ್ತಿದೆ.
ರಮೇಶ್ ಅಧ್ಯಕ್ಷರಾಗುವ ವೇಳೆಯೇ ಅಲ್ಪಸಂಖ್ಯಾತ ನಾಯಕರು ತಮ್ಮ ಬೇಡಿಕೆ ಮುಂದಿಟ್ಟಿದ್ದರು. ಏಕೆಂದರೆ ಕಾಂಗ್ರೆಸ್ ಶಾಸಕರು ನಗರದಲ್ಲಿ ಆಯ್ಕೆಯಾಗಲು ಅಲ್ಪಸಂಖ್ಯಾತರೇ ಕಾರಣವಾಗಿದ್ದು. ಮುಸ್ಲಿಂ ಮತದಾರರನ್ನು ಗಮನದಲ್ಲಿಟ್ಟುಕೊಂಡು ಆ ವರ್ಗಕ್ಕೆ ಸೇರಿದ ಪಕ್ಷದ ಮುಖಂಡರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೇರಿಸುವ ಚಿಂತನೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರದ್ದಾಗಿದೆ ಎಂದು ತಿಳಿದುಬಂದಿದೆ.
ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸುಮಾರು 35 ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ವರಿಷ್ಠರು ಸ್ಬುಡಾ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿರ್ವಹಣೆ ಮಾಡುತ್ತೇನೆ.
-ಇಮ್ತಿಯಾಜ್ ಖಾನ್
------------------------------------

No comments:
Post a Comment