ಆಗ ಅಜ್ಜಿ ಮನೆ; ಈಗ ಬೇಸಿಗೆ ಶಿಬಿರ!
ಬೇಸಿಗೆ ಶಿಬಿರಗಳು ವಿವಿಧ ರೀತಿಯ ತರಬೇತಿಗಳನ್ನು ಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ದುಬಾರಿ ಶುಲ್ಕ ಪಡೆದು ಹಣ ಮಾಡುವ ದಂಧೆಯಾಗಿ ಇತ್ತೀಚೆಗೆ ಮಾರ್ಪಾಡಾಗುತ್ತಿವೆ. ತಮ್ಮ ಮಕ್ಕಳಿಗೆ ಈ ಶಿಬಿರದ ಅವಶ್ಯಕತೆ ಇದೆಯೇ, ರಜೆಯ ಮಜವನ್ನು ಏಕೆ ಸವಿಯಬಾರದು ಎನ್ನುವುದನ್ನು ಪಾಲಕರು ಮೊದಲು ಯೋಚಿಸಬೇಕು. ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುತ್ತಾ, ಕುಣಿದು, ಕುಪ್ಪಳಿಸುತ್ತಾ, ರಜೆಯ ಸವಿಯನ್ನು ಅನುಭವಿಸದಂತೆ ಬಹುತೇಕ ಪಾಲಕರು ಮಾಡುತ್ತಿದ್ದಾರೆ. ಕಲಿಯುವ ವಯಸ್ಸಿನಲ್ಲಿ ಮಕ್ಕಳು ಕಲಿಯಬೇಕೆನ್ನುವ ಮಾತನ್ನು ಒಪ್ಪುವುದಾದಾದರೂ ಅದು ಬಲವಂತದ ಹೇರಿಕೆಯಾಗಬಾರದು ಎನ್ನುವುದನ್ನೂ ಗಮನಿಸಬೇಕು. ಜೊತೆಗೆ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಳ್ಳುವತ್ತ ಮಕ್ಕಳನ್ನು ಹೆಚ್ಚು ಪ್ರೋತ್ಸಾಹಿಸುವ ಅವಶ್ಯಕತೆಯೂ ಇದೆ.
ಕಾಲ ಬದಲಾದಂತೆ ನಾವೂ ಬದಲಾಗಬೇಕು ಎನ್ನುವುದೇನೋ ನಿಜ. ಆದರೆ ಇಷ್ಟರ ಮಟ್ಟಿಗೆ ಬದಲಾಗುವ ಅಗತ್ಯವಿದೆಯೇ? ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು. ಕಾಲದೊಂದಿಗೆ ನಾವೂ ಉರುಳಬೇಕು; ಹೊರಳಬೇಕು ಎನ್ನುವುದು ನಿಜವಾದರೂ, ಕಾಲದೊಳಗೆ ಕಳೆದುಹೋಗುತ್ತಿರುವ ನಾವು, ಸಂಬಂಧಗಳಿಂದ ಕಳಚಿಕೊಳ್ಳುತ್ತಿದ್ದೇವೆ; ಇರುವ ಸಂಬಂಧಗಳೂ ಸಡಿಲಗೊಳ್ಳುತ್ತಿವೆ. ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಿರುವ ನಾವು, ಮಕ್ಕಳನ್ನು ಮಾತ್ರ ಆ ಸವಿಸವಿ ನೆನಪಿನಿಂದ ವಂಚಿತರನ್ನಾಗಿ ಮಾಡುತ್ತಿದ್ದೇವೆ.
ಅದೊಂದು ಕಾಲವಿತ್ತು- ಶಾಲೆಗೆೆ ರಜೆ ಬಂದರೆ ಸಾಕು, ಮಕ್ಕಳು ಅಜ್ಜಿ-ಅಜ್ಜನ ಮನೆ, ಚಿಕ್ಕಮ್ಮ- ದೊಡ್ಡಮ್ಮನ ಮನೆ, ಅತ್ತೆ- ಮಾವನ ಮನೆ, ಮೊದಲಾದ ಸಂಬಂಧಿಕರ ಮನೆಗೆ ಹೋಗಿ ರಜೆ ಪೂರ್ತಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಈಗ? ಅವೆಲ್ಲ ಹಿರಿಯರ ಮೆಲುಕುಗಳಷ್ಟೇ. ಮಕ್ಕಳ ಅಂಕಪಟ್ಟಿ ಹಿಡಿದು ಬೀಗುವ ಹೆತ್ತವರಿಗೆ, ಮಕ್ಕಳನ್ನು ಸದಾ ಬ್ಯುಸಿಯಾಗಿಡುವುದರಲ್ಲೇ ಬೀಗುವ ಪಾಲಕರಿಗೆ ಸಂಬಂಧಗಳನ್ನು ಬೆಸೆಯುವ, ಹೊಸೆಯುವ ವ್ಯವಧಾನವಾದರೂ ಎಲ್ಲಿಂದ ಬರಬೇಕು ಹೇಳಿ?
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅಜ್ಜ-ಅಜ್ಜಿ ತೋರುವ ಪ್ರೀತಿಯಲ್ಲಿ ಮಕ್ಕಳು ಇರಲು ಬಯಸುವುದಿಲ್ಲ. ಅವರಿಗೇನಿದ್ದರೂ ಪೇಟೆಯ ಜೀವನ ಒಗ್ಗಿ ಹೋಗಿದೆ. ರಜೆಯಲ್ಲೂ ಪಾಲಕರನ್ನು ಬಿಟ್ಟಿರಲಾದ ಸ್ಥಿತಿಗೆ ಬಂದು ಬಿಟ್ಟಿದ್ದಾರೆ. ವೀಡಿಯೋ ಗೇಮ್, ಟಿ.ವಿ., ಮೊಬೈಲ್, ಫೇಸ್ಬುಕ್, ವಾಟ್ಸಪ್, ಸಿಟಿಯ ಜೀವನ ಶೈಲಿಗೆ ಮಾರು ಹೋಗಿ ಇಲ್ಲೇ ಉಳಿಯುತ್ತಿದ್ದಾರೆ. ಆ ಹಳ್ಳಿಯ ಜೀವನ ಪದ್ದತಿ, ಅಲ್ಲಿನ ಹಳ್ಳ- ಕೊಳ್ಳಗಳು, ಪರಿಸರ, ಪ್ರಾಣಿ, ಪಕ್ಷಿಗಳು, ನಿಸರ್ಗ, ಮಣ್ಣು-ಮರಳು, ಗಿಡ-ಮರಗಳನ್ನು ಬಳಸಿ ಆಡುವ ಜನಪದ ಸೊಗಡಿನ ಆಟಗಳಲ್ಲಿ ಆಸಕ್ತಿಯೇ ಇಲ್ಲವಾಗಿದೆ.
ಪಟ್ಟಣದ ಯಾಂತ್ರಿಕ ಜೀವನದಲ್ಲೇ ಮುಳುಗೇಳುತ್ತಿದ್ದರೂ ಹಳ್ಳಿಯ ನೆನಪಾಗುವುದಿಲ್ಲ. ಬೇಸಿಗೆ ರಜೆಯಲ್ಲೂ ಪಾಲಕರು ತಮ್ಮ ಮಗು ಓದುವುದನ್ನೇ ಮರೆಯುತ್ತದೆಂಬ ದೃಷ್ಟಿಯಿಂದ ಮಕ್ಕಳನ್ನು ಹಳ್ಳಿಯಿಂದ ದೂರವಿಟ್ಟು ವಿವಿಧ ಶಿಬಿರಗಳಿಗೆ ಸೇರಿಸಲಾರಂಭಿಸಿದ್ದಾರೆ. ಇದರಿಂದಾಗಿ ಪಟ್ಟಣದಲ್ಲಿ ಈಗ ಬೇಸಿಗೆ ಶಿಬಿರಗಳಿಗೆ ಎಲ್ಲಿಲ್ಲದ ಬೇಡಿಕೆ. ಕೆಲವು ಸಂಘ- ಸಂಸ್ಥೆಗಳಂತೂ ಬೇಸಿಗೆ ಶಿಬಿರ ನಡೆಸುವುದಕ್ಕಾಗಿಯೇ ಹುಟ್ಟಿಕೊಂಡಿವೆ. ಇನ್ನೂ ಕೆಲವು ವಿದ್ಯಾಸಂಸ್ಥೆಗಳು, ಇತರೇ ಸಂಘಟನೆಗಳೂ ಸಹ ಬೇಸಿಗೆ ಶಿಬಿರವನ್ನು ತಪ್ಪದೇ ನಡೆಸುತ್ತಿವೆ.
ರಜೆಯಲ್ಲಿ ಹಾಯಾಗಿ ಕಾಲ ಕಳೆಯಬೇಕಾದ ಮಕ್ಕಳು ಇತ್ತೀಚಿನ ವರ್ಷಗಳಲ್ಲಿ ಬೇಸಿಗೆ ಶಿಬಿರದ ಹೆಸರಲ್ಲಿ ಬಂಧಿಯಾಗುತ್ತಿದ್ದಾರೆ. ಮಕ್ಕಳಿಗೆ ಮನಸ್ಸಿಲ್ಲದಿದ್ದರೂ ಪಾಲಕರು ಒತ್ತಾಯಪೂರ್ವಕವಾಗಿ ಸೇರಿಸುತ್ತಿದ್ದಾರೆ. ಪಕ್ಕದ ಮನೆಯ ಮಕ್ಕಳು ಸೇರುತ್ತಿದ್ದಾರೆಂದು ತಮ್ಮ ಮನೆಯ ಮಕ್ಕಳನ್ನು ಅವರಿಗೆ ಇಷ್ಟವಿಲ್ಲದಿದ್ದರೂ ಸೇರಿಸಲಾಗುತ್ತಿದೆ. ರಜೆಯನ್ನು ಮಕ್ಕಳು ಮನೆಯಲ್ಲೋ, ಅಜ್ಜಿಯ ಮನೆಯಲ್ಲೋ ಕಳೆಯಲಿ ಎಂಬ ಮನೋಭಾವ ಕಡಿಮೆಯಾಗುತ್ತಿದೆ. ತಮ್ಮ ಮಕ್ಕಳು ಇನ್ನಷ್ಟು ಬುದ್ಧಿವಂತರಾಗಲಿ ಎಂಬ ದೃಷ್ಟಿಯಿಂದ ಎಲ್ಲವನ್ನೂ ಹೇರಲಾಗುತ್ತಿದೆ. ಮಕ್ಕಳಿಗೆ ಏನು ಬೇಕು, ಎಷ್ಟು ಬೇಕು ಎನ್ನುವುದನ್ನು ಪಾಲಕರು ಅರ್ಥ ಮಾಡಿಕೊಳ್ಳದೆ ಎಷ್ಟಾದರೂ ಶುಲ್ಕ ತೆತ್ತು ಶಿಬಿರಗಳಿಗೆ ನೂಕುತ್ತಿದ್ದಾರೆ. ಜೊತೆಗೆ ಶಾಲೆಯಲ್ಲಿ ಇವೆಲ್ಲವನ್ನೂ ಕಲಿಸುವುದಿಲ್ಲ ಎನ್ನುವ ಭಾವನೆಯೂ ಇದೆ.
ಬೇಸಿಗೆ ಶಿಬಿರಗಳು ವಿವಿಧ ರೀತಿಯ ತರಬೇತಿಗಳನ್ನು ಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವರದ್ದು 10 ದಿನದ ಶಿಬಿರವಾಗಿದ್ದರೆ, ಇನ್ನು ಕೆಲವರದ್ದು 15 ದಿನ, 25 ದಿನ, ತಿಂಗಳುಗಟ್ಟಲೆ ಶಿಬಿರ ನಡೆಯುತ್ತದೆ. ಇವುಗಳ ಶುಲ್ಕವೂ ಅಷ್ಟೇ ದುಬಾರಿಯಾಗಿರುತ್ತದೆ. ಹಣ ಮಾಡುವ ದಂಧೆಯಾಗಿ ಇತ್ತೀಚೆಗೆ ಶಿಬಿರಗಳು ಮಾರ್ಪಾಡಾಗುತ್ತಿವೆ. ತಮ್ಮ ಮಕ್ಕಳಿಗೆ ಈ ಶಿಬಿರದ ಅವಶ್ಯಕತೆ ಇದೆಯೇ, ರಜೆಯ ಮಜವನ್ನು ಏಕೆ ಸವಿಯಬಾರದು ಎನ್ನುವುದನ್ನು ಪಾಲಕರು ಮೊದಲು ಯೋಚಿಸಬೇಕು. ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುತ್ತಾ, ಕುಣಿದು, ಕುಪ್ಪಳಿಸುತ್ತಾ, ರಜೆಯ ಸವಿಯನ್ನು ಅನುಭವಿಸದಂತೆ ಬಹುತೇಕ ಪಾಲಕರು ಮಾಡುತ್ತಿದ್ದಾರೆ.
ಬೇಸಿಗೆ ಶಿಬಿರಗಳು ಪಠ್ಯೇತರ ಚಟುವಟಿಕೆಗೆ ಸಹಕಾರಿಯಾಗಿದ್ದರೆ ಪಾಲಕರು ಕಳುಹಿಸುವುದರಲ್ಲಿ ತಪ್ಪೇನಿಲ್ಲ. ಆದರೆ, ಒತ್ತಾಯದಿಂದ ಮಕ್ಕಳ ಮೇಲೆ ಇದನ್ನು ಹೇರಬಾರದು. ಕಲಿಯುವ ವಯಸ್ಸಿನಲ್ಲಿ ಮಕ್ಕಳು ಕಲಿಯಬೇಕೆನ್ನುವ ಮಾತನ್ನು ಒಪ್ಪುವುದಾದಾದರೂ ಅದು ಬಲವಂತದ ಹೇರಿಕೆಯಾಗಬಾರದು ಎನ್ನುವುದನ್ನೂ ಗಮನಿಸಬೇಕು. ಜೊತೆಗೆ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಳ್ಳುವತ್ತ ಮಕ್ಕಳನ್ನು ಹೆಚ್ಚು ಪ್ರೋತ್ಸಾಹಿಸುವ ಅವಶ್ಯಕತೆಯೂ ಇದೆ.

No comments:
Post a Comment