Saturday, 28 July 2018

 ಪಾಳುಬಿದ್ದಿದೆ ಹೊಸ ಸಂತೆ ಮೈದಾನ
..........................................................

* 54 ಲಕ್ಷ ರೂ. ನೀರಿನಲ್ಲಿ ಹೋಮ
* ಗುಜರಿ ಹಾಕುವ, ಬಸ್ ನಿಲ್ಲಿಸುವ ತಾಣ
* ಪಾಲಿಕೆಯ, ಅಧಿಕಾರಿಗಳ ನಿರ್ಲಕ್ಷ್ಯ
* ಸ್ಥಳಾಂತರಕ್ಕೆೆ ಸ್ಥಳೀಯ ಕಾರ್ಪೊರೇಟರ್‌ಗೆ ನಿರಾಸಕ್ತಿಿ, ಆರೋಪ
* ಶೀಘ್ರ ಉದ್ಘಾಾಟನೆ ಮಾಡಿ, ಸಂತೆ ನಡೆಸಲು ಸ್ಥಳೀಯರ ಆಗ್ರಹ
* ಮಿಳಘಟ್ಟದಲ್ಲಿ ಗ್ರಾಾಹಕರಿಗೆ ತಪ್ಪದ ಬವಣೆ





ಮಹತ್ತರ ಯೋಜನೆಗಳನ್ನು ಜಾರಿಗೊಳಿಸುವಾಗ ದೂರದೃಷ್ಟಿಿ ಇಲ್ಲದೇ ಹೋದಲ್ಲಿ ಅವು ವಿಫಲವಾಗುತ್ತವೆ. ಜನೋಪಕಾರಿ ಕೆಲಸ ಮಾಡುವವರು ಯೋಜನೆಯ ಕಾಮಗಾರಿ ಆರಂಭವಾದ ನಂತರ ಅದು ಮುಕ್ತಾಾಯವಾಗುವರೆಗೆ ಅದರ ಬೆನ್ನಹಿಂದೆ ಬಿದ್ದು ಮುಗಿಸಬೇಕು. ಕೆಲಸ ಮುಗಿದಾಕ್ಷಣ ಹಾಳಾಗುವಂತೆ ಮಾಡದೆ ಅಥವಾ ಅದರ ಉದ್ದೇಶ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು.
ಸುಮಾರು 55 ಲಕ್ಷ ರೂ ವೆಚ್ಚದಲ್ಲಿ ಕಳೆದ ವರ್ಷ ನಗರದ ಕೆಎಸ್ಸಾಾರ್ಟಿಸಿ ಡಿಪೊ ಎದುರು ಹೊಸ ಸಂತೆ ಮೈದಾನವನ್ನು ನಿರ್ಮಿಸಲಾಗಿದೆ. ಆದರೆ ಅದು ಸದ್ಬಳಕೆಯಾಗದೆ ಈಗ  ದುರ್ಬಳಕೆಯಾಗುತ್ತಿಿದೆ. ಹೀಗೆ ಬಿಟ್ಟಲ್ಲಿ ಅದು ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಪಾಲಿಕೆಯು ಇದರ ಜವಾಬ್ದಾಾರಿಯನ್ನು ಹೊತ್ತಿಿದೆಯಾದರೂ ಕಾಮಗಾರಿ ಮುಕ್ತಾಾಯವಾದ ನಂತರ ಜನರಿಗೆ ಉಪಯೋಗಕ್ಕೆೆ ಸಿಗುವಂತೆ ಮಾಡುವಲ್ಲಿ ವಿಫಲವಾಗಿದೆ. ಅದೊಂದು ಯಶಸ್ವಿಿ ಕೆಲಸವಾಗದಂತೆ ಮಾಡಿದೆ.
ಆದರೆ ಈಗ ಈ ಸಂತೆ ಮೈದಾನ ಪಾಳುಬಿದ್ದಿದೆ. ಕೆಲವರು ಹಳೆಯ ಟೈರ್‌ಗಳನ್ನು ಸಂಗ್ರಹಿಸಿಡುವ, ಇನ್ನೂ ಕೆಲವರು ಹಳೆಯ ಮರದ ವಸ್ತುಗಳನ್ನು ಸಂಗ್ರಹಿಸಿಡುವ ತಾಣವನ್ನಾಾಗಿ, ಕೆಲವರು ತಳ್ಳುಗಾಡಿ, ಬಸ್ ಮತ್ತಿಿತರ ವಾಹನ ನಿಲ್ಲಿಸುವ ಜಾಗವನ್ನಾಾಗಿ ಮಾಡಿಕೊಂಡಿದ್ದಾಾರೆ.  ಇನ್ನೊೊಂದೆಡೆ ಬಳ್ಳಿಿಗಳು ಹಬ್ಬಿಿಕೊಂಡಿವೆ. ಇದರಿಂದ ನೆಲಕ್ಕೆೆ ಹಾಕಿರುವ ಸಿಮೆಂಟ್ ಟೈಲ್‌ಸ್‌‌ಗಳು ಕಿತ್ತುಬರುವ ಸಾಧ್ಯತೆ ಇದೆ. ಕೂಡಲೇ ಅದನ್ನು ಶುಚಿಗೊಳಿಸಿ ಯಾರೂ ಗಲೀಜು ಮಾಡದಂತೆ, ಕಸ ಹಾಕದಂತೆ ಎಚ್ಚರಿಕೆ ವಹಿಸಬೇಕಿದೆ. ಪಕ್ಕದಲ್ಲಿ ಮನೆ ಕಟ್ಟುತ್ತಿಿರುವ ವ್ಯಕ್ತಿಿ ಅಲ್ಲಿ ಮರದ ಸಾಮಗ್ರಿಿಗಳನ್ನು ಹಾಕಿಕೊಂಡಿದ್ದು ಅದರಿಂದಲೂ ಮಣ್ಣು, ಕಸ ಬೀಳುತ್ತಿಿದೆ.  ಸಿಮೆಂಟ್ ಕಂಬಗಳನ್ನು ನೆಟ್ಟು ಈ ಜಾಗಕ್ಕೆೆ ವಾಹನ  ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತಾಾದರೂ ಅದನ್ನು ಕೆಲವರು ಕಿತ್ತುಹಾಕಿ ವಾಹನ ನಿಲ್ಲಿಸಿಕೊಳ್ಳುವ ಜಾಗವನ್ನಾಾಗಿ ಮಾಡಿಕೊಂಡಿದ್ದಾಾರೆ. ಪಾಲಿಕೆ ಅಧಿಕಾರಿಗಳು ಗಮನಿದೇ ಇರುವುದು ಇಷ್ಟೆೆಲ್ಲ ಅವಾಂತರಕ್ಕೆೆ ಕಾರಣವಾಗಿದೆ.
ಇದೇ ವಾರ್ಡಿನ (ಮಿಳಘಟ್ಟದ) ಕಾರ್ಪೊರೇಟರ್ ಆಗಿರುವ ಏಳುಮಲೈ ಮತ್ತು ಅಂದಿನ ಶಾಸಕ ಕೆ. ಬಿ ಪ್ರಸನ್ನಕುಮಾರ್ ಅವರು ಈಗ ಸಂತೆ ನಡೆಯುತ್ತಿಿರುವ ಮಿಳಘಟ್ಟದಿಂದ (ಖಾಸಗಿ ಬಸ್ ನಿಲ್ದಾಾಣದ ಪಕ್ಕ) ಡಿಪೋ ಎದುರು ಸ್ಥಳಾಂತರಿಸಲು ನಿರ್ಧರಿಸಿ ಈ ಯೋಜನೆಗೆ ಶ್ರಮಿಸಿದ್ದರು. ಏಳುಮಲೈ ಅವರು ತಾವೇ ಮೇಯರ್ ಆಗಿದ್ದಾಾಗ ಈ ಕಾಮಗಾರಿಯನ್ನೂ ಮುಗಿಸಿದ್ದರು. ಮಿಳಘಟ್ಟ ಸಂತೆ ಮೈದಾನದಿಂದ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆೆ ವಿಪರೀತ ತೊಂದರೆ ಆಗುತ್ತಿಿರುವುದನ್ನು ಗಮನಿಸಿ ಸಾಕಷ್ಟು ದೂರು ಬಂದ ಹಿನ್ನೆೆಲೆಯಲ್ಲಿ ಹೊಸ ಸಂತೆ ಮೈದಾನ ನಿರ್ಮಿಸಲಾಗಿದೆಯಾದರೂ ಅದು ಸಾರ್ವಜನಿಕರ ಬಳಕೆಗೆ ಸಿಗದೆ ಮತ್ತೆೆ ಯಥಾ ಸ್ಥಿಿತಿ ಮುಂದುವರೆಯುವಂತಾಗಿದೆ.
ಹಾಲಿ ಮೇಯರ್ ನಾಗರಾಜ ಕಂಕಾರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆೆ ಧಾವಿಸಿ ಪರಿಶೀಲಿಸಿ, ಆಗಬೇಕಾದ ಕಾಮಗಾರಿ ಇದ್ದರೆ ತುರ್ತಾಗಿ ಪೂರೈಸಿ ಉದ್ಘಾಾಟನೆ ನೆರವೇರಿಸಬೇಕಿದೆ. ಇಲ್ಲವಾದಲ್ಲಿ ಮತ್ತೆೆ ಗುಜರಿ ಹಾಕುವ, ಬಸ್ ನಿಲ್ಲಿಸುವ ತಾಣವಾಗಲಿದೆ. ಅಧಿಕಾರಿಗಳು ಎಚ್ಚೆೆತ್ತು ಜಾಗ ದುರುಪಯೋಗವಾಗದಂತೆ ಮಾಡಬೇಕಿದೆ. ಸ್ಥಳೀಯ ಕಾರ್ಪೊರೇಟರ್ ಅವರು ಮೊದಲಿದ್ದ ಆಸಕ್ತಿಿಯನ್ನು ಈಗೇಕೆ ಈ ಮೈದಾನ ಸ್ಥಳಾಂತರ ವಿಚಾರದಲ್ಲಿ ಕಳೆದುಕೊಂಡಿದ್ದಾಾರೆನ್ನುವುದು ತಿಳಿದುಬರಬೇಕಿದೆ. 
ಪಾಲಿಕೆಯ ಅಧಿಕಾರಿಗಳು ಇನ್ನಾಾದರೂ ಮುತುವರ್ಜಿ ವಹಿಸಿ ಸಂತೆಯನ್ನು ಅಲ್ಲಿಗೆ ಸ್ಥಳಾಂತರಿಸಬೇಕಿದೆ. ಚುನಾವಣೆ ಹಿನ್ನೆೆಲೆಯಲ್ಲಿ ಈ ಯೋಜನೆ ಮುನ್ನಡೆದಿರಲಿಲ್ಲ. ಆದರೆ ಮತ್ತೆೆ ಮುಂದಿನ ಚುನಾವಣೆ ಬರುವುದರೊಳಗೆ ಸ್ಥಳಾಂತರಿಸುವ ಮೂಲಕ 54 ಕೋಟಿ ರೂ. ನೀರಿನಲ್ಲಿ ಮಾಡಿದ ಹೋಮದಂತಾಗದಂತೆ ನೋಡಿಕೊಳ್ಳಬೇಕಿದೆ.
july 26
................................................... 
ಭರ್ತಿಯಾಗುವತ್ತ ಲಿಂಗನಮಕ್ಕಿಿ
..............................................
* 4 ವರ್ಷದ ನಂತರ ಪೂರ್ಣ ತುಂಬಲಿದೆ ಜಲಾಶಯ
* ಭರ್ತಿಗೆ ಬೇಕಿದೆ ಕೇವಲ 16 ಅಡಿ
* ವಾರದಲ್ಲಿ ಮೈದುಂಬಿಕೊಳ್ಳುವ ಸಾಧ್ಯತೆ
* ಗಂಗಾಪೂಜೆ ನೆರವೇರಿಸಿದ ಮುಖ್ಯ ಇಂಜಿನೀಯರ್
* ನೀರು ಬಿಡುವ ಬಗ್ಗೆೆ ಮುಂಜಾಗ್ರತೆ ಸೂಚನೆ ಪ್ರಕಟ
* ಅಧಿಕಾರಿಗಳೊಂದಿಗೆ ಸತತ ಸಭೆ ನಡೆಸುತ್ತಿಿರುವ ಮುಖ್ಯ ಇಂಜಿನೀಯರ್
* ಜುಲೈನಲ್ಲೇ ತುಂಬುತ್ತಿಿರುವುದು ಮೊದಲ ಸಲ
* ಹೆಚ್ಚಿಿದ ಒಳಹರಿವು, ನೀರಿನ ಮಟ್ಟ ತೀವ್ರಗತಿಯಲ್ಲಿ ಏರಿಕೆ


ಶಿವಮೊಗ್ಗ: ಇಡೀ ನಾಡಿಗೆ ಬೆಳಕು ಒದಗಿಸುವ  ಮಹಾತ್ಮಾಾ ಗಾಂಧಿ ವಿದ್ಯುದಾಗರದ ನೀರಿನ ಆಶ್ರಯತಾಣವಾದ ಲಿಂಗನಮಕ್ಕಿಿ ಜಲಾಶಯ ಈ ಬಾರಿ ತುಂಬುವ ಧಾವಂತದಲ್ಲಿದೆ. ಇಂದಿಗೆ ಜಲಾಶಯದ ನೀರಿನ ಮಟ್ಟ 1803 ಅಡಿಯಷ್ಟೇರಿದೆ. ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 1819 ಅಡಿ. ಜಲಾಶಯ ತುಂಬುವ ಸನಿಹದಲ್ಲಿರುವುದರಿಂದ ಅಧಿಕಾರಿಗಳು ನೀರು ಬಿಡುವ ಬಗ್ಗೆೆ ಮುಂಜಾಗ್ರತೆ ಸಭೆ ನಡೆಸಿ ಕ್ರಮ ಜರುಗಿಸಲಾರಂಭಿಸಿದ್ದಾಾರೆ.
2014ರ ಸೆಪ್ಟೆೆಂಬರ್ 6ರಂದು ಜಲಾಶಯ ಪೂರ್ಣಮಟ್ಟ ತುಂಬಿತ್ತು. ಆನಂತರ 1800 ಅಡಿಯನ್ನೂ ಕಂಡಿರಲಿಲ್ಲ. ಆದರೆ ಈ ಬಾರಿ ದಾಖಲೆ ಎಂಬಂತೆ ಜೂನ್ ಕೊನೆಯ ವಾರ ಮತ್ತು ಜುಲೈನ ಮಧ್ಯಭಾಗದವರೆಗೆ ಬಿದ್ದ ಭಾರೀ ಮಳೆಯಿಂದ ಜಲಾಶಯ ಬಹುತೇಕವಾಗಿ ತುಬಿದೆ. ದಿನದಿಂದ ದಿನಕ್ಕೆೆ ಮೂರು ಅಡಿಯಷ್ಟು ನೀರು ತುಂಬುತ್ತಿಿದೆ. ಒಂದು ವಾರದಿಂದ ಮಳೆ ಕಡಿಮೆಯಾಗಿರುವ ಹಿನ್ನೆೆಲೆಯಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಆದರೂ ಇನ್ನೂ ಕೇವಲ 16 ಅಡಿಯಷ್ಟು ಮಾತ್ರ ನೀರು ಬೇಕಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಒಂದು ವಾರದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
ಲಿಂಗನಮಕ್ಕಿಿಯು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ)ದ ವ್ಯಾಾಪ್ತಿಿಯಲ್ಲಿ ಬರುತ್ತಿಿದ್ದು, ಅದರ ಮುಖ್ಯ ಇಂಜಿನೀಯರ್  ಆನಂದ ಕುಲಕರ್ಣಿ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾರಂಭಿಸಿದ್ದಾಾರೆ. ಮುಂದಿನ ಕ್ರಮ ಜರುಗಿಸುವುದರ ಬಗ್ಗೆೆ ಚಿಂತನೆ ನಡೆದಿದೆ. ಗೇರುಸೊಪ್ಪಾಾ ಜಲಾಶಯವೂ ಸಹ ತುಂಬಿರುವುದರಿಂದ ಏಕಾಏಕಿ ನೀರು ಬಿಟ್ಟರೆ ಹೆಚ್ಚಿಿನ ಹಾನಿಯಾಗುವುದನ್ನು ಗಮನಿಸಿ ಜಲಾಶಯದ ಕೆಳ ಪ್ರದೇಶದ ಅಂದರೆ ಹೊನ್ನಾಾವರ ತಾಲೂಕಿನಲ್ಲಿ ಅಪಾರ ಆಸ್ತಿಿಪಾಸ್ತಿಿ ಹಾನಿಯಾಗಲಿದೆ. ಇದನ್ನೆೆಲ್ಲ ಅರಿತು ಅನುಸರಿಸಬೇಕಾದ ಕ್ರಮದ ಬಗ್ಗೆೆ ಸಭೆ ನಡೆಸುತ್ತಿಿದ್ದಾಾರೆ.
ಈ ಬಾರಿ ಲಿಂಗನಮಕ್ಕಿಿ ಮತ್ತು ಶರಾವತಿ ಜಲಾನಯದ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಬಹುಬೇಗ ಜಲಾಶಯ ತುಂಬುವ ಹಂತಕ್ಕೆೆ ಬಂದಿದೆ. ಜುಲೈನಲ್ಲಿ 1800 ಅಡಿಯಷ್ಟು ತುಂಬುವುದು ತೀರಾ ಅಪರೂಪ ಎನ್ನುತ್ತಾಾರೆ ನಿಗಮದ ಅಧಿಕಾರಿಗಳು. ಈ ಬಾರಿ ಸಂಪೂರ್ಣ ತುಂಬುವುದು ಖಚಿತವಾಗಿದೆ. ಈವರೆಗಿನ ಇತಿಹಾಸದ ಪ್ರಕಾರ ಆಗಸ್‌ಟ್‌ ಒಳಗೆ ಯಾವತ್ತೂ ಜಲಾಶಯ ತುಂಬಿರಲಿಲ್ಲ. ಸೆಪ್ಟೆೆಂಬರ್ ಮತ್ತು ಅಕ್ಟೋೋಬರ್‌ನಲ್ಲೂ ತುಂಬಿದ ಉದಾಹರಣೆ ಇದೆ. ಮಲೆನಾಡಿನಲ್ಲಿ ಭಾರೀ ಮಳೆ ಸುಮಾರು 20 ದಿನದಿಂದ ಬೀಳುತ್ತಿಿರುವುದರಿಂದ ಬಹುಬೇಗ ಜಲಾಶಯ ಮೈದುಂಬಿಕೊಂಡು ಜನರಲ್ಲಿ ಮುಂದಿನ ಬೇಸಿಗೆಗೆ ವಿದ್ಯುತ್ ಬಗ್ಗೆೆ ಉತ್ತಮ ಆಶಾಭಾವನೆ ಮೂಡಿಸಿದೆ.
ಈ ಮಧ್ಯೆೆ  ನಿನ್ನೆೆ ಜಲಾಶಯದಲ್ಲಿ ಗಂಗಾಪೂಜೆಯನ್ನು ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸುವ ಮೂಲಕ ಮುಖ್ಯ ಅಭಿಯಂತರರು ನೆರವೇರಿಸಿದ್ದಾಾರೆ. ಈ ನಿಮಿತ್ತ ಕ್ರಸ್‌ಟ್‌ ಗೇಟ್ ತೆರೆದು ಸ್ವಲ್ಪ ಪ್ರಮಾಣದ ನೀರನ್ನು ಹೊರಬಿಡಲಾಯಿತು.

ಲಿಂಗನಮಕ್ಕಿಿ ಜಲಾಶಯಕ್ಕೆೆ ಹೆಚ್ಚಿಿನ ನೀರು ಹರಿದುಬರುತ್ತಿಿರುವುದರಿಂದ  ಒಳಹರಿವು ಹೆಚ್ಚಿಿದೆ. ನೀರಿನ ಮಟ್ಟ ತೀವ್ರಗತಿಯಲ್ಲಿ ಏರಿಕೆಯಾಗುತ್ತಿಿದೆ. ಅಣೆಕಟ್ಟೆೆಯ ಸುರಕ್ಷತೆಯ ದೃಷ್ಟಿಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡುವ ಸಾಧ್ಯತೆ ಇದೆ. ಆದ್ದರಿಂದ ಜಲಾಶಯದ ಕೆಳಭಾಗದ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಜಲಾಶಯದ ಅಧಿಕಾರಿಗಳು ಮನವಿ ಮಾಡಿದ್ದಾಾರೆ.
ಜಲಾಶಯ ಶೀಘ್ರದಲ್ಲೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಒಳಹರಿವು ಸುಮಾರು 28,799 ಕ್ಯುಸೆಕ್‌ಸ್‌‌ನಷ್ಟಿಿದೆ. ಇದೇ ರೀತಿ ಮುಂದುವರೆದರೆ ನೀರು ಬಿಡುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಅಣೆಕಟ್ಟೆೆಯ ಕೆಳದಂಡೆಯಲ್ಲಿ ಹಾಗೂ ನದಿಪಾತ್ರದುದ್ದಕ್ಕೂ ವಾಸಿಸುತ್ತಿಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆೆ ಸ್ಥಳಾಂತರಗೊಳ್ಳಬೇಕೆಂದು ಕೆಪಿಸಿಸಿ ಅಧಿಕಾರಿಗಳು ಮನವಿ ಮಾಡಿದ್ದಾಾರೆ.
..............................
   
ಜೀವಬಲಿಗೆ ಮುನ್ನ ಯೋಚಿಸಿದ್ದರೆ....


 - 
ನಮ್ಮ ಇಂದಿನ ವ್ಯವಸ್ಥೆೆಯಲ್ಲಿ ಯಾವುದೇ ಬದಲಾವಣೆಯಾಗಬೇಕಾದರೂ ಅದಕ್ಕೆೆ ಒಂದಿಷ್ಟು ಸಾವು-ನೋವುಗಳು ಸಂಭವಿಸಬೇಕು. ನಾಗರಿಕರು ಬೀದಿಗಿಳಿದು ಹೋರಾಟ ನಡೆಸಬೇಕು. ಇಲ್ಲವೇ ನ್ಯಾಾಯಾಲಯಗಳು ನಿರ್ದೇಶನ ನೀಡಬೇಕು. ಆಗ ಮಾತ್ರ ಆಡಳಿತ ವ್ಯವಸ್ಥೆೆ ಎಚ್ಚೆೆತ್ತುಕೊಂಡು ಸಮಸ್ಯೆೆ ಪರಿಹಾರಕ್ಕೆೆ ಮುಂದಾಗುವಂತಹ ಸ್ಥಿಿತಿ ನೆಲೆಸಿದೆ. ಇಲ್ಲದಿದ್ದರೆ ನಮ್ಮ ಕಣ್ಮುಂದೆಯೇ ಅವ್ಯವಸ್ಥೆೆ ರಾರಾಜಿಸುತ್ತಿಿದ್ದರೂ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಇದಕ್ಕೆೆ ಇಚ್ಛಾಾಶಕ್ತಿಿಯ ಕೊರತೆ ಎನ್ನಬೇಕೋ, ಬೇಜವಾಬ್ದಾಾರಿತನ ಎನ್ನಬೇಕೋ ತಿಳಿಯುತ್ತಿಿಲ್ಲ. 




ಕಳೆದ ವಾರ  ತೀರ್ಥಹಳ್ಳಿಿ ತಾಲೂಕು ಗುಡ್ಡೇಕೇರಿ ಸರ್ಕಾರಿ ಪ್ರೌೌಢಶಾಲೆಯ 9ನೆಯ ತರಗತಿ ವಿದ್ಯಾಾರ್ಥಿನಿಯಾಗಿದ್ದ ಆಶಿಕಾ ಕಾಲುಸಂಕದಿಂದ ಜಾರಿ ತುಂಬಿ ಹರಿಯುತ್ತಿಿದ್ದ ನದಿ ಪಾಲಾದಳು. ಅಲ್ಲಿಯವರೆಗೆ ಕಾಲುಸಂಕದ ಬಗ್ಗೆೆ ಸ್ಥಳೀಯಾಡಳಿತಗಳು ಚರ್ಚಿಸಿರಲಿಲ್ಲ. ಆಶಿಕಾ ಸಾವಿನ ನಂತರ ಜಿಲ್ಲಾಾಧಿಕಾರಿಯಿಂದ ಹಿಡಿದು ಸಂಬಂಧಿಸಿದ ಬಹುತೇಕ ಎಲ್ಲಾಾ ಇಲಾಖೆಯ ಹಿರಿಯ ಅಧಿಕಾರಿಗಳು, ಹಾಲಿ, ಮಾಜಿ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸ್ಥಳ ಪರಿಶೀಲಿಸಿ ಮೃತಳ ಮನೆಯವರಿಗೆ ಸಾಂತ್ವನ ಹೇಳಿದರು.
ಆನಂತರ ಶುರುವಾಗಿದ್ದೇ ಕಾಲುಸಂಕಗಳ ಸಮೀಕ್ಷೆ. ಡಿಸಿಯವರು ಸಭೆ ನಡೆಸಿ ಕಾಲುಸಂಕಗಳ ಸಮೀಕ್ಷೆಗೆ ಸೂಚಿಸಿದರೂ ಅದನ್ನು ಪಾಲಿಸದ ಬಹುತೇಕ ಅದಿಕಾರಿಗಳು ಸೋಮವಾರ (ಇಂದು) ಲೆಕ್ಕ ಕೊಡುವ ಭರವಸೆ ನೀಡಿದ್ದಾಾರೆ. ಸಾರ್ವಜನಿಕ ಓಡಾಟಕ್ಕೆೆ, ಅದರಲ್ಲೂ ವಿಶೇಷವಾಗಿ ಶಾಲಾ-ಮಕ್ಕಳು ಸಂಚರಿಸುವ ಕಾಲುಸಂಕದ ಬಗ್ಗೆೆ ಸಮೀಕ್ಷೆ ನಡೆಸಲು ಜಿಲ್ಲಾಾಡಳಿತ ಸೂಚಿಸಿತ್ತು. ಗ್ರಾಾಮಾಂತರ ಪ್ರದೇಶದಲ್ಲಿ ಮಾತ್ರ ಕಾಲುಸಂಕದ ಬಗ್ಗೆೆ ಗೊತ್ತು. ತೀರ್ಥಹಳ್ಳಿಿ, ಹೊಸನಗರ, ಸಾಗರ ತಾಲೂಕಿನವರಿಗೆ ಇನ್ನೂ ಹೆಚ್ಚಿಿನ ಪ್ರಮಾಣದಲ್ಲಿ ಗೊತ್ತಿಿದೆ. ವಿಶೇಷವಾಗಿ ಈ ಮೂರು ತಾಲೂಕಿನ ತಾಪಂ, ಗ್ರಾಾಪಂ ಮತ್ತು ಕೆಲವು ಇಂಜಿನೀಯರ್‌ಗೆ ಈ ಸಂಕಗಳನ್ನು ಎಣಿಕೆ ಮಾಡಿಕೊಂಡು ಬರುವ ಕೆಲಸ ಕೊಡಲಾಗಿದೆ.
ಜಿಪಂನ ಅನುದಾನದಲ್ಲಿ ಆಯಾಯ ಭಾಗದ ಕಾಲುಸಂಕದ ಬದಲು ಮಿನಿ ಸೇತುವೆ ನಿರ್ಮಿಸುವ ಕೆಲಸ ಮಾಡಬಹುದಿತ್ತು. ಕಾಲುಸಂಕ ಯಾವತ್ತಾಾದರೂ ಅಪಾಯ ಎನ್ನುವುದು ಈ ಜನಪ್ರತಿನಿಧಿಗಳಿಗೆ ಗೊತ್ತಿಿದೆ. ಆದರೆ ಕೇವಲ ರಸ್ತೆೆ, ಚರಂಡಿ, ಕುಡಿಯುವ ನೀರಿಗೆ ಮಾತ್ರ ಆದ್ಯತೆ ಕೊಟ್ಟರೇ ವಿನಾ ಜೀವ ತೆಗೆಯಬಹುದಾದ ಕಾಲುಸಂಕದ ಬಗ್ಗೆೆ ಯಾರೂ ಗಮನಹರಿಸಲೇ ಇಲ್ಲ. ಈಗ ಎಲ್ಲರಿಗೂ ಇದೇ ಪ್ರಮುಖ ಚರ್ಚಾ ವಿಷಯವಾಗಿದೆ. ಕಾಲುಸಂಕ ತೆಗೆದುಹಾಕಿ ಮಿನಿ ಸೇತುವೆ ನಿರ್ಮಿಸಲು ಹಣ ಹೊಂದಿಸಲಾಗುತ್ತಿಿದೆ.   
ಗ್ರಾಾಮಾಂತರ ಸಮಸ್ಯೆೆಗಳ ಬಗ್ಗೆೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸತತ ನಿರ್ಲಕ್ಷ್ಯವೇ ಇದಕ್ಕೆೆಲ್ಲ ಕಾರಣ. ಜೀವಬಲಿಯಾದ ಮೇಲೆ ಎಚ್ಚೆೆತ್ತು ಕೆಲಸಕ್ಕೆೆ ಮುಂದಾಗುತ್ತಾಾರೆ. ಇದು ನಮ್ಮ ಆಡಳಿತ ವ್ಯವಸ್ಥೆೆಗೆ ಹಿಡಿದ ಕೈಗನ್ನಡಿ.
 ಕಳೆದ ವರ್ಷ  ಶಿವಮೊಗ್ಗ-ಹೊನ್ನಾಾಳಿ ರಸ್ತೆೆಯ ಗೊಂಧಿಚಟ್ನಳ್ಳಿಿ ಗ್ರಾಾಮದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ವೊಂದು ರಸ್ತೆೆ ಬದಿಯ ಕೆರೆಗೆ ಉರುಳಿ ಬಿದ್ದಿತ್ತು. ಕೆರೆಯಲ್ಲಿ ನೀರು ತುಂಬಿರದಿದ್ದ ಕಾರಣ ಪ್ರಯಾಣಿಕರೆಲ್ಲ ಅಪಾಯದಿಂದ ಪಾರಾಗಿದ್ದರು.  ನಗರದ ಹೊರವಲಯ ಪುರಲೆ ಗ್ರಾಾಮದ ಬಳಿ ಕಾರೊಂದು ರಸ್ತೆೆ ಬದಿಯ ಕೆರೆಗೆ ಉರುಳಿ ಬಿದ್ದಿತ್ತು. ಇಲ್ಲೂ ಕೂಡ ಕೆರೆಯಲ್ಲಿ ನೀರಿನ ಸಂಗ್ರಹ ಸಾಕಷ್ಟು ಕಡಿಮೆಯಿತ್ತು. ಈ ಹಿನ್ನೆೆಲೆಯಲ್ಲಿ ಕಾರಿನಲ್ಲಿದ್ದವರು ಪ್ರಾಾಣಾಪಾಯವಿಲ್ಲದೆ ಪಾರಾಗಿದ್ದಾಾರೆ. 
  ಜಿಲ್ಲೆೆಯಲ್ಲಿ ಅಪಾರ ಸಂಖ್ಯೆೆಯ ಕೆರೆಗಳಿವೆ. ಯಾವ ಕೆರೆಗೂ ಸುರಕ್ಷಿತ ತಡೆಗೋಡೆಗಳಿಲ್ಲ. ಈ ಕೆರೆ ದಂಡೆಗಳ ಮೇಲೆಯೇ  ರಾಷ್ಟ್ರೀಯ ಹೆದ್ದಾಾರಿ, ರಾಜ್ಯ ಹೆದ್ದಾಾರಿ ಅಥವಾ ಗ್ರಾಾಮದ ಮುಖ್ಯ ರಸ್ತೆೆ ಇದೆ. ಆದರೆ ಇವುಗಳಿಗೆ ಸುರಕ್ಷಿತ ತಡೆಗೋಡೆಗಳಿಲ್ಲ. ಇದು ಅಪಾಯಕ್ಕೆೆ ಆಹ್ವಾಾನ ನೀಡಿದಂತಿದೆ. ಹಲವು ಜನರು ಪ್ರಾಾಣ ಕಳೆದುಕೊಂಡಿದ್ದರೂ, ಬಿದ್ದೆೆದ್ದಿದ್ದರೂ ಸಂಬಂಧಿತ ಅಧಿಕಾರಿಗಳು ಇನ್ನೂ ಎಚ್ಚೆೆತ್ತಿಿಲ್ಲ. 
ಶಿವಮೊಗ್ಗ ನಗರದೊಳಗೆ ನವುಲೆ ಕೆರೆ ಇದೆ. ಅಲ್ಲಿಯೂ ಯಾವುದೇ ತಡೆಗೋಡೆ ಇಲ್ಲ. ಇದರಂತೆ ಸಾಗರ ಮತ್ತು ಸೊರಬ ತಾಲೂಕಿನ ಅರ್ಧದಷ್ಟು ರಸ್ತೆೆಗಳು ಕೆರೆ ದಂಡೆಯಲ್ಲೇ ಇವೆ. ಏನಾದರೂ ಅನಾಹುತವಾಗಿ  ಜೀವಹಾನಿಯಾದಾಗ ಮಾತ್ರ  ಅಥವಾ  ದೊಡ್ಡ ಅನಾಹುತ ಸಂಭವಿಸಿದ ನಂತರವಷ್ಟೇ ಇಲಾಖೆಯವರು ಎಚ್ಚೆೆತ್ತುಕೊಳ್ಳಲು ಕಾದು ಕುಳಿತಿರುವಂತೆ ಭಾಸವಾಗುತ್ತಿಿದೆ.
 ಇಂತಹ ಮಿನಿ ಸೇತುವೆ ಅಥವಾ ರಸ್ತೆೆಗಳನ್ನು ಮೇಲ್ದರ್ಜೆಗೇರಿಸಿ, ತಡೆಗೋಡೆ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಆಗುತ್ತಿಿಲ್ಲ. ಇದಕ್ಕೆೆ ಅನುದಾನದ ಕೊರತೆಯ ನೆಪವೊಡ್ಡುತ್ತವೆ.  ಹಾಗಾದರೆ ಅಪಾಯ ಸಂಭವಿಸಿ ಅಮಾಯಕರು ಬಲಿಯಾಗಬೇಕೇ, ಸರ್ಕಾರಗಳೇಕೆ ಇಂತಹ ಕೆರೆ ಏರಿಗಳ ಅಭಿವೃದ್ಧಿಿಗೆ ಅನುದಾನ ಬಿಡುಗಡೆ ಮಾಡುತ್ತಿಿಲ್ಲ ಎಂದು ಜನರು ಪ್ರಶ್ನಿಿಸುತ್ತಾಾರೆ.


ಕಾಲುಸಂಕದಿಂದ ಜಾರಿ ಬಿದ್ದ ನಂತರ,  ರಸ್ತೆೆಯಂಚಿನಿಂದ ಕೆರೆಗಳಿಗೆ ವಾಹನಗಳು ಉರುಳಿ ಬಿದ್ದು ಅಮಾಯಕರ ಸಾವು-ನೋವುಗಳು ಸಂಭವಿಸಿದಾಗ ಅಧಿಕಾರಸ್ಥರು ಇನ್ನು ಮುಂದೆ ಅನಾಹುತಕ್ಕೆೆ ಆಸ್ಪದವಾಗದಂತೆ ಎಚ್ಚರವಹಿಸಲಾಗುವುದು ಎಂಬ ಭರವಸೆ ನೀಡುತ್ತಾಾರೆ. ಆದರೆ ಕ್ರಮೇಣ ಈ ಭರವಸೆಗಳು ಮರೆಯಾಗುತ್ತವೆ. ಮತ್ತೆೆ  ಇದು ಮರುಕಳಿಸಿ ಅಮಾಯಕರು ಬಲಿಯಾದಾಗ ಈ ಭರವಸೆಗಳು ನೆನಪಾಗುತ್ತವೆ. ಹಾಗೆಯೇ ಸಂಬಂಧಿಸಿದ ಇಲಾಖೆಗಳು ಕೂಡ ಇತ್ತ ಗಮನಹರಿಸುವುದಿಲ್ಲ. ಇನ್ನಾಾದರೂ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಎಚ್ಚೆೆತ್ತುಕೊಳ್ಳಬೇಕು. 
---------------------------------------
18 july-2018

Monday, 16 July 2018

ಶಾಲೆ ವಿಲೀನಕ್ಕೂ  ಮುನ್ನ....


ಗುಣಮಟ್ಟದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸಿರುವ ಸರ್ಕಾರಿ ಶಾಲೆಗಳು ನಮ್ಮಲ್ಲಿವೆ; ಮೈಕೊಡವಿ ನಿಂತ ಸೇವಾ ಮನೋಭಾವದ ಶಿಕ್ಷಕರು  ಸರ್ಕಾರಿ ಶಾಲೆಗಳಲ್ಲೂ ಇದ್ದಾಾರೆ. ಕುಣಿಯಲು ಬಾರದವ ನೆಲ ಡೊಂಕು ಎಂದಂತೆ ಸರ್ಕಾರಿ ಶಾಲೆಗಳ ದುಸ್ಥಿಿತಿಗೆ ಖಾಸಗಿ ಶಾಲೆಗಳ ದರ್ಬಾರು ಕಾರಣ ಎನ್ನುವ ಬದಲು, ಅಲ್ಲಿಯ ಗುಣಮಟ್ಟವನ್ನು ಸರ್ಕಾರಿ ಶಾಲೆಗಳಲ್ಲೂ ಜಾರಿಗೆ ತರುವ ಕೆಲಸವಾಗಬೇಕು. ಬೀಗ ಹಾಕುವುದು ಸುಲಭ. ಆದರೆ ಮತ್ತೆೆ ಆ ಶಾಲೆ ತೆರೆಯಬೇಕಾದರೆ ಮಕ್ಕಳನ್ನು ಹುಡುಕಿಕೊಂಡು ಬರುವುದು ಕಷ್ಟ. ಇದನ್ನೆೆಲ್ಲ ಅರಿತು ಅಧಿಕಾರಿಗಳು ಮತ್ತು ಸರ್ಕಾರ ಬೀಗ ಹಾಕುವ ಮೊದಲು ಹತ್ತಾಾರು ಬಾರಿ ಯೋಚನೆ ಮಾಡುವುದು ಒಳಿತು.



ಇತ್ತೀಚೆಗೆ ಮುಖ್ಯಮಂತ್ರಿಿಯಾದ ಎಚ್. ಡಿ. ಕುಮಾರಸ್ವಾಾಮಿ ಮೊನ್ನೆೆ ಮಂಡಿಸಿದ ಬಜೆಟ್‌ನಲ್ಲಿ ಸುಮಾರು 28 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮಾತನ್ನಾಾಡಿದ್ದಾಾರೆ. ಇದಕ್ಕೂ ಹಿಂದಿನ ಕಾಂಗ್ರೆೆಸ್ ಸರ್ಕಾರವೂ ಇದೇ ಮಾತನ್ನಾಾಡಿತ್ತು. ಜೊತೆಗೆ ವಿಲೀನಗೊಳಿಸುವುದಾಗಿಯೂ ಹೇಳಿತ್ತು. ಆದರೆ ಎಲ್ಲೋೋ ಕೆಲವೆಡೆ ವಿಲೀನೀಕರಣ ನಡೆಯಿತೇ ವಿನಾ ಶಾಲೆಗೆ ಬೀಗ ಹಾಕಲಿಲ್ಲ. ಈಗಿನ ಸರ್ಕಾರ ಮತ್ತೆೆ ಅದೇ ಮಾತನ್ನು ಪುನರುಚ್ಚರಿಸಿದೆ. ಆದರೆ ಶಿಕ್ಷಣ ಸಚಿವ ಎನ್. ಮಹೇಶ್ ಶಾಲೆ ಮುಚ್ಚುವುದಿಲ್ಲ ಎಂದಿದ್ದಾಾರೆ.
ಸರ್ಕಾರಗಳಿಗೆ ಸರ್ಕಾರಿ ಶಾಲೆ ಮುಚ್ಚುವುದು ಒಂದು ಯೋಜನೆಯೇ ಆದಂತಿದೆ. ಅವುಗಳನ್ನು ಅಭಿವೃದ್ಧಿಿಪಡಿಸಿ ಇನ್ನಷ್ಟು ಮಕ್ಕಳು ಸೇರ್ಪಡೆಯಾಗಬೇಕೆಂಬ ಉದ್ದೇಶ ಹೊತ್ತು ಕೆಲಸ ಮಾಡುವಂತೆ ಶಿಕ್ಷಣ ಇಲಾಖಾಧಿಕಾರಿಗಳಿಗೆ ಸೂಚಿಸಬಹುದಿತ್ತು. ಕಚೇರಿಯಲ್ಲೇ ಕುಳಿತು ಕಂಪ್ಯೂಟರ್ ಅಥವಾ ಫೈಲುಗಳಲ್ಲಿ  ಮುಳುಗುವ ಅಧಿಕಾರಿಗಳಿಗೆ ಶಾಲೆ ಭೇಟಿ ಕಡ್ಡಾಾಯ ಎಂದು ಏಕೆ ಹೇಳಬಾರದು? ಎಷ್ಟೋೋ ಶಾಲೆಗಳಿಗೆ ಡಿಡಿಪಿಐ ಮತ್ತು ಶಿಕ್ಷಣಾಧಿಕಾರಿ ಭೇಟಿ ಕೊಡುವುದೇ ಇಲ್ಲ. ಗ್ರಾಾಮಾಂತರದ ಶಾಲೆಗಳ ದುಸ್ಥಿಿತಿ ಗಮನಿಸುವುದಿಲ್ಲ. ಸೋರುತ್ತಿಿದ್ದರೂ, ಬೀಳುವ ಸ್ಥಿಿಯಲ್ಲಿದ್ದರೂ, ಗೋಡೆ ಬಿರುಕು ಬಂದಿದ್ದರೂ ಮಾಧ್ಯಮಗಳೇ ಎಚ್ಚರಿಸಬೇಕಾದ ಸಂದರ್ಭ ಬಂದೊದಗಿದೆ.
ಹೆಂಚು ಒಡೆದು ಕೋಣೆಯ ತುಂಬಾ ನೀರು ತುಂಬುತ್ತಿಿದ್ದರೂ ನಗರದೊಳಕ್ಕೇ ಇರುವ ಮೇನ್ ಮಿಡ್‌ಲ್‌ ಸ್ಕೂಲ್‌ನ  ಮೆಟ್ಟಿಿಲು ಹತ್ತಿಿ ಈವರೆಗೆ ಯಾವ ಶಿಕ್ಷಣಾದಿಕಾರಿಯೂ ಗಮನಿಸಿಲ್ಲ. ಸರ್ಕಾರ ಇಂತಹ ಶಿಕ್ಷಣಾಧಿಕಾರಿಗಳನ್ನಿಿಟ್ಟುಕೊಂಡು ಕೆಲಸ ಮಾಡುತ್ತಿಿದೆ. ಶಾಲೆ ಮುಚ್ಚುವ ಬದಲು ಅಲ್ಲಿರುವ ವ್ಯವಸ್ಥೆೆ, ಸೌಕರ್ಯ ಹೆಚ್ಚಿಿಸಲು ಮನಸ್ಸು ಮಾಡಬೇಕು. ಮಕ್ಕಳ ಕೊರತೆ ಎಂದಾದರೆ ಶಾಲೆ ಮುಚ್ಚುವುದೇ ಉಪಾಯವಲ್ಲ. ಬದಲಾಗಿ ಹೇಗೆ ಮಕ್ಕಳನ್ನು ಕರೆತರಬೇಕೆನ್ನುವ ಯೋಜನೆ ರೂಪಿಸಬೇಕು. ಶಿಕ್ಷಣ ತಜ್ಞರು, ಶಿಕ್ಷಕರು, ವಿಚಾರವಂತರೊಡನೆ ಚರ್ಚಿಸಬೇಕು. ಸರ್ಕಾರಿ ಶಾಲೆಗಳು ಬೊಕ್ಕಸಕ್ಕೆೆ ಹೊರೆ ಎಂದು ಸರ್ಕಾರ ಭಾವಿಸಿದಂತಿದೆ.
ಇನ್ನು ಕಲಿಕಾ ಗುಣಮಟ್ಟಕ್ಕೆೆ ಬಂದರೆ, ಪ್ರಾಾಥಮಿಕ ಶಾಲಾ ಶಿಕ್ಷಕರಿಗೆ ಹೆಚ್ಚಿಿನ ತರಬೇತಿ ಕೊಟ್ಟು ಅವರನ್ನು ಪರಿಣಿತರನ್ನಾಾಗಿಸಬೇಕು. ಟಿಸಿಎಚ್, ಬಿಎಡ್ ಮುಗಿಸಿಕೊಂಡು ಬಂದವರಿಗೆ ಇಂದಿನ ಪಠ್ಯ ಕಲಿಸುವುದು ಸುಲಭದ ಕೆಲಸವಲ್ಲ. ಇಂಗ್ಲೀಷ್, ಗಣಿತ, ವಿಜ್ಞಾಾನ ಮೊದಲಾದ ವಿಷಯಗಳ ಬಗ್ಗೆೆ ವರ್ಷದಲ್ಲಿ ಒಂದು ಬಾರಿ ಕಡ್ಡಾಾಯ ತರಬೇತಿ ಕೊಡಿಸುವ ಕೆಲಸವಾಗಬೇಕು. ಜೊತೆಗೆ ತಳವೂರಿ ಬೇರು ಬಿಟ್ಟಿಿರುವವರಿಗೆ ಬೇರೆ ಶಾಲೆಯಲ್ಲೂ ಪಾಠ ಮಾಡಬಹುದೆನ್ನುವುದನ್ನು ತೋರಿಸಬೇಕು.
ಗುಣಮಟ್ಟದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸಿರುವ ಸರ್ಕಾರಿ ಶಾಲೆಗಳು ನಮ್ಮಲ್ಲಿವೆ; ಮೈಕೊಡವಿ ನಿಂತ ಸೇವಾ ಮನೋಭಾವದ ಶಿಕ್ಷಕರು  ಸರ್ಕಾರಿ ಶಾಲೆಗಳಲ್ಲೂ ಇದ್ದಾಾರೆ. ಕುಣಿಯಲು ಬಾರದವ ನೆಲ ಡೊಂಕು ಎಂದಂತೆ ಸರ್ಕಾರಿ ಶಾಲೆಗಳ ದುಸ್ಥಿಿತಿಗೆ ಖಾಸಗಿ ಶಾಲೆಗಳ ದರ್ಬಾರು ಕಾರಣ ಎನ್ನುವ ಬದಲು, ಅಲ್ಲಿಯ ಗುಣಮಟ್ಟವನ್ನು ಸರ್ಕಾರಿ ಶಾಲೆಗಳಲ್ಲೂ ಜಾರಿಗೆ ತರುವ ಕೆಲಸವಾಗಬೇಕು. ಶಿಕ್ಷಕರನ್ನು ಚಾಕರಿ ಕೆಲಸಗಳಿಗೆ ಬಳಸಿಕೊಳ್ಳುವ ಬದಲು, ಶೈಕ್ಷಣಿಕ ಕ್ಷೇತ್ರದಲ್ಲೇ ಉಳಿಸಿಕೊಳ್ಳುವ ಕೆಲಸವಾಗಬೇಕು. ಈ ನಿಟ್ಟಿಿನಲ್ಲಿ ಶಿಕ್ಷಕರನ್ನು ಹುರಿದುಂಬಿಸಬೇಕು. ಶಿಕ್ಷಕ ಗುರುವಾಗಿ ಬದಲಾಗಬೇಕು. ಹೀಗಾಗಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿದ್ದೆೆಯಿಂದೆದ್ದು ಜಾಗೃತರಾಗಬೇಕು; ಕುರ್ಚಿ ಬಿಟ್ಟೇಳಬೇಕು; ಪ್ರತಿ ಶಾಲೆಗಳನ್ನು ಸುತ್ತಬೇಕು.
 ಇಷ್ಟಕ್ಕೂ ಅಧಿಕಾರಿಗಳು ಮನಸ್ಸು ಮಾಡಿದರೆ ಶಾಲೆಯ ಸರ್ವತೋಮುಖ ಅಭಿವೃದ್ಧಿಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಿಸಲು ಸಾಧ್ಯವಿದೆ. ಇನ್ನಷ್ಟು ಶಿಕ್ಷಣ ಪೂರಕ ಯೋಜನೆಯನ್ನು ಸರ್ಕಾರವೂ ಜಾರಿಗೊಳಿಸಬೇಕು. ಜೊತೆಗೆ ಪೋಷಕರ ಮನಸ್ಸು ಬದಲಾಯಿಸುವತ್ತ ಧಾವಿಸಲಿ.  ಸರ್ಕಾರ ಎಲ್‌ಕೆಜಿ, ಯುಕೆಜಿ ಆರಂಭಿಸುವತ್ತ ಲಕ್ಷ್ಯ ವಹಿಸಲಿ. ಈಗಾಗಲೇ ಗದಗ, ಉಡುಪಿ, ತುಮಕೂರು ಮತ್ತು ಕೋಲಾರ ಜಿಲ್ಲೆೆಯ 35 ಗ್ರಾಾಮಗಳಲ್ಲಿ ಇದನ್ನು ಪ್ರಾಾಯೋಗಿಕವಾಗಿ ಮಾಡಲಾಗಿದೆ. ಇಲ್ಲಿ ಉತ್ತಮ ಫಲಿತಾಂಶ ಕೂಡಕಂಡುಬಂದಿದೆ. ಇದನ್ನು ಅತಿ ಶೀಘ್ರವಾಗಿ  ಎಲ್ಲಾಾ ಊರುಗಳಿಗೆ ವಿಸ್ತರಿಸಿದರೆ ವಿದ್ಯಾಾರ್ಥಿಗಳ ಸಂಖ್ಯೆೆ ಏರುವುದರಲ್ಲಿ ಸಂಶಯವಿಲ್ಲ.
 ಇಂತಹ ಪರಿಣಾಮಕಾರಿ ಮತ್ತು ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸಿದರೆ ಪಾಲಕರ ಜೊತೆಗೆ ಮಕ್ಕಳನ್ನೂ ಕರೆತರಬಹುದು. ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಇದನ್ನು ಸಾಧಿಸುವ ಮನೋಬಲ ಬೇಕು. ಸರ್ಕಾರ ಮತ್ತು  ಅಧಿಕಾರಿಗಳಲ್ಲಿ ಇಚ್ಛಾಾಶಕ್ತಿಿಯ ಕೊರತೆ ಇದೆ. ಅದು ನಿವಾರಣೆಯಾದರೆ ಇಂತಹ ಯೋಜನೆಗಳು ಸಕಾರಾತ್ಮಕವಾಗಬಲ್ಲವು.
ಬೀಗ ಹಾಕುವುದು ಸುಲಭ. ಆದರೆ ಮತ್ತೆೆ ಆ ಶಾಲೆ ತೆರೆಯಬೇಕಾದರೆ ಮಕ್ಕಳನ್ನು ಹುಡುಕಿಕೊಂಡು ಬರುವುದು ಕಷ್ಟ. ಇದನ್ನೆೆಲ್ಲ ಅರಿತು ಅಧಿಕಾರಿಗಳು ಮತ್ತು ಸರ್ಕಾರ ಬೀಗ ಹಾಕುವ ಮೊದಲು ಹತ್ತಾಾರು ಬಾರಿ ಯೋಚನೆ ಮಾಡುವುದು ಒಳಿತು. ಅಲ್ಲಿರುವ ಬಡ ಮುಗ್ಧ ಮಕ್ಕಳ ಮುಖ ನೋಡಿ. ಅವರ ಭವಿಷ್ಯ ಏನಾಗಬಹುದು ಎನ್ನುವುದನ್ನು ಕ್ಷಣ ಯೋಚಿಸಿ. ಆಗಲೂ ನಿಮಗೆ ಬೀಗ ಹಾಕಬೇಕೆನಿಸಿದರೆ ಹಾಕಿ. 

published on 12th july 2018

Monday, 9 July 2018

ಮೂಗುಮುಚ್ಚಿಿಕೊಂಡು ಬನ್ನಿಿ
 ಇದು ಪಾಲಿಕೆಯ ಆವರಣದಲ್ಲಿರುವ ಶೌಚಾಲಯದ ಕತೆ



ಮಹಾನಗರ ಪಾಲಿಕೆಯ ಆವರಣದಲ್ಲಿರುವ ಶೌಚಾಲಯ ಗಬ್ಬು ನಾರುತ್ತಿಿದೆ. ಪಾಲಿಕೆಗೆ ಬರುವವರು ಶೌಚಾಲಯಕ್ಕೆೆಂದು ತೆರಳಿದರೆ ಕಾಲಿಡಲಾಗದ ಸ್ಥಿಿತಿ ನಿರ್ಮಾಣವಾಗಿದೆ. ಗಲೀಜಿನ ಮತ್ತು ದುರ್ನಾತದ ತಾಣವಾಗಿದೆ.
ಈ ಶೌಚಾಲಯವನ್ನು ಸುಮಾರು ಮೂರು ವರ್ಷದ ಹಿಂದೆ ನಿರ್ಮಿಸಲಾಗಿದೆಯಾದರೂ ಈಗಲೇ ಅದರ ಬಹುತೇಕ ಅಂಗಾಂಗಗಳು ಕಿತ್ತು ಹೋಗಿವೆ. ಇಲ್ಲವೇ ಮುರಿದು ಹೋಗಿವೆ. ಬಹುತೇಕ ನಲ್ಲಿಗಳು ಮುರಿದಿವೆ. ಸಮರ್ಪಕ ನೀರು ಪೂರೈಕ ಅಲ್ಲಿಲ್ಲ. ಬಾಗಿಲುಗಳು ಆಗಲೋ, ಈಗಲೋ ಮುರಿಯುವ ಸ್ಥಿಿತಿಯಲ್ಲಿವೆ. ಒಂದೆರಡು ಬಾಗಿಲು ಮಾತ್ರ ಸರಿಯಿವೆ. ಒಂದು ಬಾಗಿಲಂತೂ ಕಿತ್ತು ಹೋಗಿದ್ದು, ಟಾಯ್ಲೆೆಟ್‌ಗೆ ತೆರಳುವವರು ಬಾಗಿಲನ್ನು ಹಿಡಿದು ಮಾನ ಮುಚ್ಚಿಿಕೊಳ್ಳಬೇಕಿದೆ.
ಇಷ್ಟಾಾದರೂ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲಿ ಇದನ್ನು ಗಮನಿಸಿದಂತಿಲ್ಲ. ಅತಿ ಹೆಚ್ಚು ಪ್ರಮಾಣದಲ್ಲಿ ಸಾರ್ವಜನಿಕರು ಮಾತ್ರ ಇಲ್ಲಿಗೆ ತೆರಳುವುದರಿಂದ ಅವರಿಗೆ ಮಾತ್ರ ಇಲ್ಲಿನ ಅವಸ್ಥೆೆ ಗೊತ್ತು. ಬೆಳಿಗ್ಗೆೆ ಪ್ರತಿದಿನ ಇದನ್ನು ಶುಚಿ ಮಾಡುತ್ತಿಿಲ್ಲ. ತೊಳೆದು ಕ್ಲೀನಿಂಗ್ ಪೌಡರ್ ಹಾಕುವ ಪದ್ಧತಿ ಇಲ್ಲ. ವಾರಗಟ್ಟಲೆ ತೊಳೆಯದೆ ಬಿಟ್ಟಿಿರುವುದರಿಂದ ರೋಗಗಳು ಉದ್ಭವಿಸುವ ಸಾಧ್ಯತೆ ಇದೆ.
ಪಾಲಿಕೆಯ ಆವರಣದಲ್ಲೇ ಇರುವ ಶೌಚಾಲಯದ ಕತೆ ಇದಾದರೆ ಇನ್ನು ನಗರದಲ್ಲಿರುವ ಉಳಿದ ಶೌಚಾಲಯಗಳ ಪರಿಸ್ಥಿಿತಿ ಏನಾಗಿರಬಹುದು? ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಮೇಲೆ ಹಿಡಿತವೇ ಇಲ್ಲದ ಸ್ಥಿಿತಿ ಪಾಲಿಕೆಯಲ್ಲಿದೆ. ಇದರಿಂದ ಕನಿಷ್ಠ ಶೌಚಾಲಯವೂ ಶುಚಿಯಾಗಿ ಇರದೆ ಸಾರ್ವಜನಿಕರು ಮೂಗುಮುಚ್ಚಿಿಕೊಂಡು ಹೋಗಿಬರುವಂತಾಗಿದೆ.
9 july-2018
................................ 
ಶಾಲಾ ಮಕ್ಕಳ ಮೇಲೆ ಕರುಣೆ ಇಲ್ಲವೇ?
 ವಿದ್ಯಾಾರ್ಥಿಗಳನ್ನು ಸಾಗಿಸುವ ಆಟೋಗಳ ವಿರುದ್ದ ಕ್ರಮ ಜರುಗಿಸದ ಪೊಲೀಸರು

ಶಿವಮೊಗ್ಗ: ಆಟೋದಲ್ಲಿ ಶಾಲಾ ಮಕ್ಕಳನ್ನು ಮನಬಂದಂತೆ ತುಂಬಲಾಗುತ್ತಿಿದೆಯಾದರೂ ಈ ಬಗ್ಗೆೆ ಯಾವುದೇ ಕ್ರಮವನ್ನು ಪೊಲೀಸರು ಜರುಗಿಸದೆ ಮೌನಕ್ಕೆೆ ಶರಣಾಗಿದ್ದಾಾರೆ. ಇದು ಸಾರ್ವಜನಿಕರನ್ನು ಆತಂಕಕ್ಕೆೆ ತಳ್ಳುತ್ತಿಿದೆ.
ಸರಕಾರದ ನಿಯಮದ ಪ್ರಕಾರ ಆಟೋದಲ್ಲಿ ಆರು ಮಕ್ಕಳನ್ನು ಸಾಗಿಸಲು ಅವಕಾಶವಿದೆ. ಆದರೆ ಆಟೋದಲ್ಲಿ 10ಕ್ಕೂ ಹೆಚ್ಚು ಮಕ್ಕಳನ್ನು ಸಾಗಿಸುವುದು ಮಾಮೂಲಾಗಿದೆ. ಇದನ್ನು ಪರೀಕ್ಷಿಸಲು ಯಾವ ರಸ್ತೆೆಗೆ ಹೋದರೂ ಆದೀತು. ಆಟೋ ಚಾಲಕರಿಗೆ ದುಡಿಮೆಯನ್ನು ಹೆಚ್ಚು ಮಾಡಿಕೊಳ್ಳಬೇಕೆಂಬ ಆಸೆಯಾದರೆ ಪಾಲಕರಿಗೆ ತಮ್ಮ ಮಗ ಅಥವಾ ಮಗಳು ಶಾಲೆಗೆ ಹೋಗಿ ಬರಲಿ ಎನ್ನುವುದಷ್ಟೇ ಗುರಿಯಾಗಿದೆಯೇ ವಿನಾ ಅವರ ಸುರಕ್ಷತೆ ಬಗ್ಗೆೆ ಯಾರಿಗೂ ಗಮನವಿಲ್ಲ.
ಆಟೋ ಚಾಲಕ ತಾನು ಚಾಲನೆ ಮಾಡುವ ಅಕ್ಕಪಕ್ಕದಲ್ಲೂ ಸಹ ಇಬ್ಬರನ್ನು ಕೂಡ್ರಿಿಸಿಕೊಂಡಿರುತ್ತಾಾನೆ. ಹಿಂದಿನ ಸೀಟಿನಲ್ಲಿ ಮಕ್ಕಳ ಮೇಲೆ ಮಕ್ಕಳು ಕುಳಿತಿರುತ್ತಾಾರೆ. ಅವರ ಶಾಲಾ ಬ್ಯಾಾಗನ್ನು ಆಚೀಚೆ ತೂಗು ಹಾಕಿ ಪಾದಚಾರಿಗಳಿಗೆ ಅಥವಾ ಪಕ್ಕದಲ್ಲಿ ಸಾಗುವ ವಾಹನಗಳಿಗೆ ತಾಗುವಂತೆ ಮಾಡುತ್ತಾಾರೆ. ಇದೆಲ್ಲ ದಿನನಿತ್ಯ ನಡೆಯುತ್ತಿಿದ್ದರೂ ಪೊಲೀಸ್ ಇಲಾಖೆ ಮೌನವಾಗಿರುವುದು ಹಲವು ಸಂದೇಹಕ್ಕೆೆ ಕಾರಣವಾಗಿದೆ.
ಜಿಲ್ಲಾಾ ಪೊಲೀಸ್ ವರಿಷ್ಠರು ಈ ಬಗ್ಗೆೆ ಏಕೆ ಗಮನಹರಿಸಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆೆ. ಆಟೋದಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ವೇಳೆ ತಪಾಸಣೆ ಮಾಡುವ ಪದ್ಧತಿ ಇಲ್ಲವೇ ಇಲ್ಲ. ಈ ಬಗ್ಗೆೆ ಸಹಾಯಕ ಸಬ್ ಇನ್‌ಸ್‌‌ಪೆಕ್ಟರ್‌ರನ್ನು ಕೇಳಿದಾಗ, ‘‘ಹೋಗಲಿ ಬಿಡಿ, ಶಾಲೆಗೆ ಹೋಗುತ್ತಾಾರಲ್ಲ’’ ಎನ್ನುವ ಮಾಮೂಲಿ ಮಾತು ಕೇಳಿಬಂದಿದೆ. ಆದರೆ ಏನಾದರೂ ಅನಾಹುತವಾದರೆ ಜವಾಬ್ದಾಾರರಾರು? ಜಿಲ್ಲಾಾ ಪೊಲೀಸ್ ವರಿಷ್ಠರೇ, ಆಟೋ ಚಾಲಕನೇ ಅಥವಾ ಪಾಲಕರೇ? ಇದಕ್ಕೆೆ ಉತ್ತರ ಹುಡುಕುವುದು ಕಷ್ಟದ ಕೆಲಸ.
ಅದೇ ರೀತಿ ವ್ಯಾಾನಿನಲ್ಲೂ ಸಹ 8 ಮಕ್ಕಳಿಗೆ ಮಾತ್ರ ಅವಕಾಶವಿದೆ. ಆದರೆ ಇದರಲ್ಲಿ 15ಕ್ಕಿಿಂತ ಕಡಿಮೆ ಮಕ್ಕಳಿರುವುದಿಲ್ಲ. ಜೊತೆಗೆ ಈ ಆಟೋ ಮತ್ತು ವ್ಯಾಾನುಗಳು ಅನುಸರಿಸಬೇಕಾದ ನಿಯಮಗಳ ಪಟ್ಟಿಿ ದೊಡ್ಡದಿದೆ. ಅದು ಕಾನೂನು ಪುಸ್ತಕದಲ್ಲಿ ಮಾತ್ರ ಇದೆಯೇ ವಿನಾ ಚಾಲ್ತಿಿಗೆ ಬಂದಿಲ್ಲ ಅಥವಾ ಸಾರ್ವಜನಿಕರ ಕಣ್ಣಿಿಗೆ ಬೀಳುವಂತೆ ಎಲ್ಲಿಯೂ ಪ್ರದರ್ಶಿಸಿಲ್ಲ.
ಪ್ರತಿ ವರ್ಷ ಶಾಲೆ ಆರಂಭವಾಗುವ ವೇಳೆ ಅಧಿಕಾರಿಗಳು ಸಭೆ ನಡೆಸಿ ತಿಳುವಳಿಕೆ ಕೊಡಬೇಕೆನ್ನುವ ನಿಯಮ ಇದೆ. ಆದರೆ ಪೊಲೀಸರು ಇಂತಹ ಸಭೆಯನ್ನೇ ಮಾಡುತ್ತಿಿಲ್ಲ. ಜೊತೆಗೆ ಮಕ್ಕಳನ್ನು ಸಾಗಿಸುವ ಆಟೋಗಳು ಠಾಣೆಯಲ್ಲಿ ನೋಂದಾಯಿಸಿಕೊಳ್ಳಬೇಕು, ತಮ್ಮ ಆಟೋದ ಸುಸ್ಥಿಿತಿಯ ಬಗ್ಗೆೆ ಮಾಹಿತಿ ನೀಡಬೇಕು. ಆದರೆ ಇದೆಲ್ಲ ಎಲ್ಲಿ ನಡೆಯುತ್ತಿಿದೆ? ಮನಬಂದಂತೆ ಮಕ್ಕಳನ್ನು ಸಾಗಿಸಿ ಬಂದಷ್ಟು ದೋಚಿಕೊಳ್ಳುವುದೇ ಆಟೋ ಚಾಲಕರ ಕೆಲಸವಾಗಿದೆ. ಮಕ್ಕಳ ಸುರಕ್ಷತೆ ಅವರಿಗೆ ಬೇಕಿಲ್ಲ.
ಇನ್ನಾಾದರೂ ಇಂತಹ ಆಟೋಗಳ ಬಗ್ಗೆೆ ಕ್ರಮ ಜರುಗಿಸುವ ಕೆಲಸವನ್ನು ಪೊಲೀಸರು ಮಾಡಬೇಕಿದೆ. ಚಾಲಕನ ಅಕ್ಕಪಕ್ಕ ಕುಳಿತುಕೊಳ್ಳುವುದು, ಕುರಿಗಳಂತೆ ಒಬ್ಬರ ಮೇಲೆ ಇನ್ನೊೊಬ್ಬರನ್ನು ಕೂಡ್ರಿಿಸಿಕೊಂಡು ಸಾಗಿಸುವುದಕ್ಕೆೆ ಬ್ರೇಕ್ ಹಾಕಬೇಕಿದೆ. ಪಾಲಕರೂ ಸಹ ಈ ವಿಚಾರವಗಿ ಸ್ವಲ್ಪ ಬದ್ಧತೆ ತೋರಿದರೆ ಬಹುತೇಕವಾಗಿ ಈ ಸಮಸ್ಯೆೆ ಪರಿಹರಿಸಬಹುದು. ಹೆಚ್ಚು ಮಕ್ಕಳನ್ನು ಸಾಗಿಸುವ ಆಟೋಕ್ಕೆೆ ತಮ್ಮ ಮಕ್ಕಳನ್ನು ಹತ್ತಿಿಸುವುದನ್ನು ನಿಲ್ಲಿಬೇಕು. ಆಟೋ ಚಾಲಕನಿಗೆ ಬುದ್ಧಿಿ ಹೇಳಬೇಕು.

ಬಾಕ್‌ಸ್‌
ಪಾಲಕರಿಗೆ ಬೇಡವೇ ಕಾಳಜಿ?
ಎಷ್ಟೋೋ ಶಾಲೆಗಳಿಗೆ ಶಾಲಾ ಬಸ್ ಇಲ್ಲ ನಿಜ,  ಆಟೋ ಪ್ರಯಾಣವೇ ಅನಿವಾಂರ್ ಎನ್ನಬಹುದು. ಆದರೆ ಇದರಲ್ಲಿ ತಮ್ಮ ಮಕ್ಕಳನ್ನು ಕಳುಹಿಸುವ ಪಾಲಕರ ಜವಾಬ್ದಾಾರಿ ಚಾಲಕನಿಗೆ ತಿಂಗಳಿಗೆ ಹಣ ಕೊಟ್ಟರೆ ಮುಗಿದುಹೋಗುವುದಿಲ್ಲ. ಮಗು ಸುರಕ್ಷಿತವಾಗಿ ಹೋಗಿ ಬರುತ್ತಿಿದೆಯೇ, ಆಟೋ ಪ್ರಯಾಣದ ವೇಳೆ ಏನಾದರೂ ಸಮಸ್ಯೆೆ ಇದೆಯೇ?  ಎನ್ನುವುದನ್ನೆೆಲ್ಲ ಯಾರೂ ವಿಚಾರಿಸುತ್ತಿಿಲ್ಲ. ಆಟೋ ಬಂದು ಮನೆ ಎದುರು ಹಾರ್ನ್ ಹಾಕಿದಾಕ್ಷಣ ಮಗು ಓಡಿಹೋಗಿ ಹತ್ತಿಿದರೆ ಮುಗಿಯಿತು. ಏಕಿಷ್ಟು ನಿರ್ಲಕ್ಷ್ಯವನ್ನು ಪಾಲಕರು ತಾಳುತ್ತಿಿದ್ದಾಾರೆ? ಮಗುವನ್ನು ಎಚ್ಚರದಿಂದ ಕಳುಹಿಸುವಷ್ಟು ತಾಳ್ಮೆೆಯೂ ಇಲ್ಲವಾಗಿದೆಯೆ?  ಅನಾಹುತವಾದ ಪಕ್ಷದಲ್ಲಿ ಮುಂದೆ ಅನುಭವಿಸುವ ಸಂಕಷ್ಟದ ಬದಲು ಎಚ್ಚರಿಕೆ ವಹಿಸಿ ಕಳುಹಿಸುವುದು ಒಳ್ಳೆೆಯದಲ್ಲವೆ?
7 july 2018
......................................
ಕತೆ ಹೇಳುವೆ ನಮ್ಮ ಕತೆ ಹೇಳುವೆ


 ಅಣೆಕಟ್ಟು ಕಟ್ಟುವ ಉದ್ದೇಶದಿಂದ ಸುಮಾರು 15 ವರ್ಷದ ಹಿಂದೆ ನಮ್ಮ ಸಂತಾನವನ್ನು ನಾಶಮಾಡಲಾಗಿದೆ. ನಮ್ಮ ಮರಿಮಕ್ಕಳೆಲ್ಲಾಾ ಗುರುತನ್ನೂ ಬಿಡದೆ ಹೋಗಿದ್ದಾಾರೆ. ಹಿರಿಯರಾದ ನಾವು ಕೆಲವರು ಅವಶೇಷಗಳನ್ನು ಹಿಡಿದಿಟ್ಟುಕೊಂಡು ನೀರಮಧ್ಯೆೆಯೇ ನಿಂತಿದ್ದೇವೆ. ಎಂತಹ ದಟ್ಟ ಕಾನನನದ ಮಧ್ಯೆೆ ನಳನಳಿಲಿಸುತ್ತಿಿದ್ದೆೆವು ಗೊತ್ತೇ?
 ಅಣೆಕಟ್ಟೆೆ ಕಟ್ಟಲೆಂದು ನಮ್ಮ ಬುಡಕ್ಕೆೆ ಕೈಹಾಕಿದರು. ಆಗ ವಿರೋಧ ಬರಲೇ ಇಲ್ಲ. ನಮ್ಮ ಕುಟುಂಬವನ್ನೆೆಲ್ಲಾಾ ನಾಶಮಾಡಿ ನಡುನೀರಿನಲ್ಲಿ ನಿಲ್ಲಿಸಿದ್ದಾಾರೆ. ಇಷು ವರ್ಷವಾದರೂ ಪಳೆಯುಳಿಕೆ ಉಳಿಸಿದ್ದೇವೆ. ಅಭಿವೃದ್ಧಿಿಯ ಹೆಸರಿನಲ್ಲಿ, ನೀರು  ಸಂಗ್ರಹ ಮತ್ತು ವಿದ್ಯುತ್ ಉತ್ಪಾಾದನೆಗೆಂದು ನಾವು ತ್ಯಾಾಗ ಮಾಡಿದ್ದೇವೆ. ಆದರೆ ಪರಿಹಾರ ಕೇಳಿಲ್ಲ, ಹೋರಾಟ ಮಾಡಲಿಲ್ಲ. ನಮ್ಮನ್ನು ಹಾಳುಮಾಡಿ ಎಂದು ಗೋಗರೆಯುವವರು ಆಗ ಯಾರೂ ಇರಲಿಲ್ಲ. ಅವರು ನಮ್ಮನ್ನು ಸ್ಥಲಾಂತರಿಸಿ, ಬೇರೆಡೆ ಬದುಕಲು ಅವಕಾಶ ಕೊಟ್ಟು ಅಣೆಕಟ್ಟು ನಿರ್ಮಿಸಬಹುದಿತ್ತು. ಆದೆ ಹಾಗೆ ಮಾಡುವ ಯೋಚನೆಯೂ, ತಾಳ್ಮೆೆಯೂ ಅವರಲ್ಲಿರಲಿಲ್ಲ.  ಬುಡ ಸಹಿತ ಕತ್ತರಿಸಿ ಹಾಕಿ ನಮ್ಮವರನ್ನು ಸಾಗಿಸಿಬಿಟ್ಟರು.
ಆದರೂ ಇದ್ದೇವೆ, ನಮ್ಮ ಅಸ್ತಿಿತ್ವ ಇತ್ತೆೆಂದು ಹೇಳಲಿಕ್ಕೆೆ, ಸಾಬೀತುಪಡಿಸಲಿಕ್ಕೆೆ. ಹಿನ್ನೀರಿನಲ್ಲಿ ಸದಾ ಮೈದೊಳೆದುಕೊಳ್ಳುವುದೇ ನಮ್ಮ ಕೆಲಸ. ಆದರೆ ಬದುಕಲು ಆಗುತ್ತಿಿಲ್ಲ. ಕೆಲವೇ ವರ್ಷಗಳಲ್ಲಿ ಅಸ್ತಿಿತ್ವವನ್ನು ಕಳಕೊಂಡು ಏನೂ ಇಲ್ಲದಂತಾಗುತ್ತೇವೆ. ಈಗ ಚೂರಾದರೂ ನಮ್ಮ ಇರುವಿಕೆ ಬಗ್ಗೆೆ ಕೆಲವರು ಯೋಚಿಸುತ್ತಾಾರೆ. ಈಗಿನ ನಮ್ಮ ಇರುವಿಕೆಯನ್ನು ಸೌಂದರ್ಯವೆಂದು ಎಷ್ಟೋೋ ಜನರು ಆಸ್ವಾಾದಿಸುತ್ತಾಾರೆ. ಪ್ರವಾಸಿಗರಂತೂ ಚಿತ್ರ ತೆಗೆದು ಫೇಸ್‌ಬುಕ್, ವ್ಯಾಾಟ್ಸಪ್‌ಗಳಲ್ಲಿ ಹಾಕುತ್ತಿಿದ್ದಾಾರೆ.  ನಿಜ. ಹಿನ್ನೀರು ತುಂಬಿದಾಗ ಅಲ್ಲಲ್ಲಿ ಕಂಡು ಬರುವ ನಮ್ಮ ಪಳೆಯುಳಿಕೆ, ಬಿಸಿಲು ಮತ್ತು ಮಳೆ ವೇಳೆಯ ವಾತಾವರಣದಲ್ಲಿ, ಚಳಿಗಾಲದಲ್ಲಿ ಮಂಜು ಬೀಳುವ ಹೊತ್ತಿಿನಲ್ಲಿ, ಸೂರ್ಯಾಸ್ತ ಮತ್ತು ಸೂರ್ಯೋದಯದ ಸಮಯದಲ್ಲಿ ಮನಮೋಹಕವಾಗಿರುತ್ತದೆ. ನೀರಿನೊಂದಿಗೆ ನಮ್ಮನ್ನು ನೋಡಿ ಆನಂದಿಸುವ ಪ್ರವಾಸಿಗರು ಖುಷಿಪಡುತ್ತಾಾರೆ.
ಅಭಿವೃದ್ಧಿಿಯ ಶರವೇಗಕ್ಕೆೆ ಸಿಲುಕಿ ನಾಶವಾಗಿದ್ದೇವೆ. ಈಗಿನ ಪರಿಸ್ಥಿಿತಿಯಲ್ಲಿ ಆದರೆ ಖಂಡಿತ ನಮ್ಮನ್ನು ಮುಟ್ಟಲು ಬಿಡುತ್ತಿಿರಲಿಲ್ಲ. ಹಾಗಾಗಿಯೇ ರಸ್ತೆೆ ವಿಸ್ತರಣೆ ಆಗುತ್ತಿಿದ್ದರೂ ನಮ್ಮ ಕುಲದ ಹಲವರು ಜೀವಂತವಾಗಿದ್ದಾಾರೆ. ಆಗ ನಮ್ಮ ಬಗ್ಗೆೆ ಯಾರೂ ಕನಿಕರ, ಕಾಳಜಿ ತೋರಲಿಲ್ಲ. ಸತ್ತು ನಾಶವಾದೆವು. ಅವಶೇಷವಾಗಿ ಉಳಿದುಕೊಂಡೆವು. ಅಣೆಕಟ್ಟೆೆಯಂತೆ ಈ ಹಿನ್ನೀರಿನ ಸೌಂದರ್ಯವೂ ಮನಮೋಹಕವಾಗಿದೆ.  ಅದರ ಮಧ್ಯೆೆ ನಮ್ಮ ಅಸ್ತಿಿತ್ವ. ಗಾಜನೂರಿನಿಂದ ಮಂಡಗದ್ದೆೆಯವರೆಗೆ ಸಾಗುವಾಗ ರಸ್ತೆೆಯಂಚಿನಲ್ಲೇ ನಮ್ಮನ್ನು ನೋಡುತ್ತಾಾ ನೀವು ಸಂತಸದಿಂದ ಸಾಗಬಹುದಾಗಿದೆ. ಪ್ರವಾಸಿಗರಂತೂ ಕಣ್ತುಂಬಿಕೊಂಡು ಪ್ರಯಾಣದ ವೇಳೆಯೇ ನಮ್ಮನ್ನು ಶ್ಲಾಾಘಿಸುತ್ತಾಾರೆ.
 ನಾವು ನಾಶವಾದರೂ ಪ್ರಕೃತಿ ಸೌಂದರ್ಯಕ್ಕೆೆ ಕಾರಣವಾಗಿದ್ದೇವೆ. ನಮ್ಮ ಅವಶೇಷಗಳೇ ನಿಮ್ಮ ಕ್ಯಾಾಮರಾಕ್ಕೆೆ ಆಹಾರ.  ನೀನ್ಯಾಾರಿಗಾದೆಯೋ ಎಲೆ ಮಾನವ?
july3-2018
......................................