Monday, 9 July 2018

ಮೂಗುಮುಚ್ಚಿಿಕೊಂಡು ಬನ್ನಿಿ
 ಇದು ಪಾಲಿಕೆಯ ಆವರಣದಲ್ಲಿರುವ ಶೌಚಾಲಯದ ಕತೆ



ಮಹಾನಗರ ಪಾಲಿಕೆಯ ಆವರಣದಲ್ಲಿರುವ ಶೌಚಾಲಯ ಗಬ್ಬು ನಾರುತ್ತಿಿದೆ. ಪಾಲಿಕೆಗೆ ಬರುವವರು ಶೌಚಾಲಯಕ್ಕೆೆಂದು ತೆರಳಿದರೆ ಕಾಲಿಡಲಾಗದ ಸ್ಥಿಿತಿ ನಿರ್ಮಾಣವಾಗಿದೆ. ಗಲೀಜಿನ ಮತ್ತು ದುರ್ನಾತದ ತಾಣವಾಗಿದೆ.
ಈ ಶೌಚಾಲಯವನ್ನು ಸುಮಾರು ಮೂರು ವರ್ಷದ ಹಿಂದೆ ನಿರ್ಮಿಸಲಾಗಿದೆಯಾದರೂ ಈಗಲೇ ಅದರ ಬಹುತೇಕ ಅಂಗಾಂಗಗಳು ಕಿತ್ತು ಹೋಗಿವೆ. ಇಲ್ಲವೇ ಮುರಿದು ಹೋಗಿವೆ. ಬಹುತೇಕ ನಲ್ಲಿಗಳು ಮುರಿದಿವೆ. ಸಮರ್ಪಕ ನೀರು ಪೂರೈಕ ಅಲ್ಲಿಲ್ಲ. ಬಾಗಿಲುಗಳು ಆಗಲೋ, ಈಗಲೋ ಮುರಿಯುವ ಸ್ಥಿಿತಿಯಲ್ಲಿವೆ. ಒಂದೆರಡು ಬಾಗಿಲು ಮಾತ್ರ ಸರಿಯಿವೆ. ಒಂದು ಬಾಗಿಲಂತೂ ಕಿತ್ತು ಹೋಗಿದ್ದು, ಟಾಯ್ಲೆೆಟ್‌ಗೆ ತೆರಳುವವರು ಬಾಗಿಲನ್ನು ಹಿಡಿದು ಮಾನ ಮುಚ್ಚಿಿಕೊಳ್ಳಬೇಕಿದೆ.
ಇಷ್ಟಾಾದರೂ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲಿ ಇದನ್ನು ಗಮನಿಸಿದಂತಿಲ್ಲ. ಅತಿ ಹೆಚ್ಚು ಪ್ರಮಾಣದಲ್ಲಿ ಸಾರ್ವಜನಿಕರು ಮಾತ್ರ ಇಲ್ಲಿಗೆ ತೆರಳುವುದರಿಂದ ಅವರಿಗೆ ಮಾತ್ರ ಇಲ್ಲಿನ ಅವಸ್ಥೆೆ ಗೊತ್ತು. ಬೆಳಿಗ್ಗೆೆ ಪ್ರತಿದಿನ ಇದನ್ನು ಶುಚಿ ಮಾಡುತ್ತಿಿಲ್ಲ. ತೊಳೆದು ಕ್ಲೀನಿಂಗ್ ಪೌಡರ್ ಹಾಕುವ ಪದ್ಧತಿ ಇಲ್ಲ. ವಾರಗಟ್ಟಲೆ ತೊಳೆಯದೆ ಬಿಟ್ಟಿಿರುವುದರಿಂದ ರೋಗಗಳು ಉದ್ಭವಿಸುವ ಸಾಧ್ಯತೆ ಇದೆ.
ಪಾಲಿಕೆಯ ಆವರಣದಲ್ಲೇ ಇರುವ ಶೌಚಾಲಯದ ಕತೆ ಇದಾದರೆ ಇನ್ನು ನಗರದಲ್ಲಿರುವ ಉಳಿದ ಶೌಚಾಲಯಗಳ ಪರಿಸ್ಥಿಿತಿ ಏನಾಗಿರಬಹುದು? ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಮೇಲೆ ಹಿಡಿತವೇ ಇಲ್ಲದ ಸ್ಥಿಿತಿ ಪಾಲಿಕೆಯಲ್ಲಿದೆ. ಇದರಿಂದ ಕನಿಷ್ಠ ಶೌಚಾಲಯವೂ ಶುಚಿಯಾಗಿ ಇರದೆ ಸಾರ್ವಜನಿಕರು ಮೂಗುಮುಚ್ಚಿಿಕೊಂಡು ಹೋಗಿಬರುವಂತಾಗಿದೆ.
9 july-2018
................................ 

No comments:

Post a Comment